panchapeeth.com

Veerashaiva Panchapeeth Parampare

Sri Kashi Peeth Parampare

Vishwaradhyaಶ್ರೀ ಕಾಶೀ ಪೀಠದ ಪರಂಪರೆ

    ಭಾರತ ದೇಶದ ಅತ್ಯಂತ ಪ್ರಾಚೀನ ಪುಣ್ಯತೀರ್ಥ ಕ್ಷೇತ್ರಗಳಲ್ಲಿ ಕಾಶಿಯು ಪ್ರಮುಖವಾಗಿದೆ.  ಕಾಶ್ಯತೇ ಪ್ರಕಾಶ್ಯತೇ ಇತಿ ಕಾಶೀ - ಅಂದರೆ ತನ್ನ ಸವರ್ೋತ್ಕೃಷ್ಟಗಳಾದ ವೈಶಿಷ್ಟ್ಯಗಳಿಂದ ಪ್ರಕಾಶಮಾನವಾದ ಈ ಕ್ಷೇತ್ರಕ್ಕೆ ಕಾಶೀ ಎಂಬ ಪವಿತ್ರ ನಾಮವು ಪ್ರಾಪ್ತವಾಗಿದೆ.  ಅಂತೆಯೇ ಬಹುದೂರದಲ್ಲಿರುವ ಕಾಶಿಗೆ ಬರಲು ಅಶಕ್ತರಾದ ಭಾವುಕ ಜನರು ತಮ್ಮೂರಿನಲ್ಲಿಯೇ ಇದ್ದು ಅನನ್ಯವಾದ ಭಕ್ತಿಯಿಂದ ಕಾಶೀ, ಕಾಶೀ, ಕಾಶೀ ಎಂದು ಮೂರು ಸಾರೆ ಕ್ಷೇತ್ರವನ್ನು ಮನಸ್ಸಿನಲ್ಲಿ ಧ್ಯಾನಿಸಿದ ಮಾತ್ರಕ್ಕೆ ಕಾಶೀಯಾತ್ರೆಯನ್ನು ಮಾಡಿದ ಫಲವು ಪ್ರಾಪ್ತವಾಗುವುದೆಂಬ ಪ್ರೌಢೋಕ್ತಿಯು ಪ್ರಚಾರದಲ್ಲಿದೆ.
    ಭಾರತದ ಎಲ್ಲ ಪ್ರದೇಶಗಳ, ಎಲ್ಲ ಭಾಷೆಗಳ, ಎಲ್ಲ ಧರ್ಮಗಳ ಜನರು ಸ್ಥಾಯೀರೂಪವಾಗಿ ಕಾಶಿಯಲ್ಲಿ ಬಹುಕಾಲದಿಂದ ವಾಸಮಾಡಿದ್ದಾರೆ.  ಸಮಸ್ತ ಭಾರತವನ್ನು ಒಂದೇ ಊರಿನಲ್ಲಿ ನೋಡಬೇಕಾಗಿದ್ದರೆ ಕಾಶಿಗೆ ಬಂದರೆ ಸಾಕು.  ಆದ್ದರಿಂದ ವಿದೇಶದಿಂದ ಯಾತ್ರಾಥರ್ಿಗಳಾಗಿ ಬಂದ ಜನರು ಪ್ರಥಮವಾಗಿ ಈ ಕ್ಷೇತ್ರಕ್ಕೇನೇ ಭೇಟಿ ನೀಡುತ್ತಾರೆ.
    ಕಾಶಿಯಲ್ಲಿ ವಿಭಿನ್ನ ಸಂಪ್ರದಾಯಗಳ 300 ಮಠಗಳು ಹಾಗೂ 1550 ದೇವಸ್ಥಾನಗಳಿವೆ.  ಇಲ್ಲಿಯ ಜನಗಣತಿಯ ಪ್ರಕಾರ 240 ಜನರಿಗೆ ಒಬ್ಬ ಸನ್ಯಾಸಿಯಂತೆ ಮಹಾತ್ಮರು ಸ್ಥಾಯೀರೂಪವಾಗಿ ವಾಸಮಾಡಿದ್ದಾರೆ. (ಇದು 1961ರ ಜನಗಣತಿಯನ್ನು ಆಧರಿಸಿದೆ) ಇವರಲ್ಲಿ ಬಹುಪಾಲು ಜನರು ಶಿವಭಕ್ತರೇ ಇದ್ದಾರೆ.  ಇಂದಿನವರೆಗೆ ಅಸ್ತಿತ್ವದಲ್ಲಿರುವ ಕಾಶಿಯ ಮಠಗಳಲ್ಲಿ ಶ್ರೀ ಜಂಗಮವಾಡಿ ಮಠ ಅತ್ಯಂತ ಪ್ರಾಚೀನವಾದುದು.  ಈ ವಿಷಯವನ್ನು ಶ್ರೀ ವೈದ್ಯನಾಥ ಸರಸ್ವತಿ ಎನ್ನುವವರು ಸ್ವತಂತ್ರ ಭಾರತ ಎಂಬ ವಾರಾಣಸಿಯ ಹಿಂದೀ ದಿನಪತ್ರಿಕೆಯಲ್ಲಿ ತಾ||26-11-1986ರಂದು ಕಾಶೀಮೇ ಜಿತನೇ ಭೀ ಜೀವಿತ ಮಠ ಹೈ ಉನಮೇ ಸಬಸೇ ಪ್ರಾಚೀನ ಹೈ ವೀರಶೈವೋಂಕಾ ಜಂಗಮವಾಡೀ ಮಠ, ಜಿಸಕೀ ಸ್ಥಾಪನಾ ಛಠೀ ಶತಾಬ್ದೀ ಮೆ ಹುಯೀ ಮಾನೀ ಜಾತೀ ಹೈ|  ಇನಮೇ ಸವರ್ಾಧಿಕ ಸಂಖ್ಯಾ ಉನ ಮಠೋಂಕೀ ಹೈ ಜಿನಕೀ ಸ್ಥಾಪನಾ 1801 ಸೇ 1968 ಕೇ ಬೀಚ್ ಹುಯೀ ಹೈ| ಅಂದರೆ ಕಾಶಿಯಲ್ಲಿರುವ ಎಲ್ಲ ಮಠಗಳಲ್ಲಿ ವೀರಶೈವ ಧರ್ಮದ ಈ ಜಂಗಮವಾಡಿ ಮಠವು ಕ್ರಿ.ಶ. 6ನೆಯ ಶತಮಾನಕ್ಕಿಂತಲೂ ಪೂರ್ವದ್ದಾಗಿದೆ.  ಇಲ್ಲಿಯ ಉಳಿದ ಧರ್ಮಗಳ ಮಠಗಳು ಕ್ರಿ.ಶ.  1801ರಿಂದ 1968ರ ಮಧ್ಯಾವಧಿಯಲ್ಲಿ ಸ್ಥಾಪಿತವಾಗಿರುತ್ತವೆ ಎಂಬುದಾಗಿ ಉಲ್ಲೇಖ ಮಾಡಿದ್ದಾರೆ.
    ಅತ್ಯಂತ ಪ್ರಾಚೀನ ಕಾಲದಿಂದ ಶ್ರೀ ವಿಶ್ವನಾಥ ದೇವಸ್ಥಾನದ ನಂತರ ಶ್ರೀ ಜಂಗಮವಾಡಿ ಮಠವೇ ದರ್ಶನೀಯ ಸ್ಥಾನವಾಗಿದೆ.  ಸ್ಥಳೀಯ ಹಾಗೂ ಪರಸ್ಥಳೀಯ ಜನರು ಪ್ರತಿದಿವಸ ಶ್ರೀ ಮಠದ ಕತರ್ೃಗದ್ದುಗೆಯ ದರ್ಶನಕ್ಕಾಗಿ ಬರುತ್ತಿರುತ್ತಾರೆ.  ವಿಶೇಷವಾಗಿ  ಮಹಾಶಿವರಾತ್ರಿಯ ದಿವಸ ಸಹಸ್ರಾರು ಜನರು ಇಲ್ಲಿಗೆ ದರ್ಶನಾಥರ್ಿಗಳಾಗಿ ಬರುವುದು ಉಲ್ಲೇಖನೀಯ.
ಶ್ರೀ ಜಗದ್ಗುರು ವಿಶ್ವಾರಾಧ್ಯರ ಅವತಾರ ಃ
    ಮಹಾಶಿವರಾತ್ರಿಯು ಈ ಪೀಠದ ಮೂಲ ಸಂಸ್ಥಾಪಕರಾದ ಶ್ರೀ ಜಗದ್ಗುರು ವಿಶ್ವಾರಾಧ್ಯ ಭಗವತ್ಪಾದರ ಅವತಾರದ ದಿನವಾಗಿದೆ.  ಪರಶಿವನ ಅಪ್ಪಣೆಯ ಪ್ರಕಾರ ಭೂಲೋಕದಲ್ಲಿ ವೀರಶೈವ ಧರ್ಮವನ್ನು ಪ್ರತಿಷ್ಠಾಪಿಸುವುದಕ್ಕಾಗಿ ಶ್ರೀ ಜಗದ್ಗುರು ಪಂಚಾಚಾರ್ಯರಲ್ಲೊಬ್ಬರಾದ ಶ್ರೀ ಜಗದ್ಗುರು ವಿಶ್ವಾರಾಧ್ಯ ಭಗವತ್ಪಾದರು ಅವತರಿಸಿದರು.
        ಕಾಶ್ಯಾಂ ವಿಶ್ವೇಶಲಿಂಗಾಶ್ಚ ವಿಶ್ವಾರಾಧ್ಯಸ್ಯ ಸಂಭವಃ |
        ಸ್ಥಾನಂ ಶ್ರೀ ಕಾಶಿಕಾಕ್ಷೇತ್ರೇ ಶ್ರುಣು ಪಾರ್ವತಿ ಸಾದರಮ್ ||
                        (ಸ್ವಾಯಂಭುವಾಗಮ)
        ಸ್ಕಂದಗೋತ್ರಾದಿನಾಥಶ್ಚ ಮಹಾಸಿಂಹಾಸನಾಗ್ರಣೀ |
        ವಿಶ್ವಾರಾಧ್ಯ ಇತಿ ಖ್ಯಾತೋ ಜಗದ್ಗುರೂತ್ತಮಶ್ಚ ಸಃ ||
                        (ಸುಪ್ರಬೋಧಾಗಮ)
    ಈ ಆಗಮೋಕ್ತಿಗಳ ಪ್ರಮಾಣಾನುಸಾರವಾಗಿ ಕಾಶಿಯ ಸುಪ್ರಸಿದ್ಧ ಜ್ಯೋತಿಲರ್ಿಂಗವಾದ ಶ್ರೀ ವಿಶ್ವನಾಥ ಶಿವಲಿಂಗದಿಂದ ಮಹಾಶಿವರಾತ್ರಿಯ ದಿವಸ ಶ್ರೀ ಜಗದ್ಗುರು ವಿಶ್ವಾರಾಧ್ಯರು ದಿವ್ಯದೇಹಧಾರಿಗಳಾಗಿ ಅವತರಿಸಿದರು.
        ಏತೇ ಯುಗಚತುಷ್ಕೇ ತು ಪಂಚಾರಾಧ್ಯಾ ಯಥಾವಿಧಿ |
        ಮಮ ಲಿಂಗಮುಖೋದ್ಭೂತಾ ಲೋಕವಿಶ್ರುತ ಕೀರ್ತಯಃ ||
                        (ಸ್ವಾಯಂಭುವಾಗಮ)
    ಎನ್ನುವ ಆಗಮ ಪ್ರಮಾಣದಿಂದ ಶಿವನ ಈಶಾನ ಮುಖಸಂಜಾತರೂ, ಸ್ಕಂದ ಗೋತ್ರಾಧಿಪತಿಗಳೂ, ವಿಶ್ವಕರ್ಣ ಶಾಖಾನುವತರ್ಿಗಳೂ ಆದ ಶ್ರೀ ಜಗದ್ಗುರು ವಿಶ್ವಾರಾಧ್ಯ ಭಗವತ್ಪಾದರು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತ ಬಂದಿದ್ದಾರೆ.  ಇವರಿಗೆ ಕೃತಯುಗದಲ್ಲಿ ಪಂಚಾಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ಪಂಚವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ವಿಶ್ವಕರ್ಣ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ವಿಶ್ವಾರಾಧ್ಯ ಶಿವಾಚಾರ್ಯ ಎಂಬ ಹೆಸರುಗಳು ಪ್ರಸಿದ್ಧವಾಗಿವೆ.
    ಕಾಶೀ ಜ್ಞಾನಸಿಂಹಾಸನದ ದ್ವಾಪರಯುಗದ ಆಚಾರ್ಯರಾದ ಶ್ರೀ ಜಗದ್ಗುರು ವಿಶ್ವಕರ್ಣ ಶಿವಾಚಾರ್ಯ ಭಗವತ್ಪಾದರು ಸುಪ್ರಸಿದ್ಧನಾದ ಶ್ರೀ ದೂವರ್ಾಸ ಮಹಷರ್ಿಗೆ ವೀರಶೈವ ತತ್ತ್ವೋಪದೇಶವನ್ನು ಮಾಡಿದ್ದಾರೆ.  ಶ್ರೀ ಜಗದ್ಗುರು ವಿಶ್ವಕರ್ಣ ಶಿವಾಚಾರ್ಯರು ಉಪದೇಶ ಮಾಡಿದ ಆ ಸ್ಥಾನವೇ ಇಂದು ಜ್ಞಾನಪೀಠ ಅಥರ್ಾತ್ ಜಂಗಮವಾಡಿ ಮಠ ಎಂಬಭಿಧಾನದಿಂದ ಕರೆಯಲ್ಪಡುತ್ತಿದೆ.  ಸುಪ್ರಸಿದ್ಧವಾದ ಕಾಶೀಖಂಡದಲ್ಲಿ ಈ ಸ್ಥಾನವು ಹರಿಕೇಶ ನಂದನವನವೆಂದು ಕರೆಯಲ್ಪಟ್ಟಿದೆ.  ಪ್ರಾಚೀನ ಕಾಲದಲ್ಲಿ ಅನೇಕ ಮಹಷರ್ಿಗಳು ಈ ಸ್ಥಾನದಲ್ಲಿ ತಪಸ್ಸನ್ನಾಚರಿಸಿ ಅಂತ್ಯಕಾಲದಲ್ಲಿ ತಮ್ಮ ಹೆಸರಿನ ಶಿವಲಿಂಗಗಳನ್ನು ಸಂಸ್ಥಾಪಿಸಿದ್ದಾರೆ.  ಈ ಸ್ಥಾನದ ಮಹಿಮೆಯನ್ನರಿತ ಅನೇಕ ಯಾತ್ರಾಥರ್ಿಗಳು ತಮ್ಮ ತಮ್ಮ ಪೂರ್ವಜರ ಸ್ಮೃತಿಗಾಗಿ ಶಿವಲಿಂಗಗಳನ್ನು ಅನಾದಿಕಾಲದಿಂದ ಸಂಸ್ಥಾಪಿಸುತ್ತ ಬಂದಿದ್ದಾರೆ.  ಇದರಿಂದ ದರ್ಶನಾಥರ್ಿಗಳಾಗಿ ಬಂದ ಭಕ್ತರಿಗೆ ಈ ಜಂಗಮವಾಡಿ ಮಠವು ಶಿವಲಿಂಗಮಯವಾಗಿ ಕಂಗೊಳಿಸುತ್ತಿದೆ.
    ಈ ಜ್ಞಾನಪೀಠದ ಕಲಿಯುಗದ ಆಚಾರ್ಯರಾದ ಶ್ರೀ ಜಗದ್ಗುರು ವಿಶ್ವಾರಾಧ್ಯರು ಯುಗಾರಂಭದಲ್ಲಿ ಅವತರಿಸಿ 1100 ವರ್ಷ ಪರ್ಯಂತವಾಗಿ ಅನಂತ ಲೀಲೆಗಳನ್ನಾಚರಿಸಿ ಉತ್ತರ ಭಾರತದಲ್ಲೆಲ್ಲ ವೀರಶೈವ ತತ್ತ್ವಗಳನ್ನು ಉಪದೇಶಿಸಿ ಶ್ರೀ ಮಲ್ಲಿಕಾಜರ್ುನರೆಂಬ ಶಿಷ್ಯರಿಗೆ ಜ್ಞಾನಪೀಠಾಧಿಕಾರವನ್ನು ಕೊಟ್ಟು ತಾವು ಪುನಃ ಶ್ರೀ ವಿಶ್ವನಾಥ ಜ್ಯೋತಿಲರ್ಿಂಗದಲ್ಲಿಯೇ ಸಮರಸರಾದರು.
ಶ್ರೀ ಜಗದ್ಗುರು ಮಲ್ಲಿಕಾಜರ್ುನ ಮಹಾಸ್ವಾಮಿಗಳು ಃ
    ಶ್ರೀ ಜಗದ್ಗುರು ವಿಶ್ವಾರಾಧ್ಯ ಭಗವತ್ಪಾದರ ತರುವಾಯ ಅಧಿಕಾರಕ್ಕೆ ಬಂದ ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯ ಮಹಾಸ್ವಾಮಿಗಳು ಕ್ರಿ.ಶ. ಪೂರ್ವ 2040ರಲ್ಲಿ ಪೀಠಾಧಿಕಾರಿಗಳಾಗಿದ್ದರೆಂದು ಈ ಪೀಠದ ಜಗದ್ಗುರುಗಳ ವಂಶಾವಳಿಯಿಂದ ತಿಳಿದುಬರುತ್ತದೆ.  ಇವರು ತಮ್ಮ ಶಿವಯೋಗ ಸಾಮಥ್ರ್ಯದಿಂದ 311 ವರ್ಷಗಳವರೆಗೆ ಪೀಠಾಧ್ಯಕ್ಷರಾಗಿದ್ದು ಕೊನೆಗೆ ಸಜೀವ ಸಮಾಧಿಯನ್ನು ಹೊಂದಿದ ಕಾರಣ ಇವರಿಗೆ ಗಾದೀ ಸ್ವಾಮಿ ಎಂಬ ಹೆಸರು ಪ್ರಸಿದ್ಧವಾಯಿತು.  ಇವರ ಈ ಸಜೀವ ಸಮಾಧಿಯೇ ಇಂದು ಶ್ರೀ ಜಂಗಮವಾಡಿ ಮಠದಲ್ಲಿ ಕತರ್ೃಗದ್ದುಗೆಯಾಗಿ ಪೂಜೆಗೊಳ್ಳುತ್ತಿದೆ.
    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯ ಮಹಾಸ್ವಾಮಿಗಳು ಅತ್ಯಂತ ಮಹಿಮಾಶಾಲಿಗಳಾದ್ದರಿಂದ ಈ ಪೀಠಕ್ಕೆ ಮುಂದೆ ಉತ್ತರಾಧಿಕಾರಿಗಳಾಗಿ ಬಂದ ಮಹಾಸ್ವಾಮಿಗಳಿಗೆಲ್ಲ ಅವರ ಹೆಸರನ್ನೇ ಇಡುವ ಪದ್ಧತಿಯು ಬೆಳೆದುಬಂದಿತು.  ಅಂತೆಯೇ ಇವರ ತರುವಾಯ ಈ ಪೀಠಕ್ಕೆ ಬಂದ 77 ಜನ ಮಹಾಸ್ವಾಮಿಗಳ ಹೆಸರುಗಳು ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರೆಂದೇ ಈ ಪೀಠದ ಪರಂಪರಾಗತ ವಂಶಾವಳಿಯಲ್ಲಿ ಬರೆಯಲ್ಪಟ್ಟಿದೆ.
ಐತಿಹಾಸಿಕ ದಾಖಲೆಗಳು ಃ
    ಶ್ರೀ ಕಾಶೀ ಜಂಗಮವಾಡಿ ಮಠವು ಕೇವಲ ಪೌರಾಣಿಕ ದಾಖಲೆಗಳಿಂದ ಕೂಡಿದ್ದಲ್ಲ, ಆದರೆ ಅತಿ ಮಹತ್ವಪೂರ್ಣವಾದ ಐತಿಹಾಸಿಕ ಶಾಸನಗಳಿಂದಲೂ ಯುಕ್ತವಾಗಿದೆ.  ಈ ಪೀಠದಲ್ಲಿ ಇರುವ ಅನೇಕ ದಾನಪತ್ರಗಳಲ್ಲಿ ಕಾಶೀ ಜಯನಂದದೇವನಿಂದ ಕೊಡಲ್ಪಟ್ಟ ದಾನಪತ್ರವೇ ಅತಿ ಪ್ರಾಚೀನವಾದದ್ದು.
    ಈ ಪೀಠ ಪರಂಪರೆಯಲ್ಲಿ 51ನೆಯ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯ ಮಹಾಸ್ವಾಮಿಗಳು (ಮಲ್ಲಿಕಾಜರ್ುನ ಜಂಗಮ) ಕ್ರಿ.ಶ. 553ರಿಂದ 674ರವರೆಗೆ ಅಂದರೆ 121 ವರ್ಷ ಪೀಠಾಧ್ಯಕ್ಷರಾಗಿದ್ದರು.  ಇವರ ಕಾಲದಲ್ಲಿಯೇ ಕಾಶಿಯ ರಾಜನಾಗಿದ್ದ ಶ್ರೀ ಜಯನಂದದೇವ ರಾಜನು ವಿಕ್ರಮನಾಮ ಸಂವತ್ಸರ 631 (ಕ್ರಿ.ಶ. 574)ರ ಪ್ರಬೋಧಿನೀ ಏಕಾದಶೀ (ಕಾತರ್ಿಕ ಶುದ್ಧ ಏಕಾದಶಿ) ದಿನದಂದು ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಭೂದಾನವನ್ನು ಮಾಡಿ, ದಾನಶಾಸನವನ್ನು ಬರೆದು ಕೊಟ್ಟಿದ್ದಾನೆ.  ಇಂದಿಗೆ 1433 ವರ್ಷದಷ್ಟು ಪ್ರಾಚೀನದ ಆ ದಾನಪತ್ರವು ಶ್ರೀ ಜಂಗಮವಾಡಿ ಮಠದಲ್ಲಿ ಇಂದಿಗೂ ಸುರಕ್ಷಿತವಾಗಿದೆ.  ಪ್ರಾಚೀನ ಹಿಂದೀ ಭಾಷೆಯಲ್ಲಿಯ ಆ ದಾನಪತ್ರವು ಇಂತಿದೆ -
                ಶ್ರೀ ಗಣೇಶಾಯ ನಮಃ
                            ಪಾಠ ಸಹೀ
                     ಶ್ರೀ ವಿಶ್ವೇಶ್ವರ    
    ಸ್ವಸ್ತಿ ಮಹಾರಾಜಾಧಿರಾಜ ಶ್ರೀ ಶ್ರೀ ಮಹಾರಾಜ ಜೈನಂದದೇವ ಕಾಶೀ ನರೇಶ ಆದೇಸಾತಿ ಶ್ರೀ ಶ್ರೀ ಶ್ರೀ ವಿಶ್ವಾರಾಧ್ಯ ಸಿಂಹಾಸನಕಂಹ ಗೋಸಾಯೀ ಮಲ್ಲಿಕಾಜರ್ುನ ಜಂಗಮಕಂಹ ಭೂಮಿದೀನ್ಹ ಕರ್ದಮೇಶ್ವರ ಮಹಾದೇವ ಗಂಗಾಜೀಕೇ ಮಧ್ಯ ಗೌಚಾರನವನ ಮಧ್ಯೇ ಶಿವಪ್ರೀತಿನೆ ದಿಶಿಕ ಪ್ರಮಾಣ ಪೂರ್ವ ಪಶ್ಚಿಮ ಪರಗ 800 ಉತ್ತರ ದಕ್ಷಿಣ ಪರಗ 800 ಏಹಿ ಭೂಮಿಮಹ ಜೇ ಕಿಛು ಉತ್ಪನ್ಯಹೋಪ ಏಸಭ ಗೋಸಾಯೀ ಮಲ್ಲಿಕಾಜರ್ುನ ಸಂಪ್ರದಾಯ ಸದಾ ಸರ್ವದಾ ಭೋಗಕರಹೀ ಏಹಿ ಭೂಮಿಪರಜೇ ಮಂದದೃಷ್ಟಿನೇ ದೇಖೇಗಾ ಸೋ ಧೋಖಾ ಉರಾವೇಗಾ.
        ಸ್ವದತ್ತಾಂ ಪರದತ್ತಾಂ ವಾ ಯೋ ಹರೇತ್ ಪೃಥಿವೀಮಿಮಾಮ್|
        ಷಷ್ಠಿವರ್ಷ ಸಹಸ್ರಾಣಿ ವಿಷ್ಟಾಯಾಂ ಜಾಯತೇ ಕೃಮಿಃ ||1||
        ಆದಿತ್ಯಚಂದ್ರಾವನಿಲೋನಲಶ್ಚ ದ್ಯೌಭರ್ೂಮಿರಾಪೋ ಹೃದಯಂ ಯಮಶ್ಚ
    ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯವೃತ್ತಮ್||2||
        ದಾನಪಾಲನಯೋರ್ಮಧ್ಯೇ ದಾನಾಚ್ಪ್ರೇಯೋನುಪಾಲನಮ್ |
        ದಾನಾತ್ಸರ್ಗಮವಾಪ್ನೋತಿ ಪಾಲನಾದದ್ಭುತಂ ಪದಮ್ ||3||
        ಸ್ವದತ್ತಾದ್ದ್ವಿಗುಣಂ ಪುಣ್ಯಂ ಪರದತ್ತಾನುಪಾಲನಮ್ |
        ಪರದತ್ತಾಪಹಾರೇಣ ಸ್ವದತ್ತಂ ನಿಷ್ಫಲಂ ಭವೇತ್ ||4||
    ಮಿತೀ ಕಾತರ್ಿಕ ಸುದಿ ದೇವೋತ್ಥಾನ ಏಕಾದಶೀ ಸಂವತ್ 631........... 631 ಮೆ ಜೈನಂದದೇವ ಕಾಶೀ ನರೇಶನೇ ಜೋ ಸನದ ದಿಯಾ ಥಾ ಉಸಕಾ ಅವಿಕಲ ಪ್ರತಿಲಿಪಿ ಹೈ ಯಹ ಹಮನೇ ದೇಖಲಿಯಾ ಉಸಕೇ ಪುರಾನಾ ಹೋನೇಕೇ ವಜಹಸೇ ಯಹ ತಾಮ್ರ ಪಟಪರ ಲಿಖಾಗಯಾ ಸಂವತ್ 1982 ಮಿಃ ಆಷಾಢಾ ಬದೀ 8 ||
                        ಪ್ರಭುನಾರಾಯಣಸಿಂಹಃ
                            ಕಾಶೀರಾಜಃ
    ಈ ದಾನಶಾಸನದ  ಭಾವವೇನೆಂದರೆ - ಶಿವಾನುಗ್ರಹದ ಪ್ರಾಪ್ತಿಗಾಗಿ ವಿಶ್ವಾರಾಧ್ಯ ಸಿಂಹಾಸನದ ಮಲ್ಲಿಕಾಜರ್ುನ ಜಂಗಮ ಗೋಸಾಯಿ (ಶಿವಯೋಗಿ)ಯವರಿಗೆ ಕರ್ದಮೇಶ್ವರ ದೇವಸ್ಥಾನದಿಂದ ಗಂಗಾನದಿಯ ದಂಡೆಯವರೆಗೆ ಗೋವುಗಳು ಸಂಚರಿಸುವ ವಿಶಾಲವಾದ ಭೂಭಾಗವು ದಾನವಾಗಿ ಕೊಡಲ್ಪಟ್ಟಿದೆ.  ಈ ಭೂಭಾಗದಲ್ಲಿ ಬೆಳೆಯುವ ಎಲ್ಲ ಬೆಳೆಯನ್ನು  ಉಪಯೋಗಿಸುವ ಅಧಿಕಾರವು ಶ್ರೀ ಮಲ್ಲಿಕಾಜರ್ುನ ಜಂಗಮ ಸಂಪ್ರದಾಯದವರಿಗೇನೇ ಇರುತ್ತದೆ.  ಯಾರಾದರೂ ಈ ಭೂಮಿಯನ್ನು ಆಕ್ರಮಿಸುವ ದುಬರ್ುದ್ಧಿಯುಳ್ಳವರಾದರೆ ಅವರು ಅವಶ್ಯವಾಗಿ ನಾಶವನ್ನು ಹೊಂದುತ್ತಾರೆ.
    ಕಾಗದದ ಮೇಲೆ ಬರೆದ ಈ ಶಾಸನವು ಅತಿ ಜೀರ್ಣವಾಗಿದ್ದರಿಂದ ಅವರ ವಂಶೀಯನಾದ ಶ್ರೀ ಪ್ರಭುನಾರಾಯಣಸಿಂಹ ಕಾಶೀರಾಜನು ವಿಕ್ರಮ ಸಂವತ್ಸರದ 1982 (ಕ್ರಿಸ್ತಶಕ 1908) ಆಷಾಢ ಶುದ್ಧ ಅಷ್ಟಮಿ ದಿನದಂದು ಆ ಶಾಸನವನ್ನೇ ಪುನಃ ತಾಮ್ರಪಟದಲ್ಲಿ ಬರೆಯಿಸಿ ಹಸ್ತಾಕ್ಷರವನ್ನು ಮಾಡಿಕೊಟ್ಟಿದ್ದಾನೆ.  ಇದನ್ನು ಶ್ರೀಪೀಠದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. 
     ಕಾಶೀರಾಜರಿಂದ ಕೊಡಲ್ಪಟ್ಟ ಈ ಸ್ಥಾನದಲ್ಲಿಯೇ 1916 ರಂದು ಕಾಶೀ ಹಿಂದೂ ವಿಶ್ವವಿದ್ಯಾಲಯವು ಸ್ಥಾಪಿತವಾಗಿದೆ.  ಈ  ವಿಶ್ವವಿದ್ಯಾಲಯದ ಹಿಂಬದಿಯಲ್ಲಿ ಆ ಪ್ರಾಚೀನವಾದ 'ಜಂಗಮಪುರ' ಎಂಬ ಸಣ್ಣ ಹಳ್ಳಿಯು ಇಂದಿಗೂ ಇದೆ.  ಈ ವಿಶ್ವವಿದ್ಯಾಲಯದ ಪರಿಸರದಲ್ಲಿ ಈ ಪೀಠದ ಪೂರ್ವ ಜಗದ್ಗುರುಗಳವರ ಒಂದೆರಡು ಸಮಾಧಿಗಳು ಇವೆ.  ಅವುಗಳು ಇಂದಿಗೂ 'ಜಂಗಮಬಾಬಾ ಸಮಾಧಿ' ಎಂಬ ಹೆಸರಿನಿಂದ ಪೂಜೆಗೊಳ್ಳುತ್ತಿವೆ.
    ಕ್ರಿಸ್ತಶಕ 1879 ರಂದು ಈ ಪೀಠಕ್ಕೆ 80ನೆಯ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು  ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರು 12 ವರ್ಷ ಕಾಲ ಈ ಪೀಠದ ಉನ್ನತಿಗಾಗಿ ಬಹಳಷ್ಟು ಶ್ರಮಿಸಿದ್ದಾರೆ.  ಇವರು ಆಂಧ್ರಪ್ರದೇಶದ 'ಬೋಧನಮಠ'ದ ಪಟ್ಟಾಧ್ಯಕ್ಷರಾಗಿದ್ದರು. ಪೀಠದ ಆಥರ್ಿಕ ಸ್ಥಿತಿಯನ್ನು ಭದ್ರಪಡಿಸುವದಕ್ಕಾಗಿ ಇವರು ಪೀಠದಲ್ಲಿಯೇ ಶ್ರೀ ವಿಶ್ವಾರಾಧ್ಯ ಬ್ಯಾಂಕ್ನ್ನು ಸ್ಥಾಪಿಸಿ, ಜನರಿಂದ ಹಣವನ್ನು ಠೇವಣಿಯಾಗಿ ಪಡೆದು, ಅವರ ಹಣವನ್ನು ಸಂರಕ್ಷಿಸುವುದರ ಜೊತೆಗೆ ಯೋಗ್ಯ ಬಡ್ಡಿಯನ್ನು ಕೊಡುತ್ತಿದ್ದರು.  ಇವರ ಕಾಲದಲ್ಲಿ ಈ  ಬ್ಯಾಂಕ್ ಬಹಳಷ್ಟು ಹೆಸರುವಾಸಿಯಾಗಿತ್ತು.  ಶ್ರೀ ಪೂಜ್ಯ ಜಗದ್ಗುರುಗಳವರು ಕಾಶೀ ಕ್ಷೇತ್ರದಲ್ಲಿ ಸ್ಥಳೀಯ ಬಡನಜರಿಗೆ ಹಾಗೂ ಯಾತ್ರಾಥರ್ಿಗಳಾಗಿ ಬಂದ ಭಕ್ತರಿಗೆ ಉಚಿತವಾಗಿ ಪ್ರಸಾದದ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ವೇದಾಧ್ಯಯನಕ್ಕಾಗಿ ಬಂದ ವಿದ್ಯಾಥರ್ಿಗಳಿಗೆಲ್ಲ ಉಚಿತವಾದ ಭೋಜನ, ನಿವಾಸ ಹಾಗೂ ಮತ್ತಿತರ ಎಲ್ಲ ವ್ಯವಸ್ಥೆಯನ್ನೂ ಮಾಡುತ್ತಿದ್ದರು.
    ಪೂಜ್ಯ ಜಗದ್ಗುರುಗಳು ದಿ. 18.08.1891 ರಂದು ತಮ್ಮ 48ನೆಯ ವಯಸ್ಸಿನಲ್ಲಿ ಅಕಸ್ಮಾತ್ ಲಿಂಗೈಕ್ಯರಾದರು.  ಇವರ ತರುವಾಯ ಮೃತ್ಯುಪತ್ರದ ಪ್ರಕಾರ ಇವರ ಶಿಷ್ಯಂದಿರಾದ ಶ್ರೀ ರಾಜೇಶ್ವರ ಮಹಾಸ್ವಾಮಿಗಳು ಈ ಪೀಠದ 81 ನೆಯ ಜಗದ್ಗುರುಗಳಾಗಿ ಅಧಿಕಾರವನ್ನು ವಹಿಸಿಕೊಂಡರು.  ಇವರು ಆಂಧ್ರಪ್ರದೇಶದ 'ರಾಜಮಹೇಂದ್ರ'ಭಾಗದ ಮಠಾಧೀಶರಾಗಿದ್ದು ಅಧ್ಯಯನಕ್ಕಾಗಿ ಕಾಶಿಗೆ ಬಂದಿದ್ದರು.  ಇವರು ಪ್ರಶಾಂತಮೂತರ್ಿಗಳೂ, ಮಹಾತಪಸ್ವಿಗಳೂ, ಉದಾರ ಹೃದಯಿಗಳೂ ಆಗಿದ್ದರು.  ಅಂದಿನ ಸಮಯದಲ್ಲಿ ಇವರ ತಪಸ್ಸು ಹಾಗೂ ಔದಾರ್ಯಕ್ಕೆ ಮನಸೋತ ಕಾಶೀವಾಸಿಗಳು ಇವರನ್ನು 'ಜಂಗಮರಾಜಾ' ಎಂದು ಕರೆಯುತ್ತಿದ್ದರು.               ಕಾಶಿಯ ವಿದ್ವನ್ಮಂಡಲಿಯವರು ಇವರ ಆಜ್ಞಾಧಾರಕರಾಗಿದ್ದರು.  ಅಂದಿನ ಕಾಲದಲ್ಲಿ ಸಾಕ್ಷಾತ್ ವಿಶ್ವನಾಥನ ಪ್ರತಿರೂಪರೆಂದು ಹೆಸರಾಗಿದ್ದ ಮಹಾಮಹೋಪಾಧ್ಯಾಯ ಶ್ರೀ ಶಿವಕುಮಾರಮಿಶ್ರ ಶಾಸ್ತ್ರಿಗಳವರು ಇವರ ಪ್ರೇರಣೆಯಿಂದ ಲಿಂಗಧಾರಣ ಚಂದ್ರಿಕ ಎಂಬ ಅತ್ಯಮೂಲ್ಯವಾದ ವೀರಶೈವ ಗ್ರಂಥಕ್ಕೆ ಶರನ್ನಾಮಿಕಾ ಸಂಸ್ಕೃತ ವ್ಯಾಖ್ಯಾನವನ್ನು ಬರೆದು ವೀರಶೈವ ಧರ್ಮದ ವೈದಿಕತ್ವವನ್ನು ಪ್ರಖ್ಯಾತಪಡಿಸಿದ್ದಾರೆ.  ಈ ಗ್ರಂಥವು ಕ್ರಿಸ್ತಶಕ 1905ರಲ್ಲಿಯೇ ಪೀಠದಿಂದ ಪ್ರಕಾಶಿಸಲ್ಪಟ್ಟಿತು.
    ಹೀಗೆ ಪಾಮರ ಪಂಡಿತರಿಗೆಲ್ಲ ಉದಾರ ಮನಸ್ಸಿನಿಂದ ಶ್ರೀ ಜಗದ್ಗುರು ರಾಜೇಶ್ವರ ಸ್ವಾಮಿಗಳು ಶ್ರೀ ವಿಶ್ವಾರಾಧ್ಯ ಬ್ಯಾಂಕಿನಲ್ಲಿಯ ಹಣವನ್ನೆಲ್ಲ ದಾನವಾಗಿ ಕೊಡುತ್ತಿದ್ದರು. ಅಲ್ಲದೇ ಮೈಸೂರಿಗೆ ದಯಮಾಡಿಸಿ ಮರಳಿ ಕಾಶಿಗೆ ಬರುವಾಗ ಕನರ್ಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ಪ್ರಾಂತಗಳ ಸುಮಾರು 200 ಜನ ಮಹೇಶ್ವರ ವಟುಗಳನ್ನು ಸಂಸ್ಕೃತಾಧ್ಯಯನಕ್ಕಾಗಿ ಕರೆದುಕೊಂಡು ಬಂದರು.  ಈ ಎಲ್ಲ ವಿದ್ಯಾಥರ್ಿಗಳಿಗೆ ಮಠದಿಂದಲೇ ವಸತಿ, ಭೋಜನಾದಿಗಳ ವ್ಯವಸ್ಥೆಯನ್ನು ಮಾಡುತ್ತಿದ್ದರು.  ಇದರಿಂದಾಗಿ ಬ್ಯಾಂಕಿನಲ್ಲಿಯ ಠೇವಣಿ ಹಣವೆಲ್ಲ ಧರ್ಮಕ್ಕಾಗಿ ಕರಗತೊಡಗಿತು.  16 ವರ್ಷ ಪೀಠಾಧ್ಯಕ್ಷರಾಗಿದ್ದ ಇವರು ದಿ|| 31-7-1907ರಂದು ಲಿಂಗೈಕ್ಯರಾದರು.  ಇವರಿಗೆ ಆಗ 80 ವರ್ಷ ವಯಸ್ಸಾಗಿತ್ತು.
    ಶ್ರೀ  ಜಗದ್ಗುರು ರಾಜೇಶ್ವರ ಮಹಾಸ್ವಾಮಿಗಳ ಮೃತ್ಯುಪತ್ರದ ಪ್ರಕಾರ ಇವರ ಪ್ರಿಯಶಿಷ್ಯರೂ, ನ್ಯಾಯಶಾಸ್ತ್ರ ಪಂಡಿತರೂ, ಮೊದಲಿನಿಂದಲೂ ಸಂಸ್ಥಾನದ ಯೋಗಕ್ಷೇಮದ ಹೊಣೆ ಹೊತ್ತು ಸೇವೆ ಸಲ್ಲಿಸುತ್ತಿರುವವರೂ ಆದ ಮಹಾರಾಷ್ಟ್ರದ ಶ್ರೀ ಶಿವಲಿಂಗ ಸ್ವಾಮಿಗಳು  ಈ ಪೀಠದ 82ನೆಯ ಜಗದ್ಗುರುಗಳಾಗಿ ಅಧಿಕಾರವನ್ನು ವಹಿಸಿಕೊಂಡರು.  ಇವರು 1918ನೆಯ ಮಾಚರ್್ 23ರಂದು ಕಾಶೀಪೀಠಕ್ಕೆ ಉಳಿದ ನಾಲ್ಕು ಪೀಠದ ಆಚಾರ್ಯರನ್ನೂ ಬರಮಾಡಿಕೊಂಡು ಪಂಚಾಚಾರ್ಯ ಸಮ್ಮೇಳನದ ಸ್ಮಾರಕವಾಗಿ ಜಂಗಮವಾಡಿಮಠದಲ್ಲಿಯೇ ವಿಶ್ವಾರಾಧ್ಯ ಗುರುಕುಲವನ್ನು ಸ್ಥಾಪಿಸಿ ಮಹತ್ವಪೂರ್ಣವಾದ ಕಾರ್ಯವನ್ನು ಮಾಡಿದರು. 
    ಜಗದ್ಗುರು ಶಿವಲಿಂಗ ಮಹಾಸ್ವಾಮಿಗಳು 25 ವರ್ಷಗಳವರೆಗೆ ಪೀಠಾಧಿಪತಿಗಳಾಗಿದ್ದು, ಮಠದ ಎಲ್ಲ ವ್ಯವಹಾರಗಳನ್ನು ಜಾಗರೂಕವಾಗಿ ನೋಡಿಕೊಳ್ಳುತ್ತ ಬ್ಯಾಂಕಿನ ವ್ಯವಹಾರವನ್ನು ಸರಿಪಡಿಸಲು ಬಹಳಷ್ಟು ಶ್ರಮಿಸಿದರು.  ಆದರೂ ಶ್ರೀ ಜಗದ್ಗುರು ರಾಜೇಶ್ವರ ಮಹಾಸ್ವಾಮಿಗಳು ತಮ್ಮ ಕಾಲದಲ್ಲಿ ಬಡವರಿಗೆ, ಪಂಡಿತರಿಗೆ ದಾನವಾಗಿ ಕೊಡಲ್ಪಟ್ಟ ಬ್ಯಾಂಕಿನ ಠೇವಣಿ ಹಣವನ್ನು ಕೂಡಿಸುವುದು ಕಷ್ಟಸಾಧ್ಯವಾಯಿತು.  ಬ್ಯಾಂಕಿನ ಮೂಲಧನವು ಕರಗಿಹೋದ ವಿಷಯವು ಪ್ರಚಾರದಲ್ಲಿ ಬಾರದ್ದರಿಂದ ಬ್ಯಾಂಕಿನ ವ್ಯವಹಾರವು ಯಥಾವತ್ತಾಗಿಯೇ ಸಾಗಿತ್ತು. ಮುಂದೆ ಶಾ.ಶ. 1853 ಮಾಘಶುದ್ಧ ದ್ವಾದಶಿ ದಿ|| 19-2-1932ರಂದು ತಮ್ಮ  ಪ್ರೀತಿಯ ಶಿಷ್ಯರಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲಾ ತಾಸಗಾಂವದ ಹಿರೇಮಠದ ಶ್ರೀ ಪಂಚಾಕ್ಷರ ಶಿವಾಚಾರ್ಯರನ್ನು ಶ್ರೀ ವಿಶ್ವಾರಾಧ್ಯ ಸಿಂಹಾಸನದ 83ನೆಯ ಪೀಠಾಚಾರ್ಯರನ್ನಾಗಿ ಮಾಡಿ ಮುಂದೆ ಶಾ.ಶ. 1853 ಫಾಲ್ಗುಣ ಕೃಷ್ಣ 30 ದಿ|| 5-4-1932 ಮಂಗಳವಾರ ದಿವಸ ಲಿಂಗೈಕ್ಯರಾದರು. 
    ಶ್ರೀ ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾಧ್ಯಕ್ಷರಾದ ನಂತರ ಆಡಳಿತ ವರ್ಗದ ಅನವಧಾನದ ಮೂಲಕ ಶ್ರೀ ವಿಶ್ವಾರಾಧ್ಯ ಬ್ಯಾಂಕಿನ ಸ್ಥಿತಿಯು ಕೆಡುತ್ತ ಬಂದು ಸಂಪೂರ್ಣವಾಗಿ ದಿವಾಳಿ ತೆಗೆಯಿತು.  ಆಗ ಬ್ಯಾಂಕಿನಲ್ಲಿ ಠೇವಣಿ ಮಾಡಿದ ಬಹಳಷ್ಟು ಜನರು ಈ ಮಠದ ಸ್ಥಾವರ  ಹಾಗೂ ಜಂಗಮ ಆಸ್ತಿಯನ್ನು ಮಾರಾಟ ಮಾಡಿ ತಮ್ಮ  ಠೇವಣಿ ಹಣವನ್ನು ವಾಪಾಸ್ ಕೊಡಿಸಬೇಕೆಂದು ಬನಾರಸ್ ಸಬ್ಜಡ್ಜ್ ಕೋಟರ್ಿನಲ್ಲಿ ದಾವೆ ಹೂಡಿದರು.  ಆಗ ಶ್ರೀ ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು -  ಶ್ರೀ ಜಂಗಮವಾಡಿ ಮಠವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.  ಈ ಮಠಕ್ಕೆ ಹಿಂದೂ ಹಾಗೂ ಮುಸಲ್ಮಾನ ರಾಜಮಹಾರಾಜರು ಭೂದಾನ ಮಾಡಿ ಶಾಸನಗಳನ್ನು ಬರೆದುಕೊಟ್ಟಿರುತ್ತಾರೆ.  ದಾನವಾಗಿ ಬಂದ ಸಂಪತ್ತನ್ನು ಮಾರಲು ಬರುವುದಿಲ್ಲ.  ಆದರೆ ಮಠಕ್ಕೆ ಬಂದ ಆದಾಯದಲ್ಲಿ ಠೇವಣಿದಾರರ ಹಣವನ್ನು ವಾಪಾಸ್ ಮಾಡುತ್ತೇವೆ ಎಂಬುದಾಗಿ ತಿಳಿಸಿ ಠೇವಣಿದಾರರಲ್ಲಿ ಕೆಲವರನ್ನು ಪ್ರತಿವಾದಿಗಳನ್ನಾಗಿ ಮಾಡಿ 1932ರಲ್ಲಿ ಬನಾರಸ್ ಕೋಟರ್ಿನಲ್ಲಿ 12ನೆಯ ನಂಬರಿನ ದಾವೆಯನ್ನು ಮಾಡಿದರು.  ಆ ದಾವೆಯ ಜೊತೆಗೆ ಮಠದಲ್ಲಿಯ ದಾನಪತ್ರಗಳನ್ನೆಲ್ಲ ಹಾಜರುಪಡಿಸಿದರು.  ಇವುಗಳಲ್ಲಿ ಕಾಶೀ ಶ್ರೀ ಜಯನಂದದೇವನ (ಕ್ರಿ.ಶ. 574) ಶಾಸನವೇ ಅತೀ ಪ್ರಾಚೀನವಾದುದು.
    ಬನಾರಸ್ ಸಬ್ಜಡ್ಜ್ ಕೋಟರ್ಿನಲ್ಲಿ ಅಂದಿನ ಮೆ|| ಬಾಬು ವಿಂಧ್ಯಾವಾಸಿ ಪ್ರಸಾದರವರು ಶ್ರೀ ಜಗದ್ಗುರು ಪೀಠದ ಪ್ರಾಚೀನ ದಾನಶಾಸನಗಳನ್ನೆಲ್ಲ ಕೂಲಂಕಷವಾಗಿ ವಿಚಾರಮಾಡಿ ಕಾಶೀಪೀಠದ ಪ್ರಾಶಸ್ತ್ಯವನ್ನು ಬಹು ಚೆನ್ನಾಗಿ ತೀಮರ್ಾನಿಸಿದ್ದಾರೆ.
    ಕ್ರಿ.ಶ. 574ರಲ್ಲಿ ಜಯನಂದದೇವನು ಕಾಶಿಯ ರಾಜನಾಗಿರಲಿಲ್ಲ.  ಹೀಗಿರುವಾಗ ಈ ದಾನಪತ್ರವನ್ನು ಅವನು ಹೇಗೆ ಕೊಟ್ಟನು? ಎಂಬ ಪ್ರತಿವಾದಿಗಳ ಈ ವಾದವನ್ನು ಖಂಡಿಸುತ್ತ ಅವರು ಹೀಗೆ ನಿರ್ಣಯವನ್ನು ಕೊಟ್ಟಿರುತ್ತಾರೆ -
    ಖಿಡಿಣಜ, ಣಠಡಿಥಿ ಠತಿ ಣಚಿಣ ಚಿಛಠಣಣ ಣಜ 5ಣ ಛಿಜಟಿಣಣಡಿಥಿ ಣಜ ಖಚಿರಿಚಿ ಠಜಿ ಏಚಿಟಿಚಿಣರಿ ಚಿಜ ಠಛಣಚಿಟಿಜಜ ಟಚಿಣಜಡಿಥಿ ಠತಜಡಿ ಃಜಟಿಚಿಡಿಚಿ, ಛಣಣ ಣಜಡಿಜ  ಟಿಠಣಟಿರ ಣಠ ಠತಿ ಣಚಿಣ ಣಜ ಖಚಿರಿಚಿ ಠಜಿ ಃಜಟಿಚಿಡಿಚಿ ತಿಚಿ ಜಜಠಿಡಿತಜಜ ಠಜಿ ಚಿಟಟ  ಠಿಠತಿಜಡಿ.  ಘಚಿಣ ಚಿಠಿಠಿಜಚಿಡಿ ಣಠ ಚಿತಜ ಚಿಠಿಠಿಜಟಿಜಜ ತಿಚಿ ಣಚಿಣ ಖಚಿರಿಚಿ ಠಜಿ ಏಚಿಟಿಚಿಣರಿ ಛಜಛಿಚಿಟಜ ಣಜ ಣದಜಡಿಚಿಟಿ ಠಿಠತಿಜಡಿ, ಛಣಣ ಣಜ ಖಚಿರಿಚಿ ಠಜಿ ಏಚಿ ಛಿಠಟಿಣಟಿಣಜಜ ಣಟಿಜಜಡಿ ಟ.  ಊಜ ಛಿಠಟಿಣಟಿಣಜ ಣಠಿಣಠ ಣ ಜಚಿಥಿ.
    ಖಿಜ ಜಜಜಿಜಟಿಜಚಿಟಿಣ ಛಿಠಟಿಣಜಟಿಣಠಟಿ ಚಿ ಡಿಜರಚಿಡಿಜ ಣ ಜಠಛಿಣಟಜಟಿಣ ಣಜಡಿಜಜಿಠಡಿಜ ಜಿಚಿಟ.   ಠಟಜ ಣಚಿಣ ಇಥ.1  ಚಿ ರಜಟಿಣಟಿಜ ಜಠಛಿಣಟಜಟಿಣ ಚಿಟಿಜ ಇಥ. 2  ಣ ಛಿಠಠಿಥಿ ಠಟಿ ಛಿಠಠಿಠಿಜಡಿ ಠಿಟಚಿಣಜ.  ಖಿಡಿಣಜ ಚಿಛಠಣಣ ಣಜ ಛಿಠಠಿಠಿಜಡಿ ಠಿಟಚಿಣಜ ಣಜಠಡಿಥಿ, ಣಜಡಿಜ  ಣಜ ಜತಜಜಟಿಛಿಜ ಠಜಿ ಣಜ ಠಿಟಜಿಜಿ ಠಟಿಟಥಿ, ಛಣಣ ಣ ಣಚಿಟಿಜ ಣಟಿ-ಡಿಜಛಣಣಣಜಜ ಚಿಟಿಜ ಚಿಟಣಠಣರ ಣಜ ಜಜಜಿಜಟಿಜಚಿಟಿಣ ಚಿಜ ಚಿಟಠಿಟಜ ಠಠಿಠಿಠಡಿಣಣಟಿಣಥಿ ಣಠ ಠಿಡಿಠತಜ ಣಚಿಣ  ತಿಚಿ ಟಿಠಣ ರಜಟಿಣಟಿಜ, ಥಿಜಣ ಜಜ ಟಿಠಣ ಣಟಟಠಟಿ ಚಿಟಿಥಿ ಠಟಿಜ ಜಿಡಿಠಟ ಃಜಟಿಚಿಡಿಚಿ ಖಣಚಿಣಜ ಣಠ ಜಣಚಿಛಟ ಣ.  ಖಿಜ ಠಿಡಿಜಣಟಠಿಣಠಟಿ  ಟಿ ಜಿಚಿತಠಣಡಿ ಠಜಿ ರಜಟಿಣಟಿಜಟಿಜ.  
    ಇದೂ ಅಲ್ಲದೆ ಪ್ರಾಚೀನ ಇತಿಹಾಸ ಗ್ರಂಥವಾದ ಶ್ರೀ ಗದಾಧರಭಟ್ಟ ವಿರಚಿತ ವಿಜಯವಜ್ರ ವಿಲಾಸ ಎಂಬ ಪುಸ್ತಕದಲ್ಲಿ ಶ್ರೀ ಜಯನಂದದೇವನು ದೇವತಾಸಮಾನನಾಗಿ ಕಾಶಿಯ ಜನರು ಅವನನ್ನು ಸಾಕ್ಷಾತ್ ದೇವರೆಂದೇ ತಿಳಿಯುತ್ತಿದ್ದರು.  ಇವನ ತಂದೆಯ ಹೆಸರು ಅನಂತದೇವ.  ಶ್ರೀ ಜಯನಂದದೇವನಿಗೆ ಗೋವಿಂದದೇವನೆಂಬ ಮಗನಿದ್ದನು.  ಅವನು ಅತ್ಯಂತ ಶೂರನೂ, ವೀರನೂ ಆಗಿದ್ದನು.  (2/5-6) ಎನ್ನುವ ಪ್ರಮಾಣವನ್ನು ಉದಾಹರಿಸುತ್ತ ವ್ಯೋಮಕೇಶ ಎಂಬ ಹೆಸರಿನ ಅಲಹಾಬಾದಿನ ಪ್ರಸಿದ್ಧ ಲೇಖಕರೊಬ್ಬರು ಮುಂಬಾಯಿಯ ಭಾರತೀ ವಿದ್ಯಾಭವನದ ಹಿಂದೀ ಮಾಸಿಕವಾದ ನವನೀತ (ವರ್ಷ 33, ಅಂಕ 4, ಮೇ 1984, ಪುಟ 106-107) ಎಂಬ ಪತ್ರಿಕೆಯಲ್ಲಿ ಜಂಗಮವಾಡಿ ಮಠ ಕಾಶೀ ಮೇ ಸುರಕ್ಷಿತ ಚೌದಹ ಸೌ ವರ್ಷ ಪುರಾನಾ ಶಾಸನಾದೇಶ ಎಂಬ ಶೀಷರ್ಿಕೆಯ ಲೇಖನವನ್ನು ಬರೆದು, ಉಕ್ತ ಸಮಯದಲ್ಲಿ ಶ್ರೀ ಜಯನಂದದೇವನು ಕಾಶಿಯ ಮಾಂಡಲೀಕ ರಾಜನಾಗಿದ್ದದ್ದನ್ನು ಸಪ್ರಮಾಣವಾಗಿ ಸಿದ್ಧಪಡಿಸಿದ್ದಾರೆ.  ಇದರಿಂದ ಶ್ರೀ ಕಾಶೀ ಜಂಗಮವಾಡಿಮಠವು ಕ್ರಿ.ಶ. 6ನೆಯ ಶತಮಾನಕ್ಕಿಂತಲೂ ಅತಿ ಪ್ರಾಚೀನವಾದದ್ದೆಂದು ಐತಿಹಾಸಿಕ ದಾಖಲೆಯಿಂದ ಸಿದ್ಧವಾಗುತ್ತದೆ.
    ಅದರಂತೆ ಕ್ರಿ.ಶ. 1530ರಿಂದ 1668ರ ವರೆಗೆ ಹುಮಾಯೂನ್, ಅಕ್ಬರ್, ಜಹಾಂಗೀರ್, ಷಾಜಹಾನ್, ಔರಂಗಜೇಬ ಮತ್ತು ಮಹಮದ್ ಷಾ ಬಾದಶಹರ 17 (ಫಮರ್ಾನ್) ಭೂದಾನ ಪತ್ರಗಳಿವೆ.  ಎಲ್ಲ ದಾನಪತ್ರಗಳಲ್ಲಿಯ ಭೂಮಿಯೂ 300ರಿಂದ 480 ಬೀಘಾ ಆಗುವುದು.  ಒಂದು ಬೀಘಾ ಅಂದರೆ 3 ಎಕರೆ ಆಗುತ್ತದೆ.  ಇದರಿಂದ ಮೊಗಲ ಚಕ್ರವತರ್ಿಗಳಿಂದ ಶ್ರೀ ಜಂಗಮವಾಡಿಮಠಕ್ಕೆ ದೊರೆತ ಭೂಮಿಯು 1440 ಎಕರೆ ಆಗುತ್ತದೆ.  ಇದರ ಪೈಕಿ 450 ಎಕರೆ ಭೂಮಿಯು ಕಾಶಿಯಲ್ಲಿ ಮತ್ತು ಉಳಿದ ಭೂಮಿಗಳೆಲ್ಲ ಚುನಾರ (ಮಿಜರ್ಾಪುರ ಜಿಲ್ಲಾ) ಅಲಹಾಬಾದ್ ಹಾಗೂ ಗಯಾಗಳಲ್ಲಿ ಇದ್ದದ್ದು ತಿಳಿದುಬರುತ್ತದೆ.
    ಅಂದಿನ ಕಾಲದಲ್ಲಿ ಮಿಜರ್ಾಪುರ ಜಿಲ್ಲೆಯ ಚುನಾರ, ಕಾಶೀ, ಅಲಹಾಬಾದ್ ಮತ್ತು ಗಯಾಗಳಲ್ಲಿ ಜಂಗಮ ಸನ್ಯಾಸಿಗಳು (ಶಿವಯೋಗಿಗಳು) ಬಹಳ ಸಂಖ್ಯೆಯಲ್ಲಿ ಇರುತ್ತಿದ್ದರು.  ಅವರು ತ್ಯಾಗಿಗಳೂ, ತಪಸ್ವಿಗಳೂ ಆಗಿದ್ದರು.  ಇವರೆಲ್ಲ ಶ್ರೀ ಜಂಗಮವಾಡಿ ಮಠದ ಜಗದ್ಗುರುಗಳ ಶಿಷ್ಯರಾಗಿದ್ದರು.  ಇವರ ತಪಃಶಕ್ತಿಯಿಂದ ಪ್ರಭಾವಿತರಾದ ಮೊಗಲ ಬಾದಶಹರು ಈ ಜಂಗಮರ ಅನುಗ್ರಹವಿದ್ದರೆ ನಮ್ಮ ಶಾಸನವು ಅನೂಚಾನವಾಗಿ ಸಾಗುವುದೆಂಬ ಭಾವನೆಯುಳ್ಳವರಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಕಾಲದಲ್ಲಿ ಹೊಸಹೊಸ ಫಮರ್ಾನ್ಗಳನ್ನು ಹೊರಡಿಸಿ, ಅವರಿಗೆ ತಮ್ಮ ಪೂರ್ವದ ಚಕ್ರವತರ್ಿಗಳು ಕೊಟ್ಟ ಭೂಮಿಯನ್ನು ಸ್ಥಿರಪಡಿಸಿದ್ದು ಸದ್ಯ ಮಠದಲ್ಲಿ ಉಪಲಬ್ಧವಿರುವ ಫಮರ್ಾನ್ಗಳಿಂದ ತಿಳಿದುಬರುತ್ತದೆ.
    ಅದರಂತೆ ಶ್ರೀ ಜಂಗಮವಾಡಿಮಠದ ಅಂದಿನ ಪೀಠಾಧಿಪತಿಗಳೂ, ಮಹಾತಪಸ್ವಿಗಳೂ, ಶಿವಯೋಗಸಿದ್ಧರೂ ಆಗಿದ್ದರು.  ಅವರು ಆಕಾಶಮಾರ್ಗವಾಗಿ ನೇಪಾಳ, ಅಲಹಾಬಾದ್ ಮತ್ತು ಗಯಾ ಮುಂತಾದ ಸ್ಥಳಗಳಲ್ಲಿರುವ ತಮ್ಮ ಶಾಖಾಮಠಗಳಿಗೆ ಹೋಗಿಬರುತ್ತಿದ್ದರೆಂಬ ವಿಷಯವು ಬನಾರಸ್ ಗೆಜೆಟಿಯರಿನ 123ನೆಯ ಪುಟದಲ್ಲಿದೆ.
ಖಿಜ ಒಚಿಚಿಟಿಣ ಚಿಡಿಜ ಛಿಡಿಜಜಣಜಜ ತಿಣ ಠಿಠತಿಜಡಿ ಠಜಿ ಠಿಜಡಿಜಿಠಡಿಟಟಿರ ಟಡಿಚಿಛಿಟಜ ಚಿಟಿಜ ಣ ತಿಚಿ ಣಡಿಠಣರ ಣಜ ಜಠಿಟಚಿಥಿ ಠಜಿ ಣ ಠಿಠತಿಜಡಿ ಟಿ ಣಜ ಚಿಠಿಜ ಠಜಿ ಚಿ ರಿಠಣಡಿಟಿಜಥಿ ಣಡಿಠಣರ ಣಜ ಚಿಡಿ ಣಠ ಓಜಠಿಚಿಟ ಚಿಟಿಜ ಜಟಜತಿಜಡಿಜ ಛಜಜಿಠಡಿಜ ಂಣಡಿಚಿಟಿರಚಿದಜಛ ಣಚಿಣ ಟಚಿಣ ಛಣಟಜಟಿರ ತಿಚಿ ಠಿಡಿಜಜಡಿತಜಜ.
ಅದರಲ್ಲಿ                     ಈ ರೀತಿಯಾಗಿ ಹೇಳಲ್ಪಟ್ಟಿದೆ.  ಮೊಗಲರಲ್ಲಿ ಅತ್ಯಂತ ಕ್ರೂರನೂ, ಹಿಂದೂ ದ್ವೇಷಿಯೂ ಆದ ಔರಂಗಜೇಬನು ಕಾಶಿಯ ವಿಶ್ವನಾಥ ಮಂದಿರವನ್ನು ಧ್ವಂಸಮಾಡಿ ಇಲ್ಲಿಯ ಜಂಗಮವಾಡಿಮಠಕ್ಕೆ ಬಂದಾಗ, ಮಹಾದ್ವಾರದಲ್ಲಿಯೇ ವಿಶಾಲ ಶರೀರದ, ಕಪ್ಪು ಛಾಯೆಯ, ಕೆಂಪು ನೇತ್ರವುಳ್ಳ ಉಗ್ರವಾದ ಮೂತರ್ಿಯು ಅವನನ್ನು ತಡೆಯಿತಲ್ಲದೇ, ಅವನನ್ನು ನುಂಗಲು ಹೋಯಿತು.  ಆಗ ಭಯಗ್ರಸ್ತನಾದ ಔರಂಗಜೇಬನು ಶರಣಾಗತನಾಗಿ ಮಠಕ್ಕೆ ಭೂದಾನವನ್ನು ಮಾಡಿ ಶಾಸನವನ್ನು ಬರೆದುಕೊಟ್ಟಿದ್ದಾನೆ.  ಆ ಶಾಸನದಲ್ಲಿ ತನಗಾದ ಅನುಭವವನ್ನೆಲ್ಲ ಬರೆಯಿಸಿ ತಾನು ಹಸ್ತಾಕ್ಷರ ಮಾಡಿಕೊಟ್ಟಿದ್ದಾನೆ.  ಈ ಶಾಸನವೂ ಮಠದಲ್ಲಿ ಇದೆ. 
    ಮೊಗಲ ಚಕ್ರವತರ್ಿಗಳ ಎಲ್ಲ ದಾನಪತ್ರಗಳೂ ಶ್ರೀ ವಿಶ್ವಾರಾಧ್ಯ ಸಿಂಹಾಸನದ 71ರಿಂದ 77ನೆಯ ಪೀಠಾಧ್ಯಕ್ಷರ ಸಮಕ್ಷಮದಲ್ಲಿ ಕೊಡಲ್ಪಟ್ಟಿವೆ.  ಈ ಎಲ್ಲ ದಾನಪತ್ರಗಳೂ ಬನಾರಸ್ ಜಿಲ್ಲಾ ಕೋಟರ್ಿನಿಂದ ಅಲಹಾಬಾದಿನ ಹೈಕೋಟರ್ಿನವರೆಗೆ 1932ರಲ್ಲಿ ಪರೀಕ್ಷಿಸಲ್ಪಟ್ಟು ಅಧಿಕೃತವಾದವುಗಳೆಂದು ಸಿದ್ಧಮಾಡಲ್ಪಟ್ಟಿವೆ.
    ನೇಪಾಳ ದೇಶದ ಭಕ್ತಪುರ (ಭಾತಗಾಂವ)ದಲ್ಲಿಯೂ ಈ ಪೀಠದ ಒಂದು ಶಾಖಾಮಠವಿದೆ.  ಅಲ್ಲಿಯೂ ಜಂಗಮಮಠವೆಂದೇ ಕರೆಯುತ್ತಾರೆ.  ಈ ಮಠಕ್ಕೆ ವಿಕ್ರಮ ಸಂವತ್ಸರ 692 (ಕ್ರಿ.ಶ. 618) ಜ್ಯೇಷ್ಠ ಶುದ್ಧ ಅಷ್ಟಮಿಯಂದು ನೇಪಾಳದ ರಾಜನಾದ ಶ್ರೀ ವಿಶ್ವಮಲ್ಲನು ಈ ಪೀಠದ 51ನೆಯ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಮಲ್ಲಿಕಾಜರ್ುನ ಯತಿವರ್ಯರಿಗೆ ಭೂದಾನವನ್ನು ಮಾಡಿದ್ದಾನೆ.  ಕಲ್ಲಿನಲ್ಲಿ ಕೆತ್ತಿಸಿದ ಆ ದಾನಶಾಸನವು ನೇಪಾಳದ ಮಠದಲ್ಲಿ ಇಂದಿಗೂ ಇದೆ.  ಸದ್ಯ ಆ ಮಠದಲ್ಲಿ ಗೃಹಸ್ಥಾಶ್ರಮಿಗಳಾದ ಜಂಗಮರು ವಾಸಮಾಡುತ್ತಿದ್ದಾರೆ.  ಅವರೆಲ್ಲರ ಮನೆತನದ ಹೆಸರು ಜಂಗಮವೆಂದೇ ಇದೆ.  ಗೋವಿಂದಹರಿ ಜಂಗಮರ ಮಕ್ಕಳಾದ ಭರತಮಣಿ ಜಂಗಮ, ಪುಷ್ಕರಮಣಿ ಜಂಗಮ ಮುಂತಾದವರು ಸದ್ಯ ಅಲ್ಲಿ ವಾಸಿಸುತ್ತಿದ್ದಾರೆ.  ಅವರು ಆಗಾಗ್ಗೆ ಕಾಶಿಗೆ ಬಂದು ದೀಕ್ಷಾ, ಲಿಂಗಧಾರಣಾದಿ ಧಾಮರ್ಿಕ ಕ್ರಿಯೆಗಳನ್ನು ಹೊಂದಿ ಹೋಗುತ್ತಿರುತ್ತಾರೆ.
    ಅದರಂತೆ ಗಯಾ ಕ್ಷೇತ್ರದ ಶಿಸೋರಿಯಾ ಮೊಹಲ್ಲಾ (ಓಣಿ)ದಲ್ಲಿಯ ಜಂಗಮವಾಡಿ ಮಠವು 1932ರ ವರೆಗೂ ಈ ಪೀಠದ ಅಧೀನದಲ್ಲಿಯೇ ಇತ್ತು.  ಆದರೆ ನಮ್ಮವರು ಅಲ್ಲಿ ಯಾರೂ ವಾಸಮಾಡದ ಕಾರಣ ಅನ್ಯರ ಸ್ವಾಧೀನವಾಗಿದೆ.  ಆದರೆ ಅಲಹಾಬಾದಿನ ದಾರಾಗಂಜ್ ಮೊಹಲ್ಲಾದಲ್ಲಿಯ ಜಂಗಮವಾಡಿಮಠವು ಇಂದಿನವರೆಗೂ ಕಾಶೀ ಜಂಗಮವಾಡಿಮಠದ ಸ್ವಾಧೀನದಲ್ಲಿಯೇ ಇರುತ್ತದೆ.  ಯಾತ್ರಿಕರಿಗೆ ಇಳಿದುಕೊಳ್ಳುವ ಉತ್ತಮ ವ್ಯವಸ್ಥೆ ಇದೆ.  ಅಲ್ಲಿಯ ಪೂಜಾದಿಗಳಿಗಾಗಿ ಒಬ್ಬ ಜಂಗಮರನ್ನು ನೇಮಿಸಲಾಗಿದೆ.
    ಕಾಶೀ ಜಂಗಮವಾಡಿಮಠದ ಭವ್ಯ ಪರಂಪರೆಯಲ್ಲಿ ಇಲ್ಲಿಯವರೆಗೆ 84 ಜನ ಪೀಠಾಚಾರ್ಯರು ಆಗಿಹೋಗಿದ್ದಾರೆ.  ಈ ಪೀಠದ 79ನೆಯ ಜಗದ್ಗುರುಗಳಾದ ಹರೀಶ್ವರ ಶಿವಾಚಾರ್ಯ (ಸಿದ್ಧಲಿಂಗ) ಸ್ವಾಮಿಗಳು ಕ್ರಿ.ಶ. 1825ರಿಂದ 1879ರ ವರೆಗೆ ಅಂದರೆ 54 ವರ್ಷ ಪೀಠಾಧಿಪತಿಗಳಾಗಿದ್ದರು.
    ಮೈಸೂರಿನ ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯರ್ ಶ್ರೀ ಜಗದ್ಗುರು ಹರೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಬರಮಾಡಿಕೊಂಡು ಪ್ರತಿದಿವಸ ಕಾಶಿಯಲ್ಲಿ 12 ಜನ ಮಾಹೇಶ್ವರರಿಗೆ ಪ್ರಸಾದ ವ್ಯವಸ್ಥೆಯನ್ನು ನಿರಂತರ ಮಾಡಬೇಕು ಎಂದು ನಿವೇದಿಸಿಕೊಂಡು, ಪ್ರತಿವರ್ಷ 600 (ಆರುನೂರು) ರೂಪಾಯಿಗಳನ್ನು ತಮ್ಮ ವರ್ಧಂತಿಯ ದಿವಸ ಹುಂಡೀ ಮುಖಾಂತರವಾಗಿ ಕಳಿಸುವುದಾಗಿ ದಿ|| 10-7-1846ರಂದು ಒಂದು ತಾಮ್ರಪತ್ರವನ್ನು ಬರೆದುಕೊಟ್ಟಿದ್ದಾರೆ.  ಈ ದಾನದ ಪ್ರಕಾರ ಸಂಸ್ಥಾನಗಳ ವಿಲೀನೀಕರಣವಾಗುವವರೆಗೆ ಈ ವಷರ್ಾಶನವು ಜಂಗಮವಾಡಿಮಠಕ್ಕೆ ಬರುತ್ತಿತ್ತು.
    ಈ ಪೀಠ ಪರಂಪರೆಯಲ್ಲಿ ಆಗಿಹೋದ ಎಲ್ಲ ಮಹಾಸ್ವಾಮಿಗಳು ತಪಸ್ವಿಗಳೂ, ಶಿವಯೋಗಸಿದ್ಧರೂ ಆಗಿದ್ದರಲ್ಲದೇ ಮಹಾವಿದ್ವಾಂಸರೂ ಆಗಿದ್ದರು.  ಇವರಲ್ಲಿ ಈ ಪೀಠದ 84ನೆಯ ಪೀಠಾಧಿಪತಿಗಳಾಗಿದ್ದ ಶ್ರೀ ಜಗದ್ಗುರು ಮಲ್ಲಿಕಾಜರ್ುನ ಮಹಾಸ್ವಾಮಿ(ಶ್ರೀ ಜಗದ್ಗುರು ವೀರಭದ್ರ)ಗಳವರ ವಿದ್ವತ್ತು ಆಧುನಿಕ ವಿದ್ವಾಂಸರನ್ನು ಮಂತ್ರಮುಗ್ಧಗೊಳಿಸುವಂತಹುದು.
ಜನನ ಮತ್ತು ಬಾಲ್ಯ ಃ
    ಶ್ರೀ ಜಗದ್ಗುರು ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರೀ ಜಗದ್ಗುರು ರೇಣುಕಾಚಾರ್ಯರ ಅವತಾರ ಸ್ಥಾನವಾದ ಆಂಧ್ರಪ್ರದೇಶದ ಕೊಲನುಪಾಕ ಕ್ಷೇತ್ರ ಸಮೀಪದಲ್ಲಿರುವ ನಲಗೊಂಡ (ಜಿಲ್ಲಾ)ದ ವೀರಗೋತ್ರೀಯ ಚಿದಿರೆಮಠದ ಶ್ರೀ ವೇ|| ನಾಗಭೂಷಣ ಶಾಸ್ತ್ರಿಗಳು ಹಾಗೂ ಅವರ ಧರ್ಮಪತ್ನಿ ಸೌ|| ಶ್ಯಾಮಲಾಂಬ  ಎಂಬ ದಂಪತಿಗಳ ಪವಿತ್ರಗರ್ಭದಲ್ಲಿ ಜನಿಸಿದರು.  ಇವರ ತಂದೆಯವರಾದ ಶ್ರೀ ವೇ||ಪಂ|| ನಾಗಭೂಷಣ ಶಾಸ್ತ್ರಿಗಳು ವೈದಿಕ, ಜ್ಯೋತಿಷ್ಯ, ಆಯುವರ್ೇದ, ಮಂತ್ರಶಾಸ್ತ್ರ ಮುಂತಾದ ಶಾಸ್ತ್ರವಿದ್ಯೆಗಳಲ್ಲಿ ಪರಿಣತರಾಗಿದ್ದರು.
    ಈ ಚಿದಿರೆಮಠದ ಶ್ರೀ ವೇ|| ಶಿವಲೆಂಕಯ್ಯ, ಶ್ರೀ ವೇ|| ಪ್ರಾಣಲಿಂಗಯ್ಯ, ಶ್ರೀ ವೇ|| ಗಂಗಾಧರಯ್ಯ ಮುಂತಾದ ವ್ಯಕ್ತಿಗಳು ಮಹಾವಿಭೂತಿಗಳಾಗಿ ಹೋಗಿದ್ದಾರೆ.  ಇಂತಹ ಪ್ರಾಚೀನ ಪಂಡಿತ ಪರಂಪರೆಯನ್ನು ಹೊಂದಿದ ಚಿದಿರೆ ಮಠದ ಶ್ರೀ ವೇ||ಪಂ|| ನಾಗಭೂಷಣ ಶಾಸ್ತ್ರಿಗಳವರಿಗೆ 45ನೆಯ ವಯಸ್ಸಿನಲ್ಲಿ ಪುತ್ರರತ್ನನ ಜನನವಾಯಿತು.  ಈ ಶಿಶುವಿಗೆ ವೀರಭದ್ರಯ್ಯನೆಂಬ ನಾಮಕರಣವನ್ನು ಮಾಡಿದರು.
    ಚಿ|| ವೀರಭದ್ರಯ್ಯ ಅಥವಾ ವೀರಭದ್ರ ಶರ್ಮ ಇವರು ಪ್ರಾಥಮಿಕ ಶಿಕ್ಷಣವನ್ನು ಸ್ವಂತ ಗ್ರಾಮವಾದ ನಲಗೊಂಡಾದಲ್ಲಿಯೇ ಪ್ರಾರಂಭಿಸಿ ತಮ್ಮ 13ನೆಯ ವಯಸ್ಸಿನ ಸಮಯಕ್ಕೆ ತೆಲುಗು 9ನೆಯ ಇಯತ್ತೆಯವರೆಗೆ ಅಭ್ಯಾಸ ಮಾಡಿದರು.  ಆಗ ಇವರ ತಂದೆತಾಯಿಗಳ ದೇಹಾಂತವಾಗಿ ಬಹಳ ಕಠಿಣ ಪ್ರಸಂಗವು ಬಂದೊದಗಿದ ಕಾರಣ ಜೀವನೋಪಾಯಕ್ಕಾಗಿ ಅನಿವಾರ್ಯವಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಒಂದು ವರ್ಷ ಸೇವೆ ಸಲ್ಲಿಸಿದರು.
ವಿದ್ಯಾದಾಹ ಃ
    ಮುಂದೆ ವಿದ್ಯಾನಿಧಿಯಾಗಬಹುದಾದ ಇವರಿಗೆ ಈ ಅಲ್ಪಶಿಕ್ಷಣದಿಂದ ವಿದ್ಯಾದಾಹ ನೀಗಲಿಲ್ಲ.  ಅಂತೆಯೇ ಇವರು ಹೈದರಾಬಾದಿಗೆ ಹೋಗಿ ಅಲ್ಲಿ ಸಂಸ್ಕೃತದ ಪ್ರಾಥಮಿಕ ಅಧ್ಯಯನದ ಜೊತೆಗೆ ಉದರ್ು ಭಾಷೆಯನ್ನು ಸಹ ಅಭ್ಯಾಸ ಮಾಡಿದರು.  ಹೈದರಾಬಾದಿನಲ್ಲಿ ಒಂದು ವರ್ಷ ಅಧ್ಯಯನ ಮಾಡಿದ ನಂತರ ಹೆಚ್ಚಿನ ಸಂಸ್ಕೃತ ವ್ಯಾಸಂಗಕ್ಕಾಗಿ ನೀರಡಗುಂಭ ಮತ್ತು ರಾಮಗಡ್ಡೆಯ ಶ್ರೀ ಸಿದ್ಧಲಿಂಗ ಮಹಾರಾಜ ಸಂಸ್ಕೃತ ಪಾಠಶಾಲೆಗೆ ಸೇರಿದರು.  ಅಷ್ಟರ ತನಕವೂ ಇವರಿಗೆ ಕನ್ನಡ ಅಕ್ಷರಗಳ ಜ್ಞಾನವೂ ಇರಲಿಲ್ಲ.  ಆದರೆ ಆರು ತಿಂಗಳಲ್ಲಿ ಕನ್ನಡವನ್ನು ಚೆನ್ನಾಗಿ ಅಭ್ಯಾಸ ಮಾಡಿ ಸಂಸ್ಕೃತದ ಜೊತೆಗೆ ಕನ್ನಡ ಭಾಷೆಯನ್ನು ಸಹ ಕರಗತ ಮಾಡಿಕೊಂಡರು.  ಇನ್ನೂ ಹೆಚ್ಚಿನ ವ್ಯಾಸಂಗ ಮಾಡುವ ಉದ್ದೇಶದಿಂದ ಶ್ರೀ ವೀರಭದ್ರ ಶಮರ್ಾಜಿಯವರು ನಾರಾಯಣಪೇಟೆಯ ಸಂಸ್ಕೃತ ಪಾಠಶಾಲೆಗೆ ತೆರಳಿದರು.  ಅಲ್ಲಿ ಇವರು 3 ವರ್ಷ ಸತತ ಪರಿಶ್ರಮವನ್ನು ಮಾಡಿ ಪಂಚಕಾವ್ಯ ಲಘು ಕೌಮುದೀ, ಸಂಸ್ಕೃತ ನಾಟಕ, ಪಂಚಾಂಗ, ಗಣಿತ, ಪೌರೋಹಿತ್ಯ ಮುಂತಾದ ವಿಷಯಗಳಲ್ಲಿ ಪ್ರಖರ ಪಾಂಡಿತ್ಯವನ್ನು ಸಂಪಾದಿಸಿದರು. 
ಪ್ರಥಮ ಸಾರ್ವಜನಿಕ ಭಾಷಣ ಃ
    ಗುರುಮಠಕಲ್ಲದ ಶ್ರೀ ಶಾಂತವೀರ ಸ್ವಾಮಿಗಳ ಪ್ರಯತ್ನದಿಂದ ಇಟಗಿಯಲ್ಲಿ ನಿಜಾಮ್ ಪ್ರಾಂತದ ವೀರಶೈವ ಮಹಾಸಭೆಯು ನೆರವೇರಿತು.  ಈ ಸಭೆಯ ಅಧ್ಯಕ್ಷತೆಯನ್ನು  ಹೈದರಾಬಾದ್ ಹೈಕೋಟರ್್ ವಕೀಲರಾದ ಶ್ರೀಮಾನ್ ಬಾಪೂರಾವ್ ದೇಶಮುಖ್ ಇವರು ವಹಿಸಿದ್ದರು.  ಈ ಸಭೆಯಲ್ಲಿ ಶ್ರೀ ವೀರಭದ್ರ ಶರ್ಮರು ತಮ್ಮ ಅಸ್ಖಲಿತವಾದ ವಿದ್ವತ್ಪೂರ್ಣ ಭಾಷಣದಿಂದ ಸಭಿಕರನ್ನೆಲ್ಲ ಸಂತುಷ್ಟಗೊಳಿಸಿದರಲ್ಲದೇ ವಿದ್ವಾಂಸರ ಪ್ರಶಂಸೆಗೆ ಪಾತ್ರರಾದರು.  ಆ ಸಭೆಯಲ್ಲಿ ಇವರನ್ನು ಪ್ರಶಂಸಿಸಿದವರಲ್ಲಿ ಶ್ರೀ ಹಡರ್ೇಕರ್ ಮಂಜಪ್ಪನವರು ಹಾಗೂ ಧಾರವಾಡ ಮುರುಘಾಮಠದ ಶ್ರೀ ಮ.ನಿ.ಪ್ರ. ಮೃತ್ಯುಂಜಯ ಸ್ವಾಮಿಗಳೂ ಇದ್ದರು.  ಅಂದಿನ ಸಭೆಯಲ್ಲಿ ಪುರಸ್ಕಾರ ರೂಪವಾಗಿ ಜನರು ಇವರಿಗೆ 80 ರೂಪಾಯಿಗಳನ್ನು ಅಪರ್ಿಸಿದ್ದರು.
    ಸಭಾಧ್ಯಕ್ಷರಾದ ಶ್ರೀ ಬಾಪೂರಾವ್ ದೇಶಮುಖ್ ವಕೀಲ ಸಾಹೇಬ್ ಇವರ ಪಾಂಡಿತ್ಯದಿಂದ ಪ್ರಭಾವಿತರಾಗಿ ಶ್ರೀ ವೀರಭದ್ರ ಶಮರ್ಾಜಿಯವರು ಹೆಚ್ಚಿನ ವ್ಯಾಸಂಗಕ್ಕಾಗಿ ಕಾಶೀ ಅಥವಾ ಮತ್ತಿತರ ಯಾವುದೇ ಸ್ಥಳಕ್ಕೆ ಹೋಗಬಯಸಿದರೆ ಅವರು ಎಲ್ಲಿಯವರೆಗೆ ಅಧ್ಯಯನ ಮಾಡುವರೋ ಅಲ್ಲಿಯವರೆಗೆ ಅವರ ಸಂಪೂರ್ಣ ಖಚರ್ಿನ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂಬುದಾಗಿ ಸಭೆಯಲ್ಲಿ ಪ್ರಸ್ತುತಪಡಿಸಿದರು.
ಕಾಶೀಕ್ಷೇತ್ರಕ್ಕೆ ಆಗಮನ ಃ
    ಶ್ರೀ ಬಾಪೂರಾವ್ ದೇಶಮುಖರ ಉದಾರಾಶ್ರಯ ದೊರೆತಾಗ ಶ್ರೀ ವೀರಭದ್ರ ಶಮರ್ಾಜಿಯವರ ಹೃದಯ ಕುಸುಮವು ಅರಳಿ ಉತ್ಸಾಹಭರಿತವಾಯಿತು.  ಅದೇ ಸಮಯದಲ್ಲಿ ಪರಳಿ ವೈದ್ಯನಾಥ ಕ್ಷೇತ್ರದಲ್ಲಿ ವೀರಶೈವರಿಗೆ ವೇದಾಧಿಕಾರ ಉಂಟೋ ಇಲ್ಲವೋ ಎಂಬ ವಿಷಯದಲ್ಲಿ ಮಹಾನ್ ಕೋಲಾಹಲವೇ ಪ್ರಾರಂಭವಾಗಿತ್ತು.  ಶ್ರೀ ಶಮರ್ಾಜಿಯವರು ಆ ಪ್ರಸಂಗದಲ್ಲಿ ಅಲ್ಲಿಗೆ ಹೋಗಿ ವೇದಾಧ್ಯಯನ ಮಹತ್ವವನ್ನರಿತು ವೇದಾಧ್ಯಯನಕ್ಕಾಗಿ ವಿದ್ಯಾಕೇಂದ್ರವಾದ ಕಾಶೀಕ್ಷೇತ್ರಕ್ಕೆ ಬಂದು ಇಲ್ಲಿಯ ಜ್ಞಾನಪೀಠದ ಆಶ್ರಯದಲ್ಲಿದ್ದು ವೇದಾಧ್ಯಯನವನ್ನು ಪ್ರಾರಂಭಿಸಿದರು.  ಮೂರು ವರ್ಷದ ಸತತ ಪರಿಶ್ರಮದ ಪರಿಣಾಮವಾಗಿ ಕಲ್ಕತ್ತಾದ ಬಂಗಾಲ ಸಂಸ್ಕೃತ ಅಸೋಸಿಯೇಶನ್ನ ವೇದತೀರ್ಥ ಪರೀಕ್ಷೆಯನ್ನು 1930ರಲ್ಲಿ 80% ಅಂಕಗಳನ್ನು ಪಡೆದು ಕಾಲೇಜಿಗೇ ಪ್ರಥಮ ರ್ಯಾಂಕನ್ನು ಪಡೆದರು.  ಈ ವೇದತೀರ್ಥ ಪರೀಕ್ಷೆಯಲ್ಲಿ ಪಾಸಾದೊಡನೆ ಶ್ರೀಗಳು ಪರಳಿ ಕ್ಷೇತ್ರಕ್ಕೆ ಬಂದು ತಾವೇ ಸ್ವತಃ ವೈಧ್ಯನಾಥನಿಗೆ ಮಹಾ ರುದ್ರಾಭಿಷೇಕವನ್ನು ಮಾಡಿ ವೀರಶೈವ ವೇದಾಧಿಕಾರವನ್ನು ಸ್ಥಿರಗೊಳಿಸಿದರು.
    ಭಾರತದ ಸಂಸ್ಕೃತಿಯು  ಅತ್ಯಂತ ಪ್ರಾಚೀನವಾದದ್ದಲ್ಲದೇ ಲೋಕಕಲ್ಯಾಣಕಾರಿ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.  ಈ ಸಂಸ್ಕೃತಿಯು ವೇದ, ಆಗಮ, ಪುರಾಣ, ಉಪನಿಷತ್, ಸಾಂಖ್ಯ, ಯೋಗ, ಮೀಮಾಂಸಾ, ನ್ಯಾಯ, ವೈಶೇಷಿಕ, ಜ್ಯೋತಿಷ್ಯ, ವ್ಯಾಕರಣಾದಿ ಶಾಸ್ತ್ರಗಳಲ್ಲಿ ನಿಹಿತವಾಗಿದೆ.  ಆದ್ದರಿಂದ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಬೇಕಾದರೆ ಈ ಶಾಸ್ತ್ರಗಳ ರಕ್ಷಣೆಯು ಅತ್ಯವಶ್ಯಕವಾದದ್ದು.  ಈ ಮರ್ಮವನ್ನರಿತ ಶ್ರೀಗಳು ಕಾಶಿಯಲ್ಲಿ 10 ವರ್ಷ ಪರ್ಯಂತವಾಗಿ ಸತತ ಪರಿಶ್ರಮವನ್ನು ಮಾಡಿ, 1931ರಲ್ಲಿ ಕಾವ್ಯತೀರ್ಥ, 1934ರಲ್ಲಿ ಸ್ಮೃತಿತೀರ್ಥ, 1935ರಲ್ಲಿ ದರ್ಶನ ತೀರ್ಥ ಮುಂತಾದ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದರು.  ದಕ್ಷಿಣ ಭಾರತದ ಯಾವ ವಿದ್ವಾಂಸನೂ ಇಷ್ಟು ತೀರ್ಥ ಪರೀಕ್ಷೆಗಳಲ್ಲಿ ಇದುವರೆಗೂ ಪಾಸಾಗಿಲ್ಲ.  ಇದೂ ಅಲ್ಲದೆ ಮಥುರಾವ್ರಜ ಮಂಡಲದ ಸಾಹಿತ್ಯ ವಿಶಾರದ ಮತ್ತು ಧಮರ್ಾಚಾರ್ಯ ಪರೀಕ್ಷೆಗಳಲ್ಲಿಯೂ ಇವರು ಪಾಸಾದರು.  ಹೀಗೆ ವೇದವೇದಾಂತಾದಿ ಸಕಲ ಶಾಸ್ತ್ರಗಳಲ್ಲೂ ಅನುಪಮ ವಿದ್ವಾಂಸರಾಗಿ ಮೆರೆದರು.
ಕಾಶೀ ವಿದ್ವಾಂಸರಿಂದ ಪ್ರಶಸ್ತಿ ಪ್ರಾಪ್ತಿ ಃ
    ಕಾಶಿಯ ಅತಿ  ಪ್ರಾಚೀನವಾದ ಸಂಸ್ಕೃತ ಸಾಹಿತ್ಯ ಸಮಾಜ ಎಂಬ ಸಂಸ್ಥೆಯು ಪ್ರತಿವರ್ಷ ವಾಷರ್ಿಕೋತ್ಸವವನ್ನು ನೆರವೇರಿಸಿ ಆ ವರ್ಷದ ಸುಯೋಗ್ಯ ವಿದ್ವಾಂಸರಿಗೆ ಪ್ರಶಸ್ತಿ ಪತ್ರಗಳನ್ನು ಕೊಡುವ ಪದ್ಧತಿಯುಂಟು.  ಅದೇ ಪ್ರಕಾರ 1935ನೆಯ ಮಾಚರ್್ 2ರಂದು ಈ ಸಂಸ್ಥೆಯ 10ನೆಯ ವಾಷರ್ಿಕೋತ್ಸವವು ಮಹಾಮಹೋಪಾಧ್ಯಾಯ ಶ್ರೀ ಪಂ| ಮುಕುಂದಝಾ ಭಕ್ಷಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.  ಅಂದಿನ ಸಭೆಯಲ್ಲಿ ಪಂ|| ವೀರಭದ್ರ ಶರ್ಮರವರ ಅಪಾರ ಪಾಂಡಿತ್ಯವನ್ನು ಮೆಚ್ಚಿಕೊಂಡ ಸಭೆಯು ಇವರಿಗೆ ವಿದ್ಯಾರತ್ನ ಎಂಬ ಪದವಿಯನ್ನು ಕೊಟ್ಟು ಸತ್ಕರಿಸಿತು.  ಇದು ಸಮಸ್ತ ವೀರಶೈವ ಸಮಾಜಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ.  ಇದೇ ಪ್ರಕಾರ ಕಾಶೀ ಜ್ಞಾನಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಸಂಸ್ಥಾನದ ಪರವಾಗಿ  ಇವರಿಗೆ ವಿದ್ಯಾನಿಧಿ ಎಂಬ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿದರು.
ಬಹುಭಾಷಾ ಪಾಂಡಿತ್ಯ ಃ
    ಶ್ರೀ ವೀರಭದ್ರ ಶಮರ್ಾಜಿಯವರ ಬುದ್ಧಿ ಕುಶಲತೆಯು ಅಗಾಧವಾಗಿತ್ತು.  ಇವರು ಸಂಸ್ಕೃತ, ಪ್ರಾಕೃತ, ಪಾಲೀ, ತೆಲುಗು, ಕನ್ನಡ, ಹಿಂದೀ, ಮರಾಠಿ ಭಾಷೆಗಳಲ್ಲಿ ಸಂಪೂರ್ಣ ಪ್ರಭುತ್ವವನ್ನು ಸಂಪಾದಿಸಿದ್ದರಲ್ಲದೇ, ಉದರ್ು, ಬಂಗಾಲಿ, ತಮಿಳು, ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ತಕ್ಕಮಟ್ಟಿಗೆ ಜ್ಞಾನವನ್ನು ಸಂಪಾದಿಸಿದ್ದರು.
    ಇವರ ಬಹುಭಾಷಾ ಪಾಂಡಿತ್ಯದ ಪ್ರತೀಕಗಳಾಗಿರುವ ಲಿಂಗಧಾರಣ ಸಿದ್ಧಾಂತ, ಸಂಸ್ಕೃತ ವಾಙ್ಮಯ ಪರಿಚಯ, ಮಾಲವಿಕಾಗ್ನಿಮಿತ್ರ (ಪ್ರಥಮಾಷ್ಟಕ), ಶಿವಪಂಚಸ್ತವ, ಶ್ರೀ ರೇಣುಕ ವಿಜಯ ಪುರಾಣ ಮುಂತಾದ ತೆಲುಗು ಭಾಷೆಯ ಗ್ರಂಥಗಳು; ಆಂಧ್ರ ವೀರಶೈವರು, ಮೀಮಾಂಸಾ ಪರಿಭಾಷಾ, ತರ್ಕಸಂಗ್ರಹ ಮುಂತಾದ ಕನ್ನಡ ಗ್ರಂಥಗಳು; ಅದರಂತೆ ಕಾಶೀ ಪೀಠಾಚೆ ಪ್ರಾಚೀನತ್ವ ಮುಂತಾದ ಮರಾಠೀ ಗ್ರಂಥಗಳು ಇಂದಿಗೂ ಜೀವಂತ ಸಾಕ್ಷಿಗಳಾಗಿವೆ.
    ಸಮಾಜದಲ್ಲಿಯ ದೂಷಿತ ಪದ್ಧತಿಗಳನ್ನು ದೂರಮಾಡುವುದಕ್ಕಾಗಿ ಜಗದ್ಗುರುಗಳು ಸಮಾಜ ಕಾ ಅಗ್ನಿಕುಂಡ, ಲಗ್ನ ಯಾ ಭಗ್ನ, ವರಶುಲ್ಕ ವ್ಯಾಘ್ರ, ರುಪಯೋಂಕಾ ರೂಪ ಮುಂತಾದ ಸಣ್ಣ ಸಣ್ಣ ಕಥೆಗಳನ್ನು ಬರೆದು ಪ್ರಕಾಶಪಡಿಸಿದ್ದರು.  ಅವೆಲ್ಲವುಗಳು ಅಂದಿನ ಸಮಾಜದ ಹಿತಚಿಂತಕರಿಂದ ಆದರಿಸಲ್ಪಟ್ಟಿರುವುದಲ್ಲದೇ ಇಂದಿಗೂ ಆದರ್ಶಗಳಾಗಿವೆ. 
ಪುರಾತತ್ತ್ವ ಪಾಂಡಿತ್ಯ ಃ
    ಶ್ರೀ ಚಿದಿರೇಮಠದ ವೀರಭದ್ರ ಶರ್ಮರು ಕೇವಲ ಬಹುಭಾಷಾ ವಿಶಾರದರಷ್ಟೇ ಅಲ್ಲ, ಬಹುಲಿಪಿಗಳ ಜ್ಞಾತೃಗಳೂ ಆಗಿದ್ದರು.  ಭಾರತ ದೇಶದ ಸುಮಾರು 40 ತರಹದ ಪ್ರಾಚೀನ ಲಿಪಿಗಳನ್ನು ಬಲ್ಲವರಾಗಿದ್ದ ಇವರು ಪುರಾತತ್ತ್ವ ವಿಭಾಗದಲ್ಲಿಯೂ ಹೆಸರುಗಳಿಸಿದ್ದರು.  ಪುರಾತನ ದಾಖಲೆಗಳ ಸಂಶೋಧನೆಗಾಗಿ ಉತ್ತರ ಪ್ರದೇಶದ ಗಢವಾಲ ವಿಭಾಗದಲ್ಲಿ ಸಂಚರಿಸುವಾಗ ಉತ್ತರ ಕಾಶಿಯ ಶಕ್ತಿಸ್ತಂಭದ ಮೇಲೆ ಕೆತ್ತಲ್ಪಟ್ಟ ಒಂದು ಪ್ರಾಚೀನ ಲಿಪಿಯನ್ನು ಇವರು ಓದಿ ಅದರ ಅಭಿಪ್ರಾಯವನ್ನು ಬಿಹಾರ ಪ್ರದೇಶದ ಪುರಾತತ್ವಾಂಕ ಎಂಬ ಹಿಂದೀ ಪತ್ರಿಕೆಯಲ್ಲಿ ಪ್ರಸ್ತುತಪಡಿಸಿದ್ದರು.  ಇವರ ಈ ಲೇಖನದಿಂದ ಅನೇಕ ಇತಿಹಾಸತಜ್ಞರು ಇವರ ಪಾಂಡಿತ್ಯವನ್ನು ಪ್ರಶಂಸಿಸಿದರಲ್ಲದೇ, ವಿದೇಶದ ರಾಯಲ್ ಏಶ್ಯಾಟಿಕ್ ಸೊಸೈಟಿಯವರು ಇವರನ್ನು ಕೊಂಡಾಡಿದ್ದಾರೆ.  1933ರವರೆಗೆ ಈ ಶಿಲಾಲೇಖನದ ಅರ್ಥ ಸರಿಯಾಗಿ ನಿರ್ಣಯವಾಗಿರಲಿಲ್ಲ.
    ಇಂತಹ ಅಗಾಧವಾದ ಲಿಪಿಜ್ಞಾನವನ್ನು ಸಂಪಾದಿಸಿದ ಇವರು ವಿಜಾಯಾದಿತ್ಯನ ಅಮ್ಮಣಗಿ ತಾಮ್ರಶಾಸನದ ಮೇಲೆ ಒಂದು ಲೇಖನವನ್ನು ಬರೆದು ಸುಪ್ರಸಿದ್ಧ ಇತಿಹಾಸತಜ್ಞರಾದ ಮ.ಮ. ರಾವ್ ಬಹದ್ದೂರ್, ಪಂ|| ಗೌರೀಶಂಕರ ಹೀರಾಚಂದ ಓಝಾ ಇವರ ಅಭಿನಂದನ ಗ್ರಂಥದಲ್ಲಿ ವಿಕ್ರಮ ಸಂವತ್ಸರ 1991(ಕ್ರಿ.ಶ. 1937)ರಲ್ಲಿ ಪ್ರಯಾಗ ಕ್ಷೇತ್ರದಿಂದ ಪ್ರಕಾಶಪಡಿಸಿದ್ದಾರೆ.  ಇದರಿಂದ ಭಾರತೀಯ ಇತಿಹಾಸದಲ್ಲಿಯೇ ಹೊಸ ಬೆಳಕು ಮೂಡಿದಂತಾಗಿದೆ.
    ಇವರು ಬರೆದ ಕಲಿಕಾಲ ಪರಿಚಯ ಎಂಬ ಕಾಲಮಾಪನದ ಪುಸ್ತಕವು ಇತಿಹಾಸಕಾರರಿಗೆ ಬಹಳ ಉಪಯುಕ್ತವಾಗಿದೆ.  ಈ ಪುಸ್ತಕದಲ್ಲಿ ಕಲಿಯುಗದ ಪ್ರಾರಂಭದಿಂದ 1986ನೆಯ ಇಸವಿಯವರೆಗೆ ಕಾಲಚಕ್ರದ ಪರಿಚಯವನ್ನು ಬರೆದು ಇಟ್ಟಿದ್ದಾರೆ.  ಇನ್ನು ಮುಂದಿನವರು ಅದನ್ನು ಮುಂದುವರೆಸುವ ಮಾರ್ಗದರ್ಶನವನ್ನು ಸಹ ಮಾಡಿಹೋಗಿದ್ದಾರೆ.  ಇದೊಂದು ಇವರ ವಿನೂತನವಾದ ಕೊಡುಗೆಯಾಗಿದೆ.
    ಇವರು ಸಂಗ್ರಹಿಸಿದ ಶಿಲಾಶಾಸನ, ತಾಮ್ರಶಾಸನ ಹಾಗೂ ಮತ್ತಿತರ ಪುರಾತತ್ವ ಸಾಮಗ್ರಿಗಳು ಜಗತ್ತಿನ ಇತಿಹಾಸಕ್ಕಾಗಿ ಅತ್ಯಂತ ಮಹತ್ವಪೂರ್ಣಗಳಾಗಿವೆ.
ಕಾಶೀ ವೀರಶೈವ ವಿದ್ವತ್ ಸಂಘದ ಸ್ಥಾಪನೆ ಃ
    ಕಾಶಿಯಲ್ಲಿ ಅಧ್ಯಯನ ಮಾಡುತ್ತಿದ್ದ ಚಿದಿರೇಮಠದ ಶ್ರೀ ವೀರಭದ್ರ ಶರ್ಮರು ಕೇವಲ ಏಕಾಂಗಿಯಾಗಿರದೇ ಸಂಘಜೀವಿಯಾಗಿರಲೂ ಶ್ರಮಿಸಿದರು.  ಅಂದಿನ ಎಲ್ಲ ವಿದ್ಯಾಥರ್ಿಗಳನ್ನು ಒಂದುಗೂಡಿಸಿ 1934ರಲ್ಲಿ ಕಾಶೀ ವೀರಶೈವ ವಿದ್ವತ್ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮುಖಾಂತರ ಸಂಸ್ಕೃತ, ಹಿಂದೀ ಮುಂತಾದ ಭಾಷೆಗಳಲ್ಲಿ ಭಾಷಣ ಹಾಗೂ ಲೇಖನ ಕಲೆಗಳು ವಿದ್ಯಾಥರ್ಿಗಳಲ್ಲಿ ಜಾಗೃತವಾಗುವ ಅನೇಕ ಯೋಜನೆಗಳನ್ನು ಮಾಡಿದರು.  ಅವರು ಸ್ಥಾಪಿಸಿದ ಈ ಸಂಘವು ಇಂದಿಗೂ ಅನೇಕ ಕಾರ್ಯಕಲಾಪಗಳನ್ನು ನಡೆಸುತ್ತಾ ಅವರು ತೋರಿದ ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದೆ.
ಧರ್ಮಪ್ರಚಾರಕ್ಕಾಗಿ ಯಾತ್ರೆ ಃ
    ಕ್ಷಣಶಃ ಕ್ಷಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್ ಎಂಬ ಉಕ್ತಿಗನುಸಾರವಾಗಿ ಪಂ|| ವೀರಭದ್ರ ಶಮರ್ಾಜಿಯವರು ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯದೆ ಕಾಶಿಯಲ್ಲಿ 10 ವರ್ಷ ಅಖಂಡ ಪರಿಶ್ರಮವನ್ನು ಮಾಡಿ, ಅಪಾರ ವಿದ್ಯಾ ಸಂಪಾದನೆಯನ್ನು ಮಾಡಿ, ಆ ಜ್ಞಾನಪ್ರಭೆಯನ್ನು ಸಮಾಜದಲ್ಲಿ ಹರಡುವುದಕ್ಕಾಗಿ ಸೊಲ್ಲಾಪುರ, ದರ್ಶನಾಳ, ಬಾಸರ್ಿ, ಪಂಢರಪುರ ಮುಂತಾದ ಅನೇಕ ವೀರಶೈವ ಸಭೆಗಳಲ್ಲಿ ಜನಾಮಂತ್ರಣದ ಮೇರೆಗೆ ಹೋಗಿ ಪ್ರಭಾವಶಾಲೀ ಉಪನ್ಯಾಸಗಳನ್ನು ಮಾಡಿ, ಅನೇಕ ಸನ್ಮಾನ ಪತ್ರಗಳನ್ನು ಪಡೆದು ಕೀತರ್ಿಶಾಲಿಗಳಾದರು.  ಬಾಲತಪಸ್ವಿ, ಚೆನ್ನವೀರ ಶಿವಾಚಾರ್ಯ ಸ್ವಾಮಿಗಳು, ಬೃಹನ್ಮಠ ಹೊಟಗಿ ಇವರು ಪೂಜ್ಯ ಶಮರ್ಾಜಿಯವರನ್ನು ಅನೇಕ ಗ್ರಾಮೀಣ ಸಭೆಗಳಲ್ಲಿಯೂ ಬರಮಾಡಿಕೊಂಡು ಸಾಮಾನ್ಯ ಜನರಿಗೂ ಇವರ ವಿದ್ವತ್ತಿನ ಲಾಭವಾಗುವಂತೆ ಮಾಡಿದರು.
ಯಾದಗಿರಿ ಸಂಸ್ಕೃತ ಕಾಲೇಜಿನ ಪ್ರಾಚಾರ್ಯರು ಃ
    ಪಂ|| ವೀರಭದ್ರ ಶಮರ್ಾಜಿಯವರ ಪಾಂಡಿತ್ಯ ಪ್ರತಿಭೆಯನ್ನು ಬಹುಮುಖವಾಗಿ ಶ್ರವಣ ಮಾಡಿದ ಯಾದಗಿರಿ ಶಂಕರ ಸಂಸ್ಕೃತ ಕಾಲೇಜಿನ ಕಮಿಟಿಯವರು 1935ರಲ್ಲಿ ಇವರನ್ನು ತಮ್ಮ ಕಾಲೇಜಿನ ಪ್ರಾಚಾರ್ಯರಾಗಲು ಕೇಳಿಕೊಂಡಾಗ ವಿದ್ಯಾದಾನದ ತೀವ್ರ ಅಭಿಲಾಷೆಯುಳ್ಳ ಪೂಜ್ಯರು ಅವರ ಕರೆಗೆ ಓಗೊಟ್ಟು, ಸುಮಾರು ಒಂದು ವರ್ಷ ಪರ್ಯಂತವಾಗಿ ಪ್ರಾಚಾರ್ಯರಾಗಿದ್ದು ಅಲ್ಲಿಯ ಆಂತರಿಕ ಕಲಹದಿಂದ ಕಾಲೇಜಿನ ವಾತಾವರಣವು ದೂಷಿತಗೊಂಡಾಗ ಆ ಸ್ಥಾನಕ್ಕೆ ತ್ಯಾಗಪತ್ರವನ್ನು ಕೊಟ್ಟು ಸಿಕಂದರಾಬಾದಿಗೆ ಬಂದರು.
ಸಿಂಕದರಾಬಾದಿನಲ್ಲಿ ವೀರಶೈವ ಗುರುಕುಲ ಸ್ಥಾಪನೆ ಃ
    ಯಾದಗಿರಿ ಶಂಕರ ಸಂಸ್ಕೃತ ಕಾಲೇಜಿನಲ್ಲಿ ವಿದ್ಯಾದಾನ ಮಾಡಿದ ಪರಿಣಾಮವಾಗಿ ಇವರು ಪಂ|| ವೀರಭದ್ರ ಶಾಸ್ತ್ರಿ ಎಂಬುದಾಗಿ ಕರೆಯಲ್ಪಟ್ಟರು.  ತಮ್ಮದೇ ಆದ ಒಂದು ಸ್ವತಂತ್ರವಾದ ಸ್ಥಾನದಲ್ಲಿ ಪವಿತ್ರ ಗುರುಕುಲವನ್ನು ಸಂಸ್ಥಾಪಿಸಿ ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವ ಉದ್ದೇಶದಿಂದ ಯಾದಗಿರಿಯನ್ನು ಬಿಟ್ಟು ಸಿಕಂದರಾಬಾದಿಗೆ ಬಂದಾಗ ಪೂಜ್ಯ ಶಾಸ್ತ್ರಿಗಳವರ ಪರಮ ಭಕ್ತರಾದ ಶ್ರೀಮಂತ ಮಠದ ನಾಗಯ್ಯನವರು ಪೂಜ್ಯರ ಅಭಿಲಾಷೆಯ ಪೂತರ್ಿಗಾಗಿ 21,000 ರೂಪಾಯಿ ಬೆಲೆಬಾಳುವ ಭವನವನ್ನೇ ಇವರಿಗೆ ದಾನಮಾಡಿದರು.
    ಪೂಜ್ಯ ಶಾಸ್ತ್ರಿಗಳವರು 1936ರ ಸೆಪ್ಟಂಬರ್ ತಿಂಗಳಲ್ಲಿ ಆ ಸ್ಥಾನದಲ್ಲಿ ವೀರಶೈವ ಗುರುಕುಲವನ್ನು ಸ್ಥಾಪಿಸಿ ತಾವೇ ಆ ಗುರುಕುಲದ ಪ್ರಾಧ್ಯಾಪಕರಾಗಿ ವಿದ್ಯಾಥರ್ಿಗಳಿಗೆ ಊಟ ಮತ್ತು ವಸತಿಯ ಜೊತೆಗೆ ವಿದ್ಯಾದಾನವನ್ನೂ ನೀಡಿದರು.
ಗ್ರಂಥಾಲಯ ಹಾಗೂ ಪತ್ರಿಕೆ ಃ
    ಪೂಜ್ಯ ಶಾಸ್ತ್ರಿಗಳವರು ಸಂಶೋಧನೆಯ ಮನೋವೃತ್ತಿಯವರಾಗಿದ್ದರಿಂದ ತಮ್ಮ ವಿದ್ಯಾಥರ್ಿ ಅವಸ್ಥೆಯಲ್ಲಿಯೇ ದುರ್ಲಭವಾದ ಅನೇಕ ಪ್ರಾಚೀನ ಶಾಸ್ತ್ರೀಯ ಗ್ರಂಥಗಳನ್ನು ಸಂಗ್ರಹಿಸಿದ್ದರಿಂದ ಅವುಗಳಿಗಾಗಿ ಸಿಕಂದರಾಬಾದಿನಲ್ಲಿಯೇ ಶೈವಭಾರತೀ ಭವನ ಎಂಬ ಗ್ರಂಥಾಲಯವನ್ನು (ನಂ. 4268 ಸಜನ್ಲಾಲ್ ಸ್ಟ್ರೀಟ್) ಸ್ಥಾಪಿಸಿದರು.  ಈ ಗ್ರಂಥಾಲಯದಲ್ಲಿ ಭಾರತದ ಎಲ್ಲ ಧರ್ಮ-ದರ್ಶನಗಳ ಸಂಸ್ಕೃತ, ಹಿಂದೀ, ಮರಾಠಿ, ಇಂಗ್ಲೀಷ್, ತಮಿಳು, ಉದರ್ು ಮತ್ತು ಬಂಗಾಳಿ ಭಾಷೆಗಳ ಮುದ್ರಿತ ಮತ್ತು ಹಸ್ತಪ್ರತಿಗಳ ಸಹಸ್ರಾರು ಗ್ರಂಥಗಳು ಸಂಗ್ರಹಿಸಲ್ಪಟ್ಟವು.  ಅಂದಿನ ನಿಜಾಮ್ ಪ್ರಾಂತದಲ್ಲಿಯೇ ಈ ಗ್ರಂಥಾಲಯವು ಪ್ರಮುಖವೆಂದು ಪರಿಗಣಿಸಲ್ಪಟ್ಟಿತ್ತು.
    ಒಂದು ಸಂಸ್ಥೆಯಿಂದ ಸಂಗ್ರಹಿಸಲಸಾಧ್ಯವಾದ ಇಷ್ಟು ಗ್ರಂಥಗಳನ್ನು ಪೂಜ್ಯ ಶಾಸ್ತ್ರಿಗಳು ವ್ಯಕ್ತಿಗತವಾಗಿ ಸಂಗ್ರಹಿಸಿದ್ದನ್ನು ನೋಡಿ ಇವರು ಸಾಮಾನ್ಯ ವ್ಯಕ್ತಿಗಳಲ್ಲವೆಂಬುದು ಜನಮನದಲ್ಲಿ ಮೂಡತೊಡಗಿತು.
    ಮನೆಮನೆಗೆ ತತ್ತ ್ವಪ್ರಚಾರ ಮಾಡಲು ಪುಸ್ತಕಗಳಿಗಿಂತ ಪತ್ರಿಕೆಗಳ ಪಾತ್ರವು ಮಹತ್ವಪೂರ್ಣವಾದದ್ದೆಂದರಿತ ಪೂಜ್ಯರು ತೆಲುಗು ಭಾಷೆಯಲ್ಲಿ ವಿಭೂತಿ ಎಂಬ ಪತ್ರಿಕೆಯನ್ನು ತಮ್ಮ ಸಂಪಾದಕತ್ವದಲ್ಲಿಯೇ ಪ್ರಾರಂಭಿಸಿದರು.  ಈ ಪತ್ರಿಕಾ ಪ್ರಕಟಣೆಯಿಂದ ಇವರ ಜ್ಞಾನಪ್ರಭೆಯು ಆಂಧ್ರ ಪ್ರದೇಶದ ತುಂಬೆಲ್ಲ ಹರಡಿತು.
ಕವಿತಾ ಚಾತುರ್ಯ ಃ
    ಪೂಜ್ಯರಿಗೆ ಕವಿತಾ ರಚನಾಶಕ್ತಿಯು ಬಾಲ್ಯದಲ್ಲಿಯೇ ಪ್ರಾಪ್ತವಾದ ಕಾರಣ ಇವರಿಗೆ  ಬಾಲಕವಿ ಎಂಬ ಬಿರುದು ಪ್ರಾಪ್ತವಾಗಿತ್ತು.  ಈ ಸಾಮಥ್ರ್ಯವನ್ನು ಪೂಜ್ಯರು ಹಾಗೆಯೇ ಬೆಳೆಸುತ್ತಾ ಹೋದರು.  ಇದರ ಪರಿಣಾಮವಾಗಿ ಸಂಸ್ಕೃತ, ಹಿಂದೀ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಿರರ್ಗಳವಾಗಿ ಕವಿತೆಗಳನ್ನು ರಚಿಸುವ ಸಾಮಥ್ರ್ಯವನ್ನು ಹೊಂದಿದ್ದರು.  ಅನೇಕ ಪ್ರಸಂಗಗಳಲ್ಲಿ ತತ್ಕ್ಷಣದಲ್ಲಿಯೇ ಕವಿತೆಯನ್ನು ರಚಿಸಿದ ಇವರ ವಿಭಿನ್ನ ಛಂದಸ್ಸಿನ ಪದ್ಯಗಳು ಪ್ರಖ್ಯಾತವಾಗಿವೆ.  ಮತ್ತು ಇವರೊಬ್ಬ 'ಆಶುಕವಿ' ಎಂಬುದನ್ನು ಪ್ರಸ್ತುತಪಡಿಸಿವೆ.
ಕಾಶೀ ಜ್ಞಾನಸಿಂಹಾಸನಾಧಿಪತ್ಯ ಃ
    ಹಲವು ವಿಧದಲ್ಲಿ ಪ್ರತಿಭಾಸಂಪನ್ನರಾಗಿ ಜ್ಞಾನನಿಧಿಗಳಾದ ಪಂ|| ವೀರಭದ್ರ ಶಾಸ್ತ್ರಿಗಳ ಜ್ಞಾನಪ್ರಭಾವವು ಕಾಶೀ ಜ್ಞಾನಸಿಂಹಾಸನದ 83ನೆಯ ಅಧಿಪತಿಗಳಾಗಿದ್ದ ಲಿಂ|| ಶ್ರೀ ಜಗದ್ಗುರು  ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಮನಸ್ಸಿನ ಮೇಲೂ ಪರಿಣಾಮವನ್ನುಂಟುಮಾಡಿತು.  ಅಂತೆಯೇ ಅವರು ತಮ್ಮ ಅಂತ್ಯಕಾಲದಲ್ಲಿ ತಾ| 20-4-1944 ರಂದು ಪಂ|| ವೀರಭದ್ರ ಶಾಸ್ತ್ರಿಗಳ ಹೆಸರಿನಿಂದ ಮೃತ್ಯುಪತ್ರವನ್ನು ಬರೆದು ತಾ| 26-4-1944 ರಂದು ಲಿಂಗೈಕ್ಯರಾದರು.
    ಮುಂದೆ ತಾ|| 27-9-1944 ಬುಧವಾರ ವಿಜಯದಶಮಿಯಂದು ಮಧ್ಯಾಹ್ನ ಧನುರ್ಲಗ್ನದ ಶುಭಮುಹೂರ್ತದಲ್ಲಿ ಅಂದಿನ ರಂಭಾಪುರಿ ಜಗದ್ಗುರುಗಳಾಗಿದ್ದ ಶ್ರೀ ಶಿವಾನಂದರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಅಮೃತಹಸ್ತದಿಂದ ಕಾಶೀ ಜ್ಞಾನಸಿಂಹಾಸನದ 84ನೆಯ ಜಗದ್ಗುರುಗಳಾಗಿ ಪಂ|| ವೀರಭದ್ರ ಶಾಸ್ತ್ರಿಗಳು ಅಧಿಕಾರವನ್ನು ಸ್ವೀಕರಿಸಿದರು.
    ಶ್ರೀ ಜಗದ್ಗುರು ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಅಧಿಕಾರ ಹೊಂದಿದ ಕೆಲವೇ ದಿನಗಳಲ್ಲಿ ಜ್ಞಾನಮಂದಿರವೆಂಬ ಭವ್ಯ ಗ್ರಂಥಾಲಯವನ್ನು ಕಟ್ಟಿಸಿ ತಾ|2-3-1946ರಂದು ಉದ್ಘಾಟನೆಯನ್ನು ಮಾಡಿದರು.  ತಾವು ಈ ಪೂರ್ವದಲ್ಲಿ ಸಿಕಂದರಾಬಾದಿನಲ್ಲಿ ಸಂಸ್ಥಾಪಿಸಿದ ಶೈವಭಾರತೀ ಭವನವೆಂಬ ಗ್ರಂಥಾಲಯದ ಎಲ್ಲ ಪುಸ್ತಕಗಳನ್ನೂ ಕಾಶಿಗೆ ಸ್ಥಳಾಂತರಿಸಿದರು.
    ಇಂದಿನ  ಕಾಶೀ ಪೀಠದ ಜ್ಞಾನಮಂದಿರದಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಮುದ್ರಿತ ಗ್ರಂಥಗಳು ಹಾಗೂ ಸಾವಿರಾರು ತಾಡೋಲೆ ಗ್ರಂಥಗಳಿವೆ.  ಇದರಿಂದ ಈ ಗ್ರಂಥಾಲಯವು ಕಾಶಿಯಲ್ಲಿಯೇ ಒಂದು ಅಮೂಲ್ಯ ಗ್ರಂಥಾಲಯವಾಗಿ ಪರಿಗಣಿಸಲ್ಪಟ್ಟಿದೆ.  ಈ ಗ್ರಂಥಾಲಯದ ಯಾವುದೇ ಪುಸ್ತಕವನ್ನು ತೆಗೆದು ನೋಡಿದರೂ ಶ್ರೀ ಜಗದ್ಗುರು ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಯನದ ಸಂಕೇತಗಳು ಕಂಡುಬರುತ್ತವೆ.  ಮೈಸೂರು ವಿಶ್ವವಿದ್ಯಾಲಯದ ಒ.ಆರ್.ಐ. ಯವರು ಇಲ್ಲಿಯ ಅನೇಕ ತಾಡೋಲೆ ಗ್ರಂಥಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ. 
    ಪೂಜ್ಯರು ತಮ್ಮ ಅಧಿಕಾರಾವಧಿಯಲ್ಲಿ ಜಂಗಮವಾಡಿಮಠದಲ್ಲಿ ಶಿವಧರ್ಮ ಗ್ರಂಥಮಾಲೆಯನ್ನು ಪ್ರಾರಂಭಿಸಿ, ಅದರ ಮುಖಾಂತರ ವಿಭಿನ್ನ ಭಾಷೆಗಳಲ್ಲಿ ಅನೇಕ ಶಾಸ್ತ್ರೀಯ ಗ್ರಂಥಗಳನ್ನು ಪ್ರಕಾಶನಗೊಳಿಸಿದ್ದಾರೆ.  ಸಂಸ್ಕೃತದಲ್ಲಿ ವೀರಶೈವ ವಿಶ್ವಕೋಶವನ್ನು ತಯಾರಿಸುವ ಮಹೋದ್ದೇಶ ಇವರದಾಗಿತ್ತು.  ಆದರೆ ಪೀಠದ ಮೇಲಿನ ಅಧಿಕ ಪ್ರಮಾಣದ ಋಣವನ್ನು ತೀರಿಸಿ ಪೀಠವನ್ನು ಋಣಮುಕ್ತವನ್ನಾಗಿ ಮಾಡುವುದರೊಳಗಾಗಿ ಪೀಠದ ಋಣಾನುಸಂಬಂಧವು ತೀರಿತೋ ಏನೋ ಎಂಬಂತೆ ತಾ|| 25-1-1948 (ಪುಷ್ಯ ಶುದ್ಧ ಚತುರ್ದಶಿ)ರಂದು ಶ್ರೀ ಜಗದ್ಗುರು ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಅಕಸ್ಮಾತ್ ಲಿಂಗೈಕ್ಯರಾದರು.
     ಪೂಜ್ಯರು ಪೀಠಾಧ್ಯಕ್ಷರಾಗಿ ಕೆಲವೇ ಕಾಲವಿದ್ದರೂ ಬಹಳ ಮಹತ್ವಪೂರ್ಣಗಳಾದ ಕಾರ್ಯಗಳನ್ನು ಮಾಡಿಹೋಗಿದ್ದಾರೆ.  ಸಾಮಾನ್ಯ ವಿದ್ಯಾಥರ್ಿಜೀವನದಿಂದ ಪ್ರಾರಂಭಿಸಿ ಪೀಠಾಧ್ಯಕ್ಷರಾಗಿ ಲಿಂಗೈಕ್ಯರಾಗುವವರೆಗೆ ಮಾಡಿದ ಇವರ ಸಾಧನೆಗಳು ಮಾನವ ಕುಲಕ್ಕೆ ಮಾರ್ಗದರ್ಶಕಗಳಾಗಿವೆ, ಅಪೂರ್ವ ಕೊಡುಗೆಗಳೆನಿಸಿವೆ.
    ಪೂಜ್ಯ ಶ್ರೀ ವೀರಭದ್ರ ಜಗದ್ಗುರುಗಳವರು ತಾವು ಲಿಂಗೈಕ್ಯರಾಗುವ ಪೂರ್ವದಲ್ಲಿಯೇ ದಿ|| 7-1-1948ರಂದು ಶಿವಮೊಗ್ಗ ಜಿಲ್ಲಾ ಸೊರಬ ತಾಲ್ಲೂಕಿನ ಕ್ಯಾಸನೂರು ಮಠದ ಪಟ್ಟಾಧಿಕಾರಿಗಳಾಗಿದ್ದ ಶ್ರೀ ಷ||ಬ್ರ|| ಜಯಗುರು ಶಿವಾಚಾರ್ಯರ ಹೆಸರಿಗೆ ಉತ್ತರಾಧಿಕಾರದ ಮೃತ್ಯುಪತ್ರವನ್ನು ಬರೆದು ನೋಂದಣಿ ಮಾಡಿಸಿದ್ದರು.  ಮುಂದೆ ಆ ಮೃತ್ಯುಪತ್ರದ ಪ್ರಕಾರ ಶಾ.ಶ. 1870ನೆಯ ಸರ್ವಧಾರಿ ಸಂವತ್ಸರ ಕಾತರ್ಿಕ ಶು|| ತ್ರಯೋದಶೀ ತಾ|| 14-11-1948 ರವಿವಾರ ಬೆಳಗ್ಗೆ 9-43ರಿಂದ 9-57ರವರೆಗೆ ಸಲ್ಲುವ ಧನುರ್ಲಗ್ನದ ಸಿಂಹಾಂಶ ಶುಭಮುಹೂರ್ತದಲ್ಲಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ರಂಭಾಪುರೀ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕ ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಶ್ರೀ ಷ||ಬ್ರ|| ಜಯಗುರು ಶಿವಾಚಾರ್ಯರಿಗೆ ಈ ಪೀಠದ 85ನೆಯ ಜಗದ್ಗುರುತ್ವವು ದಯಪಾಲಿಸಲ್ಪಟ್ಟಿತು.  ಪಟ್ಟಾಭಿಷೇಕದ ನಂತರ ಇವರಿಗೆ ಶ್ರೀ 1008 ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳೆಂಬ ನೂತನ ಅಭಿಧಾನವು ಪ್ರಾಪ್ತವಾಯಿತು. 
    ಇವರು ಧಾರವಾಡ ಜಿಲ್ಲಾ ಹಿರೇಕೆರೂರು ತಾಲ್ಲೂಕು ಮಾಸೂರ ಹಿರೇಮಠದ ಶ್ರೀ ಪರಮೇಶ್ವರಯ್ಯ ಮತ್ತು ಸೌ|| ರುದ್ರಮ್ಮ ಎಂಬ ದಂಪತಿಗಳ ಪವಿತ್ರಗರ್ಭದಲ್ಲಿ ತಾ|| 20-3-1917ರಲ್ಲಿ ಜನಿಸಿದರು.  ಇವರು ರಟ್ಟೀಹಳ್ಳಿ, ಕಡೆನಂದಿಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು  ಹಾಗೂ ಸೊಲ್ಲಾಪುರದ ಶ್ರೀ ಮದ್ವೀರಶೈವ ವಾರದ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತ ಶಿಕ್ಷಣವನ್ನು ಮುಗಿಸಿದರು.  ಹೆಚ್ಚಿನ ವ್ಯಾಸಂಗಕ್ಕೆ ಕಾಶಿಗೆ ಬಂದು ಅಲ್ಲಿಯ ಅಂದಿನ ರಾಜಕೀಯ ಸಂಸ್ಕೃತ ಮಹಾವಿದ್ಯಾಲಯದ ನ್ಯಾಯಶಾಸ್ತ್ರ್ತ್ರ ಪ್ರಧಾನ ಅಧ್ಯಾಪಕರಾದ ಪಂ|| ಶಿವದತ್ತ ಮಿಶ್ರರಿಂದ ನ್ಯಾಯಶಾಸ್ತ್ರವನ್ನು ಹಾಗೂ ಟೀಕಮಣಿ ಸಂಸ್ಕೃತ ಮಹಾವಿದ್ಯಾಲಯದ ಸಾಹಿತ್ಯ ಪ್ರಧಾನಾಧ್ಯಾಪಕರಾದ ಶ್ರೀ ತಾರಾಚರಣ ಭಟ್ಟಾಚಾರ್ಯರಿಂದ ಸಾಹಿತ್ಯಾಧ್ಯಯನವನ್ನು ಮಾಡಿದರು.
    ಇವರು ಅಧಿಕಾರ ಸ್ವೀಕರಿಸಿದ ನಂತರ ಪೀಠದ ಸ್ವಾಧೀನದಲ್ಲಿ ಇದ್ದ ಸಾವಿರಾರು ಮನೆಗಳ ಸ್ವಾಮಿತ್ವದ ಬಹು ದೊಡ್ಡ ಆದಾಯವು 1951ರಲ್ಲಿ ಹಾಗೂ 1956ರಲ್ಲಿ, ಹನ್ನೆರಡು ಊರುಗಳ ಜಮೀನ್ದಾರಿಯು ಸಕರ್ಾರಿ ಕಾನೂನಿನ ಪ್ರಕಾರ ಕೈತಪ್ಪಿಹೋಯಿತಲ್ಲದೆ ಹಿಂದಿನಿಂದ ಬಂದ ಮಠದ ಮೇಲಿನ ಲಕ್ಷಾಂತರ ರೂಪಾಯಿಗಳ ಸಾಲದ ಒತ್ತಡ ಏಕಕಾಲಕ್ಕೆ ಎರಗಿ ಬಹಳ ಕಠಿಣತರ ಪ್ರಸಂಗವು ಬಂದೊದಗಿತು.  ಇಷ್ಟಾದರೂ ಪೂಜ್ಯರು ಧೈರ್ಯಗೆಡದೇ ಮೂಲ ಪೀಠಾಚಾರ್ಯರನ್ನು ಸ್ಮರಿಸುತ್ತ ಸದ್ಭಕ್ತರ ಸಹಯೋಗ, ಸಹಕಾರಗಳ ಮೂಲಕ ಪೀಠವನ್ನು ಸಂಪೂರ್ಣ ಋಣಮುಕ್ತವನ್ನಾಗಿ ಮಾಡಿ ಪೀಠವನ್ನು ಸ್ವತಂತ್ರಗೊಳಿಸಿದರು.
    ಶ್ರೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯರು ಮಠದ ಯೋಗಕ್ಷೇಮವನ್ನು ಸುಚಾರುರೂಪವಾಗಿ ನೋಡಿಕೊಳ್ಳುವುದರ ಜೊತೆಗೆ ಮಠದ ಖಚರ್ಿಗೆ ಒಂದು ಸ್ಥಾಯೀ ಉತ್ಪನ್ನವನ್ನು ಮಾಡಬೇಕೆಂಬ ಸದುದ್ದೇಶದಿಂದ ಶ್ರೀ ವಿಶ್ವಾರಾಧ್ಯ ಮಾಕರ್ೆಟ್ ಕಟ್ಟಿಸಿದ್ದಾರೆ.  ಇದರಿಂದ ಸಂದಾಯವಾಗುವ ಬಾಡಿಗೆ ಹಣದಲ್ಲಿ ಸಂಸ್ಕೃತ ಹಾಗೂ ಇನ್ನಿತರ ಅನೇಕ ವಿಷಯಗಳ ಅಧ್ಯಯನಕ್ಕಾಗಿ ಆಗಮಿಸಿದ ಸಕಲ ವಿದ್ಯಾಥರ್ಿಗಳಿಗೆ ಉಚಿತವಾದ ವಸತಿ ಹಾಗೂ ಪ್ರಸಾದದ ವ್ಯವಸ್ಥೆ ನಡೆಯುತ್ತಿದೆಯಲ್ಲದೆ ಯಾತ್ರಾಥರ್ಿಗಳಾಗಿ ಬಂದ ಯಾತ್ರಿಕರಿಗೂ ಸಕಲ ವಿಧವಾದ ಸೌಕರ್ಯವನ್ನು ಕಲ್ಪಿಸಿಕೊಡಲಾಗುತ್ತದೆ.
    ಪೂಜ್ಯ ಜಗದ್ಗುರುಗಳವರು ಮಹಾರಾಷ್ಟ್ರದ 26 ಜಿಲ್ಲೆಗಳಲ್ಲಿ ಸಂಚರಿಸಿ ವೀರಶೈವ ಧರ್ಮಜಾಗೃತಿಯನ್ನು ಮಾಡಿದ್ದಾರಲ್ಲದೇ, ಪುಣೆಯಲ್ಲಿ ವಿಶ್ವಾರಾಧ್ಯ ವಿದ್ಯಾಥರ್ಿ ನಿಲಯ ಹಾಗೂ ಮಂಗಳವೇಢೆಯಲ್ಲಿ ಶ್ರೀ ವಿಶ್ವಾರಾಧ್ಯ ಬೋಡರ್ಿಂಗ್ನ್ನು ಸ್ಥಾಪಿಸಿದ್ದಾರೆ.  ಈ ಎರಡು ಸಂಸ್ಥೆಗಳೂ ಕಾಶೀ ಜಂಗಮವಾಡಿಮಠದ ಸಂಪೂರ್ಣ ಸ್ವಾಮಿತ್ವದಲ್ಲಿವೆ.  ಇದಲ್ಲದೇ ಔರಂಗಾಬಾದ್ ಹಾಗೂ ನಾಗಪುರಗಳಲ್ಲಿಯ ವೀರಶೈವ ಹಾಸ್ಟೆಲ್ಗಳಿಗಾಗಿ ಮಹಾರಾಷ್ಟ್ರದಲ್ಲಿ ಸಂಚರಿಸಿ ವಿಶೇಷ  ಧನಸಹಾಯವನ್ನು ಮಾಡಿದ್ದಾರೆ.
    ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾಧಿಸಿದ ಇನ್ನೊಂದು ಮಹತ್ವಪೂರ್ಣವಾದ ಸಾಧನೆಯೆಂದರೆ ಕಾಶೀ ಸಂಪೂಣರ್ಾನಂದ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದಲ್ಲಿ ಶಕ್ತಿವಿಶಿಷ್ಟಾದ್ವೈತ ವೇದಾಂತ ಶಾಖೆಯ ಸ್ಥಾಪನೆ.  200 ವರ್ಷಗಳಷ್ಟು ಪ್ರಾಚೀನವಾದ ಈ ಸಂಸ್ಥೆಯಲ್ಲಿ ಭಾರತದ ಎಲ್ಲ ಧರ್ಮಗಳ ಅಧ್ಯಯನವು ನಡೆಯುತ್ತಿದ್ದರೂ ವೀರಶೈವ ದರ್ಶನವಾದ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತದ ವಿಶ್ವವಿದ್ಯಾಲಯ ಮಟ್ಟದ ಅಧ್ಯಯನವು ನಡೆಯುತ್ತಿರಲಿಲ್ಲ.   ಈ ದೊಡ್ಡ ಕೊರತೆಯು ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಕೃಪೆಯಿಂದ ದೂರಾದದ್ದು ವೀರಶೈವರ ಪರಮ ಭಾಗ್ಯವೆಂದೇ ಹೇಳಬೇಕು.  ಈ ಮಹತ್ವಪೂರ್ಣವಾದ ಕಾರ್ಯದಲ್ಲಿ ಅದೇ ವಿಶ್ವವಿದ್ಯಾಲಯದ ವೇದಾಂತ ವಿಭಾಗದ ವರಿಷ್ಠ ಸಂಶೋಧಕರಾದ ಡಾ| ಚಂದ್ರಶೇಖರ ಶಮರ್ಾ ಹಿರೇಮಠ ಉಫರ್್ ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಅಮರೇಶ್ವರ ಮಠ, ಕೋಟೆಕಲ್ಲು, ಗುಳೇದಗುಡ್ಡ ಇವರ ಪರಿಶ್ರಮವು ಉಲ್ಲೇಖನೀಯವಾಗಿದೆ. (ಈಗ ಅವರೇ ಶ್ರೀ ಕಾಶೀ ಜಗದ್ಗುರುಗಳಾಗಿದ್ದಾರೆ).
    1983ರಿಂದ ಪ್ರಾರಂಭವಾದ ಸಂಪೂಣರ್ಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಈ ಶಕ್ತಿವಿಶಿಷ್ಟಾದ್ವೈತ ವೇದಾಂತ ಶಾಖೆಯಲ್ಲಿ ಡಾ| ಚಂದ್ರಶೇಖರ ಶಿವಾಚಾರ್ಯರೇ ತಮ್ಮ ಸಂಶೋಧನೆಯೊಂದಿಗೆ ಶಾಸ್ತ್ರೀ (ಬಿ.ಎ.) ಮತ್ತು ಆಚಾರ್ಯ (ಎಂ.ಎ.) ವರ್ಗದ ವಿದ್ಯಾಥರ್ಿಗಳಿಗೆ ಅಧ್ಯಾಪನ ಕಾರ್ಯವನ್ನೂ ಮಾಡುತ್ತಿದ್ದಾರೆ.  ಇವರು ಕನರ್ಾಟಕ ಹಾಗೂ ಮಹಾರಾಷ್ಟ್ರದ ವಿಭಿನ್ನ ಸಂಘಸಂಸ್ಥೆಯವರ ಜೊತೆಗೆ ಸಂಪರ್ಕವನ್ನು ಸಾಧಿಸಿ ವಿದ್ಯಾಥರ್ಿಗಳಿಗೆ ಶಿಷ್ಯವೇತನ (ಸ್ಕಾಲರ್ಶಿಪ್) ವ್ಯವಸ್ಥೆಯನ್ನೂ ಮಾಡಿದ್ದಾರೆ.
    ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗ್ರಂಥ ಪ್ರಕಾಶನದ ಬಗ್ಗೆ ಮಹತ್ವವನ್ನು ನೀಡಿ ಶಕ್ತಿವಿಶಿಷ್ಟಾದ್ವೈತ ವೇದಾಂತ ಪರೀಕ್ಷೆಯ ಶಾಸ್ತ್ರಿ ಮತ್ತು ಆಚಾರ್ಯ ವರ್ಗದ ಪಠ್ಯಪುಸ್ತಕಗಳಾದ ಪ್ರಾಚೀನ ಸಂಸ್ಕೃತ ಗ್ರಂಥಗಳ ಸಮಗ್ರ ಮುದ್ರಣ ಯೋಜನೆಯನ್ನು ಹಮ್ಮಿಕೊಂಡು ಅನೇಕ ಪುಸ್ತಕಗಳನ್ನು ಪ್ರಕಾಶಗೊಳಿಸಿದ್ದಾರೆ.
    ಹೀಗೆ ಅನಾದಿಕಾಲದಿಂದ ಕಾಶೀ ಜ್ಞಾನಪೀಠವು ಜಾತಿ-ಮತ-ಪಂಥಗಳ ಭೇದಭಾವವಿಲ್ಲದೇ ಜ್ಞಾನಾರ್ಜನೆಗಾಗಿ ಬಂದ ಸಕಲರಿಗೂ ಅನ್ನಾಶ್ರಯಗಳನ್ನು ಕೊಟ್ಟು ಸಲಹುತ್ತ ಬಂದಿದೆ.  ಈ ಜ್ಞಾನಪೀಠದಲ್ಲಿ ಅಧ್ಯಯನ ಮಾಡಿದವರಲ್ಲಿ ಅನೇಕರು ಪಂಚಪೀಠದ ಜಗದ್ಗುರುಗಳೂ, ಚರಪಟ್ಟಾಧಿಕಾರಿಗಳೂ, ನಿರಂಜನಮೂತರ್ಿಗಳೂ, ಶಿವಾನಂದ ಹಾಗೂ ಸಿದ್ಧಾರೂಢ ಸಂಪ್ರದಾಯದ ಮಹಂತರೂ ಮತ್ತು ಶಾಸ್ತ್ರಿಗಳೂ ಆಗಿದ್ದಾರೆ.  ಈ ಪೀಠದಲ್ಲಿ ಅಭ್ಯಾಸ ಮಾಡಿಹೋದ ಎಲ್ಲರ ಚರಿತ್ರೆಯನ್ನೂ ಸಂಗ್ರಹಿಸಿ ಕಾಶೀ ಪೀಠದ ಭವ್ಯ ಪರಂಪರೆಯೊಂದಿಗೆ ಮುದ್ರಿಸಿ ಪ್ರಕಾಶಗೊಳಿಸುವುದು ಅವಶ್ಯವಿದೆ.  ಇದೀಗ ಪ್ರಸ್ತುತ ಜಗದ್ಗುರುಗಳು ಆ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.
ಶ್ರೀ ಕಾಶಿಯ ಜ್ಞಾನಕೋಶ ಃ
    ಶ್ರೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ದಿನಾಂಕ 14-11-1948 ರಿಂದ 2-10-1989ರವರೆಗೆ ಅಂದರೆ ಸುಮಾರು 41 ವರ್ಷಗಳ ಸುದೀರ್ಘ ಕಾಲ ಅಧಿಕಾರದಲ್ಲಿದ್ದು ಕಾಶೀ ಮಹಾಪೀಠದ ಬಹುಮುಖ ವಿಕಾಸವನ್ನು ಮಾಡಿ ಅಪಾರವಾದ ಶಿಷ್ಯ ಸಂಪದವನ್ನು ಸಂಪಾದಿಸಿದರು.  ಸರಳ ಸಜ್ಜನಿಕೆಯ ಸಾಕಾರ ಮೂತರ್ಿಗಳಾದ ಮಹಾಸನ್ನಿಧಿಯವರ ವ್ಯಕ್ತಿತ್ವಕ್ಕೆ ಮಾರುಹೋಗದವರೇ ಇಲ್ಲ.  ಬಡವ-ಬಲ್ಲಿದರೆಂಬ ಭೇದ ಭಾವವಿಲ್ಲದೆ ಸರ್ವರನ್ನೂ ಶ್ರೀ ಸನ್ನಿಧಿಯವರು ಪ್ರೀತಿಸುತ್ತಿದ್ದರು.  ಭಕ್ತರ ಯೋಗಕ್ಷೇಮಗಳನ್ನು ವಿಚಾರಿಸಿಕೊಳ್ಳುವುದರಲ್ಲಿಯೇ ಹೆಚ್ಚು ಗಮನವಿತ್ತ ಶ್ರೀ ಮಹಾಸನ್ನಿಧಿಯವರು ತಮ್ಮ ಆರೋಗ್ಯದ ಕಡೆಗೆ ಸ್ವಲ್ಪ ಅಲಕ್ಷ್ಯ ವಹಿಸಿದರೇನೋ! ಅಂತೆಯೇ ಬರಬರುತ್ತಾ ಅವರ ಶರೀರವು ಅನಾರೋಗ್ಯದ ತವರಾಯಿತು.  ಎಪ್ಪತ್ತೆರಡನೆಯ ವಯಸ್ಸಿಗೆ ಬಹಳಷ್ಟು ಅಸ್ವಸ್ಥರೂ, ಅಶಕ್ತರೂ ಆಗಿ ತಮ್ಮ ಮೇಲಿರುವ ಮಹಾಪೀಠದ ಹೊಣೆಯನ್ನು ಯಾರಿಗೆ ವಹಿಸಿಕೊಡಬೇಕು ಎಂದು ಆಲೋಚಿಸುತ್ತ ಕೆಲವು ಕಾಲ ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ತಮ್ಮ ಖಾಸಾ ಶಾಖಾಮಠದಲ್ಲಿ ವಾಸ್ತವ್ಯ ಮಾಡಿ ಔಷಧೋಪಚಾರ ಮಾಡಿಸಿಕೊಳ್ಳತೊಡಗಿದರು.  ಮಹಾಸನ್ನಿಧಿಯವರು ತಮ್ಮ ಉತ್ತರಾಧಿಕಾರಿಯ ಬಗ್ಗೆ ಯೋಚಿಸುವ ಸಂದರ್ಭದಲ್ಲಿ ಅವರ ಸ್ಮೃತಿಪಟಲದಲ್ಲಿ ಬಂದವರೇ ಕಾಶೀಪೀಠದ ವರಿಷ್ಠ ಸಂಶೋಧಕ ವಿದ್ಯಾಥರ್ಿಯಾದ ಕೋಟೆಕಲ್ ಗುಳೇದಗುಡ್ಡ ಅಮರೇಶ್ವರ  ಮಠದ ಪಟ್ಟಾಧ್ಯಕ್ಷರಾದ ಶ್ರೀ ಷ.ಬ್ರ.ಡಾ.|| ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು.  ಅಂತೆಯೇ ಮಹಾಸನ್ನಿಧಿಯು ಗುಳೇದಗುಡ್ಡಕ್ಕೆ ಒಂದು ಪತ್ರವನ್ನು ಬರೆದು ನಿಮ್ಮ ಜೊತೆಗೆ ಕೆಲವೊಂದು ಮಹತ್ವಪೂರ್ಣ ವಿಚಾರವನ್ನು ಕುರಿತು ಸಮಾಲೋಚಿಸಬೇಕಾಗಿದೆ.  ಆದ್ದರಿಂದ ನೀವು ಗುಳೇದಗುಡ್ಡದಿಂದ ಕಾಶಿಗೆ ಹೋಗುವಾಗ ಪುಣೆಗೆ ಬಂದು ಶ್ರೀ ಸನ್ನಿಧಿಯ ದರ್ಶನಾಶೀವರ್ಾದ ಪಡೆದುಕೊಂಡು ಹೋಗಬೇಕು.  ಗಡಿಬಿಡಿಯಲ್ಲಿ ಬರಬಾರದು.  ಹೆಚ್ಚಿನ ಸಮಯ ತೆಗೆದುಕೊಂಡು ಬರಬೇಕು ಈ ರೀತಿಯಾಗಿ ಮಹಾಸನ್ನಿಧಿಯವರು ಅಪ್ಪಣೆ ದಯಪಾಲಿಸಿದ್ದರು. 
    ಶ್ರೀ ಸನ್ನಿಧಿಯ ಅಪ್ಪಣೆ ಪ್ರಕಾರ ಡಾ|| ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು ಪುಣೆಗೆ ಹೋಗುವ ಉದ್ದೇಶದಿಂದ ಸೊಲ್ಲಾಪುರಕ್ಕೆ ಬಂದಾಗ ಅಲ್ಲಿಯ ಭಕ್ತಾದಿಗಳು ನವರಾತ್ರಿ ಕಾರ್ಯಕ್ರಮದ ನಿಮಿತ್ತವಾಗಿ ದುಗರ್ಾ ಸಪ್ತಶತಿಯ ಮೇಲೆ ಹತ್ತು ದಿನಗಳವರೆಗೆ ಪ್ರವಚನವನ್ನು ಮಾಡಲೇಬೇಕೆಂಬುದಾಗಿ ಆಗ್ರಹಪಡಿಸಿದರು.  ಭಕ್ತರ ಅತಿ ಆಗ್ರಹದ ಮೇರೆಗೆ ಶ್ರೀ ಸ್ವಾಮಿಗಳವರು ಅಲ್ಲಿಯ ಕೃಷಿ ಮಾರುಕಟ್ಟೆಯ ಪ್ರಾಂಗಣದಲ್ಲಿ ಹೊಸದಾಗಿ ನಿಮರ್ಿಸಲ್ಪಟ್ಟ ದೇವಿಮಂದಿರದ ಪರಿಸರದಲ್ಲಿ ಆಶ್ವೀಜ ಶುದ್ಧ ಪ್ರತಿಪದೆಯಂದು ಪ್ರವಚನವನ್ನು ಪ್ರಾರಂಭಿಸಿದರು.  ಈ ಕಾರ್ಯಕ್ರಮವು ಎರಡು ದಿನ ಸಾಂಗವಾಗಿ ನೆರವೇರಿತಾದರೂ ಮೂರನೆಯ ದಿನ ಪ್ರಾತಃಕಾಲದಲ್ಲಿ ಕಾಶೀ ಜಗದ್ಗುರು ಶ್ರೀ ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ಪುಣೆ ನಗರದಲ್ಲಿ ಲಿಂಗೈಕ್ಯರಾದರೆಂಬ ವಾತರ್ೆಯು ಸರ್ವತ್ರ ಹಬ್ಬಿ ಭಕ್ತರ ಹೃದಯಕ್ಕೆ ಆಘಾತವನ್ನುಂಟುಮಾಡಿತು.  ಈ ವಾತರ್ೆ ತಿಳಿದೊಡನೆ ಸೋಲಾಪುರದ ಭಕ್ತರು ಡಾ|| ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರನ್ನು ಕರೆದುಕೊಂಡು ಪುಣೆ ನಗರಕ್ಕೆ ಧಾವಿಸಿದರು.  ಇವರು ಪುಣೆ ನಗರವನ್ನು ತಲುಪುವುದರೊಳಗಾಗಿ ಮಹಾಸನ್ನಿಧಿಯವರ ಪಾಥರ್ಿವ ಶರೀರವನ್ನು ವೀರಶೈವರತ್ನ ಡಾ||ನೀಲಕಂಠರಾವ್ ಕಲ್ಯಾಣಿ ಹಾಗೂ ಪುಣೆ ಭಕ್ತರೆಲ್ಲರೂ ಸೇರಿ ಕಿಲರ್ೋಸ್ಕರ್ ಕಂಪನಿಯ ವಿಶೇಷ ವಿಮಾನದ ಮೂಲಕ ಕಾಶೀ ಕ್ಷೇತ್ರಕ್ಕೆ ಕಳುಹಿಸಿಕೊಟ್ಟಿದ್ದರು.  ಆಗ ಅನೇಕ ಭಕ್ತರೊಡನೆ ಶ್ರೀ ಸ್ವಾಮಿಗಳು ಕಾಶಿಯನ್ನು ತಲುಪುವಷ್ಟರಲ್ಲಿಯೇ ರಂಭಾಪುರೀ ಪೀಠದ ಶ್ರೀ ಜಗದ್ಗುರು ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರು ನೆಲಮಂಗಲದಲ್ಲಿ ನಡೆದ ತಮ್ಮ ದಸರಾ ದಬರ್ಾರವನ್ನು ಮೊಟಕುಗೊಳಿಸಿ ವಿಮಾನದಿಂದ ದಯಮಾಡಿಸಿ ತಮ್ಮ ಸಾನ್ನಿಧ್ಯದಲ್ಲಿ ಲಿಂಗೈಕ್ಯ ಕಾಶೀ  ಜಗದ್ಗುರುಗಳ ಸಮಾಧಿ ಕ್ರಿಯೆಯನ್ನು ಪೂರ್ಣಗೊಳಿಸಿದ್ದರು.  ಹೀಗಾಗಿ ಡಾ||ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರಿಗೆ ಅಂತ್ಯದರ್ಶನವೂ ಸಹ ಆಗ ದೊರೆಯಲಿಲ್ಲವೆಂಬುದು ಖೇದದ ಸಂಗತಿಯಾಗಿದೆ.
    ಕಾಶೀ ಮಹಾಪೀಠದಲ್ಲಿ ಉತ್ತರಾಧಿಕಾರಿಯನ್ನು ಮಾಡುವ ಒಂದು ವಿಶಿಷ್ಟ ಪರಂಪರೆಯನ್ನು ಲಿಂಗೈಕ್ಯ ಶ್ರೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ಬರೆದಿಟ್ಟಿದ್ದರು.  ಅವರು ಬರೆದಿಟ್ಟ ನಿಯಮಾನುಸಾರವಾಗಿ (1) ವರ್ತಮಾನ ಪೀಠಾಚಾರ್ಯರು ತಮ್ಮ ಜೀವಿತ ಕಾಲದಲ್ಲಿಯೇ ಯೋಗ್ಯ ಉತ್ತರಾಧಿಕಾರಿಯನ್ನು ಗುರುತಿಸಿ ಆತನಿಗೆ ತಮ್ಮ ಕರಕಮಲಗಳಿಂದಲೇ ಪೀಠಾಧಿಕಾರವನ್ನು  ದಯಪಾಲಿಸುವುದು. (2) ಒಂದುವೇಳೆ ತಮ್ಮ ಜೀವಿತಾವಧಿಯಲ್ಲಿ ಪೀಠಾಧಿಕಾರವನ್ನು ಕೊಡುವ ಅಪೇಕ್ಷೆಯಿರದಿದ್ದರೆ ತಮ್ಮ ಪಶ್ಚಾತ್ ಇಂಥವರೇ ಉತ್ತರಾಧಿಕಾರಿಗಳಾಗಬೇಕೆಂಬುದನ್ನು ಗುಪ್ತವಾಗಿ ಮೃತ್ಯುಪತ್ರ ಮುಖೇನ ಬರೆದಿಡುವುದು.  (3) ಮೇಲಿನ ನಿಯಮಗಳಿಗನುಸಾರವಾಗಿ ಯಾವುದನ್ನೂ ಮಾಡದೇ ಒಂದು ವೇಳೆ ಪೀಠಾಚಾರ್ಯರು    ಲಿಂಗೈಕ್ಯರಾದರೆ ಆಗ ಉಳಿದ ಸಮಾನ ಪೀಠಗಳಾದ ರಂಭಾಪುರಿ, ಉಜ್ಜಯಿನಿ, ಹಿಮವತ್ಕೇದಾರ ಹಾಗೂ ಶ್ರೀಶೈಲ  ಪೀಠದ ಜಗದ್ಗುರುಗಳವರು ಒಮ್ಮತದಿಂದ ಓರ್ವ ಉತ್ತರಾಧಿಕಾರಿಯನ್ನು ಆಯ್ಕೆಮಾಡಿ ಆತನಿಗೆ ಸರ್ವರೂ ಸೇರಿಕೊಂಡು ಪಟ್ಟಾಭಿಷೇಕವನ್ನು ಮಾಡಬೇಕು.
    ಶ್ರೀ ಕಾಶೀ ಪೀಠದಲ್ಲಿ ಹೀಗೆ ಲಿಖಿತವಾದ ಪುರಾವೆ ದೊರೆತ ಕಾರಣ ಸುಮಾರು ಒಂದೂವರೆ ತಿಂಗಳು ಉಂಟಾದ ಅಸ್ಥಿರ ವಾತಾವರಣವನ್ನು ಸುಸ್ಥಿರಗೊಳಿಸಲೋಸುಗ ತತ್ಕಾಲೀನ ಪೀಠಾಚಾರ್ಯರಾದ ಶ್ರೀ ಜಗದ್ಗುರು ವೀರರುದ್ರಮುನಿದೇವ ಶಿವಾಚಾರ್ಯ ಭವತ್ಪಾದರು ರಂಭಾಪುರಿ, ಶ್ರೀ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಭಗವತ್ಪಾದರು ಉಜ್ಜಯಿನಿ, ಶ್ರೀ ಜಗದ್ಗುರು ರಾವಲ್ ಸಿದ್ಧೇಶ್ವರಲಿಂಗ ಶಿವಾಚಾರ್ಯ ಭಗವತ್ಪಾದರು ಹಿಮವತ್ಕೇದಾರ ಮತ್ತು ಶ್ರೀ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶ್ರೀಶೈಲ ಈ ನಾಲ್ವರು ಮಹಾಚಾರ್ಯರು ದಿನಾಂಕ 16-11-1989ರಂದು  ಶ್ರೀ ಕಾಶೀ ಮಹಾಪೀಠದಲ್ಲಿ ಸಮಾವೇಶಗೊಂಡು ಪರಸ್ಪರ ಸುದೀರ್ಘ ಸಮಾಲೋಚನೆಯನ್ನು ಮಾಡಿ ಒಮ್ಮತದಿಂದ ಡಾ|| ಚಂದ್ರಶೇಖರ ಶಿವಾಚಾರ್ಯರನ್ನು ಕಾಶೀಪೀಠದ ಉತ್ತರಾಧಿಕಾರಿಯೆಂದು ಘೋಷಿಸಿದರು.
    ಮರುದಿನ ದಿನಾಂಕ 17-11-1989ನೆಯ ಶುಕ್ರವಾರದಂದು ನಾಲ್ಕೂ ಪೀಠದ ಮಹಾಚಾರ್ಯರು, ಉಪಸ್ಥಿತರಿರುವ ಶಿವಾಚಾರ್ಯರ ಹಾಗೂ ಭಕ್ತಸ್ತೋಮದ ಸಾಕ್ಷಿಯಲ್ಲಿ ಜಗದ್ಗುರು ಪಟ್ಟಾಭಿಷೇಕ ಮಹೋತ್ಸವವನ್ನು ಪೀಠದ ಕೈಲಾಸ ಮಂಟಪದಲ್ಲಿ ಪರಂಪರಾನುಸಾರವಾಗಿ ಸಕಲ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು.  ಅಂದು ಶ್ರೀ 1008 ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಾಶೀ ಮಹಾಪೀಠದ 86ನೆಯ ಜಗದ್ಗುರುಗಳಾಗಿ ಅಧಿಕಾರವನ್ನು ವಹಿಸಿಕೊಂಡರು.  ಭಕ್ತಸ್ತೋಮದಲ್ಲೆಲ್ಲ ಆನಂದಮಯ ವಾತಾವರಣವು ಸರ್ವತ್ರ ಪಸರಿಸಿತು.
    ಪೂಜ್ಯ ಮಹಾಸನ್ನಿಧಿಯವರು ಪೀಠಾಧಿಕಾರವನ್ನು ಸ್ವೀಕರಿಸಿದ ನಂತರ ನಲವತ್ತೆಂಟು ದಿನಗಳ ತಪೋನುಷ್ಠಾನವನ್ನು ಗೈದು ಸರ್ವ ಪೂವರ್ಾಚಾರ್ಯರ ಅನುಗ್ರಹವನ್ನು ಪಡೆದುಕೊಂಡು ದೇಶಮಧ್ಯದಲ್ಲಿ ಧರ್ಮದ ದಂಡಯಾತ್ರೆಯನ್ನು ಪ್ರಾರಂಭಿಸಿದರು.
ಇವರು ನಮ್ಮ ಜ್ಞಾನಪೀಠಾಧೀಶ್ವರರು ಃ
    ಶ್ರೀ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಇಂದಿನ ಬಾಗಿಲುಕೋಟೆ ಜಿಲ್ಲಾ ಬದಾಮಿ ತಾಲೂಕಿನ ತೋಗುಣಸಿ ಗ್ರಾಮದ ವೇ. ಮೂ|| ಸಿದ್ಧಯ್ಯ ಪುರಾಣಮಠ ಹಾಗೂ ಸೌ|| ಸಾವಂತ್ರಮ್ಮನವರ ದ್ವಿತೀಯ ಪುತ್ರರಾಗಿ ದಿನಾಂಕ 28-8-1947ರಂದು ತಾಯಿಯ ತವರೂರಾದ ನರಗುಂದ ತಾಲೂಕಿನ ರಡ್ಡೇರನಾಗನೂರು ಬೃಹನ್ಮಠದಲ್ಲಿ ಜನಿಸಿದರು.  ನಾಗನೂರು ಬೃಹನ್ಮಠದ ಲಿಂ|| ಪಂಡಿತ ಕಾಶೀನಾಥ ಶಾಸ್ತ್ರಿಗಳವರು ಇಂದಿನ ಜಗದ್ಗುರುಗಳವರಿಗೆ ಪೂವರ್ಾಶ್ರಮದ ಸೋದರಮಾವನವರು.  ಹೀಗೆ ಶ್ರೀ ಸನ್ನಿಧಿಯವರ ಪೂವರ್ಾಶ್ರಮದ ಮಾತೃಕುಲವು ಆನುವಂಶಿಕ ಪಾಂಡಿತ್ಯ ಪರಂಪರೆಯನ್ನು ಹೊಂದಿದೆ.   ಶ್ರೀ ಮಹಾಸನ್ನಿಧಿಯವರ ಪೂವರ್ಾಶ್ರಮದ ತಂದೆಯ ತಂದೆಯವರಾದ ಲಿಂ|| ವೇ|| ವಿರೂಪಾಕ್ಷ ಶಾಸ್ತ್ರಿಗಳವರೂ ಸಹ ಸಂಸ್ಕೃತ ಪ್ರಕಾಂಡ ಪಂಡಿತರಾಗಿದ್ದರು.  ಹೀಗೆ ಶ್ರೀ ಸನ್ನಿಧಿಯವರ ಪೂವರ್ಾಶ್ರಮದ ಉಭಯ ವಂಶಗಳು ಸಂಸ್ಕೃತ ಪಾಂಡಿತ್ಯ ಪರಂಪರೆಯನ್ನು ಹೊಂದಿದಂಥವುಗಳಾಗಿವೆ.
    ಬಾಲ್ಯದಲ್ಲಿ ಇವರಿಗೆ ಶೇಖರಯ್ಯ ಎಂಬುದಾಗಿ ನಾಮಕರಣ ಮಾಡಲಾಯಿತು.  ಪ್ರಾಥಮಿಕ ನಾಲ್ಕನೆಯ ಇಯತ್ತೆವರೆಗೆ ಇವರು ತಮ್ಮ ಮೂಲಗ್ರಾಮವಾದ ತೋಗುಣಸಿಯಲ್ಲಿ ಅಭ್ಯಾಸವನ್ನು ಮುಗಿಸಿದರು.  ಹೆಚ್ಚಿನ ಅಭ್ಯಾಸಕ್ಕಾಗಿ ಇವರನ್ನು ಇನ್ನೊಬ್ಬ ಸೋದರಮಾವನವರಾದ ವೇ. ಸಿದ್ಧಲಿಂಗಯ್ಯನವರು ಬ್ಯಾಡಗಿಗೆ ಕರೆದುಕೊಂಡು ಹೋದರು.  ಅಲ್ಲಿ ಎಂಟನೆಯ ವರ್ಗದವರೆಗೆ ಅಭ್ಯಾಸವನ್ನು ಮುಗಿಸಿ ಪುನಃ ತೋಗುಣಸಿಗೆ ಆಗಮಿಸಿದರು.  ನಂತರ ಇವರ ತಂದೆಯವರಾದ ಸಿದ್ಧಯ್ಯನವರು ಗುಳೇದಗುಡ್ಡದ ಮುನ್ಸಿಪಲ್ ಹೈಸ್ಕೂಲಿನಲ್ಲಿ ಪ್ರವೇಶವನ್ನು ಮಾಡಿಸಿ ವಸತಿ ಹಾಗೂ ಅಭ್ಯಾಸದ ಅನುಕೂಲತೆಗಾಗಿ ಸಮೀಪದ ಅಮರೇಶ್ವರ ಮಠದಲ್ಲಿ ಇವರನ್ನು ಇರಿಸಿದರು.  ಒಂದು ವರ್ಷದವರೆಗೆ ಆ ಮಠದ ಶ್ರೀ ಷ.ಬ್ರ. ಅಮರೇಶ್ವರ ಶಿವಾಚಾರ್ಯ ಸ್ವಾಮಿಗಳವರ ಕೃಪಾಛತ್ರದಲ್ಲಿ ಮಾಧ್ಯಮಿಕ ಶಾಲಾ ಅಭ್ಯಾಸವನ್ನು ಮಾಡತೊಡಗಿದರು. ತಮ್ಮ ನಡೆ, ನುಡಿ, ವಿನಯಾದಿ ಗುಣಗಳಿಂದ ಅಮರೇಶ್ವರ ಸ್ವಾಮಿಗಳವರ ಆತ್ಮೀಯ ಶಿಷ್ಯರಾದರು.  ಆಗಲೇ ಎಂಭತ್ತು ವರ್ಷ ವಯಸ್ಸಿನವರಾಗಿದ್ದ ಅಮರೇಶ್ವರ ಸ್ವಾಮಿಗಳವರು ಬಾಲಕನ ಭವಿಷ್ಯವನ್ನು ಅರಿತವರಾಗಿದ್ದರೇನೋ! ಅಂತೆಯೇ ಇವರ ತಂದೆತಾಯಿಗಳ ಒಪ್ಪಿಗೆಯನ್ನು ಪಡೆದು 1963ರಲ್ಲಿ ಶೇಖರಯ್ಯನವರನ್ನು ಮೃತ್ಯುಪತ್ರ ಮುಖೇನ ತಮ್ಮ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡು ಬಾಲಕನಿಗೆ ಮಂತ್ರೋಪದೇಶವನ್ನು ಮಾಡಿ, ಚಂದ್ರಶೇಖರಯ್ಯ ಎಂಬುದಾಗಿ ನಾಮಕರಣವನ್ನು ಮಾಡಿದರು.  ವೇದಾಂತ, ಆಯುವರ್ೇದ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಅನುಭವವನ್ನು ಹೊಂದಿದ್ದ ಶ್ರೀ ಅಮರೇಶ್ವರ ಸ್ವಾಮಿಗಳವರು ಚಂದ್ರಶೇಖರಯ್ಯನಿಗೆ ಸಂಸ್ಕೃತಾಭ್ಯಾಸವನ್ನು ಮಾಡಿಸುವ ಉದ್ದೇಶದಿಂದ ಸೊಲ್ಲಾಪುರದ ಶ್ರೀಮದ್ವೀರಶೈವ ಗುರುಕುಲ (ಹೊಟಗಿಮಠ) ದಲ್ಲಿ 1963ರಲ್ಲಿ ಗುರುಪೌಣರ್ಿಮೆಯ ದಿನ ಪ್ರವೇಶವನ್ನು ಮಾಡಿಸಿದರು.  ಆ ಗುರುಕುಲದಲ್ಲಿ ಅನುಗೊಂಡ ಶಾಲಾ ಮಠದ ಶ್ರೀ ವೇ.ಮೂ. ಗಂಗಾಧರ ಶಾಸ್ತ್ರಿಗಳವರು ಪ್ರಧಾನಾಧ್ಯಾಪಕರಾಗಿದ್ದರು.  ಅವರು ಗುರುಕುಲದಲ್ಲಿ ಚಂದ್ರಶೇಖರಯ್ಯನಿಗೆ ಪ್ರವೇಶವನ್ನು ಕೊಡುವುದರ ಜೊತೆಗೆ ಇವರಿಗೆ 'ಚಂದ್ರಶೇಖರ ಶರ್ಮ' ಎಂಬುದಾಗಿ ನಾಮಕರಣ ಮಾಡಿದರು.  1963ರಿಂದ 1969ರವರೆಗಿನ ಆರು ವರ್ಷದ ಕಾಲಾವಧಿಯಲ್ಲಿ ಚಂದ್ರಶೇಖರ ಶಮರ್ಾ ಇವರು ಕಲಕತ್ತಾದ ವಂಗೀಯ ಸಂಸ್ಕೃತ ಶಿಕ್ಷಾ ಪರಿಷತ್ತಿನ 'ಕಾವ್ಯ ಆದ್ಯ', 'ಕಾವ್ಯ ಮಧ್ಯಮ' ಮತ್ತು  'ಕಾವ್ಯ ತೀರ್ಥ' ಪರೀಕ್ಷೆಗಳನ್ನು ಉತ್ತಮ  ಶ್ರೇಣಿಯಲ್ಲಿ ಪಾಸಾದರು.  ಸೊಲ್ಲಾಪುರದಲ್ಲಿ ಇವರು ಅಭ್ಯಾಸವನ್ನು ಮಾಡುತ್ತಿರುವಾಗ ಅಚಲೇರಿಯ ವೇ.ಮೂ. ಶರಣಯ್ಯ ಶಾಸ್ತ್ರಿಗಳವರಿಂದಲೂ ಸಹ ವ್ಯಾಕರಣದ ಕೆಲವು ಪಾಠಗಳನ್ನು ಹೇಳಿಸಿಕೊಳ್ಳುತ್ತಿದ್ದರು.
ಶ್ರೀ ಜಗದ್ಗುರು - ಗುರುಕಾರುಣ್ಯ ಃ
    ಶ್ರೀ ಚಂದ್ರಶೇಖರ ಶರ್ಮ ಇವರು ಹೊಟಗಿಮಠದಲ್ಲಿ ಇದ್ದು ಕಾವ್ಯತೀರ್ಥ ಪರೀಕ್ಷೆಯ ಅಭ್ಯಾಸವನ್ನು ಮಾಡುತ್ತಿರುವಾಗ ಕಾಶೀ ಮಹಾಪೀಠದ ಶ್ರೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಸೊಲ್ಲಾಪುರದ ಗುರುಪೀಠಕ್ಕೆ ದಯಮಾಡಿಸಿದ್ದರು.  ಆಗ ಇವರು ಸನ್ನಿಧಿಯ ದರ್ಶನಕ್ಕೆ ಹೋದಾಗ ಬಾಲಕನ ಅಭ್ಯಾಸಾದಿಗಳ ಬಗ್ಗೆ ತಿಳಿದುಕೊಂಡು ಸನ್ನಿಧಿಯವರು ಉನ್ನತ ವ್ಯಾಸಂಗಕ್ಕಾಗಿ ಕಾಶಿಗೆ ಬರಬೇಕೆಂದು ಆಶೀರ್ವದಿಸಿದರು.  ಚಂದ್ರಶೇಖರ ಶಮರ್ಾ ಇವರು ಕಾವ್ಯತೀರ್ಥ ಪರೀಕ್ಷೆಯನ್ನು ಮುಗಿಸಿ ದಿನಾಂಕ 14-5-1969ರಂದು ಮರಳಿ ಸೊಲ್ಲಾಪುರಕ್ಕೆ ಬಂದ ದಿನವೇ ಅಮರೇಶ್ವರ ಸ್ವಾಮಿಗಳವರು ಹುಬ್ಬಳ್ಳಿಯಲ್ಲಿ ಲಿಂಗೈಕ್ಯರಾದರೆಂಬ ತಂತಿ ಸಂದೇಶವು ತಲುಪಿತು.  ಆಗ ಸೊಲ್ಲಾಪುರದ ಭಕ್ತರೊಂದಿಗೆ ಇವರು ಗುಳೇದಗುಡ್ಡವನ್ನು ತಲುಪುವುದರೊಳಗಾಗಿ ಲಿಂ|| ಅಮರೇಶ್ವರ ಸ್ವಾಮಿಗಳವರ ಪಾಥರ್ಿವ ಶರೀರವನ್ನು ಗುಳೇದಗುಡ್ಡಕ್ಕೆ ತೆಗೆದುಕೊಂಡು ಬಂದಿದ್ದರು.  ಅಮರೇಶ್ವರ ಮಠದಲ್ಲಿ ಪೂರ್ವದಲ್ಲಿಯೇ ತಯಾರಿಸಲ್ಪಟ್ಟ ಕ್ರಿಯಾಸಮಾಧಿಯಲ್ಲಿ ಬನ್ನೂರಿನ ಚಿಕ್ಕಮಠದ ಶ್ರೀ ಷ.ಬ್ರ. ಚೆನ್ನಮಲ್ಲ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ ವಿಧಿಪೂರ್ವಕ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. 
    ಈ ಕ್ರಿಯಾ ಸಮಾಧಿಯ ಸಂದರ್ಭದಲ್ಲಿ ಸೇರಿದ ಸ್ವಾಮಿಗಳು ಹಾಗೂ ಭಕ್ತರೆಲ್ಲ ಒಂದು ವರ್ಷದೊಳಗಾಗಿ ಮರಿದೇವರ ಪಟ್ಟಾಭಿಷೇಕವನ್ನು ನೆರವೇರಿಸಿ ಉನ್ನತ ಅಭ್ಯಾಸಕ್ಕಾಗಿ ಇವರನ್ನು ಕಾಶಿಗೆ ಕಳುಹಿಸಿಕೊಡಬೇಕೆಂಬುದಾಗಿ ನಿರ್ಣಯಿಸಿದರು.  ಈ ನಿರ್ಣಯದ ಪ್ರಕಾರ  1970ನೇ ಇಸ್ವಿಯ ವೈಶಾಖ ಮಾಸ ಕೃಷ್ಣ ಪಕ್ಷದ ದ್ವಾದಶಿ ತಿಥಿಯಂದು ಹುಬ್ಬಳ್ಳಿ ಹನ್ನೆರಡು ಮಠದ ಶ್ರೀ ಷ.ಬ್ರ. ಮಡಿವಾಳ ಶಿವಾಚಾರ್ಯರಿಂದ  ವಿಧಿವತ್ತಾಗಿ ಪಟ್ಟಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಿದರು.  ಆಗ ಇವರಿಗೆ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳೆಂಬ ನಾಮಕರಣವನ್ನು ಮಾಡಲಾಯಿತು. 
ಜ್ಞಾನೋನ್ನತಿಯತ್ತ ಗಮನ ಃ
    1970ನೆಯ ಇಸ್ವಿಯಲ್ಲಿ ಅಮರೇಶ್ವರಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ ಸ್ವಾಮಿಗಳವರು ಕಾಶೀ ಮಹಾಸನ್ನಿಧಿಗೆ ಪತ್ರಮುಖೇನ ಅರಿಕೆ ಮಾಡಿಕೊಂಡು ಸನ್ನಿಧಿಯ ಅಪ್ಪಣೆ ಪಡೆದು ಕಾಶೀ ನಗರಿಗೆ ಆಗಮಿಸಿದರು.  ಶ್ರೀಮಹಾಪೀಠದಲ್ಲಿಯ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದಲ್ಲಿ ಆಶ್ರಯವನ್ನು ಪಡೆದರು.  ಕಾಶಿಯಲ್ಲಿ ಸುಪ್ರಸಿದ್ಧವಾಗಿರುವ ಸಂಪೂಣರ್ಾನಂದ ಸಂಸ್ಕೃತ ವಿಶ್ವಾವಿದ್ಯಾಲಯದ ವೇದಾಂತ ವಿಭಾಗದ ಆಚಾರ್ಯ ವರ್ಗದಲ್ಲಿ ಪ್ರವೇಶವನ್ನು ಪಡೆದು ಅಭ್ಯಾಸವನ್ನು ಮಾಡತೊಡಗಿದರು.
ಚಿನ್ನಕ್ಕೆ ಚಿನ್ನ ಃ
    ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು 1970ನೇಯ ಇಸ್ವಿಯಿಂದ 1973ರವರೆಗೆ ಮೂರು ವರ್ಷಗಳ ಕಾಲ ವೇದಾಂತಾಚಾರ್ಯದ ಅಭ್ಯಾಸವನ್ನು ಮಾಡಿ ಮೂರನೆಯ ವರ್ಷದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕಿನಲ್ಲಿ ಪಾಸಾಗಿ ಸಂಪೂಣರ್ಾನಂದ ಸ್ವರ್ಣಪದಕ, ಸ್ವಾಮಿ ವಿವೇಕಾನಂದ ಸ್ವರ್ಣಪದಕ ಹಾಗೂ ಅನ್ನದಾಪ್ರಸಾದ ಮುಖಜರ್ಿ ಸ್ವರ್ಣಪದಕಗಳೆಂಬ ಮೂರು ಚಿನ್ನದ ಪದಕಗಳನ್ನು ಪಡೆದು ವೇದಾಂತ ವಿಭಾಗಕ್ಕೆ ಕೀತರ್ಿಯನ್ನು ತಂದುಕೊಟ್ಟರಲ್ಲದೆ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಹೆಗ್ಗಳಿಕೆ ಹೆಚ್ಚಿಸಿದರು.  ಶ್ರೀ ಸ್ವಾಮಿಗಳವರು ಕಲ್ಕತ್ತಾದ ವಂಗೀಯ ಸಂಸ್ಕೃತ ಶಿಕ್ಷಾ ಪರಿಷತ್ತಿನ ಸರ್ವದರ್ಶನತೀರ್ಥ ಪರೀಕ್ಷೆಯನ್ನೂ ಸಹ ಪ್ರಥಮ ರ್ಯಾಂಕಿನಲ್ಲಿ ಪಾಸಾಗಿ ಪಶ್ಚಿಮ ಬಂಗಾಳ ಸರಕಾರದ ಅಂದಿನ ರಾಜ್ಯಪಾಲರಾಗಿದ್ದ ನೂರುಲ್ ಹಸನ್ರವರಿಂದ 'ಶರದಿಂದುಕುಮಾರ ಸ್ವರ್ಣಪದಕ'ವನ್ನೂ ಪಡೆದು  ಕೀತರ್ಿಯ ಕ್ಷಿತಿಜವನ್ನು ಹೆಚ್ಚಿಸಿಕೊಂಡರು.  ಇದೂ ಅಲ್ಲದೇ 1973ನೆಯ ಇಸ್ವಿಯಲ್ಲಿ ಕೇರಳದ ಗುರುವಾಯೂರಿನಲ್ಲಿ ನಡೆದ ಅಖಿಲ ಭಾರತ ಸಂಸ್ಕೃತ ಆಶುಭಾಷಣ ಸ್ಫಧರ್ೆಯಲ್ಲಿ ಉತ್ತರ ಪ್ರದೇಶದ ಪ್ರತಿನಿಧಿಗಳಾಗಿ ಪಾಲುಗೊಂಡು ಅಲ್ಲಿಯೂ ಸಹ ವೇದಾಂತ ವಿಷಯದಲ್ಲಿ ಪ್ರಥಮ ಪುರಸ್ಕಾರವನ್ನು ಪಡೆದು ಉತ್ತರ ಪ್ರದೇಶಕ್ಕೆ ಗೌರವವನ್ನು ತಂದುಕೊಟ್ಟರು.  ಹೀಗೆ ಅವರ ವಿದ್ಯಾಥರ್ಿ ಜೀವನದ ಸುವರ್ಣ ಸಮಯವು ಸ್ವರ್ಣಮಯವಾಯಿತು,  ಚಿನ್ನಕ್ಕೆ ಕುಂದಣವಿಟ್ಟಂತಾಯಿತು.

ಜ್ಞಾನದ ಗೌರೀಶಂಕರ ಶಿಖರ ಃ
    ವೇದಾಂತಾಚಾರ್ಯ ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ವಾಮಿಗಳವರು ಶ್ರೀ ಕಾಶೀ ಜಗದ್ಗುರುಗಳವರ ಅಪ್ಪಣೆಯ ಮೇರೆಗೆ 'ಶ್ರೀ ಸಿದ್ಧಾಂತ ಶಿಖಾಮಣಿ' ಹಾಗೂ 'ಷಡ್ದರ್ಶನಗಳು' ಇವುಗಳ ತೌಲನಿಕ ಅಧ್ಯಯನ ಎಂಬ ವಿಷಯವನ್ನು ಕುರಿತು ಸಂಶೋಧನೆಯನ್ನು ಮಾಡುವ ಉದ್ದೇಶದಿಂದ 1974ರಲ್ಲಿ ಸಂಪೂಣರ್ಾನಂದ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗಾಧ್ಯಕ್ಷರಾದ ಡಾ|| ದೇವಸ್ಪರೂಪ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಪಂಜೀಕರಣ (ರಿಜಿಸ್ಟ್ರೇಶನ್)ವನ್ನು ಮಾಡಿಸಿದರು.  ಮುಂದೆ ಸತತವಾಗಿ ಏಳು ವರ್ಷಗಳ ಕಾಲ ಸಂಶೋಧನಾಧ್ಯಯವನ್ನು ಮಾಡಿ ಐದುನೂರು ಪುಟಗಳ ಶೋಧ ಪ್ರಬಂಧವನ್ನು ಸಂಸ್ಕೃತ ಭಾಷೆಯಲ್ಲಿ ಬರೆದು 1980ರಲ್ಲಿ ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದರು.  ಮುಂದೆ ಒಂದು ವರ್ಷದ ಕಾಲಾವಧಿಯಲ್ಲಿ ಅದರ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ ಪೂರೈಸಿ 1981 ರಲ್ಲಿ ಆ ಪ್ರಬಂಧಕ್ಕೆ ವಿದ್ಯಾವಾರಿಧಿ (ಪಿಎಚ್.ಡಿ) ಉಪಾಧಿ ಪ್ರಾಪ್ತವಾಯಿತು.
    ಸಿದ್ಧಾಂತ ಶಿಖಾಮಣಿಯ ಮೇಲೆ ಶೋಧ ಪ್ರಬಂಧವನ್ನು ಮುಗಿಸಿ ಶ್ರೀಗಳವರು ಇನ್ನೇನು ಮರಳಿ ಗುಳೇದಗುಡ್ಡಕ್ಕೆ ಹೋಗಬೇಕೆನ್ನುವ ವಿಚಾರದಲ್ಲಿದ್ದಾಗ ಶ್ರೀ ಕಾಶೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು, ಡಾ|| ಚಂದ್ರಶೇಖರ ಶಿವಾಚಾರ್ಯರನ್ನು ಕರೆಯಿಸಿ ನಿಮಗೆ ಅಭ್ಯಾಸದಲ್ಲಿ ಅಭಿರುಚಿ ಹೆಚ್ಚು ಇದೆ.  ಕಾರಣ ಅಭ್ಯಾಸವನ್ನು ನಿಲ್ಲಿಸಬೇಡಿ.  ಇನ್ನೂ ಹೆಚ್ಚಿನ ಸಂಶೋಧನಾ ಕಾರ್ಯವನ್ನು ಮಾಡಬೇಕೆಂಬುದಾಗಿ ಪುನಃ ಆಜ್ಞಾಪಿಸಿದರು.  ಮಹಾಸನ್ನಿಧಿಯ ಆಜ್ಞೆಯನ್ನು ಶಿರಸಾ ಮಾನ್ಯ ಮಾಡಿದ  ಡಾ|| ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪುನಃ 1982ನೆಯ ಇಸ್ವಿಯಲ್ಲಿ ವಿದ್ಯಾವಾಚಸ್ಪತಿ ಉಪಾಧಿಗಾಗಿ ಅದೇ ಸಂಪೂಣರ್ಾನಂದ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗಾಧ್ಯಕ್ಷರಾದ ಡಾ|| ದೇವಸ್ವರೂಪ ಮಿಶ್ರಾರವರ ಮಾರ್ಗದರ್ಶನದಲ್ಲಿ 'ಶಕ್ತಿ ವಿಶಿಷ್ಟಾದ್ವೈತ ತತ್ತ್ವತ್ರಯ ವಿಮಶರ್ೆ' ಎಂಬ ವಿಷಯದ ಮೇಲೆ ಉನ್ನತ ಶೋಧ ವ್ಯಾಸಂಗವನ್ನು ಮಾಡತೊಡಗಿದರು.  ಶ್ರೀ ಸ್ವಾಮಿಗಳವರು ಸುಮಾರು ಆರು ವರ್ಷಗಳ ಕಾಲ ಆಳವಾದ ಅಧ್ಯಯನ ನಡೆಸಿ, ಶೋಧ ಪ್ರಬಂಧವನ್ನು ತಯಾರಿಸಿ 1988ರಲ್ಲಿ ಅದನ್ನೂ ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದರು.  ಮುಂದೆ 1989ರಲ್ಲಿ ಇವರು ಜಗದ್ಗುರು ಪಟ್ಟಾಭಿಷೇಕವನ್ನು ವಹಿಸಿಕೊಂಡ ನಂತರ 'ವಿದ್ಯಾವಾಚಸ್ಪತಿ' (ಡಿ.ಲಿಟ್) ಎಂಬ ಉಪಾಧಿಯು ಪ್ರಾಪ್ತವಾಯಿತು.  ವಿಶ್ವವಿದ್ಯಾಲಯದಿಂದ ಶೋಧ ಪ್ರಬಂಧಕ್ಕಾಗಿ ವಿದ್ಯಾವಾಚಸ್ಪತಿಯೆಂಬ ಉಪಾಧಿಯನ್ನು ಪಡೆದು ಏಕಮೇವ ವೀರಶೈವ ಜಗದ್ಗುರುಗಳೆಂಬ ಕೀತರ್ಿಗೆ ಪಾತ್ರರಾದರು.
ಜಗದ್ಗುರುಗಳ ದೂರದೃಷ್ಟಿ _ ಸೃಷ್ಟಿ ಃ
    ಕಾಶೀ ಮಹಾಪೀಠದ ಎಂಭತ್ತಾರನೆಯ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು  1989ರಲ್ಲಿ ಪೀಠಾರೋಹಣಗೈದ ನಂತರ ಧಾಮರ್ಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಕಾಸದ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಕ್ರಮವಾಗಿ ಅವುಗಳನ್ನು ಸಾಧಿಸುತ್ತ ಬಂದಿದ್ದಾರೆ.  ಪೂಜ್ಯ ಸನ್ನಿಧಿಯವರು ಪೀಠಾರೋಹಣ ಮಾಡಿದ ಕೆಲವೇ ದಿನಗಳಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿಯ ಮರಾಠಿ ಅನುವಾದವನ್ನು ಮಾಡಿಸಿ ಅದನ್ನು ಸ್ವತಃ ತಾವೇ ಸಂಪಾದಿಸಿ ಸೊಲ್ಲಾಪುರದ ಸಾಹಿತ್ಯ ಸಂಶೋಧನಾ ಮಂಡಳದ ವತಿಯಿಂದ 1990ರಲ್ಲಿ ಪ್ರಕಾಶನಗೊಳಿಸಿದರು.  ಈ ಗ್ರಂಥದ ಮರಾಠಿ ಅನುವಾದವನ್ನು ಗುಲ್ಬಗರ್ಾದ ಡಾ|| ಚಂದ್ರಶೇಖರ ಕಪಾಳೆ, ಸೊಲ್ಲಾಪುರದ ವೇ| ಶರಣಯ್ಯ ಶಾಸ್ತ್ರಿ ಅಚಲೇರಿ ಹಾಗೂ ಶೇ.ದೇ. ಪಸಾರಕರ ಎಂಬ ಮೂವರು ವಿದ್ವಾಂಸರು ಪೂರೈಸಿದ್ದಾರೆ.  ಸೊಲ್ಲಾಪುರದಲ್ಲಿ ಆನೆಯ ಮೇಲೆ ಅಂಬಾರಿಯಲ್ಲಿರಿಸಿ ಈ ಗ್ರಂಥೋತ್ಸವವನ್ನು ಮಾಡಿ ಅದರ ಬಿಡುಗಡೆಯನ್ನು ಮಾಡಲಾಯಿತು.  ವಾರದ ಮಲ್ಲಪ್ಪನವರು 1905ನೆಯ ಇಸ್ವಿಯಲ್ಲಿ ಸಂಕ್ಷಿಪ್ತ ಮರಾಠಿ ಅನುವಾದದೊಂದಿಗೆ ಇದನ್ನು ಪ್ರಕಾಶನಗೊಳಿಸಿದ್ದರು.  ಅನಂತರ ಇದರ ನವೀನ ಸಂಸ್ಕರಣಗಳೇ ಆಗಿರಲಿಲ್ಲ.  ಅದರ ಕೊರತೆಯನ್ನು ಶ್ರೀ ಮಹಾಸನ್ನಿಧಿಯವರು ಮರಾಠಿ ವಿದ್ವಾಂಸರ ಸಹಾಯದಿಂದ ನಿವಾರಿಸಿ ಸಮಾಜಕ್ಕೆ ಲೋಕಕಲ್ಯಾಣಕ್ಕಾಗಿ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಃ
    ಕಾಶೀ ಜಗದ್ಗುರುಗಳವರು ದಿನಾಂಕ 20-8-1993ರಂದು ಅಧಿಕ ಮಾಸದ ಅನುಷ್ಠಾನದ ನಿಮಿತ್ತವಾಗಿ ಪ್ರಯಾಗ ಕ್ಷೇತ್ರದ ಜಂಗಮವಾಡಿ ಮಹಾಮಠದಲ್ಲಿ ಜನಕಲ್ಯಾಣಾರ್ಥವಾಗಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನವೆಂಬ ಸಂಸ್ಥೆಯನ್ನು ಸ್ಥಾಪಿಸಿದರು.  ಇದರ ಪ್ರಧಾನ ಕಾಯರ್ಾಲಯವು ಕಾಶೀ ಜಂಗಮವಾಡಿಮಠದಲ್ಲಿದ್ದು ಇದರ ವ್ಯಾಪ್ತಿಯು ಸಂಪೂರ್ಣ ಭಾರತದಲ್ಲಿ ಪಸರಿಸಿರುವುದಾಗಿದೆ.  ಈ ಸಂಸ್ಥೆಯ ಅಡಿಯಲ್ಲಿ ಅನೇಕ ಶಾಖೋಪಶಾಖೆಗಳು ಇಂದು ಕಾರ್ಯನಿರತವಾಗಿವೆ.  ಇದರ ಒಂದು ಪ್ರಧಾನ ಶಾಖೆ ಶೈವಭಾರತಿ ಶೋಧ ಪ್ರತಿಷ್ಠಾನವೆಂಬ ಹೆಸರಿನ ಸಂಶೋಧನಾ ಸಂಸ್ಥೆಯು ಕಾಶೀ ಜಂಗಮವಾಡಿಮಠದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ.  ಈ ಶೋಧ ಸಂಸ್ಥಾನಕ್ಕೆ ಹೊಸದಿಲ್ಲಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಮಾನ್ಯತೆ ದೊರೆತಿದ್ದು ಶೋಧ ವಿದ್ಯಾಥರ್ಿಗಳಿಗೆ ಇಲ್ಲಿ ಶಿವಾಗಮಗಳನ್ನು ಕುರಿತು ಸಂಶೋಧನೆಯನ್ನು ಮಾಡಲು ಅವಕಾಶವನ್ನು ಕೊಡಲಾಗಿದೆ.  ಸಂಶೋಧಕ ವಿದ್ಯಾಥರ್ಿಗಳಿಗೆ ಪ್ರತಿ ತಿಂಗಳು ಐದುನೂರು ರೂಪಾಯಿಗಳ ಶಿಷ್ಯವೇತನವನ್ನು ಸಹ ಕೊಡಲಾಗುತ್ತದೆ.
    ಈ ಶೈವಭಾರತಿ ಶೋಧ ಪ್ರತಿಷ್ಠಾನದಿಂದ ಈಗಾಗಲೇ ಅನೇಕ ಶಿವಾಗಮಗಳು ಹಾಗೂ ಇತರ ಗ್ರಂಥಗಳೂ ಸೇರಿ ಸುಮಾರು ಇಪ್ಪತ್ತಕ್ಕೂ ಮಿಕ್ಕಿ ಪುಸ್ತಕಗಳು ಪ್ರಕಾಶನಗೊಂಡಿವೆ.  ಇಲ್ಲಿ ಪ್ರಕಾಶನಗೊಂಡ ಶಿವಾಗಮಗಳು ಹಿಂದೀ, ಇಂಗ್ಲೀಷ್ ಭಾಷೆಗಳಲ್ಲಿ ಕೂಡ ಅನುವಾದಿಸಲ್ಪಟ್ಟಿವೆ.
'ವೀರಶೈವ ಅನುಸಂಧಾನ ಸಂಸ್ಥಾನ' ಬೆಂಗಳೂರು ಃ
    ಕನರ್ಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಅಂಗಸಂಸ್ಥೆಯಾದ 'ವೀರಶೈವ ಅನುಸಂಧಾನ ಸಂಸ್ಥಾನ'ವು ಕಳೆದ ಹತ್ತು ವರ್ಷಗಳಿಂದ ಕಾರ್ಯನಿರತವಾಗಿದೆ.  ಈ ಅನುಸಂಧಾನ ಸಂಸ್ಥಾನದಿಂದ ಈಗಾಗಲೇ ಮಕುಟಾಗಮ, ಕಾರಣಾಗಮ, ಸೂಕ್ಷ್ಮಾಗಮ ಮತ್ತು ಪಾರಮೇಶ್ವರಾಗಮಗಳು ಕನ್ನಡದಲ್ಲಿ ಅನುವಾದಿಸಲ್ಪಟ್ಟು ಮುದ್ರಣಗೊಂಡಿವೆಯಲ್ಲದೇ ಸಿದ್ಧಾಂತ ಶಿಖಾಮಣಿ ವಿಚಾರದೀಪ್ತಿ, ಶೈವಾಗಮಗಳಲ್ಲಿ ವೀರಶೈವ, ಚಂದ್ರಜ್ಞಾನಾಗಮ ವಿಚಾರ ರಶ್ಮಿ ಮುಂತಾದ ವಿಚಾರ ಸಂಕಿರಣ (ಸೆಮಿನಾರ್)ದ ವರದಿರೂಪದ ಒಟ್ಟು 17 ಗ್ರಂಥಗಳು ಪ್ರಕಟವಾಗಿವೆ.
'ಶ್ರೀ ಜಗದ್ಗುರು ಪಂಚಾಚಾರ್ಯ ವೇದ ಆಗಮ-ಸಂಸ್ಕೃತ
                    ಯೋಗ-ಪಾಠಶಾಲೆ' ಗದಗ ಃ
    ಜಗದ್ಗುರು  ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಅಂಗಸಂಸ್ಥೆಯಾಗಿ ಗದಗ ನಗರದಲ್ಲಿ ಒಂದು ಪಾಠಶಾಲೆಯು ಪ್ರತಿಷ್ಠಾಪಿಸಲ್ಪಟ್ಟಿದೆ.  ಈ ಪಾಠಶಾಲೆಯಲ್ಲಿ ವೇದ, ಆಗಮ, ಸಂಸ್ಕೃತ ಹಾಗೂ ಯೋಗಾಭ್ಯಾಸವನ್ನು ಮಾಡಿಸಲಾಗುವುದು.  ಸುಮಾರು ಮೂವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಲ್ಲಿಯ ಕಟ್ಟಡ ನಿಮರ್ಾಣಗೊಂಡಿದ್ದು ಗದಗ ಹಾಗೂ ಸುತ್ತಮುತ್ತಲಿನ ಪರಿಸರದ ಭಕ್ತಾದಿಗಳು ಭವನ ನಿಮರ್ಾಣಕ್ಕಾಗಿ ತಮ್ಮ ಉದಾರವಾದ ದೇಣಿಗೆಗಳನ್ನು ಸಮಪರ್ಿಸಿರುತ್ತಾರೆ.
ಶ್ರೀ ಜಗದ್ಗುರು ವಿಶ್ವಾರಾಧ್ಯ ಜನ ಕಲ್ಯಾಣ ಪ್ರತಿಷ್ಠಾನದ ವಿವಿಧ ಶಾಖೆಗಳು:
    ಮೇಲಿನ ಸಂಸ್ಥೆಯ ಅನೇಕ ಶಾಖೆಗಳು ಧಾರವಾಡದಲ್ಲಿ, ಗುಲ್ಬಗರ್ಾದಲ್ಲಿ, ಸೊಲ್ಲಾಪುರದಲ್ಲಿ, ನರಖೇಡದಲ್ಲಿ, ನಾಗಪುರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದು ಅನೇಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳನ್ನು ನಿರ್ವಹಿಸುತ್ತಲಿರುತ್ತವೆ.  ಇದೂ ಅಲ್ಲದೆ ಕಾಶೀ ಕ್ಷೇತ್ರದ ಗಂಗಾನದಿ ದಂಡೆಯಲ್ಲಿರುವ ಅತಿ ಪ್ರಾಚೀನವಾದ ವಾಲ್ಮೀಕಿ ಕುಂಡದ ಬಳಿಯಲ್ಲಿ ಒಂದು ಬಾಲವಿದ್ಯಾಲಯವನ್ನು ಪ್ರತಿಷ್ಠಾಪಿಸಲಾಗಿದೆ.  ಇಲ್ಲಿ ಸದ್ಯ, ಪ್ರಾಥಮಿಕ ವಿದ್ಯಾಲಯವು ಕಾರ್ಯ ಮಾಡುತ್ತಲಿದೆ.
    ಪುಣೆ ಮಹಾನಗರದಲ್ಲಿ ಸದಾಶಿವಪೇಟೆಯಲ್ಲಿ ಇರುವ ಜಂಗಮವಾಡಿಮಠದಲ್ಲಿ ವಿದ್ಯಾಥರ್ಿಗಳ ವಾಸ್ತವ್ಯಕ್ಕಾಗಿ ವಸತಿ ನಿಲಯವನ್ನು ಕಟ್ಟಿಸಿ ಉನ್ನತ ಅಧ್ಯಯನಕ್ಕೆ ಪುಣೆಗೆ ಬರುವ ವಿದ್ಯಾಥರ್ಿ ಬಳಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.  ಅದೇ  ಪುಣೆ ಮಹಾನಗರದಲ್ಲಿ ಇತ್ತೀಚೆಗೆ ನಿಮರ್ಾಣವಾದ ಸಾಂಗವಿನಗರದ 'ಪಿಂಪಳೆಗುರವ' ಬಡಾವಣೆಯೊಂದರಲ್ಲಿ ಆ ಭಾಗದ ವಿದ್ಯಾಥರ್ಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಾಥಮಿಕ ಶಾಲೆಯೊಂದನ್ನು ತೆರೆದಿದ್ದಾರೆ.  ಮಹಾರಾಷ್ಟ್ರದ ಲಾತೂರು ಮಹಾನಗರದಲ್ಲಿ ಇತ್ತೀಚೆಗೆ ವಿದ್ಯಾಥರ್ಿಗಳ ವಸತಿಗೃಹ ಒಂದನ್ನು ಕಟ್ಟಿಸಿ ಉನ್ನತ ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ.
ವಿಶೇಷ ಶಿಷ್ಯವೃತ್ತಿ ಯೋಜನೆಗಳು ಃ
    ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಬುದ್ಧಿವಂತರಾದ ಬಡಮಕ್ಕಳಿಗೆ ಹೆಚ್ಚಿನ ಅಭ್ಯಾಸಕ್ಕೋಸುಗ ಅನುಕೂಲವಾಗಲೆಂಬ ಉದ್ದೇಶದಿಂದ ಮೆಡಿಕಲ್ ಹಾಗೂ ಇಂಜಿನೀಯರಿಂಗ್ ವಿದ್ಯಾಥರ್ಿಗಳಿಗೆ ಪ್ರತಿತಿಂಗಳು ಒಂದು ಸಾವಿರ ರೂ.  ಶಿಷ್ಯವೇತನವನ್ನು ಕೊಡಲಾಗುತ್ತಿದೆ.  ಈ ಶಿಷ್ಯವೇತನಗಳು ಪುಣೆಯ ಸುಪ್ರಸಿದ್ಧ ಉದ್ಯೋಗಪತಿಗಳಾದ ಕಲ್ಯಾಣಿ ಪರಿವಾರದ 'ಅಕ್ಕೂತಾಯಿ ಕಲ್ಯಾಣಿ ಟ್ರಸ್ಟ್' ವತಿಯಿಂದ ಪ್ರಾಪ್ತವಾಗಿವೆ.
    ಸಮಾಜದಲ್ಲಿ ಬಡ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಶೈಕ್ಷಣಿಕ ಅನುಕೂಲತೆಯನ್ನು ಮಾಡುವ ಉದ್ದೇಶದಿಂದ ಮೆಡಿಕಲ್ ಹಾಗೂ ಇಂಜನಿಯರಿಂಗ್ ವಿದ್ಯೆಯನ್ನು ಅಭ್ಯಾಸ ಮಾಡುವ ವಿದ್ಯಾಥರ್ಿಗಳಿಗೆ ಪ್ರತಿತಿಂಗಳು ಒಂದು ಸಾವಿರ ರೂಪಾಯಿಯಂತೆ ಅವರ ಶಿಕ್ಷಣ ಪೂರ್ಣವಾಗುವವರೆಗೆ ಕೊಡುವಂತಹ ಒಂದು ವ್ಯವಸ್ಥೆಯನ್ನು ಶ್ರೀ ಸನ್ನಿಧಿಯವರು ರೂಪಿಸಿಕೊಂಡಿದ್ದು ಈಗಾಗಲೇ ಕನರ್ಾಟಕ ಹಾಗೂ ಮಹಾರಾಷ್ಟ್ರಗಳಲ್ಲಿಯ 24 ಜನ ವಿದ್ಯಾಥರ್ಿ - ವಿದ್ಯಾಥರ್ಿನಿಯರು ಈ ಶಿಷ್ಯವೇತನದ ಪ್ರಯೋಜನವನ್ನು ಪಡೆಯುತ್ತಿದ್ದಾರೆ.  ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸನ್ನಿಧಿಯವರ ಷಷ್ಠ್ಯಬ್ದಿ ಮಹೋತ್ಸವದ ಉಪಲಕ್ಷದಲ್ಲಿ  ಈ ಶಿಷ್ಯವೇತನದ ಸಂಖ್ಯೆಯನ್ನು ಅರವತ್ತರವರೆಗೆ ವಿಸ್ತರಿಸುವ ಒಂದು ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದ್ದು ಇದಕ್ಕೆ ಬೇಕಾಗುವ ನಿಧಿ ಸಂಗ್ರಹಕ್ಕಾಗಿ ಶ್ರೀ ಪೀಠದಲ್ಲಿ ಹಾಗೂ ದೇಶಮಧ್ಯದಲ್ಲಿ ತುಲಾಭಾರದ ಸೇವಾವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.  ಭಕ್ತಾದಿಗಳು ಈ ಯೋಜನೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಲಿದ್ದು 2007 ನೆಯ ಸಾಲಿನ ಕೊನೆಯೊಳಗೆ ಈ ಯೋಜನೆ ಸಂಪೂರ್ಣ ಕಾರ್ಯರೂಪಕ್ಕೆ ಬರಲಿದೆ.
ಶ್ರೀ ಜಗದ್ಗುರು ವಿಶ್ವೇಶ್ವರ ನಿತ್ಯ ಅನ್ನದಾನ ಛತ್ರ ಃ
    ಕಾಶೀ ಜಂಗಮವಾಡಿಮಠದಲ್ಲಿ ಲಿಂ. ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ಪವಿತ್ರ ಸ್ಮೃತಿಯಲ್ಲಿ ಅನ್ನಛತ್ರವನ್ನು 1990ರಲ್ಲಿಯೇ ಪ್ರಾರಂಭಿಸಿದ್ದಾರೆ.  ಯಾತ್ರೆಗಾಗಿ ಬಂದ ಭಕ್ತಾದಿಗಳಿಗೆ ಶ್ರೀ ಮಹಾಪೀಠದಲ್ಲಿ ವಸತಿಯ ಜೊತೆಗೆ ಉಚಿತವಾದ ಪ್ರಸಾದ ವ್ಯವಸ್ಥೆಯನ್ನೂ ಸಹ ಮಾಡಲಾಗುತ್ತಿದೆ.  ಈ ಅನ್ನಛತ್ರದಲ್ಲಿ ವರ್ಷದಲ್ಲಿ ಒಂದು ದಿನ ಅನ್ನದಾನವನ್ನು ಮಾಡಲಿಚ್ಛಿಸುವವರು ಹತ್ತು ಸಾವಿರದ ಎಂಟು ರೂಪಾಯಿಗಳನ್ನು ಕಾಯಂ ನಿಧಿಯಾಗಿ ಕೊಡಬೇಕಾಗುತ್ತದೆ.  ಈ ಅನ್ನಛತ್ರದಲ್ಲಿ ದಿನಾಲು ಬಂದ ಯಾತ್ರಿಗಳು ಹಾಗೂ ಇಲ್ಲಿ ಸಂಸ್ಕೃತಾಧ್ಯಯನಕ್ಕಾಗಿ ಬಂದಿರುವ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ವಿದ್ಯಾಥರ್ಿಗಳು ಪ್ರತಿದಿನ ಪ್ರಸಾದವನ್ನು ಪಡೆಯುತ್ತಾರೆ.
ಮಹಾಶಿವರಾತ್ರಿಯ ವರಪ್ರಸಾದ ಃ
    ಮಹಾಶಿವರಾತ್ರಿಯ ಪರ್ವಕಾಲವು ಕಾಶೀ ಮಹಾಪೀಠದ ಕಲಿಯುಗದ ಆಚಾರ್ಯರಾದ ಶ್ರೀ ಜಗದ್ಗುರು ವಿಶ್ವಾರಾಧ್ಯ ಲಿಂಗಾವಿಭರ್ಾವದ ಪವಿತ್ರ ಕಾಲವಾಗಿದೆ.   ಅಂದು ವಿಭಿನ್ನ ಪ್ರಾಂತಗಳ ಅನೇಕ ಭಕ್ತರು ಈ ಪ್ರಾಕಟ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಜಗದ್ಗುರು ವಿಶ್ವಾರಾಧ್ಯ ಹಾಗೂ ಕಾಶೀ ವಿಶ್ವನಾಥರ ಕೃಪಾ ಪ್ರಸಾದವನ್ನು ಪಡೆಯುತ್ತಾರೆ.  ಭಕ್ತಾದಿಗಳು  (501) ಐದು ನೂರ ಒಂದು ಇಲ್ಲವೇ (1008) ಒಂದು ಸಾವಿರದ ಎಂಟು ರೂಪಾಯಿಗಳ ಕಾಯಂ ನಿಧಿಯನ್ನು ಶ್ರೀಪೀಠಕ್ಕೆ ಸಮಪರ್ಿಸಿದರೆ ಅವರ ಹೆಸರಿನಿಂದ ಇಲ್ಲಿ ಪೂಜಾದಿಗಳನ್ನು ನೆರವೇರಿಸಿ ಮಹಾಪ್ರಸಾದವನ್ನು ಅಂಚೆ ಮೂಲಕ ಅವರವರ ವಿಳಾಸಕ್ಕೆ ಕಳುಹಿಸಲಾಗುವುದು. 
ಶ್ರೀ ಜಗದ್ಗುರು ವಿಶ್ವಾರಾಧ್ಯ ವಿಶ್ವಭಾರತಿ ಪುರಸ್ಕಾರ ಯೋಜನೆ  ಃ
    ಭಾರತೀಯ ಪ್ರಾಚೀನ ಸಂಸ್ಕೃತ ಭಾಷೆಯಲ್ಲಿರುವ ಧರ್ಮದರ್ಶನಗಳ  ಅದರಲ್ಲೂ ವಿಶೇಷವಾಗಿ ವೀರಶೈವ ಧರ್ಮದರ್ಶನದ ಅಭ್ಯಾಸವನ್ನು ಮಾಡುತ್ತಿರುವ ಹಾಗೂ ಅದರಲ್ಲಿ ಪ್ರಾವೀಣ್ಯತೆಯನ್ನು ಪಡೆದ ಶ್ರೇಷ್ಠ ಸಂಶೋಧಕ ಸಾಹಿತಿಗಳಿಗೆ ಗೌರವವನ್ನು ಕೊಡುವ ಉದ್ದೇಶದಿಂದ ಶ್ರೀ ಕಾಶೀ ಜಗದ್ಗುರುಗಳವರು ಶ್ರೀ ಜಗದ್ಗುರು ವಿಶ್ವಾರಾಧ್ಯ ವಿಶ್ವಭಾರತಿ ಪುರಸ್ಕಾರವನ್ನು 1997ನೆಯ ಇಸ್ವಿಯಿಂದ ಕೊಡಲು ಪ್ರಾರಂಭಿಸಿದ್ದಾರೆ.  ಇಪ್ಪತ್ತೈದು ಸಾವಿರ ರೂಪಾಯಿಗಳ (25,000) ನಗದು ಹಣ, ಪ್ರಶಸ್ತಿ ಪತ್ರ, ಶಾಲು ಹಾಗೂ ಶ್ರೀಫಲಗಳನ್ನು ಈ ಪುರಸ್ಕಾರವು ಒಳಗೊಂಡಿರುತ್ತದೆ.  ಈಗಾಗಲೇ ಕನರ್ಾಟಕ, ಮಹಾರಾಷ್ಟ್ರ, ಉತ್ತರಪ್ರದೇಶಗಳಲ್ಲಿಯ ಹತ್ತು ಜನ ಮೂರ್ಧನ್ಯ ವಿದ್ವಾಂಸರಿಗೆ ಪುರಸ್ಕಾರ ನೀಡಲಾಗಿದೆ.  ಈ ಕ್ರಮವು ಮುಂದೆಯೂ ಕೂಡ ನಡೆಯುವಂಥದ್ದಾಗಿದೆ.
ಷಷ್ಠ್ಯಬ್ದಿ ನಿಮಿತ್ತವಾದ ವಿಶೇಷ ಕಾರ್ಯಕ್ರಮ:   
    1008 ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸನ್ನಿಧಿಯವರ ಷಷ್ಠ್ಯಬ್ದಿ ಮಹೋತ್ಸವದ ನಿಮಿತ್ತವಾಗಿ ಶ್ರೀ ಪೀಠದಲ್ಲಿ ದಿ. 14.8.2007 ರಿಂದ 29.11.2007 ರವರೆಗೆ 108 ದಿನಗಳ ಬೃಹತ್ ಧಾಮರ್ಿಕ ಸಮಾರಂಭವನ್ನು ಏರ್ಪಡಿಸಲಾಗುತ್ತಿದೆ.  ಈ ಅವಧಿಯಲ್ಲಿ ಶ್ರೀಪೀಠದಲ್ಲಿಯ ವಿಶ್ವನಾಥ ಲಿಂಗಕ್ಕೆ ಲಕ್ಷ ಕುಂಭಾಭಿಷೇಕ ಹಾಗೂ ಶ್ರೀ ಜಗದ್ಗುರು ವಿಶ್ವಾರಾಧ್ಯ ಲಿಂಗೋದ್ಭವ ಮೂತರ್ಿಗೆ ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮ ಇದರ ಜೊತೆಯಲ್ಲಿಯೇ ವಿವಿಧ  ಧಾಮರ್ಿಕ ಕಾರ್ಯಕ್ರಮಗಳು, ವಿದ್ವಾಂಸರ ಸನ್ಮಾನ, ದಾನ ಹಾಗೂ ಸಮಾಜಸೇವೆ ಮಾಡಿದ ಭಕ್ತರಿಗೆ ಪುರಸ್ಕಾರ ಕೊನೆಗೆ ಬೃಹತ್ ಪ್ರಮಾಣದ ವೀರಶೈವ ಸಾಹಿತ್ಯ ಸಮ್ಮೇಳನವನ್ನು ನೆರವೇರಿಸುವ ಬಹು ದೊಡ್ಡ ಯೋಜನೆಯನ್ನು ಶ್ರೀಪೀಠವು ಹಮ್ಮಿಕೊಂಡಿದೆ.  ಈ ಕಾರ್ಯಕ್ರಮಕ್ಕೆ ಎಲ್ಲ ರಾಜ್ಯಗಳ ಲಕ್ಷ ಲಕ್ಷ ಭಕ್ತಾದಿಗಳು ಪಾಲ್ಗೊಂಡು ಪ್ರಯೋಜನವನ್ನು ಪಡೆಯಲಿದ್ದಾರೆ. 
ಕಾಶೀಪೀಠದಿಂದ  ಕೊಡಮಾಡಲ್ಪಡುವ ವಿದ್ವತ್ ಪುರಸ್ಕಾರಗಳು:
1. ವಿಶ್ವಾರಾಧ್ಯ ವಿಶ್ವಭಾರತಿ  ಪುರಸ್ಕಾರ
2.  ಡಾ. ಚಂದ್ರಶೇಖರ ಕಪಾಳೆ ಸಾಹಿತ್ಯ ಪುರಸ್ಕಾರ : ಮಹಾರಾಷ್ಟ್ರದ ಸುಪ್ರಸಿದ್ಧ ವೀರಶೈವ ಮರಾಠಿ ಸಾಹಿತ್ಯ ವಿದ್ವಾಂಸರಾಗಿದ್ದ ಡಾ. ಚಂದ್ರಶೇಖರ ಕಪಾಳೆ ಇವರ ಸವಿನೆನಪಿನಲ್ಲಿ ಈ ಪುರಸ್ಕಾರವು ಕೊಡಮಾಡಲ್ಪಡುತ್ತದೆ.  ಪುರಸ್ಕೃತ ವಿದ್ವಾಂಸರಿಗೆ ಹತ್ತು ಸಾವಿರ ರೂಪಾಯಿ ನಗದು ಹಾಗೂ ಸ್ಮೃತಿಚಿನ್ನ, ಶಾಲು,  ಶ್ರೀಫಲಗಳನ್ನು ಈ ಪುರಸ್ಕಾರದಲ್ಲಿ ಅನುಗ್ರಹಿಸಲಾಗುವುದು.  ಈಗಾಗಲೇ ಮರಾಠಿ ವೀರಶೈವ ಸಾಹಿತ್ಯದಲ್ಲಿ ಕೃಷಿ ಮಾಡಿದ  ವಿದ್ವಾಂಸರುಗಳಿಗೆ ಈ ಪುರಸ್ಕಾರವು ಕೊಡಲ್ಪಟ್ಟಿದ್ದು ಮುಂದೆಯೂ ಇದು ನಿರಂತರವಾಗಿ ನಡೆಯುತ್ತದೆ.  ಮರಾಠಿಭಾಷೆಯಲ್ಲಿ ವೀರಶೈವ ಸಾಹಿತ್ಯದ ಬಗ್ಗೆ ಸೇವೆ ಸಲ್ಲಿಸಿದವರಿಗೆ ಮಾತ್ರ ಈ ಪುರಸ್ಕಾರವು ಕೊಡಲ್ಪಡುವುದು.  ಡಾ. ಚಂದ್ರಶೇಖರ ಕಪಾಳೆಯವರ ಸುಪುತ್ರರಾದ ಶ್ರೀ ಅಭಯ ಕಪಾಳೆಯವರು ಶ್ರೀ ಪೀಠಕ್ಕೆ ಒಂದು ಲಕ್ಷ ರೂಪಾಯಿ ನಿಧಿಯನ್ನು ಸಮಪರ್ಿಸಿದ್ದಾರೆ.  ಅದರಿಂದ ಬರುವ ಬಡ್ಡಿಯ ಹಣದಲ್ಲಿ ಈ ಪುರಸ್ಕಾರವನ್ನು ಕೊಡಲಾಗುವುದು.
3.  ಶ್ರೀ ವೀರಸಂಗಯ್ಯಸ್ವಾಮಿ ಆದರ್ಶ ಶಿಕ್ಷಕ ಪುರಸ್ಕಾರ:  ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕದಿಂದ ಹಿಡಿದು ವಿಶ್ವವಿದ್ಯಾಲಯದ ಮಟ್ಟದವರೆಗಿನ ಶಿಕ್ಷಕರಲ್ಲಿ ಅವರ ಶೈಕ್ಷಣಿಕ ಸೇವೆ ಮತ್ತು ಪ್ರತಿಭೆಗಳನ್ನು ಪರಿಶೀಲಿಸಿ ಪ್ರತಿ ವರುಷ ಈ ಪುರಸ್ಕಾರವನ್ನು ಕೊಡಲಾಗುವುದು.  ಇದು 2006 ನೆಯ ಸಾಲಿನಿಂದ ಆರಂಭವಾಗಿದೆ.  ವೇ. ವೀರಸಂಗಯ್ಯನವರ ಪುತ್ರರಾದ ಚಿ. ಚಂದ್ರಶೇಖರಯ್ಯ ಹಿರೇಮಠರವರು ಈ ಪುರಸ್ಕಾರಕ್ಕಾಗಿ ಒಂದು ಲಕ್ಷ ರೂಪಾಯಿ ಠೇವಣಿಯಾಗಿ ಸಮಪರ್ಿಸಿದ್ದಾರೆ.
4.  ಶಿವಕಮಲ ಸಾಹಿತ್ಯ ಪುರಸ್ಕಾರ:  ಕನರ್ಾಟಕ ಪ್ರಾಂತದ ಓರ್ವ ವೀರಶೈವ ವಿದ್ವಾಂಸರಿಗೆ ಈ ಪುರಸ್ಕಾರವನ್ನು ಕೊಡಲಾಗುತ್ತಿದ್ದು ಕಳೆದ ಮೂರು ವರ್ಷಗಳಿಂದ ಈ ಪುರಸ್ಕಾರವನ್ನು ಕೊಡಲಾಗುತ್ತಿದೆ. ಬೆಂಗಳೂರಿನ ವೀರಶೈವ ಅನುಸಂಧಾನ ಸಂಸ್ಥಾನವು ಹಮ್ಮಿಕೊಳ್ಳುವ ಧನುಮರ್ಾಸದ ಶಿವಪೂಜಾ ಅನುಷ್ಠಾನ - ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದಲ್ಲಿ ಈ ಪುರಸ್ಕಾರವನ್ನು ಕೊಡಮಾಡಲಾಗುವುದು.  ಬೆಂಗಳೂರಿನ ಸುಪ್ರಸಿದ್ಧ ವ್ಯಾಪಾರಸ್ಥರು, ಪಂಚಪೀಠಗಳ ಪರಮ ಭಕ್ತರೂ ಆದ ಲಿಂಗೈಕ್ಯ ಶಿವಪ್ಪ ಶೆಟ್ಟರ ಸ್ಮರಣಾರ್ಥವಾಗಿ ಅವರ ಚಿರಂಜೀವಿ ವಾಗೀಶ ಪ್ರಸಾದ ಇವರು ಈ ಪುರಸ್ಕಾರದ ದಾನಿಗಳಾಗಿದ್ದಾರೆ.  ಈ ಪುರಸ್ಕಾರವನ್ನು ಪಡೆಯುವ ವಿದ್ವಾಂಸರಿಗೆ ಹತ್ತು ಸಾವಿರ ರೂಪಾಯಿ ನಗದು ಹಣ, ಸ್ಮೃತಿಚಿನ್ನ, ಮಾನಪತ್ರ, ಶಾಲು, ಶ್ರೀಫಲಗಳನ್ನು ಅನುಗ್ರಹಿಸಲಾಗುವುದು. 
ಗ್ರಂಥ ಸಂಪದ ಃ
    ಶ್ರೀ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಪೂವರ್ಾಶ್ರಮದಲ್ಲಿ ಗುಳೇದಗುಡ್ಡದ ಅಮರೇಶ್ವರ ಮಠಾಧ್ಯಕ್ಷರಾಗಿದ್ದಾಗಿನಿಂದಲೂ ಸಾಹಿತ್ಯ ರಚನೆಯತ್ತ ಗಮನ ಹರಿಸಿದ್ದಾರೆ.  ಆಗ ಅವರು ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ಪ್ರಭೆ (ಕನ್ನಡ) (ಕಿರಣ 1ರಿಂದ 7ರವರೆಗೆ), ವೀರಶೈವ ಅಷ್ಟಾವರಣ ವಿಜ್ಞಾನ (ಹಿಂದಿ), ಶ್ರೀ ಸಿದ್ಧಾಂತ ಶಿಖಾಮಣಿ ಸಮೀಕ್ಷಾ (ಸಂಸ್ಕೃತ), ಶಕ್ತಿ ವಿಶಿಷ್ಟಾದ್ವೈತ ತತ್ತ್ವತ್ರಯ ವಿಮರ್ಶ (ಸಂಸ್ಕೃತ), ವೀರಶೈವ ದರ್ಶನ ಕೋಶ (ಹಿಂದಿ), ವೀರಶೈವ ಪಂಚಪೀಠ ಪರಂಪರೆ (ಕನ್ನಡ), ಶಿವಾದ್ವೈತ ಪರಿಭಾಷಾ (ಸಂಸ್ಕೃತ ಸಂಪಾದನೆ), ಶಿವಾದ್ವೈತ ಮಂಜರಿ (ಸಂಸ್ಕೃತ ಸಂಪಾದನೆ), ಶ್ರೀ ಸಿದ್ಧಾಂತ ಶಿಖಾಮಣಿ (ಮರಾಠಿ ಅನುವಾದ ಸಹಿತ, ಸಂಪಾದನೆ) ಮುಂತಾದ ಮೌಲಿಕ ಕೃತಿಗಳ ರಚನೆ ಹಾಗೂ ಸಂಪಾದನೆಯನ್ನು ಮಾಡಿ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದ್ದಾರೆ.  ಮುಂದೆ ಕಾಶೀ ಪೀಠದ ಅಧಿಪತ್ಯವನ್ನು ಸ್ವೀಕರಿಸಿದ ನಂತರವೂ ಸಹ ಬಿಡುವಿನ ಸಮಯವನ್ನು ಸಾಧಿಸಿ ಸಾಹಿತ್ಯ ಸೃಜನ ಕಾರ್ಯದತ್ತ ಗಮನ ಹರಿಸುತ್ತಿದ್ದಾರೆ.  ಈಗ ಶ್ರೀ ಮಹಾಸನ್ನಿಧಿಯು ಸಂಕಲ್ಪಿಸಿದ 'ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ಪ್ರಭೆ' ಎಂಬ ನೂರೊಂದು ಸ್ಥಲಗಳ ಎರಡು ಸಂಪುಟದ ಗ್ರಂಥವು ಬೆಂಗಳೂರು 'ಶ್ರೀ ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆ'ಯಿಂದ ಪ್ರಕಟಗೊಂಡು ದಿ|| 9-4-2000ದಂದು ಹುಬ್ಬಳ್ಳಿ ಮಹಾನಗರದಲ್ಲಿ ಜರುಗಿದ ಪಂಚಾಚಾರ್ಯ ಯುಗಮಾನೋತ್ಸವದಲ್ಲಿ ಗಜಮಹೋತ್ಸವ ಮೆರವಣಿಗೆಯ ನಂತರ ಬಿಡುಗಡೆಯಾಯಿತು.  ಎರಡು ಸಂಪುಟಗಳ ಈ ಬೃಹತ್ ಗ್ರಂಥದ ಆರು ಸಾವಿರ ಪ್ರತಿಗಳು ಮನೆ-ಮನಗಳಲ್ಲಿ ವಿರಾಜಮಾನವಾಗಿವೆ.
    ಶ್ರೀ ಮಹಾಸನ್ನಿಧಿಯವರು ಲೇಖನಕಲಾ ಪ್ರವೀಣರಾಗಿರುವಂತೆ ಪ್ರವಚನ ಕಲೆಯಲ್ಲೂ ಸಹ ನೈಪುಣ್ಯವನ್ನು ಹೊಂದಿದ್ದಾರೆ.  ಕಾಶೀ ಪೀಠದ ಜಗದ್ಗುರುತ್ವವನ್ನು ಸ್ವೀಕರಿಸಿದ ನಂತರ ಗುರುಪೂಣರ್ಿಮೆ, ಶ್ರಾವಣ ಮಾಸ, ನವರಾತ್ರಿ, ಅಧಿಕ ಮಾಸ ಮುಂತಾದ ಪರ್ವಗಳಲ್ಲಿ ತಪೋನುಷ್ಠಾನದ ಜೊತೆಗೆ ಶ್ರೀ ಸಿದ್ಧಾಂತ ಶಿಖಾಮಣಿಯ ಮೇಲೆ ಕನ್ನಡ, ಮರಾಠಿ ಹಾಗೂ ಹಿಂದೀ ಭಾಷೆಗಳಲ್ಲಿ ವಿಭಿನ್ನ ಗ್ರಾಮ ವ ನಗರಗಳಲ್ಲಿ ಆಶೀರ್ವಚನಗಳನ್ನು ದಯಪಾಲಿಸಿದ್ದಾರೆ.  ಹಿಂದೀ ಭಾಷೆಯಲ್ಲಿರುವ ಧ್ವನಿಸುರುಳಿಗಳನ್ನು ಸಂಗ್ರಹಿಸಿಕೊಂಡು ಸೊಲ್ಲಾಪುರದ ಡಾ| ಶೇ.ದೇ. ಪಸಾರಕರ ಇವರು ಮರಾಠಿಗೆ ಅನುವಾದಿಸಿ ಸಂಪಾದನೆಯನ್ನು ಮಾಡಿರುತ್ತಾರೆ.  ಆ ಸಮಗ್ರ ಸಂಪಾದನೆಯ ಕೃತಿಗೆ 'ಜನ್ಮ ಹಾ ಅಕೇರ ಚ'  (ಇದುವೇ ಕೊನೆಯ ಜನ್ಮ) ಎಂಬ ಶಿರೋನಾಮೆಯನ್ನು ಕೊಡಲಾಗಿದೆ.  ಆ ಸಮಗ್ರ ಕೃತಿಯು ದಿ|| 25-12-2000ದಂದು ನಾಂದೇಡ ನಗರದಲ್ಲಿ ಜರುಗಿದ ಮಹಾರಾಷ್ಟ್ರ ವೀರಶೈವ ಮಹಾಸಮ್ಮೇಳನದಲ್ಲಿ ಪಲ್ಲಕ್ಕಿ ಮೆರವಣಿಗೆಯ ನಂತರ ಪಂಚಪೀಠಾಧೀಶ್ವರರ ಪ್ರಸಾದಹಸ್ತದಿಂದ ಬಿಡುಗಡೆಯಾಯಿತು.  ಅಂದಿನ ದಿನವೇ ಈ ಗ್ರಂಥದ ಸಾವಿರ ಪ್ರತಿಗಳು ಮಾರಾಟವಾದದ್ದು ಒಂದು ದಾಖಲೆಯಾಗಿದೆ.
ಕೋಟಿ ಬಿಲ್ವಾರ್ಚನ ಃ
    ಶ್ರೀ ಜಗದ್ಗುರುಗಳು 1997ನೆಯ ಇಸವಿ ಆಷಾಢ ಮಾಸದ ಗುರುಪೌಣರ್ಿಮೆಯಿಂದ ಕಾತರ್ಿಕ ಮಾಸದ ಪೌಣರ್ಿಮೆಯವರೆಗೆ ವಿಶ್ವಶಾಂತಿಗಾಗಿ ಕೋಟಿ ಬಿಲ್ವಾರ್ಚನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿದಿನವೂ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಸಾಯಂಕಾಲ ಶ್ರೀ ಸಿದ್ಧಾಂತ ಶಿಖಾಮಣಿಯ ಆಶೀರ್ವಚನವನ್ನು ದಯಪಾಲಿಸುತ್ತಿದ್ದರು.  ಈ ಕಾಲಾವಧಿಯಲ್ಲಿ 80 ಸಾವಿರಕ್ಕೂ ಹೆಚ್ಚು ಜನ ಭಕ್ತಾದಿಗಳು ಬಂದು ಪೂಜೆಯಲ್ಲಿ ಪಾಲ್ಗೊಂಡಿದ್ದರು.  ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳವರ 'ಜನ್ಮ ಸುವರ್ಣ ಮಹೋತ್ಸವವನ್ನು' ಆಚರಿಸಲಾಯಿತಲ್ಲದೇ ಶ್ರೀ ಸಿದ್ಧಾಂತ ಶಿಖಾಮಣಿಯ ಮೇಲೆ ಒಂದು ರಾಷ್ಟ್ರಮಟ್ಟದ ಸಂಗೋಷ್ಠಿ ಚಚರ್ಾಸತ್ರವನ್ನೂ ಸಹ ಆಯೋಜಿಸಲಾಗಿತ್ತು.  ಆ ಚಚರ್ಾಗೋಷ್ಠಿಯಲ್ಲಿ ಉತ್ತರಪ್ರದೇಶ, ಬಿಹಾರ, ದಿಲ್ಲಿ, ಮಹಾರಾಷ್ಟ್ರ, ಕನರ್ಾಟಕ, ಆಂಧ್ರ ಹಾಗೂ ತಮಿಳ್ನಾಡು ಪ್ರದೇಶಗಳಿಂದ ಆಗಮಿಸಿದ ವಿದ್ವಾಂಸರುಗಳು ಭಾಗವಹಿಸಿ ತಮ್ಮ ಪ್ರಬಂಧವಾಚನಗೈದರು.
    ಈ ಕಾರ್ಯಕ್ರಮದ ಸಮಾಪನ ಸಮಾರಂಭಕ್ಕೆ ಅನೇಕ ಪ್ರಾಂತಗಳಿಂದ ಶತಾಧಿಕ ಶಿವಾಚಾರ್ಯರು ಮತ್ತು ಪಂಚಪೀಠಗಳ ಮಹಾಚಾರ್ಯರೂ ಸಹ ಆಗಮಿಸಿದ್ದರು.  ಈ ಪ್ರಸಂಗದಲ್ಲಿ ಭಕ್ತಾದಿಗಳಿಂದ ಬಂದ ವಿಶೇಷ ದೇಣಿಗೆಯಿಂದ ಸುಮಾರು 30 ಲಕ್ಷ ರೂಪಾಯಿಗಳ ವೆಚ್ಚದಿಂದ ಶ್ರೀ ಜಗದ್ಗುರು ವಿಶ್ವಾರಾಧ್ಯ ಭಕ್ತನಿವಾಸವು ನಿಮರ್ಾಣಗೊಂಡಿದೆ.  ಇದರಿಂದಾಗಿ ಇಂದು ಮಹಾಪೀಠದಲ್ಲಿ ಬಂದ ಭಕ್ತಾದಿಗಳಿಗೆ ವಸತಿಯ ಯೋಗ್ಯ ವ್ಯವಸ್ಥೆಯೂ ಆಗಿರುತ್ತದೆ.
    ಜಗದ್ಗುರುಗಳವರು ದಿ| 17-10-2001 ರಿಂದ ದಿ| 5-12-2001ರವರೆಗಿನ  ಕಾಲಾವಧಿಯಲ್ಲಿ ತಮ್ಮ ಪೀಠಾರೋಹಣದ ದ್ವಾದಶ ವಾಷರ್ಿಕ ಮಹೋತ್ಸವದ ನಿಮಿತ್ತವಾಗಿ ಮಹಾಪೀಠದಲ್ಲಿ ನೂತನವಾಗಿ ಸ್ಥಾಪಿತಗೊಂಡ ಶ್ರೀ ವಿಶ್ವನಾಥ ಲಿಂಗಕ್ಕೆ ಅತಿರುದ್ರ ಮಹಾಭಿಷೇಕ, ಬಿಲ್ವಾರ್ಚನೆ ಹಾಗೂ ಕೋಟಿ ದೀಪೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.  ಸತತವಾಗಿ 50 ದಿನಗಳವರೆಗೆ ಜರುಗಿದ ಈ ಪೂಜಾ ಸಮಾರಂಭದಲ್ಲಿ ವಿಭಿನ್ನ ಪ್ರಾಂತಗಳಿಂದ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬಂದಿದ್ದರು.  ಈ ಪ್ರಸಂಗದಲ್ಲಿ ನೂತನವಾಗಿ ಭಕ್ತನಿವಾಸವನ್ನೂ ಸಹ ನಿಮರ್ಾಣಗೊಳಿಸಲಾಗಿದೆ.
    ಹೀಗೆ ಶ್ರೀ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ಪೀಠಾರೋಹಣದ ಹದಿನೆಂಟು  ವರುಷಗಳ ಕಾಲಾವಧಿಯಲ್ಲಿ ಅನೇಕ ವಿಧವಾದ ರಚನಾತ್ಮಕ ವಿಕಾಸ ಕಾರ್ಯಗಳನ್ನು ಮಾಡಿರುವರಲ್ಲದೆ ಇನ್ನು ಮುಂದೆಯೂ ಸಹ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಸದಾ ಕಾರ್ಯಪ್ರವೃತ್ತರಾಗಲು ಸಂಕಲ್ಪಿಸಿದ್ದಾರೆ.  ಶ್ರೀ ಸನ್ನಿಧಿಯ ಕ್ರಿಯಾಶಕ್ತಿ ಹಾಗೂ ಜ್ಞಾನಶಕ್ತಿಗಳೆರಡೂ ಮಾನವ ಸಮಾಜಕ್ಕೆ ಮಾರ್ಗದರ್ಶಕವಾಗುತ್ತಿರುವುದು ನಮ್ಮ ದೇಶದ ಭಕ್ತಕೋಟಿಯ ಅಹೋಭಾಗ್ಯವೇ ಸರಿ. 
ಶ್ರೀಪೀಠದ ನೂತನ ಭಕ್ತನಿವಾಸಗಳು:
    ಶ್ರೀಪೀಠದಲ್ಲಿ ಯಾತ್ರಾಥರ್ಿಗಳಾಗಿ ಬಂದ ಭಕ್ತರಿಗೆ ಉಚಿತವಾಗಿ ನಿವಾಸದ ವ್ಯವಸ್ಥೆಯನ್ನು ಮಾಡುವುದಕ್ಕಾಗಿ ಶ್ರೀ ಸನ್ನಿಧಿಯವರು 1997ನೆಯ ಇಸ್ವಿಯಲ್ಲಿ ಶ್ರೀಪೀಠದಲ್ಲಿ ಜರುಗಿದ ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮದ ನಂತರ ಭಕ್ತ ನಿವಾಸದ ಯೋಜನೆಯನ್ನು ಪ್ರಾರಂಭಿಸಿದ್ದಾರೆ.  ಆ ಯೋಜನೆಯ ಅಡಿಯಲ್ಲಿ ಭಕ್ತಾದಿಗಳ ಉದಾರ ದೇಣಿಗೆಯಿಂದ ಭಕ್ತ ನಿವಾಸಗಳನ್ನು ನಿಮರ್ಿಸಲಾಗಿದೆ.  ಇವುಗಳಲ್ಲಿ
1.  ಶ್ರೀ ಜಗದ್ಗುರು ವಿಶ್ವಾರಾಧ್ಯ ಭಕ್ತನಿವಾಸ
2.  ಶ್ರೀ ಜಗದ್ಗುರು ಹರೇಶ್ವರ ಭಕ್ತನಿವಾಸ
3.  ಶ್ರೀ ಜಗದ್ಗುರು ವೀರಭದ್ರ ಭಕ್ತನಿವಾಸ
4.  ಶ್ರೀ ಜಗದ್ಗುರು ರಾಜೇಶ್ವರ ಭಕ್ತನಿವಾಸ
5.  ಶ್ರೀ ಜಗದ್ಗುರು ಶಿವಲಿಂಗ ಭಕ್ತನಿವಾಸ
6.  ಶ್ರೀ ಜಗದ್ಗುರು ಪಂಚಾಕ್ಷರ ಭಕ್ತನಿವಾಸ
7.  ಶ್ರೀ ಜಗದ್ಗುರು ವೀರಭದ್ರ  ಸ್ಮೃತಿಭವನ
8.  ಶ್ರೀ ಜಗದ್ಗುರು ವಿಶ್ವೇಶ್ವರ ಭಕ್ತನಿವಾಸ
    ಹೀಗೆ ಒಟ್ಟು 150 ಕೊಠಡಿಗಳ  ವಿಭಿನ್ನ ಭಕ್ತನಿವಾಸಗಳನ್ನು ನಿಮರ್ಿಸಲಾಗಿದ್ದು 2007ನೆಯ ಇಸ್ವಿಯಲ್ಲಿ ಶ್ರೀ ಜಗದ್ಗುರುಗಳವರ ಷಷ್ಠ್ಯಬ್ದಿ ಮಹೋತ್ಸವದ ಶುಭಸಂದರ್ಭದಲ್ಲಿ ಇವೆಲ್ಲವುಗಳು ವಿಧಿವತ್ತಾಗಿ ಉದ್ಘಾಟನೆಗೊಳ್ಳುವವು.  ಶ್ರೀ ಪೀಠದಲ್ಲಿ ಏಕಕಾಲದಲ್ಲಿ ಎರಡು ಸಾವಿರ ಭಕ್ತಾದಿಗಳು ಆಗಮಿಸಿದರೂ ಅವರಿಗೆ ವ್ಯವಸ್ಥಿತವಾದ ನಿವಾಸ ಹಾಗೂ ಮಹಾಪ್ರಸಾದದ ವ್ಯವಸ್ಥೆಯನ್ನು ಶ್ರೀ ಪೀಠದಲ್ಲಿ  ಮಹಾಸನ್ನಿಧಿಯವರು ಮಾಡಿದ್ದಾರೆ.

    ಶ್ರೀ ಕಾಶೀ ಜ್ಞಾನಸಿಂಹಾಸನದ ಜಗದ್ಗುರು ಪರಂಪರೆ
ಶ್ರೀ ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಭಗವತ್ಪಾದರು (ಕೃತಯುಗದ ಆದಿ)
ಶ್ರೀ ಜಗದ್ಗುರು ಪಂಚವಕ್ತ್ರ ಶಿವಾಚಾರ್ಯ ಭಗವತ್ಪಾದರು (ತ್ರೇತಾಯುಗದ ಆದಿ)
ಶ್ರೀ ಜಗದ್ಗುರು ವಿಶ್ವಕರ್ಣ ಶಿವಾಚಾರ್ಯ ಭಗವತ್ಪಾದರು (ದ್ವಾಪರಯುಗದ ಆದಿ)
ಶ್ರೀ ಜಗದ್ಗುರು ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು (ಕಲಿಯುಗದ ಆದಿ)

1.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು (ಗಾದೀಸ್ವಾಮಿ)
                         ಕ್ರಿ.ಪೂ.2001-1690
2.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ.1690-1576
3.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ.1576-1501
4.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ.1501-1400
5.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ.1400-1275
6.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ.1275-1195
7.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ.1195-1131
8.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ.1131-1076
9.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ.1076-1019
10.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ.1019-956
11.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 956-881
12.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 881-847
13.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 847-802
14.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 802-765
15.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 765-699
16.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 699-668
17.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 668-643
18.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 643-626
19.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 626-611
20.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 611-590
21.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 590-513
22.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 513-478
23.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 478-438
24.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 438-393
25.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 393-342
26.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 342-314
27.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 314-300
28.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 300-233
29.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 233-214
30.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 214-190
31.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 160- 168
32.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 198-116
33.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 116-78
34.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 78-36
35.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಪೂ. 36-27
36.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.      2 -  5
37.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.     5- 59  
38.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.   59-81     
39.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.   81- 105
40.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.   105- 131
41.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.   131- 155
42.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.   155- 214
43.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.   214-228
44.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.   228-285
45.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.   285-354
46.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.   354-417
47.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ.   417- 438
48.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 438-449
49.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 449- 521
50.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 521-553
51.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 553-674
52.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 674-759
53.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 759-793
54.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 793-829
55.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 829-882
56.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 882- 940
57.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 940- 996
58.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 996-1006
59.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1006- 1057
60.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1057- 1103
61.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1103-1122
62.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1122-1187
63.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1187-1201
64.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1201-1275
65.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1275-1347
66.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1347-1356
67.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1356-1429
68.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1429-1442
69.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1442-1460
70.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1460-1527
71.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1527-1547
72.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1547-1583
73.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1583-1631
74.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1631-1639
75.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1639-1663
76.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1663-1710
77.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು ಕ್ರಿ.ಶ. 1710-1750
78.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
    ಉಫರ್್ ಶ್ರೀ ಜ|| ಶಿವಲಿಂಗ ಶಿವಾಚಾರ್ಯರು   ಕ್ರಿ.ಶ. 1750-1825
79.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
    ಉಫರ್್ ಶ್ರೀ ಜ|| ಹರೇಶ್ವರ ಶಿವಾಚಾರ್ಯರು   ಕ್ರಿ.ಶ. 1825-1879
80.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
    ಉಫರ್್ ಶ್ರೀ ಜ|| ವೀರಭದ್ರ ಶಿವಾಚಾರ್ಯರು   ಕ್ರಿ.ಶ. 1879-1891
81.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
    ಉಫರ್್ ಶ್ರೀ ಜ|| ರಾಜೇಶ್ವರ ಶಿವಾಚಾರ್ಯರು   ಕ್ರಿ.ಶ. 1891-1907
82.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
    ಉಫರ್್ ಶ್ರೀ ಜ|| ಶಿವಲಿಂಗ ಶಿವಾಚಾರ್ಯರು   ಕ್ರಿ.ಶ. 1907-1932
83.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
     ಉಫರ್್ ಶ್ರೀ ಜ|| ಪಂಚಾಕ್ಷರ ಶಿವಾಚಾರ್ಯರು   ಕ್ರಿ.ಶ. 1932-1944
84.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
    ಉಫರ್್  ಶ್ರೀ ಜ|| ವೀರಭದ್ರ ಶಿವಾಚಾರ್ಯರು   ಕ್ರಿ.ಶ. 1944-1948
85.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
    ಉಫರ್್ ಶ್ರೀ  ಜ|| ವಿಶ್ವೇಶ್ವರ ಶಿವಾಚಾರ್ಯರು   ಕ್ರಿ.ಶ. 1948-1989
86.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು 
    ಉಫರ್್ ಶ್ರೀ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು  1989
    ಇಲ್ಲಿಯವರೆಗೆ  ವರ್ಣನೆಯನ್ನು ಮಾಡಿದ ಪಂಚಪೀಠಗಳಲ್ಲಿ ಪಟ್ಟಾಭಿಷಿಕ್ತರಾದವರಿಗೆ ಪಂಚಾಚಾರ್ಯರೆಂದು  ಕರೆಯುತ್ತಾರೆ.  ಈ ಪಂಚಪೀಠಗಳ ಆದಿಆಚಾರ್ಯರೇ ವೀರಶೈವ ಧರ್ಮವನ್ನು ಭೂಲೋಕದಲ್ಲಿ ಪ್ರಪ್ರಥಮವಾಗಿ ಸಂಸ್ಥಾಪಿಸಿದ್ದಾರೆ.