panchapeeth.com

Veerashaiva Panchapeeth Parampare

Sri Kedara Peeth Parampare

Ekuramaಶ್ರೀ ಕೇದಾರ ಪೀಠದ ಪರಂಪರೆ

    ಭಾರತದ ಉತ್ತರ ದಿಕ್ಕಿನಲ್ಲಿರುವ ಹಿಮಾಲಯ ಪರ್ವತವು  ದೇಶದ ಸುರಕ್ಷತೆಗಾಗಿ  ನೈಸಗರ್ಿಕವಾದ ಕೋಟೆಯ ಗೋಡೆಯಂತೆ ಕಂಗೊಳಿಸುತ್ತದೆ.  ಅನಾದಿಕಾಲದಿಂದ ಅನೇಕ ಋಷಿ-ಮುನಿಗಳು ಅಲ್ಲಿ ವಾಸಿಸಿ ತಪಸ್ಸನ್ನಾಚರಿಸಿರುವುದರಿಂದ ಅದೊಂದು ಪವಿತ್ರ ಸ್ಥಳವಾಗಿ ಪರಿವರ್ತನೆಗೊಂಡು ಯಾತ್ರಾಥರ್ಿಗಳಿಗೆ ಶ್ರದ್ಧಾಭಕ್ತಿಯ ಸ್ಥಾನವಾಗಿದೆ.
    ಈ ಹಿಮಾಲಯದಲ್ಲಿ ಓಖೀಮಠ, ಕೇದಾರನಾಥ, ಗುಪ್ತಕಾಶಿ, ಮಧ್ಯಮಾಹೇಶ್ವರ, ಕಾಳೀಮಠ, ಕಾಳೀಶಿಲಾ, ತ್ರಿಯುಗಿ ನಾರಾಯಣ, ಗೌರೀಕುಂಡ, ಗೋಪೇಶ್ವರ, ತುಂಗನಾಥ, ಕಲ್ಪೇಶ್ವರ, ಸೋನಪ್ರಯಾಗ, ರುದ್ರಪ್ರಯಾಗ, ಬದ್ರೀನಾಥ-ಮುಂತಾದ ಪವಿತ್ರ ಕ್ಷೇತ್ರಗಳು ದರ್ಶನೀಯಗಳಾಗಿವೆ.
ಶ್ರೀ ಜಗದ್ಗುರು  ಏಕೋರಾಮಾರಾಧ್ಯರು ಃ
    ಶಿವನ ಅಘೋರಮುಖ ಸಂಜಾತರಾದ ಶ್ರೀ ಜಗದ್ಗುರು ಏಕೋರಾಮಾರಾಧ್ಯ ಶಿವಾಚಾರ್ಯರು ಶಿವನ ಆದೇಶದಂತೆ ದ್ರಾಕ್ಷಾರಾಮ ಕ್ಷೇತ್ರದ ಶ್ರೀ ರಾಮನಾಥ (ಭೀಮನಾಥ)  ಶಿವಲಿಂಗದಿಂದ ಅವತರಿಸಿ ವೀರಶೈವ ಮತವನ್ನು ಸಂಸ್ಥಾಪಿಸಿರುತ್ತಾರೆ.   ಕೃತಯುಗದಲ್ಲಿ ತ್ರ್ಯಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ತ್ರಿವಕ್ತ್ರಶಿವಾಚಾರ್ಯ,  ದ್ವಾಪರಯುಗದಲ್ಲಿ ಘಂಟಾಕರ್ಣ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಏಕೋರಾಮಾರಾಧ್ಯ ಶಿವಾಚಾರ್ಯರೆಂಬ ನಾಮಗಳು ಇವರಿಗೆ ಯುಗಭೇದದಿಂದ ಪ್ರಸಿದ್ಧವಾಗಿವೆ.
        ದ್ರಾಕ್ಷಾರಾಮೇ ರಾಮನಾಥಲಿಂಗಾದ್ಯುಗಚತುಷ್ಟಯೇ |
        ಏಕೋರಾಮಸ್ಯ ಜನನಮಾವಾಸಸ್ತು ಹಿಮಾಲಯೇ ||
    ಸ್ವಾಯಂಭುವಾಗಮದ ಈ ಪ್ರಮಾಣಾನುಸಾರವಾಗಿ ದ್ರಾಕ್ಷಾರಾಮ ಕ್ಷೇತ್ರದ ಶ್ರೀರಾಮನಾಥ (ಭೀಮನಾಥ) ಶಿವಲಿಂಗದಿಂದ ಪ್ರಾದುರ್ಭವಿಸಿದ ಶ್ರೀ ಜಗದ್ಗುರು ಏಕೋರಾಮಾರಾಧ್ಯ ಭಗವತ್ಪಾದರು ಧರ್ಮಪ್ರಚಾರಕ್ಕಾಗಿ ಹಿಮಾಲಯದಲ್ಲಿ ಒಂದು ಪೀಠವನ್ನು ಸಂಸ್ಥಾಪಿಸಿದರು.  ಇದಕ್ಕೆ ಕೇದಾರ ಪೀಠ ಇಲ್ಲವೇ ವೈರಾಗ್ಯ ಸಿಂಹಾಸನವೆಂದು ಕರೆಯುವರು.  ಈ ಸಿಂಹಾಸನವು ಉತ್ತರಪ್ರದೇಶದ ಚಮೋಲಿ ಜಿಲ್ಲೆಯ ಓಖೀಮಠ ಎಂಬಲ್ಲಿ ಇದೆ.  ಇಂದು 'ಉತ್ತರಾಂಚಲ' ಎಂಬ ನೂತನ ರಾಜ್ಯದ ಉದಯವಾಗಿದೆ.  ಆ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿ ಸದ್ಯ ಓಖೀಮಠವಿದೆ.
    ಈ ಪೀಠದ ಕೃತಯುಗದ ಆಚಾರ್ಯರಾದ ಶ್ರೀ ತ್ರ್ಯಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಆ ಕಾಲದ ಸೂರ್ಯವಂಶದ ಶ್ರೀ ಮಾಂಧಾತಾ ಮಹಾರಾಜನಿಗೆ ವೀರಶೈವ ತತ್ತ್ವಗಳನ್ನು ಉಪದೇಶಿಸಿದ್ದರು.  ಇವನು ತನ್ನ ಅಂತ್ಯಸಮಯವನ್ನು ಈ ಗುರುಸ್ಥಾನದಲ್ಲಿಯೇ ಕಳೆದು ಶಿವಸಾಯುಜ್ಯವನ್ನು ಪಡೆದಿದ್ದಾನೆ.  ಅಂತೆಯೇ ಶ್ರೀ ಮಹಾರಾಜನ ಶಿಲಾಮೂತರ್ಿಯು ಇಂದಿಗೂ ಓಖೀಮಠದಲ್ಲಿ ವಿರಾಜಮಾನವಾಗಿದೆ.
    ಈ ಪೀಠದ ದ್ವಾಪರಯುಗದ ಆಚಾರ್ಯರಾದ ಶ್ರೀ ಘಂಟಾಕರ್ಣ ಶಿವಾಚಾರ್ಯ ಮಹಾಸ್ವಾಮಿಗಳು ಕೇದಾರದಿಂದ ಕಾಶೀ ಕ್ಷೇತ್ರದವರೆಗೆ ಉತ್ತರ ಭಾರತದಲ್ಲಿ ಸಂಚರಿಸಿ ವೀರಶೈವ ತತ್ತ್ವಗಳನ್ನು ಉಪದೇಶಿಸಿದ್ದಾರೆ.  ಅವರು ಕಾಶಿಗೆ ಬಂದಾಗ ಶ್ರೀ ವ್ಯಾಸಮಹಷರ್ಿಗಳು ಇವರಿಂದ ವೀರಶೈವ ತತ್ತ್ವೋಪದೇಶವನ್ನು ಪಡೆದು ಧನ್ಯರಾಗಿದ್ದರೆಂಬುದಕ್ಕೆ ಇಂದು ವ್ಯಾಸಕಾಶಿಯಲ್ಲಿ ವ್ಯಾಸೇಶ್ವರ ಮಂದಿರದಲ್ಲಿ ಇರುವ ಅಂಗೈಯಲ್ಲಿ ಇಷ್ಟಲಿಂಗವನ್ನು ಇರಿಸಿ ಪೂಜಿಸುವ ಘಂಟಾಕರ್ಣ ಶಿವಾಚಾರ್ಯರ ಶಿಲಾಮೂತರ್ಿಯೇ ಪ್ರತ್ಯಕ್ಷ ಪ್ರಮಾಣವಾಗಿದೆ.
    ಶ್ರೀ ವ್ಯಾಸಮಹಷರ್ಿಗಳು ಘಂಟಾಕರ್ಣ ಶಿವಾಚಾರ್ಯರ ಶಿಷ್ಯರಾಗಿದ್ದರೆಂಬುದಕ್ಕೆ-
        ಪಾರಾಶರ್ಯಸ್ತದಾರಭ್ಯ ಶಂಭುಭಕ್ತಿಪರೋಭವತ್ |
        ಲಿಂಗಂ ವ್ಯಾಸೇಶ್ವರಂ ಸ್ಥಾಪ್ಯ ಘಂಟಾಕರ್ಣಹ್ರದಾಗ್ರತಃ ||
        ವಿಭೂತಿಭೂಷಣೋ ನಿತ್ಯಂ ನಿತ್ಯಂ ರುದ್ರಾಕ್ಷಭೂಷಣಃ |
        ರುದ್ರಸೂಕ್ತಪರೋ ನಿತ್ಯಂ ನಿತ್ಯಂ ಲಿಂಗಾರ್ಚಕೋಭವತ್ ||
                    (ಕಾಶೀಖಂಡ 95, ಅಧ್ಯಾಯ 68-69)
    ಎಂಬ ಕಾಶೀಖಂಡದ ಈ ಶ್ಲೋಕಗಳು ಆಧಾರವಾಗಿವೆ.
    ಬಾಣಾಸುರನ ಮಗಳಾದ ಕುಮಾರಿ ಉಷಾದೇವಿಯು ಈ ಗುರುಪೀಠದಲ್ಲಿಯೇ ಇದ್ದು ಸಕಲ ಶಾಸ್ತ್ರಗಳ ಅಧ್ಯಯನವನ್ನು ಮಾಡಿದ್ದಳು.  ಮುಂದೆ ಇವಳ ವಿವಾಹವು ಶ್ರೀ ಅನಿರುದ್ಧನೊಡನೆ  ನೆರವೇರಿತು.  ಶ್ರೀಮತಿ ಉಷಾದೇವಿಯು ತನ್ನ ಪತಿಯೊಡನೆ ಗುರುಸೇವೆಯನ್ನು ಮಾಡುತ್ತ ಬಹುಕಾಲದವರೆಗೆ ಗುರುಸ್ಥಾನದಲ್ಲಿಯೇ ವಾಸಮಾಡಿ ಕೊನೆಗೆ ಗುರುಋಣದಿಂದ ಮುಕ್ತಳಾಗಲು ಒಂದು ಭವ್ಯವಾದ ಮಠವನ್ನು ಕಟ್ಟಿಸಿಕೊಟ್ಟಿದ್ದಾಳೆ.  ಅದುವೇ ಇಂದು ಉಷಾಮಠ ಇಲ್ಲವೇ ಓಖೀಮಠವೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ.
    ಈ ಪೀಠದ ಶ್ರೀ ಜಗದ್ಗುರು ಏಕೋರಾಮಾರಾಧ್ಯರು ಅನಂತಕಾಲದವರೆಗೆ ವೈರಾಗ್ಯ ಸಿಂಹಾಸನಾಧಿಪತಿಗಳಾಗಿ ಉತ್ತರ ಭಾರತದ ಅನೇಕ ಸ್ಥಾನಗಳಲ್ಲಿ ವೀರಶೈವ ತತ್ತ್ವಬೋಧೆಯನ್ನು ಮಾಡಿ ಈ ಮತವನ್ನು ಸ್ಥಿರಗೊಳಿಸಿ, ತಾವು ಪುನಃ ತಮ್ಮ ಉದ್ಭವಸ್ಥಾನವಾದ ದ್ರಾಕ್ಷಾರಾಮ ಕ್ಷೇತ್ರದ ರಾಮನಾಥ (ಭೀಮನಾಥ) ಲಿಂಗದಲ್ಲಿಯೇ ಐಕ್ಯರಾದರು. 
ಶ್ರೀ ಜಗದ್ಗುರು ಆನಂದಲಿಂಗ ಶಿವಾಚಾರ್ಯರು ಃ
    ಶ್ರೀ ಕೇದಾರ ಪೀಠದ ಪರಂಪರೆಯಲ್ಲಿ ಮಹಾನ್ ತಪಸ್ವಿಗಳೂ, ಯೋಗಸಿದ್ಧರೂ  ಆದ ಅನೇಕ ಜನ ಆಚಾರ್ಯರು ಆಗಿಹೋಗಿದ್ದಾರೆ.  ಅವರಲ್ಲಿ ಶ್ರೀ ಜಗದ್ಗುರು ಆನಂದಲಿಂಗ ಶಿವಾಚಾರ್ಯರ ಹೆಸರು ಉಲ್ಲೇಖನೀಯವಾಗಿದೆ.  ಅಜರ್ುನನ ಪ್ರಪೌತ್ರನೂ, ಅಭಿಮನ್ಯುವಿನ ಪೌತ್ರನೂ, ಪರೀಕ್ಷಿತನ ಪುತ್ರನೂ ಆದ ಶ್ರೀ ಜನಮೇಜಯ ಮಹಾರಾಜನು ಇವರಲ್ಲಿ ಅನನ್ಯ ಭಕ್ತಿಯಿಂದ ವತರ್ಿಸುತ್ತಿದ್ದನಲ್ಲದೇ ತನ್ನ ಆಡಳಿತದಲ್ಲಿರುವ ಕೇದಾರ ಕ್ಷೇತ್ರವನ್ನು ಈ ಮಹಾತ್ಮರಿಗೆ ದಾನಮಾಡಿ ತಾಮ್ರಶಾಸನವನ್ನು ಬರೆದುಕೊಟ್ಟಿರುತ್ತಾನೆ.  ಈ ತಾಮ್ರಶಾಸನವು ಅತಿ ಮಹತ್ತ್ವದ್ದಾಗಿರುವುದರಿಂದ ಈ ಕೆಳಗೆ ಉಲ್ಲೇಖಿಸಲ್ಪಟ್ಟಿದೆ.
        || ಶ್ರೀ ಕೇದಾರೇಶ್ವರಾಯ ನಮಃ ||
    ಸ್ವಸ್ತಿ ಶ್ರೀ ವಿಜಯಾಭ್ಯುದಯ ಯುಧಿಷ್ಠರ ಶಕೇ ಪ್ಲವಂಗಾಖ್ಯೇ ಏಕೋನನವತಿತಮವತ್ಸರೇ  ಸಹಸಿ ಮಾಸೇ ಅಮಾವಾಸ್ಯಾಯಾಂ ಸೋಮವಾಸರೇ ಶ್ರೀಮನ್ಮಹಾರಾಜಾಧಿರಾಜ ಪರಮೇಶ್ವರ ವೈಯಾಘ್ರಪದಗೋತ್ರಜ ಶ್ರೀ ಜನಮೇಜಯ ಭೂಪಾಲಃ ಇಂದ್ರಪ್ರಸ್ಥನಗರೀ ಸಿಂಹಾಸನಸ್ಥಃ ಸಕಲ ವಣರ್ಾಶ್ರಮ ಧರ್ಮ ಪರಿಪಾಲಕಃ ಉತ್ತರ ಹಿಮಾಲಯೇ ಶ್ರೀ ಕೇದಾರ ಕ್ಷೇತ್ರೇ ತತ್ರತ್ಯಮುನೇರುಷಾಮಠಸ್ಯ ಶ್ರೀ ಗೋಸ್ವಾಮಿ ಆನಂದಲಿಂಗ ಜಂಗಮ ಶ್ರೀಮಚ್ಛಿಷ್ಯ ಜ್ಞಾನಲಿಂಗ ಜಂಗಮದ್ವಾರ ಆರಾಧಿತ ಶ್ರೀ ಕೇದಾರನಾಥಸ್ಯ ಪೂಜಾರ್ಥಂ ಚತುಹಸೀಮಾ ಪರಿಕ್ರಮಃ| ಪೂರ್ವಭಾಗೇ ದಕ್ಷಿಣವಾಹಿನೀ ಮಂದಾಕಿನೀ, ಪಶ್ಚಿಮ ದಕ್ಷಿಣಭಾಗೇ ಕ್ಷೀರಗಂಗಾ, ಉತ್ತರ ಪಶ್ಚಿಮೇ ಮಧುಗಂಗಾ, ಪೂವರ್ೋತ್ತರ ಭಾಗೇ ಸ್ವರ್ಗದ್ವಾರ ನದೀ, ದಕ್ಷಿಣೇ ಸರಸ್ವತೀ, ಮಂದಾಕಿನ್ಯೋಃ ಸಂಗಮಃ| ಏತನ್ಮಧ್ಯೇ ಶ್ರೀ ಕೇದಾರ ಕ್ಷೇತ್ರಮ್| ಭವಚ್ಛಿಷ್ಯ ಪರಂಪರಯಾ ಚಂದ್ರಾರ್ಕ ಪರ್ಯಂತಂ ನಿಧಿನಿಕ್ಷೇಪ ಜಲ ಪಾಷಾಣಾಗಾಮಿ ಸಿದ್ಧಸಾಧ್ಯ ತೇಜಃಸಾಮ್ಯಸಹಿತಂ ಸ್ವಬುದ್ಯಾನುಕೂಲ್ಯೇನಾಸ್ಮನ್ಮಾತೃ ಸಮಯೇ ಸಹಿರಣ್ಯ ಮಂದಾಕಿನೀ ಜಲಧಾರಾಪೂರ್ವಕಂ ಕ್ಷೇತ್ರಮಿದಂ ಹಸ್ತೇ ದತ್ತವಾನಸ್ಮಿ| ಏತದ್ಧರ್ಮ ಸಾಧನಸ್ಯ ಸಾಕ್ಷಿಣಃ -
    ಆದಿತ್ಯಚಂದ್ರಾವನಿಲೋನಲಶ್ಚ ದ್ಯೌಭರ್ೂಮಿರಾಪೋ ಹೃದಯಂ ಯಮಶ್ಚ|
    ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಂತಿ ನರಸ್ಯ ವೃತ್ತಮ್||
    ದಾನಪಾಲನಯೋರ್ಮಧ್ಯೇ ದಾನಾಚ್ಛ್ರೇಯೋನುಪಾಲನಮ್|
    ದಾನಾತ್ ಸ್ವರ್ಗಮವಾಪ್ನೋತಿ ಪಾಲನಾದ್ ದ್ವಿಗುಣಂ ಫಲಮ್||
    ಸ್ವದತ್ತಾದ್ ದ್ವಿಗುಣಂ ಪುಣ್ಯಂ ಪರದತ್ತಾನುಪಾಲನಮ್|
        ಪರದತ್ತಾಪಹಾರೇಣ ಸ್ವದತ್ತಂ ನಿಷ್ಫಲಂ ಭವೇತ್||
        ಸ್ವದತ್ತಾ ಪುತ್ರಿಕಾ ಜ್ಞೇಯಾ ಪಿತೃದತ್ತಾ ಸಹೋದರಾ|
        ಅನ್ಯದತ್ತಾ ತು ಜನನೀ ದತ್ತಭೂಮಿಂ ಪರಿತ್ಯಜೇತ್||
        ಅನ್ಯೈಸ್ತು ವಧರ್ಿತಂ ಭುಂಕ್ತೇಸಾರ್ಥಸ್ಯ ವಧರ್ಿತಂ ನ ತು|
        ತತಃ ಕಷ್ಟಸ್ತತೋ ನೀಚಃ ಸ್ವಯಂ ದತ್ತಾಪಹಾರಕಃ ||
        ಸ್ವದತ್ತಾಂ ಪರದತ್ತಾಂ ವಾ ಬ್ರಹ್ಮವೃತ್ತಿಂ ಹರೇಚ್ಚ ಯಃ |
        ಷಷ್ಠಿವರ್ಷ ಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಮಿ || ಇತಿ||
    ಈ ದಾನಶಾಸನದ ತಾತ್ಪರ್ಯವೇನೆಂದರೆ - ಶ್ರೀ ಜನಮೇಜಯ ಮಹಾರಾಜರು ರಾಜ್ಯವನ್ನು ಪರಿಪಾಲಿಸುತ್ತಿರುವಾಗ ಶ್ರೀ ಆನಂದಲಿಂಗ ಜಂಗಮರು ಶ್ರೀ ಕೇದಾರ ಪೀಠದ  ಜಗದ್ಗುರುಗಳಾಗಿದ್ದರು.
    ಮಂದಾಕಿನೀ, ಕ್ಷೀರಗಂಗಾ ಮತ್ತು ಸರಸ್ವತೀ ಮುಂತಾದ ಪವಿತ್ರ ನದಿಗಳ ಸಂಗಮ ಕ್ಷೇತ್ರದ ಮಧ್ಯಭೂಮಿಯನ್ನು ಕೇದಾರ ಕ್ಷೇತ್ರವೆಂದು ಕರೆಯುತ್ತಾರೆ.  ಈ ಸಂಪೂರ್ಣ ಕ್ಷೇತ್ರದ ಆದಾಯದಿಂದ ಶ್ರೀ ಜಗದ್ಗುರು ಆನಂದಲಿಂಗ ಜಂಗಮರು ತಮ್ಮ ಶಿಷ್ಯನಾದ ಶ್ರೀ ಜ್ಞಾನಲಿಂಗ ಜಂಗಮನಿಂದ ಶ್ರೀ ಕೇದಾರೇಶ್ವರನ ಪೂಜಾದಿ ವ್ಯವಸ್ಥೆಯನ್ನು ಮಾಡಿಸಲಿ -ಎಂಬ ಉದ್ದೇಶದಿಂದ ಶ್ರೀ ಜಗದ್ಗುರು ಆನಂದಲಿಂಗ ಜಂಗಮರಿಗೆ ಶ್ರೀ ಜನಮೇಜಯ ಮಹಾರಾಜನು ಭೂಮಿದಾನವನ್ನು ಮಾಡಿದ್ದಾನೆ.
    ಯುಧಿಷ್ಠಿರನು ರಾಜ್ಯಾರೋಹಣ ಮಾಡಿ 89 ವರ್ಷಗಳು ಕಳೆದ ನಂತರ ಪ್ಲವಂಗನಾಮ ಸಂವತ್ಸರದ ಮಾರ್ಗಶೀರ್ಷ ಮಾಸದ ಅಮಾವಾಸ್ಯೆಯ ದಿನ ಸೂರ್ಯಗ್ರಹಣವಿದ್ದಾಗ ತನ್ನ ಮಾತಾಪಿತೃಗಳಿಗೆ ಶಿವಲೋಕ ಪ್ರಾಪ್ತಿಯಾಗಲೆಂಬ ಉದ್ದೇಶದಿಂದ ಈ ದಾನವು ಮಾಡಲ್ಪಟ್ಟಿದೆ.  ಈ ದಾನಪತ್ರದ ಆಧಾರದಿಂದ ಶ್ರೀ ಕೇದಾರೇಶ್ವರ ಮಂದಿರ ಹಾಗೂ ಓಖೀಮಠ ಇವೆರಡೂ 5,000 ವರ್ಷಕ್ಕಿಂತಲೂ ಪ್ರಾಚೀನವಾದವುಗಳೆಂದು ತಿಳಿದುಬರುತ್ತದೆ.
ಶ್ರೀ ಜಗದ್ಗುರು ಭುಕುಂಡಲಿಂಗ ಶಿವಾಚಾರ್ಯರು ಃ
    ಇವರು ದಕ್ಷಿಣ (ಚೋಳ) ದೇಶದ ವೀರಮಾಹೇಶ್ವರ (ಜಂಗಮ) ವಂಶದಲ್ಲಿ ಜನ್ಮವೆತ್ತಿ ಸಕಲ ಶಾಸ್ತ್ರಗಳಲ್ಲಿ ಪಾರಂಗತರಾಗಿ ಪರವಾದಿಗಳಿಗೆ ಭಯಂಕರರಾಗಿದ್ದರು.  ಇವರನ್ನು ವೀರಭದ್ರನ ಅವತಾರವೆಂದು ಕರೆಯುತ್ತಿದ್ದರು.  ಇವರು ಕಾಶಿಯ ವಿಶ್ವಾರಾಧ್ಯ ಪೀಠದಲ್ಲಿ ಅನೇಕ ಕಾಲವಿದ್ದು ನಂತರ ಕೇದಾರ ಕ್ಷೇತ್ರಕ್ಕೆ ಹೋಗಿ ಅಲ್ಲಿಯ ಪೀಠಾಚಾರ್ಯರ ಅನುಗ್ರಹದಿಂದ ವೈರಾಗ್ಯ ಪೀಠಾಧಿಪತಿಗಳಾದರು.
    ಇವರ ಅನೇಕ ಶಿಷ್ಯರಲ್ಲಿ ಶ್ರೀ ಗಣೇಶಲಿಂಗರು ವಿದ್ಯಾಸಂಪನ್ನರೂ, ಯೋಗಸಿದ್ಧರೂ ಆಗಿದ್ದರು.  ಆದಕಾರಣ ಶ್ರೀ ಭುಕುಂಡಲಿಂಗ ಶಿವಾಚಾರ್ಯರು ಶ್ರೀ ಗಣೇಶಲಿಂಗರಿಗೆ ವೈರಾಗ್ಯ ಸಿಂಹಾಸನದ ಅಧಿಕಾರವನ್ನು ವಹಿಸಿ ತಾವು ಕೇದಾರ ಕ್ಷೇತ್ರದಲ್ಲಿಯೇ ಲಿಂಗೈಕ್ಯರಾದರು.  ಇವರ  ಹೆಸರಿನ ಒಂದು ಜಲಕುಂಡಲವು ಇಂದಿಗೂ ಓಖೀಮಠದಲ್ಲಿ ಇದೆ.  ಇವರು ಇಂದಿಗೆ 3ಸಾವಿರ ವರ್ಷ ಪೂರ್ವದಲ್ಲಿ ಇದ್ದರೆಂಬ ವಿಷಯವನ್ನು ಟಿಹರಿ ಗಢವಾಲ ರಿಯಾಸತ್ ವಜೀರ್ ಪಂ|| ಶ್ರೀ ಹರಿಕೃಷ್ಣ ರತೋಡಿ ಸಾಹೇಬರು ತಾವು ಬರೆದ ಗಢವಾಲಕಾ ಇತಿಹಾಸ ಎಂಬ ಗ್ರಂಥದಲ್ಲಿ ಅನೇಕ ಆಧಾರಗಳೊಡನೆ ಸಿದ್ಧಮಾಡಿದ್ದಾರೆ.  ಇವರ ಕೀತರ್ಿಯು ಇಂದಿಗೂ ಜ್ವಾಜ್ವಲ್ಯಮಾನವಾಗಿದೆ.
    ಟೆಹರೀ ಗಢವಾಲದ ಮಹಾರಾಜರು ಈ ಪೀಠದ ಅನನ್ಯ ಭಕ್ತರಾಗಿರುತ್ತಾರೆ.  ಶ್ರೀಕೇದಾರ ಪೀಠಕ್ಕೆ ಉತ್ತರಾಧಿಕಾರಿಗಳಾಗಿ ಬಂದವರಿಗೆ ಮಹಾರಾಜರು ಮೊದಲು ತಿಲಕೋತ್ಸವವನ್ನು ಮಾಡಿ ಅವರಿಗೆ ರಾವಲ್ ಎಂಬ ಉಪಾಧಿಯನ್ನು ಕೊಡುತ್ತಾರೆ. ನಂತರ ಶ್ರೀ ರಂಭಾಪುರೀ, ಶ್ರೀ ಉಜ್ಜಯಿನೀ, ಶ್ರೀ ಶ್ರೀಶೈಲ ಮತ್ತು  ಶ್ರೀ ಕಾಶೀ ಪೀಠದ ಜಗದ್ಗುರುಗಳೆಲ್ಲರೂ ಅಥವಾ ಇವರಲ್ಲಿ ಯಾರಾದರೊಬ್ಬರು ಈ ರಾವಲ್ರಿಗೆ ಜಗದ್ಗುರುತ್ವವನ್ನು ದಯಪಾಲಿಸುತ್ತಾರೆ.
    ಪರೀಕ್ಷಿತನ ಪುತ್ರನಾದ ಜನಮೇಜಯ ಭೂಪಾಲನು ಕೊಟ್ಟ ಸಮಸ್ತ ಭೂಮಿಯು ಕ್ರಿ.ಶ. 1894ರವರೆಗೆ ಈ ಪೀಠದ ಆಚಾರ್ಯರ ಸ್ವಾಧೀನದಲ್ಲಿಯೇ ಇದ್ದಿತ್ತು.  ಈ ಭೂಮಿಯಲ್ಲಿ ಒಂದು ಸಾವಿರ ಗ್ರಾಮಗಳಿದ್ದವಂತೆ.  ಕ್ರಿ. ಶ. 1894ರಲ್ಲಿ ಈ ಪೀಠಕ್ಕೆ ಶ್ರೀ ಗಣೇಶಲಿಂಗ ಜಂಗಮರೆಂಬ ಜಗದ್ಗುರುಗಳಿದ್ದರು.  ಅಂದಿನ ಬ್ರಿಟಿಷ್ ಸರಕಾರದವರು ಈ ಪೀಠದ ಸ್ವಾಧೀನದಲ್ಲಿದ್ದ ಅನೇಕ ಗ್ರಾಮಗಳ ಒಡೆತನವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಕೇದಾರ ಪೀಠದ ಜಗದ್ಗುರುಗಳಾದ ಶ್ರೀ ಗಣೇಶಲಿಂಗ  ಜಂಗಮರಿಗೆ ಅಂದಿನ ಗಢವಾಲ ಜಿಲ್ಲೆಯಲ್ಲಿಯ 70, ಆಲ್ಯೋರಾ ಜಿಲ್ಲೆಯಲ್ಲಿಯ 43, ಟೆಹರೀ ರಾಜ್ಯದಲ್ಲಿಯ 27, ಡೆಹರಾಡೂನ್ ಜಿಲ್ಲೆಯಲ್ಲಿಯ 2 ಮತ್ತು ನೈನಿತಾಲ್ ಜಿಲ್ಲೆಯಲ್ಲಿಯ 1- ಹೀಗೆ ಒಟ್ಟು 143 ಗ್ರಾಮಗಳನ್ನು ಮಾತ್ರ ಬಿಟ್ಟುಕೊಟ್ಟರು. ಈ ಎಲ್ಲ ಗ್ರಾಮಗಳ ಸಂಪೂರ್ಣ ಆದಾಯವು ಕೇದಾರ ಪೀಠಕ್ಕೆ ಸಲ್ಲುತ್ತಿತ್ತು.
    ಇದೂ ಅಲ್ಲದೆ ಹಿಮಾಲಯ ಪ್ರಾಂತ್ಯದಲ್ಲಿ ಅತ್ಯಂತ ಪ್ರಸಿದ್ಧವಾದ ಕಾಳೀಮಠ, ಉದಯಕುಂಡ, ಗೌರೀಕುಂಡ, ಗೌರೀಮಾಯಿ, ತುಂಗನಾಥ, ತ್ರಿಯುಗಿ ನಾರಾಯಣ, ನಾರಾಯಣ ತೀರ್ಥ, ನಾಲೀಭಗವತೀ, ಮೈಖಂಡ ಮತ್ತು ಸೋಮದ್ವಾರ ಮುಂತಾದ 22 ಕ್ಷೇತ್ರಗಳ ಸವರ್ಾಧಿಪತ್ಯವು ಕೇದಾರ ಪೀಠಾಚಾರ್ಯರ ಸ್ವಾಧೀನದಲ್ಲಿಯೇ ಇದ್ದವು. 
    ನಮ್ಮ ದೇಶವು ಸ್ವತಂತ್ರವಾದ ನಂತರ ಕಾಲಕ್ರಮದ ಕಾನೂನಿಗನುಸಾರವಾಗಿ ಕೇದಾರ ಪೀಠಾಚಾರ್ಯರ ಸ್ವಾಧೀನದಲ್ಲಿದ್ದ ಗ್ರಾಮಗಳ ಆದಾಯವೆಲ್ಲ ಸಕರ್ಾರದ ಸ್ವಾಧೀನವಾಗಿ ಇವರಿಗೆ  ಕೇವಲ ಧಾಮರ್ಿಕ ಅಧಿಕಾರ ಮಾತ್ರ ಉಳಿದಿದೆ.  ಅದರಂತೆ ಹಿಮಾಲಯದ 22 ಕ್ಷೇತ್ರಗಳ ಪೈಕಿ ಶ್ರೀ ಕೇದಾರನಾಥ, ಗುಪ್ತಕಾಶಿ, ಮಧ್ಯಮಹೇಶ್ವರ, ಓಖೀಮಠ ಈ ನಾಲ್ಕು ದೇವಸ್ಥಾನಗಳಲ್ಲಿ ಕೇದಾರ ಜಗದ್ಗುರುಗಳ ಶಿಷ್ಯರಾದ ದಕ್ಷಿಣ ಭಾರತದ ಜಂಗಮ ವಂಶದವರೇ ಅನಾದಿಕಾಲದಿಂದ ಇಂದಿನವರೆಗೆ ಪ್ರಧಾನ ಅರ್ಚಕರಾಗಿ ಕಾರ್ಯವನ್ನು ನಿರ್ವಹಿಸುತ್ತಲಿದ್ದಾರೆ.
    ಉತ್ತರ ಭಾರತದಲ್ಲಿ ಕೇದಾರ ಪೀಠಾಚಾರ್ಯರಿಗೆ ಹಾಗೂ ಬದರೀನಾಥ ಮಠಾಧಿಪತಿಗಳಿಗೆ ಬಹು ದೊಡ್ಡ ಗೌರವವಿರುತ್ತದೆ.  ಬ್ರಿಟೀಷ್ ಸಕರ್ಾರದವರು ಈ ಎರಡು ಮಠಾಧಿಪತಿಗಳಿಗೆ ಮಾತ್ರ ರಾವಲ್ ಎಂಬ ಮಹಾಪದವಿಯನ್ನು ಕೊಟ್ಟು ಗೌರವಿಸಿರುತ್ತಾರೆ.  ಈ ಪದವಿಯು ಇಂದಿಗೂ ಇವರಿಗೆ ಪರಂಪರಾಗತವಾಗಿ ಬಳಕೆಯಲ್ಲಿದೆ.        ಬ್ರಿಟೀಷ್ ಶಾಸನದ ಆದೇಶದಂತೆ ಶ್ರೀ ಕೇದಾರ ಪೀಠದ ನೂತನ ಜಗದ್ಗುರುಗಳಿಗೆ ಟಿಹರಿ ಮಹಾರಾಜರು ತಿಲಕೋತ್ಸವವನ್ನು ಮಾಡಿ ಈ  ರಾವಲ್ ಪದವಿಯನ್ನು ಕೊಡುವ ಪದ್ಧತಿಯೂ ರೂಢಿಯಲ್ಲಿ ಬಂದಿದೆ.
    ಕೇದಾರ ಪೀಠದ ಜಗದ್ಗುರುಗಳು ಬಹು ಪ್ರಾಚೀನ ಕಾಲದಿಂದಲೂ ದಕ್ಷಿಣ ಭಾರತದ ಜಂಗಮ ವಂಶದ ತಮ್ಮ ಶಿಷ್ಯರನ್ನು ತಾವೇ ಆರಿಸಿ ಉತ್ತರಾಧಿಕಾರಿಗಳನ್ನು ಮಾಡುತ್ತಿದ್ದರು.  ಆದರೆ 1911ನೇ ಇಸವಿಯಲ್ಲಿ ಸರಕಾರದವರಿಂದ ಈ ಪದ್ಧತಿಯು ತೆಗೆದುಹಾಕಲ್ಪಟ್ಟಿತು.
    ಕಾರಣವೇನೆಂದರೆ - ಶ್ರೀ ಕೇದಾರ ಪೀಠದ 317 ಹಾಗೂ 318ನೇ ಪೀಠಾಧಿಪತಿಗಳಾಗಿದ್ದ ಶ್ರೀ ಕೇದಾರಲಿಂಗ ಹಾಗೂ ಶ್ರೀ ಗಣೇಶಲಿಂಗರ ಕಾಲದಲ್ಲಿ (ಕ್ರಿ.ಶ. 1894) ಪ್ರತಿವರ್ಷ ಮಠಕ್ಕೆ ಸಲ್ಲುವ ಆದಾಯವೆಲ್ಲವೂ ವೆಚ್ಚವಾಗಿ, ಲಕ್ಷಾಂತರ ರೂಪಾಯಿಗಳ ಸಾಲವಾಯಿತು.  ಈ ರೀತಿ ಸಾಲವಾಗಲು ಸ್ವಾಮಿಗಳವರು ಹಣಕಾಸಿನ ವ್ಯವಹಾರದ ಬಗೆಗೆ ತೋರಿದ  ಅಲಕ್ಷ್ಯವೇ ಕಾರಣ, ಈ ವಿಷಯವನ್ನೆಲ್ಲಾ ಆ ಕಾಲದ ಸರಕಾರಿ ಅಧಿಕಾರಿಗಳು ವಿಮಶರ್ಿಸಿ, ಇದನ್ನು ಹೀಗೆಯೇ ಬಿಟ್ಟರೆ ಈ ಪೀಠವು ಎಂದೂ ಋಣಮುಕ್ತವಾಗುವುದಿಲ್ಲವೆಂದು ಭಾವಿಸಿ ಮುಂದೆ ಈ ಪೀಠದ 319ನೆಯ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವಲಿಂಗ ಸ್ವಾಮಿಗಳವರನ್ನು ಪ್ರತಿವಾದಿ ಸ್ಥಾನಕ್ಕೆ ಸೇರಿಸಿ ಸ್ವತಃ ಸರಕಾರದವರೇ ವಾದಿಗಳಾಗಿ ಕೋಟರ್ಿನಲ್ಲಿ ವ್ಯಾಜ್ಯವನ್ನು ತಂದರು.  ಈ ವಿಷಯವು ಆಗ್ಗೆ ಹೈಕೋಟರ್ಿನ ಅಧಿಕಾರವನ್ನು ಪಡೆದಿದ್ದ ಕುಮಾವು ಡಿವಿಜನ್ ಕಮಿಶನರ್ ಅವರ ಕೋಟರ್ಿನಲ್ಲಿ ವಿಚಾರಣೆಗೆ ಒಳಪಟ್ಟಿತು.  ಕಮೀಷನರವರು ದಿ| 8-9-1911ರಲ್ಲಿ ಈ ಪೀಠದ ಬಗ್ಗೆ ಒಂದು ಯೋಜನೆಯನ್ನು ತಯಾರಿಸಿದರು.  ಈ ಯೋಜನೆಯಲ್ಲಿ ಪೀಠಾಧಿಪತಿಗಳಿಗೆ ಪ್ರತೀ ತಿಂಗಳು ಕೊಡಬೇಕಾದ ಗೌರವಧನ ಹಾಗೂ ಶಿಷ್ಯರ ಸಂಖ್ಯೆಯನ್ನು ನಿಗದಿಪಡಿಸಿದರು.  ಅಂದಿನಿಂದ ಇಂದಿನವರೆಗೆ ಈ ಪೀಠದ ಆಡಳಿತವೆಲ್ಲವೂ ಆ ಯೋಜನೆಯಂತೆಯೇ ನಡೆಯುತ್ತಿದೆ.  ಈ ಯೋಜನೆಯಿಂದ ಮಠದ ಅನಾವಶ್ಯಕ ಖಚರ್ುಗಳೆಲ್ಲ ನಿಂತು ಪೀಠದ ಆದಾಯಕ್ಕೆ ಅನುಕೂಲವಾಯಿತೇನೋ ನಿಜ; ಆದರೆ ಪೀಠಾಧಿಪತಿಗಳ ಸ್ವಾತಂತ್ರ್ಯವೆಲ್ಲವೂ ಕಳೆದುಹೋಯಿತು.  ಈ ಪೀಠದ ಪ್ರತೀ ವರ್ಷದ ಆದಾಯ ಹಾಗೂ ವೆಚ್ಚವನ್ನು ಟೆಹರಿ ದಬರ್ಾರದವರು ಪರಿಶೀಲಿಸಬೇಕೆಂದೂ ಯೋಜನೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ.  ಈ ಪೀಠಾಧಿಪತಿಗಳು ತಾವು ಜೀವಂತವಿರುವಾಗ ಉತ್ತರಾಧಿಕಾರಿಗಳನ್ನು ಮಾಡಲಿಕ್ಕೆ ಈ ಯೋಜನೆಯಲ್ಲಿ ಅವರಿಗೆ ಅವಕಾಶವನ್ನು ಕೊಟ್ಟಿರುವುದಿಲ್ಲ.  ಆದರೆ ತಮ್ಮ ಉತ್ತರಾಧಿಕಾರಕ್ಕಾಗಿ ದಕ್ಷಿಣ ದೇಶದ ಜಂಗಮರಲ್ಲಿ ಯಾರಾದರೊಬ್ಬ ಶಿಷ್ಯರ ಹೆಸರನ್ನು ಸೂಚಿಸಿ ಮೃತ್ಯುಪತ್ರವನ್ನು ಬರೆದಿಡಲು ಮಾತ್ರ ಸಮ್ಮತಿಯನ್ನು ಕೊಟ್ಟಿದ್ದಾರೆ.  ಈ ಎಲ್ಲ ವಿಷಯವನ್ನು ಲಿಂ| ಪಂ| ಕಾಶೀನಾಥ ಶಾಸ್ತ್ರಿಗಳವರು ಶ್ರೀ ಜಗದ್ಗುರು ಪಂಚಾಚಾರ್ಯರ ಪ್ರಾಚೀನತ್ವ ಎಂಬ ಪುಸ್ತಕ (ಪುಟ 95-100)ರಲ್ಲಿ ವಿಸ್ತಾರವಾಗಿ ಪ್ರತಿಪಾದಿಸಿರುತ್ತಾರೆ.  ಜಿಜ್ಞಾಸುಗಳು ಅವಲೋಕಿಸಬಹುದು.
    ಸನಾತನವಾದ ಈ ಕೇದಾರ ಪೀಠಕ್ಕೂ ಅನಾದಿಕಾಲದಿಂದ ಗುರುಪರಂಪರೆಯು ಸಾಗಿಬಂದಿದೆ. ಗಢವಾಲ ಕಾ ಇತಿಹಾಸ ಎಂಬ ಪುಸ್ತಕದ ಆಧಾರದಿಂದ ಶ್ರೀ ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯರವರೆಗೆ  320 ಹೆಸರುಗಳು ದೊರೆಯುತ್ತವೆ.  ಇವರೆಲ್ಲರೂ ತ್ಯಾಗಿಗಳೂ, ತಪಸ್ವಿಗಳೂ ಆಗಿದ್ದರು.  ಈ ಪೀಠ ಪರಂಪರೆಯ 319ನೆಯ ಜಗದ್ಗುರುಗಳಾದ ಶ್ರೀ ಜಗದ್ಗುರು ವಿಶ್ವಲಿಂಗ ಶಿವಾಚಾರ್ಯರ ಕಾಲದಲ್ಲಿ  ಈ ಪೀಠಕ್ಕೆ 80 ಸಾವಿರ ರೂಪಾಯಿಗಳ ಸಾಲವಾಗಿತ್ತು.  ಈ ಸಾಲ ಪರಿಹಾರಕ್ಕಾಗಿ ಧನ ಸಂಗ್ರಹಿಸಲು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ಪಂ| ಕಾಶೀನಾಥ ಶಾಸ್ತ್ರಿಗಳ ಸಲಹೆಯಂತೆ ಕನರ್ಾಟಕಕ್ಕೆ ಆಗಮಿಸಿ ಅನೇಕ ಧಾಮರ್ಿಕ ಕಾರ್ಯಕ್ರಮಗಳಲ್ಲಿ ಭಾಗಿಗಳಾದರು.  ಮುಂದೆ 1919ನೆಯ ಡಿಸೆಂಬರನಲ್ಲಿ ಬೀರೂರಿನಲ್ಲಿ ನೆರವೇರಿದ 9ನೆಯ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ನೆರವೇರಿಸಿ ಮುಂದೆ ಆ ಪ್ರಾಂತದಲ್ಲಿ ಸಂಚರಿಸುತ್ತಾ ಇದ್ದು ದಿ|| 15-7-1920ರಂದು ಶ್ರೀ ಉಜ್ಜಯಿನಿ ಪೀಠದಲ್ಲಿಯೇ ಲಿಂಗೈಕ್ಯರಾದರು.  ಇವರ ಸಮಾಧಿಯು ಉಜ್ಜಯಿನಿ ಪೀಠದಲ್ಲಿಯೇ ಇದೆ.
    ಲಿಂ| ಜಗದ್ಗುರುಗಳ ವಿಲ್ ಪ್ರಕಾರ ಅವರ ಶಿಷ್ಯರಾಗಿದ್ದ ಶ್ರೀ ನೀಲಕಂಠಲಿಂಗರಿಗೆ ಕಾಶೀ ಜಗದ್ಗುರು ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಂದ 1-10-1921ರಂದು ಜಗದ್ಗುರುತ್ತ್ವವು ಪ್ರಾಪ್ತವಾಯಿತು.  ಕೇದಾರ ಪೀಠದ 320ನೆಯ ಜಗದ್ಗುರುಗಳಾದ ಶ್ರೀ ನೀಲಕಂಠಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಧಾರವಾಡ ಜಿಲ್ಲಾ ಕಲ್ಲೇದೇವೂರು ಎಂಬ ಗ್ರಾಮದ ವೀರಮಾಹೇಶ್ವರ ವಂಶದಲ್ಲಿ 1889ನೇ ಇಸವಿಯಲ್ಲಿ ಜನಿಸಿದರು.  ಇವರು ಕಾಶೀ ಜಂಗಮವಾಡಿ ಮಠದಲ್ಲಿ ಕೆಲಕಾಲ ಇದ್ದು ಸಂಸ್ಕೃತ, ಹಿಂದೀ ಮುಂತಾದ ಭಾಷೆಗಳನ್ನು ಅಧ್ಯಯನ ಮಾಡಿದ್ದಲ್ಲದೇ ಆಯುವರ್ೇದ ವಿಶಾರದರೂ ಆಗಿದ್ದರು.
    ಪೂಜ್ಯ ಜಗದ್ಗುರುಗಳವರು ಕನರ್ಾಟಕದ ಅನೇಕ ಭಾಗಗಳಲ್ಲಿ ಸಂಚರಿಸಿ ವಿಪುಲವಾದ ಧನವನ್ನು ಸಂಗ್ರಹಿಸಿ ಪೀಠದ ಋಣವನ್ನು ತೀರಿಸಿದರಲ್ಲದೇ ಪೀಠದ ಸಿರಿಯನ್ನು ಹೆಚ್ಚಿಸಿದರು.  ಕನರ್ಾಟಕದಲ್ಲಿ ಇವರ ಸಂಚಾರವಿದ್ದಾಗ ಹೊಸಪೇಟೆ, ಬಳ್ಳಾರಿ ಮುಂತಾದ ಭಾಗಗಳಲ್ಲಿ ಸಂಸ್ಕೃತ ಪಾಠಶಾಲೆಯನ್ನು ಸ್ಥಾಪಿಸಿದರು.  ಶಾ.ಶ. 1884 ಪ್ರಭವನಾಮ ಸಂವತ್ಸರದ ವೈಶಾಖ ಶುದ್ಧ ಪಂಚಮಿ ತಾ|| 16-5-1927ರಂದು ಮೈಸೂರಿನಲ್ಲಿ ಪ್ರಾರಂಭಿಸಲ್ಪಟ್ಟ ಪಂಚಾಚಾರ್ಯ ಪ್ರಭಾ ಪತ್ರಿಕೆಗಾಗಿ 6,000/- (ಆರು ಸಾವಿರ) ರೂಪಾಯಿಗಳನ್ನು ಕೊಟ್ಟು ಆಶೀರ್ವದಿಸಿದರು.
    ಪೂಜ್ಯ ಶ್ರೀಗಳು ಉತ್ತರ ಭಾರತದ ಓಖೀಮಠ ಮತ್ತು ಗುಪ್ತಕಾಶಿಗಳ ಮಧ್ಯದಲ್ಲಿ ಉತ್ತರಾಖಂಡ ವಿದ್ಯಾಪೀಠ ಎಂಬ ಹೆಸರಿನ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಪರ್ವತೀಯ ಕ್ಷೇತ್ರಗಳ ಮಕ್ಕಳಿಗೆ ಸುಲಭವಾಗಿ ಶಿಕ್ಷಣ ದೊರೆಯುವ ವ್ಯವಸ್ಥೆಯನ್ನು ಮಾಡಿದರು.  ಈ ವಿದ್ಯಾಪೀಠದಲ್ಲಿ ಸಂಸ್ಕೃತ, ಹಿಂದೀ ಮತ್ತು ಆಯುವರ್ೇದ ಮುಂತಾದ ವಿಷಯಗಳ ಅಧ್ಯಯನ ವ್ಯವಸ್ಥೆಯಿದೆ.  ಈ ವಿದ್ಯಾಪೀಠವೇ ಸದ್ಯಃ ಒಂದು ಸ್ವತಂತ್ರವಾದ  ವಿಶ್ವವಿದ್ಯಾಲಯವಾಗುವ ಹಂತದಲ್ಲಿ ಇದೆ.  ಇದಕ್ಕಾಗಿ ಕೇದಾರನಾಥ ಮತ್ತು ಬದ್ರಿನಾಥ ಟ್ರಸ್ಟ್ ಕಮಿಟಿಯವರು ಹಾಗೂ ಓಖೀಮಠದ ನಿವಾಸಿಗಳು ಪ್ರಯತ್ನ ನಡೆಸಿರುತ್ತಾರೆ.  ಈ ವಿದ್ಯಾಪೀಠದಲ್ಲಿ ಸದ್ಯಃ ಲಿಂ|| ಶ್ರೀ ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯರ ಅಮೃತಶಿಲಾ ವಿಗ್ರಹವನ್ನು ಸ್ಥಾಪಿಸಿದ್ದಾರೆ.
    ಇವರು ತಮ್ಮ ಆಡಳಿತ ಕಾಲದಲ್ಲಿಯೇ ಧಾರವಾಡ ಜಿಲ್ಲಾ ತಿಮ್ಮಾಪುರ ಗ್ರಾಮದ ಹಿರೇಮಠದ ಶ್ರೀ ವೇ|| ಶಿವಮೂತರ್ಿ  ಶಾಸ್ತ್ರಿಗಳವರಿಗೆ ವೈರಾಗ್ಯಸಿಂಹಾಸನದ ಚರಪಟ್ಟಾಧಿಕಾರವನ್ನು ಅನುಗ್ರಹಿಸಿ, ಶ್ರೀ ಚಿದ್ಘನಲಿಂಗ ಶಿವಾಚಾರ್ಯರೆಂಬ ನಾಮಕರಣವನ್ನು ಮಾಡಿದ್ದರು.  ಇವರು ಜಿತೇಂದ್ರಿಯರೂ, ವಿದ್ಯಾವಂತರೂ, ಶಾಂತಸ್ವಭಾವದವರೂ ಆಗಿದ್ದರು.  ಪೀಠದ ಶ್ರೇಯಸ್ಸಿಗಾಗಿ ದೇಶದ ನಾನಾಭಾಗಗಳಲ್ಲಿ ಸಂಚರಿಸಿ ಅಲ್ಪಕಾಲದಲ್ಲಿಯೇ ದಿ|| 16-2-1942ರಂದು ಕೇದಾರದಲ್ಲಿಯೇ ಲಿಂಗೈಕ್ಯರಾದರು.  ಶ್ರೀ ಚಿದ್ಘನಲಿಂಗರು ಶಿವಾಧೀನರಾದ ನಂತರ ಪುನಃ ಶ್ರೀಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯ ಭಗವತ್ಪಾದರೇ ಪೀಠದ ಎಲ್ಲ ವ್ಯವಹಾರವನ್ನೂ ನಿರ್ವಹಿಸುತ್ತ ಮುಂದೆ ದಿ||23-4-1945ರಂದು ಓಖೀಮಠದಲ್ಲಿಯೇ ಲಿಂಗೈಕ್ಯರಾದರು.  ಇವರ ಸಮಾಧಿಯು ವಿದ್ಯಾಪೀಠದಲ್ಲಿಯೇ ಮಾಡಲ್ಪಟ್ಟಿದೆ.
    ಲಿಂ| ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯರಿಗೆ ಶ್ರೀ ವಿಶ್ವನಾಥಲಿಂಗ, ಶ್ರೀ ಕೈಲಾಸಲಿಂಗ, ಶ್ರೀ ಶಾಂತಲಿಂಗ ಮುಂತಾದ ಹಲವು ಜನ (ಚೇಲಾ) ಶಿಷ್ಯರಿದ್ದರು.  ಇವರಲ್ಲಿ ಕೈಲಾಸಲಿಂಗರು ನಿಜಾಮ ಪ್ರಾಂತದ ಪುರಗಿರಿ ಕ್ಷೇತ್ರದ ಬೃಹನ್ಮಠದವರು.  ಇವರ ತಂದೆಯ ಹೆಸರು ಪಂ| ಶಿವಲಿಂಗ ಶಿವಾಚಾರ್ಯರು.  ಶ್ರೀ ಕೈಲಾಸಲಿಂಗರ ಮೊದಲಿನ ಹೆಸರು ಶ್ರೀ ಚಿದ್ಘನ ಶಿವಾಚಾರ್ಯರು.  ಇವರು ಪುರಗಿರಿಯ ಪಟ್ಟಾಧ್ಯಕ್ಷರಾಗಿದ್ದರು.  ಇವರು ಕಾಶಿಯ ಜಂಗಮವಾಡಿಮಠದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದಲ್ಲಿಯೇ ವಾಸಿಸಿ ತರ್ಕ, ವ್ಯಾಕರಣ, ಸಾಂಖ್ಯ, ಯೋಗ, ವೇದಾಂತ ಮತ್ತು ಶಿವಸಿದ್ಧಾಂತಗಳಲ್ಲಿ ಅಪಾರ ಪಾಂಡಿತ್ಯವನ್ನು ಸಂಪಾದಿಸಿದರು.  ಇವರು ತಮ್ಮ ವಿದ್ಯಾಥರ್ಿ ದಿಶೆಯಲ್ಲಿಯೇ 1929ರಲ್ಲಿ ವೃಷಭದೇವನಿಂದ ವಿರಚಿತ ಶೈವಭಾಷ್ಯದಿಂದ ಕೂಡಿದ ಮಹಾನಾರಾಯಣೋಪನಿಷತ್ ಎಂಬ ಅಮೂಲ್ಯ ಗ್ರಂಥವನ್ನು ಸಂಶೋಧಿಸಿ ಶ್ರೀ ಕೇದಾರನಾಥ ಶಿವತತ್ತ್ವ ಗ್ರಂಥಮಾಲೆಯ ಪ್ರಥಮ ಪುಷ್ಟವನ್ನಾಗಿ ಮುದ್ರಿಸಿ ಪ್ರಕಾಶನಗೊಳಿಸಿದ್ದಾರೆ.
    ಇವರ ಪಾಂಡಿತ್ಯವನ್ನು ನೋಡಿ ಲಿಂ| ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯರು ಇವರನ್ನು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡು ಕೈಲಾಸಲಿಂಗ ಎಂಬ ಹೆಸರನ್ನು ಅನುಗ್ರಹಿಸಿದ್ದರು.  ಪಂ|| ಕೈಲಾಸಲಿಂಗರು ಕ್ರಿ.ಶ. 1956ರಲ್ಲಿ ಉಜ್ಜಯಿನಿ ಲಿಂ| ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ಎಂಬ ಚರಿತ್ರೆಯನ್ನು ಕನ್ನಡದಲ್ಲಿ ಬರೆದು ಪ್ರಕಾಶನಗೊಳಿಸಿದ್ದಾರೆ.  ಕಾರಣಾಂತರದಿಂದ ಕೇದಾರವನ್ನು ಬಿಟ್ಟು ಪುನಃ ತಮ್ಮ ಮೂಲಸ್ಥಳವಾದ ಪುರಗಿರಿಯಲ್ಲಿಯೇ ಲಿಂಗೈಕ್ಯರಾದರು.
    ಲಿಂ| ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯರ ಮತ್ತೋರ್ವ ಶಿಷ್ಯರಾದ ಶ್ರೀಶಾಂತಲಿಂಗರು ಬೆಳಗಾಂವ ಜಿಲ್ಲಾ ಮುತ್ತನಾಳ ಹಿರೇಮಠದ ಪಟ್ಟಾಧ್ಯಕ್ಷರಾದರು. ಕೊನೆಗೆ ಉಳಿದಿರುವ ಶ್ರೀ ವಿಶ್ವನಾಥಲಿಂಗರೇ ಕೇದಾರ ಪೀಠದ 321ನೆಯ ರಾವಲ್ರಾದರು.  ಇವರು ಧಾರವಾಡ ಜಿಲ್ಲಾ ಹಾವೇರಿಯ ನಡುವಿನಮಠದವರು. ಲಿಂ. ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯರ ತರುವಾಯ ಶ್ರೀ ವಿಶ್ವನಾಥಲಿಂಗರು 21 ವರ್ಷ ಪರ್ಯಂತ ಕೇವಲ 'ರಾವಲ್'ರಾಗಿಯೇ ಉಳಿದರು.  ಇವರಿಗೆ ಜಗದ್ಗುರು ಪಟ್ಟಾಧಿಕಾರವಾಗಲಿಲ್ಲ.  ಮುಂದೆ ಇವರು ತಮ್ಮ ಮೂಲಸ್ಥಾನವಾದ ಹಾವೇರಿಯಲ್ಲಿಯೇ ಲಿಂಗೈಕ್ಯರಾದರು.
    ಹೀಗೆ ರಾವಲ್ ವಿಶ್ವನಾಥಲಿಂಗರು ಲಿಂಗೈಕ್ಯರಾದ ನಂತರ ಲಿಂ|| ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯರ ಶಿಷ್ಯರಲ್ಲಿಯೇ ಹಳಬರಾದ ಮುತ್ತನಾಳ ಹಿರೇಮಠದ ಶ್ರೀ ಷ| ಬ್ರ| ಶಾಂತಲಿಂಗ ಶಿವಾಚಾರ್ಯರು ಕಾಶೀ ಜ್ಞಾನಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ಶ್ರೀಮದ್ರಂಭಾಪುರೀ ವೀರಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪ್ರಸನ್ನರೇಣುಕ ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳವರ ಪ್ರಸಾದ ಹಸ್ತದಿಂದ ದಿ||10-6-1966ರಂದು ಜಗದ್ಗುರು ಪಟ್ಟಾಧಿಕಾರವನ್ನು ಓಖೀಮಠದಲ್ಲಿ ಹೊಂದಿ 'ಹಿಮವತ್ಕೇದಾರ ವೈರಾಗ್ಯಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ರಾವಲ್ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ'ಗಳೆಂಬ ಅಭಿಧಾನದಿಂದ ಕೇದಾರ ಪೀಠದ 322ನೆಯ ಜಗದ್ಗುರುಗಳಾದರು.  ಇವರು 14 ವರ್ಷ ಪೀಠದ ಸೇವೆಯನ್ನು ಮಾಡಿ ದಿ|| 6-2-1980ರಂದು ಮುತ್ನಾಳ ಹಿರೇಮಠದಲ್ಲಿಯೇ ಲಿಂಗೈಕ್ಯರಾದರು.  ಇವರ ಸಮಾಧಿಯು ಮುತ್ನಾಳದಲ್ಲಿಯೇ ಇದೆ.
    ಶ್ರೀ ಜಗದ್ಗುರು ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗೈಕ್ಯರಾದ ನಂತರ ಪುನಃ ಈ ಪೀಠವು 5 ವರ್ಷಗಳ ಪರ್ಯಂತ ಅನಾಯಕವಾಗಿಯೇ ಉಳಿಯುವ ಪ್ರಸಂಗ ಬಂದೊದಗಿತು.  ಕಾಶೀ ಜ್ಞಾನಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಕೃಪಾಶೀವರ್ಾದ ಹಾಗೂ ಭಕ್ತರ ಅಪಾರ ಸಹಾಯ-ಸಹಕಾರಗಳ ಫಲವಾಗಿ ಕೇದಾರ ಪೀಠಕ್ಕೊಬ್ಬ ಅಧಿಪತಿಗಳು ಲಭ್ಯವಾದರು.  ಶಾ.ಶ. 1907 ಕ್ರೋಧನನಾಮ ಸಂವತ್ಸರ ಜ್ಯೇಷ್ಠ ವದ್ಯ ಪಂಚಮಿ ದಿ|| 7-6-1985 ಶುಕ್ರವಾರ ದಿವಸ ಕಾಶೀ ಜಗದ್ಗುರುಗಳವರ ಮತ್ತು ಶ್ರೀಶೈಲ ಸೂರ್ಯಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತಹಸ್ತದಿಂದ ಜಗದ್ಗುರುತ್ವವನ್ನು ಹೊಂದಿದ ಶ್ರೀ ಷ| ಬ್ರ| ಶಂಭುಲಿಂಗ ಶಿವಾಚಾರ್ಯರು, ಶ್ರೀ ಜಗದ್ಗುರು ಸಿದ್ಧೇಶ್ವರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ಅಭಿಧಾನದಿಂದ ಕೇದಾರ ಪೀಠದ 323ನೆಯ ಜಗದ್ಗುರುಗಳಾಗಿ ಅಧಿಕಾರವನ್ನು ಪಡೆದರು.
    ರಾವಲ್ ಶ್ರೀ ಜಗದ್ಗುರು ಸಿದ್ಧೇಶ್ವರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಬಿಜಾಪುರ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗುಳಬಾಳ ಎಂಬ ಗ್ರಾಮದ ಶ್ರೀ ವೇ|| ಬಸವಲಿಂಗಯ್ಯನವರು ಹಾಗೂ ಸೌ|| ಭಾಗೀರಥಿಬಾಯಿ ಈ ಮಾಹೇಶ್ವರ ದಂಪತಿಗಳ ಪವಿತ್ರ ಗರ್ಭದಲ್ಲಿ ಜನಿಸಿದರು.  ಇವರ ಹೆಸರು ಸಿದ್ಧರಾಮಯ್ಯ ಎಂಬುದಾಗಿತ್ತು.
    ಇವರು ಬಾಲ್ಯದಲ್ಲಿಯೇ ಮನೆಯನ್ನು ತ್ಯಾಗಮಾಡಿ ಸೊಲ್ಲಾಪುರದ ಶ್ರೀಮದ್ವೀರಶೈವ ಗುರುಕುಲ (ಹೊಟಗೀಮಠ)ದಲ್ಲಿ ಸ್ವಲ್ಪ ಸಂಸ್ಕೃತಾಧ್ಯಯನವನ್ನು ಮಾಡಿ ಕೇದಾರಕ್ಕೆ ಹೋದರು.  ಆಗ 1963ರಲ್ಲಿ ಅಂದಿನ ರಾವಲ್ರಾಗಿದ್ದ ಲಿಂ| ವಿಶ್ವನಾಥಲಿಂಗರ ಚೇಲಾ (ಶಿಷ್ಯ) ಆಗಿ ಶ್ರೀ ಸಿದ್ಧರಾಮಯ್ಯನವರು ಶ್ರೀ ಸಿದ್ದೇಶ್ವರಲಿಂಗ ಎಂಬ ಹೆಸರನ್ನು ಪಡೆದು ಆರು ತಿಂಗಳ ಪರ್ಯಂತರವಾಗಿ ಶ್ರೀ ಕೇದಾರನಾಥನ ಪೂಜೆಯನ್ನು ಮಾಡಿ ಆರೋಗ್ಯ ಸರಿಯಿಲ್ಲದ ಕಾರಣ ಪುನಃ ಸೊಲ್ಲಾಪುರಕ್ಕೆ ಬಂದರು.
    ಸೊಲ್ಲಾಪುರದ ಶ್ರೀ ಷ|| ಬ್ರ|| ತಪೋರತ್ನಂ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳ ಆಶ್ರಯದಲ್ಲಿ ಆರೋಗ್ಯ ಸುಧಾರಣೆಯಾದ ಬಳಿಕ ವಿಶೇಷ ಕಾರ್ಯಕ್ರಮದ ನಿಮಿತ್ತವಾಗಿ ಮಹಾರಾಷ್ಟ್ರದ ಬರದಾಪುರ ಸಂಸ್ಥಾನ ಮಠಕ್ಕೆ ಮಠಾಧ್ಯಕ್ಷರ ಜೊತೆಗೆ ಹೋಗಿದ್ದರು.  ಅಂಬಾಜೋಗಾಯಿ ಭಕ್ತ ಪ್ರಮುಖರು ಶ್ರೀ ಸಿದ್ಧೇಶ್ವರಲಿಂಗರ ವ್ಯಕ್ತಿತ್ವಕ್ಕೆ ಮಾರುಹೋದರು.  ಅವರೆಲ್ಲರ ಅಪೇಕ್ಷೆಯಂತೆ ಅಂಬಾಜೋಗಾಯಿಯ ಶ್ರೀ ಶಂಭುಲಿಂಗ ಸಂಸ್ಥಾನ ಮಠಕ್ಕೆ 1970ರಲ್ಲಿ  ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನರೇಣುಕ ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಮಾಜಲಗಾಂವದ ಶ್ರೀ ಷ||ಬ್ರ|| ಪ್ರಭು ಪಂಡಿತಾರಾಧ್ಯ ಶಿವಾಚಾರ್ಯರಿಂದ ಪಟ್ಟಾಧಿಕಾರವನ್ನು ಹೊಂದಿ ಶ್ರೀ ಷ||ಬ್ರ|| ಶಂಭುಲಿಂಗ ಶಿವಾಚಾರ್ಯರೆಂಬ ನೂತನ ಅಭಿಧಾನವನ್ನು ಪಡೆದರು.
    ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಕಾಶಿಗೆ ಬಂದು ಅಲ್ಲಿಯ ಶ್ರೀ ವಿಶ್ವಾರಾಧ್ಯ ಗುರುಕುಲದ ವಿದ್ಯಾಥರ್ಿಯಾಗಿದ್ದು ಸಾಹಿತ್ಯಾಚಾರ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು.  ಮುಂದೆ ರಾವಲ್ ಶ್ರೀ ಜಗದ್ಗುರು ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ವರ್ತಮಾನ ಕೇದಾರ ಪೀಠದ ಚೇಲಾಗಳಲ್ಲಿ ಇವರೇ ಹಳಬರೂ, ವಿದ್ಯಾವಂತರೂ ಮತ್ತು ಯೋಗ್ಯತಾ ಸಂಪನ್ನರೂ ಆಗಿದ್ದ ಕಾರಣ, ಕೇದಾರ ಮಂದಿರದ ಟ್ರಸ್ಟ್ ಕಮಿಟಿಯವರು ಇವರನ್ನೇ ಚುನಾಯಿಸಿದರು.  ಬಳಿಕ 1983ನೆಯ ಇಸವಿಯ ವಿಜಯದಶಮಿ ದಿವಸ ಟೆಹರೀ ಮಹಾರಾಜರು ಇವರಿಗೆ ತಿಲಕೋತ್ಸವ ನೆರವೇರಿಸಿದರು.  ರಾವಲ್ ಎಂಬ ಪದವಿಯಿಂದ ವಿಭೂಷಿತರಾದರು.
    ಶ್ರೀ ಕೇದಾರ ಪೀಠವು ಉತ್ತರ ಪ್ರದೇಶದ ಕೇದಾರನಾಥ ಟ್ರಸ್ಟ್ ಕಮಿಟಿಯ ಆಡಳಿತಕ್ಕೊಳಪಟ್ಟಿರುವುದರಿಂದ ಹೊಸದಾಗಿ ಪೀಠಾಧಿಕಾರ ಮಾಡುವಾಗ ಅನವಶ್ಯಕವಾದ ಕಾನೂನಿನ ಅಡೆತಡೆಗಳು ಬರುತ್ತಿರುತ್ತವೆ.  ರಾವಲ್ ಶ್ರೀ ಜಗದ್ಗುರು ಸಿದ್ಧೇಶ್ವರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪಟ್ಟಾಧಿಕಾರದಲ್ಲಿಯೂ ಅನೇಕ ಅಡೆತಡೆಗಳು ಬಂದವು.  ಆದರೂ ಶ್ರೀ ಕಾಶೀ ಜಗದ್ಗುರುಗಳ ಕೃಪಾಶೀವರ್ಾದದಿಂದ ಅವೆಲ್ಲವೂ ದೂರವಾಗಿ ಕಾರ್ಯಕ್ರಮ ಸವರ್ಾಂಗ ಸುಂದರವಾಗಿ ನೆರವೇರಿತು.   ಹೀಗೆ ನಮ್ಮ ಕೇದಾರ ಪೀಠದ ಆಚಾರ್ಯರು ಅನಾದಿಕಾಲದಿಂದಲೂ ಹಿಮಾಲಯದ ಉತ್ತರಖಂಡದಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸಿದ್ದಾರೆ.
    ಈ ಪೀಠದ ಐತಿಹಾಸಿಕ ಸಂಗತಿಗಳನ್ನು ಪರಿಶೀಲಿಸುವ ಅಪೇಕ್ಷೆಯುಳ್ಳವರು ಗಢವಾಲ ಕಾ ಇತಿಹಾಸ ಹಾಗೂ ರಾಮದಾಸಗೌಡರು ರಚಿಸಿದ ಹಿಂದುತ್ವ ಎಂಬ ಹಿಂದೀ ಭಾಷೆಯ ಗ್ರಂಥಗಳನ್ನು ಅವಶ್ಯವಾಗಿ ಅವಲೋಕಿಸಬೇಕು.
    ಪೂಜ್ಯ ಶ್ರೀ  ಜಗದ್ಗುರುಗಳು  ಹದಿನೇಳು ವರುಷಗಳ ಪರ್ಯಂತರ ಭಾರತ ದೇಶದ ಅನೇಕ ರಾಜ್ಯಗಳಲ್ಲಿ ಏಕಾಂಗಿಯಾಗಿ ಹಾಗೂ ಸಮಾನ ಪೀಠಾಚಾರ್ಯರೊಂದಿಗೆ ಸಂಚರಿಸಿ ತಮ್ಮ ಪ್ರಭಾವ, ಆಶೀರ್ವಚನ ಮತ್ತು ಪೂಜಾನುಷ್ಠಾನಗಳಿಂದ ಧರ್ಮ ಜಾಗೃತಿಗೈದಿದ್ದಾರೆ.  ಆದರೆ ಅವರಿಗೆ ಮೇಲಿಂದ ಮೇಲೆ ದೇಹಾಲಸ್ಯವುಂಟಾಗಿ ಅನಾರೋಗ್ಯ ಕಾಡತೊಡಗಿತು.  ಆದ್ದರಿಂದ ಇವರು ಸಮರ್ಥ ಪೀಠಾಚಾರ್ಯರನ್ನು ನೇಮಕ ಮಾಡಿ ವಿಶ್ರಾಂತ ಜೀವನ ನಡೆಸಲು ನಿರ್ಧರಿಸಿದರು.

ಕೇದಾರಕ್ಕಾಧಾರ ನಿರೀಕ್ಷೆ ಃ
    ಶ್ರೀಮತ್ ಹಿಮವತ್ ಕೇದಾರವು ಹೆಸರಿಗೆ ತಕ್ಕಂತೆ ವೈರಾಗ್ಯದ ಸಂಕೇತವೇ ಆಗಿದೆ.  ಆ ಕ್ಷೇತ್ರವು ಹಿಮಾಲಯ ಪರ್ವತ ಶ್ರೇಣಿಯಲ್ಲಿರುವುದರಿಂದಲೋ ಏನೋ ಅನೇಕಸಲ ಆ ಪೀಠವು ಅನಾಥ ಪ್ರಜ್ಞೆಯನ್ನು ಅನುಭವಿಸುತ್ತದೆ.   ಜಗದ್ಗುರು ರಾವಲ್ ಸಿದ್ಧೇಶ್ವರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು 1983ರ ವಿಜಯದಶಮಿಯ ಶುಭಮುಹೂರ್ತದಲ್ಲಿ ಟೆಹರಿ ಮಹಾರಾಜರಿಂದ ತಿಲಕೋತ್ಸವ ಮಾಡಿಸಿಕೊಂಡು ರಾವಲ್ ಪದವಿ ಭೂಷಿತರಾದರು, ಸುಮಾರು ಹದಿನೇಳು ವರ್ಷಗಳ ಕಾಲ ವೈರಾಗ್ಯ ಪೀಠಾಧಿಪತಿಗಳಾಗಿ ಕನರ್ಾಟಕ, ಆಂಧ್ರ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ ಮುಂತಾದ ಬೇರೆಬೇರೆ ರಾಜ್ಯಗಳಲ್ಲಿ ಸಮಾನ ಪೀಠಾಚಾರ್ಯರೊಂದಿಗೆ ಹಾಗೂ  ವೈಯಕ್ತಿಕವಾಗಿ ಧರ್ಮಜಾಗೃತಿ ಯಾತ್ರೆ ಕೈಗೊಂಡು ಧರ್ಮದ ಉಳಿವು-ಬೆಳವಣಿಗೆಗಾಗಿ ಶ್ರಮಿಸುತ್ತಲಿದ್ದರು.
    ಆದರೆ ಅನಾರೋಗ್ಯವು ಅವರನ್ನು ಬೆಂಬತ್ತಿ ಕಾಡತೊಡಗಿತು.  ಶ್ರೀ ಪೀಠದ ವಿಧಿವತ್ಪೂರ್ವಕ ಕಾರ್ಯಕ್ರಮ ನಡೆಸಿಕೊಡುವುದು, ಅಲ್ಲಿ ವಾಸಮಾಡುವುದು ತುಂಬಾ ಕಷ್ಟಸಾಧ್ಯವೆನಿಸಿತು.  ಆದ್ದರಿಂದ ಅವರು ಸಮಾನ ಪೀಠಾಚಾರ್ಯರ ಜೊತೆಗೆ ಸಮಾಲೋಚಿಸಿ ತಮ್ಮ ಜೀವಿತ ಕಾಲದಲ್ಲಿಯೇ ಓರ್ವ ಸಮರ್ಥ ವ್ಯಕ್ತಿಯನ್ನು ವೈರಾಗ್ಯ ಪೀಠಾಧೀಶ್ವರರನ್ನಾಗಿ ನಿಯುಕ್ತಿಗೊಳಿಸಲು ನಿರ್ಧರಿಸಿದರು.  ಸುದೀರ್ಘ ಸಮಾಲೋಚನೆಯ ನಂತರ,  ಪರಂಪರೆಯಂತೆ ಅವರ ಚೇಲ (ಶಿಷ್ಯ)ಗಳಲ್ಲಿ ಒಬ್ಬರಾದ ನಾಂದೇಡ ಜಿಲ್ಲೆಯ ಕಂಧಾರ ತಾಲ್ಲೂಕಿನ ಶಿರಾಡೋಣ ಸಂಸ್ಥಾನಮಠದ ಶ್ರೀ ಷ| ಬ್ರ| ಷಡಕ್ಷರ ಶಿವಾಚಾರ್ಯ ಸ್ವಾಮಿಗಳನ್ನು ಆಯ್ಕೆ ಮಾಡಿದರು.  ಶ್ರೀಗಳವರು ಓರ್ವ ಪ್ರಭಾವೀ ಮಠಾಧೀಶರಾಗಿದ್ದಾರೆ.  1-12-1972ರಿಂದ ಶಿರಾಡೋಣ ಪಟ್ಟಾಧ್ಯಕ್ಷರಾಗಿದ್ದು ಶ್ರೀ ಮಠದ ಅಭಿವೃದ್ಧಿಗೆ ಶ್ರಮಿಸಿದವರಾಗಿದ್ದಾರೆ.  ಧಾಮರ್ಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಕಾರ್ಯಗೈದು ಜನಪ್ರಿಯ ಪಟ್ಟಾಧ್ಯಕ್ಷರೆನಿಸಿದ್ದಾರೆ.  ಅದನ್ನರಿತ ಪಂಚಪೀಠಾಚಾರ್ಯರು ಹರಪನಹಳ್ಳಿಯ ತೆಗ್ಗಿನಮಠದಲ್ಲಿ ದಿನಾಂಕ 26-7-2000ದಂದು ಸಮಾವೇಶಗೊಂಡು ಅನೇಕ ಶಿವಾಚಾರ್ಯರ ಸಮ್ಮುಖದಲ್ಲಿ ಶಿರಾಡೋಣ ಶ್ರೀಗಳವರನ್ನೇ ಭಾವೀ ಕೇದಾರ ಪೀಠಾಧ್ಯಕ್ಷರನ್ನಾಗಿ ಒಪ್ಪಿಕೊಂಡು ಆಶೀರ್ವದಿಸಿದರು.  ಅಂದಿನ ಸಭೆಯಲ್ಲಿ 13-10-2000ನೇ ಶುಕ್ರವಾರದ ಶುಭದಿನದಂದು ಪಟ್ಟಾಧಿಕಾರ ಮಹೋತ್ಸವ ನೆರವೇರಿಸಲು ನಿರ್ಧರಿಸಲಾಯಿತು.  ಅಂದು ಅವರ ವ್ಯಕ್ತಿತ್ವವನ್ನು ಕುರಿತು ಮಾತನಾಡಿದ ಶಿವಾಚಾರ್ಯರು ಹಾಗೂ ಪೀಠಾಚಾರ್ಯರು ಶಿರಾಡೋಣ ಶ್ರೀಗಳವರು ಪ್ರಭಾವೀ ವ್ಯಕ್ತಿತ್ವಹೊಂದಿದ್ದು ವೈರಾಗ್ಯ ಪೀಠದ ಸವರ್ಾಂಗೀಣ ಪ್ರಗತಿಗೆ ಶ್ರಮಿಸಬಲ್ಲರು ಎಂಬ ಆಶಯವನ್ನು ವ್ಯಕ್ತಪಡಿಸಿದರು.  ಅಂದಿನ ಸಭೆಯಲ್ಲಿ ಭಾಗಿಯಾದುದು ನನ್ನ ಪುಣ್ಯ ವಿಶೇಷವೇ ಸರಿ.
ಶ್ರೀಗಳವರು ನಡೆದುಬಂದ ದಾರಿ ಃ
    ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹೂವಿನಹಳ್ಳಿಯಲ್ಲಿ ಸಂಗಯ್ಯ ಎಂಬ ಹೂವೊಂದು ಅರಳಿ ಬಂತು.  ತಾಯಿ ಸಂಗನಬಸಮ್ಮ,  ತಂದೆ ಶ್ರೀ ವೇ|| ರಾಚೋಟಯ್ಯನವರು ಈ ಮಗುವಿಗೆ ಜನ್ಮವಿತ್ತವರು.  ಆ ದಂಪತಿಗಳಿಗೆ 6 ಗಂಡುಮಕ್ಕಳು, 3 ಜನ ಹೆಣ್ಣುಮಕ್ಕಳು.  ಆ ತುಂಬುಸಂಸಾರದಲ್ಲಿ ಸಂಗಯ್ಯ ಜನಿಸಿದ್ದು, 1956ರ ಜೂನ್ 1ರಂದು.  ಹೂವಿನಹಳ್ಳಿಯಲ್ಲಿಯೇ ಪ್ರಾಥಮಿಕ ಅಭ್ಯಾಸ ಪಡೆದನು.  ಮುಂದೆ ಸೊಲ್ಲಾಪುರದ ಹೊಟಗಿಮಠದ ಶ್ರೀಮದ್ ವೀರಶೈವ ಗುರುಕುಲದಲ್ಲಿ ಆಶ್ರಯ ಪಡೆದು ಅಧ್ಯಯನ ಮುಂದುವರಿಸಿದನು.  ಪ್ರೌಢ ಶಿಕ್ಷಣದೊಂದಿಗೆ ಗುರುಕುಲದಲ್ಲಿ ಸಂಸ್ಕೃತ, ವೇದ, ಜೋತಿಷ್ಯ ಶಾಸ್ತ್ರಗಳ ಅಧ್ಯಯನವು ನಡೆಯಿತು.
    ಶಿರಾಡೋಣ ಪಟ್ಟಾಧ್ಯಕ್ಷರಾಗಿದ್ದ ಶ್ರೀ ಷ|ಬ್ರ| ದಶಮುಖ ಶಿವಾಚಾರ್ಯರು ಶಾಪಾನುಗ್ರಹ ಶಕ್ತರು, ಸಮರ್ಥರು, ಜ್ಞಾನಿಗಳು.  ಅವರ ಶ್ರೀ ದೃಷ್ಟಿ ಈ ಬಾಲಕನ ಮೇಲೆ ಬಿತ್ತು.  ಗುರುಕೃಪೆಗೆ ಪಾತ್ರನಾದ ಬಾಲ ಸಂಗಯ್ಯನಿಗೆ 16ನೇ ವಯಸ್ಸಿನಲ್ಲಿಯೇ ಶಿರಾಡೋಣದ ಕಾಶೀ ಶಾಖಾಮಠದ ಪಟ್ಟಾಧ್ಯಕ್ಷರಾಗುವ ಸುಯೋಗ ಲಭಿಸಿತು.  ಸಂಗಯ್ಯ ಗುರುವಿನ ಕರುಣಕಟಾಕ್ಷದಿಂದ ಶ್ರೀ ಷ| ಬ್ರ| ಷಡಕ್ಷರ ಶಿವಾಚಾರ್ಯ ಎನಿಸಿದರು.  ಜ್ಞಾನದ ದಾಹ ನೀಗಿರಲಿಲ್ಲವಾದ್ದರಿಂದ ತರುಣ ಗುರುವರೇಣ್ಯರು ಶ್ರೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಮಹಾಸನ್ನಿಧಿಯವರ ಅಪ್ಪಣೆಯಂತೆ ಕಾಶಿಯ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ವಿದ್ಯಾಥರ್ಿಯಾದರು.  1974ರಿಂದ 1983ರ ಅವಧಿಯಲ್ಲಿ ಡಾ| ಸಂಪೂಣರ್ಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮುಂದುವರಿಸಿ,  ಶಕ್ತಿವಿಶಿಷ್ಟಾದ್ವೈತ ಆಚಾರ್ಯ ಪದವೀಭೂಷಿತರಾದರು.  ಮರಳಿ ಶಿರಾಡೋಣಕ್ಕೆ ಆಗಮಿಸಿದ ನಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಕಾರ್ಯಕ್ಷೇತ್ರ - ಧರ್ಮಕ್ಷೇತ್ರ ಃ
    ನಾಂದೇಡವು ಮಹಾರಾಷ್ಟ್ರ ರಾಜ್ಯದ ಒಂದು ಮಹಾನಗರಿ ಹಾಗೂ ಜಿಲ್ಲಾ ಕೇಂದ್ರವಾಗಿದೆ.  ಅದನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಭೀಮಾಶಂಕರ ನಗರದ ಒಂದು ನಿವೇಶನದಲ್ಲಿ 1982ರಲ್ಲಿ ದಶಮುಖ ಆಶ್ರಮವನ್ನು ಸ್ಥಾಪಿಸಿದರು.  ಅದರ ಆಶ್ರಯದಲ್ಲಿ ಪ್ರಾಥಮಿಕ ಹಾಗೂ  ಪ್ರೌಢಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದರು.
    ಸಂಗಮೇಶ್ವರ ಗುರುಕುಲದಲ್ಲಿ ಸನಾತನ ಧರ್ಮರಕ್ಷಣೆಗಾಗಿ ಸಾಂಪ್ರದಾಯಿಕ ಶಿಕ್ಷಣ ಹಾಗೂ ತರಬೇತಿ ನೀಡುವ ವ್ಯವಸ್ಥೆ ಮಾಡಿದರು.  ನಾಂದೇಡದ ದಶಮುಖ ಆಶ್ರಮದ ನಿಮರ್ಾಣ ಹಾಗೂ ಅಭಿವೃದ್ಧಿಗಾಗಿ ಸುಮಾರು 80 ಲಕ್ಷ ರೂಪಾಯಿಗಳನ್ನು ಸಮಾಜದ ಉದಾರ ದಾನಿಗಳಿಂದ ಸಂಗ್ರಹಿಸಿ ಪವಾಡಸದೃಶ ಕಾರ್ಯವೆಸಗಿದ್ದಾರೆ.  ಆ ಆಶ್ರಮಕ್ಕೆ ಕಳೆದ 20 ವರ್ಷಗಳಲ್ಲಿ  ಪಂಚಪೀಠಗಳ ಮಹಾಚಾರ್ಯರನ್ನು ದಯಮಾಡಿಸಿಕೊಂಡು ಅನೇಕ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ.  ಅದರಿಂದ ಆ ಭಾಗದ ಲಕ್ಷಾಂತರ ಭಕ್ತರಿಗೆ ಪರಂಪರೆಯ ಅರಿವು, ಘನತೆ, ಗೌರವಗಳ ಪರಿಚಯವಾಗಿದೆ.
    ಶ್ರೀಗಳವರು ಸ್ವತಃ ಅನೇಕ ಗ್ರಾಮಗಳಲ್ಲಿ ಧರ್ಮಜಾಗೃತಿ ಯಾತ್ರೆ ಕೈಗೊಂಡು ಧರ್ಮಸಭೆ ಏರ್ಪಡಿಸಿ, ವ್ಯಸನಮುಕ್ತಿ ಆಂದೋಳನಗಳನ್ನು ಕಳೆದ 25 ವರ್ಷಗಳಿಂದ ನೆರವೇರಿಸುತ್ತಾ ಬಂದಿದ್ದಾರೆ.  ಕಳೆದ 8-10 ವರ್ಷಗಳಿಂದ ಅಲ್ಲಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭಗಳನ್ನು ಏರ್ಪಡಿಸಿದ ಹೆಗ್ಗಳಿಕೆ ಶ್ರೀಗಳವರಿಗೆ ಸಲ್ಲುತ್ತದೆ.  ಪ್ರತಿವರ್ಷವೂ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಲಿಂಗಪೂಜಾನುಷ್ಠಾನವನ್ನು ಲೋಕಕಲ್ಯಾಣಾರ್ಥವಾಗಿ ಬೇರೆಬೇರೆ ಭಾಗಗಳಲ್ಲಿ ನಡೆಸುತ್ತಾ ಬಂದಿದ್ದಾರೆ.
    ಕಾಶೀ ಕ್ಷೇತ್ರ, ಔಂಡ ನಾಗನಾಥ, ಡಾಕಿಣ್ಯದ ಭೀಮಶಂಕರ, ಹಿಮವತ್ ಕೇದಾರ, ಶ್ರೀಶೈಲ, ಉಜ್ಜಯಿನಿ-ಹೀಗೆ ಎಲ್ಲ ಜ್ಯೋತಿಲರ್ಿಂಗ ನಿವಾಸಗಳಲ್ಲಿ ತಿಂಗಳ ಪರ್ಯಂತ ಅನುಷ್ಠಾನಗೈದ ಪುಣ್ಯಪುರುಷರು ಶಿರಾಡೋಣ ಶ್ರೀಗಳವರು ಎಂಬ ಪ್ರತೀತಿಗೆ ಪಾತ್ರರಾಗಿದ್ದಾರೆ.  ಮರಾಠಿ, ಸಂಸ್ಕೃತ, ಹಿಂದೀ ಹಾಗೂ ಕನ್ನಡ ಭಾಷೆಗಳಲ್ಲಿ ನಿರರ್ಗಳವಾಗಿ ಉಪದೇಶ ನೀಡಬಲ್ಲವರಾದ್ದರಿಂದ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ, ಧರ್ಮಜಾಗೃತಿ ಕಾರ್ಯ ಕೈಗೊಂಡಿದ್ದಾರೆ.
ಜಗದ್ಗುರುತ್ವದ ಉತ್ತರದಾಯಿತ್ವ ಃ
    ಕಳೆದ 2000ನೆಯ ಅಕ್ಟೋಬರ್ 13 ರಂದು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ದಿವ್ಯ  ಸನ್ನಿಧಾನದಲ್ಲಿ ನೂರಾರು ಹರ-ಗುರು-ಚರಮೂತರ್ಿಗಳ ಸಮ್ಮುಖದಲ್ಲಿ, ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಶ್ರೀ ಷ|ಬ್ರ|ಷಡಕ್ಷರ ಶಿವಾಚಾರ್ಯರು ವೈರಾಗ್ಯ ಪೀಠಾರೋಹಣಗೈದು 'ಕೇದಾರ ಜಗದ್ಗುರು' ಎನಿಸಿದರು.  ಶ್ರೀ ಜಗದ್ಗುರು ಪಂಚಪೀಠಾಧೀಶ್ವರರು ಐವರೂ ಸಾನ್ನಿಧ್ಯವನ್ನು ದಯಪಾಲಿಸಿದ ಮೊಟ್ಟಮೊದಲ ಕಾರ್ಯಕ್ರಮವು ಶ್ರೀ ಓಖೀಮಠದಲ್ಲಿ ನೆರವೇರಿದ್ದು,  ಇದೇ ಪ್ರಪ್ರಥಮವೆಂಬ ದಾಖಲೆ ಸ್ಥಾಪಿಸಿದೆ.  ಸಾಮಾನ್ಯವಾಗಿ ಒಬ್ಬಿಬ್ಬರು ಪೀಠಾಚಾರ್ಯರು ಮಾತ್ರ ಇದುವರೆಗೆ ಈ ಕಾರ್ಯಕ್ರಮ ನೆರವೇರಿಸಿಕೊಡುತ್ತಿದ್ದರು.  ಹೀಗೆ ಇವರ ಕಾಲದಲ್ಲಿ ಒಂದು ನೂತನ ದಾಖಲೆ ಸ್ಥಾಪಿತವಾಗಿದೆ.
    ಶ್ರೀ ಜಗದ್ಗುರು ರಾವಲ್ ಸಿದ್ಧೇಶ್ವರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಿರೀಟ ಧಾರಣ, ಮುದ್ರಾಧಾರಣಾದಿ ವಿಧಿವಿಧಾನಗಳನ್ನು ಸಮಾನ ಪೀಠಾಚಾರ್ಯರ ದಿವ್ಯ ಸನ್ನಿಧಾನದಲ್ಲಿ ನೆರವೇರಿಸಿ ಇವರಿಗೆ ಶ್ರೀಮತ್ ಹಿಮವತ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ರಾವಲ್ ಶ್ರೀ 1008 ಜಗದ್ಗುರು ಭೀಮಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ನೂತನ ಅಭಿಧಾನವನ್ನು ದಯಪಾಲಿಸಿದರು.  ಅಂದಿನ ಧರ್ಮಸಭೆಯಲ್ಲಿ ನೂತನ ಕೇದಾರ ಜಗದ್ಗುರುಗಳವರು ಮೂಲಪೀಠದಲ್ಲಿ ಪ್ರತಿವರ್ಷವೂ ಅಕ್ಟೋಬರ್ ಹಾಗೂ ಮೇ ತಿಂಗಳ ಪೂತರ್ಿ ವಾಸ್ತವ್ಯ ಮಾಡಿ ಮೂಲಪೀಠದ ಅಭಿವೃದ್ಧಿಗಾಗಿ ಶ್ರಮಿಸುವ ಪಣತೊಟ್ಟರು.  ಓಖೀಮಠವು ಜೀರ್ಣಶೀರ್ಣವಾಗಿದ್ದು ಅದರ ಪುನರ್ನಿಮರ್ಾಣ ಕಷ್ಟಕರವಾದುದರಿಂದ ನೂತನ ಮಹಾಮಠವೊಂದನ್ನು ನಿಮರ್ಿಸುವ ಸಂಕಲ್ಪಗೈದಿದ್ದಾರೆ.  ಗೌರೀಕುಂಡದಲ್ಲಿ ಒಂದು ಸುಸಜ್ಜಿತ ಕಟ್ಟಡವನ್ನು ಶ್ರೀ ಪೀಠಕ್ಕಾಗಿ ಕೊಂಡುಕೊಳ್ಳುವ ಪ್ರಯತ್ನ ನಡೆದಿದೆ.  ವರ್ಷದ ಇನ್ನುಳಿದ 10 ತಿಂಗಳು ದೇಶದ ಎಲ್ಲಾ ರಾಜ್ಯಗಳಲ್ಲಿ ಧರ್ಮಜಾಗೃತಿ ಯಾತ್ರೆ ಕೈಗೊಂಡು, ಲೋಕಕಲ್ಯಾಣಕ್ಕಾಗಿ ಶ್ರಮಿಸುವ ಉದ್ದೇಶ ಹೊಂದಿದ್ದಾರೆ.  ಇತ್ತೀಚೆಗೆ ಪೀಠಾಧಿಪತಿಗಳಾಗಿರುವುದರಿಂದ ಇವರ ಕಾರ್ಯ ಕ್ಷಮತೆ, ಕ್ರಿಯಾಶೀಲತೆಗಳನ್ನು ಕಾದು ನೋಡಬೇಕಾಗಿದೆ.  ಕಳೆದ ಡಿಸೆಂಬರ್ 2000ನೆಯ ಇಸವಿಯ 25 ಮತ್ತು 26ರಂದು ನಾಂದೇಡದ ಭೀಮಶಂಕರ ನಗರದಲ್ಲಿ ಅಖಿಲ ಮಹಾರಾಷ್ಟ್ರ ವೀರಶೈವ ದ್ವಿತೀಯ ಮಹಾಧಿವೇಶನವನ್ನು ಅದ್ವಿತೀಯ ಎನ್ನುವಂತೆ ನಡೆಸಿರುವುದು ನೂತನ ಕೇದಾರ ಜಗದ್ಗುರುಗಳವರ ಕತರ್ೃತ್ವ ಶಕ್ತಿಗೆ ಸಾಕ್ಷಿಯಾಗಿದೆ.  ಆ ಸಮಾರಂಭಕ್ಕೆ ದಯಮಾಡಿಸಿದ್ದ ವಿಶ್ರಾಂತ ಕೇದಾರ ಜಗದ್ಗುರುಗಳವರನ್ನು ಒಳಗೊಂಡು ಸಮಾನ ಪೀಠಾಚಾರ್ಯರು ಹಾಗೂ ಅನೇಕ ಶಿವಾಚಾರ್ಯರು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಒಳಗೊಂಡು ಅಧಿವೇಶನದಲ್ಲಿ ಭಾಗಿಗಳಾದ ಅನೇಕ ಗಣ್ಯಮಾನ್ಯರು ನೂತನ ಕೇದಾರ ಜಗದ್ಗುರುಗಳವರ ಸಂಘಟನಾ ಶಕ್ತಿ, ದೂರದಶರ್ಿತ್ವ ಹಾಗೂ ಕ್ರಿಯಾಶೀಲತೆಗಳನ್ನು ಮುಕ್ತಕಂಠದಿಂದ ಹೊಗಳಿದರು.  ಅದೊಂದು ಅಪೂರ್ವ - ಅನುಪಮ ಸನ್ನಿವೇಶವಾಗಿತ್ತು.  ಅದನ್ನು ಕಣ್ಣಾರೆ ಕಂಡ ನಾನೇ ಧನ್ಯನು.
    ಶ್ರೀ ಭೀಮಶಂಕರಲಿಂಗ ಜಗದ್ಗುರುಗಳವರು ಕಳೆದ ಆರೇಳು  ವರ್ಷಗಳಲ್ಲಿ ವೈರಾಗ್ಯ ಪೀಠದ ಉನ್ನತೀಕರಣದಲ್ಲಿ ಆಸಕ್ತಿಯಿಂದ ತನ್ಮಯರಾಗಿದ್ದಾರೆ.  ಶ್ರೀ ಪೀಠದ ಜೀಣರ್ೋದ್ಧಾರವನ್ನು ಈಗಾಗಲೇ ಮಾಡಿ ಮುಗಿಸಿದ ಜಗದ್ಗುರುಗಳವರು ಸುಮಾರು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶ್ರೀ ಜಗದ್ಗುರು ನೀಲಕಂಠಲಿಂಗ ಭವನ ನಿಮರ್ಾಣ ಯೋಜನೆಯನ್ನು ರೂಪಿಸಿದರು.  ಮೂರು ಅಂತಸ್ತಿನ ಈ ಭವನವು ಸಂಪೂರ್ಣ ನಿಮರ್ಾಣವಾಗದೆ ವಿರಮಿಸಲಾರೆವು ಎಂಬ ಶಪಥದೊಂದಿಗೆ ಕಾರ್ಯಪ್ರವೃತ್ತರಾದರು.  ಇವರ ಯಾವ ಸಂಕಲ್ಪವೂ ವಿಕಲ್ಪವಾದದ್ದನ್ನು ಕಂಡವರಿಲ್ಲ.  ಶ್ರೀ ಬದರಿನಾಥ, ಶ್ರೀ ಕೇದಾರನಾಥ ಮಂದಿರ ಸಮಿತಿಯ ಅನುಮತಿ ಹಾಗೂ ಸಮಾನ ಪೀಠಾಚಾರ್ಯರ ಸಲಹೆ, ಸಹಕಾರಗಳೊಂದಿಗೆ ಭವ್ಯ ಮಂದಿರವು ನಿಮರ್ಾಣಗೊಂಡಿತು.  ಕಳೆದ 2006 ರ ಜೂನ್ ಐದರಂದು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ದಿವ್ಯ ಸಾನ್ನಿಧ್ಯದಲ್ಲಿ ಭಾರತ ಸರಕಾರದ ಮಾನ್ಯ ಗೃಹ ಸಚಿವರಾದ ಶ್ರೀ ಶಿವರಾಜ ಪಾಟೀಲರು ಶ್ರೀ ಜಗದ್ಗುರು ನೀಲಕಂಠಲಿಂಗ ಭವನವನ್ನು ಉದ್ಘಾಟಿಸಿದರು.  ಉತ್ತರಾಂಚಲದ ಮಾನ್ಯ ಮುಖ್ಯಮಂತ್ರಿಯಾದಿಯಾಗಿ ಅನೇಕ ಸಚಿವರು, ಶಾಸಕರು, ಲೋಕಸಭಾಸದಸ್ಯರು ಉಪಸ್ಥಿತರಿದ್ದರು.  ನೆರೆದ ಸಾವಿರಾರು ಜನ ಭಕ್ತರ ಜಯಘೋಷದೊಂದಿಗೆ ಪೂರ್ಣಕುಂಭಸಹಿತವಾಗಿ ಜಗದ್ಗುರುಗಳೈವರು ನೂತನ ಕಟ್ಟಡದೊಳಗೆ ಪಾದಾರ್ಪಣೆ ಮಾಡಿದರು.  ನೂರಾರು ಜನ ಹರಗುರು ಚರಮೂತರ್ಿಗಳು ಈ ಮಹತ್ವಪೂರ್ಣವಾದ ಭವನದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ವಿಶೇಷವೆನಿಸಿತು. 
    ಇದೇ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ದಿ.29.05.2006 ರಿಂದ 4.6.2006ರವರೆಗೆ ಶತಚಂಡಿ ಹೋಮ ಏರ್ಪಡಿಸಿ ಪರಿಸರವನ್ನು ಪವಿತ್ರಗೊಳಿಸಲಾಯಿತು.  ದಿನವಿಡೀ ಒಂದು ವಾರ ಜನರಲ್ಲಿ ಧರ್ಮಜಾಗೃತಿ ಹಾಗೂ ಧರ್ಮ ಪ್ರಜ್ಞೆ ಮೂಡಿಸುವ ಸಭೆ - ಸಮ್ಮೇಲನಗಳು ನಡೆದಿದ್ದವು.  ದೇಶದ ನಾನಾ ಭಾಗಗಳಿಂದ ವಿವಿಧ ಭಾಷಿಕ ಪಂಡಿತರು, ವಾಗ್ಮಿಗಳು, ಸಂಗೀತ ಕಲಾವಿದರು, ಧಮರ್ಾಭಿಮಾನಿಗಳು ಪಾಲ್ಗೊಂಡು ಓಖಿಮಠದ ಆವರಣವನ್ನು ಅಣು ಭಾರತವನ್ನಾಗಿ (ಒಟಿ ಟಿಜಚಿ) ಮಾರ್ಪಡಿಸಿದ್ದರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.  ಒಟ್ಟಾರೆ ಈ ಕಾರ್ಯವು ವೈರಾಗ್ಯಪೀಠಾಧೀಶರಾದ 'ರಾವಲ್' ಶ್ರೀ ಜಗದ್ಗುರು ಭೀಮಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಸಾಧನೆ - ಸಿದ್ಧಿಗಳಿಗೆ ಹಿಡಿದ ಕನ್ನಡಿಯಾಗಿತ್ತು.  ಕೇದಾರ ಪೀಠದಿಂದ ಕೆಲವು ಉಪಯುಕ್ತ ಗ್ರಂಥಗಳನ್ನು ಪ್ರಕಟಿಸಿ ಪ್ರಸ್ತುತ ಜಗದ್ಗುರುಗಳು ಕೇದಾರಪೀಠದ ಪ್ರಕಾಶನಕ್ಕೊಂದು ನಾಂದಿ ಹಾಡಿದರು.    ಇದುವರೆಗೆ ಶ್ರೀ ಪೀಠದ ಪರಂಪರೆಯ ಗುರುಗಳನ್ನು ಕುರಿತ ಪುರಾಣವು ಲಭ್ಯವಿರಲಿಲ್ಲ.  ಈ ಸಂಭ್ರಮದ ಸಮಾರಂಭದಲ್ಲಿ ಗುಡೂರ - ಮರಬ ಜಡೆಯಮಠದ ಲಿಂ. 'ಗುರುಕವಿ' ಶ್ರೀ ಗಂಗಾಧರ ಶಿವಾಚಾರ್ಯರು ರಚಿಸಿದ ಹಾಗೂ ಗದ್ಯಪಾಠದೊಂದಿಗೆ ಪ್ರಾ. ಅ.ಸಿ.ಹಿರೇಮಠ ಅವರು ಸಂಪಾದಿಸಿದ ಶ್ರೀ ಹಿಮವತ್ಕೇದಾರ ವೈರಾಗ್ಯ ಪೀಠಾಧೀಶರ ಪುರಾಣವು ಲೋಕಾರ್ಪಣವಾಯಿತು.  ಇದರೊಂದಿಗೆ ಹರಿಹರದ ಸೌ.ಶೋಭಾ ಎಸ್. ಹಿರೇಮಠ ಅವರು ಇಂಗ್ಲೀಷ್ ಭಾಷೆಯಲ್ಲಿ ರಚಿಸಿದ  ಹಾಗೂ ಅವರ ಸುಪುತ್ರಿ ಚಿ.ಕು. ತೇಜಸ್ವಿನಿ ಹಿಂದಿಯಲ್ಲಿ ಬರೆದ 'ಕೇದಾರಪೀಠ ಪರಂಪರೆ' ಕೃತಿಗಳು ಸಹ ಬಿಡುಗಡೆಯಾದವು.  ಶ್ರೀ ಎಸ್.ಎಂ. ಹಿರೇಮಠ ಮತ್ತು ಶ್ರೀಮತಿ ಗಿರಿಜಾ ದುರ್ಗದಮಠ ಅವರ ಕನ್ನಡ ಪುಸ್ತಕಗಳು  ಈ ಮೊದಲೇ ಬೆಳಕು ಕಂಡಿವೆ.  ಹೀಗೆ ಪುಸ್ತಕ ಸಂಸ್ಕೃತಿಯ ಹೊಸಮಾರ್ಗವನ್ನು ಶ್ರೀ ಕೇದಾರ ಪೀಠವು ಕೈಗೊಂಡಿದೆಯೆಂಬುದು ವಿದ್ವತ್ ಲೋಕಕ್ಕೆ ಅನಿರ್ವಚನೀಯ ಆನಂದದ ಸಂಗತಿಯಾಗಿದೆ.
    ಇವಿಷ್ಟೂ ಅಲ್ಲದೇ ಪೂಜ್ಯ   ಶ್ರೀಭೀಮಶಂಕರಲಿಂಗ ಶಿವಾಚಾರ್ಯರು ಶ್ರೀ ಪೀಠದ ಅಭಿವೃದ್ಧಿಗೆ ಐದಂಶಗಳ ಸೂತ್ರವನ್ನು ಹಾಕಿಕೊಂಡು ಸಮಿತಿಯೊಂದನ್ನು ರಚಿಸಿ ಅದರ ಅನುಷ್ಠಾನ ಕಾರ್ಯದಲ್ಲಿ ನಿರತರಾಗಿದ್ದಾರೆ.  ಶ್ರೀ ಕೇದಾರ ಪೀಠದ ಸವರ್ಾಂಗೀಣ ಅಭಿವೃದ್ಧಿಗಾಗಿ ಸಮಿತಿಯು 10.11.2006 ರಂದು ಸಭೆ ಸೇರಿ ಸ್ವೀಕರಿಸಿದ ನಿರ್ಣಯಗಳು ಇಂತಿವೆ:
1.  ಕೇದಾರನಾಥ ಧಾಮದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ 'ರಾವಲ್ ನಿವಾಸ' (ಶ್ರೀ ಸನ್ನಿಧಿಗೆ ನೂತನ ಕಟ್ಟಡ ನಿಮರ್ಾಣ) ನಿಮರ್ಿಸುವುದು.
2.  ಅಂದಾಜು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಓಖಿಮಠದಲ್ಲಿ ಸಾಧು - ಸತ್ಪುರುಷರಿಗಾಗಿ ಭವ್ಯವಾದ ಧರ್ಮಶಾಲೆ, ಪಾಠಶಾಲೆ ನಿಮರ್ಿಸುವುದು.
3.  ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಪುರಾತನವಾಗಿರುವ ಮಹಾದ್ವಾರವನ್ನು ಪುನರ್ರೂಪಿಸಿ ನಿಮರ್ಿಸುವುದು.
4.  ದೆಹಲಿ ಮಹಾನಗರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಭವನವನ್ನು ನಿಮರ್ಿಸುವುದು.
5.  ಶ್ರೀ ಜಗದ್ಗುರು ಏಕೋರಾಮಾರಾಧ್ಯ  ಅವತಾರಸ್ಥಾನವಾದ ದ್ರಾಕ್ಷಾರಾಮ ಕ್ಷೇತ್ರದಲ್ಲಿ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ಭವನ ನಿಮರ್ಿಸುವುದು.
    ಈ ಸಂದರ್ಭದಲ್ಲಿ ಕೇದಾರ ಜಗದ್ಗುರು ಶ್ರೀ ಭೀಮಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಸುವರ್ಣ ಜನ್ಮಮಹೋತ್ಸವವನ್ನು ಆಚರಿಸುವ ಮೂಲಕ ಮಹಾಜನತೆಯು ಶ್ರೀ ಪೀಠದ ಏಳ್ಗೆಗಾಗಿ ಧರ್ಮಜಾಗೃತಿಗಾಗಿ ಇನ್ನೂ ಇನ್ನೂ ಹೆಚ್ಚಿನ ಆಯುರಾರೋಗ್ಯ ಭಾಗ್ಯಗಳನ್ನು ಪೂವರ್ಾಚಾರ್ಯರು ನೀಡಲೆಂದು ಪ್ರಾಥರ್ಿಸಿದರು.
    ಶ್ರೀ ಕೇದಾರ ಪೀಠದ ಜಗದ್ಗುರು ಪರಂಪರೆ
ಶ್ರೀ ಜಗದ್ಗುರು ತ್ರ್ಯಕ್ಷರ ಶಿವಾಚಾರ್ಯ ಭಗವತ್ಪಾದರು (ಕೃತಯುಗ)
ಶ್ರೀ ಜಗದ್ಗುರು ತ್ರಿವಕ್ತ್ರ ಶಿವಾಚಾರ್ಯ ಭಗವತ್ಪಾದರು (ತ್ರೇತಾಯುಗ)
ಶ್ರೀ ಜಗದ್ಗುರು ಘಂಟಾಕರ್ಣ ಶಿವಾಚಾರ್ಯ ಭಗವತ್ಪಾದರು (ದ್ವಾಪರಯುಗ)
ಶ್ರೀ ಜಗದ್ಗುರು ಏಕೋರಾಮಾರಾಧ್ಯ ಭಗವತ್ಪಾದರು (ಕಲಿಯುಗದ ಆರಂಭ)
1.    ಶ್ರೀ ಜಗದ್ಗುರು ಭುಕುಂಡಲಿಂಗ ಶಿವಾಚಾರ್ಯರು
2.    ಶ್ರೀ ಜಗದ್ಗುರು ಗಣೇಶಲಿಂಗ ಶಿವಾಚಾರ್ಯರು
3.    ಶ್ರೀ ಜಗದ್ಗುರು ಸೋಮಲಿಂಗ ಶಿವಾಚಾರ್ಯರು
4.     ಶ್ರೀ ಜಗದ್ಗುರು ಹರಲಿಂಗ ಶಿವಾಚಾರ್ಯರು
5.    ಶ್ರೀ ಜಗದ್ಗುರು  ವೀರಲಿಂಗ ಶಿವಾಚಾರ್ಯರು
6.    ಶ್ರೀ ಜಗದ್ಗುರು ಗರ್ಗಲಿಂಗ ಶಿವಾಚಾರ್ಯರು
7.    ಶ್ರೀ ಜಗದ್ಗುರು  ಭವ್ಯಲಿಂಗ ಶಿವಾಚಾರ್ಯರು
8.    ಶ್ರೀ ಜಗದ್ಗುರು ವಿಶ್ವಲಿಂಗ ಶಿವಾಚಾರ್ಯರು
9.    ಶ್ರೀ ಜಗದ್ಗುರು ಕಾರಣಲಿಂಗ ಶಿವಾಚಾರ್ಯರು
10.    ಶ್ರೀ ಜಗದ್ಗುರು     ಮನೋಹರಲಿಂಗ ಶಿವಾಚಾರ್ಯರು
11.    ಶ್ರೀ ಜಗದ್ಗುರು ಜ್ಯೋತಿಲರ್ಿಂಗ ಶಿವಾಚಾರ್ಯರು
12.    ಶ್ರೀ ಜಗದ್ಗುರು ಜಗನ್ಮಂಗಲಲಿಂಗ ಶಿವಾಚಾರ್ಯರು
13.    ಶ್ರೀ ಜಗದ್ಗುರು ಜಯಲಿಂಗ ಶಿವಾಚಾರ್ಯರು
14.    ಶ್ರೀ ಜಗದ್ಗುರು ಮಹಾಲಿಂಗ ಶಿವಾಚಾರ್ಯರು
15.    ಶ್ರೀ ಜಗದ್ಗುರು ಶಂಕರಲಿಂಗ ಶಿವಾಚಾರ್ಯರು
16.    ಶ್ರೀ ಜಗದ್ಗುರು ಪರಲಿಂಗ ಶಿವಾಚಾರ್ಯರು
17.    ಶ್ರೀ ಜಗದ್ಗುರು ಕುಬೇರಲಿಂಗ ಶಿವಾಚಾರ್ಯರು
18.    ಶ್ರೀ ಜಗದ್ಗುರು ಗಜಲಿಂಗ ಶಿವಾಚಾರ್ಯರು
19.    ಶ್ರೀ ಜಗದ್ಗುರು ವಿರೂಪಾಕ್ಷಲಿಂಗ ಶಿವಾಚಾರ್ಯರು
20.    ಶ್ರೀ ಜಗದ್ಗುರು ವರಲಿಂಗ ಶಿವಾಚಾರ್ಯರು
21.    ಶ್ರೀ ಜಗದ್ಗುರು ಗಂಗಾಧರಲಿಂಗ ಶಿವಾಚಾರ್ಯರು
22.    ಶ್ರೀ ಜಗದ್ಗುರು ದೇವಲಿಂಗ ಶಿವಾಚಾರ್ಯರು
23.    ಶ್ರೀ ಜಗದ್ಗುರು ತ್ರ್ಯಂಬಕ ಲಿಂಗ ಶಿವಾಚಾರ್ಯರು
24.    ಶ್ರೀ ಜಗದ್ಗುರು ಮದನಲಿಂಗ ಶಿವಾಚಾರ್ಯರು
25.    ಶ್ರೀ ಜಗದ್ಗುರು ತ್ರಿಲೋಚನಲಿಂಗ ಶಿವಾಚಾರ್ಯರು
26.    ಶ್ರೀ ಜಗದ್ಗುರು ಸ್ಮರಾರಿಲಿಂಗ ಶಿವಾಚಾರ್ಯರು
27.    ಶ್ರೀ ಜಗದ್ಗುರು ಪುರಾರಿಲಿಂಗ ಶಿವಾಚಾರ್ಯರು
28.    ಶ್ರೀ ಜಗದ್ಗುರು ಸಂಪಾತಿಲಿಂಗ ಶಿವಾಚಾರ್ಯರು
29.    ಶ್ರೀ ಜಗದ್ಗುರು ಕರ್ಮಠಲಿಂಗ ಶಿವಾಚಾರ್ಯರು
30.    ಶ್ರೀ ಜಗದ್ಗುರು ಸುರಲಿಂಗ ಶಿವಾಚಾರ್ಯರು
31.    ಶ್ರೀ ಜಗದ್ಗುರು ಆನಂದ ತಾಂಡವಲಿಂಗ ಶಿವಾಚಾರ್ಯರು
32.    ಶ್ರೀ ಜಗದ್ಗುರು ಶುಕ್ರಲಿಂಗ ಶಿವಾಚಾರ್ಯರು
33.    ಶ್ರೀ ಜಗದ್ಗುರು ರೂಪಲಿಂಗ ಶಿವಾಚಾರ್ಯರು
34.    ಶ್ರೀ ಜಗದ್ಗುರು ಮೀನಾಕ್ಷಿ ಸುಂದರಲಿಂಗ ಶಿವಾಚಾರ್ಯರು
35.    ಶ್ರೀ ಜಗದ್ಗುರು ಸುಬ್ರಹ್ಮಣ್ಯಲಿಂಗ ಶಿವಾಚಾರ್ಯರು
36.    ಶ್ರೀ ಜಗದ್ಗುರು ಮೂತರ್ಿಲಿಂಗ ಶಿವಾಚಾರ್ಯರು
37.    ಶ್ರೀ ಜಗದ್ಗುರು ವಾರಿಲಿಂಗ ಶಿವಾಚಾರ್ಯರು
38.    ಶ್ರೀ ಜಗದ್ಗುರು ಕುಂದಲಿಂಗ ಶಿವಾಚಾರ್ಯರು
39.    ಶ್ರೀ ಜಗದ್ಗುರು ಚರಮಲಿಂಗ ಶಿವಾಚಾರ್ಯರು
40.    ಶ್ರೀ ಜಗದ್ಗುರು ಧರ್ಮಲಿಂಗ ಶಿವಾಚಾರ್ಯರು
41.    ಶ್ರೀ ಜಗದ್ಗುರು ತೀರ್ಥಲಿಂಗ ಶಿವಾಚಾರ್ಯರು
42.    ಶ್ರೀ ಜಗದ್ಗುರು ಚಂಡಿಕೇಶ್ವರಲಿಂಗ ಶಿವಾಚಾರ್ಯರು
43.    ಶ್ರೀ ಜಗದ್ಗುರು ಭಜನಲಿಂಗ ಶಿವಾಚಾರ್ಯರು
44.    ಶ್ರೀ ಜಗದ್ಗುರು ದೇವಲಿಂಗ ಶಿವಾಚಾರ್ಯರು
45.    ಶ್ರೀ ಜಗದ್ಗುರು ರಾಮಲಿಂಗ ಶಿವಾಚಾರ್ಯರು
46.    ಶ್ರೀ ಜಗದ್ಗುರು ನಂದಿಲಿಂಗ ಶಿವಾಚಾರ್ಯರು
47.    ಶ್ರೀ ಜಗದ್ಗುರು ಭವಾರಿಲಿಂಗ ಶಿವಾಚಾರ್ಯರು
48.    ಶ್ರೀ ಜಗದ್ಗುರು ಸಭಾಪತಿಲಿಂಗ ಶಿವಾಚಾರ್ಯರು
49.    ಶ್ರೀ ಜಗದ್ಗುರು ಸುನಾಮಲಿಂಗ ಶಿವಾಚಾರ್ಯರು
50.    ಶ್ರೀ ಜಗದ್ಗುರು ಧ್ವಜಲಿಂಗ ಶಿವಾಚಾರ್ಯರು
51.    ಶ್ರೀ ಜಗದ್ಗುರು ಭೈರವಲಿಂಗ ಶಿವಾಚಾರ್ಯರು
52.    ಶ್ರೀ ಜಗದ್ಗುರು ಸುಮೇರುಲಿಂಗ ಶಿವಾಚಾರ್ಯರು
53.    ಶ್ರೀ ಜಗದ್ಗುರು ಗಿರಿಲಿಂಗ ಶಿವಾಚಾರ್ಯರು
54.    ಶ್ರೀ ಜಗದ್ಗುರು ಓಂಕಾರಲಿಂಗ ಶಿವಾಚಾರ್ಯರು
55.    ಶ್ರೀ ಜಗದ್ಗುರು ಪೂರ್ಣಲಿಂಗ ಶಿವಾಚಾರ್ಯರು
56.    ಶ್ರೀ ಜಗದ್ಗುರು ಅಘೋರಲಿಂಗ ಶಿವಾಚಾರ್ಯರು
57.    ಶ್ರೀ ಜಗದ್ಗುರು ಭಾವಲಿಂಗ ಶಿವಾಚಾರ್ಯರು
58.    ಶ್ರೀ ಜಗದ್ಗುರು ಮಣಿಭದ್ರಲಿಂಗ ಶಿವಾಚಾರ್ಯರು
59.    ಶ್ರೀ ಜಗದ್ಗುರು ಭವಾರಿಲಿಂಗ ಶಿವಾಚಾರ್ಯರು
60.    ಶ್ರೀ ಜಗದ್ಗುರು ನಾಗಹಾರಲಿಂಗ ಶಿವಾಚಾರ್ಯರು
61.    ಶ್ರೀ ಜಗದ್ಗುರು ಮುರಾರಿಲಿಂಗ ಶಿವಾಚಾರ್ಯರು
62.    ಶ್ರೀ ಜಗದ್ಗುರು ರತ್ನಲಿಂಗ ಶಿವಾಚಾರ್ಯರು
63.    ಶ್ರೀ ಜಗದ್ಗುರು ಗಿರಿಲಿಂಗ ಶಿವಾಚಾರ್ಯರು
64.    ಶ್ರೀ ಜಗದ್ಗುರು ಬ್ರಹ್ಮಾನಂದಲಿಂಗ ಶಿವಾಚಾರ್ಯರು
65.    ಶ್ರೀ ಜಗದ್ಗುರು ಕಠೋರಲಿಂಗ ಶಿವಾಚಾರ್ಯರು
66.    ಶ್ರೀ ಜಗದ್ಗುರು ಪುರೇಂದ್ರಲಿಂಗ ಶಿವಾಚಾರ್ಯರು
67.    ಶ್ರೀ ಜಗದ್ಗುರು ಶಂಭುಲಿಂಗ ಶಿವಾಚಾರ್ಯರು
68.    ಶ್ರೀ ಜಗದ್ಗುರು ವರುಣಲಿಂಗ ಶಿವಾಚಾರ್ಯರು
69.    ಶ್ರೀ ಜಗದ್ಗುರು ತಾರಕಲಿಂಗ ಶಿವಾಚಾರ್ಯರು
70.    ಶ್ರೀ ಜಗದ್ಗುರು ವರ್ಣಲಿಂಗ ಶಿವಾಚಾರ್ಯರು
71.    ಶ್ರೀ ಜಗದ್ಗುರು ಕಾಮಲಿಂಗ ಶಿವಾಚಾರ್ಯರು
72.    ಶ್ರೀ ಜಗದ್ಗುರು ಮಂಡಲೇಶ್ವರಲಿಂಗ ಶಿವಾಚಾರ್ಯರು
73.    ಶ್ರೀ ಜಗದ್ಗುರು ಅರುಣಾಚಲ ಲಿಂಗ ಶಿವಾಚಾರ್ಯರು
74.    ಶ್ರೀ ಜಗದ್ಗುರು ಮಹೇಶ್ವರಲಿಂಗ ಶಿವಾಚಾರ್ಯರು
75.    ಶ್ರೀ ಜಗದ್ಗುರು ಹರಿಕೇಶಲಿಂಗ ಶಿವಾಚಾರ್ಯರು
76.    ಶ್ರೀ ಜಗದ್ಗುರು ಸುರೇಶಲಿಂಗ ಶಿವಾಚಾರ್ಯರು
77.    ಶ್ರೀ ಜಗದ್ಗುರು ಮಹಾರುದ್ರಲಿಂಗ ಶಿವಾಚಾರ್ಯರು
78.    ಶ್ರೀ ಜಗದ್ಗುರು ಬಲಾಹಕ ಲಿಂಗ ಶಿವಾಚಾರ್ಯರು
79.    ಶ್ರೀ ಜಗದ್ಗುರು ರೋಹಿತಲಿಂಗ ಶಿವಾಚಾರ್ಯರು
80.    ಶ್ರೀ ಜಗದ್ಗುರು ಭೀಮಕರ್ಣಲಿಂಗ  ಶಿವಾಚಾರ್ಯರು
81.    ಶ್ರೀ ಜಗದ್ಗುರು ಶಂಕರಲಿಂಗ ಶಿವಾಚಾರ್ಯರು
82.    ಶ್ರೀ ಜಗದ್ಗುರು ಕೀತರ್ಿಸಾಗರಲಿಂಗ ಶಿವಾಚಾರ್ಯರು
83.    ಶ್ರೀ ಜಗದ್ಗುರು ಮುಖ್ಯಲಿಂಗ ಶಿವಾಚಾರ್ಯರು
84.    ಶ್ರೀ ಜಗದ್ಗುರು ಶುದ್ಧಲಿಂಗ ಶಿವಾಚಾರ್ಯರು
85.    ಶ್ರೀ ಜಗದ್ಗುರು ವದಾನ್ಯಲಿಂಗ ಶಿವಾಚಾರ್ಯರು
86.    ಶ್ರೀ ಜಗದ್ಗುರು ವೇದಸಮ್ಮತಲಿಂಗ ಶಿವಾಚಾರ್ಯರು
87.    ಶ್ರೀ ಜಗದ್ಗುರು ಮನುಲಿಂಗ ಶಿವಾಚಾರ್ಯರು
88.    ಶ್ರೀ ಜಗದ್ಗುರು ಕುಮಾರಲಿಂಗ ಶಿವಾಚಾರ್ಯರು
89.    ಶ್ರೀ ಜಗದ್ಗುರು ಯಜ್ಞಲಿಂಗ ಶಿವಾಚಾರ್ಯರು
90.    ಶ್ರೀ ಜಗದ್ಗುರು ಮುಕ್ತಿಮುನಿಲಿಂಗ ಶಿವಾಚಾರ್ಯರು
91.    ಶ್ರೀ ಜಗದ್ಗುರು ಯಜ್ಞಮೂತರ್ಿಲಿಂಗ ಶಿವಾಚಾರ್ಯರು
92.    ಶ್ರೀ ಜಗದ್ಗುರು ಸಾತ್ವಿಕಲಿಂಗ ಶಿವಾಚಾರ್ಯರು
93.    ಶ್ರೀ ಜಗದ್ಗುರು ಪರ್ಣಲಿಂಗ ಶಿವಾಚಾರ್ಯರು
94.    ಶ್ರೀ ಜಗದ್ಗುರು ಭೂತಲಿಂಗ ಶಿವಾಚಾರ್ಯರು
95.    ಶ್ರೀ ಜಗದ್ಗುರು ಬಾಲಲಿಂಗ ಶಿವಾಚಾರ್ಯರು
96.    ಶ್ರೀ ಜಗದ್ಗುರು ಕಲಾಧರಲಿಂಗ ಶಿವಾಚಾರ್ಯರು
97.    ಶ್ರೀ ಜಗದ್ಗುರು ನಿರಂಜನಲಿಂಗ ಶಿವಾಚಾರ್ಯರು
98.    ಶ್ರೀ ಜಗದ್ಗುರು ಗುರುಲಿಂಗ ಶಿವಾಚಾರ್ಯರು
99.    ಶ್ರೀ ಜಗದ್ಗುರು ಗುರುಮೂತರ್ಿಲಿಂಗ ಶಿವಾಚಾರ್ಯರು
100.    ಶ್ರೀ ಜಗದ್ಗುರು ಕಲಾಧರಲಿಂಗ ಶಿವಾಚಾರ್ಯರು
101. ಶ್ರೀ ಜಗದ್ಗುರು ಸತ್ಯಲಿಂಗ ಶಿವಾಚಾರ್ಯರು
102. ಶ್ರೀ ಜಗದ್ಗುರು ವೀರಭದ್ರಲಿಂಗ ಶಿವಾಚಾರ್ಯರು
103. ಶ್ರೀ ಜಗದ್ಗುರು ಅವ್ಯಕ್ತಲಿಂಗ ಶಿವಾಚಾರ್ಯರು
104. ಶ್ರೀ ಜಗದ್ಗುರು ಕಲ್ಪಲಿಂಗ ಶಿವಾಚಾರ್ಯರು
105. ಶ್ರೀ ಜಗದ್ಗುರು ರುದ್ರಪಾದಲಿಂಗ ಶಿವಾಚಾರ್ಯರು
106. ಶ್ರೀ ಜಗದ್ಗುರು ಸಾಮಲಿಂಗ ಶಿವಾಚಾರ್ಯರು
107. ಶ್ರೀ ಜಗದ್ಗುರು ಮೃತ್ಯುಂಜಯಲಿಂಗ ಶಿವಾಚಾರ್ಯರು
108. ಶ್ರೀ ಜಗದ್ಗುರು ಧಾನ್ಯಲಿಂಗ ಶಿವಾಚಾರ್ಯರು
109. ಶ್ರೀ ಜಗದ್ಗುರು ಪ್ರಧಾನಲಿಂಗ ಶಿವಾಚಾರ್ಯರು
110. ಶ್ರೀ ಜಗದ್ಗುರು ಪುರಾಣಲಿಂಗ ಶಿವಾಚಾರ್ಯರು
111. ಶ್ರೀ ಜಗದ್ಗುರು ಕಲ್ಯಾಣಲಿಂಗ ಶಿವಾಚಾರ್ಯರು
112. ಶ್ರೀ ಜಗದ್ಗುರು ಅಘೋರಲಿಂಗ ಶಿವಾಚಾರ್ಯರು
113. ಶ್ರೀ ಜಗದ್ಗುರು ವಿಷ್ಣುಲಿಂಗ ಶಿವಾಚಾರ್ಯರು
114. ಶ್ರೀ ಜಗದ್ಗುರು ಹರಲಿಂಗ ಶಿವಾಚಾರ್ಯರು
115. ಶ್ರೀ ಜಗದ್ಗುರು ಕವಿಲಿಂಗ ಶಿವಾಚಾರ್ಯರು
116. ಶ್ರೀ ಜಗದ್ಗುರು ನೀಲಲಿಂಗ ಶಿವಾಚಾರ್ಯರು
117. ಶ್ರೀ ಜಗದ್ಗುರು ಕರ್ಮಲಿಂಗ ಶಿವಾಚಾರ್ಯರು
118. ಶ್ರೀ ಜಗದ್ಗುರು ಜನಾರ್ಧನಲಿಂಗ ಶಿವಾಚಾರ್ಯರು
119. ಶ್ರೀ ಜಗದ್ಗುರು ವ್ರತಲಿಂಗ ಶಿವಾಚಾರ್ಯರು
120. ಶ್ರೀ ಜಗದ್ಗುರು ರಾಜಲಿಂಗ ಶಿವಾಚಾರ್ಯರು
121. ಶ್ರೀ ಜಗದ್ಗುರು ನೀತಿಲಿಂಗ ಶಿವಾಚಾರ್ಯರು
122. ಶ್ರೀ ಜಗದ್ಗುರು ಮನೋರಥಲಿಂಗ ಶಿವಾಚಾರ್ಯರು
123. ಶ್ರೀ ಜಗದ್ಗುರು ಗುಣಾಧರಲಿಂಗ ಶಿವಾಚಾರ್ಯರು
124. ಶ್ರೀ ಜಗದ್ಗುರು ಮನೋರೂಪಲಿಂಗ ಶಿವಾಚಾರ್ಯರು
125. ಶ್ರೀ ಜಗದ್ಗುರು ವಿದ್ಯಾಲಿಂಗ ಶಿವಾಚಾರ್ಯರು
126. ಶ್ರೀ ಜಗದ್ಗುರು ಬಲಲಿಂಗ ಶಿವಾಚಾರ್ಯರು
127. ಶ್ರೀ ಜಗದ್ಗುರು ವಸಂತಲಿಂಗ ಶಿವಾಚಾರ್ಯರು
128. ಶ್ರೀ ಜಗದ್ಗುರು ಜೀವಲಿಂಗ ಶಿವಾಚಾರ್ಯರು
129. ಶ್ರೀ ಜಗದ್ಗುರು ಜ್ಯೋತಿರೂಪಲಿಂಗ ಶಿವಾಚಾರ್ಯರು
130. ಶ್ರೀ ಜಗದ್ಗುರು ನಿರಂಜನಲಿಂಗ ಶಿವಾಚಾರ್ಯರು
131. ಶ್ರೀ ಜಗದ್ಗುರು ಪುರಾಣಲಿಂಗ ಶಿವಾಚಾರ್ಯರು
132. ಶ್ರೀ ಜಗದ್ಗುರು ಸವರ್ೇಶಲಿಂಗ ಶಿವಾಚಾರ್ಯರು
133. ಶ್ರೀ ಜಗದ್ಗುರು ಪಿನಾಕಲಿಂಗ ಶಿವಾಚಾರ್ಯರು
134. ಶ್ರೀ ಜಗದ್ಗುರು ವಜ್ರಲಿಂಗ ಶಿವಾಚಾರ್ಯರು
135. ಶ್ರೀ ಜಗದ್ಗುರು ಪುರೇಂದ್ರಲಿಂಗ ಶಿವಾಚಾರ್ಯರು
136. ಶ್ರೀ ಜಗದ್ಗುರು ರೋಮಲಿಂಗ ಶಿವಾಚಾರ್ಯರು
137. ಶ್ರೀ ಜಗದ್ಗುರು ತ್ರ್ಯಂಬಕಲಿಂಗ ಶಿವಾಚಾರ್ಯರು
138. ಶ್ರೀ ಜಗದ್ಗುರು ಕುಂದಲಿಂಗ ಶಿವಾಚಾರ್ಯರು
139. ಶ್ರೀ ಜಗದ್ಗುರು ಶಂಖಲಿಂಗ ಶಿವಾಚಾರ್ಯರು
140. ಶ್ರೀ ಜಗದ್ಗುರು ಭೂತಲಿಂಗ ಶಿವಾಚಾರ್ಯರು
141. ಶ್ರೀ ಜಗದ್ಗುರು ಭವಲಿಂಗ ಶಿವಾಚಾರ್ಯರು
142. ಶ್ರೀ ಜಗದ್ಗುರು ಸ್ಥಾಣುಲಿಂಗ ಶಿವಾಚಾರ್ಯರು
143. ಶ್ರೀ ಜಗದ್ಗುರು ಧೀರಲಿಂಗ ಶಿವಾಚಾರ್ಯರು
144. ಶ್ರೀ ಜಗದ್ಗುರು ಸ್ವರಲಿಂಗ ಶಿವಾಚಾರ್ಯರು
145. ಶ್ರೀ ಜಗದ್ಗುರು ಸಾರಲಿಂಗ ಶಿವಾಚಾರ್ಯರು
146. ಶ್ರೀ ಜಗದ್ಗುರು ಹರಲಿಂಗ ಶಿವಾಚಾರ್ಯರು
147. ಶ್ರೀ ಜಗದ್ಗುರು ಪಂಚಯಜ್ಞಲಿಂಗ ಶಿವಾಚಾರ್ಯರು
148. ಶ್ರೀ ಜಗದ್ಗುರು ಜಗತಲಿಂಗ ಶಿವಾಚಾರ್ಯರು
149. ಶ್ರೀ ಜಗದ್ಗುರು ಕೈಲಾಸಲಿಂಗ ಶಿವಾಚಾರ್ಯರು
150. ಶ್ರೀ ಜಗದ್ಗುರು ಸೂಕ್ಷ್ಮಲಿಂಗ ಶಿವಾಚಾರ್ಯರು
151. ಶ್ರೀ ಜಗದ್ಗುರು ನಾದಲಿಂಗ ಶಿವಾಚಾರ್ಯರು
152. ಶ್ರೀ ಜಗದ್ಗುರು ಹಾರಲಿಂಗ ಶಿವಾಚಾರ್ಯರು
153. ಶ್ರೀ ಜಗದ್ಗುರು ವಾಯುಲಿಂಗ ಶಿವಾಚಾರ್ಯರು
154. ಶ್ರೀ ಜಗದ್ಗುರು ಅಮರಲಿಂಗ ಶಿವಾಚಾರ್ಯರು
155. ಶ್ರೀ ಜಗದ್ಗುರು ಮಂದಾರಲಿಂಗ ಶಿವಾಚಾರ್ಯರು
156. ಶ್ರೀ ಜಗದ್ಗುರು ಸುಲಭಲಿಂಗ ಶಿವಾಚಾರ್ಯರು
157. ಶ್ರೀ ಜಗದ್ಗುರು ಯೋಗಿಲಿಂಗ ಶಿವಾಚಾರ್ಯರು
158. ಶ್ರೀ ಜಗದ್ಗುರು ಸುಂದರಲಿಂಗ ಶಿವಾಚಾರ್ಯರು
159. ಶ್ರೀ ಜಗದ್ಗುರು ಶಾಂತಲಿಂಗ ಶಿವಾಚಾರ್ಯರು
160. ಶ್ರೀ ಜಗದ್ಗುರು ರೂಪಲಿಂಗ ಶಿವಾಚಾರ್ಯರು
161. ಶ್ರೀ ಜಗದ್ಗುರು ಸ್ವರೂಪಲಿಂಗ ಶಿವಾಚಾರ್ಯರು
162. ಶ್ರೀ ಜಗದ್ಗುರು ಮಾಯಾಲಿಂಗ ಶಿವಾಚಾರ್ಯರು
163. ಶ್ರೀ ಜಗದ್ಗುರು ಅಮೃತಲಿಂಗ ಶಿವಾಚಾರ್ಯರು
164. ಶ್ರೀ ಜಗದ್ಗುರು ಶಾಂತಲಿಂಗ ಶಿವಾಚಾರ್ಯರು
165. ಶ್ರೀ ಜಗದ್ಗುರು ಅನ್ನಲಿಂಗ ಶಿವಾಚಾರ್ಯರು
166.    ಶ್ರೀ ಜಗದ್ಗುರು ಕಲಾಧರಲಿಂಗ ಶಿವಾಚಾರ್ಯರು
167. ಶ್ರೀ ಜಗದ್ಗುರು ಗೌರೀಶಲಿಂಗ ಶಿವಾಚಾರ್ಯರು
168. ಶ್ರೀ ಜಗದ್ಗುರು ಅಮೇಯಲಿಂಗ ಶಿವಾಚಾರ್ಯರು
169. ಶ್ರೀ ಜಗದ್ಗುರು ಜಯದ್ರಥಲಿಂಗ ಶಿವಾಚಾರ್ಯರು
170. ಶ್ರೀ ಜಗದ್ಗುರು ವೀರಲಿಂಗ ಶಿವಾಚಾರ್ಯರು
171. ಶ್ರೀ ಜಗದ್ಗುರು ಗಂಭೀರಲಿಂಗ ಶಿವಾಚಾರ್ಯರು
172. ಶ್ರೀ ಜಗದ್ಗುರು ಕ್ಷೇತ್ರಲಿಂಗ ಶಿವಾಚಾರ್ಯರು
173. ಶ್ರೀ ಜಗದ್ಗುರು ಶಿವಾಗಮಲಿಂಗ ಶಿವಾಚಾರ್ಯರು
174. ಶ್ರೀ ಜಗದ್ಗುರು ಗಿರಿರಾಜಲಿಂಗ ಶಿವಾಚಾರ್ಯರು
175. ಶ್ರೀ ಜಗದ್ಗುರು ಕಾಲಲಿಂಗ ಶಿವಾಚಾರ್ಯರು
176. ಶ್ರೀ ಜಗದ್ಗುರು ಚಂದ್ರಶೇಖರಲಿಂಗ ಶಿವಾಚಾರ್ಯರು
177. ಶ್ರೀ ಜಗದ್ಗುರು ಕ್ರೌಂಚಧರಲಿಂಗ ಶಿವಾಚಾರ್ಯರು
178. ಶ್ರೀ ಜಗದ್ಗುರು ಪುರಂದರಲಿಂಗ ಶಿವಾಚಾರ್ಯರು
179. ಶ್ರೀ ಜಗದ್ಗುರು ಕಲಕಾರಿಲಿಂಗ ಶಿವಾಚಾರ್ಯರು
180. ಶ್ರೀ ಜಗದ್ಗುರು ವಿಷ್ಣುಲಿಂಗ ಶಿವಾಚಾರ್ಯರು
181. ಶ್ರೀ ಜಗದ್ಗುರು ವರ್ಮಲಿಂಗ ಶಿವಾಚಾರ್ಯರು
182. ಶ್ರೀ ಜಗದ್ಗುರು ತ್ರಿಪುರಾರಿಲಿಂಗ ಶಿವಾಚಾರ್ಯರು
183. ಶ್ರೀ ಜಗದ್ಗುರು ದಾಮೋದರಲಿಂಗ ಶಿವಾಚಾರ್ಯರು
184. ಶ್ರೀ ಜಗದ್ಗುರು ಹೇರವಲಿಂಗ ಶಿವಾಚಾರ್ಯರು
185. ಶ್ರೀ ಜಗದ್ಗುರು ಹರಿದ್ರಲಿಂಗ ಶಿವಾಚಾರ್ಯರು
186. ಶ್ರೀ ಜಗದ್ಗುರು ಜಾಲಪಾದಲಿಂಗ ಶಿವಾಚಾರ್ಯರು
187. ಶ್ರೀ ಜಗದ್ಗುರು ಮಾಧವಲಿಂಗ ಶಿವಾಚಾರ್ಯರು
188. ಶ್ರೀ ಜಗದ್ಗುರು ವಾಸವಲಿಂಗ ಶಿವಾಚಾರ್ಯರು
189. ಶ್ರೀ ಜಗದ್ಗುರು ಸರ್ವಲಿಂಗ ಶಿವಾಚಾರ್ಯರು
190. ಶ್ರೀ ಜಗದ್ಗುರು ಭೂತಿಲಿಂಗ ಶಿವಾಚಾರ್ಯರು
191. ಶ್ರೀ ಜಗದ್ಗುರು ಮೃಡಲಿಂಗ ಶಿವಾಚಾರ್ಯರು
192. ಶ್ರೀ ಜಗದ್ಗುರು ಪ್ರಥಮಾಧಿಪಲಿಂಗ ಶಿವಾಚಾರ್ಯರು
193. ಶ್ರೀ ಜಗದ್ಗುರು ಬಾಣಲಿಂಗ ಶಿವಾಚಾರ್ಯರು
194. ಶ್ರೀ ಜಗದ್ಗುರು ಧನಲಿಂಗ ಶಿವಾಚಾರ್ಯರು
195. ಶ್ರೀ ಜಗದ್ಗುರು ದೇವೇಶಲಿಂಗ ಶಿವಾಚಾರ್ಯರು
196. ಶ್ರೀ ಜಗದ್ಗುರು ಗುಣಾತೀತಲಿಂಗ ಶಿವಾಚಾರ್ಯರು
197. ಶ್ರೀ ಜಗದ್ಗುರು ಪೀತಾಂಬರಲಿಂಗ ಶಿವಾಚಾರ್ಯರು
198. ಶ್ರೀ ಜಗದ್ಗುರು ವಿಶಾಲಲಿಂಗ ಶಿವಾಚಾರ್ಯರು
199. ಶ್ರೀ ಜಗದ್ಗುರು ಕೇವಲಲಿಂಗ ಶಿವಾಚಾರ್ಯರು
200. ಶ್ರೀ ಜಗದ್ಗುರು ಶೂಲಧಾರಿಲಿಂಗ ಶಿವಾಚಾರ್ಯರು
201. ಶ್ರೀ ಜಗದ್ಗುರು ಬುಧಲಿಂಗ ಶಿವಾಚಾರ್ಯರು
202. ಶ್ರೀ ಜಗದ್ಗುರು ಅರಜಲಿಂಗ ಶಿವಾಚಾರ್ಯರು
203. ಶ್ರೀ ಜಗದ್ಗುರು ಜನಕಲಿಂಗ ಶಿವಾಚಾರ್ಯರು
204. ಶ್ರೀ ಜಗದ್ಗುರು ಕಾಲಲಿಂಗ ಶಿವಾಚಾರ್ಯರು
205. ಶ್ರೀ ಜಗದ್ಗುರು ಕೈವಲ್ಯಲಿಂಗ ಶಿವಾಚಾರ್ಯರು
206. ಶ್ರೀ ಜಗದ್ಗುರು ಸಿಂಹಲಿಂಗ ಶಿವಾಚಾರ್ಯರು
207. ಶ್ರೀ ಜಗದ್ಗುರು ಪಶುಪತಿಲಿಂಗ ಶಿವಾಚಾರ್ಯರು
208. ಶ್ರೀ ಜಗದ್ಗುರು ಭದ್ರಲಿಂಗ ಶಿವಾಚಾರ್ಯರು
209. ಶ್ರೀ ಜಗದ್ಗುರು ಬಹುರೂಪಿಲಿಂಗ ಶಿವಾಚಾರ್ಯರು
210. ಶ್ರೀ ಜಗದ್ಗುರು ಪೂಜ್ಯಲಿಂಗ ಶಿವಾಚಾರ್ಯರು
211. ಶ್ರೀ ಜಗದ್ಗುರು ಕಾಂತಲಿಂಗ ಶಿವಾಚಾರ್ಯರು
212. ಶ್ರೀ ಜಗದ್ಗುರು ನಿರಾಮಲಿಂಗ ಶಿವಾಚಾರ್ಯರು
213. ಶ್ರೀ ಜಗದ್ಗುರು ಹಂಸಲಿಂಗ ಶಿವಾಚಾರ್ಯರು
214. ಶ್ರೀ ಜಗದ್ಗುರು ಮನಸ್ವಲಿಂಗ ಶಿವಾಚಾರ್ಯರು
215. ಶ್ರೀ ಜಗದ್ಗುರು ವಿಶ್ವಹಾರಲಿಂಗ ಶಿವಾಚಾರ್ಯರು
216. ಶ್ರೀ ಜಗದ್ಗುರು ವಿರಾಗಲಿಂಗ ಶಿವಾಚಾರ್ಯರು
217. ಶ್ರೀ ಜಗದ್ಗುರು ರವಿನೇತ್ರಲಿಂಗ ಶಿವಾಚಾರ್ಯರು
218. ಶ್ರೀ ಜಗದ್ಗುರು ಪವಿತ್ರಲಿಂಗ ಶಿವಾಚಾರ್ಯರು
219. ಶ್ರೀ ಜಗದ್ಗುರು ನಾದಲಿಂಗ ಶಿವಾಚಾರ್ಯರು
220. ಶ್ರೀ ಜಗದ್ಗುರು ವರದಲಿಂಗ ಶಿವಾಚಾರ್ಯರು
221. ಶ್ರೀ ಜಗದ್ಗುರು ಮಂತ್ರಲಿಂಗ ಶಿವಾಚಾರ್ಯರು
222. ಶ್ರೀ ಜಗದ್ಗುರು ಪ್ರಥಮಲಿಂಗ ಶಿವಾಚಾರ್ಯರು
223. ಶ್ರೀ ಜಗದ್ಗುರು ಶಿತಿಕಂಠಲಿಂಗ ಶಿವಾಚಾರ್ಯರು
224. ಶ್ರೀ ಜಗದ್ಗುರು ವಿಧಿಲಿಂಗ ಶಿವಾಚಾರ್ಯರು
225. ಶ್ರೀ ಜಗದ್ಗುರು ವಿಶ್ವೇಶ್ವರಾಶ್ರಮಲಿಂಗ ಶಿವಾಚಾರ್ಯರು
226. ಶ್ರೀ ಜಗದ್ಗುರು ಸೋಮನಾಥಲಿಂಗ ಶಿವಾಚಾರ್ಯರು
227. ಶ್ರೀ ಜಗದ್ಗುರು ಕೇದಾರಲಿಂಗ ಶಿವಾಚಾರ್ಯರು
228. ಶ್ರೀ ಜಗದ್ಗುರು ನಾಥಲಿಂಗ ಶಿವಾಚಾರ್ಯರು
229. ಶ್ರೀ ಜಗದ್ಗುರು ಕವಿನಾಥಲಿಂಗ ಶಿವಾಚಾರ್ಯರು
230. ಶ್ರೀ ಜಗದ್ಗುರು ಪಣರ್ಾನಂದಲಿಂಗ ಶಿವಾಚಾರ್ಯರು
231. ಶ್ರೀ ಜಗದ್ಗುರು ಶೈಲಪತಿಲಿಂಗ ಶಿವಾಚಾರ್ಯರು
232. ಶ್ರೀ ಜಗದ್ಗುರು ಚೈತನ್ಯಲಿಂಗ ಶಿವಾಚಾರ್ಯರು
233. ಶ್ರೀ ಜಗದ್ಗುರು ಕೆಂಜೇಶ್ವರಲಿಂಗ ಶಿವಾಚಾರ್ಯರು
234. ಶ್ರೀ ಜಗದ್ಗುರು ದ್ವಂದ್ವಾತೀತಲಿಂಗ ಶಿವಾಚಾರ್ಯರು
235. ಶ್ರೀ ಜಗದ್ಗುರು ಆಮೋದಲಿಂಗ ಶಿವಾಚಾರ್ಯರು
236. ಶ್ರೀ ಜಗದ್ಗುರು ಪಂಚವಕ್ತ್ರಲಿಂಗ ಶಿವಾಚಾರ್ಯರು
237. ಶ್ರೀ ಜಗದ್ಗುರು ಸಿದ್ಧೇಶ್ವರಲಿಂಗ ಶಿವಾಚಾರ್ಯರು
238. ಶ್ರೀ ಜಗದ್ಗುರು ಕಾಶೀನಾಥಲಿಂಗ ಶಿವಾಚಾರ್ಯರು
239. ಶ್ರೀ ಜಗದ್ಗುರು ಸಂಹಾರಲಿಂಗ ಶಿವಾಚಾರ್ಯರು
240. ಶ್ರೀ ಜಗದ್ಗುರು ಶರಭಲಿಂಗ ಶಿವಾಚಾರ್ಯರು
241. ಶ್ರೀ ಜಗದ್ಗುರು ಗಧಾಧರಲಿಂಗ ಶಿವಾಚಾರ್ಯರು
242. ಶ್ರೀ ಜಗದ್ಗುರು ಗಗನಲಿಂಗ ಶಿವಾಚಾರ್ಯರು
243. ಶ್ರೀ ಜಗದ್ಗುರು ಉತ್ತಮಲಿಂಗ ಶಿವಾಚಾರ್ಯರು
244. ಶ್ರೀ ಜಗದ್ಗುರು ವಿಭವಲಿಂಗ ಶಿವಾಚಾರ್ಯರು
245. ಶ್ರೀ ಜಗದ್ಗುರು ಪಾರಿಜಾತಲಿಂಗ ಶಿವಾಚಾರ್ಯರು
246. ಶ್ರೀ ಜಗದ್ಗುರು ಬಾಲರೂಪಲಿಂಗ  ಶಿವಾಚಾರ್ಯರು
247. ಶ್ರೀ ಜಗದ್ಗುರು ಅಮರಲಿಂಗ  ಶಿವಾಚಾರ್ಯರು
248. ಶ್ರೀ ಜಗದ್ಗುರು ಪರಮಾಣುಲಿಂಗ ಶಿವಾಚಾರ್ಯರು
249. ಶ್ರೀ ಜಗದ್ಗುರು ಪರಶುರಾಮಲಿಂಗ ಶಿವಾಚಾರ್ಯರು
250. ಶ್ರೀ ಜಗದ್ಗುರು ನಾಗೇಶಲಿಂಗ ಶಿವಾಚಾರ್ಯರು
251. ಶ್ರೀ ಜಗದ್ಗುರು ಉದಯಲಿಂಗ  ಶಿವಾಚಾರ್ಯರು
252. ಶ್ರೀ ಜಗದ್ಗುರು ಉದಾರಲಿಂಗ ಶಿವಾಚಾರ್ಯರು
253. ಶ್ರೀ ಜಗದ್ಗುರು ಕಾರಣಲಿಂಗ ಶಿವಾಚಾರ್ಯರು
254. ಶ್ರೀ ಜಗದ್ಗುರು ಪದ್ಮನಾಭಲಿಂಗ ಶಿವಾಚಾರ್ಯರು
255. ಶ್ರೀ ಜಗದ್ಗುರು ಅಘೋರಲಿಂಗ ಶಿವಾಚಾರ್ಯರು
256. ಶ್ರೀ ಜಗದ್ಗುರು ಜಯನಾಥಲಿಂಗ ಶಿವಾಚಾರ್ಯರು
257. ಶ್ರೀ ಜಗದ್ಗುರು ವೀತರಾಗಲಿಂಗ ಶಿವಾಚಾರ್ಯರು
258. ಶ್ರೀ ಜಗದ್ಗುರು ಚಂದ್ರಲಿಂಗ ಶಿವಾಚಾರ್ಯರು
259. ಶ್ರೀ ಜಗದ್ಗುರು ವಿಚಿತ್ರಲಿಂಗ ಶಿವಾಚಾರ್ಯರು
260. ಶ್ರೀ ಜಗದ್ಗುರು ಸುಂದರಲಿಂಗ ಶಿವಾಚಾರ್ಯರು
261. ಶ್ರೀ ಜಗದ್ಗುರು ಅಷ್ಟಮೂತರ್ಿಲಿಂಗ ಶಿವಾಚಾರ್ಯರು
262. ಶ್ರೀ ಜಗದ್ಗುರು ಯಜ್ಞಲಿಂಗ ಶಿವಾಚಾರ್ಯರು
263. ಶ್ರೀ ಜಗದ್ಗುರು ಸತ್ಯರೂಪಲಿಂಗ ಶಿವಾಚಾರ್ಯರು
264. ಶ್ರೀ ಜಗದ್ಗುರು ಸ್ವರೂಪಲಿಂಗ ಶಿವಾಚಾರ್ಯರು
265. ಶ್ರೀ ಜಗದ್ಗುರು ಕಲ್ಯಾಣಲಿಂಗ ಶಿವಾಚಾರ್ಯರು
266. ಶ್ರೀ ಜಗದ್ಗುರು ಪುರಾಣಲಿಂಗ ಶಿವಾಚಾರ್ಯರು
267. ಶ್ರೀ ಜಗದ್ಗುರು ಸ್ವಭಾವಲಿಂಗ ಶಿವಾಚಾರ್ಯರು
268. ಶ್ರೀ ಜಗದ್ಗುರು ವಿಶೇಷಲಿಂಗ ಶಿವಾಚಾರ್ಯರು
269. ಶ್ರೀ ಜಗದ್ಗುರು ವೈದ್ಯಲಿಂಗ ಶಿವಾಚಾರ್ಯರು
270. ಶ್ರೀ ಜಗದ್ಗುರು ಪ್ರಾಣೇಶಲಿಂಗ ಶಿವಾಚಾರ್ಯರು
271. ಶ್ರೀ ಜಗದ್ಗುರು  ಧನಲಿಂಗ ಶಿವಾಚಾರ್ಯರು
272. ಶ್ರೀ ಜಗದ್ಗುರು ಪ್ರಕಾಶಲಿಂಗ ಶಿವಾಚಾರ್ಯರು
273. ಶ್ರೀ ಜಗದ್ಗುರು ಬ್ರಹ್ಮಣ್ಯಲಿಂಗ ಶಿವಾಚಾರ್ಯರು                
274. ಶ್ರೀ ಜಗದ್ಗುರು ನಿರ್ಮಲಲಿಂಗ ಶಿವಾಚಾರ್ಯರು
275. ಶ್ರೀ ಜಗದ್ಗುರು ಸ್ವೈತಲಿಂಗ ಶಿವಾಚಾರ್ಯರು
276. ಶ್ರೀ ಜಗದ್ಗುರು ನಾರಾಯಣಲಿಂಗ ಶಿವಾಚಾರ್ಯರು
277. ಶ್ರೀ ಜಗದ್ಗುರು ಗೌರಿಲಿಂಗ ಶಿವಾಚಾರ್ಯರು
278. ಶ್ರೀ ಜಗದ್ಗುರು ಪ್ರಕಾಶಲಿಂಗ ಶಿವಾಚಾರ್ಯರು
279. ಶ್ರೀ ಜಗದ್ಗುರು ವಿದೇಹಲಿಂಗ ಶಿವಾಚಾರ್ಯರು
280. ಶ್ರೀ ಜಗದ್ಗುರು ಪ್ರಮಾಣಲಿಂಗ ಶಿವಾಚಾರ್ಯರು
281. ಶ್ರೀ ಜಗದ್ಗುರು ಸ್ವಸ್ತಿಕಲಿಂಗ ಶಿವಾಚಾರ್ಯರು
282. ಶ್ರೀ ಜಗದ್ಗುರು ಸದಾನಂದಲಿಂಗ ಶಿವಾಚಾರ್ಯರು
283. ಶ್ರೀ ಜಗದ್ಗುರು ದುರ್ಗಮಲಿಂಗ ಶಿವಾಚಾರ್ಯರು
284. ಶ್ರೀ ಜಗದ್ಗುರು ಚಿರಂತರಲಿಂಗ ಶಿವಾಚಾರ್ಯರು
285. ಶ್ರೀ ಜಗದ್ಗುರು ವಸಂತಸರಲಿಂಗ ಶಿವಾಚಾರ್ಯರು
286. ಶ್ರೀ ಜಗದ್ಗುರು ರಹಸ್ಯಲಿಂಗ ಶಿವಾಚಾರ್ಯರು
287. ಶ್ರೀ ಜಗದ್ಗುರು ಜ್ಞಾನದೀಪಲಿಂಗ ಶಿವಾಚಾರ್ಯರು
288. ಶ್ರೀ ಜಗದ್ಗುರು ವಿಶೋಕಲಿಂಗ ಶಿವಾಚಾರ್ಯರು
289. ಶ್ರೀ ಜಗದ್ಗುರು ಜನಾರ್ದನಲಿಂಗ ಶಿವಾಚಾರ್ಯರು
290. ಶ್ರೀ ಜಗದ್ಗುರು ಕೃತಜ್ಞಲಿಂಗ ಶಿವಾಚಾರ್ಯರು
291. ಶ್ರೀ ಜಗದ್ಗುರು ಧರ್ಮರಾಜಲಿಂಗ ಶಿವಾಚಾರ್ಯರು
292. ಶ್ರೀ ಜಗದ್ಗುರು ಜಟಾಧರಲಿಂಗ ಶಿವಾಚಾರ್ಯರು
293. ಶ್ರೀ ಜಗದ್ಗುರು ಖ್ಯಾತಲಿಂಗ ಶಿವಾಚಾರ್ಯರು
294. ಶ್ರೀ ಜಗದ್ಗುರು ದುರ್ಲಭಲಿಂಗ ಶಿವಾಚಾರ್ಯರು
295. ಶ್ರೀ ಜಗದ್ಗುರು ವಿಶೂಲಲಿಂಗ ಶಿವಾಚಾರ್ಯರು
296. ಶ್ರೀ ಜಗದ್ಗುರು ಕಲ್ಪರಾಜಲಿಂಗ ಶಿವಾಚಾರ್ಯರು
297. ಶ್ರೀ ಜಗದ್ಗುರು ಅಭಿರಾಮಲಿಂಗ ಶಿವಾಚಾರ್ಯರು
298. ಶ್ರೀ ಜಗದ್ಗುರು ವರುಣಲಿಂಗ ಶಿವಾಚಾರ್ಯರು
299. ಶ್ರೀ ಜಗದ್ಗುರು ಅಜರಲಿಂಗ ಶಿವಾಚಾರ್ಯರು
300. ಶ್ರೀ ಜಗದ್ಗುರು ದೇವದೇವಲಿಂಗ ಶಿವಾಚಾರ್ಯರು
301. ಶ್ರೀ ಜಗದ್ಗುರು ಕಪಿಲಲಿಂಗ ಶಿವಾಚಾರ್ಯರು
302. ಶ್ರೀ ಜಗದ್ಗುರು ಬಾಲಚಂದ್ರಲಿಂಗ ಶಿವಾಚಾರ್ಯರು
303. ಶ್ರೀ ಜಗದ್ಗುರು ಮುರಾರಿಲಿಂಗ ಶಿವಾಚಾರ್ಯರು
304. ಶ್ರೀ ಜಗದ್ಗುರು ಅಮಲಲಿಂಗ ಶಿವಾಚಾರ್ಯರು
305. ಶ್ರೀ ಜಗದ್ಗುರು ಕಾಮಲಿಂಗ ಶಿವಾಚಾರ್ಯರು
306. ಶ್ರೀ ಜಗದ್ಗುರು ತ್ರಿಕಾಮಲಿಂಗ ಶಿವಾಚಾರ್ಯರು
307. ಶ್ರೀ ಜಗದ್ಗುರು ಚಾಂದಲಿಂಗ ಶಿವಾಚಾರ್ಯರು
308. ಶ್ರೀ ಜಗದ್ಗುರು ವೀರಭದ್ರಲಿಂಗ ಶಿವಾಚಾರ್ಯರು
309. ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯರು
310. ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯರು
311. ಶ್ರೀ ಜಗದ್ಗುರು ಸಿತಂಬರಲಿಂಗ ಶಿವಾಚಾರ್ಯರು
312. ಶ್ರೀ ಜಗದ್ಗುರು ಮಹಾಲಿಂಗ ಶಿವಾಚಾರ್ಯರು
313. ಶ್ರೀ ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯರು
314. ಶ್ರೀ ಜಗದ್ಗುರು ವಸುಲಿಂಗ ಶಿವಾಚಾರ್ಯರು
315. ಶ್ರೀ ಜಗದ್ಗುರು ಸಿತಂಬರಲಿಂಗ ಶಿವಾಚಾರ್ಯರು
316. ಶ್ರೀ ಜಗದ್ಗುರು ವೈದ್ಯಲಿಂಗ ಶಿವಾಚಾರ್ಯರು
317. ಶ್ರೀ ಜಗದ್ಗುರು ಕೇದಾರಲಿಂಗ ಶಿವಾಚಾರ್ಯರು
318. ಶ್ರೀ ಜಗದ್ಗುರು ಗಣೇಶಲಿಂಗ ಶಿವಾಚಾರ್ಯರು
319. ಶ್ರೀ ಜಗದ್ಗುರು ವಿಶ್ವಲಿಂಗ ಶಿವಾಚಾರ್ಯರು
320. ಶ್ರೀ ಜಗದ್ಗುರು ನೀಲಕಂಠಲಿಂಗ ಶಿವಾಚಾರ್ಯರು
321. ಶ್ರೀ ಜಗದ್ಗುರು ವಿಶ್ವನಾಥಲಿಂಗ ಶಿವಾಚಾರ್ಯರು
322. ಶ್ರೀ ಜಗದ್ಗುರು ಶಾಂತಲಿಂಗ ಶಿವಾಚಾರ್ಯರು
323. ಶ್ರೀ ಜಗದ್ಗುರು ಸಿದ್ಧೇಶ್ವರಲಿಂಗ ಶಿವಾಚಾರ್ಯರು
324. ಶ್ರೀ ಜಗದ್ಗುರು ಭೀಮಶಂಕರಲಿಂಗ ಶಿವಾಚಾರ್ಯರು
    ವಿ. ಸೂಚನೆ ಃ ಕೇದಾರ ಪೀಠದ ಜಗದ್ಗುರು ಪರಂಪರೆಯ ಈ ಹೆಸರುಗಳನ್ನು ಪಂಡಿತ ಹರಿಕೃಷ್ಣ ರತೂಡಿ ಇವರಿಂದ ವಿರಚಿತವಾದ ಗಢವಾಲ ಕಾ ಇತಿಹಾಸ (1928 ನೆಯ ಇಸ್ವಿ) (ಗಢವಾಲ ಪ್ರೆಸ್, ದೆಹರಾದೂನ) ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.