panchapeeth.com

Veerashaiva Panchapeeth Parampare

Veerashaiva Panchapeeth Parampare

Panchapeeth ಪೀಠಿಕೆ
    ದರ್ಶನ ಶಾಸ್ತ್ರಗಳ ತವರುಮನೆಯಾದ ನಮ್ಮೀ ಭಾರತ ದೇಶದಲ್ಲಿ ನಿಗಮ ಮತ್ತು ಆಗಮ ಭೇದದಿಂದ ಎರಡು ಶಾಸ್ತ್ರಗಳು ಅತ್ಯಂತ ಪ್ರಸಿದ್ಧವಾಗಿವೆ.  ಇವುಗಳಲ್ಲಿ ಶಿವನ ನಿಃಶ್ವಾಸದಿಂದ ನಿಃಶೃತಗಳಾದ ಶಾಸ್ತ್ರಗಳನ್ನು ನಿಗಮಗಳೆಂತಲೂ ಮತ್ತು ಶಿವನ ವಾಗ್ವ್ಯವಹಾರ ರೂಪಗಳಾದ ಶಾಸ್ತ್ರಗಳನ್ನು ಆಗಮಗಳೆಂತಲೂ ಕರೆಯುತ್ತಾರೆ.  ಅಂತೆಯೇ ನಿಶ್ಚಯೇನ ತತ್ತ್ವಂ ಗಮಯತೀತಿ ನಿಗಮಃ ಮತ್ತು ಆಪ್ತವಚನಾದಾವಿಭರ್ೂತಮರ್ಥ ವಿಶೇಷ ಸಂವೇದನಮಾಗಮಃಎಂಬುದಾಗಿ ನಿಗಮಾಗಮಗಳ ವ್ಯುತ್ಪತ್ತಿಗಳು ಪ್ರಸಿದ್ಧವಾಗಿವೆ.  ನಿಗಮ(ವೇದ)ಗಳಲ್ಲಿ ಪರಸ್ಪರ ವಿರುದ್ಧಾರ್ಥ ಪ್ರತಿಪಾದಕಗಳಾದ ಮಂತ್ರಗಳಿರುವುದರಿಂದ ಉಪಕ್ರಮೋಪಸಂಹಾರ, ಅಭ್ಯಾಸ, ಅಪೂರ್ವತಾ, ಫಲ, ಅರ್ಥವಾದ ಮತ್ತು ಉಪಪತ್ತಿಗಳೆಂಬ ಶ್ರುತಿ ಷಡ್ಲಿಂಗಗಳ (ಆರು ಪ್ರಮಾಣಗಳ) ಸಹಾಯವಿಲ್ಲದೇ ಅವುಗಳ ಅರ್ಥವನ್ನು ನಿರ್ಣಯಿಸುವುದು ಸಾಮಾನ್ಯ ಜನರಿಗೆ ಸಾಧ್ಯವಾಗುವುದಿಲ್ಲವೆಂಬ ಭಾವನೆಯಿಂದ, ಭಗವಂತನು ಸರ್ವಜನರ ಉಪಯೋಗಕ್ಕಾಗಿ ಶ್ರೀಪಾರ್ವತಿಯನ್ನು ಉದ್ದೇಶಿಸಿ ಉಪದೇಶಿಸಿದ ಶಾಸ್ತ್ರಗಳೇ ಆಗಮಶಾಸ್ತ್ರಗಳು ಎಂದು ಪ್ರತೀತಿ ಇದೆ.
        ಆಗತಂ ಶಿವವಕ್ತ್ರಾತ್ತು ಗತಂ ಚ ಗಿರಿಜಾಮುಖೇ |
        ಮತಂ ಶ್ರೀವಾಸುದೇವೇನ ಆಗಮಸ್ತೇನ ಕೀತರ್ಿತಃ ||
                          (ಭಾಸ್ಕರೀ ದ್ವಿ. ಭಾಗ. ಪು. 85)
    ಎನ್ನುವ ವಚನ ಪ್ರಮಾಣದಂತೆ ಪರಶಿವನ ವದನಾರವಿಂದದಿಂದ ಹೊರಹೊಮ್ಮಿ ಶ್ರೀಪಾರ್ವತಿಯ ಬುದ್ಧಿಯನ್ನು ಪ್ರವೇಶಿಸುವಾಗ ಅಲ್ಲಿಯೇ ಸಾಕ್ಷಿಯಾಗಿರುವ ಶ್ರೀವಾಸುದೇವನಿಂದ ಯಾವ ಶಾಸ್ತ್ರವು ಸಮ್ಮತಿಯನ್ನು ಪಡೆಯಿತೋ ಅದುವೇ ಆಗಮ ಶಾಸ್ತ್ರವೆಂದು ತಾತ್ಪರ್ಯವು.  ಇದು ಆಗಮ ಶಬ್ದದ ರೂಢಾರ್ಥವು.  ಇನ್ನು ಯೌಗಿಕಾರ್ಥವನ್ನು ವಿಚಾರಿಸುವುದಾದರೆ ಆ ಸಮಂತಾರ್ಥಂ ಗಮಯತೀತಿ ಆಗಮಃ ಎನ್ನುವ ವ್ಯುತ್ಪತ್ತಿಯ ಪ್ರಕಾರ ಸಂಪೂರ್ಣ ತತ್ತ್ವವನ್ನು ಬೋಧಿಸುವ ಶಾಸ್ತ್ರವೇ ಆಗಮ ಶಾಸ್ತ್ರವು.
    ಆಗಚ್ಛಂತಿ ಬುದ್ಧಿಮಾರೋಹಂತಿ ಯಸ್ಮಾದ್ ಅಭ್ಯುದಯ ನಿಃಶ್ರೇಯಸೋಪಾಯಾಃ ಸ ಆಗಮಃ (ಯೋ. ಸೂ. 1.25 ತತ್ತ್ವ ವೈಶಾರದಿ) ಅಂದರೆ ಇಹಲೋಕದ ಏಳ್ಗೆ ಮತ್ತು ಪಾರಲೌಕಿಕ ಮುಕ್ತಿ ಇವೆರಡನ್ನು ಪಡೆಯುವ ಉಪಾಯಗಳು ಯಾವ ಶಾಸ್ತ್ರದಿಂದ ಜನಸಾಮಾನ್ಯರಿಗೆ ಸರಳವಾಗಿ ತಿಳಿಯುವವೋ ಅವೇ ಆಗಮ ಶಾಸ್ತ್ರಗಳೆಂಬುದಾಗಿ ಶ್ರೀ ವಾಚಸ್ಪತಿ ಮಿಶ್ರರು ಆಗಮಗಳ ಮಹತಿಯನ್ನು ಕೊಂಡಾಡಿದ್ದಾರೆ.
    ಆಗಮಗಳಿಗೆ 'ತಂತ್ರ'ವೆಂಬ ಪಯರ್ಾಯ ನಾಮವೂ ಇದೆ.  ತನ್ಯತೇ ವಿಸ್ತಾರ್ಯತೇ ಜ್ಞಾನಮನೇನ ಅಂದರೆ ಯಾವುದರ ಅಧ್ಯಯನದಿಂದ ಎಲ್ಲ ವಿಧದ ಜ್ಞಾನ ಪ್ರಾಪ್ತವಾಗುವುದೋ ಅದೇ ತಂತ್ರವು.  ಇದೇ ಅರ್ಥವನ್ನೇ ಕಾಮಿಕಾಗಮದ-
        ತನೋತಿ ವಿಪುಲಾನಥರ್ಾನ್ ತಂತ್ರಮಂತ್ರ ಸಮನ್ವಿತಾನ್ |
        ತ್ರಾಣಂ ಚ ಕುರುತೇ ಯಸ್ಮಾತ್ ತಂತ್ರಮಿತ್ಯಭಿಧೀಯತೇ ||
    ಈ ಶ್ಲೋಕವು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ.
ಆಗಮ (ತಂತ್ರ)ಗಳ ಭೇದ :
        ಆಗಮಾ ಬಹುಧಾ ಪ್ರೋಕ್ತಾಃ ಶಿವೇನ ಪರಮಾತ್ಮನಾ |
        ಶೈವಂ ಪಾಶುಪತಂ ಸೋಮಂ ಲಾಕುಲಂ ಚೇತಿ ಭೇದತಂ ||
                            (ಸಿ.ಶಿ. 5-9)
    ಎನ್ನುವ ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ಉಪದೇಶದಂತೆ, ಆಗಮಗಳು ಶೈವ, ಪಾಶುಪತ, ಸೋಮ ಮತ್ತು ಲಾಕುಲಾದಿ ಭೇದದಿಂದ ಅನಂತವಾಗಿದೆ.  ಇವುಗಳಲ್ಲಿ ಶೈವಾಗಮಗಳು ವಾಮ, ದಕ್ಷಿಣ, ಮಿಶ್ರ ಮತ್ತು ಸಿದ್ಧಾಂತ ಎಂಬ ಹೆಸರಿನಿಂದ ನಾಲ್ಕು ಪ್ರಕಾರಗಳಾಗಿರುತ್ತವೆ.  ಇಲ್ಲಿ ಶಕ್ತಿಯನ್ನೇ ಪ್ರಧಾನ ತತ್ತ್ವವನ್ನಾಗಿ ಬೋಧಿಸುವವು ವಾಮಾಗಮಗಳು. ಭೈರವ ತತ್ತ್ವವನ್ನೇ ಪ್ರಧಾನವನ್ನಾಗಿ ಬೋಧಿಸುವವು ದಕ್ಷಿಣಾಗಮಗಳು. ಸಪ್ತಮಾತೃಕೆಯರನ್ನು ಪ್ರಧಾನ ತತ್ತ್ವವನ್ನಾಗಿ ಬೋಧಿಸುವವುಗಳೇ ಮಿಶ್ರಾಗಮಗಳು ಮತ್ತು ವೇದಸಮ್ಮತಗಳಾದ ತತ್ತ್ವಗಳನ್ನು ಬೋಧಿಸುವ ಆಗಮಗಳೇ ಸಿದ್ಧಾಂತಾಗಮಗಳು.
    ಇವುಗಳಲ್ಲದೇ ಸೌರ, ಗಾಣಪತ್ಯ ಮುಂತಾದ ಆಗಮಗಳೂ ಇವೆ.  ಒಟ್ಟಿನಲ್ಲಿ ಪಂಚರಾತ್ರಾಗಮಗಳು 108, ಶಾಕ್ತಾಗಮಗಳು 64 - ಉಪತಂತ್ರಗಳು 327, ಶೈವತಂತ್ರಗಳು 28 - ಉಪತಂತ್ರಗಳು 127, ವೈಷ್ಣವ ತಂತ್ರಗಳು 75 - ಉಪತಂತ್ರಗಳು 2ಂ5 .... ಹೀಗೆ ವಿಪುಲವಾದ ತಂತ್ರಸಾಹಿತ್ಯವಿದೆ.  (ವಿಶೇಷ ಜಿಜ್ಞಾಸೆಯುಳ್ಳವರು ರಾಮದಾಸಗೌಡರಿಂದ ವಿರಚಿತ ಹಿಂದುತ್ವ ಎಂಬ ಹಿಂದೀ ಪುಸ್ತಕದ ತಂತ್ರಖಂಡವನ್ನವಲೋಕಿಸಬಹುದು.)
ಶೈವಾಗಮಗಳು (ಸಿದ್ಧಾಂತಾಗಮಗಳು) :
    ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ ಕಾಮಿಕಾದಿ ವಾತುಲಾಂತಗಳಾದ 28 ಆಗಮಗಳಿಗೆ ಶೈವಾಗಮಗಳೆಂದು ಹೆಸರು.  ಇವುಗಳನ್ನು ಸಿದ್ಧಾಂತಾಗಮಗಳೆಂತಲೂ ಕರೆಯುತ್ತಾರೆ. ಆಪ್ತೋಕ್ತಿರತ್ರ ಸಿದ್ಧಾಂತಃ ಶಿವ ಏವಾಪ್ತಿಮಾನ್ ಯತಃ ಎನ್ನುವ ಶ್ರೀಕಂಠ ಸೂರಿಯ ಶ್ಲೋಕದ ವ್ಯಾಖ್ಯಾನವನ್ನು ಬರೆಯುವಾಗ ಶ್ರೀ ಅಘೋರ ಶಿವಾಚಾರ್ಯರು - ಸಿದ್ಧಾಂತ ಶಬ್ದಃ ಪಂಕಜಾದಿ ಶಬ್ದವದ್ಯೋಗರೂಢ್ಯಾ ಶಿವ ಪ್ರಣೀತೇಷು ಕಾಮಿಕಾದಿಷು ದಶಾಷ್ಟಾದಶತಂತ್ರೇಷು ಪ್ರಸಿದ್ಧಃ (ರತ್ನತ್ರಯ - ಪುಟ 5) ಎಂಬುದಾಗಿ ಬರೆದಿದ್ದಾರೆ.  ಇದರ ತಾತ್ಪರ್ಯವೇನೆಂದರೆ - ಯಥಾರ್ಥವಕ್ತೃವಾದ ಆಪ್ತಪುರುಷನಿಂದ ಹೇಳಲ್ಪಟ್ಟ ವಚನಗಳನ್ನು ಸಿದ್ಧಾಂತವೆಂದು ಕರೆಯುವರು.  ಶಿವನು ಸಾಂಸಾರಿಕ ರಾಗ - ದ್ವೇಷಗಳಿಲ್ಲದವನಾಗಿ ಜಗತ್ತಿನ ಸಮಸ್ತ ಮಾನವರ ಕಲ್ಯಾಣಕ್ಕಾಗಿ ಆಗಮಗಳನ್ನು ಉಪದೇಶಿಸಿರುವುದರಿಂದ ಅವನನ್ನು ಆಪ್ತಪುರುಷನೆಂತಲೂ, ಅವನಿಂದಉಪದೇಶಿಸಲ್ಪಟ್ಟ ಶಾಸ್ತ್ರಗಳನ್ನು ಸಿದ್ಧಾಂತವೆಂತಲೂ ಕರೆಯುತ್ತಾರೆ.
    ಸಮೌ  ಸಿದ್ಧಾಂತ ರಾದ್ಧಾಂತೌ (ಅಮರಕೋಶ 1-5-4) ಎಂಬ ಶ್ರೀ ಅಮರಸಿಂಹನ ವಚನಾನುಸಾರವಾಗಿ ಅಂತಿಮವಾದ ನಿರ್ಣಯಕ್ಕೆ ಸಿದ್ಧಾಂತ ಇಲ್ಲವೇ ರಾದ್ಧಾಂತಗಳೆಂಬ ಶಬ್ದಗಳನ್ನು ಬಳಸುವುದಾಗಿ ಕಂಡುಬರುತ್ತದೆ.  ಹೀಗಿರುವಾಗ ಸಿದ್ಧಾಂತ ಶಬ್ದಕ್ಕೆ ಶಿವಾಗಮಗಳೆಂಬುದಾಗಿ ಹೇಗೆ ಅಥರ್ೈಸುವುದು? ಎಂಬ ಪ್ರಶ್ನೆ ಬಂದಾಗ, ಇದಕ್ಕೆ ಶ್ರೀ ಅಘೋರ ಶಿವಾಚಾರ್ಯರು ಹೀಗೆ ನಿರ್ಣಯವನ್ನು ಕೊಡುತ್ತಾರೆ.  ಶಬ್ದಗಳಿಗೆ ಯೌಗಿಕಾರ್ಥವೆಂತಲೂ, ರೂಢಾರ್ಥವೆಂತಲೂ ಎರಡು ಪ್ರಕಾರದ ಅರ್ಥಗಳು ಹೊರಡುತ್ತವೆ.  ಶಬ್ದದ ವ್ಯುತ್ಪತ್ತಿ ಲಭ್ಯವಾದ ಅರ್ಥವು ಯೌಗಿಕಾರ್ಥವು.  ಉದಾ : ಪಂಕಜ ಎನ್ನುವ ಶಬ್ದದ ವ್ಯುತ್ಪತ್ತಿ ಲಭ್ಯವಾದ ಅರ್ಥವು ಪಂಕ = ಕೆಸರಿನಲ್ಲಿ, ಜಾತಂ = ಜನಿಸಿದ್ದು, ಅಥರ್ಾತ್ ಕೆಸರಿನಲ್ಲಿ ಹುಟ್ಟಿದ್ದು ಎಂದಾಗುವುದು.  ಕೆಸರಿನಲ್ಲಿ ಅನೇಕ ಕ್ರಿಮಿಕೀಟಗಳು ಜನಿಸುವಂತೆ ಕಮಲವೂ ಜನಿಸುತ್ತದೆ.  ಪಂಕಜ ಎಂಬ ಶಬ್ದಕ್ಕೆ ಲೋಕದಲ್ಲಿ ಕಮಲವೆಂತಲೇ  ರೂಢಿಯಲ್ಲಿದೆ.  ಲೋಕದ ರೂಢಿಯಲ್ಲಿರುವ ಅರ್ಥವನ್ನು ರೂಢಾರ್ಥವೆನ್ನುವರು.  ಹೀಗೆ ಪಂಕಜ ಎಂಬ ಶಬ್ದಕ್ಕೆ ಯೌಗಿಕವಾಗಿ ಕೆಸರಿನಲ್ಲಿ ಜನಿಸಿದ್ದು ಎಂಬ ಅರ್ಥಕ್ಕನುಸಾರವಾಗಿ ಕಮಲದ ಜೊತೆಗೆ ಕ್ರಿಮಿಕೀಟಗಳೆಂಬ ಅರ್ಥ ಹೊರಡುತ್ತಿದ್ದರೂ, ಲೋಕದ ರೂಢಿಯಲ್ಲಿ ಪಂಕಜ ಶಬ್ದದಿಂದ ಕಮಲವೆಂಬ ಅರ್ಥವನ್ನೇ ಸ್ವೀಕರಿಸುವಂತೆ ಸಿದ್ಧಾಂತ ಎಂಬ ಶಬ್ದಕ್ಕೆ ಸಿದ್ಧೋಂತೋ ನಿಶ್ಚಯೋ ಯಸ್ಮಿನ್ ಸಃ ಸಿದ್ಧಾಂತಃ ಎನ್ನುವ ವ್ಯುತ್ಪತ್ತಿಯ ಪ್ರಕಾರ, ಕೊನೆಯದಾದ ನಿರ್ಣಯವೆನ್ನುವ ಯೌಗಿಕಾರ್ಥವಾಗುತ್ತಿದ್ದರೂ, ಶಿವನ ಮುಖಾರವಿಂದದಿಂದ ಬಂದ ನಿರ್ಣಯವೇ ಕೊನೆಯದಾದ ನಿರ್ಣಯವೆಂಬುದಾಗಿ ಲೋಕದಲ್ಲಿ ರೂಢಿ ಇರುವುದು.  ಹೀಗೆ ಈ ಯೋಗ ಮತ್ತು ರೂಢಿ ಶಕ್ತಿಗಳ ಬಲದಿಂದ ಸಿದ್ಧಾಂತವೆಂಬ ಶಬ್ದಕ್ಕೆ ಶಿವಾಗಮಗಳೆಂತಲೇ ಅರ್ಥವಾಗುವುದು.  ಅಂತೆಯೇ ಶಿವೋಕ್ತಗಳಾದ 28 ಆಗಮಗಳನ್ನು ಸಿದ್ಧಾಂತಾಗಮಗಳೆಂತಲೂ ಕರೆಯುತ್ತಾರೆ.   ಈ ಆಗಮಗಳ ಹೆಸರುಗಳ ಪ್ರಶ್ನೆ ಉದ್ಭವಿಸಿದಾಗ ಶ್ರೀ ನೀಲಕಂಠ ಶಿವಾಚಾರ್ಯರು ಕ್ರಿಯಾಸಾರ ಉಪೋದ್ಘಾತ ಪ್ರಕರಣದಲ್ಲಿ
 1) ಕಾಮಿಕಾಗಮ        2) ಯೋಗಜಾಗಮ    3) ಚಿಂತ್ಯಾಗಮ
 4) ಕಾರಣಾಗಮ        5) ಅಜಿತಾಗಮ    6) ದೀಪ್ತಾಗಮ
 7) ಸೂಕ್ಷ್ಮಾಗಮ        8) ಸಹಸ್ರಾಗಮ        9) ಅಂಶುಮಾನಾಗಮ
10) ಸುಪ್ರಭೇದಾಗಮ        11) ವಿಜಯಾಗಮ    12) ನಿಃಶ್ವಾಸಾಗಮ
13) ಸ್ವಾಯಂಭುವಾಗಮ    14) ಅನಲಾಗಮ    15) ವೀರಾಗಮ
16) ರೌರವಾಗಮ        17) ಮಕುಟಾಗಮ    18) ವಿಮಲಾಗಮ
19) ಚಂದ್ರಜ್ಞಾನಾಗಮ        20) ಬಿಂಬಾಗಮ    21) ಪ್ರೋದ್ಗೀತಾಗಮ
22) ಲಲಿತಾಗಮ        23) ಸಿದ್ಧಾಗಮ    24) ಸಂತಾನಾಗಮ
25) ಶವರ್ೋಕ್ತಾಗಮ        26) ಪಾರಮೇಶ್ವರಾಗಮ27) ಕಿರಣಾಗಮ
28) ವಾತುಲಾಗಮ - ಎಂಬುದಾಗಿ ಆಗಮಗಳ ಹೆಸರುಗಳನ್ನು ಪ್ರತಿಪಾದಿಸಿದ್ದಾರೆ.
    ಇವುಗಳಲ್ಲಿ ಕ್ರಮವಾಗಿ ಮೊದಲಿನ 10 ಆಗಮಗಳು ಶಿವನಿಂದ, ಉಳಿದ 18 ಆಗಮಗಳು ಶ್ರೀ ರುದ್ರನಿಂದ ಉಪದೇಶಿಸಲ್ಪಟ್ಟಿವೆ.  ಈ ಎಲ್ಲ ಆಗಮಗಳೂ ಅಪಾರವಾದ ಜ್ಞಾನಸಂಪತ್ತಿನಿಂದ ಕೂಡಿದವುಗಳಾಗಿವೆ.
ಆಗಮಗಳ ಕಾಲ ಃ
    ಆಗಮ ಸಂಸ್ಕೃತಿಯು ಹರಪ್ಪಾ - ಮೊಹೆಂಜೊದಾರೋ ಕಾಲದಲ್ಲಿ ದೊರೆತ ಭೂಗತ ಅವಶೇಷಗಳಲ್ಲಿ ಕಂಡುಬರುವುದರಿಂದ ಇವುಗಳು ಇಂದಿಗೆ ಸುಮಾರು 5 ಸಾವಿರ ವರ್ಷಗಳಿಗಿಂತಲೂ ಪೂರ್ವದವುಗಳೆಂದು  ಅನೇಕ ಇತಿಹಾಸತಜ್ಞರ ಅಭಿಪ್ರಾಯವಾಗಿದೆ.  ಇಷ್ಟು ಪ್ರಾಚೀನವಾದ ನಮ್ಮ ಆಗಮ ಸಾಹಿತ್ಯವು ಅದೆಷ್ಟೋ ನಷ್ಟವಾಗಿ ಸದ್ಯಃ ಅಲ್ಪ ಪ್ರಮಾಣದಲ್ಲಿ ದೊರೆಯುತ್ತಿರುವುದು ಭಾರತೀಯರ ದುರಾದೃಷ್ಟವೆನ್ನಬೇಕಾಗಿದೆ.

ಆಗಮಗಳ ವಿಷಯ (ವಸ್ತು) :
    ಆಗಮಗಳಲ್ಲಿ ಕ್ರಿಯಾಪಾದ, ಚಯರ್ಾಪಾದ, ಯೋಗಪಾದ ಮತ್ತು ಜ್ಞಾನ (ವಿದ್ಯಾ) ಪಾದಗಳೆಂದು ನಾಲ್ಕು ಭಾಗಗಳಿರುತ್ತವೆ.  ಕ್ರಿಯಾಪಾದದಲ್ಲಿ ದೇವಾಲಯಗಳ ಸ್ಥಾಪನೆ, ವಿಗ್ರಹಗಳ ನಿಮರ್ಾಣ ಹಾಗೂ ಅವುಗಳ ಪ್ರತಿಷ್ಠಾಪನೆಯ ವಿಷಯಗಳು ಪ್ರತಿಪಾದಿಸಲ್ಪಟ್ಟಿವೆ.  ಚಯರ್ಾಪಾದದಲ್ಲಿ ಪ್ರತಿಷ್ಠಿತ ಮೂತರ್ಿಗಳ ಪೂಜಾ, ಉತ್ಸವ ಹಾಗೂ ಹವನಾದಿ ವಿಷಯಗಳು ನಿರೂಪಿಸಲ್ಪಟ್ಟಿವೆ.  ಯೋಗಪಾದದಲ್ಲಿ ಅಷ್ಟಾಂಗಯೋಗ ಸಾಧನೆಯೂ ಮತ್ತು ಜ್ಞಾನಪಾದದಲ್ಲಿ ದಾರ್ಶನಿಕ ವಿಷಯಗಳಾದ ಪತಿ, ಪಶು ಹಾಗೂ ಪಾಶಗಳ ಸ್ವರೂಪದ ಜೊತೆಗೆ ಜಗದುತ್ಪತ್ತಿಯಲ್ಲಿ ಬರುವ 36 ತತ್ತ್ವಗಳ ಸ್ವರೂಪವೂ ವಿಶೇಷವಾಗಿ ವಣರ್ಿಸಲ್ಪಟ್ಟಿವೆ.
ವೀರಶೈವ ಧರ್ಮದರ್ಶನಗಳ ಮೂಲಸ್ರೋತ ಃ
        ಸಿದ್ಧಾಂತಾಖ್ಯೇ ಮಹಾತಂತ್ರೇ ಕಾಮಿಕಾದ್ಯೇ ಶಿವೋದಿತೇ |
        ನಿದರ್ಿಷ್ಟಮುತ್ತರೇ ಭಾಗೇ ವೀರಶೈವ ಮತಂ ಪರಮ್ ||
                            (ಸಿ.ಶಿ. 5-14)
    ಎನ್ನುವ ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ಉಪದೇಶದಂತೆ ಪೂರ್ವದಲ್ಲಿ ಸಿದ್ಧಾಂತ ಶಬ್ದದಿಂದ ಪ್ರತಿಪಾದಿಸಲ್ಪಟ್ಟ 28 ಶೈವಾಗಮಗಳ ಉತ್ತರ ಭಾಗದಲ್ಲಿ ಅಂದರೆ ಈ ಆಗಮಗಳ ಕ್ರಿಯಾ, ಚಯರ್ಾ, ಯೋಗ ಹಾಗೂ ಜ್ಞಾನ ಪಾದಗಳ ಉತ್ತರ ಭಾಗದಲ್ಲಿ  ವೀರಶೈವ ಧರ್ಮದ ತತ್ತ್ವತ್ರಯಗಳಾದ ಅಷ್ಟಾವರಣ, ಪಂಚಾಚಾರ ಹಾಗೂ ಷಟ್ಸ್ಥಲಗಳು ನಿರೂಪಿಸಲ್ಪಟ್ಟಿವೆ.  ವೀರಶೈವ ಧರ್ಮದ ಈ ಅಷ್ಟಾವರಣಗಳಲ್ಲಿ ಬರುವ ಇಷ್ಟಲಿಂಗ, ಭಸ್ಮ ಮತ್ತು ರುದ್ರಾಕ್ಷ ಧಾರಣಾದಿಗಳು ವೇದಗಳಲ್ಲಿಯೂ (ತತ್ರ ತತ್ರ ಪ್ರತಿಪಾದಿತವಾಗಿರುವುದರಿಂದ), ಸಿದ್ಧಾಂತಾಗಮೋಕ್ತಗಳಾದ ಈ ತತ್ತ್ವಗಳು ಕೇವಲ ಆಗಮಸಮ್ಮತಗಳಷ್ಟೇ ಅಲ್ಲ, ವೇದ ಸಮ್ಮತಗಳೆಂತಲೂ ತಿಳಿಯಬೇಕು.  ಮುಂದೆ ಆಯಾ ವಿಷಯಗಳನ್ನು ನಿರೂಪಿಸುವಾಗ ಆ ವೇದಮಂತ್ರಗಳನ್ನು ಕೂಲಂಕಷವಾಗಿ ವಿಚಾರಿಸುತ್ತೇವೆ.
    ಹೀಗೆ ವೀರಶೈವ ಧರ್ಮಕ್ಕೆ ಆಗಮಗಳೇ ಮೂಲಗಳಾಗಿದ್ದರೂ ಆಗಮ ಸಮ್ಮತವಾದ  ವೇದಭಾಗವನ್ನು ವೀರಶೈವರು ಗ್ರಹಿಸುವುದರಿಂದ ವೀರಶೈವರ ಧರ್ಮವನ್ನು ತಾಂತ್ರಿಕ  ವೈದಿಕ ಮತವೆಂತಲೂ ಕರೆಯುತ್ತಾರೆ.
        ವೀರಶೈವಂ ವೈಷ್ಣವಂ ಚ ಶಾಕ್ತಂ ಸೈರಂ ವಿನಾಯಕಮ್ |
        ಕಾಪಾಲಮಿತಿ ವಿಜ್ಞೇಯಂ ದರ್ಶನಾನಿ ಷಡೇವ ಹಿ ||
                    (ಪಾರಮೇಶ್ವರಾಗಮ 1/22-23)
    ಈ ಪಾರಮೇಶ್ವರಾಗಮದ ಉಕ್ತಿಯಲ್ಲಿ ಆಗಮಶಾಸ್ತ್ರ ಸಮ್ಮತಗಳಾದ ಷಡ್ದರ್ಶನಗಳು ನಿರೂಪಿತವಾಗಿವೆ.  ಇವುಗಳಲ್ಲಿ ವೀರಶೈವವೂ ಪರಿಗಣಿಸಲ್ಪಟ್ಟಿರುವುದರಿಂದ, ವೀರಶೈವರಿಗೆ ಆಗಮ ಸಾಹಿತ್ಯವೇ ಮೂಲ ಸಾಹಿತ್ಯವೆಂಬುದು ತಿಳಿದುಬರುತ್ತದೆ.  ಇಷ್ಟೇ ಅಲ್ಲದೆ
        ನ ವೀರಶೈವಸದೃಶಂ ಮತಮಸ್ತಿ ಜಗತತ್ರಯೇ |
        ಸರ್ವಭೋಗಪ್ರದಂ ಪುಣ್ಯಂ ಶಿವಸಾಯುಜ್ಯದಾಯಕಮ್ ||
                        (ಪಾ. ಆಗಮ 1-42)
    ಎಂಬುದಾಗಿ ಅದೇ ಪಾರಮೇಶ್ವರಾಗಮದಲ್ಲಿಯೇ ಪೂವರ್ೋಕ್ತಗಳಾದ ಷಡ್ದರ್ಶನಗಳಲ್ಲಿ ವೀರಶೈವ ದರ್ಶನವು ತನ್ನ ಸಮನ್ವಯಾತ್ಮಕ ಉದಾತ್ತ ಭಾವನೆಯಿಂದ ಸವರ್ೋತ್ಕೃಷ್ಟವಾಗಿದೆ ಎಂದು ಪ್ರತಿಪಾದಿಸಲ್ಪಟ್ಟಿದೆ.  ಆದ್ದರಿಂದ ಈ ಧರ್ಮದ ಉತ್ಕೃಷ್ಟ ಆಚಾರಗಳನ್ನು ಆಚರಣೆಯಲ್ಲಿ ತಂದು ಈ ಧರ್ಮದ ಹಿರಿಮೆ - ಗರಿಮೆಗಳನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ವೀರಶೈವನ ಆದ್ಯ ಕರ್ತವ್ಯವಾಗಿದೆ. 
ದಾರ್ಶನಿಕ ದೃಷ್ಟಿಯಿಂದ (ವೀರಶೈವ) ಶಬ್ದಾರ್ಥ ನಿರೂಪಣೆ :
    ವೀರಶೈವವು ಕೇವಲ ಸಾಂಪ್ರದಾಯಿಕ ತತ್ತ್ವಗಳನ್ನು  ನಿರೂಪಿಸುವ ಧರ್ಮ ಮಾತ್ರವಲ್ಲ, ಅದೊಂದು ಸರ್ವಗ್ರಾಹ್ಯವಾದ ದರ್ಶನವೂ ಆಗಿದೆ.  ಅಂತೆಯೇ ವೀರಶೈವ ಶಬ್ದವನ್ನು ದಾರ್ಶನಿಕವಾಗಿಯೂ, ಸಾಂಪ್ರದಾಯಿಕವಾಗಿಯೂ ನಿರೂಪಿಸಬೇಕಾದ್ದರಿಂದ ಮೊದಲು ದಾರ್ಶನಿಕ ಪಕ್ಷವನ್ನೇ ವಿಚಾರಿಸೋಣ.
        ವೀ - ಶಬ್ದೇನೋಚ್ಯತೇ ವಿದ್ಯಾ ಶಿವಜೀವೈಕ್ಯ ಬೋಧಿಕಾ |
        ತಸ್ಯಾಂ ರಮಂತೇ ಯೇ ಶೈವಾ ವೀರಶೈವಾಸ್ತು ತೇ ಮತಾಃ ||
       
        ವಿದ್ಯಾಯಾಂ ಶಿವರೂಪಾಯಾಂ ವಿಶೇಷಾದ್ರಮಣಂ ಯತಃ |
        ತಸ್ಮಾದೇತೇ ಮಹಾಭಾಗಾ ವೀರಶೈವಾ ಇತಿ ಸ್ಮೃತಾಃ ||

        ವೇದಾಂತಜನ್ಯಂ ಯದ್ಜ್ಞಾನಂ ವಿದ್ಯೇತಿ ಪರಿಕೀತ್ರ್ಯತೇ |
        ವಿದ್ಯಾಯಾಂ ರಮತೇ ಯಃ ಸ ವೀರ ಇತ್ಯಭಿಧೀಯತೇ ||
                            (ಸಿ.ಶಿ.5/15-17)
    ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಮಹಾಮಹಿಮನಾದ ಶ್ರೀ ಅಗಸ್ತ್ಯ ಮಹಷರ್ಿಗಳನ್ನುದ್ದೇಶಿಸಿ ಮೇಲೆ ಹೇಳಿದ ಪ್ರಕಾರವಾಗಿ ವೀರಶೈವ ಶಬ್ದದ ದಾರ್ಶನಿಕ ಪಕ್ಷವನ್ನು ಉಪದೇಶಿಸಿದ್ದಾರೆ.  ಅದು ಹೇಗೆಂದರೆ ವೀರಶೈವ ಶಬ್ದದಲ್ಲಿ ಬರುವ ವೀ ಶಬ್ದಕ್ಕೆ ವೀ ಗತಿ - ವ್ಯಾಪ್ತಿ - ಪ್ರಜನನಕಾಂತ್ಯಸನ ಖಾದನೇಷು (ಅದಾದಿ 1133) ಎಂಬುದಾಗಿ ಪಾಣಿನಿಯ ಧಾತುಪಾಠದಲ್ಲಿ ವೀ ಧಾತುವಿಗೆ ಅನೇಕ ಅರ್ಥಗಳಿರುವಂತೆ, ಗತಿ ಅಥರ್ಾತ್ ಗಮನವೆಂಬ ಅರ್ಥವೂ ಇದೆ.  ಯೇ ಗತ್ಯರ್ಥಕಾಸ್ತೇ ಜ್ಞಾನಾರ್ಥಕಾಃ ಎನ್ನುವ ನಿಯಮಾನುಸಾರವಾಗಿ ಗಮನಾರ್ಥವನ್ನು ಬೋಧಿಸುವ ಎಲ್ಲ ಧಾತುಗಳೂ ಜ್ಞಾನಾರ್ಥವನ್ನು ಬೋಧಿಸುವವುಗಳಾದ್ದರಿಂದ ಇಲ್ಲಿ ವೀ ಧಾತುವಿನ ಅರ್ಥವು ವಿದ್ಯಾ ಇಲ್ಲವೇ ಜ್ಞಾನ ಎಂದಾಗುವುದು.  ಅದರಂತೆ ವೀರಶೈವದಲ್ಲಿಯ ರದ ಅರ್ಥವು ರಮಣ ಅಥರ್ಾತ್ ಆನಂದಪಡು ಎಂದಾಗುವುದು.  ಹೀಗೆ 'ವೀ' ಶಬ್ದದಿಂದ ತಿಳಿಸಲ್ಪಡುವ ಶಿವ-ಜೀವರ ಇಲ್ಲವೇ ಅಂಗ-ಲಿಂಗಗಳ ಏಕತ್ವವನ್ನು ಬೋಧಿಸುವ ವಿದ್ಯೆಯಲ್ಲಿ ಯಾವ ಶಿವಭಕ್ತನು ವಿಶೇಷವಾಗಿ ರಮಣ (ಆನಂದ)ವನ್ನು ಹೊಂದುವನೋ ಅವನೇ ವೀರಶೈವನು.
ಶ್ರೀ ಎಸ್. ಎನ್. ದಾಸಗುಪ್ತರ ಆಕ್ಷೇಪ ಮತ್ತು ಪರಿಹಾರ ಃ
    ಶ್ರೀ ಎಸ್. ಎನ್. ದಾಸಗುಪ್ತರು ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಹೇಳಲ್ಪಟ್ಟ  ವೀರಶೈವ ಶಬ್ದದ ದಾರ್ಶನಿಕ ನಿರ್ವಚನದ ಮೇಲೆ ಈ ರೀತಿಯಾಗಿ ಆಕ್ಷೇಪವನ್ನು ಮಾಡಿದ್ದಾರೆ.
    ಖಿಜ ಖಜಜಚಿಟಿಣಚಿ ಖಞಚಿಟಚಿಟಿ ರತಜ ಚಿ ಜಿಚಿಟಿಛಿಜಿಣಟ ಟಿಣಜಡಿಠಿಡಿಜಣಚಿಣಠಟಿ ಠಜಿ ತಿಠಡಿಜ, ಗಿಡಿಚಿ ಚಿ ಛಜಟಿರ ಛಿಠಟಠಿಠಜಜ ಠಜಿ 'ತ' ಟಜಚಿಟಿಟಿರ ಞಟಿಠತಿಟಜಜರಜ ಠಜಿ  ಜಜಟಿಣಣಥಿ  ತಿಣ ಛಡಿಚಿಟಚಿಟಿ ಚಿಟಿಜ 'ಖಚಿ' ಚಿ ಟಜಚಿಟಿಟಿರ ಠಟಜಠಟಿಜ ತಿಠ ಣಚಿಞಜ ಠಿಟಜಚಿಣಡಿಜ ಟಿ ಣಛಿ ಞಟಿಠತಿಟಜಜರಜ.  ಃಣಣ ಣಛಿ ಚಿಟಿ ಜಣಥಿಟಠಟಠರಥಿ, ಚಿಛಿಛಿಜಠಿಣಟಿರ ಣ ಣಠ ಛಜ ಛಿಠಡಿಡಿಜಛಿಣ, ತಿಠಣಟಜ ರತಜ ಣಜ ಜಿಠಡಿಟ ಗಿಡಿಚಿ ಚಿಟಿಜ ಟಿಠಣ ಗಿಜಜಡಿಚಿ. ಓಠ  ಜಥಠಿಟಚಿಟಿಚಿಣಠಟಿ  ರತಜಟಿ ಚಿ ಠತಿ 'ಗಿ' ಣಚಿಟಿಜಟಿರ ಜಿಠಡಿ 'ಗಿಜಥಿಚಿ', ತಿಠಣಟಜ ಟಜಟಿರಣಜಟಿ ಣ ತಠತಿಜಟ ಟಿಣಠ 'ಗಿಜಜ'.  , ಣಜಡಿಜಜಿಠಡಿಜ, ಜಿಟಿಜ ಣ ಜಜಿಜಿಛಿಣಟಣ ಣಠ ಚಿಛಿಛಿಜಠಿಣ ಣ ಜಣಥಿಟಠಟಠರಛಿಚಿಟ ಟಿಣಜಡಿಠಿಡಿಜಣಚಿಣಠಟಿ ಚಿ ರಿಣಣಜಿಥಿಟಿರ ಣಜ ಚಿಠಿಠಿಟಛಿಚಿಣಠಟಿ ಠಜಿ ಣಜ ತಿಠಡಿಜ ಗಿಜಜಡಿಚಿ ಣಠ ಗಿಜಜಡಿಚಿ ಖಚಿತಚಿ. ಒಠಡಿಜಠತಜಡಿ, ಟಠಣ ಥಿಣಜಟ ಣಠ ಗಿಜಜಚಿಟಿಣಛಿ ಣಠಣರಣ ಛಿಠಣಟಜ ಛಜ ಛಿಚಿಟಟಜಜ ಗಿಜಜಡಿಚಿ ಟಿ ಣಛಿ ಚಿಟಿ ಟಿಣಜಡಿಠಿಡಿಜಣಚಿಣಠಟಿ, ಜಿಠಡಿ ಟಠಣ ಣಥಿಠಿಜ ಠಜಿ ಗಿಜಜಚಿಟಿಣಚಿ ತಿಠಣಟಜ ಜಿಜಜಟ ಜಟಿರಿಠಥಿಟಜಟಿಣ ಚಿಟಿಜ ಛಟಜ ಟಿ ಣಡಿಣಜ ಞಟಿಠತಿಟಜಜರಜ ಠಜಿ ಜಜಟಿಣಣಥಿ.  ಖಿಜ ತಿಠಡಿಜ 'ಗಿಡಿಚಿ' ತಿಠಣಟಜ ಣಣ ಟಿಠಣ ಛಜ ಚಿ ಜಣಟಿಛಿಣತಜ ಟಚಿಡಿಞ ಛಥಿ ತಿಛಿ ತಿಜ ಛಿಠಣಟಜ ಜಣಟಿರಣ ಗಿಡಿಚಿ-ಖಚಿತಚಿ ಜಿಡಿಠಟ ಣಜ ಚಿಜಜಡಿಜಟಿಣ ಠಜಿ ಠಣಜಡಿ ಡಿಜಟರಠಟಿ.  ಒಠಣ ಠಜಿ ಣಜ ಂರಚಿಟಛಿ ಖಚಿತಚಿ ಚಿಟಠ ತಿಠಣಟಜ ಛಜಟಜತಜ ಟಿ ಣಜ ಣಟಣಟಚಿಣಜ ಜಜಟಿಣಣಥಿ ಠಜಿ ಟಿಜತಜಣಚಿಟ ತಿಣ ಃಡಿಚಿಟಚಿಟಿ ಠಡಿ ಖತಚಿ.
        (ಂ ಊಣಠಡಿಥಿ ಠಜಿ ಟಿಜಚಿಟಿ ಕಟಠಠಠಿಥಿ, ಗಿಠಟ. ಗಿ, ಠಿಠಿ. 44-45)
    ಇವರ ಈ ಆಕ್ಷೇಪದ ತಾತ್ಪರ್ಯವೇನೆಂದರೆ ಸಿದ್ಧಾಂತ ಶಿಖಾಮಣಿಯಲ್ಲಿ ಪ್ರತಿಪಾದಿಸಲ್ಪಟ್ಟ ವೀರ ಶಬ್ದದ ವ್ಯುತ್ಪತ್ತಿಯು ಬಹಳ ವಿಚಿತ್ರವಾಗಿದೆ.  ಶಿವ-ಜೀವರ ಏಕತ್ವವನ್ನು ಬೋಧಿಸುವ ವಿದ್ಯೆಯಲ್ಲಿ ರಮಣ ಮಾಡುವವನಿಗೆ ವೀರನೆನ್ನುವುದಾದರೆ, ಈ ಶಬ್ದವು ವಿರ ಆಗುವುದೇ ವಿನಹ ಆ ಹ್ರಸ್ವ ವೀ ದೀರ್ಘ ಹೇಗಾಯಿತು?
    ಇನ್ನು ಎರಡನೇ ಪ್ರಶ್ನೆ ಏನೆಂದರೆ ಅದ್ವೈತ ವೇದಾಂತಿಗಳು ಹಾಗೂ ಅದ್ವೈತವನ್ನು ಅಂಗೀಕರಿಸುವ ಕೆಲ ಶೈವ ಸಂಪ್ರದಾಯದ ಸಾಧಕರು ಶಿವ-ಜೀವರ ಏಕತ್ವವನ್ನು ಬೋಧಿಸುವ ತತ್ತ್ವಜ್ಞಾನರೂಪವಾದ ವಿದ್ಯೆಯಲ್ಲಿ ರಮಣವನ್ನು ಮಾಡುವುದರಿಂದ ವೀರ ವಿಶೇಷಣವು ಅವರಿಗೂ ಸಹ ಬರುವುದರಿಂದ ಅವರಿಂದ ವೀರಶೈವರನ್ನು ಬೇರ್ಪಡಿಸುವ ಬಗೆ ಹೇಗೆ? ವ್ಯಾವೃತ್ತಿವ್ರ್ಯವಹಾರೋ ವಾ ಲಕ್ಷಣಸ್ಯ ಪ್ರಯೋಜನಮ್ ಎನ್ನುವ ನಿಯಮದ ಪ್ರಕಾರ, ಇಲ್ಲಿ ಈ ವೀರ ವಿಶೇಷದಿಂದ ವೀರಶೈವರನ್ನು ಇತರ ಶೈವ ಸಂಪ್ರದಾಯದವರಿಂದ ಬೇರ್ಪಡಿಸುವುದು ಅಸಂಭವವಾಗಿ ತೋರುತ್ತಿದೆ.
    ಶ್ರೀ ಎಸ್. ಎನ್. ದಾಸಗುಪ್ತರ ಈ ಎರಡೂ ಆಕ್ಷೇಪಗಳು ಅವಿಚಾರಿತ ರಮಣೀಯಗಳಾಗಿರುತ್ತವೆ.  ಸಿದ್ಧಾಂತ ಶಿಖಾಮಣಿಯಲ್ಲಿ -
        ವೀ - ಶಬ್ದೇನೋಚ್ಯತೇ ವಿದ್ಯಾ ಶಿವಜೀವೈಕ್ಯಬೋಧಿಕಾ |
        ತಸ್ಯಾಂ ರಮಂತೇ ಯೇ ಶೈವಾ ವೀರಶೈವಾಸ್ತು ತೇ ಮತಾಃ ||
                (ಸಿ.ಶಿ. 5-15, ಪುಟ-57, ವಾರದ ಪ್ರಕಾಶನ)
    ಎಂಬುದಾಗಿ ವಿದ್ಯಾಬೋಧಕವಾದ ಧಾತುವು ವೀ ಎಂಬುದಾಗಿಯೂ ಪ್ರತಿಪಾದಿಸಲ್ಪಟ್ಟಿದೆ.  ಇದೂ ಅಲ್ಲದೆ ಪಾಣಿನಿಯ ಧಾತುಪಾಠದಲ್ಲಿಯೂ ವೀ ಗತಿ ವ್ಯಾಪ್ತಿ ಪ್ರಜನನ ಕಾಂತ್ಯಸನ ಖಾದನೇಷು (ಅದಾದಿ 1133) ಎಂದು ಗತಿ ಎಂಬರ್ಥವುಳ್ಳ ಧಾತುವು ವೀ ಎಂಬುದಾಗಿಯೇ ನಿರೂಪಿಸಲ್ಪಟ್ಟಿರುವುದರಿಂದ ವಿದ್ಯಾಬೋಧಕವಾದ ಹ್ರಸ್ವ ವಿ ಎನ್ನುವಲ್ಲಿ ದೀರ್ಘ ಹೇಗಾಯಿತು? ಎನ್ನುವ ಪ್ರಶ್ನೆಗೆ ಅವಕಾಶವೇ ಇರುವುದಿಲ್ಲ.  ಆದ್ದರಿಂದ ಶ್ರೀ ದಾಸಗುಪ್ತರ ಮೊದಲನೇ ಆಕ್ಷೇಪವು ನಿರಾಧಾರವಾದದ್ದು.  ಇವರಿಗೆ ವಿದ್ಯಾ ಅಥವಾ ಜ್ಞಾನ ಎಂಬ ಅರ್ಥವನ್ನು ಕೊಡುವ ವೀ ಎಂಬ ಕ್ರಿಯಾಪದವು ಸಂಸ್ಕೃತ ವ್ಯಾಕರಣ ಶಾಸ್ತ್ರದಲ್ಲಿ ಇದೆಯೆಂಬ ತಿಳುವಳಿಕೆ ಇಲ್ಲದೆ ವಿದ್ಯಾ ಶಬ್ದದೊಳಗಿನ
ಹ್ರಸ್ವ ವಿ ಹೇಗೆ ದೀರ್ಘವಾಯಿತು ಎಂಬುದಾಗಿ ಭ್ರಾಂತಿಗೊಳಗಾಗಿದ್ದಾರೆ.  ಕಾರಣ, ಸಂಸ್ಕೃತ ವಿದ್ವಾಂಸರಾದ ವಾಚಕರು ಈ ಆಕ್ಷೇಪ ಮತ್ತು ಅದರ ಬಗ್ಗೆ ನಾವು ಬರೆದ ಪರಿಹಾರೋಪಾಯವನ್ನು ಸಾವಧಾನದಿಂದ ಓದಿ ತಿಳಿದುಕೊಳ್ಳಬೇಕು.
    ಇನ್ನು ಅವರ ಎರಡನೇ ಆಕ್ಷೇಪವೆಂದರೆ, ಈ ಶಿವ-ಜೀವರ ಏಕತ್ವವನ್ನು ಬೋಧಿಸುವ ವಿದ್ಯೆಯಲ್ಲಿ ಅದ್ವೈತವನ್ನೊಪ್ಪುವ ಕೆಲ ಶೈವ ಸಂಪ್ರದಾಯದವರೂ ರಮಣವನ್ನು ಮಾಡುವುದರಿಂದ ಅವರನ್ನು ಸಹ ವೀರಶೈವರೆನ್ನಬೇಕಾಗುವುದು.  ಹೀಗೆ ಈ ಲಕ್ಷಣವು ವೀರಶೈವರಲ್ಲದವರಲ್ಲಿ ಅತಿವ್ಯಾಪ್ತವಾಗಿರುವುದರಿಂದ ಇದು ನಿದರ್ಿಷ್ಟ ಲಕ್ಷಣವಾಗಲಾರದು.  ಅವ್ಯಾಪ್ತಿ, ಅತಿವ್ಯಾಪ್ತಿ ಮತ್ತು ಅಸಂಭವಗಳೆಂಬ ದೋಷತ್ರಯ ಶೂನ್ಯವಾದದ್ದೇ ನಿದರ್ಿಷ್ಟ ಲಕ್ಷಣವು.  ಆದ್ದರಿಂದ ಶಿವ-ಜೀವರ ಏಕತ್ವವನ್ನು ಒಪ್ಪುವ ಇತರ ಶೈವ (ಕಾಶ್ಮೀರ ಶೈವ) ಸಂಪ್ರದಾಯದಲ್ಲಿ ವೀರಶೈವ ಲಕ್ಷಣವು ಅತಿವ್ಯಾಪ್ತವಾದ್ದರಿಂದ ಇದು ವೀರಶೈವರ ಅಸಾಧಾರಣವಾದ ಲಕ್ಷಣವೆಂತಾಗುವುದು?
    ಶ್ರೀ ದಾಸಗುಪ್ತರ ಈ ಎರಡನೇ ಆಕ್ಷೇಪವು ಆಪಾತತಃ ರಮಣೀಯವಾಗಿ ತೋರಿದರೂ ವಿಚಾರದಿಂದ ನಿರಾಕರಣೀಯವಾಗಿದೆ.  ಇಲ್ಲಿ ಎಲ್ಲರೂ ತಿಳಿದುಕೊಳ್ಳಬೇಕಾದ ಒಂದು ರಹಸ್ಯವಿದೆ.  ಅದೇನೆಂದರೆ - ಅಥಾತೋ ಬ್ರಹ್ಮಜಿಜ್ಞಾಸಾ (ಬ್ರಹ್ಮಸೂತ್ರ 1-1-1) ಎನ್ನುವ ಶ್ರೀ ಬ್ರಹ್ಮಸೂತ್ರಕ್ಕೆ ವೀರಶೈವರ ಸಿದ್ಧಾಂತಾನುಸಾರವಾಗಿ ಶ್ರೀಕರ ಭಾಷ್ಯವನ್ನು ಬರೆಯುವಾಗ ಶ್ರೀಪತಿ ಪಂಡಿತಾರಾಧ್ಯರು -
    ಕಲ್ಯಾಣ-ಕೈವಲ್ಯ-ವಿಭೂತಿತ್ರಯ ಪ್ರದಾಯಕಷ್ಟಾವರಣ-ಪಂಚಾಚಾರ-ಸದ್ಗುರು-ಕರುಣಾಕಟಾಕ್ಷ- ಲಬ್ಧಶಕ್ತಿಪಾತಾದ್ಯವಚ್ಛಿನ್ನ ಪರಶಿವಸ್ಯೇಷ್ಟ ಲಿಂಗಧಾರಣಾತ್ಮಕ ಪಾಶುಪತ ದೀಕ್ಷಾನಂತರ್ಯಮಿತ್ಯಥ ಶಬ್ದಾಥರ್ೋ ನಿಣರ್ೀಯತೇ. (ಶ್ರೀಕರಭಾಷ್ಯ 1-1-1)
ಎಂಬುದಾಗಿ 'ಅಥ' ಶಬ್ದದ ಅರ್ಥವನ್ನು ವಿವರಿಸಿದ್ದಾರೆ.  ತಾತ್ಪರ್ಯವೇನೆಂದರೆ: ಅಥಾತೋ ಬ್ರಹ್ಮಜಿಜ್ಞಾಸಾ ಈ ಬ್ರಹ್ಮಸೂತ್ರದಲ್ಲಿ ಮೂರು ಪದಗಳಿರುತ್ತವೆ.  ಅಥ = ಅನಂತರ, ಅತಃ = ಆದ್ದರಿಂದ, ಬ್ರಹ್ಮಜಿಜ್ಞಾಸಾ = ಬ್ರಹ್ಮಜಿಜ್ಞಾಸೆಯನ್ನು ಮಾಡಬೇಕು. ಸ್ವಗರ್ಾದಿ ಫಲಗಳು ಅನಿತ್ಯಗಳಾಗಿರುವುದರಿಂದ ನಿತ್ಯಸುಖಾಪೇಕ್ಷೆಯುಳ್ಳ ಸಾಧಕನು ಅನಂತರ ಬ್ರಹ್ಮಜಿಜ್ಞಾಸೆಯನ್ನು ಮಾಡಬೇಕು ಎಂಬುದಾಗಿ ಈ ಸೂತ್ರದ ಸಂಪೂಣರ್ಾರ್ಥವಾಗುತ್ತದೆ. 
    ಇಲ್ಲಿ 'ಅನಂತರ ಬ್ರಹ್ಮಜಿಜ್ಞಾಸೆಯನ್ನು ಮಾಡಬೇಕು' ಎಂದು ಶ್ರೀ ವ್ಯಾಸಮಹಷರ್ಿಗಳು ಹೇಳಿರುವುದರಿಂದ ಯಾವುದರ ನಂತರ? ಎನ್ನುವ ಪ್ರಶ್ನೆಯು ಉದ್ಭವಿಸುತ್ತದೆ.  ಈ ಪ್ರಶ್ನೆಗೆ ಉತ್ತರರೂಪವಾಗಿ ಶ್ರೀ ಶ್ರೀಪತಿ ಪಂಡಿತಾರಾಧ್ಯರು ಮೇಲೆ ಉದಾಹರಿಸಿದ ಅವರ ಭಾಷ್ಯದ ಅಂಶದಲ್ಲಿ ಸದ್ಗುರುಗಳ ಕೃಪೆಯಿಂದ ದೀಕ್ಷಾಸಂಸ್ಕಾರ ಪುರಸ್ಸರವಾಗಿ ಇಷ್ಟಲಿಂಗವನ್ನು ಧರಿಸಿದ ಅನಂತರ ಬ್ರಹ್ಮಜಿಜ್ಞಾಸೆಯನ್ನು ಮಾಡಬೇಕು ಎಂಬುದಾಗಿ ಹೇಳಿದ್ದಾರೆ.  ಯಾವ ಪ್ರಕಾರ ವೇದಾಂತ ಶಾಸ್ತ್ರದಲ್ಲಿ ವಿವೇಕ, ವೈರಾಗ್ಯ, ಶಮದಮಾದಿ ಷಟ್ಸಂಪತ್ತಿ ಮತ್ತು ಮುಮುಕ್ಷುತ್ವಗಳೆಂಬ ಸಾಧನ ಚತುಷ್ಟಯಗಳ ಪ್ರಾಪ್ತಿಯ ನಂತರ ಬ್ರಹ್ಮಜಿಜ್ಞಾಸೆಯನ್ನು ಮಾಡುವುದಾಗಿ ಹೇಳುತ್ತಾರೋ, ಅದರಂತೆಯೇ ವೀರಶೈವ ಸಿದ್ಧಾಂತದಲ್ಲಿ ವೇಧಾ, ಮಂತ್ರ ಮತ್ತು ಕ್ರಿಯಾದೀಕ್ಷೆಗಳ ಮುಖಾಂತರ ತನ್ನಲ್ಲಿಯ ಆಣವ-ಮಾಯೀಯ ಹಾಗೂ ಕಾಮರ್ಿಕಗಳೆಂಬ ಮಲತ್ರಯಗಳ ನಿವೃತ್ತಿ ಮಾಡಿಕೊಂಡು, ತನ್ನ ಶರೀರದ ಮೇಲೆ ಶಾಸ್ತ್ರಸಮ್ಮತ ಪದ್ಧತಿಯಂತೆ ಇಷ್ಟಲಿಂಗವನ್ನು ಸದಾ ಧರಿಸಿಕೊಂಡು, ಅಷ್ಟಾವರಣಗಳಲ್ಲಿ ನಿಷ್ಠೆಯುಳ್ಳವನಾಗಿ, ಪಂಚಾಚಾರಗಳನ್ನು ಯಾವನು ಪರಿಪಾಲಿಸುವನೋ ಅವನೇ ಬ್ರಹ್ಮಜಿಜ್ಞಾಸೆಗೆ ಅಧಿಕಾರಿ ಎಂಬುದಾಗಿ ವಿವರಿಸಲಾಗಿದೆ.
    ಇದರ ನಿಷ್ಕರ್ಷವೇನೆಂದರೆ-ಸದ್ಗುರುಗಳಿಂದ ದೀಕ್ಷೆಯನ್ನು ಹೊಂದಿ, ಶರೀರದ ಮೇಲೆ ಸದಾ ಇಷ್ಟಲಿಂಗವನ್ನು ಧರಿಸಿಕೊಂಡು, ಶಿವ-ಜೀವರ ಏಕತ್ವವನ್ನು ಬೋಧಿಸುವ ವಿದ್ಯೆಯಲ್ಲಿ ಸದಾ ರಮಣವನ್ನು ಮಾಡುವ ಶಿವಭಕ್ತನೇ ವೀರಶೈವನು.  ಶಿವ-ಜೀವರ ಏಕತ್ವ ಬೋಧಕ ವಿದ್ಯೆಯಲ್ಲಿ ರಮಣ ಮಾಡುವ ವೇದಾಂತಿಗಳಾಗಲೀ, ಕಾಶ್ಮೀರಶೈವ ಸಂಪ್ರದಾಯದವರಾಗಲೀ ಕೊರಳಲ್ಲಿ, ಇಷ್ಟಲಿಂಗವನ್ನು ಧರಿಸದಿರುವುದರಿಂದ, ಅವರಲ್ಲಿ ವೀರಶೈವ ಲಕ್ಷಣವು ಅತಿವ್ಯಾಪ್ತವಾಗಲಾರದು.  ಒಂದು ವೇಳೆ ಅವರು ಕೂಡ ಇಷ್ಟಲಿಂಗವನ್ನು ಧರಿಸಿದ್ದಾದರೆ ಅವರನ್ನೂ ವೀರಶೈವರೆನ್ನುವುದರಲ್ಲಿ ಯಾವ ಅಭ್ಯಂತರವೂ ಇರುವುದಿಲ್ಲ.
    ಹೀಗೆ ವೀರಶೈವ ಶಬ್ದವನ್ನು ಪಂಕಜ ಶಬ್ದದಂತೆ ಯೋಗರೂಢವೆಂದು ತಿಳಿಯಬೇಕು. ಪಂಕಜ ಎನ್ನುವ ಶಬ್ದದ ಯೋಗಶಕ್ತಿಯಿಂದ ಕೆಸರಲ್ಲಿ ಹುಟ್ಟುವ ಇತರ ಹುಳುಗಳು ಎನ್ನುವ ಅರ್ಥ ಹೊರಡುತ್ತಿದ್ದರೂ; ರೂಢಿಶಕ್ತಿಯ ಬಲದಿಂದ ಹೇಗೆ ಕಮಲವೆನ್ನುವೆವೋ ಅದರಂತೆ ವಿದ್ಯಾಯಾಂ ರಮತೇ ಇತಿ ವೀರ ಎನ್ನುವ ವ್ಯುತ್ಪತ್ತಿ ಬಲದಿಂದ ಈ ವಿಶೇಷಣವು ಇತರ ಶೈವರಲ್ಲಿ ಕಂಡುಬಂದರೂ ಇಷ್ಟಲಿಂಗಧಾರಿಗಳಲ್ಲಿಯೇ ಇದು ರೂಢವಾಗಿದೆ.  ಆದ್ದರಿಂದ ಶ್ರೀ ದಾಸಗುಪ್ತರ ಆಕ್ಷೇಪಗಳು ಅವಿಚಾರಿತ ರಮಣೀಯಗಳೆಂದೇ ತಿಳಿಯಬೇಕು.
        ವೀರತ್ವಮಸ್ಯ ನ ಧನೇನ ನ ವಾ ಬಲೇನ
        ನೋ ಕಾರ್ಯತಶ್ಚ ವಿಹಿತಂ ದೃಢಶಂಭುಭಕ್ತ್ಯಾ |
        ವೀರಸ್ತುರೀಯ ಇತಿ ಶಂಕರಭಾಷಣೇನ
        ಶ್ರೀವೀರಶೈವ ಮತಗಾನ್ನ ಪರೋಸ್ತಿ ಕಶ್ಚಿತ್ ||
                        (ವೀ. ಧರ್ಮ ಶಿರೋ. 1-16)
ಈ ರೀತಿಯಾಗಿ ಶ್ರೀ ಷಡಕ್ಷರ ಮಂತ್ರಿಯು ವೀರಶೈವಧರ್ಮ ಶಿರೋಮಣಿ ಎಂಬ ಗ್ರಂಥದಲ್ಲಿ ಪ್ರತಿಪಾದಿಸಿದ್ದಾರೆ.
    ಇನ್ನು ಶ್ರೀ ನೀಲಕಂಠ ಶಿವಾಚಾರ್ಯರು -
        ವಿಶಬ್ದೋ ವಾ ವಿಕಾಲ್ಪಾಥರ್ೋ ರ ಶಬ್ದೋ ರಹಿತಾರ್ಥಕಃ |
        ವಿಕಲ್ಪರಹಿತಂ ಶೈವಂ ವೀರಶೈವಂ ಪ್ರಚಕ್ಷತೇ ||
                    (ಕ್ರಿಯಾನುಸಾರ ಭಾಗ 1. ಪುಟ-11)
    ಎಂಬುದಾಗಿ 'ವಿ' ಎಂದರೆ ವಿಕಲ್ಪ, 'ರ' ಎಂದರೆ ರಹಿತ - ಹೀಗೆ ವಿಕಲ್ಪರಹಿತನಾದ ಶೈವನೇ ವೀರಶೈವನೆಂದು, ವೀರಶೈವದ ಅರ್ಥವನ್ನು ನಿರೂಪಿಸಿದ್ದಾರೆ.
ತಾತ್ಪರ್ಯ : ಪೂರ್ವದಲ್ಲಿ ಹೇಳಿದ ಪ್ರಕಾರ ವೀರಶೈವ ಧರ್ಮದಲ್ಲಿ ದೀಕ್ಷೆಯನ್ನು ಹೊಂದಿ ಇಷ್ಟಲಿಂಗಧಾರಿಯಾದ ಬಳಿಕ ಪ್ರಮಾದದಿಂದ ಆ ಇಷ್ಟಲಿಂಗವು ತನ್ನ ಶರೀರದಿಂದ ಅಗಲಿದರೆ ಪ್ರಾಣವನ್ನೇ ತ್ಯಾಗ ಮಾಡಬೇಕೆಂಬ ನಿಯಮವಿದ್ದರೂ, ತನ್ನ ಪ್ರಾಣದ ಮೇಲಿನ ಮಮತೆಯಿಂದ ಪ್ರಾಣವನ್ನು ತ್ಯಜಿಸಬೇಕೋ, ಬೇಡವೋ ಎನ್ನುವ ವಿಕಲ್ಪವು ಮನಸ್ಸಿನಲ್ಲಿ ಬರುವ ಸಂಭವವಿರುತ್ತದೆ.  ಆದರೆ ಆ ವಿಕಲ್ಪ ಬಾರದಿರುವ ನಿಷ್ಠಾವಂತ ಶಿವಭಕ್ತನೇ ವೀರಶೈವನು. 
    ಯುದ್ಧಭೂಮಿಯಲ್ಲಿ ಯುದ್ಧ ಮಾಡುವ ನಿಷ್ಠೆಯುಳ್ಳ ಸೈನಿಕನು ತನ್ನ ಒಡೆಯನ ವಿಜಯಕ್ಕಾಗಿ ಹೋರಾಡಿ ಸಾಯುವ ಪ್ರಸಂಗ ಬಂದಾಗ ಸಾಯಬೇಕೋ? ಅಥವಾ ಪ್ರಾಣವನ್ನು ಉಳಿಸಿಕೊಂಡು ಪಲಾಯನ ಮಾಡಬೇಕೋ? ಎನ್ನುವ ಯಾವುದೇ ವಿಕಲ್ಪವನ್ನೂ ಮಾಡದೆ ಏಕನಿಷ್ಠೆಯಿಂದ ಯುದ್ಧದಲ್ಲಿ ವೀರಮರಣವನ್ನಪ್ಪಿಕೊಳ್ಳುವಂತೆ, ಇಷ್ಟಲಿಂಗದಲ್ಲಿ ನಿಷ್ಠೆಯುಳ್ಳ ಈ ಭಕ್ತನಾದರೋ ದಿನವೂ ಆ ಲಿಂಗವನ್ನು ಪೂಜಿಸುತ್ತಿದ್ದು, ಅಕಸ್ಮಾತ್ ಆ ಲಿಂಗಕ್ಕಾಗಿ ಪ್ರಾಣತ್ಯಾಗ ಮಾಡುವ ಪ್ರಸಂಗ ಬಂದಾಗ ವಿಕಲ್ಪವನ್ನು ಮನಸ್ಸಿನಲ್ಲಿ ತಾರದೇ, ಪ್ರಾಣತ್ಯಾಗ ಮಾಡಲು ಸಿದ್ಧನಾಗುತ್ತಾನೆ.  ಇಂಥವನನ್ನು ವೀರಶೈವನೆನ್ನುತ್ತಾರೆ.
ಧಾಮರ್ಿಕ ದೃಷ್ಟಿಯಿಂದ ವೀರಶೈವ ಶಬ್ದಾರ್ಥ ನಿರೂಪಣೆ :
        ಇಷ್ಟಲಿಂಗ ವಿಯೋಗೇ ವಾ ವ್ರತಾನಾಂ ವಾ ಪರಿಚ್ಯುತೌ |
        ತೃಣವತ್ ಪ್ರಾಣಸಂತ್ಯಾಗ ಇತಿ ವೀರವ್ರತಂ ಮತಮ್ ||
        ಭಕ್ತ್ಯುತ್ಸಾಹ ವಿಶೇಷೋಪಿ ವೀರತ್ವಮಿತಿ ಕಥ್ಯತೇ |
        ವೀರವ್ರತ ಸಮಾಯೋಗಾದ್ ವೀರಶೈವಂ ಪ್ರಕೀತರ್ಿತಮ್ ||
                    (ಚಂದ್ರಜ್ಞಾನಾಗಮ, ಕ್ರಿ.ಪಾ. 10/33-34)
    ಚಂದ್ರಜ್ಞಾನಾಗಮದ ಈ ಶ್ಲೋಕಗಳಲ್ಲಿ ಶ್ರೀ ಗುರುಪ್ರದತ್ತವಾದ ಇಷ್ಟಲಿಂಗವು ಶರೀರದಿಂದ ಅಗಲಿದರೆ ನನ್ನ ಪ್ರಾಣವನ್ನು ತೃಣದಂತೆ ತ್ಯಾಗ ಮಾಡುವೆನೆಂಬ ವೀರವ್ರತವನ್ನು ಪರಿಪಾಲಿಸುವ ಶಿವಭಕ್ತನೇ ವೀರಶೈವನೆಂಬುದಾಗಿ 'ವೀರಶೈವ' ಶಬ್ದದ ಧಾಮರ್ಿಕಾರ್ಥವು ಪ್ರತಿಪಾದಿಸಲ್ಪಟ್ಟಿದೆ.
    ಇಲ್ಲಿ ತಿಳಿದುಕೊಳ್ಳಬೇಕಾದ ಸಂಪ್ರದಾಯದ ರಹಸ್ಯವೇನೆಂದರೆ ವೀರಶೈವ ಧರ್ಮದ ಗುರುಗಳಾದ, ಷಟ್ಸ್ಥಲ ಬ್ರಹ್ಮೋಪದೇಶವನ್ನು ಪಡೆದ ಪಟ್ಟಾಧಿಕಾರಿಗಳು ತಮ್ಮ ತಮ್ಮ ಶಾಖಾನುವತರ್ಿಗಳಾದ ಶಿಷ್ಯರಿಗೆ ಕ್ರಿಯಾದೀಕ್ಷೆಯನ್ನು ಮಾಡಿ ಪಂಚಾಕ್ಷರ ಮಂತ್ರೋಪದೇಶ ಪುರಸ್ಸರವಾಗಿ ಇಷ್ಟಲಿಂಗವನ್ನು ದಯಪಾಲಿಸುತ್ತಾರೆ.  ಆಗ ದೀಕ್ಷೆಯನ್ನು ಪಡೆದ ವ್ಯಕ್ತಿಗೆ -
        ಪ್ರಾಣವದ್ಧಾರಣೀಯಂ ತತ್ಪ್ರಾಣಲಿಂಗಮಿದಂ ತವ |
        ಕದಾಚಿತ್ ಕುತ್ರಚಿದ್ವಾಪಿ ನ ವಿಯೋಜಯ ದೇಹತಃ ||
                            (ಸಿ.ಶಿ.6-25)
    ಅಂದರೆ ಈ ಇಷ್ಟಲಿಂಗವನ್ನು ಪ್ರಾಣದಷ್ಟು ಪ್ರೀತಿಯಿಂದ ಧರಿಸು.  ಇದನ್ನು ಎಲ್ಲಿಯೂ, ಎಂದೂ ಅಗಲಿರಬೇಡ ಎಂಬುದಾಗಿ ಉಪದೇಶಿಸುತ್ತಾರೆ.  ಶ್ರೀ ಗುರುಗಳ ಈ ಆದೇಶವನ್ನು ತಪ್ಪದೆ ಪರಿಪಾಲಿಸುತ್ತಿರುವಾಗ ಅಕಸ್ಮಾತ್ ಇಷ್ಟಲಿಂಗವು ಶರೀರದಿಂದ ಅಗಲಿದರೆ ತನ್ನ ಪ್ರಾಣವನ್ನೇ ತ್ಯಾಗ ಮಾಡುವೆನೆಂಬ ವೀರವ್ರತವನ್ನು ಪರಿಪಾಲಿಸುವ ಶಿವಭಕ್ತನೇ ವೀರಶೈವನೆಂದು ತಾತ್ಪರ್ಯವು.
        ಹೀಗೆ ವೀರಶೈವ ಶಬ್ದದಲ್ಲಿಯ ವೀರ ಎಂಬ ವಿಶೇಷಣವು ಭಕ್ತಿಯ ಉತ್ಕರ್ಷವನ್ನು ತಿಳಿಸುವುದೇ ವಿನಹ, ಧನ ಇಲ್ಲವೇ ಶರೀರದ ಬಲಪ್ರಯುಕ್ತವಾದ ಅಹಂಕಾರವನ್ನು ವ್ಯಕ್ತಮಾಡುವಂತಹುದಲ್ಲ.  ಇದೇ ಅಭಿಪ್ರಾಯವನ್ನೇ -

        ಯೋ ಹಸ್ತಪೀಠೇ ನಿಜಮಿಷ್ಟಲಿಂಗಂ
        ವಿನ್ಯಸ್ಯ ತಲ್ಲೀನ ಮನಃಪ್ರಚಾರಃ |
        ಬಾಹ್ಯಕ್ರಿಯಾಸಂಕುಲ ನಿಃಸ್ಪೃಹಾತ್ಮಾ
        ಸಂಪೂಜಯತ್ಯಂಗ ಸ ವೀರಶೈವಃ ||
    ಅಂದರೆ, ಕರಪೀಠದಲ್ಲಿ ಇಷ್ಟಲಿಂಗವನ್ನು ಇರಿಸಿಕೊಂಡು, ಆ ಇಷ್ಟಲಿಂಗದಲ್ಲಿಯೇ ಮನಸ್ಸನ್ನು ಸ್ಥಿರಗೊಳಿಸಿ, ಬಾಹ್ಯ ಕ್ರಿಯೆಗಳಲ್ಲಿ ನಿಃಸ್ಪೃಹನಾಗಿ, ಅದನ್ನು ನಿಷ್ಠೆಯಿಂದ ಪೂಜಿಸುವವನೇ ವೀರಶೈವನೆಂಬುದಾಗಿ ನಿರೂಪಿಸಲ್ಪಟ್ಟಿರುತ್ತದೆ.  ಇಲ್ಲಿ ಬಾಹ್ಯ ಉಪಚಾರಗಳಲ್ಲಿ ಹೆಚ್ಚಿನ ವೇಳೆಯನ್ನು ಕಳೆಯದೆ, ಇಷ್ಟಲಿಂಗದಲ್ಲಿ ದೃಷ್ಟಿಯೋಗ (ಶಿವಯೋಗ)ವನ್ನು ಸಾಧಿಸುವುದರ ಬಗ್ಗೆ ಹೆಚ್ಚಿನ ಮಹತ್ವವು ಸೂಚಿಸಲ್ಪಟ್ಟಿದೆ.  ಇದರಿಂದ ಕರಪೀಠದಲ್ಲಿ ಇಷ್ಟಲಿಂಗವನ್ನು ಅಚರ್ಿಸುವ ಈ ವೀರಶೈವ ಧರ್ಮವು ಪುರಾಣಕತರ್ೃವಾದ ಶ್ರೀ ವ್ಯಾಸಮಹಷರ್ಿಗಿಂತ ಪೂರ್ವದಲ್ಲಿಯೇ ಅತ್ಯಂತ ಪ್ರಚಾರದಲ್ಲಿ ಇತ್ತೆಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.  ಅಂತೆಯೇ ಶ್ರೀವ್ಯಾಸಮಹಷರ್ಿಯು ಶ್ರೀ ಕೇದಾರ ಪೀಠದ ದ್ವಾಪರಯುಗದ ಆಚಾರ್ಯರಾದ ಶ್ರೀ 1008 ಜಗದ್ಗುರು ಘಂಟಾಕರ್ಣ ಶಿವಾಚಾರ್ಯ ಭಗವತ್ಪಾದರಿಂದ ವೀರಶೈವ ತತ್ತ್ವಗಳನ್ನು ತಿಳಿದುಕೊಂಡು ಅವರ ಶಿಷ್ಯನಾಗಿದ್ದನೆಂಬ ಬಗ್ಗೆ ಇಂದಿಗೂ ಕಾಶೀ ಕ್ಷೇತ್ರದ ವ್ಯಾಸಕಾಶಿಯಲ್ಲಿ ಶ್ರೀ ವ್ಯಾಸರ ಮಂದಿರದಲ್ಲಿ ಸ್ಥಾಪಿತವಾಗಿರುವ ಶ್ರೀ ಘಂಟಾಕರ್ಣ ಶಿವಾಚಾರ್ಯರ ಅತಿ ಪ್ರಾಚೀನ ಶಿಲಾಮೂತರ್ಿಯೇ ಪ್ರತ್ಯಕ್ಷ ಪ್ರಮಾಣವಾಗಿ ಕಂಗೊಳಿಸುತ್ತಲಿದೆ.  ಎಡಹಸ್ತದಲ್ಲಿ ಇಷ್ಟಲಿಂಗವನ್ನು ಪೂಜಿಸುತ್ತಿರುವ ಈ ಮೂತರ್ಿಯು ಇಂದಿಗೂ ವ್ಯಾಸಕಾಶಿಯಲ್ಲಿದೆ.  ಜಿಜ್ಞಾಸುಗಳೂ, ಸಂಶೋಧಕರೂ ಪರಾಮಶರ್ಿಸಬಹುದು. 
    ಅದೇ ಪ್ರಕಾರ ವಾತುಲ ಶುದ್ಧಾಖ್ಯ ತಂತ್ರದಲ್ಲಿ -
        ವಿಶಿಷ್ಟ ಈರ್ಯತೇ ಯಸ್ಮಾದ್ ವೀರ ಇತ್ಯಭಿಧೀಯತೇ |
        ಶಿವೇನ ಸಹ ಸಂಬಂಧಂ ಶೈವಮಿತ್ಯಾದೃತಂ ಬುಧೈಃ ||
        ಉಭಯೋಃ ಸಂಪುಟೀಭಾವಾದ್ ವೀರಶೈವಮಿತಿ ಸ್ಮೃತಂ |
        ಶಿವಾಯಾಪರ್ಿತಜೀವತ್ವಾದ್ ವೀರತಂತ್ರ ಸಮುದ್ಭವಾತ್ ||
        ವೀರಶೈವ ಸಮಾಯೋಗಾದ್ ವೀರಶೈವಮಿತಿ ಸ್ಮೃತಮ್ |
                                (10/27-29)
    ವಿಶಿಷ್ಟ ಈರ್ಯತ ಇತಿ ವೀರಃ ಶಿವೇನ ಸಹ ಸಂಬಂಧಂ ಶೈವಂ - ಹೀಗೆ ವೀರ ಮತ್ತು ಶೈವ ಶಬ್ದಗಳ ಪೃಥಕ್ ಪೃಥಕ್ ವ್ಯುತ್ಪತ್ತಿಗಳನ್ನು ಪ್ರತಿಪಾದಿಸಿ, ಕೊನೆಗೆ ಅವೆರಡನ್ನೂ ಕೂಡಿಸಿದಾಗ 'ವೀರಶೈವ' ಶಬ್ದವು ಉತ್ಪನ್ನವಾಗುತ್ತದೆ ಎಂಬುದಾಗಿ ವೀರಶೈವ ಶಬ್ದದ ಪರಿಭಾಷೆಯು ಹೇಳುತ್ತದೆ.
ತಾತ್ಪರ್ಯ : ಇಷ್ಟಲಿಂಗವನ್ನು ಸದಾ ಧರಿಸಿಕೊಂಡು ಅಷ್ಟಾವರಣಗಳಲ್ಲಿ ನಿಷ್ಠೆಯುಳ್ಳವನಾಗಿ, ಪಂಚಾಚಾರಗಳನ್ನು ಪರಿಪಾಲಿಸುತ್ತ, ಜಗತ್ತಿನಲ್ಲಿರುವ ಉಳಿದ ಜನರಿಗಿಂತಲೂ ಈತನು ವಿಶಿಷ್ಟ (ವಿಲಕ್ಷಣ)ನಾಗಿ ತೋರುತ್ತಿರುವುದರಿಂದಲೂ, ಶಿವನಿಗಾಗಿ ತನ್ನ ಆತ್ಮಾರ್ಪಣೆಯನ್ನು ಮಾಡುವ ವೀರವ್ರತ ಪರಿಪಾಲಕನಾಗಿರುವುದರಿಂದಲೂ, ಅದರಂತೆ ವೀರಶೈವ ತಂತ್ರೋಕ್ತ ಮಾರ್ಗದಲ್ಲಿ ಮುನ್ನಡೆಯುವುದರಿಂದಲೂ ಈತನನ್ನು ವೀರಶೈವನೆನ್ನುತ್ತಾರೆ.
        ಇನ್ನು ಶ್ರೀ ನೀಲಕಂಠ ಶಿವಾಚಾರ್ಯರು ಕ್ರಿಯಾಸಾರದಲ್ಲಿ
1        ವಿರೋಧಾಥರ್ೋ ವಿ ಶಬ್ದಃ ಸ್ಯಾದ್ ರ ಶಬ್ದೋ ರಹಿತಾರ್ಥಕಃ |
        ವಿರೋಧರಹಿತಂ ಶೈವಂ ವೀರಶೈವಂ ವಿದುಬರ್ುಧಾಃ ||                                           (ಭಾಗ-1, ಪು-11)
    ವಿರೋಧ ರಹಿತನಾದ ಶೈವನೇ ವೀರಶೈವನೆಂಬುದಾಗಿ ವೀರಶೈವ ಲಕ್ಷಣವನ್ನು ಪ್ರತಿಪಾದಿಸಿದ್ದಾರೆ.  ಅಂದರೆ ಯಾವುದೇ ಭಾರತೀಯ ಧರ್ಮದರ್ಶನಗಳನ್ನು ವಿರೋಧ ಭಾವನೆಯಿಂದ ಖಂಡಿಸದೆ, ಅವೆಲ್ಲವುಗಳನ್ನೂ ಸಮನ್ವಯ ದೃಷ್ಟಿಯಿಂದ ನೋಡುವುದೇ ವೀರಶೈವರ ಮತ್ತು ವೀರಶೈವ ಧರ್ಮದ ಉದ್ದೇಶವಾಗಿದೆ.
    ವೀರಶೈವ ಧರ್ಮದ ಸಂಸ್ಥಾಪಕಾಚಾರ್ಯರಾದ ಶ್ರೀ 1008 ಜಗದ್ಗುರು ರೇಣುಕ ಭಗವತ್ಪಾದರು ಶ್ರೀ ಅಗಸ್ತ್ಯ ಮಹಷರ್ಿಗೆ -
        ಸಾಂಖ್ಯಂ ಯೋಗಃ ಪಾಂಚರಾತ್ರಂ ವೇದಾಃ ಪಾಶುಪತಂ ತಥಾ |
        ಏತಾನಿ ಮಾನಭೂತಾನಿ ನ ಹಂತವ್ಯಾನಿ ಯುಕ್ತಿಭಿಃ ||
                            (ಸಿ.ಶಿ. 5-4)
    ಹೇ ಅಗಸ್ತ್ಯನೇ! ಸಾಂಖ್ಯ, ಯೋಗ,  ಪಾಂಚರಾತ್ರ ಮುಂತಾದ ವೇದಸಮ್ಮತಗಳಾದ ಅನೇಕ ದರ್ಶನಗಳಿವೆ.  ಅವೆಲ್ಲವುಗಳೂ ತಮ್ಮ ತಮ್ಮ ಪರಿಧಿಯಲ್ಲಿ ಪ್ರಾಮಾಣಿಕವಾಗಿರುವುದರಿಂದ ಅವುಗಳನ್ನು ಯುಕ್ತಿಯಿಂದ ಖಂಡಿಸಬಾರದೆಂಬುದಾಗಿ ವೀರಶೈವರ ಈ ವಿರೋಧರಹಿತವಾದ ಸಮನ್ವಯ ಸಿದ್ಧಾಂತವನ್ನು ಆದಿಯಲ್ಲಿಯೇ ಉಪದೇಶಿಸಿದ್ದಾರೆ.  ಅದನ್ನೇ ಆಧಾರವಾಗಿ ಹಿಡಿದುಕೊಂಡು ಶ್ರೀ ನೀಲಕಂಠ ಶಿವಾಚಾರ್ಯರು ಮೂಲಾಚಾರ್ಯರ ಅಭಿಪ್ರಾಯವನ್ನೇ ತಮ್ಮ ಮಾತಿನಲ್ಲಿ ತಿಳಿಯಪಡಿಸಿದ್ದಾರೆ. 
    ಇದೇ ಪ್ರಕಾರ ಜನ್ಮತಃ ಬ್ರಾಹ್ಮಣರಾಗಿದ್ದರೂ ವೀರಶೈವ ಧರ್ಮದಲ್ಲಿ ದೀಕ್ಷೆಯನ್ನು ಪಡೆದು ಈ ಧರ್ಮದ ತತ್ತ್ವಗಳನ್ನು ಬಹಳಷ್ಟು ಪ್ರಚಾರ ಮಾಡಿದ ಶ್ರೀ ಬಸವಣ್ಣನವರಾದರೂ -
        ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ;
        ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ;
        ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ;
        ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
        ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ !
    ಎಂಬ ತಮ್ಮ ಈ ವಚನದಲ್ಲಿ ಸಪ್ತಸೂತ್ರಗಳನ್ನು ಪ್ರತಿಪಾದಿಸಿ ಇವುಗಳಲ್ಲಿ ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ - ಎಂಬ ನಾಲ್ಕು ಸೂತ್ರಗಳಿಂದ ವೀರಶೈವನಾದವನು ವಿರೋಧರಹಿತವಾದ ಜೀವನವನ್ನು ಸಾಧಿಸಬೇಕಾದರೆ ಹೇಗೆ ವತರ್ಿಸಬೇಕು ಎನ್ನುವುದನ್ನು ಬಹು ಮಾಮರ್ಿಕವಾಗಿ ಪ್ರತಿಪಾದಿಸಿ, ಈ ವಿರೋಧರಾಹಿತ್ಯವು ಅಂತರಂಗದ ಶುದ್ಧಿಗೆ ಕಾರಣವೆಂಬುದಾಗಿ ನಿರ್ಣಯಿಸಿದ್ದಾರೆ.
    ಹೀಗೆ ಶ್ರೀ ಜಗದ್ಗುರು ರೇಣುಕ ಭಗವತ್ಪಾದಾಚಾರ್ಯರನ್ನು ಮೊದಲ್ಗೊಂಡು ಶ್ರೀಬಸವಣ್ಣನವರ ಪರ್ಯಂತ ವೀರಶೈವ ಆಚಾರ್ಯರ ಮತ್ತು ಶರಣರ ಸಾಹಿತ್ಯವನ್ನು ಪಯರ್ಾಲೋಚಿಸಿದಾಗ, ಅನಾದಿ ಕಾಲದಿಂದಲೂ ವೀರಶೈವರು ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯನ್ನು ಪರಿಪಾಲಿಸುತ್ತ ಸಕಲ ಪ್ರಾಣಿಗಳನ್ನೂ ಪ್ರೀತಿಸುವ ಉದಾತ್ತವಾದ ಮನೋಭಾವನೆಯುಳ್ಳವರಾಗಿದ್ದಾರೆಂದು ತಿಳಿದುಬರುತ್ತದೆ.  ವೀರಶೈವರ ಈ ಉದಾತ್ತ ಭಾವನೆಯನ್ನು ಅನ್ಯ ಧರ್ಮದವರೂ ನಿಷ್ಠೆಯಿಂದ ಪರಿಪಾಲಿಸಿದ್ದೇ ಆದರೆ ಇಂದು ಧರ್ಮದ ಹೆಸರಿನಿಂದ ನಡೆಯುತ್ತಿರುವ ಹಿಂಸಾಚಾರಗಳು ಅಡಗಿ ಜಗತ್ತಿನಲ್ಲಿ ಚಿರಶಾಂತಿ ನೆಲೆಸುವುದರಲ್ಲಿ ಯಾವ ಸಂದೇಹವೂ ಇಲ್ಲ.
    ಈ ತೆರನಾಗಿ ವೀರಶೈವ ಪದದ ಧಾಮರ್ಿಕ ಅರ್ಥದ ನಿರ್ವಚನಗಳನ್ನು ಪಯರ್ಾಲೋಚಿಸಿದಾಗ ಹೊರಡುವ ತಾತ್ಪರ್ಯವೇನೆಂದರೆ - ಶ್ರೀ ಸದ್ಗುರುಗಳಿಂದ ದೀಕ್ಷಾ ಸಂಸ್ಕಾರವನ್ನು ಹೊಂದಿ ಅವರ ಅನುಗ್ರಹದಿಂದ ಪ್ರಾಪ್ತವಾದ ಇಷ್ಟಲಿಂಗವನ್ನು ಸದಾ ದೇಹದ ಮೇಲೆ ಧರಿಸಿಕೊಂಡು, ಪ್ರಸಂಗಬಂದರೆ ಪ್ರಾಣವನ್ನೇ ತ್ಯಾಗಮಾಡಬಲ್ಲೆನು; ಆದರೆ ಇಷ್ಟಲಿಂಗ ಪೂಜೆಯನ್ನು ಎಂದಿಗೂ ಬಿಡುವುದಿಲ್ಲವೆಂಬ ನಿಷ್ಠಾಭಕ್ತಿಯಿಂದ ಕೂಡಿದವನಾಗಿ, ಯಾವುದೇ ಧರ್ಮದವರನ್ನಾಗಲಿ, ಯಾವುದೇ ಪ್ರಾಣಿಯನ್ನಾಗಲಿ, ದ್ವೇಷಿಸದೇ ವೈರಭಾವನೆಯನ್ನು ಸಂಪೂರ್ಣ ತ್ಯಾಗಮಾಡಿ, ಸರ್ವರೊಡನೆ ಪ್ರೇಮದಿಂದ ವ್ಯವಹರಿಸುವ ಉದಾತ್ತವಾದ ಮನೋಭಾವನೆಯುಳ್ಳವನೇ ವೀರಶೈವನು.
ವೀರಶೈವದ ಪ್ರಭೇದ :
        ವೀತರಾಗಾದಿ ದೋಷತ್ವಾದಾತ್ಮ ತತ್ತ್ವ ವಿಚಾರಣಾತ್ |
        ವಿಕಲ್ಪಾಕಲ್ಪ ಶೂನ್ಯತ್ವಾದ್ವೀರಶೈವಮಿತಿ ಸ್ಮೃತಮ್ ||
        ಸಾಮಾನ್ಯಂ ಪ್ರಥಮಂ ಪ್ರೋಕ್ತಂ ವಿಶೇಷಂ ಚ ದ್ವಿತೀಯಕಮ್ |
        ನಿರಾಭಾರಂ ತೃತೀಯಂ ಸ್ಯಾತ್ ಕ್ರಮಾಲ್ಲಕ್ಷಣಮುಚ್ಯತೇ ||
                    (ಸೂಕ್ಷ್ಮಾಗಮ, ಕ್ರಿಯಾಪಾದ 7/29-30)
    ಸೂಕ್ಷ್ಮಾಗಮದ ಈ ವಚನದಲ್ಲಿ ವೀತರಾಗಿಗಳು, ದೋಷರಹಿತರು, ಆತ್ಮತತ್ತ್ವ ವಿಚಾರಿಗಳು ಮತ್ತು ವಿಕಲ್ಪಶೂನ್ಯರು ಮುಂತಾದ ಲಕ್ಷಣಗಳಿಂದ ಕೂಡಿರುವವರು ವೀರಶೈವರು.  ಈ ವೀರಶೈವವು ಸಾಮಾನ್ಯ, ವಿಶೇಷ ಹಾಗೂ ನಿರಾಭಾರ ಎಂದು ಮೂರು ವಿಧಗಳಿಂದ ಪ್ರತಿಪಾದಿಸಲ್ಪಟ್ಟಿದೆ.  ಈ ಮೂರು ಭೇದಗಳು ವೀರಶೈವನ ಕ್ರಮಿಕ ವಿಕಾಸವನ್ನು ಸೂಚಿಸುವವುಗಳಾಗಿವೆ.  ಇವುಗಳಲ್ಲಿ ಸಾಮಾನ್ಯ ನಿಯಮಾನ್ ಯಃ ಪರಿಪಾಲಯತಿ ಸ ಸಾಮಾನ್ಯ ವೀರಶೈವಃ - ಎಂಬೀ ಆಗಮೋಕ್ತಿಯಂತೆ, ಗುರುದೀಕ್ಷೆಯನ್ನು ಪಡೆದ ನಂತರ ಇಷ್ಟಲಿಂಗದ ಪೂಜೆ ಮತ್ತು ಗುರು - ಜಂಗಮರ ಸೇವೆ ಮುಂತಾದ ವೀರಶೈವ ಧರ್ಮದ ಸಾಮಾನ್ಯ ನಿಯಮಗಳನ್ನು ಪರಿಪಾಲಿಸುವವನೇ ಸಾಮಾನ್ಯ ವೀರಶೈವನು.
    ವಿಶಿಷ್ಟ ಧಮರ್ಾನುಷ್ಠಾನಾದ್ವಿಶೇಷ ಇತಿ ಕಥ್ಯತೇ ಎನ್ನುವ ಆಗಮೋಕ್ತಿಗನುಸಾರವಾಗಿ, ಪೂರ್ವದಲ್ಲಿ ಹೇಳಿದ ವೀರಶೈವರ ಸಾಮಾನ್ಯ ನಿಯಮಗಳನ್ನು ಪರಿಪಾಲಿಸುತ್ತಾ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಮುಕ್ತಿಯ ಸೋಪಾನಗಳಂತಿರುವ ಷಟ್ಸ್ಥಲದ ತತ್ತ್ವಗಳನ್ನು ಗುರುಮುಖದಿಂದ ವಿಶೇಷವಾಗಿ ತಿಳಿದುಕೊಂಡು ಅವುಗಳನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡವನೇ ವಿಶೇಷ ವೀರಶೈವನು.
    ನಿವೃತ್ತ ಕರ್ಮಭಾರತ್ವಾನ್ನಿರಾಭಾರ ಇತಿ ಸ್ಮೃತಃ ಎಂಬ ಆಗಮೋಕ್ತಿಯಂತೆ, ಮೇಲೆ ಹೇಳಿದ ವಿಶೇಷ ವೀರಶೈವನೇ ತನ್ನ ಎಲ್ಲ ಕರ್ತವ್ಯಗಳನ್ನು ಪೂರ್ಣಮಾಡಿ ಕೃತಕೃತ್ಯನೆನಿಸಿಕೊಂಡು ಜೀವನ್ಮುಕ್ತನಂತೆ ನಿಃಸ್ಪೃಹವಾದ ವೃತ್ತಿಯಿಂದ ಜೀವನವನ್ನು ಕಳೆಯುತ್ತಿರುವವನಾಗಿ ನಿರಾಭಾರ ವೀರಶೈವನೆನಿಸುವನು.  ಹೀಗೆ ವೀರಶೈವರ ಈ ಮೂರು ಭೇದಗಳು ಒಬ್ಬನೇ ಆದ ವ್ಯಕ್ತಿಯ ಕ್ರಮಿಕವಾದ ಆಧ್ಯಾತ್ಮಿಕ ವಿಕಾಸದ ಪ್ರತೀಕಗಳಾಗಿ ತೋರುತ್ತವೆ.
ವೀರಶೈವರ ದಾರ್ಶನಿಕ ಸಿದ್ಧಾಂತ :
    ಪರಮ ಪಾವನವಾದ ವೀರಶೈವರ ದಾರ್ಶನಿಕ ಸಿದ್ಧಾಂತವು ವಿಶೇಷಾದ್ವೈತ, ಶಿವಾದ್ವೈತ ಮತ್ತು ಶಕ್ತಿವಿಶಿಷ್ಟಾದ್ವೈತ ಮುಂತಾದ ಸಾರ್ಥಕ ಹೆಸರುಗಳಿಂದ ಕರೆಯಲ್ಪಡುತ್ತದೆ.  ಈ ಹೆಸರುಗಳ ವ್ಯುತ್ಪತ್ತಿಯನ್ನವಲೋಕಿಸಿದಾಗ ಈ ಸಿದ್ಧಾಂತದ ದಾರ್ಶನಿಕ ತತ್ತ್ವಗಳ ಪರಿಜ್ಞಾನವಾಗುವುದು.  ಆದ್ದರಿಂದ ಈಗ ಇವುಗಳ ವ್ಯುತ್ಪತ್ತಿಯನ್ನವಲೋಕಿಸೋಣ.
1.  ವಿಶೇಷಾದ್ವೈತ :
    ವಿಶ್ವ ಶೇಷಶ್ಚ ವಿಶೇಷೌ = ಈಶ ಜೀವೌ; ತಯೋರದ್ವೈತಂ ವಿಶೇಷಾದ್ವೈತಮ್ ಇದು ವಿಶೇಷಾದ್ವೈತ ಶಬ್ದದ ವ್ಯುತ್ಪತ್ತಿಯು.
ತಾತ್ಪರ್ಯ : ವಿಶ್ವಕ್ಷುಷಿ ವ್ಯೋಮ್ನಿ ವಾತೇ ಪರಮಾತ್ಮನಿ ಪಕ್ಷಿಣಿ (ಏಕಾಕ್ಷರ ಕೋಶ, ಪುಟ - 18) ಎಂಬ ಈ ಏಕಾಕ್ಷರ ಕೋಶದಲ್ಲಿ 'ವಿಃ' ಎನ್ನುವ ಅಕ್ಷರಕ್ಕೆ ಕಣ್ಣು, ಆಕಾಶ, ವಾಯು, ಪಕ್ಷಿ ಮತ್ತು ಪರಮಾತ್ಮ ಎನ್ನುವ ಐದು ಅರ್ಥಗಳು ನಿರೂಪಿಸಲ್ಪಟ್ಟಿವೆ.  ಆದ್ದರಿಂದ ವಾತಿ ಉತ್ಪಾದಯತಿ ಜಗದಿತಿ ವಿಃ ಎಂಬ ವ್ಯುತ್ಪತ್ತಿಯ ಮೇರೆಗೆ ಜಗತ್ತನ್ನು ಸೃಷ್ಟಿಸುವ ಪರಮಾತ್ಮನಿಗೆ ವಿಃ ಎಂದು ಕರೆಯಲಾಗುತ್ತದೆ.
    ಅಮರಕೋಶದಲ್ಲಿ 'ವಿ' ಎಂಬ ಶಬ್ದಕ್ಕೆ ಪಕ್ಷಿ ಎಂದೇ ಅರ್ಥವನ್ನು ಹೇಳಲಾಗಿದೆ.  ಹಾಗಾದರೂ ದ್ವಾ ಸುಪಣರ್ಾ ಸಯುಜಾ ಸಖಾಯಾ (ಮುಂಡಕ 3-1-1) ಈ ಉಪನಿಷದ್ವಚನದಲ್ಲಿ ಜೀವಾತ್ಮ-ಪರಮಾತ್ಮರಿಬ್ಬರನ್ನೂ ಪಕ್ಷಿ ಶಬ್ದದಿಂದ ಪ್ರತಿಪಾದಿಸಿರುವುದರಿಂದ, ಪ್ರಕೃತವಾದ 'ವಿ' ಶಬ್ದದ ಅರ್ಥವನ್ನು ಪರಮಾತ್ಮನೆಂತಲೇ ಗ್ರಹಿಸಬೇಕು.  ಅದರಂತೆ 'ಶೇಷ' ಎಂದರೆ ಆ ಪರಮಾತ್ಮನ ಅಂಶವಾದ ಜೀವಾತ್ಮನು - ಎಂಬುದಾಗಿ ಗ್ರಹಿಸಬೇಕು.  ಯಥಾಗ್ನೇಃ ಕ್ಷುದ್ರಾ ವಿಸ್ಫುಲಿಂಗಾಃ (ಬೃಹದಾರಣ್ಯಕ 2-1-20) ಎಂಬ ಶ್ರುತಿವಚನದಲ್ಲಿ ಅಗ್ನಿಕಣದ ದೃಷ್ಟಾಂತದಿಂದ ಜೀವಾತ್ಮನು ಪರಮಾತ್ಮನ ಅಂಶವೆಂಬುದಾಗಿ ಪ್ರತಿಪಾದಿಸಲ್ಪಟ್ಟಿದೆ.
    ಹೀಗೆ ಅಂಶಾಶಿರೂಪರಾದ ಜೀವ-ಪರಮಾತ್ಮರಿಗೆ ಯಥಾ ನದ್ಯಃ ಸ್ಯಂದಮಾನಾಃ  ಸಮುದ್ರೇಸ್ತಂಗಚ್ಛಂತಿ (ಮುಂಡಕ 3-2-8) ಎನ್ನುವ ಶ್ರುತಿಯು ಅಭೇದವನ್ನು ಬೋಧಿಸುತ್ತದೆ.
ತಾತ್ಪರ್ಯ : ಸಮುದ್ರವನ್ನು ಕೂಡುವ ಪೂರ್ವದಲ್ಲಿ ನದಿಯು ಸಮುದ್ರಕ್ಕಿಂತ ಬೇರೆಯಾಗಿ ತೋರಿದರೂ, ಅದರಲ್ಲಿ ಕೂಡಿದಾಗ ಹೇಗೆ ತನ್ನ ನಾಮ-ರೂಪಗಳನ್ನು ಕಳೆದುಕೊಂಡು ಅಭಿನ್ನವಾಗುತ್ತದೋ, ಅದರಂತೆ ಸಂಸಾರ ದಿಶೆಯಲ್ಲಿ ಪರಮಾತ್ಮನಿಗಿಂತ ಭಿನ್ನವಾಗಿ ತೋರುವ ಅಂಶನಾದ ಜೀವಾತ್ಮನು ಮುಕ್ತಿಯ ದಿಶೆಯಲ್ಲಿ ಅಭಿನ್ನನಾಗುತ್ತಾನೆ.  ಈ ಪ್ರಕಾರವಾಗಿ ವಿಶಬ್ದ ವಾಚ್ಯನಾದ  ಪರಮಾತ್ಮನಿಗೂ, ಶೇಷಶಬ್ದ ವಾಚ್ಯನಾದ ಜೀವಾತ್ಮನಿಗೂ ಮುಕ್ತಿಯ ಸ್ಥಿತಿಯಲ್ಲಿ ಅದ್ವೈತವನ್ನು ಬೋಧಿಸುವ ಈ ವೀರಶೈವ ದರ್ಶನವನ್ನು ವಿಶೇಷಾದ್ವೈತವೆಂದು ಕರೆಯಲಾಗಿದೆ ಅಂತೆಯೇ -
        ವಿ ಶಬ್ದೇನೋಚ್ಯತೇ ಶಂಭುರ್ಹಂಸಹಂಸೇತಿ ಮಂತ್ರತಃ |
        ಶೇಷಶಬ್ದೇನ ಶಾರೀರೋ ಯಥಾಗ್ನೇರಿತಿ ಮಂತ್ರತಃ ||
        ಅದ್ವೈತೇನ ಭವೇದ್ಯೋಗೋ ಯಥಾನದ್ಯ ಇತಿ ಶ್ರುತೇಃ |
                        (ಶ್ರೀಕರಭಾಷ್ಯ, ಮಂಗಲಾಚರಣ-16)
    ಎಂಬುದಾಗಿ ಭಾಷ್ಯಕಾರರಾದ ಶ್ರೀಪತಿ ಪಂಡಿತಾರಾಧ್ಯರು ವಿಶೇಷಾದ್ವೈತ ಪದದ ರಹಸ್ಯಾರ್ಥವನ್ನು ಸಂಕ್ಷೇಪವಾಗಿ ಪ್ರತಿಪಾದಿಸಿದ್ದಾರೆ.
2.    ಶಿವಾದ್ವೈತ :
     ಶಿವಶ್ಚ ಶಿವಶ್ಚ ಶಿವೌ ತಯೋರದ್ವೈತಂ ಶಿವಾದ್ವೈತಮ್ ಇದು ಶಿವಾದ್ವೈತ ಪದದ ವ್ಯುತ್ಪತ್ತಿಯು.  ಇಲ್ಲಿ ಮೊದಲನೇ ಶಿವ ಶಬ್ದದ ಅರ್ಥವು ಪರಮಾತ್ಮನೆಂತಲೂ, ಎರಡನೇ ಶಿವ ಶಬ್ದದ ಅರ್ಥವು ಪರಮಾತ್ಮನ ಅಂಶನಾದ ಜೀವಾತ್ಮನೆಂತಲೂ ಗ್ರಹಿಸಬೇಕು.  ಸಂಸಾರ ದಿಶೆಯಲ್ಲಿ ಉಪಾಸ್ಯ-ಉಪಾಸಕ ರೂಪವಾಗಿ ಇಬ್ಬರಲ್ಲಿ ಭೇದ ತೋರಿದರೂ, ಮುಕ್ತಾವಸ್ಥೆಯಲ್ಲಿ ಇವರೀರ್ವರ ಅದ್ವೈತವನ್ನು ಪ್ರತಿಪಾದಿಸುವ ವೀರಶೈವ ಸಿದ್ಧಾಂತವನ್ನು ಶಿವಾದ್ವೈತ ಸಿದ್ಧಾಂತವೆಂದು ಕರೆಯುತ್ತಾರೆ.
3.    ಶಕ್ತಿವಿಶಿಷ್ಟಾದ್ವೈತ :
    ಶಕ್ತಿಶ್ಚ ಶಕ್ತಿಶ್ಚ = ಶಕ್ತೀ; ತಾಭ್ಯಾಂ ವಿಶಿಷ್ಟೌ ಯೌ ಜೀವೇಶೌ, ತಯೋರದ್ವೈತಂ ತಂ = ಶಕ್ತಿ ವಿಶಿಷ್ಟಾದ್ವೈತಮ್ ಇದು ಈ ಪದದ ವ್ಯುತ್ಪತ್ತಿಯು.  ಶಕ್ತಿಯು  ಸ್ಥೂಲ, ಸೂಕ್ಷ್ಮ ಭೇದದಿಂದ ಎರಡು ವಿಧವಾಗಿದೆ.  ಇದರಲ್ಲಿ ಸೂಕ್ಷ್ಮ ಶಕ್ತಿಯು ಈಶ್ವರನನ್ನೂ ಸ್ಥೂಲ ಶಕ್ತಿಯು ಜೀವನನ್ನೂ ಆಶ್ರಯಿಸಿರುತ್ತವೆ.  ಸೂಕ್ಷ್ಮಶಕ್ತಿಯ ಕಾರಣದಿಂದಲೇ ಶಿವನು ಸರ್ವಜ್ಞನೂ, ಸರ್ವಕರ್ತನೂ ಆಗಿರುತ್ತಾನೆ.  ಸ್ಥೂಲಶಕ್ತಿಯ ಕಾರಣದಿಂದ ಜೀವಾತ್ಮನು ಅಲ್ಪಜ್ಞನೂ, ಅಲ್ಪಕರ್ತನೂ ಆಗಿರುತ್ತಾನೆ.  ಅದರಂತೆ ಈ ಸರ್ವಜ್ಞತ್ವ ಮತ್ತು ಅಲ್ಪಜ್ಞತ್ವಾದಿ ಧರ್ಮಗಳ ಭೇದದಿಂದಲೇ ಜೀವೇಶ್ವರರಲ್ಲಿ ಭೇದ ಉಂಟಾಗಿರುತ್ತದೆ.
    ಶಿವನ ಅಂಶವಾದ ಈ ಜೀವನು ಪುನಃ ಶಿವನಲ್ಲಿ ಸಮರಸನಾಗದೆ ಕೃತಕೃತ್ಯನಾಗಲಾರನು.  ಜೀವಾತ್ಮನು ಶಿವನಲ್ಲಿ ಸಮರಸವಾಗುವ ಮಾರ್ಗವನ್ನು ಉಪದೇಶಿಸುವ ವೀರಶೈವ ದಾರ್ಶನಿಕ ಸಿದ್ಧಾಂತವನ್ನು ಶಕ್ತಿ ವಿಶಿಷ್ಟಾದ್ವೈತವೆಂದು ಕರೆದಿದ್ದಾರೆ.
    ಆಣವಾದಿ ಮಲತ್ರಯಗಳಿಂದ ಆವೃತನಾಗಿ ಅಲ್ಪಜ್ಞತ್ವಾದಿ ಸಂಕುಚಿತ ಶಕ್ತಿಯಿಂದ ಕೂಡಿದ ಜೀವಾತ್ಮನಿಗೆ ಸದ್ಗುರುಗಳು ಯಾವಾಗ ದೀಕ್ಷೆಯನ್ನು ಮಾಡುವರೋ ಆವಾಗ ಅವನಲ್ಲಿಯ ಆಣವಾದಿ ಮಲತ್ರಯಗಳು ತೊಲಗಿ, ಅವನಲ್ಲಿಯ ಅಲ್ಪಜ್ಞತ್ವಾದಿ ಶಕ್ತಿಗಳೇ ಭಕ್ತಿರೂಪದಲ್ಲಿ ಪರಿವರ್ತನೆಗೊಳ್ಳುತ್ತವೆ.  ಅವನ ಸಾಧನೆಯು ಬೆಳೆದಂತೆಲ್ಲ ಶ್ರದ್ಧೆ, ನಿಷ್ಠೆ, ಅವಧಾನ, ಅನುಭವ, ಆನಂದ ಮತ್ತು ಸಮರಸಗಳೆಂಬ ಭಕ್ತಿಗಳು ಸಾಧಕನಿಗೆ ಸಿದ್ಧಿಸುತ್ತವೆ.
    ಈ ಭಕ್ತಿಗಳ ಸಹಾಯದಿಂದಲೇ ಇವನು ಭಕ್ತ, ಮಹೇಶ, ಪ್ರಸಾದ, ಪ್ರಾಣಲಿಂಗಿ, ಶರಣ - ಮತ್ತು ಐಕ್ಯಗಳೆಂಬ ಸ್ಥಲಗಳನ್ನು ಹೊಂದಿ ಕೊನೆಯದಾದ ಐಕ್ಯಸ್ಥಲದಲ್ಲಿ ಸಮರಸರೂಪವಾದ ಭಕ್ತಿಯ ಪ್ರಭಾವದಿಂದ ತನ್ನ ಸಂಕುಚಿತ ಶಕ್ತಿಗಳನ್ನೆಲ್ಲ ವಿಕಾಸಗೊಳಿಸಿಕೊಂಡು, ಆ ವಿಕಸಿತ ಶಕ್ತಿಯುಕ್ತನಾದ ಪರಶಿವನೊಂದಿಗೆ ಸಮರಸವಾಗುವುದೇ ಮುಕ್ತಿಯು.  ಈ ಮಾರ್ಗವನ್ನು ಉಪದೇಶಿಸುವ ವೀರಶೈವ ಸಿದ್ಧಾಂತವನ್ನು ಶಕ್ತಿ ವಿಶಿಷ್ಟಾದ್ವೈತ ವೆಂದು ಕರೆಯುತ್ತಾರೆ.   
        ವೀರಶೈವ ಧರ್ಮ ಸಂಸ್ಥಾಪಕರಾರು?
1.    ಶಿವ-ರುದ್ರರು ಮತಸಂಸ್ಥಾಪಕರಲ್ಲ :
    ವೀರಶೈವ ಧರ್ಮದ ಮೂಲಗ್ರಂಥಗಳಾದ ಕಾಮಿಕಾದಿ ವಾತುಲಾಂತಗಳಾದ ಇಪ್ಪತ್ತೆಂಟು ಶಿವಾಗಮಗಳಲ್ಲಿ ಶಿವನು ಪಾರ್ವತಿಗೆ ಮತ್ತು ರುದ್ರನು ಬೃಹಸ್ಪತಿಗೆ ವೀರಶೈವ ಸಿದ್ಧಾಂತವನ್ನು ಉಪದೇಶಿಸಿರುವುದರಿಂದ, ಶಿವ-ರುದ್ರರನ್ನೇ ವೀರಶೈವ ಮತಸ್ಥಾಪಕರೆಂದು ಏಕೆ ಕರೆಯಬಾರದೆಂಬ ಪ್ರಶ್ನೆಯು ವಿಚಾರಶೀಲರ ಮನಸ್ಸಿನಲ್ಲಿ ಮೂಡಬಹುದು.  ಆದರೆ ಅವರು ಉಪದೇಶಿಸಿದ್ದು ದೇವಲೋಕದಲ್ಲಿಯೇ ವಿನಹ ಭೂಲೋಕದಲ್ಲಲ್ಲ.  ಆ ಉಪದೇಶವನ್ನೇ -
        ಮದದ್ವೈತಪರಂ ಶಾಸ್ತ್ರ ವೇದವೇದಾಂತ ಸಮ್ಮತಂ |
        ಸ್ಥಾಪಯಿಷ್ಯಸಿ ಭೂಲೋಕೇ ಸವರ್ೇಷಾಂ ಹಿತಕಾರಕಂ ||
        ಮಮ ಪ್ರತಾಪಮತುಲಂ ಮದ್ಭಕ್ತಾಂಶ್ಚ ವಿಶೇಷತಃ |
        ಪ್ರಕಾಶಯ ಮಹೀಭಾಗೇ ವೇದಮಾಗರ್ಾನುಸಾರತಃ ||
                                (ಸಿ.ಶಿ.3/70-71)
    ಹೇ ರೇಣುಕನೇ ! ನನ್ನಿಂದ ಉಪದೇಶಿಸಲ್ಪಟ್ಟ ಶಿವಾದ್ವೈತ ಸಿದ್ಧಾಂತವು ಸರ್ವಸಮ್ಮತವಾಗಿದೆ.  ಕಾರಣ ಈ ಸಿದ್ಧಾಂತವನ್ನೇ ಸರ್ವಮಾನವರ ಹಿತಕ್ಕಾಗಿ ಭೂಲೋಕದಲ್ಲಿ ಸಂಸ್ಥಾಪಿಸಿ, ಶಿವನಿಗಿಂತಲೂ ಶಿವಭಕ್ತರು ಅಧಿಕರೆಂಬುದನ್ನು ಜಗತ್ತಿಗೆ ತೋರಿಸಿಕೊಡು ಎನ್ನುವ ಶಿವನ ಆದೇಶದಂತೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಈ ವೀರಶೈವ ಸಿದ್ಧಾಂತವನ್ನು ಭೂಲೋಕದಲ್ಲಿ ಪ್ರಪ್ರಥಮವಾಗಿ ಉಪದೇಶಿಸಿರುವುದರಿಂದ, ಈ ಪಂಚಾಚಾರ್ಯರೇ ವೀರಶೈವ ಮತ ಸಂಸ್ಥಾಪಕರೆಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ.
    ಪಂಚಾಚಾರ್ಯರ ಈ ಪಂಚಪೀಠಗಳಿಗೆ ವೀರಮಹೇಶ್ವರ (ಜಂಗಮ) ವಂಶೋತ್ಪನ್ನರಾದ ಸುಶಿಕ್ಷಿತ ಬ್ರಹ್ಮಚಾರಿ ವಟುಗಳನ್ನೇ ಪೀಠಾಚಾರ್ಯರನ್ನಾಗಿ ಪಟ್ಟಾಭಿಷೇಕ ಮಾಡುತ್ತಾರೆ.      ಈ ಪಂಚಾಚಾರ್ಯರೇ ವೀರಶೈವ ಧರ್ಮದ ಜಗದ್ಗುರುಗಳೆಂದು ಕರೆಯಲ್ಪಡುತ್ತಾರೆ.  ಉಳಿದ ಮಠಾಧಿಪತಿಗಳು (ಪಟ್ಟಾಧಿಕಾರಿಗಳು) ಇವರ ಶಾಖಾಮಠಗಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತ ಇವರ ಶಿಷ್ಯರಾಗಿರುತ್ತಾರೆ.  ಇವರು ಶಿವಾಚಾರ್ಯರೆಂದು ಕರೆಯಲ್ಪಡುತ್ತಾರೆ.
    ಶ್ರೀ ಜಗದ್ಗುರು ಪಂಚಾಚಾರ್ಯರ ಲಿಂಗೋದ್ಭವ ಸಮೀಕ್ಷೆ
        ಯದಾ ಯದಾ ಹಿ ಧರ್ಮಸ್ಯ  ಹಾನಿರ್ಭವತಿ ಭೂತಲೇ |
        ತದಾ ತದಾವತಾರೋಯಂ ಗಣೇಶಾನಾಂ ಮಹೀತಲೇ ||
                                (ಸ್ಕಂದ ಪುರಾಣ)
        ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
        ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||
                                    (ಗೀತಾ)

    ಮುಂತಾದ ಪ್ರಮಾಣ ವಚನಾನುಸಾರವಾಗಿ ಭೂಲೋಕದಲ್ಲಿ ಧರ್ಮದ ಅವನತಿಯಾದಾಗ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ಪರಿಪಾಲಿಸಿ ಧರ್ಮದ ತತ್ತ್ವಗಳನ್ನು ಉಪದೇಶಿಸುವುದಕ್ಕಾಗಿ ಪರಮಾತ್ಮನಾಗಲೀ ಅಥವಾ ಅವನ ಗಣರಾಗಲೀ ಅವತರಿಸಿ ಬರುತ್ತಾರೆಂಬುದು ಸಿದ್ಧವಾಗುತ್ತದೆ.
    ತೃ-ತರಣ ಪೋಷಣಯೋಃ ಎಂಬ ಧಾತುವಿಗೆ ಅವ ಉಪಸರ್ಗ ಸಂಬಂಧವಾದಾಗ ಅವತಾರ ಎಂಬ ಶಬ್ದವು ಸಿದ್ಧವಾಗುತ್ತದೆ.  ಇಳಿದು ಬರು ಎಂಬುದು ಇದರ ಸಾಮಾನ್ಯವಾದ ಅರ್ಥ.  ನಿಗರ್ುಣ, ನಿರಾಕಾರನಾದ ಪರಮಾತ್ಮನಾಗಲೀ, ಪರಮಾತ್ಮನ ಗಣರಾಗಲೀ ಲೋಕ ಕಲ್ಯಾಣಾರ್ಥವಾಗಿ ಲೋಕ ವಿಲಕ್ಷಣಗಳಾದ ದಿವ್ಯದೇಹಗಳನ್ನು ಧರಿಸಿಕೊಂಡು ಬರುವುದನ್ನೇ ಅವತಾರವೆನ್ನುತ್ತಾರೆ.
    ತೃ-ತರಣ ಪೋಷಣಯೋಃ ಎಂಬ ಧಾತುವಿನಿಂದ 'ಸಾಕ್ಷಾತ್ ಇಳಿ' ಅಥವಾ 'ಇಳಿದು ಬರು' ಎಂಬ ಅರ್ಥವು ಹೊರಡದ್ದರಿಂದ 'ಅವ' ಎಂಬ ಉಪಸರ್ಗವನ್ನು ಹಚ್ಚಿ ಅವತಾರ ಎಂಬ ಶಬ್ದವನ್ನು ಮಾಡಲಾಗಿದೆ.  ಉಪಸರ್ಗಗಳಿಂದ ಮೂಲಧಾತುವಿನ ಅರ್ಥಗಳು ಬದಲಾಗುತ್ತವೆ ಎಂಬುದು ಉಪಸಗರ್ೇಣ ಧಾತ್ವಥರ್ೋ ಬಲಾದನ್ಯತ್ರನೀಯತೇ ಎಂಬ ಸಂಸ್ಕೃತವ್ಯಾಕರಣದ ನಿಯಮದಿಂದ ಸಿದ್ಧವಾಗುತ್ತದೆ.
    ಸಾಮಾನ್ಯವಾಗಿ ತನ್ನ ಸಾಧನೆ ಮತ್ತು ಗುರು - ಈಶ್ವರರ ಅನುಗ್ರಹದಿಂದ ಉನ್ನತ ಸ್ಥಾನವನ್ನು ತಲುಪಿದವನು ಕೆಳಗಿಳಿದು ಬರಲು ಅಪೇಕ್ಷಿಸುವುದಿಲ್ಲ ಎಂಬ ಮಾತು ಸತ್ಯವಾದದ್ದು.  ಆದರೆ ಲೋಕವಿಲಕ್ಷಣವಾದ ಚಾರಿತ್ರ್ಯವುಳ್ಳವರು ಭಕ್ತೋದ್ಧಾರಕ್ಕಾಗಿ ಸ್ವಯಂ ತೀತ್ವರ್ಾ ಪರಾನ್ ತಾರಯತಿ ಎಂಬ ಪ್ರಮಾಣಾನುಸಾರವಾಗಿ ಅವಶ್ಯವಾಗಿ ಅವತರಿಸಿ ಬರುತ್ತಾರೆ.  
    ಲೋಕದಲ್ಲಿಯೂ ಅಂಗಳದಲ್ಲಿ ಆಡುವ ಮಗುವು ಎಡವಿ ಬಿದ್ದು ಅಳುತ್ತಿರುವಾಗ ಮಹಡಿಯ (ಮೇಲಂತಸ್ತಿನ) ಮೇಲೆ ಇರುವ ತಾಯಿಯು ಆ ಆರ್ತನಾದವನ್ನು ಕೇಳಿದೊಡನೆ ಕೆಳಗಿಳಿದು ಬಂದು ಮಗುವನ್ನು ಸಾಂತ್ವನಗೊಳಿಸುವುದನ್ನು ಪ್ರತ್ಯಕ್ಷವಾಗಿ ನೋಡುತ್ತೇವೆ.  ಮೇಲಿರುವ ತಾಯಿಯು ಮಗುವಿನ ಆರ್ತನಾದವನ್ನು ಕೇಳಿಯೂ ಕೆಳಗಿಳಿದು ಬಾರದಿದ್ದರೆ ಆಕೆಯ ಮಾತೃತ್ವಕ್ಕೆ ಕುಂದುಬರುತ್ತದೆ.  ಅದರಂತೆ ಭಕ್ತವತ್ಸಲನೂ, ಕರುಣಾಮಯನೂ ಆದ ಪರಮಾತ್ಮನಾಗಲಿ, ಅವನ ಗಣರಾಗಲಿ ಲೋಕದಲ್ಲಿ ದುಃಖಿತ ಜೀವಿಗಳ ಆರ್ತನಾದವನ್ನು ಕೇಳಿದಾಗ ಲೋಕೋದ್ಧಾರಕ್ಕಾಗಿ ಅವಶ್ಯವಾಗಿ ಅವತರಿಸಲೇಬೇಕಾಗುತ್ತದೆ.  ಇಲ್ಲವಾದರೆ ಅವನ ಮಹತ್ವಕ್ಕೆ ಕಳಂಕ ಬಾರದೇ ಇರದು.
    ಪರಿಪೂರ್ಣ ಸ್ವರೂಪನಾದ ಪರಮೇಶ್ವರನ ಹೃದಯದಲ್ಲಿ ತನ್ನ ಅಂಶಗಳಾದ ಜೀವಿಗಳ ಮೇಲೆ ಸಹಜ ಸ್ನೇಹವಿದೆ ಎಂಬುದಕ್ಕೆ ನಾಮರೂಪಾತ್ಮಕವಾಗಿರುವ ಜಗತ್ತಿನ ಭೋಗ್ಯ ಪದಾರ್ಥಗಳ ಸೃಷ್ಟಿಯೇ ಸಾಕ್ಷಿಯಾಗಿದೆ.  ಇದೂ ಅಲ್ಲದೆ ಜನ್ಮಜನ್ಮಾಂತರಗಳ ಕರ್ಮವನ್ನು ಅನುಭವಿಸುತ್ತಿರುವ ಜೀವಿಗಳಿಗೆ ಸಹಾಯಕನಾಗಿ ಪರಮೇಶ್ವರನು ಅವರ ಸಮೀಪದಲ್ಲಿಯೇ ಇರುತ್ತಾನೆ ಎಂಬುದಕ್ಕೆ ಮಹಾಭಾರತ ಮುಂತಾದ ಉದ್ಗ್ರಂಥಗಳೇ ಸಾಕ್ಷಿಯಾಗಿವೆ.  ಆದ್ದರಿಂದ ಅನನ್ಯ ಭಕ್ತರ ಆರ್ತನಾದವನ್ನು ಕೇಳಿ ದ್ರವೀಭೂತನಾದ ಪರಮೇಶ್ವರನು ಪರಮ ಕಾರುಣಿಕನೆಂಬ ತನ್ನ ಬಿರುದನ್ನು ಸಾರ್ಥಕಪಡಿಸಿಕೊಳ್ಳುವುದಕ್ಕಾಗಿ ತನ್ನ ದಿವ್ಯನಿವಾಸದಿಂದ ತಾನೂ ಬರುತ್ತಾನೆ ಹಾಗೂ ಗಣರನ್ನೂ ಕಳುಹಿಸಿಕೊಡುತ್ತಾನೆ ಎಂಬಲ್ಲಿ ಸಂದೇಹವೇನಿದೆ? ಅದಕ್ಕಾಗಿ ಅನಾದಿ ಕಾಲದಿಂದ ಪ್ರಸಿದ್ಧವಾದ ಈ ಅವತಾರ ಶಬ್ದವು ತನ್ನಲ್ಲಿ ನಿಕ್ಷಿಪ್ತವಾದ ಪರಮ ರಹಸ್ಯವನ್ನು ತಿಳಿಸುತ್ತಿದೆ ಎಂತಲೇ ಭಾವಿಸಬೇಕಾಗುತ್ತದೆ.
    ಪರಮಾತ್ಮನಾಗಲಿ, ಪರಮಾತ್ಮನ ಗಣರಾಗಲಿ ಸರ್ವತಂತ್ರ ಸ್ವತಂತ್ರರಾಗಿರುವುದರಿಂದ ನಮ್ಮಂತೆ ಮಾತಾಪಿತೃಗಳ ಉದರದಿಂದಲೇ ಬರಬೇಕು ಎಂಬ ನಿರ್ಬಂಧತೆಗಳು ಅವರಿಗಿಲ್ಲ.  ಅಂತೆಯೇ ಪ್ರಹ್ಲಾದನಿಗಾಗಿ ಶ್ರೀ ವಿಷ್ಣುವು ಕಂಬದಿಂದ ನೃಸಿಂಹನಾಗಿ ಅವತರಿಸಿದಂತೆ, ಮಾರ್ಕಂಡೇಯನಿಗಾಗಿ ಪರಮಾತ್ಮನು ಶಿವಲಿಂಗದಿಂದ ಪ್ರಾದುರ್ಭವಿಸಿದಂತೆ, ಶ್ರೀ ಜಗದ್ಗುರು ಪಂಚಾಚಾರ್ಯರು ಪರಮಾತ್ಮನ ಅಪ್ಪಣೆಯ ಮೇರೆಗೆ ಸೋಮೇಶ್ವರಾದಿ ಶಿವಲಿಂಗಗಳಿಂದ ಆವಿರ್ಭವಿಸಿದರು.
    ಪೂಜ್ಯರು ಶಿವಲಿಂಗಗಳಿಂದ ಆವಿರ್ಭವಿಸಿದರು ಎಂಬ ಮಾತನ್ನು ಕೇಳಿದಾಗ ಬಹಳಷ್ಟು ಜನರಿಗೆ ಇದೊಂದು ಅಸಂಭವದ ಕಟ್ಟುಕಥೆಯಂತೆ ತೋರಬಹುದು.  ಅದರಲ್ಲಿಯೂ ಕುತಕರ್ಿಗಳು ಕಲ್ಲು ಜಡವಾದ್ದರಿಂದ ಈ ಜಡವಸ್ತುವಿನಿಂದ ಚೇತನವ್ಯಕ್ತಿಯು ಉದ್ಭವಿಸುವುದೆಂತು? ಎಂಬುದಾಗಿ ತಕರ್ಿಸುವುದೂ ಉಂಟು.  ಆದರೆ, ಶ್ರೀ ಜಗದ್ಗುರು ಪಂಚಾಚಾರ್ಯರ ಲಿಂಗಾವತಾರವು ಕಟ್ಟುಕಥೆಯಾಗಿರದೇ ವೈಜ್ಞಾನಿಕವೂ, ಲೋಕ ಹಾಗೂ ಶಾಸ್ತ್ರಸಮ್ಮತವೂ ಆಗಿದೆ.
    ಇಂದು ನಾವು ಕಾಣುವ ಜೀವರಾಶಿಗಳಲ್ಲಿ ಉದ್ಭಿಜ, ಸ್ವೇದಜ, ಅಂಡಜ ಮತ್ತು ಜರಾಯುಜಗಳೆಂಬ ನಾಲ್ಕು ವಿಭಾಗಗಳಿರುತ್ತವೆ.  ಭೂಮಿಯನ್ನು ಬಿರಿದು ಬರುವ ವನಸ್ಪತಿಗಳು ಉದ್ಭಿಜಗಳೆಂದೂ, ಬೆವರಿನಿಂದ ಜನಿಸುವ ಹೇನು, ಕೂರಿ ಮುಂತಾದವುಗಳು ಸ್ವೇದಜಗಳೆಂದೂ, ತತ್ತಿಯನ್ನು ಭೇದಿಸಿ ಬರುವ ಪಕ್ಷಿ-ಸಪರ್ಾದಿಗಳು ಅಂಡಜಗಳೆಂದೂ ಮತ್ತು ಮಾತೃ ಉದರದೊಳಗಿನ ಜರಾಯು ಎಂಬ ಚೀಲದಿಂದ ಜನಿಸುವ ಪಶು-ಮನುಷ್ಯಾದಿಗಳಿಗೆ ಜರಾಯುಜಗಳೆಂದೂ ಕರೆಯಲಾಗಿದೆ.  ಇದಲ್ಲದೇ ಜಡಗಳಾದ ಕಲ್ಲುಗಳಿಂದ ಕಪ್ಪೆಗಳು ಮತ್ತು ಸಗಣಿಯಲ್ಲಿ ಚೇಳು ಮುಂತಾದ ಅನೇಕ ಕ್ರಿಮಿಗಳು ಪ್ರಾದುರ್ಭವಿಸುವುದನ್ನು ನಿತ್ಯಜೀವನದಲ್ಲಿ ಕಾಣುತ್ತೇವೆ.  ಅದರಂತೆ ಚೇತನನಾದ ಮನುಷ್ಯನ ಶರೀರದಿಂದ ಜಡಗಳಾದ ಉಗುರು, ಕೂದಲುಗಳೂ ಜನಿಸುತ್ತವೆ.  ಹೀಗೆ ಸಾಮಾನ್ಯವಾದ ಈ ಲೋಕಾನುಭವದಲ್ಲಿ ಜಡದಿಂದ ಚೇತನಗಳ ಮತ್ತು ಚೇತನದಿಂದ ಜಡಗಳ ಉತ್ಪತ್ತಿಯು ಸವರ್ಾನುಭವ ಸಿದ್ಧವಾದದ್ದು.
    ಇನ್ನು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ರೀತಿಯಿಂದ ಸೂಕ್ಷ್ಮವಾಗಿ ಪಯರ್ಾಲೋಚಿಸಿದಾಗ ಜಗತ್ತಿನ ಪ್ರತಿಯೊಂದು ವಸ್ತುವೂ ಚೇತನವೇ ಆಗಿದೆ.  ಮೊದಲು ನಾವು ಗಿಡ-ಬಳ್ಳಿಗಳನ್ನು ಜಡವೆಂದು ಭಾವಿಸುತ್ತಿದ್ದೆವು.  ಆದರೆ ಅವುಗಳೂ ಮನುಷ್ಯನಂತೆ ಉಸಿರಾಡುತ್ತವೆ ಎಂಬುದನ್ನು ವಿಜ್ಞಾನಿಗಳು ಗುರುತಿಸಿದರು.  ವಿಜ್ಞಾನದ ವಿಕಾಸವಾದಂತೆ ಗಿಡಬಳ್ಳಿಗಳು ಶ್ವಾಸೋಚ್ವಾಸವನ್ನು ಮಾಡುವುದಷ್ಟೆ ಅಲ್ಲ, ಮನುಷ್ಯನಂತೆ ಅವುಗಳಿಗೂ ಮನಸ್ಸಿದೆ.  ಅವುಗಳಿಗೆ ನೋವು-ನಲಿವುಗಳ ಅರಿವಾಗುತ್ತದೆ ಎಂಬುದನ್ನೂ ಗುರುತಿಸಿದ್ದಾರೆ.  ಇನ್ನೂ ಸ್ವಲ್ಪ ಮುಂದೆ ಹೋಗಿ ಹೇಳುವುದಾದರೆ ಮನುಷ್ಯನ ಮನಸ್ಸಿಗಿಂತಲೂ ಗಿಡ - ಬಳ್ಳಿಗಳ ಮನಸ್ಸು ಅತಿ ಕೋಮಲವಾಗಿದೆ.  ಒಬ್ಬ ಮನುಷ್ಯನನ್ನು ಯಾರಾದರೂ ಹೊಡೆಯಲಿಕ್ಕೆ ಬಂದರೆ ಮಗ್ಗುಲಲ್ಲಿರುವ ಶತ್ರುಭಾವನೆಯವನು ನೋಡುತ್ತಾ ನಿಲ್ಲುತ್ತಾನೆ.  ಆದರೆ ಅಡವಿಯಲ್ಲಿಯ ಯಾವುದೇ ಗಿಡವನ್ನು ಓರ್ವನು ಕೊಡಲಿಯಿಂದ ಕಡಿಯುತ್ತಿರುವಾಗ ಸುತ್ತಮುತ್ತಲಿನ ಎಲ್ಲ ಗಿಡಗಳೂ ಕಡಿಸಿಕೊಳ್ಳುವ ಗಿಡದಷ್ಟೇ ಸಮಾನವಾದ ನೋವನ್ನು ಅನುಭವಿಸುತ್ತವೆಂಬುದನ್ನು ಸೂಕ್ಷ್ಮವಾದ ವೈಜ್ಞಾನಿಕ ಪರೀಕ್ಷೆಯಿಂದ ಇಂದು ವಿಜ್ಞಾನಿಗಳು ತಿಳಿದುಕೊಂಡಿದ್ದಾರೆ.  ಆದ್ದರಿಂದ ಗಿಡ - ಬಳ್ಳಿಗಳಿಗೆ ಇಂದು ಯಾರಾದರೂ ಜಡಪದಾರ್ಥಗಳು ಅಂದರೆ ಅವರನ್ನು ಅವೈಜ್ಞಾನಿಕರೆಂದೇ ಕರೆಯಬೇಕಾಗುವುದು.  ತಮ್ಮ ನೋವು ನಲಿವುಗಳನ್ನು ತಪಸ್ವಿಗಳಂತೆ ಮೌನವಾಗಿ ಅನುಭವಿಸುತ್ತಿರುವ ಗಿಡ-ಬಳ್ಳಿಗಳಿಂದಲೂ ಮನುಷ್ಯನು ಬಹಳಷ್ಟು ಕಲಿಯಬೇಕಾಗಿದೆ.
    ಗಿಡ-ಬಳ್ಳಿಗಳು ಚೇತನಗಳಾಗಿರಬಹುದು.  ಆದರೆ ಕಲ್ಲು-ಮಣ್ಣುಗಳು ಜಡಗಳೇ ಎಂದು ಯಾರಾದರೂ ಹೇಳಿದರೆ ಅವರು ತಮ್ಮ ಅಜ್ಞಾನವನ್ನೇ ಪ್ರದಶರ್ಿಸಿದಂತಾಗುತ್ತದೆ.  ಸ್ವಪರಜ್ಞಪ್ತಿ ಶೂನ್ಯತ್ವಂ ಜಡತ್ವಮ್ ಅಂದರೆ ತನ್ನ ಹಾಗೂ ಅನ್ಯದರ ಜ್ಞಾನವಿಲ್ಲದ್ದು ಜಡ ಎಂಬುದಾಗಿ ಶಾಸ್ತ್ರಕಾರರು ಸ್ಥೂಲದೃಷ್ಟಿಯಿಂದ ಜಡದ ಪರಿಭಾಷೆಯನ್ನು ಮಾಡಿದ್ದಾರೆ.   ಕಾಷ್ಠ ಮೌನವನ್ನಾಚರಿಸುವ ಒಬ್ಬ ದಿವ್ಯಯೋಗಿಯು ತನ್ನ ಹಾಗೂ ಅನ್ಯ ವಸ್ತುಗಳ ಅರಿವನ್ನು ತನ್ನ ವಾಣಿಯಿಂದ ಅಭಿವ್ಯಕ್ತ ಮಾಡದೆ ಸುಮ್ಮನಿರುವುದನ್ನು ನೋಡಿ ಇವನು ಜಡಬುದ್ಧಿಯುಳ್ಳವನು ಎಂದು ಹೇಳುವುದು ಎಷ್ಟು ಅಪರಾಧವೆನಿಸುವುದೋ, ಕಲ್ಲು-ಮಣ್ಣುಗಳಿಗೆ ಜಡವೆನ್ನುವದಾದರೂ ಅಷ್ಟೇ ಅಪರಾಧವಾದುದ್ದು.  ಅವುಗಳಿಗೆ ತನ್ನ ಹಾಗೂ ಅನ್ಯದರ ತಿಳುವಳಿಕೆ ಇಲ್ಲವೆನ್ನುವುದಕ್ಕೆ ಏನು ಪ್ರಮಾಣ ? ನಾವು ಎಷ್ಟೇ ಮಲಿನತೆಯನ್ನು ಅವುಗಳ ಮೇಲೆ ಮಾಡಿದಾಗ, ಅವುಗಳನ್ನು ಕಡಿದಾಗ, ಕತ್ತರಿಸಿದಾಗ ನಮಗೆ ಪ್ರತೀಕಾರ ಮಾಡದ್ದರಿಂದ ಅವುಗಳನ್ನು ಜಡವೆನ್ನುವುದು ತಪ್ಪು.  ಯಾಕೆಂದರೆ ಅದು ಅವುಗಳ ಸಹನಶೀಲತೆಯ ಪರಾಕಾಷ್ಠೆ ಅವಸ್ಥೆಯಾಗಿದೆ.  ಅಂತೆಯೇ ಸರ್ವತ್ರ ಚೇತನವನ್ನು ಸಾಕ್ಷಾತ್ಕರಿಸಿಕೊಂಡ ಅನುಭವಿಗಳು ಸರ್ವಂ ಖಲ್ವಿದಂ ಬ್ರಹ್ಮ, ಯಾತ್ ಸಾಕ್ಷಾದಪರೋಕ್ಷಾದ್ಬ್ರಹ್ಮ ಎಂಬುದಾಗಿ ಸರ್ವವನ್ನೂ ಚೇತನವನ್ನಾಗಿ ಹೇಳಿದ್ದಾರೆ. 
    ಶ್ರೀ ಜಗದ್ಗುರು ರೇಣುಕ ಭಗವತ್ಪಾದರು -
        ಪತ್ರಶಾಖಾದಿ ರೂಪೇಣ ಯಥಾ ತಿಷ್ಠತಿ ಪಾದಪಃ |
        ತಥಾ ಭೂಮ್ಯಾದಿರೂಪೇಣ ಶಿವ ಏಕೋ ವಿರಾಜತೇ ||
                            (ಸಿ.ಶಿ.10 - 66)
    ಹೀಗೆ ಸಿದ್ಧಾಂತ ಶಿಖಾಮಣಿಯಲ್ಲಿ ಶಿವಜಗನ್ಮಯ ಸ್ಥಲದಲ್ಲಿ ಪೃಥಿವ್ಯಾದಿ ಪಂಚ ಮಹಾಭೂತಗಳನ್ನು ಪರಮಾತ್ಮನನ್ನಾಗಿಯೇ ಪ್ರತಿಪಾದಿಸಿದ್ದಾರೆ.  ಶ್ರೀ ಮಹಾತ್ಮ ಬಸವೇಶ್ವರರಾದರೂ -
        ಎತ್ತೆತ್ತ ನೋಡಿದಡತ್ತ ನೀನೇ ದೇವಾ !
        ಸಕಲ ವಿಸ್ತಾರದ ರೂಹು ನೀನೇ ದೇವ !
        ವಿಶ್ವತಶ್ಚಕ್ಷು ನೀನೇ ದೇವ !
        ವಿಶ್ವತೋಮುಖ ನೀನೇ ದೇವ !
        ವಿಶ್ವತೋಬಾಹು ನೀನೇ ದೇವ !
        ವಿಶ್ವತೋಪಾದ ನೀನೇ ದೇವ ಕೂಡಲಸಂಗಮದೇವ !
    ಈ ವಚನದಲ್ಲಿ ಸರ್ವತ್ರ ಚೇತನದ ಅಸ್ತಿತ್ವವನ್ನೇ ವ್ಯಕ್ತಪಡಿಸಿದ್ದಾರೆ.  ಜಗತ್ತಿನ ಕಣಕಣಗಳಲ್ಲೂ ಅಡಗಿರುವ ಚೇತನಶಕ್ತಿಯನ್ನು ಅನುಭವಿಸದಿರುವ ವ್ಯಕ್ತಿಯೇ ಜಡನಲ್ಲದೆ, ಕಲ್ಲು-ಮಣ್ಣುಗಳು ಜಡಗಳಲ್ಲ.  ಆದ್ದರಿಂದ ಅತ್ಯಂತ ಗೂಢ ಚೈತನ್ಯಂ ಜಡಮವ್ಯಕ್ತಮುಚ್ಯತೇ (ಸಿ.ಶಿ) ಅಂದರೆ ಅತ್ಯಂತ ಗೂಢವಾದ ಚೈತನ್ಯಕ್ಕೆ ಜನಗಳು 'ಜಡ'ವೆಂದು ಕರೆಯುತ್ತಾರೆ ಎಂಬುದಾಗಿ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಕಲ್ಲು-ಮಣ್ಣುಗಳಲ್ಲಿ ಗೂಢವಾದ ಚೈತನ್ಯದ ಅಸ್ತಿತ್ವವನ್ನು ಪ್ರತಿಪಾದಿಸಿದ್ದಾರೆ.
    ಹೀಗೆ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಒರೆಗಲ್ಲಿಗೆ ಹಚ್ಚಿ ನೋಡಿದಾಗ ಜಗವಿದೆಲ್ಲವೂ ಜಂಗಮವೇ ಅಥರ್ಾತ್ ಚೇತನವೇ ಆಗಿದೆ.
    ಶಿಲೆಗಳಲ್ಲಡಗಿದ ಈ ಸುಪ್ತಚೇತನದ ಮಹಿಮೆಯನ್ನು ಜಗತ್ತಿಗೆ ತಿಳಿಸುವುದಕ್ಕಾಗಿಯೇ-
        ಮಾಘಕೃಷ್ಣಚತುರ್ದಶ್ಯಾಮಾದಿದೇವೋ ಮಹಾನಿಶಿ |
        ಶಿವಲಿಂಗತಯೋದ್ಭೂತಃ ಸೂರ್ಯಕೋಟಿಸಮಪ್ರಭಃ ||
    ಎಂಬ ಪ್ರಮಾಣ ವಚನಾನುಸಾರವಾಗಿ ಮಹಾಶಿವರಾತ್ರಿಯ ದಿವಸ ಜ್ಯೋತಿಲರ್ಿಂಗಗಳ ರೂಪದಲ್ಲಿ ಪರಶಿವನು ಭೂಲೋಕದಲ್ಲಿ ಅವತರಿಸಿದ್ದಾನೆ.  ಇಂತಹ ಜ್ಯೋತಿಲರ್ಿಂಗಗಳಲ್ಲಿ ಶ್ರೀಜಗದ್ಗುರು ಪಂಚಾಚಾರ್ಯರು ಅವತರಿಸಿದರು.
    ಭಾರತದ ಅದಾವ ವ್ಯಕ್ತಿಯು ಈ ಲಿಂಗಗಳಿಗೆ ಜಡವೆಂಬುದಾಗಿಯೂ, ಕಲ್ಲೆಂಬುದಾಗಿಯೂ ಧೈರ್ಯವಾದ ಮನೋಭಾವನೆಯಿಂದ ಪ್ರತಿಪಾದಿಸಬಲ್ಲನು? ಒಂದು
ವೇಳೆ ಅಂಗಡಿ, ಮನೆಗಳನ್ನು ಕಟ್ಟುವ ಸಾಮಾನ್ಯ ಕಲ್ಲಿನಂತೆ ಇವು ಕೂಡ ಕಲ್ಲೇ ಆಗಿದ್ದರೆ ಅನಾದಿ ಕಾಲದಿಂದ ಇಂದಿನವರೆಗೆ ದೇಶವಿದೇಶಗಳಿಂದ ಲಕ್ಷಾಂತರ ತೀರ್ಥಯಾತ್ರಿಗಳು ಈ ಲಿಂಗಗಳ ದರ್ಶನಕ್ಕೆ ಅದೇಕೆ ಬರುತ್ತಿದ್ದರು? ಸಾಮಾನ್ಯವಾಗಿ ಮನುಷ್ಯನು ಸ್ವಾರ್ಥ ಪ್ರಾಣಿಯಾದ್ದರಿಂದ ತನ್ನ ಮನೋರಥ ಪೂರ್ಣವಾಗದಿದ್ದರೆ ಯಾವ ಪುಣ್ಯಕ್ಷೇತ್ರದ ಯಾತ್ರೆಯನ್ನೂ ಕೈಗೊಳ್ಳುವುದಿಲ್ಲ.  ಆದ್ದರಿಂದ ಲಕ್ಷಲಕ್ಷ ಜನರು ಯಾವ ಶಿವಲಿಂಗವನ್ನು ಪೂಜಿಸಿ ತಮ್ಮ ಮನೋರಥವನ್ನು ಪೂತರ್ಿಮಾಡಿಕೊಳ್ಳುತ್ತಿದ್ದಾರೆಯೋ ಆ ಜಡವನ್ನು ಬರೀ ಕಲ್ಲೆಂದು ಹೇಳುವ ನಿಜವಾದ ನಾಸ್ತಿಕನು ಭಾರತದಲ್ಲೇ ಇಲ್ಲವೆಂದು ಹೇಳಬೇಕಾಗುತ್ತದೆ.  ವಾದಕ್ಕೆ ಇಳಿದಾಗ ಕಲ್ಲೆಂದು ಸಾಧಿಸಿದ ಅದೆಷ್ಟೋ ಜನರು ಮನದಲ್ಲಿ ಭಯಪಟ್ಟು ದೇವರಲ್ಲಿ ಕ್ಷಮೆಯನ್ನು ಯಾಚಿಸದೆ ಇರಲಿಕ್ಕಿಲ್ಲ?
    ಇಂದು ಭಾರತದ ಶ್ರೀಮಂತ ದೇವರೆಂದು ಪ್ರಸಿದ್ಧನಾದ ಶ್ರೀ ಬಾಲಾಜಿ ಮೂತರ್ಿಯು ಕಲ್ಲಿನಲ್ಲಿ ಆಗಿದೆ.  ಒಂದು ವೇಳೆ ಅದು ಸಾಮಾನ್ಯವಾದ ಕಲ್ಲೇ ಆಗಿದ್ದರೆ ಅದರಲ್ಲಿ ಭಕ್ತರ ಮನೋರಥವನ್ನು ಪೂರ್ಣಮಾಡುವ ಸಾಮಥ್ರ್ಯವೆಲ್ಲಿಂದ ಬರುತ್ತಿತ್ತು?
    ಆದ್ದರಿಂದ ಭಾರತದ ವಿಭಿನ್ನ ಸ್ಥಾನಗಳಲ್ಲಿ ವೈಭವದಿಂದ ಪೂಜೆಗೊಳ್ಳುವ ಶೈವ-ವೈಷ್ಣವ ಮೂತರ್ಿಗಳಾಗಲೀ, ಪ್ರತಿಯೊಂದು ಊರಿನಲ್ಲಿ ಸ್ಥಾಪಿತಗೊಂಡಿರುವ ದೇವತಾ  ವಿಗ್ರಹಗಳಾಗಲೀ, ಗುರುವಿನ ಸಂಸ್ಕಾರದಿಂದ ಪ್ರಾಪ್ತವಾದ ವೀರಶೈವ ಇಷ್ಟಲಿಂಗವಾಗಲೀ ಸ್ಥೂಲನೋಟಕ್ಕೆ ಶಿಲೆಯಾಗಿ ಕಂಡರೂ ಅವುಗಳು ಶಿಲೆಗಳಲ್ಲ.  ಅಂತೆಯೇ ಸರ್ವಜ್ಞ ಕವಿಯು -
        ಗುರುವ ನರನೆಂದವಗೆ, ಹರನ ಶಿಲೆ ಎಂದವಗೆ
        ಕರಣ ಪ್ರಸಾದವನು ಎಂಜಲೆಂದವಗೆ
        ನರಕ ತಪ್ಪುವುದೆ ಸರ್ವಜ್ಞ?
    ಈ ವಚನದಲ್ಲಿ ಸುಸಂಸ್ಕೃತ ಶಿಲಾಮಯ ಶಿವಲಿಂಗ ಮಹತಿಯನ್ನು ಕೊಂಡಾಡಿದ್ದಾನೆ.  ವೀರ ವಿರಾಗಿಣಿಯಾದ ಅಕ್ಕಮಹಾದೇವಿಯು -
        ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ
        ಇಂಗಿತವನೇನೆಂದು ಬೆಸಗೊಂಬಿರಯ್ಯ?
        ಅವರ ನಡೆಯೇ ಆಗಮ, ಅವರ ನುಡಿಯೇ ವೇದ,
        ಅವರನು ಲೋಕದ ಮಾನವರೆಂದೆನ್ನಬಹುದೆ?
        ಅದೆಂತೆಂದೊಡೆ -
        ವೃಕ್ಷಾದ್ಭವಂತಿ ಬೀಜಾನಿ ತದ್ವೃಕ್ಷೇಲೀಯತೇ ಪುನಃ |
        ರುದ್ರಲೋಕಂ ಪರಿತ್ಯಜ್ಯ ಶಿವಲೋಕೇ ಭವಿಷ್ಯತಿ ||
        ಎಂಬುದಾಗಿ ಅಂಕೋಲೆಯ ಬೀಜದಿಂದಾಯ್ತು ವೃಕ್ಷವು
        ಆ ವೃಕ್ಷವು ಮರಳಿ ಬೀಜದೊಳಡಗಿತ್ತು  ಆ ಪ್ರಕಾರದಿಂ
        ಲಿಂಗದೊಳಗಿದ್ದ ಪುರಾತನರು ಆ ಲಿಂಗದೊಳಗೆ
        ಬೆರೆಸಿದರು ನೋಡಿರಯ್ಯ
        ಇಂತಪ್ಪ ಪುರಾತನರಿಗೆ ನಾನು ಶರಣೆಂದು
        ಹುಟ್ಟುಗೆಟ್ಟೆನಯ್ಯ ಚನ್ನಮಲ್ಲಿಕಾಜರ್ುನಾ|
    ಎಂಬ ಈ ವಚನದಲ್ಲಿ ಪುರಾತನರಾದ ಶ್ರೀ ಜಗದ್ಗುರು ಪಂಚಾಚಾರ್ಯರು ಲಿಂಗೋದ್ಭವರಾಗಿ ಉದಿಸಿ, ಪುನಃ ಲಿಂಗದೊಳಗೆ ಅಡಗಿದ ವಿಷಯವನ್ನು ಅಂಕೋಲೆಯ ಬೀಜ-ವೃಕ್ಷದ ದೃಷ್ಟಾಂತದಿಂದ ತಿಳಿಸಲು ಪ್ರಯತ್ನಪಟ್ಟಿದ್ದಾಳೆ.  ಅಂದರೆ ಬೀಜದಿಂದ ವೃಕ್ಷವು ಜನಿಸಿ ಪುನಃ ಆ ವೃಕ್ಷವು ಬೀಜದಲ್ಲಿಯೇ ಅಡಗುವಂತೆ ಆಚಾರ್ಯರು ಪರಮಾತ್ಮನ ಸ್ವರೂಪಗಳೇ ಆದ ಲಿಂಗಗಳಿಂದ ಉದಯಿಸಿ ಪುನಃ ಆ ಲಿಂಗಗಳಲ್ಲಿಯೇ ಅಡಗಿದ್ದಾರೆ ಎಂಬ ಮರ್ಮವನ್ನು ತಿಳಿಸಿ ಅವರು ನಡೆದದ್ದೇ ಆಗಮ, ಅವರು ನುಡಿದದ್ದೇ ವೇದವೆಂದು ಅವರ ಮಹಿಮೆಯನ್ನು ಕೊಂಡಾಡಿ, ಅಂತಹ ಪೂಜ್ಯರಿಗೆ ಶರಣಾಗಿ ನನ್ನ ಭವವನ್ನು ಕಳೆದುಕೊಂಡಿದ್ದೇನೆಂದು, ಅವರಿಗೆ ಶರಣಾಗುವುದರಿಂದ ಉಂಟಾದ ತನ್ನ ಜೀವನದ ಸಾಫಲ್ಯವನ್ನೂ ಹೇಳಿಕೊಂಡಿದ್ದಾಳೆ.  ಇದೇ ಪ್ರಕಾರ ಅನಾದಿ ತೋಂಟದ ಸಿದ್ಧಲಿಂಗೇಶ್ವರರು-
        ಆದಿಯಲ್ಲಿ ಶಿವತತ್ತ್ವದಲ್ಲಿ ರೇಣುಕನುದಯವಾಗಿದ್ದರೆ
        ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೊ?
        ಆ ಶಿವನಲ್ಲಿಯೇ ಹುಟ್ಟಿ ಶಿವನಲ್ಲಿಯೇ ಲಯವಾದ
        ರೇವಣಸಿದ್ಧೇಶ್ವರನು ಅನಾದಿಮುಕ್ತನಲ್ಲ
        ಅವಾಂತರ ಮುಕ್ತನೆಂಬ ಅಜ್ಞಾನಿಗಳಿಗೆ
        ನಾಯಕ ನರಕ ತಪ್ಪದು        (ಷ.ಜ್ಞಾ.ಸಾ)
ಈ ತಮ್ಮ ವಚನದಲ್ಲಿಯೂ ಆಚಾರ್ಯರ ಲಿಂಗೋದ್ಭವವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. 
    ಇದೂ ಅಲ್ಲದೆ ಸುಪ್ರಭೇದಾಗಮ, ಸ್ವಯಂಭುವಾಗಮ, ವೀರಲೈಂಗೋಪನಿಷತ್ ಮುಂತಾದ ಆಗಮೋಪನಿಷತ್ತುಗಳಲ್ಲಿಯೂ ಶ್ರೀ ಜಗದ್ಗುರು ಪಂಚಾಚಾರ್ಯರ ಲಿಂಗೋದ್ಭವತ್ವವು ಪ್ರತಿಪಾದಿಸಲ್ಪಟ್ಟಿರುವುದರಿಂದ ಈ ವಿಷಯವು ಕೇವಲ ಕಾಲ್ಪನಿಕವಾಗಿರದೇ ಶಾಸ್ತ್ರೀಯವೂ, ವೈಜ್ಞಾನಿಕವೂ ಮತ್ತು ಯೌಗಿಕವೂ ಆಗಿದೆ.
    ಸಾಮಾನ್ಯ ಜನರಿಗೆ ಅಸಾಧ್ಯವಾಗಿ ತೋರಿದ ಮಾತ್ರದಿಂದ ಅದನ್ನು ಸಂಪೂರ್ಣವಾಗಿ  ಅಪಲಾಪ ಮಾಡುವುದು ಸರಿಯಲ್ಲ.  ಯಾನೇಗುಂದಿಯ ಮಾಣಿಕಮ್ಮನವರು ಅನ್ನ-ನೀರುಗಳಿಲ್ಲದೆ ಅನೇಕ ದಿನಗಳಿಂದ ಜೀವಿಸುತ್ತಿರುವುದನ್ನು ಇಂದು ನಾವೆಲ್ಲ ನೋಡುತ್ತಿದ್ದೇವೆ.  ಉತ್ತರ ಭಾರತದ ಅನೇಕ ಭಾಗಗಳಲ್ಲಿ ಕೆಲವು ಜನ ಸನ್ಯಾಸಿಗಳು ಭೂಮಿಯಲ್ಲಿ ತಗ್ಗು ತೋಡಿಸಿ ಒಳಗೆ ತಾವು ಕುಳಿತು, ಮೇಲೆ ಮಣ್ಣು ಮುಚ್ಚಿಸಿ ಒಂದು ಸಪ್ತಾಹ, ಒಂದು ಪಕ್ಷ, ಮಾಸ ಪರ್ಯಂತವಾಗಿ ಒಳಗೇ ಇದ್ದು ನಂತರ ನಿದರ್ಿಷ್ಟಪಡಿಸಿದ ದಿನದಂದು ಮಣ್ಣು ತೆಗೆದಾಗ ಅವರು ಪುನಃ ಮೊದಲಿನಂತೆಯೇ ಜೀವಿತ ವ್ಯವಹಾರವನ್ನು ಮಾಡುತ್ತಿದ್ದಾರೆ.  ಈ ರೀತಿಯಾಗಿ ಎಲ್ಲರಿಗೂ ಬದುಕಲು ಬರುವುದಿಲ್ಲವೆಂದ ಮಾತ್ರಕ್ಕೆ ಅವುಗಳನ್ನು ಹೇಗೆ ಅಲ್ಲಗಳೆಯಲು ಬರುವುದಿಲ್ಲವೋ ಅದರಂತೆ ಶ್ರೀ ಜಗದ್ಗುರು ಪಂಚಾಚಾರ್ಯರ ಲಿಂಗಾವತಾರ ಲೀಲೆಯನ್ನು ಅಲ್ಲಗಳೆಯುವುದು ಅಸಂಬದ್ಧವೆನಿಸುವುದು.
    ತತೋಣಿಮಾದಿ ಪ್ರಾದುಭರ್ಾವಃ ಕಾಯಸಂಪತ್ ತದ್ಧಮರ್ಾನಭಿಘಾತಶ್ಚ
(ಯೋ.ಸೂ.3/45) ಎಂಬ ಪತಂಜಲಿ ಮಹಷರ್ಿಗಳ ಯೋಗಸೂತ್ರದಲ್ಲಿ ಹಾಗೂ ಅದರ ಯಥಾ ಪರಮಾಣುತ್ವಂ ಪ್ರಾಪ್ತೋ ವಜ್ರಾದೀನಾಮಪ್ಯಂತಃ ಪ್ರವಿಶತಿ ಈ ಭೋಜವೃತ್ತಿಯಲ್ಲಿ ಯೋಗಸಿದ್ಧಿಯಿಂದ ಪಂಚಮಹಾಭೂತಗಳನ್ನು ವಶಪಡಿಸಿಕೊಂಡ ಯೋಗಿಗೆ ಅಣಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ ಮತ್ತು ವಶತ್ವಗಳೆಂಬ ಅಷ್ಟಸಿದ್ಧಿಗಳು ಲಭಿಸುತ್ತವೆ.  ಈ ಯೋಗಸಿದ್ಧನು ಪರಮಾಣುವಿನಂತೆ ಸೂಕ್ಷ್ಮಾಕಾರವನ್ನಾಗಲೀ, ಆಕಾಶದಂತೆ ವಿಭುರೂಪವನ್ನಾಗಲೀ, ಅರಳಿಯಂತೆ ಲಘುರೂಪವನ್ನಾಗಲೀ ಮತ್ತು ಪರ್ವತದಂತೆ ಬೃಹದ್ರೂಪವನ್ನಾಗಲೀ ಹೊಂದಬಲ್ಲನು.  ಈ ಯೋಗಿಯು ಯಾವ ಯಾವ ಸಂಕಲ್ಪವನ್ನು ಮಾಡುವನೋ ಅದೆಲ್ಲವೂ ಸುಲಭವಾಗಿ ಈಡೇರುವುದು.  ಸಕಲ ಪ್ರಾಣಿಗಳೂ ಅವನಿಗೆ ವಶವಾಗುವವು.  ಸ್ವೇಚ್ಛಾಸಂಕಲ್ಪದಿಂದ ಶರೀರವನ್ನು ಧರಿಸಿದ ಯೋಗಿಯು ಸರ್ವಸ್ವತಂತ್ರನಾಗಿ ಪರಮಾಣುವಿನಂತೆ ಸೂಕ್ಷ್ಮಾಕಾರವನ್ನು ಹೊಂದಿ ಅತ್ಯಂತ ಕಠಿಣವಾದ ವಜ್ರಾದಿಗಳೊಳಗೆ ಪ್ರವೇಶಿಸಬಲ್ಲನು ಎಂಬುದಾಗಿ ಪ್ರತಿಪಾದಿಸಲ್ಪಟ್ಟಿದೆ.
    ಯೋಗದ ಸಾಮಥ್ರ್ಯದಿಂದ ಶ್ರೀಸಾಮಾನ್ಯರಿಗೆ ಅಸಾಧ್ಯವಾಗಿ ತೋರುವ ಕಾರ್ಯಗಳು ಯೋಗಿಗಳಿಗೆ ಸಹಜವಾಗಿ ನೆರವೇರುತ್ತವೆ.  ಕಾಶಿಯಲ್ಲಿ ವಿಶುದ್ಧಾನಂದರೆಂಬ ಯೋಗಿಗಳು ಇದೇ 20ನೇ ಶತಮಾನದಲ್ಲಿ ಆಗಿಹೋಗಿದ್ದಾರೆ.  ಇವರು ಅಸಾಧಾರಣ ಯೋಗಸಾಮಥ್ರ್ಯವನ್ನು ಹೊಂದಿದವರಾಗಿದ್ದರು.  ಕಾಶಿಯ ಮೂರ್ಧನ್ಯ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಗೋಪೀನಾಥ ಕವಿರಾಜರು ಶ್ರೀ ವಿರುದ್ಧಾನಂದರ ಪರಮ ಶಿಷ್ಯರಾಗಿದ್ದರು.  ಗೋಪೀನಾಥ ಕವಿರಾಜರು ಗುರುಗಳ ದರ್ಶನಕ್ಕೆ ಹೋದಾಗ ವಿಶುದ್ಧಾನಂದರು ಜಾತ್ಯಂತರ ಪರಿಣಾಮ ಅಂದರೆ ಯೋಗ ಸಾಮಥ್ರ್ಯದಿಂದ ಒಂದು ಜಾತಿಯ ವಸ್ತುವನ್ನು ಬೇರೊಂದು ಜಾತಿಗೆ ಪರಿವತರ್ಿಸಬಹುದು ಎಂಬ ಯೋಗಶಾಸ್ತ್ರದ ಮಹಿಮೆಯ ಬಗ್ಗೆ ಉಪನ್ಯಾಸ ಮಾಡುತ್ತಿದ್ದರು. ಆಗ ತಾಕರ್ಿಕ ಬುದ್ಧಿಯ ಗೋಪೀನಾಥ ಕವಿರಾಜರು, ಅದು ಹೇಗೆ ಸಾಧ್ಯ? ಎಂಬುದಾಗಿ ಪ್ರಶ್ನೆ ಮಾಡಲು, ಶ್ರೀ ವಿಶುದ್ಧಾನಂದರು ತಮ್ಮ ಕೈಯಲ್ಲಿಯ ಗುಲಾಬಿ ಹೂವನ್ನು ತಕ್ಷಣವೇ ಗೋಪೀನಾಥರ ಅಪೇಕ್ಷೆಯಂತೆ ಕೆಂಪು ದಾಸವಾಳ ಹೂವನ್ನಾಗಿ ಪರಿವತರ್ಿಸಿ ತೋರಿಸಿದರಂತೆ.  ಈ ವಿಷಯವನ್ನು ಶ್ರೀ ಗೋಪೀನಾಥ ಕವಿರಾಜರು ಗೋರಖಪುರದಿಂದ ಹೊರಡುವ ಕಲ್ಯಾಣ ಮಾಸಪತ್ರಿಕೆಯ ಯೋಗಾಂತದ 748ನೇ ಪುಟದಲ್ಲಿ ಸೂರ್ಯವಿಜ್ಞಾನ ಎಂಬ ತಮ್ಮ ಲೇಖನದಲ್ಲಿ ಪ್ರಕಟಪಡಿಸಿದ್ದಾರೆ.
    ಇದೂ ಅಲ್ಲದೆ ಕಾಶಿಯಲ್ಲಿ ತೈಲಂಗ ಸ್ವಾಮಿಗಳೆಂಬ ಮಹಾಯೋಗಿಗಳು ಆಗಿಹೋಗಿದ್ದಾರೆ.  ಅವರು ಕ್ರಿ.ಶ. 1607ರಲ್ಲಿ ಜನಿಸಿ, 1887ರಲ್ಲಿ ಬ್ರಹ್ಮಲೀನರಾಗಿದ್ದಾರೆ.  ಇವರು ಆಂಧ್ರಪ್ರದೇಶದವರು.  ತಮ್ಮ ತಾಯಿಯ ಶ್ರಾದ್ಧ ಮಾಡಲು ಕಾಶಿಗೆ ಬಂದ ಇವರು ವೈರಾಗ್ಯದ ಆವೇಶದಲ್ಲಿ ಪುನಃ ಊರಿಗೆ ಹೋಗದೆ ಕಾಶಿಯಲ್ಲಿಯೇ ಉಳಿದು ಮೌನದಿಂದ ಯೋಗಸಾಧನೆಯನ್ನು ಪ್ರಾರಂಭಿಸಿದರು.  ಇವರು ಆಂಧ್ರಪ್ರದೇಶದವರಾದ್ದರಿಂದ ಇವರಿಗೆ ತೈಲಂಗ ಸ್ವಾಮಿ ಎಂದು ಜನರು ಕರೆಯತೊಡಗಿದರು.  ಬಾಲಬ್ರಹ್ಮಚಾರಿಗಳಾದ ಇವರು ದಿಗಂಬರರಾಗಿಯೇ ಇರುತ್ತಿದ್ದರು.  ಇವರ ಜೀವನದಲ್ಲಿ ಅನೇಕ ಚಮತ್ಕಾರಿಕ ಘಟನೆಗಳು ನಡೆದುಹೋಗಿವೆ.  ಇವರು ದಿಗಂಬರರಾಗಿ ತಿರುಗುವುದನ್ನು ನೋಡಿ ಒಬ್ಬ ಬ್ರಿಟಿಷ್ ಅಧಿಕಾರಿಯು ಇವರನ್ನು ಜೈಲಿನಲ್ಲಿ ಹಾಕಿ ಬೀಗ ಹಾಕಿಸಿದನಂತೆ.  ಪ್ರಾತಃಕಾಲ ನೋಡಿದರೆ ಜೈಲಿಗೆ ಬೀಗ ಹಾಕಿದಂತೆಯೇ ಇದೆ.  ಆದರೆ ಸ್ವಾಮಿಗಳು ಆ ಜೈಲಿನ ಮುಂಭಾಗದಲ್ಲಿ ದಿಗಂಬರರಾಗಿಯೇ ತಿರುಗುತ್ತಿದ್ದಾರೆ.  ಆಗ ಆಂಗ್ಲ ಅಧಿಕಾರಿಯು, ನೀನು ಹೊರಗೆ ಹೇಗೆ ಬಂದೆ? ಎಂದು ಆಶ್ಚರ್ಯಚಕಿತನಾಗಿ ಕೇಳಲು ಕೋಣೆಯಲ್ಲಿ ಹಾಕಿ ಬೀಗ ಹಾಕಿದ ಮಾತ್ರಕ್ಕೆ ಆ ಜೀವಿಯನ್ನು ಬಂಧಿಸಿದಂತಾಗುವುದಿಲ್ಲ.  ಹಾಗಾದರೆ ಮನೆಯಲ್ಲಿ ಭದ್ರವಾಗಿ ಬಾಗಿಲು ಮುಚ್ಚಿಕೊಂಡು ಕುಳಿತ ಮಾತ್ರದಿಂದ ಮನುಷ್ಯನು ಮೃತ್ಯವಿನ ದವಡೆಯಿಂದ ತಪ್ಪಿಸಿಕೊಳ್ಳಬಹುದಾಗಿತ್ತು ಎಂಬುದಾಗಿ ಉತ್ತರ ಕೊಟ್ಟರಂತೆ.  ಆಗ ಇವರ ಮಹಿಮೆಯನ್ನರಿತ ಅಧಿಕಾರಿಯು ಇವರಿಗೆ ಯಾವ ತೊಂದರೆಯನ್ನೂ ಮಾಡದೆ ಅವರು ಇಚ್ಛೆಬಂದಂತೆ ಇರಲು ಸಮ್ಮತಿಸಿದನೆಂಬ ವಿಷಯವನ್ನು ಕಾಶಿಯ ಸುಪ್ರಸಿದ್ಧ ಹಿಂದೂ ದಿನಪತ್ರಿಕೆಯಾದ ಆಜ್ದಲ್ಲಿ ದಿನಾಂಕ 28-1-1983ರಲ್ಲಿ ಶ್ರೀ ರಾಜೇಂದ್ರ ಪ್ರಸಾದ ಪಾಂಡೇಯ ಎಂಬುವವರು ಪ್ರಕಟಪಡಿಸಿದ್ದಾರೆ.  ಇದೇ ವಿಷಯವನ್ನು ಇನ್ನೂ ಅನೇಕ ಮಹನೀಯರು ಪ್ರಸಂಗಾನುಸಾರವಾಗಿ ಉಲ್ಲೇಖ ಮಾಡಿದ್ದಾರೆ.  ಇಂದಿಗೆ ಒಂದು ನೂರು ವರ್ಷದ ಹಿಂದೆ ಸುಮಾರು 280 ವರ್ಷಗಳ ವರೆಗೆ ಬದುಕಿ ಅನಂತ ಲೀಲೆಗಳನ್ನು ಮಾಡಿದ ಇವರ ಸಮಾಧಿಯು ಕಾಶಿಯ ಪಂಚಗಂಗಾ ಘಾಟಿನಲ್ಲಿ ಇದೆ.  ಕಾಶಿಯಲ್ಲಿ ಇವರ ಬಗ್ಗೆ ಸರ್ವರಲ್ಲಿಯೂ ಪೂಜ್ಯ ಭಾವನೆಯಿದೆ.
    ಇದೂ ಅಲ್ಲದೆ ಮೊನ್ನೆ ಮೊನ್ನೆ ಲಿಂಗೈಕ್ಯರಾದ ಅಲ್ಲಿಪುರ ತಾತನವರು ಸುಮಾರು ಎರಡು ನೂರು ವರ್ಷಕ್ಕೂ ಮೀರಿ ಆಯುಷ್ಯವಂತರಾಗಿ ಜನಸಾಮಾನ್ಯರ ಬಯಕೆಗಳನ್ನು ಪೂರ್ಣ ಮಾಡುತ್ತಿದ್ದರೆಂಬ ವಿಷಯವು ಬಳ್ಳಾರಿ ಜಿಲ್ಲೆಯಲ್ಲಿ ಪ್ರಖ್ಯಾತವಿದೆ.  ಪೂಜ್ಯ ಅಲ್ಲಿಪುರ ತಾತನವರು ಮೈಸೂರು ಜಿಲ್ಲಾ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ (4ಕಿ.ಮೀ.) ಪವಿತ್ರ ನದಿಗಳ ಸಂಗಮ ಸ್ಥಳದಲ್ಲಿ ಆಶ್ರಮವನ್ನು ನಿಮರ್ಿಸಿಕೊಂಡು ವಾಸವಾಗಿದ್ದರು.  ಅದೇ ಸ್ಥಳದಲ್ಲಿ ಲಿಂಗೈಕ್ಯರಾದರು.
    ಯೋಗವನ್ನು ಸಾಧಿಸಿ ಸಿದ್ಧಿಯನ್ನು ಸಂಪಾದಿಸಿಕೊಂಡ ಪರಶಿವನ ಅಪರಾವತಾರಿಗಳೂ ಆದ ಶ್ರೀ ಜಗದ್ಗುರು ಪಂಚಾಚಾರ್ಯರು ಲಿಂಗೋದ್ಭವರಾಗಿರುವುದು ಅಸಂಭವ ಘಟನೆಯೇನಲ್ಲ.  ವಿಜ್ಞಾನಯುಗವಾದ ಇಂದು ಪ್ರಣಾಳಿಕಾ ಶಿಶುಗಳು ತಯಾರಾಗುತ್ತಲಿವೆ.  ಇದು ಆಶ್ಚರ್ಯಕರವಾದರೂ ಅಸಂಭವವಾದದ್ದಲ್ಲವೆಂಬುದನ್ನು ವಿಜ್ಞಾನ ಸಾಧಿಸಿ ತೋರಿಸುತ್ತಿದೆ.  ಅವರಂತೆ ಶ್ರೀ ಜಗದ್ಗುರು ಪಂಚಾಚಾರ್ಯರು ಲಿಂಗೋದ್ಭವರಾದದ್ದು ಇಂದು ಆಶ್ಚರ್ಯವಾಗಿ ತೋರಿದರೂ ಅಂದು ಅವರಿಗೆ ಅಸಂಭವದ ಮಾತಾಗಿರಲಿಲ್ಲ.
    ನಮ್ಮ ದೇಶದ ಯೋಗ-ತಂತ್ರ-ಜ್ಯೋತಿಷ್ಯ ಮುಂತಾದ ರಹಸ್ಯ ವಿದ್ಯೆಗಳು ಇಂದು ಗುಪ್ತವಾಗುತ್ತಾ ನಡೆದಿರುವುದರಿಂದ ಪಾಮರರಾದ ಜನಸಾಮಾನ್ಯರಿಗೆ ಮಹಾಪುರುಷರ ದಿವ್ಯಚರಿತ್ರೆಗಳನ್ನು ತಿಳಿದುಕೊಳ್ಳುವುದು ಕಷ್ಟಸಾಧ್ಯವಾಗಿದೆ.  ಅಂತೆಯೇ ಲೋಕೋತ್ತರಾಣಾಂ ಚರಿತಂ ಕೋ ಹಿ ವಿಜ್ಞಾತುಮರ್ಹತಿ ಎಂದಿದ್ದಾರೆ ಅನುಭವಿಕರು.
    ಚತುಯರ್ುಗಗಳಲ್ಲಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಭಿನ್ನಭಿನ್ನ ಹೆಸರುಗಳಿಂದ ಸೋಮೇಶ್ವರಾದಿ ಶಿವಲಿಂಗಗಳಿಂದ ಅವತರಿಸಿ ಭೂಲೋಕದಲ್ಲಿ ವೀರಶೈವ ಮತವನ್ನು ಸಂಸ್ಥಾಪಿಸಿದರೆಂದು ಶಿವಾಗಮಗಳು ಪ್ರತಿಪಾದಿಸಿರುವುದರಿಂದ, ಇಂದಿಗೂ ಪ್ರತಿಯೊಂದು ಶುಭಕಾರ್ಯದಲ್ಲಿ ಪಂಚಾಚಾರ್ಯರ ಪ್ರತೀಕವಾಗಿ ಪಂಚಕಲಶಗಳನ್ನು ಸ್ಥಾಪಿಸಿ ಅವುಗಳಲ್ಲಿ ಪಂಚಾಚಾರ್ಯರನ್ನು ಆಹ್ವಾನಿಸಿ ಪೂಜಿಸುತ್ತಿರುವುದು ಶಾಸ್ತ್ರಸಮ್ಮತವಾದದ್ದೆಂದು ಸಕಲರೂ ಅಭಿಪ್ರಾಯ ತಾಳಿದ್ದಾರೆ. 
    ವೀರಶೈವ ಧರ್ಮ ಪ್ರಚಾರಕರು ಶ್ರೀ ಬಸವೇಶ್ವರರು
    ಐತಿಹಾಸಿಕ ಪ್ರಜ್ಞಾಶೂನ್ಯರೂ ಪಕ್ಷಪಾತಿಗಳೂ ಆದ ಕೆಲಜನರು ಕ್ರಿ.ಶ.12ನೇ ಶತಮಾನದಲ್ಲಿ ಬಿಜ್ಜಳ ಮಹಾರಾಜನ ಪ್ರಧಾನ ಮಂತ್ರಿಯಾಗಿದ್ದ ಶ್ರೀ ಬಸವೇಶ್ವರರೇ ವೀರಶೈವ ಮತವನ್ನು ಸಂಸ್ಥಾಪಿಸಿದ್ದಾರೆಂಬ ದುವರ್ಾದವನ್ನು ಮಾಡುತ್ತಿರುತ್ತಾರೆ.  ಇವರ ಈ ವಾದವು ಮುಗ್ಧಜನರನ್ನು  ಮೋಸಗೊಳಿಸುವುದಾಗಿದೆ.
    ಬಿಜಾಪುರ ಜಿಲ್ಲೆಯ ಬಾಗೇವಾಡಿ ನಿವಾಸಿಗಳಾದ ಮಾದರಸ ಮತ್ತು ಮಾದಲಾಂಬಿಕೆ ಎಂಬ ಹೆಸರಿನ ಬ್ರಾಹ್ಮಣ ದಂಪತಿಗಳ ಉದರದಲ್ಲಿ ಶ್ರೀ ಬಸವೇಶ್ವರರ ಜನ್ಮವಾಯಿತು.  ಬಾಲಕನು ಎಂಟು ವರ್ಷದವನಾದಾಗ ತಂದೆ-ತಾಯಿಗಳು ಬ್ರಾಹ್ಮಣ ಧಮರ್ೋಚಿತವಾದ  ಉಪನಯನ ಸಂಸ್ಕಾರವನ್ನು ಮಾಡಲುದ್ಯುಕ್ತರಾದಾಗ ಬಾಲಕ ಬಸವೇಶ್ವರನು ಅದನ್ನು ತಿರಸ್ಕರಿಸಿ ಕೂಡಲ ಸಂಗಮ ಕ್ಷೇತ್ರಕ್ಕೆ ಬಂದು ಆ ಕ್ಷೇತ್ರದ ಪ್ರಸಿದ್ಧ ವೀರಶೈವ ಆಚಾರ್ಯರಾದ  ಸಾರಂಗ ಹಿರೇಮಠದ ಶ್ರೀ ಜಾತವೇದಮುನಿ ಶಿವಾಚಾರ್ಯರಿಂದ ವೀರಶೈವ ಧಮರ್ೋಚಿತ  ಇಷ್ಟಲಿಂಗ ದೀಕ್ಷೆಯನ್ನು ಪಡೆದನೆಂಬ ಇತಿಹಾಸವಿದೆ.  ಇದರಿಂದ ಶ್ರೀ ಬಸವೇಶ್ವರರಿಗಿಂತಲೂ ಪೂರ್ವದಲ್ಲಿಯೇ ವೀರಶೈವ ಧರ್ಮ ಹಾಗೂ ಅದರ ಆಚಾರ್ಯರು (ಗುರುಗಳು) ಇದ್ದರೆಂಬುದು ಸ್ಪಷ್ಟವಾಗುತ್ತದೆ.
    ಆದರೆ ವೀರಶೈವ ಧರ್ಮದಲ್ಲಿ ದೀಕ್ಷೆಯನ್ನು ಹೊಂದಿದ ಶ್ರೀ ಬಸವೇಶ್ವರರು ಹನ್ನೆರಡನೆಯ ಶತಮಾನದಲ್ಲಿ ಬಹಳಷ್ಟು ಪ್ರಚಾರವನ್ನು ಮಾಡಿದ್ದಾರೆ.  ಈ ವಿಷಯವನ್ನು ನಿವರ್ಿವಾದವಾಗಿ ಎಲ್ಲರೂ ಒಪ್ಪಿಕೊಳ್ಳಬೇಕಾಗುವುದು.  ಈ ವಿಷಯವಾಗಿ ಅನೇಕ ಜನ ವಿದ್ವಾಂಸರು ತಮ್ಮ ಸ್ಪಷ್ಟವಾದ ನಿರ್ಣಯವನ್ನು ಕೊಟ್ಟಿದ್ದಾರೆ.  ಈ ವಿಷಯದಲ್ಲಿ ಡಾ| ಎಸ್.ಸಿ ನಂದೀಮಠರ ನಿರ್ಣಯವೇನೆಂದರೆ - ಖಿಜ ಜಚಿಡಿಞಟಿಜ ಣಡಿಡಿಠಣಟಿಜಟಿರ ಣಜ ಜಚಿಡಿಟಥಿ ಣಠಡಿಥಿ ಠಜಿ ಣಜ ಜಛಿಣ ಚಿ ಟಜಜ ಚಿಟಟಠಣ ಚಿಟಟ ಛಿಠಟಚಿಡಿ (ಆಡಿ. ಃಚಿಟಿಜಚಿಡಿಞಚಿಡಿ ಜಥಛಿಜಠಿಣಜಜ) ಣಠ ಛಿಠಟಿಛಿಟಣಜಜ ಣಚಿಣ ಣ ತಿಚಿ ಜಿಠಣಟಿಜಜಜ ಛಥಿ ಃಚಿಚಿತಚಿ, ಣಜ ಟಟಿಣಜಡಿ ಠಜಿ ಏಚಿಟಚಿಛಿಣಡಿ  ಏಟಿರ ಃರಿರಿಟಚಿ (1162-1167 ಂ.ಆ.) . ಊಠತಿಜತಜಡಿ, ಣ  ಜಿಚಿಡಿ ಜಿಡಿಠಟ ಣಜ ಣಡಿಣಣ, ಜಿಠಡಿ ಟಿಠಟಿಜ ಠಜಿ ಣಜ ಛಠಠಞ ಠಟಿ  ಗಿಡಿಚಿಚಿತಟ, ಜಣಜಡಿ ಟಿ ಏಚಿಟಿಟಿಚಿಜಚಿ ಠಡಿ ಟಿ ಖಚಿಟಿಞಡಿಣ ಚಿಛಿಡಿಛಜ ಣಜ ಜಿಠಣಟಿಜಚಿಣಠಟಿ ಠಜಿ ಣಜ ಜಛಿಣ ಣಠ ಃಚಿಚಿತಚಿ.
                (ಂ ಊಚಿಟಿಜಛಠಠಞ ಠಜಿ ಗಿಡಿಚಿಚಿತಟ, ಠಿ-2) 
    ಡಾ| ಭಂಡಾರ್ಕರ್ರನ್ನು ಬಿಟ್ಟು ಉಳಿದೆಲ್ಲ ಸಂಶೋಧಕರ ಬುದ್ಧಿಗೆ ಶ್ರೀ ಬಸವೇಶ್ವರರೇ ವೀರಶೈವ ಧರ್ಮಸಂಸ್ಥಾಪಕರೆಂಬ ಅಂಧಕಾರವು ಮುಸುಕಿಕೊಂಡಿದೆ.  ವೀರಶೈವ ಧರ್ಮದ ಯಾವುದೇ ಕನ್ನಡ ಅಥವಾ ಸಂಸ್ಕೃತ ಪುಸ್ತಕದಲ್ಲಿ ಶ್ರೀ ಬಸವೇಶ್ವರರೇ ಧರ್ಮಸಂಸ್ಥಾಪಕರೆಂಬ ಉಲ್ಲೇಖವಿರುವುದಿಲ್ಲ.  ಆದ್ದರಿಂದ ಶ್ರೀ ಬಸವೇಶ್ವರರು ಧರ್ಮಸಂಸ್ಥಾಪಕರಾಗಲಾರರು. 
    ಇನ್ನು ಶ್ರೀ ಕೆ. ಎ. ನೀಲಕಂಠಶಾಸ್ತ್ರಿಗಳ ಅಭಿಪ್ರಾಯವೇನೆಂದರೆ -
    ಐಟಿರಚಿಥಿಚಿಣ ಣಡಿಚಿಜಣಠಟಿ ಚಿತಜಡಿ ಣಚಿಣ ಣಜ ಜಛಿಣ  ತಜಡಿಥಿ ಠಟಜ ಚಿಟಿಜ ತಿಚಿ ಜಿಠಣಟಿಜಜಜ ಛಥಿ ಜಿತಜ ಚಿಛಿಜಣಛಿ - ಇಞಠಡಿಚಿಟಚಿ, ಕಚಿಟಿಜಣಚಿಡಿಚಿಜಥಿಚಿ, ಖಜತಚಿಟಿಚಿ, ಒಚಿಡಿಣಟಚಿ ಚಿಟಿಜ ಗಿತಿಚಿಡಿಚಿಜಥಿಚಿ ತಿಠ ತಿಜಡಿಜ ಜಟಜ ಣಠ ಚಿತಜ ಠಿಡಿಣಟಿರ ಜಿಡಿಠಟ ಣಜ ಜಿತಜ ಜಚಿಜ ಠಜಿ ತಚಿ.  ಃಚಿಚಿತಚಿ, ಣಜಥಿ ಚಿಥಿ, ತಿಚಿ ಛಣಣ ಣಜ ಡಿಜತತಜಡಿ ಠಜಿ ಣಜ ಈಚಿಣ.
                (ಂ ಊಣಠಡಿಥಿ ಠಜಿ ಖಠಣಣ ಟಿಜಚಿ ಠಿ. 435)
    ಲಿಂಗಾಯತ ಧರ್ಮವು ಅತ್ಯಂತ ಪ್ರಾಚೀನವಾದುದು. ಶಿವನ ಪಂಚಮುಖಗಳಿಂದ ಆವಿರ್ಭವಿಸಿದ ಏಕೋರಾಮ, ಪಂಡಿತಾರಾಧ್ಯ, ರೇವಣ, ಮರುಳ ಮತ್ತು ವಿಶ್ವಾರಾಧ್ಯರೆಂಬ ಹೆಸರಿನ ಪಂಚಾಚಾರ್ಯರು ಈ ಧರ್ಮವನ್ನು ಸ್ಥಾಪಿಸಿದ್ದಾರೆ.  ಇದರ ಅನುಸಾರವಾಗಿ ಬಸವೇಶ್ವರರು ಈ ಧರ್ಮದ ಜೀಣರ್ೋದ್ಧಾರಕರಾಗಿದ್ದಾರೆ.
    ಪಾಶ್ಚಾತ್ಯ ವಿದ್ವಾಂಸರಾದ ಡಾ| ಜೆ.ಎನ್. ಫಕ್ಯರ್ೂಹರ್ ಮಹೋದಯರ ಅಭಿಪ್ರಾಯವೇನೆಂದರೆ
    ಖಿಜ ಣಡಿಚಿಜಣಠಟಿ  ಣಚಿಣ ಣಜ ಜಛಿಣ ತಿಚಿ ಜಿಠಣಟಿಜಜಜ ಛಥಿ ಜಿತಜ ಚಿಛಿಜಣಛಿ- ಇಞಠಡಿಚಿಟಚಿ, ಕಚಿಟಿಜಣಚಿಡಿಚಿಜಥಿಚಿ, ಖಜತಚಿಟಿಚಿ, ಒಚಿಡಿಣಟಚಿ, ಗಿತಿಚಿಡಿಜಥಿಚಿ ತಿಠ ಚಿಡಿಜ ಜಟಜ ಣಠ ಚಿತಜ ಖಠಿಡಿಣಟಿರ ಜಿಡಿಠಟ ಣಜ ಜಿತಜ ಜಚಿಜ ಠಜಿ ಖತಚಿ, ಟಿಛಿಚಿಡಿಟಿಚಿಣಛಿ ಚಿರಜ ಚಿಜಿಣಜಡಿ ಚಿರಜ.  ಖಿಜಜ ಚಿಡಿಜ ಡಿಜರಚಿಡಿಜಜಜ ಚಿ ತಜಡಿಥಿ ಚಿಟಿಛಿಜಟಿಣ ಚಿಟಿಜ ಃಚಿಚಿತಚಿ  ಚಿಜ ಣಠ ಚಿತಜ ಛಜಜಟಿ ಛಣಣ ಣಜ ಡಿಜತತಜಡಿ ಠಜಿ ಣಜ ಜಿಚಿಣ.
    (ಂಟಿ ಠಣಣಟಟಿಜ ಠಜಿ ಣಜ ಡಿಜಟರಠಣ ಟಣಜಡಿಚಿಣಣಡಿಜ ಠಜಿ ಟಿಜಚಿ, ಕ. 260)
    ಪ್ರತಿಯೊಂದು ಯುಗದಲ್ಲಿ ಪರಮಾತ್ಮನ ಪಂಚಮುಖಗಳಿಂದ ಆವಿರ್ಭವಿಸಿದ ಏಕೋರಾಮ, ಪಂಡಿತಾರಾಧ್ಯ, ರೇವಣ, ಮರುಳ ಮತ್ತು ವಿಶ್ವಾರಾಧ್ಯರೆಂಬ ಐದು ಜನ ಯೋಗಿಗಳು ಈ ಧರ್ಮವನ್ನು ಸಂಸ್ಥಾಪಿಸಿದರು.  ಈ ಐದು ಜನ ಆಚಾರ್ಯರು ಅತ್ಯಂತ ಪ್ರಾಚೀನರಾಗಿರುತ್ತಾರೆ.  ಶ್ರೀ ಬಸವೇಶ್ವರರು ಈ ಧರ್ಮದ ಜೀಣರ್ೋದ್ಧಾರಕರು ಮಾತ್ರ ಎಂದು ತಿಳಿದುಬರುತ್ತದೆ.
    ಇದೇ ಪ್ರಕಾರ ಡಾ| ಯದುವಂಶಿ ಎಂಬ ಹಿಂದೂ ಲೇಖಕರೂ ಸಹ ಪ್ರಖ್ಯಾತ ಬಸವ ಇಸ್ ಸಂಪ್ರದಾಯಕೇ ಜನ್ಮದಾತಾ ನಹೀ ಥೇ, ಯದ್ಯಪಿ ಉನ್ಹೋನೇ ಇಸಕೋ ಬಹುತ್ ಸಹಾಯತಾ ದೀ (ಶೈವಮತ, ಪುಟ 158-159) ತಮ್ಮ ಶೈವಮತ ಎಂಬ ಹಿಂದೀ ಪುಸ್ತಕದಲ್ಲಿಯೂ ಶ್ರೀ ಬಸವೇಶ್ವರರು ವೀರಶೈವ ಧರ್ಮದ ಸಂಸ್ಥಾಪಕರಲ್ಲವೆಂಬುದಾಗಿ ಪ್ರತಿಪಾದಿಸಿದ್ದಾರೆ.
    ಹೀಗೆ ಪ್ರಾಚೀನವಾದ ಆಗಮ ಸಾಹಿತ್ಯದಿಂದ ಆಧುನಿಕ ಸಾಹಿತ್ಯದವರೆಗೆ ವಿಚಾರಮಾಡಲಾಗಿ ಶ್ರೀ ಜಗದ್ಗುರು ಪಂಚಾಚಾರ್ಯರೇ ವೀರಶೈವರ ಧರ್ಮದ ಸಂಸ್ಥಾಪಕರೆಂಬುದು ಸಿದ್ಧವಾಗುತ್ತದೆ. ಶ್ರೀ ಬಸವೇಶ್ವರರು ಮಾತ್ರ ಈ ಧರ್ಮದಲ್ಲಿ ದೀಕ್ಷೆಯನ್ನು ಹೊಂದಿ ಈ ಧರ್ಮದ ತತ್ತ್ವಗಳು ಕನ್ನಡನಾಡಿನ ಜನರಿಗೆ ತಿಳಿಯಲೆಂಬ ಉದ್ದೇಶದಿಂದ ಜನರಾಡುವ ಸಾಮಾನ್ಯ ಭಾಷೆಯಲ್ಲಿ ವಚನಗಳನ್ನು ಬರೆದು ಅವುಗಳ ಮೂಲಕ ಬಹಳಷ್ಟು ಧರ್ಮಪ್ರಚಾರವನ್ನು ಮಾಡಿದ್ದಾರೆ.
         ವೀರಶೈವರ ಗೋತ್ರ - ಸೂತ್ರಗಳು
    ಇಷ್ಟಲಿಂಗ ಪೂಜಾರೂಪ ನಿತ್ಯಕರ್ಮವನ್ನಾಗಲಿ ಮತ್ತೆ ಯಾವುದೇ ನೈಮಿತ್ತಿಕ-ಕರ್ಮಗಳನ್ನು ಆಚರಿಸುವಾಗ ದೇಶ-ಕಾಲ-ಗೋತ್ರ ಮತ್ತು ಉದ್ದೇಶವನ್ನು ಹೇಳಿ ಸಂಕಲ್ಪ ಮಾಡುವ ಪದ್ಧತಿ ಇದೆ.  ಅದೇ ಪ್ರಕಾರ ತೀರ್ಥಯಾತ್ರೆಗಳಿಗೆ ಹೋದಾಗ ಅಲ್ಲಿಯ ಅರ್ಚಕರಾದರೂ ಪೂಜೆಯನ್ನು ಮಾಡಿಸುವಾಗ ಯಾತ್ರಾಥರ್ಿಗಳಿಗೆ ನಿಮ್ಮ ಗೋತ್ರ ಯಾವುದು? ಎಂಬುದಾಗಿ ಪ್ರಶ್ನಿಸುತ್ತಾರೆ.  ಈ ಗೋತ್ರದ ವಿಷಯವಾಗಿ ತಿಳಿಯದೇ ಇರುವ ಬಹಳಷ್ಟು ವೀರಶೈವರು ಮೌನವಾಗಬೇಕಾಗುತ್ತದೆ.  ಆದ್ದರಿಂದ ಜನಸಾಮಾನ್ಯರಿಗೂ ತಮ್ಮ ತಮ್ಮ ಗೋತ್ರಗಳ ಜ್ಞಾನವಾಗಲೆಂಬ ಉದ್ದೇಶದಿಂದ ಇಲ್ಲಿ ಗೋತ್ರಪುರುಷರ ವಿಷಯವಾಗಿ ಸ್ವಲ್ಪ ವಿಚಾರಿಸೋಣ.
    ನಮ್ಮೀ ಭಾರತದೇಶದಲ್ಲಿ ಋಷಿವಂಶ ಮತ್ತು ಗಣವಂಶಗಳೆಂಬ ಎರಡು ವಂಶಗಳು ಅತಿ ಪ್ರಾಚೀನವಾದವುಗಳು.  ಕಶ್ಯಪ, ಭಾರದ್ವಾಜ ಮತ್ತು ಗೌತಮ ಮುಂತಾದ ಋಷಿಗಳ ವಂಶದಲ್ಲಿ ಜನಿಸಿದ ಬ್ರಾಹ್ಮಣ, ಕ್ಷತ್ರಿಯ ಮೊದಲಾದವರನ್ನು ಋಷಿವಂಶಜರೆಂದು ಕರೆಯುತ್ತಾರೆ.  ಈ ಋಷಿಗಳು ಮತ್ತು ಋಷಿವಂಶಜರೆಲ್ಲ ಬ್ರಹ್ಮಸೃಷ್ಟಿಗೆ ಸಂಬಂಧಪಡುತ್ತಾರೆ.  ಆದರೆ ಈ ಬ್ರಹ್ಮಸೃಷ್ಟಿಯ ಪೂರ್ವದಲ್ಲಿ ಉತ್ಪನ್ನವಾದ ಶಿವಸೃಷ್ಟಿಯಲ್ಲಿ ಬರುವ ವೀರ, ನಂದಿ ಮುಂತಾದ ಪಂಚಶಿವಗಣರಿಂದ ಜನಿಸಿದ ವೀರಶೈವರೆಲ್ಲ ಗಣಸೃಷ್ಟಿಗೆ ಸಂಬಂಧ ಪಡುತ್ತಾರೆ.
    ಇಲ್ಲಿರುವ ರಹಸ್ಯಾರ್ಥವೇನೆಂದರೆ - ಪೂರ್ವದಲ್ಲಿ ಶಿವನು ಬ್ರಹ್ಮನಿಗೆ ಸೃಷ್ಟಿ ನಿಮರ್ಾಣದ ಕಾರ್ಯವನ್ನು ವಹಿಸಿ ಸೃಷ್ಟಿಸಲು ಆಜ್ಞಾಪಿಸಿದಾಗ, ಶಿವನ ಆಜ್ಞೆಯಂತೆ ಬ್ರಹ್ಮನು ಸೃಷ್ಟಿ ರಚಿಸಲು ಉದ್ಯುಕ್ತನಾಗುತ್ತಾನೆ.  ಬಹಳಷ್ಟು ಪ್ರಯತ್ನಿಸಿ ನಿರಾಶನಾದಾಗ-
        ಸೃಷ್ಟಿಂ ವಿಧೇಹಿ ಭಗವಾನ್ ಪ್ರಥಮಂ ಪರಮೇಶ್ವರ |
        ಜ್ಞಾತೋಪಾಯಸ್ತತಃ ಕುರ್ಯಾಂ ಜಗತ್ಸೃಷ್ಟಿಮುಮಾಪತೇ ||
                            (ಸಿ.ಶಿ. 2; 25)
    ಹೇ ದೇವಾಧಿದೇವನಾದ ಮಹಾದೇವನೇ, ನೀನು ಸೃಷ್ಟಿಯ ಉಪಾಯವನ್ನು ಹೇಳಿದರೂ  ನನಗೆ ತಿಳಿಯದಾಗಿದೆ.  ಆದ್ದರಿಂದ ನೀನು ಮೊದಲು ಸೃಷ್ಟಿಯನ್ನು ಮಾಡು, ಅದನ್ನು ನೋಡಿಕೊಂಡು ನಾನು ಸೃಷ್ಟಿಸಲು ಪ್ರಯತ್ನಿಸುತ್ತೇನೆ ಎಂಬುದಾಗಿ ಪ್ರಾಥರ್ಿಸಿದನು.  ಆಗ ಶಿವನು-
        ಇತ್ಯೇವಂ ಪ್ರಾಥರ್ಿತಃ ಶಂಭುಬ್ರ್ರಹ್ಮಣಾ ವಿಶ್ವಯೋನಿನಾ |
        ಸಸಜರ್ಾತ್ಮಸಮ ಪ್ರಖ್ಯಾನ್ ಸರ್ವಜ್ಞಾನ್ ಸರ್ವಶಕ್ತಿಕಾನ್ ||
        ಪ್ರಬೋಧಪರಮಾನಂದಪರಿವಾಹಿತಮಾನಸಾನ್ |
        ಪ್ರಮಥಾನ್ ವಿಶ್ವನಿಮರ್ಾಣಪ್ರಲಯಾದಿ ವಿಧಿಕ್ಷಮಾನ್ ||
                            (ಸಿ.ಶಿ.2; 16-17)
    ಈ ರೀತಿಯಾಗಿ ತನಗೆ ಸಮಾನವಾದ ಪ್ರತಿಭೆಯುಳ್ಳ ಸರ್ವಜ್ಞರೂ, ಸರ್ವಶಕ್ತರೂ ಆದ ಜಗತ್ತಿನ ನಿಮರ್ಾಣಾದಿ ಸಾಮಥ್ರ್ಯವುಳ್ಳ ಅನಂತ ಶಿವಗಣರನ್ನು ಸೃಷ್ಟಿಸಿದನು.
    ಹೀಗೆ ಬ್ರಹ್ಮನ ಸೃಷ್ಟಿಯ ಪೂರ್ವದಲ್ಲಿ ಶಿವನು ಬ್ರಹ್ಮನಿಗೆ ಸೃಷ್ಟಿಯ ಕಲೆಯನ್ನು ತೋರಿಸಿಕೊಡುವುದಕ್ಕಾಗಿ ಸೃಷ್ಟಿಸಿದ ಅನೇಕ ಶಿವಗಣರಲ್ಲಿ ವೀರ, ನಂದಿ, ಭೃಂಗಿ, ವೃಷಭ ಮತ್ತು ಸ್ಕಂದರೆಂಬ ಐದು ಜನ ಶಿವಗಣರೇ ವೀರಶೈವರ ಗೋತ್ರ ಪುರುಷರು, ಅಂತೆಯೇ -
        ಈಶಾನಮುಖಸಂಜಾತಾ ವೀರಶೈವಾಮಹೌಜಸಃ |
        ವೀರೋನಂದೀ ತಥಾ ಭೃಂಗೀ ವೃಷಭಃ ಸ್ಕಂದ ಏವ ಚ ||
                                (ಪಾಶುಪತ ತಂತ್ರ)
        ಅತಿವಣರ್ಾಶ್ರಮಾಃ ಪೂವರ್ೇನಂದ್ಯಾದಿಪ್ರಮಥಾಃ ಸ್ಮೃತಾಃ |
        ತತ್ಸಂತತಿಸಮಾಯಾತಾ ವೀರಶೈವಾ ಇತಿ ಶ್ರುತಾಃ ||
                    (ವೀರಶೈವ ಸದಾಚಾರ ಸಂಗ್ರಹ ; 6/4)
    ಈ ಪಾಶುಪತತಂತ್ರ ಮತ್ತು ವೀರಶೈವ ಸದಾಚಾರ ಸಂಗ್ರಹಗಳಲ್ಲಿ ಈ ವೀರಾದಿಪಂಚಗಣರೇ ವೀರಶೈವರ ವಂಶದ ಮೂಲಪುರುಷರೆಂದು ಸ್ಪಷ್ಟವಾಗಿ ಪ್ರತಿಪಾದಿಸಲ್ಪಟ್ಟಿದೆ.
    ಗೋತ್ರ ಪುರುಷರು ವಂಶದ ಮೂಲ ವ್ಯಕ್ತಿಗಳಾಗಿದ್ದರಿಂದ, ಧರ್ಮಪತ್ನಿಯರಿಲ್ಲದೇ ಸಂತಾನೋತ್ಪತ್ತಿಯು ಅಸಂಭವವಾದ್ದರಿಂದ ಇವರು ಪತ್ನೀ ಪರಿಗ್ರಹಮಾಡಿರಬೇಕಾಗುತ್ತದೆ.  ಹಾಗಾದರೆ ವೀರಶೈವ ಗೋತ್ರ ಪುರುಷರ ಪತ್ನಿಯರು ಯಾರು? ಎಂಬ ಜಿಜ್ಞಾಸೆಯುಂಟಾದಾಗ ಕ್ರಿಯಾಸಾರ, ವೀರಶೈವಾನಂದ ಚಂದ್ರಿಕಾ ಮತ್ತು ಲಿಂಗಪುರಾಣ ಮುಂತಾದ ಗ್ರಂಥಗಳಲ್ಲಿ ಶಿವಗಣರ ಪತ್ನಿಯರು ಪ್ರತಿಪಾದಿಸಲ್ಪಟ್ಟಿದ್ದಾರೆ.  ಅದನ್ನೇ ಈಗ ಅವಲೋಕಿಸೋಣ -
        ವೀರಭದ್ರೋ ಮಹಾತೇಜಾ ಹಿಮಕುಂದೇಂದುಸನ್ನಿಭಃ |
        ಭದ್ರಕಾಳೀಪ್ರಿಯೋ ನಿತ್ಯಂ ಮಾತೃಣಾಮಭಿರಕ್ಷಕಃ ||
                                (ಲಿಂಗಪುರಾಣ)
    ಎನ್ನುವ ಲಿಂಗಪುರಾಣದ ವಚನದಲ್ಲಿ ವೀರ ಅಥವಾ ವೀರಭದ್ರನೆಂಬ ಗಣನಿಗೆ ಭದ್ರಕಾಳಿ ಎಂಬ ಪತ್ನಿಯಿರುವಳೆಂದು ಪ್ರತಿಪಾದಿಸಲ್ಪಟ್ಟಿದೆ.  ಇಂದಿಗೂ ಕೂಡಾ ವೀರಭದ್ರ ದೇವಾಲಯಗಳ ಪಕ್ಕದಲ್ಲಿಯೇ ಭದ್ರಕಾಳಿಯ ಮಂದಿರಗಳಿರುವುದನ್ನು ಕಾಣುತ್ತೇವೆ.  ಅದೇ ಪ್ರಕಾರವಾಗಿ ಶ್ರೀ ನೀಲಕಂಠ ಶಿವಾಚಾರ್ಯರು ತಮ್ಮ 'ಕ್ರಿಯಾಸಾರ' ಎಂಬ ಗ್ರಂಥದ ಹದಿನಾಲ್ಕನೇ ಉಪದೇಶದಲ್ಲಿ 'ಆವರಣ ಪೂಜಾ' ವಿಧಾನವನ್ನು ತಿಳಿಸುವಾಗ ತೃತೀಯಾವರಣ ಪೂಜೆಯಲ್ಲಿ ಕುಂಡಲಿನೀ ಸಹಿತಾಯ ನಂದಿಕೇಶ್ವರಾಯ ನಮಃ, ಹ್ಲಾದಿನೀ ಸಹಿತಾಯ ಭೃಂಗಿಣೇ ನಮಃ, ಭದ್ರಾ ಸಹಿತಾಯ ವೃಷಭಾಯ ನಮಃ, ದೇವಯಾನೀ ಸಹಿತಾಯ ಸ್ಕಂದಾಯ ನಮಃ|| (ಕ್ರಿಯಾಸಾರ ಭಾಗ-2 ಪುಟ 278-279 ಔಖ ಪ್ರಕಾಶನ, ಮೈಸೂರು) ಎಂಬುದಾಗಿ ನಂದೀಶ್ವರನಿಗೆ ಕುಂಡಲಿನೀ, ಭೃಂಗಿಗೆ ಹ್ಲಾದಿನೀ, ವೃಷಭನಿಗೆ ಭದ್ರಾ ಮತ್ತು ಸ್ಕಂದನಿಗೆ ದೇವಯಾನೀ ಎಂಬ ಪತ್ನಿಯರು ಇದ್ದರೆಂದು ಉಲ್ಲೇಖವನ್ನು ಮಾಡಿರುತ್ತಾರೆ.  ಇದೂ ಅಲ್ಲದೆ ಶ್ರೀಮರಿತೋಂಟದಾರ್ಯರು  ವೀರಶೈವಾನಂದ ಚಂದ್ರಿಕೆಯ ವಾದಕಾಂಡದಲ್ಲಿ ನಂದೀಶ್ವರನಿಗೆ ಸುಯಶಾ ಎಂಬ                                        
ಪತ್ನಿ ಇದ್ದಳೆಂದು ಪ್ರತಿಪಾದಿಸಿದ್ದಾರೆ.  ಹೀಗೆ ವೀರಶೈವ ಗೋತ್ರಪುರುಷರಾದ ವೀರನು ಭದ್ರಕಾಳಿಯನ್ನೂ, ನಂದಿಯು ಕುಂಡಲಿನಿ ಅಥವಾ ಸುಯಶಾಳನ್ನು, ಭೃಂಗಿಯು ಹ್ಲಾದಿನಿಯನ್ನೂ, ವೃಷಭನು ಭದ್ರಾಳನ್ನು ಮತ್ತು ಸ್ಕಂದನು ದೇವಯಾನಿಯನ್ನೂ ಪತ್ನಿಯರನ್ನಾಗಿ ಪರಿಗ್ರಹಿಸಿರುವುದು ಸಿದ್ಧವಾಗುತ್ತದೆ.
    ಅಥ ಯದಿ ಸ್ತ್ರೀಲೋಕಕಾಮೋ ಭವತಿ ಎಂಬ ಶ್ರುತಿ ಪ್ರಮಾಣಾನುಸಾರವಾಗಿ ನಿತ್ಯಮುಕ್ತರೂ, ಅನಾದಿ ಮುಕ್ತರೂ ಆದ ವೀರ, ನಂದಿ, ಭೃಂಗಿ, ವೃಷಭ ಮತ್ತು ಸ್ಕಂದರೆಂಬ ಈ ಶಿವಗಣರಿಗೆ ಸರ್ವಸ್ವಾತಂತ್ರ್ಯವಿರುವುದರಿಂದ ಲೀಲಾವಿನೋದಕ್ಕಾಗಿ ಇವರು ಸ್ತ್ರೀ ಪರಿಗ್ರಹವನ್ನು ಮಾಡಿರುವುದರಿಂದ ಇವರಲ್ಲಿ ರಾಗದ್ವೇಷಾದಿಗಳಿಲ್ಲದ ಕಾರಣ ಇವರು ಸಂಸಾರಬಂಧನಕ್ಕೊಳಗಾಗಲಾರರು.  ಇಂತಹ ಶಿವಗಣರ ಸಂತಾನವೇ ವೀರಮಾಹೇಶ್ವರರು ಅಥರ್ಾತ್ ಜಂಗಮರು.  ಶಿವಗಣರ ಸಂತಾನವಾದ ಕಾರಣ ಜಂಗಮರಿಗೆ ಗಣಂಗಳು ಎಂಬುದಾಗಿ ಲೋಕದಲ್ಲಿ ಕರೆಯುವ ರೂಢಿಯುಂಟು.
    ಇದೇ ಪ್ರಕಾರ ಪರಮಾತ್ಮನ ಈಶಾನ ಮುಖದಿಂದ ಪಂಚವಕ್ತ್ರ ಗಣೇಶ್ವರನು ಜನಿಸುತ್ತಾನೆ.  ಆ ಗಣೇಶ್ವರನ ಐದು ಮುಖಗಳಿಂದ ಮಖಾರಿ, ಕಾಲಾರಿ, ಪುರಾರಿ, ಸ್ಮರಾರಿ ಮತ್ತು ವೇದಾರಿಗಳೆಂಬ ಐದು ಜನ ಪಂಚಮರು ಜನಿಸುತ್ತಾರೆ.  ಈ ಪಂಚಮರ ಸಂತಾನವೇ ಪಂಚಮಸಾಲಿ ಎನ್ನಲಾಗುತ್ತದೆ.
    ಹೀಗೆ ವೀರಶೈವ ಸದಾಚಾರ ಸಂಗ್ರಹ ಮತ್ತು ಆಗಮಗಳಲ್ಲಿ ಗಣವಂಶ (ಜಂಗಮ) ಮತ್ತು ಪಂಚಮ (ಭಕ್ತ) ವಂಶ ಎಂಬುದಾಗಿ ಎರಡೇ ಭಾಗಗಳಿವೆ.  ಕಾಲಾಂತರದಲ್ಲಿ ಈ ಪಂಚಮರಲ್ಲಿಯೇ ವೃತ್ತಿ ಭೇದದಿಂದ ಅನೇಕ ಜಾತಿ ಉಪಜಾತಿಗಳು ಉತ್ಪನ್ನವಾಗಿರಬಹುದೆಂದು ಊಹಿಸಬಹುದಾಗಿದೆ.  ಇಂದಿನ ಈ ಪರಿವರ್ತನಶೀಲ ಪ್ರಪಂಚದಲ್ಲಿ ಎಲ್ಲ ವೀರಶೈವರು ತಮ್ಮ ತಮ್ಮ ಉಪಜಾತಿಗಳ ಗೊಂದಲಕ್ಕೆ ಬಿದ್ದು ಸಮಾಜವನ್ನು ಹದಗೆಡಿಸುವುದಕ್ಕಿಂತ ನಾವೆಲ್ಲರೂ ವೀರಶೈವರೆಂಬ ಏಕಾಭಿಪ್ರಾಯದಿಂದ ಬಾಳಿದರೆ ವೀರಶೈವ ಸಮಾಜವು ಬೇಗನೆ ಸ್ವಸ್ಥವಾಗುವುದರಲ್ಲಿ ಸಂದೇಹವಿಲ್ಲ.
    ಭಕ್ತ ಜನರ ಪ್ರತಿಯೊಂದು ಧಾಮರ್ಿಕ ವಿಧಿವಿಧಾನಗಳನ್ನು ಮಾಹೇಶ್ವರ (ಜಂಗಮ)ರೇ ನಿರ್ವಹಿಸುತ್ತಾ ಬಂದಿರುವುದರಿಂದ ಅವರು ಪೂಜ್ಯರೂ, ಇವರು ಪೂಜಕರೂ ಆಗಿದ್ದಾರೆ.
     ಪಂಚಮರೆಂದು ಕರೆಯಿಸಿಕೊಳ್ಳುವ ಭಕ್ತವಂಶದವರಾದರೂ ತಾವು ಪೂಜಾದಿಗಳನ್ನು ಮಾಡುವಾಗ ತಮ್ಮ ವಂಶ ಪರಂಪರೆಯ ಗುರುಗಳ ಗೋತ್ರಗಳನ್ನೇ ಹೇಳಿ ಸಂಕಲ್ಪ ಮಾಡಬೇಕು.
    ಈ ರೀತಿಯಾಗಿ ವೀರ, ನಂದಿ, ಭೃಂಗಿ, ವೃಷಭ ಮತ್ತು ಸ್ಕಂದರೆಂಬ ಪಂಚಗಣರ ಹಾಗೂ ಮಕಾರಿ, ಕಾಲಾರಿ, ಪುರಾರಿ, ಸ್ಮರಾರಿ ಮತ್ತು ವೇದಾರಿ ಎಂಬ ಪಂಚಮರ ಸಂತಾನಗಳಿಗೆಲ್ಲ ಶ್ರೀ ಜಗದ್ಗುರು ರೇವಣಸಿದ್ಧ, ಶ್ರೀ ಜಗದ್ಗುರು ಮರುಳಸಿದ್ಧ, ಶ್ರೀ ಜಗದ್ಗುರು ಏಕೋರಾಮರಾಧ್ಯ, ಶ್ರೀಜಗದ್ಗುರು ಪಂಡಿತಾರಾಧ್ಯ ಮತ್ತು ಶ್ರೀ ಜಗದ್ಗುರು ವಿಶ್ವಾರಾಧ್ಯರೆಂಬ ಪಂಚಜಗದ್ಗುರುಗಳೇ ಮೂಲಗುರುಗಳಾಗಿರುತ್ತಾರೆ.  ಈ ಮೂಲ ಪಂಚಾಚಾರ್ಯರ ಶಿಷ್ಯರಾದ ಪಟ್ಟಾಧಿಕಾರಿಗಳು ಮೂಲಾಚಾರ್ಯರ ಅಪ್ಪಣೆ ಪ್ರಕಾರ ಅವರ ಹೆಸರಿನ ಪಂಚಕಲಶಗಳನ್ನು  ಸ್ಥಾಪಿಸಿ, ಆ ಪಂಚಕಲಶಗಳ ಸಾಕ್ಷಿಯಲ್ಲಿಯೇ ದೀಕ್ಷಾ, ವಿವಾಹ ಮುಂತಾದ ಸಕಲ ಧಾಮರ್ಿಕ ಕ್ರಿಯೆಗಳನ್ನೂ ನಿರ್ವಹಿಸುತ್ತಾರೆ.
    ವೀರಶೈವರಿಗೆ ಮುಖ್ಯವಾಗಿ ಐದು ಗೋತ್ರ್ರಗಳಿರುವಂತೆ ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ ಮತ್ತು ಪಂಚವರ್ಣಗಳೆಂಬ ಐದು ಮಹಾಸೂತ್ರಗಳಿವೆ.  ಈ ಒಂದೊಂದು ಸೂತ್ರಕ್ಕೆ ಹನ್ನೆರಡರಂತೆ ಉಪಸೂತ್ರಗಳಿರುತ್ತವೆ. ತಮ್ಮ ವಂಶದ ಗೋತ್ರ-ಸೂತ್ರಗಳ ಪರಿಜ್ಞಾನವು ಪ್ರತಿಯೊಬ್ಬರಿಗೂ ಇರಬೇಕೆಂಬ ಉದ್ದೇಶದಿಂದ ಮುಂದಿನ ಪುಟಗಳಲ್ಲಿ ಅವುಗಳ ಸಂಕ್ಷಿಪ್ತ ವಿವರಣೆಯನ್ನು ಕೊಡಲಾಗಿದೆ.

            ವೀರಶೈವ ಧರ್ಮ - ದಶರ್ಿನಿ
    1)    ವೀರಶೈವ ಧರ್ಮ ಸಂಸ್ಥಾಪಕರು
                ಶ್ರೀ ಜಗದ್ಗುರು ಪಂಚಪೀಠಾಧೀಶ್ವರರು
    2)    ವೀರಶೈವ ಧರ್ಮ ಗ್ರಂಥ
                ಶ್ರೀ ಸಿದ್ಧಾಂತ ಶಿಖಾಮಣಿ
    3)ಜಗದ್ಗುರು ಮೂಲ ಪಂಚಾಚಾರ್ಯರ ಅವತಾರೋತ್ಸವಗಳು
    1) ವೈಶಾಖ ಶುದ್ಧ ಅಕ್ಷಯ ತದಿಗೆ
                ಶ್ರೀ ಜಗದ್ಗುರು ಏಕೋರಾಮಾರಾಧ್ಯರ ಅವತಾರ
    2) ವೈಶಾಖ ಶುದ್ಧ ಪಂಚಮಿ
                ಶ್ರೀ ಜಗದ್ಗುರು ದಾರುಕಾಚಾರ್ಯರ ಅವತಾರ
    3) ಮಾಘ ಬಹುಳ ತ್ರಯೋದಶಿ
                ಶ್ರೀ ಜಗದ್ಗುರು ಪಂಡಿತಾರಾಧ್ಯರ ಅವತಾರ
                ಶ್ರೀ ಜಗದ್ಗುರು ವಿಶ್ವಾರಾಧ್ಯರ ಅವತಾರ
    4) ಫಾಲ್ಗುಣ ಶುದ್ಧ ತ್ರಯೋದಶಿ
                ಶ್ರೀ ಜಗದ್ಗುರು ರೇಣುಕಾಚಾರ್ಯರ ಅವತಾರ