panchapeeth.com

Veerashaiva Panchapeeth Parampare

Sri Rambhapuri Peetha - Parampare

Renukaradhyaಶ್ರೀ ರಂಭಾಪುರಿ ಪೀಠದ ಪರಂಪರೆ

ಶ್ರೀ ಜಗದ್ಗುರು ರೇವಣಾರಾಧ್ಯ (ರೇವಣಸಿದ್ಧ)ರು ಃ
    ಶ್ರೀ ಕೊಲನುಪಾಕದ (ಕೊಲ್ಲಿಪಾಕಿ) ಶ್ರೀ ಸೋಮೇಶ್ವರ ಶಿವಲಿಂಗದಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇವಣಾರಾಧ್ಯರು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾ ಬಂದಿದ್ದಾರೆ.  ಕೃತಯುಗದಲ್ಲಿ ಇವರಿಗೆ ಶ್ರೀ ಏಕಾಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ಶ್ರೀ ಏಕವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀ ರೇಣುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ರೇವಣಾರಾಧ್ಯ ಅಥವಾ ಶ್ರೀ ರೇವಣಸಿದ್ಧ ಎಂಬ ಹೆಸರುಗಳಿದ್ದವೆಂದು  'ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ'ದ ಪುಟ-2ರಲ್ಲಿ ಮತ್ತು 'ವೀರಶೈವ ಸದಾಚಾರ ಸಂಗ್ರಹ'ದ ಪ್ರಥಮ ಪ್ರಕರಣದಲ್ಲಿ ಪ್ರತಿಪಾದಿಸಲ್ಪಟ್ಟಿದೆ.
        ಅಥ ತ್ರಿಲಿಂಗವಿಷಯೇ ಕುಲ್ಯಪಾಕಾಭಿದೇ ಸ್ಥಲೇ |
        ಸೋಮೇಶ್ವರ ಮಹಾಲಿಂಗಾತ್ ಪ್ರಾದುರಾಸೀತ್ ಸ ರೇಣುಕಃ ||
                            (ಸಿ.ಶಿ. 4-1)
    ಸಿದ್ಧಾಂತ ಶಿಖಾಮಣಿಯ ಈ ಉಕ್ತಿಗನುಸಾರವಾಗಿ ದ್ವಾಪರಯುಗದ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರು ಕೊಲ್ಲಿಪಾಕಿ ಕ್ಷೇತ್ರದ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ಮಲಯ ಪರ್ವತದಲ್ಲಿ ವಾಸಿಸುತ್ತಿದ್ದ ಮಹಾಮಹಿಮರಾದ ಶ್ರೀ ಅಗಸ್ತ್ಯ ಮಹಷರ್ಿಗಳಿಗೆ ವೀರಶೈವ ಸಿದ್ಧಾಂತವನ್ನು ಉಪದೇಶಿಸಿದರು.  ಆ ಉಪದೇಶವನ್ನೇ ಶ್ರೀಶಿವಯೋಗಿ ಶಿವಾಚಾರ್ಯರು ಸಂಗ್ರಹಿಸಿ ಬರೆದಿಟ್ಟಿದ್ದಾರೆ.  ಆ ಸಂಗ್ರಹವೇ ಇಂದು ಸಿದ್ಧಾಂತ ಶಿಖಾಮಣಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.
    ಈ ಆಚಾರ್ಯರು ಧರ್ಮಪ್ರಚಾರಕ್ಕಾಗಿ ಮಲಯ ಪರ್ವತದಲ್ಲಿಯೇ ಒಂದು ಪೀಠವನ್ನು ಸಂಸ್ಥಾಪಿಸಿದರು.  ಅದು ಇಂದು 'ವೀರಸಿಂಹಾಸನ' ಇಲ್ಲವೇ 'ರಂಭಾಪುರೀ ಪೀಠ' ಎಂಬ ಹೆಸರಿನಿಂದ ಕನರ್ಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಪ್ರಸಿದ್ಧವಾಗಿದೆ.  ಈ ಪೀಠದ ಆಚಾರ್ಯರು ಶ್ರೀ ರೇಣುಕ ಶಾಖಾ ಮತ್ತು ವೀರಗೋತ್ರದ ಅಧಿಪತಿಗಳಾಗಿದ್ದಾರೆ.
        ತಸ್ಯೇತಿ ವಚನಂ ಶ್ರುತ್ವಾ ರಾಕ್ಷಸೇಂದ್ರಸ್ಯ ಧೀಮತಃ |
        ತಥೇತಿ ಪ್ರತಿಸುಶ್ರಾವ ಸರ್ವಜ್ಞೋ ಗಣನಾಯಕಃ ||
        ತತ್ರ ಸಂತುಷ್ಟಚಿತ್ತಸ್ಯ ಪೌಲಸ್ತ್ಯಸ್ಯೇಷ್ಟ ಸಿದ್ಧಿಯೇ |
        ಕೋಟಿತ್ರಯಂ ತು ಲಿಂಗಾನಾಂ ಯಥಾಶಾಸ್ತ್ರಂ ಯಥಾವಿಧಿ ||
        ತ್ರಿಕೋಟ್ಯಾಚಾರ್ಯ ರೂಪೇಣ ಸ್ಥಾಪಿತಂ ತೇನ ತತ್ಕ್ಷಣೇ |
                        (ಸಿ.ಶಿ.21/30-31)
    ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿಯ ಈ ಶ್ಲೋಕಗಳ ಆಧಾರದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಭೀಷಣನ ಪ್ರಾರ್ಥನಾನುಸಾರವಾಗಿ ಏಕಕಾಲದಲ್ಲಿಯೇ ಮೂರುಕೋಟಿ ಗುರುರೂಪವನ್ನು ಧರಿಸಿ, ಮೂರುಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದರೆಂದು ತಿಳಿದುಬರುತ್ತದೆ.
    ಯುದ್ಧಭೂಮಿಯಲ್ಲಿ ಶ್ರೀರಾಮಚಂದ್ರನ ಬಾಣಗಳಿಂದ ಆಹತನಾಗಿ ತನ್ನ ಪ್ರಾಣಬಿಡುವ ಪೂರ್ವದಲ್ಲಿ ರಾವಣನು-
        ನವಕಂ ಕೋಟಿಲಿಂಗಾನಾಂ ಪ್ರತಿಷ್ಠಾಪ್ಯಮಿಹ ಸ್ಥಲೇ |
        ಇತಿ ಸಂಕಲ್ಪಿತಂ ಪೂರ್ವ ಮಯಾತದವಶಿಷ್ಯತೇ ||
        ಕೋಟಿಷಟ್ಕಂ ತು ಲಿಂಗಾನಾಂ ಮಯಾ ಸಾಧು ಪ್ರತಿಷ್ಠಿತಂ |
        ಕೋಟಿತ್ರಯಂ ತು ಲಿಂಗಾನಾಂ ಸ್ಥಾಪನೀಯಮತಸ್ತ್ವಯಾ ||
                            (ಸಿ.ಶಿ. 21/24-25)
ಹೇ ತಮ್ಮನಾದ ಪ್ರಿಯ ವಿಭೀಷಣನೇ! ಒಂಭತ್ತು ಕೋಟಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಬೇಕೆಂದು ನಾನು ಸಂಕಲ್ಪವನ್ನು ಮಾಡಿ ಆರು ಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದ್ದೇನೆ.  ಆದರೆ ನನ್ನ ಸಂಕಲ್ಪದ ಪ್ರಕಾರ ಇನ್ನೂ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸುವುದಿದೆ.  ಅವುಗಳನ್ನು ನೀನು ಪ್ರತಿಷ್ಠಾಪಿಸು ಎಂಬುದಾಗಿ ಹೇಳಿ ಅಸುನೀಗಿದನು.
    ಅಣ್ಣನ ಸಂಕಲ್ಪವನ್ನು ಪೂರ್ಣ ಮಾಡುವುದು ಹೇಗೆಂದು ಬಹುದಿನಗಳಿಂದ ವಿಭೀಷಣನು ಚಿಂತಿಸುತ್ತಿರುವಾಗ, ಅವನ ಪುಣ್ಯವೇ ಮೂತರ್ಿರೂಪ ತಾಳಿ ಬಂದಂತೆ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಬರುತ್ತಾರೆ.  ಆಕಾಶಮಾರ್ಗವಾಗಿ ಬಂದ ಅವರ ಮಹಿಮೆಯನ್ನರಿತ ವಿಭೀಷಣನು ವಿಧಿವತ್ತಾಗಿ ಅವರ ಪಾದಪೂಜೆಯನ್ನು ಮಾಡಿ, ತನ್ನ ಅಣ್ಣನ ಸಂಕಲ್ಪವನ್ನು ನಿವೇದಿಸಿಕೊಂಡಾಗ, ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಅದೇ ಕ್ಷಣದಲ್ಲಿ ಮೂರುಕೋಟಿ ಆಚಾರ್ಯರ ರೂಪವನ್ನು ಧರಿಸಿ, ಶಿವಲಿಂಗಗಳನ್ನು ಏಕಕಾಲದಲ್ಲಿಯೇ ಸ್ಥಾಪಿಸಿ, ವಿಭೀಷಣನಿಗೆ ಅಭಯ, ಆಶೀವರ್ಾದಗಳನ್ನಿತ್ತು, ಕೆಲವು ದಿವಸ ಗುಪ್ತವಾಗಿಯೂ ಮತ್ತೆ ಕೆಲವು ದಿವಸ ಪ್ರಕಟವಾಗಿಯೂ ಭೂಮಂಡಲದಲ್ಲೆಲ್ಲ ಸಂಚರಿಸಿ ತಾವು ಅವತರಿಸಿದ ಕಾರ್ಯವು ಪೂರ್ಣವಾದೊಡನೆ ಪುನಃ ಕೊಲ್ಲಿಪಾಕಿ ಕ್ಷೇತ್ರಕ್ಕೆ ದಯಮಾಡಿಸಿ ಅದೇ ಸೋಮೇಶ್ವರ ಶಿವಲಿಂಗದಲ್ಲಿಯೇ ಲೀನವಾದರು.
    ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಹೋಗಿ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ ವಿಷಯ ಕಾಲ್ಪನಿಕ ಪೌರಾಣಿಕ ಕಥೆಯಲ್ಲ. ಸಿಂಹಳದ ಜಾಫ್ನಾದಿಂದ 15 ಕಿ.ಮೀ. ದೂರವಿರುವ ಕಿರುಮಲಾಯ್ ಎಂಬ ಗ್ರಾಮದಲ್ಲಿ ಈಗಲೂ ಇರುವ ರೇಣುಕಾಶ್ರಮ ಮತ್ತು ರೇಣುಕವನ ಮಠಗಳು ಹಾಗೂ ಅಲ್ಲಿರುವ ನೂರಾರು ವೀರಶೈವರ ಮನೆತನಗಳು ಐತಿಹಾಸಿಕ ಘಟನೆಯ ಪ್ರತ್ಯಕ್ಷ ನಿದರ್ಶನಗಳಾಗಿವೆ.
    ಬೆಂಗಳೂರಿನ ದಾರುಕಾಚಾರ್ಯ ಆಶ್ರಮದ ಶ್ರೀ ವೇ. ವೀರಯ್ಯ ಸ್ವಾಮಿ ಶಾಸ್ತ್ರಿಮಠ ಇವರು 1969ನೇ ಜೂನ್ ತಿಂಗಳಲ್ಲಿ ಸಿಂಹಳಕ್ಕೆ ಹೋಗಿ, ಅಲ್ಲಿಯ ರೇಣುಕಾಶ್ರಮ, ರೇಣುಕವನ ಹಾಗೂ ತಾನಕೇಸಂತುರೈಯಲ್ಲಿಯ ಶ್ರೀ ಗುರು ವೀರಭದ್ರ ದೇವಾಲಯಗಳ ಸಂದರ್ಶನವನ್ನು ಮಾಡಿ, ಅಲ್ಲಿಯ ಅನೇಕ ವೀರಶೈವರ ಜೊತೆ ಸಂದರ್ಶನ ಮಾಡಿ ಅಲ್ಲಿಂದ ಬರುವಾಗ ತಾಮ್ರಪಟದಲ್ಲಿ ಚಿತ್ರಿತವಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಲಿಂಗೋದ್ಭವ ಮೂತರ್ಿಯನ್ನು ತಂದಿರುವ ವಿಷಯಗಳು ನಿಜವಾಗಿಯೂ ಇತಿಹಾಸತಜ್ಞರ ಜಿಜ್ಞಾಸೆಯನ್ನು ಕೆರಳಿಸದೆ ಇರಲಾರವು.
        ಶ್ರೀಮದ್ರೇವಣಸಿದ್ಧಸ್ಯ ಕುಲ್ಯಪಾಕಪುರೋತ್ತಮೇ |
        ಸೋಮೇಶಲಿಂಗಾಜ್ಜನನಮಾವಾಸಃ ಕದಲೀಪುರೇ ||
    ಎಂಬ ಸ್ವಾಯಂಭುವ ಆಗಮದ ಪ್ರಮಾಣಾನುಸಾರವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರೇ ಪುನಃ ಕಲಿಯುಗದ ಆರಂಭದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರೆಂಬ ಹೆಸರಿನಿಂದ ಅವತರಿಸಿ, 1400 ವರ್ಷಗಳವರೆಗೆ ವೀರಶೈವರ ತತ್ತ್ವೋಪದೇಶವನ್ನು ಮಾಡುತ್ತ ಅನಂತಲೀಲೆಗಳನ್ನು ಮಾಡಿದ್ದಾರೆ.  ಇವರೇ ಶ್ರೀ ಜಗದ್ಗುರು ಆದಿಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರಲಿಂಗ ಹಾಗೂ ರತ್ನಗರ್ಭ ಗಣಪತಿಯನ್ನು ದಯಪಾಲಿಸಿ ಅನುಗ್ರಹಿಸಿದ್ದಾರೆ.
    ಆದಿಶಂಕರರ ಚರಿತ್ರೆಯನ್ನು ಪ್ರತಿಪಾದಿಸುವ ಅನೇಕ ಗ್ರಂಥಗಳಲ್ಲಿ ಗುರುವಂಶ ಕಾವ್ಯವೂ ಒಂದಾಗಿದೆ.  ಇದು ಶೃಂಗೇರಿ ಪೀಠದ ಆಸ್ಥಾನ ವಿದ್ವಾಂಸರಾದ ಪಂಡಿತ ಕಾಶೀ ಲಕ್ಷ್ಮಣ ಶಾಸ್ತ್ರಗಳಿಂದ ವಿರಚಿತವಾಗಿದೆ.  ಇದು ವಾಣೀವಿಲಾಸ ಮುದ್ರಣಾಲಯ ಶ್ರೀರಂಗಂ ದಿಂದ ಮುದ್ರಿತವಾಗಿದೆ.  ಈ ಪುಸ್ತಕದಲ್ಲಿ-
        ಶ್ರೀಚಂದ್ರಮೌಳೀಶ್ವರಲಿಂಗಮಸ್ಮೈ ಸದ್ರತ್ನಗರ್ಭಂ ಗಣನಾಯಕಂ ಚ|
        ಸ ವಿಶ್ವರೂಪಾಯ ಸುಸಿದ್ಧದತ್ತಂ ದತ್ವಾನ್ಯಗಾದೀಚ್ಚಿರಮರ್ಚಯೇತಿ ||
                            (ಗುರುವಂಶ ಕಾವ್ಯ 3-33)
    ಶ್ರೀ ಜಗದ್ಗುರು ಆದಿಶಂಕರಾಚಾರ್ಯರು ಶೃಂಗೇರಿಯಿಂದ ಕಾಂಚಿಗೆ ಬರುವ ಸಮಯದಲ್ಲಿ ತಮ್ಮ ಮೊದಲನೆಯ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರನ್ನು ಕರೆದು ಶ್ರೀ ರೇವಣಸಿದ್ಧ ಶಿವಯೋಗಿಗಳಿಂದ ಪ್ರಾಪ್ತವಾದ ಶ್ರೀ ಚಂದ್ರಮೌಳೀಶ್ವರಲಿಂಗ ಮತ್ತು ರತ್ಮಗರ್ಭ ಗಣಪತಿಯನ್ನು ಅವರಿಗೆ ಅಪರ್ಿಸಿ, ಅವುಗಳನ್ನು ಪೂಜಿಸುವ ಹೊಣೆಯನ್ನು ಹೊರಿಸಿದರು ಎಂಬ ವಿಷಯವು ಪ್ರತಿಪಾದಿಸಲ್ಪಟ್ಟಿದೆ.  ಮೇಲೆ ಹೇಳಿದ ಈ ಶ್ಲೋಕದ ವ್ಯಾಖ್ಯಾನವನ್ನು ಬರೆಯುವಾಗ ಗ್ರಂಥಕಾರರೇ ಸುಸಿದ್ಧದತ್ತಂ ಸುಸಿದ್ಧೇನ ರೇವಣಸಿದ್ಧ ಮಹಾಯೋಗಿನಾ ದತ್ತಂ ಶ್ರೀ ಚಂದ್ರಮೌಳೀಶ್ವರಲಿಂಗಮ್ ಎಂದು ಇಲ್ಲಿ 'ಸುಸಿದ್ಧ' ಶಬ್ದದ ಅರ್ಥವನ್ನು ರೇವಣಸಿದ್ಧ ಮಹಾಯೋಗಿ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.  ಆದ್ದರಿಂದ ಇಂದಿನವರೆಗೆ ಶ್ರೀ ಶೃಂಗೇರಿ ಪೀಠದಲ್ಲಿ ಪೂಜೆಗೊಳ್ಳುತ್ತಿರುವ ಶ್ರೀ ಚಂದ್ರಮೌಳೀಶ್ವರಲಿಂಗವು ವೀರಶೈವ ಶಿವಾಚಾರ್ಯರಾದ ಶ್ರೀ ರೇವಣಸಿದ್ಧರಿಂದ ಕೊಡಲ್ಪಟ್ಟದ್ದೆಂದು ತಿಳಿದುಬರುತ್ತದೆ.
    ಕಾಶಿಯ ಸರ್ವಶ್ರೇಷ್ಠ ವಿದ್ವಾಂಸರೂ, ಅನೇಕ ಗ್ರಂಥರಚನಾಕಾರರೂ ಆದ ಪಂ. ಬಲದೇವ ಉಪಾಧ್ಯಾಯರು ಹಿಂದೀ ಭಾಷೆಯಲ್ಲಿ ಶಂಕರ  ದಿಗ್ವಿಜಯವನ್ನು ಬರೆದಿದ್ದಾರೆ.  ಇವರ ಪುಸ್ತಕದ ಪರಿಶಿಷ್ಟ (ಕ) ಪುಟ-588ರಲ್ಲಿ 'ಗುರುವಂಶ ಕಾವ್ಯ'ದಲ್ಲಿ ಬಂದಿರುವ ಈ ವಿಷಯವನ್ನು ಚಚರ್ಿಸಿ ಸಚ್ಚಿದಾನಂದ ಭಾರತೀಮುನೀಂದ್ರರೆಂಬ ಶ್ರೀ ಶೃಂಗೇರಿ ಪೀಠದ ಆಚಾರ್ಯರು ಕಾಶೀ ಲಕ್ಷ್ಮಣ ಶಾಸ್ತ್ರಗಳಿಂದ ತಮ್ಮ ಪೀಠ ಪರಂಪರೆಯನ್ನು ಬರೆಸಿರುವುದರಿಂದ ಇದರಲ್ಲಿ ಶ್ರೀ ರೇವಣಸಿದ್ಧರಿಂದ ಆದಿಶಂಕರರಿಗೆ ಕೊಡಮಾಡಿದ ಶ್ರೀಚಂದ್ರಮೌಳೀಶ್ವರಲಿಂಗದ ವಿಷಯವು ಸತ್ಯವಾದದ್ದು ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
    ಇದೂ ಅಲ್ಲದೆ ನಿಟ್ಟೂರು ನಂಜನಾಚಾರ್ಯರು, 'ವೇದಾಂತಸಾರ ವೀರಶೈವ ಚಿಂತಾಮಣಿ' ಎಂಬ ಗ್ರಂಥದ ಪ್ರಾರಂಭದಲ್ಲಿ-
        ಶಂಕರಾಚಾರ್ಯ ಸನ್ನಾಮ ಯೋಗೀಂದ್ರಾಯ ಮಹೋಜ್ಜ್ವಲಮ್ |
        ಚಂದ್ರಮೌಳೀಶ್ವರಂ ಲಿಂಗಂ ದತ್ತವಾನಿತಿ ವಿಶೃತಮ್ ||

        ಶ್ರೀ ರೇಣುಕ ಗಣೇಶಾಖ್ಯಂ ರೇವಣಾಸಿದ್ಧದೇಶಿಕಮ್ |
        ವೀರಶೈವ ಮತಾಚಾರ್ಯಂ ವಂದೇಹಂ ತಂ ಜಗದ್ಗುರುಮ್ |
ಎಂಬ ಮಂಗಲಶ್ಲೋಕಗಳಲ್ಲಿ ಶ್ರೀ ರೇಣುಕಾಚಾರ್ಯರ ದ್ವಿತೀಯ ಅವತಾರಿಗಳಾದ ಶ್ರೀರೇವಣಸಿದ್ಧರಿಂದ ಆದಿಶಂಕರರಿಗೆ ಶ್ರೀ ಚಂದ್ರಮೌಳೀಶ್ವರಲಿಂಗವು ಪ್ರಾಪ್ತವಾಗಿತ್ತೆಂಬುದು ಪ್ರತಿಪಾದಿಸಲ್ಪಟ್ಟಿದೆ.
    ಇದೂ ಅಲ್ಲದೆ ಪುಣೆಯಿಂದ ಮರಾಠಿ ಭಾಷೆಯಲ್ಲಿ ಪ್ರಕಾಶಿತವಾದ ಮಧ್ಯಯುಗೀನ ಚರಿತ್ರ ಕೋಶ ಎಂಬ ಪುಸ್ತಕದ 714ನೇ ಪುಟದಲ್ಲಿ ರೇವಣಸಿದ್ಧ - ಯಾನೇ ಶಂಕರಾಚಾಯರ್ಾನಾ ಚಂದ್ರಮೌಳೀಶ್ವರಲಿಂಗ ದಿಲೇ ಅಸ್ತೀ ಪ್ರಸಿದ್ಧಿ ಆಹೇ. ಹೇ ಶಂಕರಾಚಾರ್ಯ ಮ್ಹಣಜೀ ಆದ್ಯ ಶಂಕರಾಚಾರ್ಯ ಹೋತ. ಹಾ ಜಾತಿನೇ ಜಂಗಮ ಹೋತಾ - ಅಂದರೆ ಆದ್ಯ ಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರ ಲಿಂಗವನ್ನು ಕೊಟ್ಟ ಶ್ರೀ ರೇವಣಸಿದ್ಧರು ಜಂಗಮರಿದ್ದರು ಎಂದು ಹೇಳಲ್ಪಟ್ಟಿದೆ.
    ಶ್ರೀ ವೃಷಭೇಂದ್ರ ಪಂಡಿತರಿಂದ ವಿರಚಿತವಾದ ಮಹಾ ನಾರಾಯಣೋಪನಿಷತ್ತಿನ ಭಾಷ್ಯದಲ್ಲಿ ಕೇಚಿತ್ತು........ರೇವಣಸಿದ್ಧ ಮರುಳಸಿದ್ಧೈಕೋ ರಾಮಸಿದ್ಧ ಪಂಡಿತಾರಾಧ್ಯಾದಯಃ ಸಹಸ್ರಶೀರ್ಷಂ ದೇವಮಿತ್ಯಾದಿ ಪರಶಿವ ಧಮರ್ಾಣಾಂ ನಾರಾಯಣಾತ್ಮಕವಿಷ್ಣೋಃ ಪ್ರತಿಪಾದನೇಪಿ ಏತದನುವಾಕ್ಯಸ್ಯ ಶಿವಪರತ್ವೇನ ಕಿಂಚಿದಪಿ ದೋಷಃ (ಪುಟ-65) ಈ ರೀತಿಯಾಗಿ ಶ್ರೀರೇವಣಸಿದ್ಧಾದಿ ಪಂಚಾಚಾರ್ಯರ ಹೆಸರುಗಳನ್ನು ಉಲ್ಲೇಖಿಸಿರುವುದರಿಂದ ಶ್ರೀ ರೇವಣಸಿದ್ಧರು ವೇದಮಂತ್ರಗಳಿಗೆ ಭಾಷ್ಯವನ್ನು ಬರೆದಿದ್ದಾರೆಂದು ತಿಳಿದುಬರುತ್ತದೆ.
    ಶ್ರೀ ಜಗದ್ಗುರು ರೇವಣಸಿದ್ಧರು ತಂತ್ರ-ಮಂತ್ರಾದಿ ಸಕಲ ವಿದ್ಯೆಗಳಲ್ಲಿ ಸಿದ್ಧಿಯನ್ನು ಪಡೆದವರಾಗಿದ್ದರಿಂದ ಪ್ರಖ್ಯಾತ ರಸಸಿದ್ಧರಾದ ನವನಾಥರಲ್ಲಿ ಇವರು ಅಗ್ರಗಣ್ಯರಾಗಿದ್ದರು.
    ಕ್ರಿ.ಶ. 950ರಿಂದ ಕ್ರಿ.ಶ. 1941ರ ವರೆಗೆ ವಿರಚಿಸಲ್ಪಟ್ಟ 19 ಸಂಸ್ಕೃತ, 32 ಕನ್ನಡ, 8 ತೆಲುಗು, 5 ಮರಾಠಿ, 1 ಹಿಂದೀ ಹಾಗೂ 4 ಇಂಗ್ಲೀಷ್ - ಹೀಗೆ ಒಟ್ಟು 59 ಗ್ರಂಥಗಳಲ್ಲಿ ಶ್ರೀ ರೇವಣಸಿದ್ಧರ ಚರಿತ್ರೆ ಹಾಗೂ ಲೀಲೆಗಳು ವಣರ್ಿಸಲ್ಪಟ್ಟಿವೆ. ಇದರಿಂದ ಇವರ ಮಹಿಮೆಯು ತಿಳಿದುಬರುತ್ತದೆ.  ಇವರು ತಮ್ಮ ಲೀಲೆಯನ್ನು ಪೂರ್ಣಗೊಳಿಸುವ ಮುನ್ನ ಶ್ರೀ ಜಗದ್ಗುರು ರುದ್ರಮುನೀಶ್ವರರಿಗೆ ಪಟ್ಟಾಭಿಷೇಕವನ್ನು ಮಾಡಿ ಪುನಃ ಕೊಲ್ಲಿಪಾಕಿಯ  ಸೋಮೇಶ್ವರ ಲಿಂಗದಲ್ಲಿಯೇ ಲೀನರಾದರು.
    ಹೀಗೆ ಈ ಪೀಠ ಪರಂಪರೆಯಲ್ಲಿ ಶ್ರೀ ರುದ್ರಮುನೀಶ್ವರರ ನಂತರ ಶ್ರೀ ಮುಕ್ತಿಮುನೀಶ್ವರ, ದಿಗಂಬರ ಮುಕ್ತಿಮುನೀಶ್ವರ ಮುಂತಾಗಿ 28 ಪೀಠಾಚಾರ್ಯರ ನಂತರ ಪುನಃ 29ನೇ ಪೀಠಾಚಾರ್ಯರಾಗಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಎಂಬ ಹೆಸರಿನವರು ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ.  ಇವರು ಕ್ರಿ.ಶ. 1000ದಿಂದ 1157ರ ಮಧ್ಯದಲ್ಲಿ ಆಗಿರುವುದಾಗಿ ತಿಳಿದುಬರುತ್ತದೆ.
    ಇವರು ಮಾಡಿದ ಲೀಲೆಗಳು ಅನಂತವಾಗಿವೆ.  ಅವುಗಳಲ್ಲಿ ಮಾಸನೂರಿನ ಯಕ್ಷಮಿಥುನಗಳ ಉದ್ಧಾರ, ವಿಕ್ರಮಾದಿತ್ಯನಿಗೆ ಖಡ್ಗಪ್ರದಾನ, ಬಿಜ್ಜಳನಿಗೆ ಖಡ್ಗಪ್ರದಾನ, 12 ಸಾವಿರ ಕನ್ಯೆಯರ ಬಂಧವಿಮೋಚನೆ, ಕಲ್ಯಾಣದ ಬಳಿ ತ್ರಿಪುರಾಂತಕೇಶ್ವರ ಕೆರೆಯ ನಿಮರ್ಾಣ ಹಾಗೂ ಸೊನ್ನಲಿಗೆಯ ಶ್ರೀ ಸುಗ್ಗಲಾದೇವಿಗೆ ಪುತ್ರಾನುಗ್ರಹ - ಇವೇ ಮೊದಲಾದವುಗಳು ಪ್ರಮುಖವಾಗಿವೆ.
    ಇವರು ಸಂಚರಿಸಿದ ಸ್ಥಳಗಳಲ್ಲೆಲ್ಲ ಇವರ ಹೆಸರಿನ ದೇವಾಲಯಗಳು ಇಂದಿಗೂ ಜ್ವಾಜ್ವಲ್ಯಮಾನವಾಗಿ ಉಳಿದಿವೆ.  ಇವುಗಳಲ್ಲಿ ಬೆಂಗಳೂರು ಜಿಲ್ಲಾ ರಾಮನಗರ ತಾಲೂಕಿನ ರೇವಣಸಿದ್ಧೇಶ್ವರ ಬೆಟ್ಟ, ಶಿವಾಗಂಗಾ ಕ್ಷೇತ್ರದಲ್ಲಿಯ ರೇವಣಸಿದ್ಧ ದೇವಾಲಯ, ತುಮಕೂರು ಜಿಲ್ಲೆಯ ಸಿದ್ಧರಬೆಟ್ಟ, ಗುಲಬಗರ್ಾ ಜಿಲ್ಲೆಯ ರಟಗಲ್ಲ ರೇವಣಸಿದ್ಧೇಶ್ವರ, ಸೊಲ್ಲಾಪುರದ ರೇವಣಸಿದ್ಧೇಶ್ವರ ದೇವಾಲಯ, ರೇಣಾವಿಯ ರೇವಣಸಿದ್ಧೇಶ್ವರ ಮತ್ತು ಮಾಸನೂರು, ಮಂಗಳವೇಢೆಗಳ ರೇವಣಸಿದ್ಧೇಶ್ವರ ದೇವಸ್ಥಾನಗಳು ಪ್ರಮುಖಗಳಾಗಿವೆ.
    ಇದೇ ಪ್ರಕಾರ ಪುನಃ ಈ ಪೀಠಕ್ಕೆ ಸುಮಾರು 13ನೇ ಶತಮಾನದಲ್ಲಿ ಮತ್ತೊಬ್ಬ ರೇವಣಸಿದ್ಧರು ಪೀಠಾಚಾರ್ಯರಾಗಿದ್ದಾರೆ.  ಇವರಿಗೆ ಕಾಡಸಿದ್ಧೇಶ್ವರ ಎಂಬ ಹೆಸರು ಪಯರ್ಾಯ ನಾಮವಾಗಿತ್ತೆಂದು ತಿಳಿದುಬರುತ್ತದೆ.  ರಂಭಾಪುರಿ ಪೀಠಾಚಾರ್ಯರಲ್ಲೊಬ್ಬರಾದ ಶ್ರೀ ರುದ್ರಮುನಿಗಳು ಕಾಲಜ್ಞಾನವನ್ನು ಬರೆದಿದ್ದಾರೆ.  ಅದು ಈಗಲೂ 'ರುದ್ರಮುನಿ ಕಾಲಜ್ಞಾನ'ವೆಂದು ಸುಪ್ರಸಿದ್ಧವಾಗಿದೆ.
    ಹೀಗೆ ಅನಾದಿ ಪರಂಪರೆಯಿಂದ ಬಂದ ಈ ಪೀಠಕ್ಕೆ ಅನೇಕ ಜನ ಪೀಠಾಚಾರ್ಯರು ಆಗಿಹೋಗಿದ್ದಾರೆ.  ಬಹಳ ಜನ ಆಚಾರ್ಯರ ಚರಿತ್ರೆಗಳು ಕಾಲಗರ್ಭದಲ್ಲಿ ಅಡಗಿಹೋಗಿರುವುದರಿಂದ ಎಲ್ಲರ ಜೀವನ ಘಟನೆಗಳನ್ನು ಸಮಯೋಲ್ಲೇಖಪೂರ್ವಕ ಚಿತ್ರಿಸುವುದು ಕಷ್ಟವಾಗಿ ತೋರುತ್ತದೆ.  ಈ ಪೀಠದ ಪರಂಪರೆಯಲ್ಲಿ ಇಲ್ಲಿಯವರೆಗೆ 120 ಜಗದ್ಗುರುಗಳು ಆಗಿಹೋಗಿದ್ದಾರೆ.
    ಮೈಸೂರಿನ ಮಹಾರಾಜರು ಈ ಪೀಠದ ಆಚಾರ್ಯರಲ್ಲಿ ಅನನ್ಯ ಶ್ರದ್ಧಾ ಭಕ್ತಿಯುಳ್ಳವರಾಗಿದ್ದರು.  ಈ ಪೀಠದ 113ನೇ ಆಚಾರ್ಯರಾದ ಶ್ರೀ 1008 ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಕಾಲದಲ್ಲಿ ಅಂದಿನ ಮಹಾರಾಜರಾದ  ಶ್ರೀ ಚಾಮರಾಜ ಒಡೆಯರ್ ಮಹಾಪ್ರಭುಗಳು ಶಾ.ಶ. 1808 ಪಾಥರ್ಿವನಾಮ ಸಂವತ್ಸರ ಕಾತರ್ಿಕ ಬ|| 11 ಬುಧವಾರ (ದಿ||21-12-1885) ದಿವಸ ಪೀಠಕ್ಕೆ ಬಂದು ಮಹಾಸನ್ನಿಧಿಯ ದರ್ಶನಾಶೀವರ್ಾದವನ್ನು ಪಡೆದ ಉಲ್ಲೇಖವಿದೆ.  ಮುಂದೆ ಶ್ರೀ ಜಗದ್ಗುರು ಶಿವಾನಂದರಾಜೇಂದ್ರ ಶಿವಾಚಾರ್ಯರು 114ನೆಯ ಮತ್ತು ಜಗದ್ಗುರು ಗುರು ವೃಷಭರಾಜೇಂದ್ರ ಶಿವಾಚಾರ್ಯರು 115ನೆಯ ಪೀಠಾಧ್ಯಕ್ಷರಾಗಿದ್ದರು.
    ಈ ಪೀಠದ 117ನೇ ಜಗದ್ಗುರುಗಳಾಗಿದ್ದ ಶ್ರೀ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು 1918ನೇ ಮಾಚರ್್ ತಿಂಗಳಲ್ಲಿ ಕಾಶೀ ಪೀಠದಲ್ಲಿ ನೆರವೇರಿದ ಪಂಚಾಚಾರ್ಯರ ಸಮ್ಮೇಳನದಲ್ಲಿ ಭಾಗಿಗಳಾಗಿ ಮಹತ್ತ್ವಪೂರ್ಣವಾದ ಠರಾವುಗಳನ್ನು ಮಂಡಿಸಿದರು.  ಇವರು ತಮ್ಮ ಅಂತ್ಯಕಾಲದಲ್ಲಿ ಉತ್ತರಾಧಿಕಾರಿಯನ್ನು ನೇಮಿಸದೇ ಲಿಂಗೈಕ್ಯರಾದ ಕಾರಣ, ಸಮಾಜದಲ್ಲಿ ಕಲಹ ಉತ್ಪನ್ನವಾಗಿ ಕೆಲಕಾಲ ಈ ಪೀಠವು ಅನಾಯಕವಾಗಿಯೇ ಉಳಿಯಿತು.  ಮುಂದೆ ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ಜಗದ್ಗುರುಗಳವರ ತಪಸ್ಸು, ಶೃಂಗೇರಿ ಪೀಠದ ಜಗದ್ಗುರುಗಳ ಸಹಾಯ ಮತ್ತು ಲಿಂ| ಪಂ| ಕಾಶೀನಾಥ ಶಾಸ್ತ್ರಿಗಳ ಪ್ರಯತ್ನದ ಫಲವಾಗಿ ಬಳ್ಳಾರಿ ಜಿಲ್ಲಾ ಹಿರೇಹಾಳು ಹಿರೇಮಠದ ಶ್ರೀ ಸಿದ್ಧೇಶ್ವರ ಶಾಸ್ತ್ರಿ ಮತ್ತು ಸೌ|| ಸಿದ್ಧವೀರಮ್ಮನವರ ಪುತ್ರರತ್ನರಾಗಿ ಜನಿಸಿದ (ಶಾ.ಶ. 1812 ವಿಕೃತಿನಾಮ ಸಂವತ್ಸರ, ಶ್ರಾವಣ ಶು||2), ಕಾಶೀಯಲ್ಲಿ ವ್ಯಾಕರಣ ತೀರ್ಥ ಪಧವೀಧರರಾಗಿ ಜಂಗಮವಾಡಿಮಠದ ಕಾರಭಾರಿಗಳಾಗಿ ಅನೇಕ ದಿನ ಸೇವೆ ಸಲ್ಲಿಸಿದ ಪಂ|| ಸದಾಶಿವ ಶಾಸ್ತ್ರಿಗಳು, ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತಹಸ್ತದಿಂದ ಶಾ.ಶ. 1846ನೇ ಕ್ರೋಧನನಾಮ ಸಂವತ್ಸರ, ಮಾರ್ಗಶೀರ್ಷ ಶು||7 (ದಿ|| 22-11-1925)ರಂದು ಶ್ರೀ ರಂಭಾಪುರೀ ಪೀಠದ ಅಧಿಕಾರವನ್ನು ಸ್ವೀಕರಿಸಿ ಶ್ರೀ 1008 ಜಗದ್ಗುರು ಅಭಿನವ ರೇಣುಕ ಶಿವಾನಂದರಾಜೇಂದ್ರ ಶಿವಾಚಾರ್ಯರೆಂಬ ನೂತನ ಅಭಿಧಾನದಿಂದ ಶೋಭಾಯಮಾನರಾದರು.
    ಅತಿ ಜೀಣರ್ಾವಸ್ಥೆಯಲ್ಲಿದ್ದ ಶ್ರೀ ರಂಭಾಪುರೀ ಪೀಠವು ಇವರ ಕಾಲದಲ್ಲಿ ಪುನಃಶ್ಚೇತನಗೊಂಡು ರಾಜವೈಭವವನ್ನು ಪಡೆಯಿತು.  ಯಾಲಕ್ಕಿ, ಕಾಫಿ, ಅಡಿಕೆ ಬೆಳೆಯುವ ಭೂಮಿಯು ಇವರ ಕಾಲದಲ್ಲಿ ಸಂಪಾದಿಸಲ್ಪಟ್ಟಿತು.  ದಿ|| 30-11-1931ರಂದು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಪ್ರಭುಗಳು ಪೀಠಕ್ಕೆ ಬಂದು ದರ್ಶನಾಶೀವರ್ಾದವನ್ನು ಪಡೆದುಹೋಗಿದ್ದಾರೆ.  ಶಾಲಿವಾಹನ ಶಕೆ 1857 ಭಾವನಾಮ ಸಂವತ್ಸರ ಭಾದ್ರಪದ ಶು||11 ಗುರುವಾರ ದಿವಸ ಮೈಸೂರಿನ ಶ್ರೀ ಕೃಷ್ಣರಾಜ ಮಹಾಪ್ರಭುಗಳು ಶ್ರೀ ಮಹಾಸನ್ನಿಧಿಯವರನ್ನು ತಮ್ಮ ಅರಮನೆಗೆ ಬರಮಾಡಿಕೊಂಡು ತೀರ್ಥಪ್ರಸಾದವನ್ನು ಸ್ವೀಕರಿಸಿದ ವಿಷಯವು ಗಮನಾರ್ಹವಾಗಿದೆ; ಇದು ಶ್ರೀ ಸನ್ನಿಧಿಯ ಪ್ರಭಾವದ ಪ್ರತೀಕವಾಗಿದೆ.
    ಶ್ರೀ ರಂಭಾಪುರೀ ಪೀಠದ ಗುರುಪರಂಪರೆಯಲ್ಲಿ ಶ್ರೀ 1008 ಜಗದ್ಗುರು ಅಭಿನವ ರೇಣುಕ ಶಿವಾನಂದರಾಜೇಂದ್ರ ಮಹಾಸ್ವಾಮಿಗಳ ಚರಿತ್ರೆಯು ಪರಮ ಪಾವನವಾಗಿದೆ.  ದಿ|| 16-2-1941ರಂದು ಮೈಸೂರಿನ ಜಯಚಾಮರಾಜ ಒಡೆಯರ್ ಮಹಾಪ್ರಭುಗಳು ಸಹ ಪೀಠಕ್ಕೆ ಬಂದು ದರ್ಶನಾಶೀವರ್ಾದ ಪಡೆದುಹೋಗಿದ್ದಾರೆ.  ಇವರು ಸುಮಾರು 21 ವರ್ಷ ಅಖಂಡವಾಗಿ ಪೀಠ ಹಾಗೂ ಸಮಾಜೋದ್ಧಾರಕ್ಕಾಗಿ ಶ್ರಮಿಸಿ ದಿ|| 1-9-1946 ಗುರುವಾರ ಲಿಂಗೈಕ್ಯರಾದರು.
    ಅನಂತರ 119ನೇ ಪೀಠಾಧ್ಯಕ್ಷರಾಗಿ ಶ್ರೀ 1008 ಜಗದ್ಗುರು ಪ್ರಸನ್ನರೇಣುಕ ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಅಧಿಕಾರವನ್ನು ವಹಿಸಿಕೊಂಡರು.  ಇವರು ಧಾರವಾಡ ಜಿಲ್ಲಾ ಹುಬ್ಬಳ್ಳಿ ತಾಲ್ಲೂಕಿನ ಪಾಲಿಕೊಪ್ಪದ ಹಿರೇಮಠದ ಶ್ರೀ ಅಡಿವೆಯ್ಯ ಹಾಗೂ ಸೌ|| ಸಿದ್ಧಮ್ಮನವರ ಪವಿತ್ರ ಗರ್ಭದಲ್ಲಿ ದಿ||8-4-1903ರಂದು ಜನಿಸಿದರು.  ಸೊಲ್ಲಾಪುರದ ವಾರದ ಸಂಸ್ಕೃತ ಪಾಠಶಾಲೆಯಲ್ಲಿ ಪಂ| ಜಗದೀಶ ಶಾಸ್ತ್ರಿಗಳ ಶಿಷ್ಯರಾಗಿ ಸಂಸ್ಕೃತ ಅಧ್ಯಯನವನ್ನು ಮಾಡಿದರು.  ಬಾಲ್ಯದಿಂದಲೂ ಇವರಿಗೆ ಶಿವಪೂಜೆಯೇ ಅತ್ಯಂತ ಪ್ರಿಯವಾದುದು. ಹೊಟಗಿ ಬೃಹನ್ಮಠದ ಬಾಲತಪಸ್ವಿ ಶ್ರೀ ಷ|| ಬ್ರ|| ಚೆನ್ನವೀರ ಶಿವಾಚಾರ್ಯ ಸ್ವಾಮಿಗಳವರು ಇವರ ಬಾಲ್ಯಸ್ನೇಹಿತರಾಗಿದ್ದರು.  ಶಿಗ್ಗಾಂವಿ ತಾಲೂಕಿನ ಗಂಗೀಭಾವಿಯಲ್ಲಿ ಮಾಡಿದ ಇವರ ತಪಸ್ಸು ಉಲ್ಲೇಖನೀಯವಾಗಿದೆ.  ಇವರು ಪಾಲಿಕೊಪ್ಪದ ಪಟ್ಟಾಧ್ಯಕ್ಷರಾಗಿದ್ದರಲ್ಲದೇ, ಲಿಂ|| ಜಗದ್ಗುರು ಶಿವಾನಂದರಾಜೇಂದ್ರ ಮಹಾಸ್ವಾಮಿಗಳ ಆಜ್ಞೆಯಂತೆ ಬೆಂಗಳೂರಿನ ವಿಭೂತಿಪುರಮಠ ಹಾಗೂ ಮಹಂತಿನಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು.  ಮುಂದೆ ಇವರು ಶ್ರೀ ಶಿಶುನಾಳ ಶರೀಫ ಶಿವಯೋಗಿಗಳ ಗುರುಗಳಾದ ಗೋವಿಂದಭಟ್ಟರ1 ಭವಿಷ್ಯವಾಣಿಯ ಪ್ರಕಾರ 1936ರಲ್ಲಿ ಲಕ್ಷ್ಮೇಶ್ವರದ ಸಮೀಪ ಮುಕ್ತಿಮಂದಿರ ಎಂಬ ಪುಣ್ಯಾಶ್ರಮವನ್ನು ಸ್ಥಾಪಿಸಿ ಅದನ್ನೇ ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡರು.
    ಮುಂದೆ ಲಿಂ|| ಜಗದ್ಗುರು ಶಿವಾನಂದರಾಜೇಂದ್ರ ಮಹಾಸ್ವಾಮಿಗಳ ಮೃತ್ಯುಪತ್ರದ ಪ್ರಕಾರ ಶಾ.ಶ.1869ನೇ ಸರ್ವಧಾರೀನಾಮ ಸಂವತ್ಸರದ ವೈಶಾಖ ಶು|| 12, ದಿ|| 2-5-1947ನೇ ದಿವಸ ಉಜ್ಜಯಿನೀ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ಶ್ರೀಶೈಲ ಸೂರ್ಯಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಸನ್ನಿಧಾನದಲ್ಲಿ ರಂಭಾಪುರೀ ಪೀಠದ ಜಗದ್ಗುರುತ್ತ್ವವನ್ನು ವಹಿಸಿಕೊಂಡರು.
_______________________________________________________
1.  ಶಿಶುನಾಳ ಶರೀಫ ಶಿವಯೋಗಿಯು ಓರ್ವ ಸಿದ್ಧಪುರುಷನಾಗಿದ್ದನು.  ಅವನು ತ್ರಿಕಾಲ ಜ್ಞಾನಿಯೂ ಹೌದು.  ಒಮ್ಮೆ ಲಕ್ಷ್ಮೇಶ್ವರಕ್ಕೆ ಹೊರಟಿದ್ದನು.  ಹೋಗುವ ಮಾರ್ಗದಲ್ಲಿ ಇಂದಿನ ಮುಕ್ತಿಮಂದಿರವಿರುವ ಸ್ಥಳದಲ್ಲಿ ಒಂದು ಬನ್ನಿಮರ ಹಾಗೂ ಕಟ್ಟೆ ಇದ್ದಿತು.  ಏರುಬಿಸಿಲಿನಲ್ಲಿ ಅಲ್ಪ ವಿಶ್ರಾಂತಿಗಾಗಿ ಶರೀಫನು ಬನ್ನಿಕಟ್ಟೆಯ ಮೇಲೆ ಕುಳಿತನು.  ಅವನಿಗೆ ಗಾಂಜಾ  ಸೇದುವ ಹವ್ಯಾಸವಿತ್ತು.  ಚಿಲುಮೆಯನ್ನು ಹೊರತೆಗೆದು ಗಾಂಜಾ ತುಂಬುವಷ್ಟರಲ್ಲಿ ಕೈಲ್ಲಿಯ ಚಿಲುಮೆ ಕೆಳಗೆ ಬಿತ್ತು.  ಆಗ ತನ್ನೊಂದಿಗೆ  ಇದ್ದ ಗುರುಗೋವಿಂದ ಭಟ್ಟರು ಶಿಷ್ಯನಿಗೆ ಹೀಗೆ ಹೇಳಿದರಂತೆ: 'ಏ ತಮ್ಮಾ, ಈ ಜಾಗಾ ಬಾಳಾ ಪವಿತ್ರ ಐತಿ, ಇಲ್ಲಿ ಯಾರೋ ಮಹಾತ್ಮರು ಬರುವಾಂಗ ಕಾಣತೈತಿ.  ಮುಂದೆ ಅವರ ಗದ್ದಿಗೆ ಆಕ್ತೈತಿ.  ಇಲ್ಲಿ ಸೇದೋದು ಬ್ಯಾಡ, ಏಳೋಲೆ' ಎಂದು ಹೇಳಿದ್ದರೆಂದು ಜಮೀನು ದಾನ ಮಾಡಿದ ಶಿಷ್ಯನು ಹೇಳುತ್ತಿದ್ದನಂತೆ.

    ಇವರು ಸುಮಾರು 35 ವರ್ಷ ಪರ್ಯಂತವಾಗಿ ಪೀಠಾಧ್ಯಕ್ಷರಾಗಿದ್ದು, ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಧರ್ಮಜಾಗೃತಿಯನ್ನು ಉಂಟುಮಾಡಿದರು.  ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ -ಎಂಬ ವಿನೂತನ ಘೋಷಣೆಗಳನ್ನು ಜಾರಿಗೊಳಿಸಿದರು.  ಇವು ಇವರ ಜೀವನದ ಉಸಿರಾಗಿದ್ದವು, ಮನುಕುಲದ ಒಳಿತಿನ ಮಂತ್ರವಾಗಿದ್ದವು.  ಇವರ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿಯ ಸರ್ವಧರ್ಮಗಳ ಗುರುಗಳ ಭಾವಚಿತ್ರಗಳ ಮೆರವಣಿಗೆಯು ಜನಮನದಲ್ಲಿ ಸರ್ವಧರ್ಮ ಸಮಭಾವನೆಯನ್ನು ಮೂಡಿಸುತ್ತಿತ್ತು.  ಶ್ರಾವಣ, ನವರಾತ್ರಿ, ಧನುಮರ್ಾಸ, ಆಷಾಢಮಾಸ ಮತ್ತು ಮಹಾಶಿವರಾತ್ರಿ ಮುಂತಾದ ಪರ್ವಕಾಲಗಳಲ್ಲಿಯ ಇವರ ಇಷ್ಟಲಿಂಗದ ಮಹಾಪೂಜೆಗಳು ಭೂಮಿಯನ್ನು ಕೈಲಾಸವನ್ನಾಗಿ ಮಾರ್ಪಡಿಸುತ್ತಿದ್ದವು.  ಈ ಮಹಾಪೂಜೆಯಲ್ಲಿ ಸಹಸ್ರ ಕುಂಭಾಭಿಷೇಕ, ಲಕ್ಷ ಬಿಲ್ವಾರ್ಚನೆ ಹಾಗೂ ಲಕ್ಷದೀಪೋತ್ಸವಗಳು ವಿಶೇಷ ಉಲ್ಲೇಖನೀಯಗಳಾಗಿವೆ.  ಕುಂಭಾಭಿಷೇಕದ ಸಂದರ್ಭಗಳಲ್ಲಿ ಪೂಜ್ಯರು ಸ್ವತಃ ಕುಂಭವನ್ನು ಹೊತ್ತು ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು.  ಅನಾವೃಷ್ಟಿಯ ಪ್ರದೇಶಗಳಲ್ಲಿ ಇವರ ವೈಭವದ ಸಹಸ್ರ ಕುಂಭಾಭಿಷೇಕದಿಂದೊಡಗೂಡಿದ ಮಹಾಪೂಜಾದಿಗಳಿಂದ ಆಯಾ ಭಾಗಗಳಲ್ಲಿ ಸುವೃಷ್ಟಿಯಾಗಿ ಹೊಳೆ ಹಳ್ಳಗಳು ತುಂಬಿ ಹರಿದ ಹತ್ತು ಹಲವು ನಿದರ್ಶನಗಳಿವೆ.
    ಸಹಸ್ರ ಕುಂಭಾಭಿಷೇಕ, ಲಕ್ಷ ಬಿಲ್ವಾರ್ಚನೆ ಹಾಗೂ ಲಕ್ಷದೀಪೋತ್ಸವಗಳ ಪ್ರಭಾವದಿಂದ ಕಾಶ್ಮೀರದ ಭದ್ರಸೇನ ಮಹಾರಾಜ ಹಾಗೂ ಅವನ ಮಂತ್ರಿಯ ಮಗ ಇವರೀರ್ವರೂ ಪೂಣರ್ಾಯುಷಿಗಳಾದರೆಂಬ ವಿಷಯವು ಸ್ಕಂದಪುರಾಣದಲ್ಲಿ ವಿಶೇಷವಾಗಿ ವಣರ್ಿತವಾಗಿದೆ.  ಪುರಾಣ ಪ್ರಸಿದ್ಧವಾದ ಈ ಘಟನೆಯಿಂದ ಪ್ರೇರಿತರಾದ ಹಾಗೂ ಅದರ ಮಹತ್ತ್ವವನ್ನರಿತ ಪೂಜ್ಯ ಜಗದ್ಗುರುಗಳವರು ಹೋದಲ್ಲೆಲ್ಲ ಈ ಮಹಾಪೂಜೆಗಳನ್ನು ನೆರವೇರಿಸುತ್ತಿದ್ದರು.
    ಮಹಾಶಿವರಾತ್ರಿಯ ದಿವಸ ಹಗಲು-ರಾತ್ರಿ ಎನ್ನದೆ ಇಪ್ಪತ್ನಾಲ್ಕು ತಾಸುಗಳ ಪರ್ಯಂತವಾಗಿ ಏಕಾಸನದಲ್ಲಿ ಕುಳಿತು ಆನಂದಭರಿತರಾಗಿ ಶಿವಪೂಜೆಯನ್ನು ನೆರವೇರಿಸಿ ಕೊನೆಗೆ ತಮ್ಮ ಆಶೀರ್ವಚನದಲ್ಲಿ  ಶಿವನು ಒಂದು ದಿವಸಕ್ಕೆ 24 ತಾಸುಗಳ ಪರಿಮಿತಿಯನ್ನು ಮಾಡಿದ್ದಾನೆ.  ಆದರೆ ಈ ಪರಿಮಿತಿಯು ಇನ್ನೂ ಹೆಚ್ಚಾಗಿದ್ದರೆ ನಮಗೆ ಸಂತೋಷವಾಗುತ್ತಿತ್ತು ಎಂಬುದಾಗಿ ಅಪ್ಪಣೆ ಕೊಡಿಸುತ್ತಿದ್ದರು.  ಅಷ್ಟೊಂದು ಆನಂದ! ಅಷ್ಟೊಂದು ಆಸಕ್ತಿ!
    ಪೂಜ್ಯರ ಮಹಾಪೂಜೆಯ ಸಾಮಗ್ರಿಗಳು ಎರಡು ಲಾರಿಗಳಷ್ಟಿದ್ದವು.  ಪೂಜೆಯ ಈ ಸಾಮಗ್ರಿಗಳನ್ನು ವಣರ್ಿಸುವುದೇ ಅಸಾಧ್ಯ! ಅವನ್ನು ಕಣ್ತುಂಬ ನೋಡಿದವರೇ ಧನ್ಯರು.  ಮಹಾಪೂಜೆಯಲ್ಲಿ ಉಪಯೋಗಿಸುವ ದೀಪಸ್ತಂಭಗಳು ಮೂರು ಫೂಟು ಅಗಲ ಹಾಗೂ ಒಂಭತ್ತು ಫೂಟು ಎತ್ತರದಷ್ಟಿವೆ.  ಒಂದು ದಿವಸದ ಮಹಾಪೂಜೆಯಲ್ಲಿ ಸುಮಾರು ಮೂರು ಕಿಲೋ ಅರಳೆ ಹಾಗೂ ಇಪ್ಪತ್ತು  ಡಬ್ಬಿ ಎಣ್ಣೆ ಖಚರ್ಾಗುತ್ತಿತ್ತು.  ಇಂತಹ ವೈಭವದ ಇಷ್ಟಲಿಂಗ ಪೂಜೆಯನ್ನು ಮಾಡುವವರು ಭಾರತದಲ್ಲಷ್ಟೇ ಅಲ್ಲ, ವಿಶ್ವದಲ್ಲಿಯೇ ಇರಲಿಲ್ಲವೆಂದರೂ ಅತಿಶಯೋಕ್ತಿಯಾಗಲಾರದು.  ಭಾರತ ಸಕರ್ಾರದವರು ಪೂಜ್ಯರ ಪೂಜಾ ವೈಭವವನ್ನು ಚಿತ್ರೀಕರಣ ಮಾಡಿಕೊಂಡಿದ್ದಾರೆ.  ಗ್ರಾಮೀಣ ಪ್ರದೇಶಗಳಲ್ಲಿ ಸಕರ್ಾರೀ ಕಾರ್ಯಕ್ರಮಗಳಿದ್ದಾಗ ಆ ಚಿತ್ರದ ಪ್ರದರ್ಶನವನ್ನು ಮಾಡುತ್ತಾರೆ.
    ಶ್ರೀ ಸನ್ನಿಧಿಯವರು ರಂಭಾಪುರೀ ಪೀಠದ ಅಧಿಕಾರವನ್ನು ವಹಿಸಿಕೊಂಡಿದ್ದರೂ, ಮುಕ್ತಿಮಂದಿರವು ಇವರನ್ನು  ಅಗಲಗೊಡಲಿಲ್ಲ.  ಅಂತೆಯೇ ಮುಕ್ತಿಮಂದಿರದ ಮಹಷರ್ಿ ಎಂದು ಪ್ರಸಿದ್ಧರಾದರು.  ಪೀಠಾಚಾರ್ಯರಾದರೂ ವೈಭವಕ್ಕಿಂತಲೂ ವೈರಾಗ್ಯಕ್ಕೆ ಮಹತ್ತ್ವಕೊಟ್ಟ ಕಾರಣ, ತಟ್ಟಿನ ಪೋಷಾಕು, ಕಂಬಳಿ, ಬಿಲ್ವಫಲಗಳ ಮಾಲೆ, ಕೈಯಲ್ಲಿ ಒಂದು ಮಣ್ಣಿನ ಪಾತ್ರೆ, ಬಡಿಗೆ, ಯೋಗದಂಡ ಮತ್ತು ರುದ್ರಾಕ್ಷಿ ಜಪಮಾಲೆ - ಇವು ಇವರ ಆಭರಣಗಳಾಗಿದ್ದವು.  ಆದ್ದರಿಂದ ಇವರಿಗೆ ಹರಕು ಪಾಟೀನ ಅರಸು ಎಂದು ಜನರು ಕರೆಯುತ್ತಿದ್ದರು.
    ಪೂಜ್ಯರ ಲಕ್ಷ್ಯ ತಪಸ್ಸಿನ ಕಡೆಗೆ ವಿಶೇಷವಾಗಿದ್ದ ಕಾರಣ ರಂಭಾಪುರೀ ಪೀಠದ ಯೋಗಕ್ಷೇಮ ನೋಡುವುದಕ್ಕಾಗಿ ದಿ||15-5-1972ರಂದು ಮಹಾರಾಷ್ಟ್ರದ ವೈರಾಗ ಬೃಹನ್ಮಠದ ಪಟ್ಟಾಧ್ಯಕ್ಷರೂ, ಮಹಾನ್ ವಿದ್ವಾಂಸರೂ, ಗುಣಗ್ರಾಹಿಗಳೂ ಆದ ಶ್ರೀ ಷ||ಬ್ರ|| ಪಂಚಾಕ್ಷರ ಶಿವಾಚಾರ್ಯರನ್ನು ರಂಭಾಪುರೀ ಪೀಠದ 120ನೇ ಜಗದ್ಗುರುಗಳನ್ನಾಗಿ ಮಾಡಿ ಅವರಿಗೆ ಶ್ರೀ 1008 ಜಗದ್ಗುರು ಪ್ರಸನ್ನರೇಣುಕ ವೀರರುದ್ರಮುನಿ ದೇವ ಶಿವಾಚಾರ್ಯ ಮಹಾಸ್ವಾಮಿಗಳೆಂದು ನಾಮಕರಣ ಮಾಡಿದರು.
    ಪೂಜ್ಯ ಜಗದ್ಗುರು ಪ್ರಸನ್ನರೇಣುಕ ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಅನೇಕ ಧಾಮರ್ಿಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ.  ಅವುಗಳಲ್ಲಿ 101 ನೂತನ ರಥೋತ್ಸವ, 1008 ಮಂಟಪಪೂಜೆ ಹಾಗೂ 1008 ಪಲ್ಲಕ್ಕಿ ಉತ್ಸವಗಳು ಉಲ್ಲೇಖನೀಯಗಳಾಗಿವೆ.  ಪೂಜ್ಯರು ಮುಕ್ತಿಮಂದಿರದಲ್ಲಿಯೇ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸಬೇಕೆಂಬ ಮಹದೋದ್ದೇಶ ಉಳ್ಳವರಾಗಿದ್ದರು.  ಆದರೆ ಶಿವನು ದಯಪಾಲಿಸಿದ ಸಮಯವು ಪೂರ್ಣವಾಗಿದ್ದರಿಂದ ತಮ್ಮ 79ನೇ ವಯಸ್ಸಿನಲ್ಲಿ ದಿ|| 5-10-1982ನೇ ಮಂಗಳವಾರ ರಾತ್ರಿ 11-30ಕ್ಕೆ ಮುಕ್ತಿಮಂದಿರದಲ್ಲಿ ಲಿಂಗೈಕ್ಯರಾದರು.  ಪೂಜ್ಯರ ಸಮಾಧಿಯು ಮುಕ್ತಿಮಂದಿರದಲ್ಲಿಯೇ ಮಾಡಲ್ಪಟ್ಟಿದೆ.  ಇದೇ ಸ್ಥಾನದಲ್ಲಿಯೇ ಎಲ್ಲ ಮತಾಚಾರ್ಯರ ಶಿಲಾವಿಗ್ರಹಗಳು, ಗೋತ್ರ ಪುರುಷರ ಮತ್ತು ಶಕ್ತಿಯರ ಶಿಲಾಮೂತರ್ಿಗಳು ಪ್ರತಿಷ್ಠಾಪಿಸಲ್ಪಟ್ಟಿರುವುದರಿಂದ ಮುಕ್ತಿಮಂದಿರವು ಸರ್ವಧರ್ಮಗಳ ಸುಂದರ ಸಮನ್ವಯ ಕ್ಷೇತ್ರವಾಗಿ ಕಂಗೊಳಿಸುತ್ತಿದೆ.
    ಇದೀಗ ಮುಕ್ತಿಮಂದಿರ ಸುಕ್ಷೇತ್ರವು ಸಂಸ್ಥಾಪನೆಗೊಂಡು ಅರವತ್ತೈದು ವರ್ಷಗಳು ಸಂದವು.  ಅಲ್ಲಿಯ ಲಿಂಗಮಯ ಗೋಪುರದ ಲಿಂ|| ಶ್ರೀ ಜಗದ್ಗುರು ವೀರಗಂಗಾಧರ ಭಗವತ್ಪಾದರ ಸುಂದರ ಬಂಧುರ ಭವ್ಯ ಶಿಲಾಮಂದಿರ, ಶ್ರೀ ಜಗದ್ಗುರು ರೇಣುಕಾಚಾರ್ಯರ  ಭಗವತ್ಪಾದರ ಭವ್ಯ ಶಿಲಾಮೂತರ್ಿ, ವಿಶ್ವಮತಾಚಾರ್ಯರ ಮಂದಿರಗಳು ಭಾವುಕ ಭಕ್ತರ ಕಣ್ಮನ ತಣಿಸುವುದರೊಂದಿಗೆ ಕೈಲಾಸದ ಕಲ್ಪನೆ ಮೂಡಿಸುತ್ತಲಿವೆ.  ಇಂದು ಮುಕ್ತಿಮಂದಿರವು ಸಕಲ ಧಮರ್ೀಯರ ತೀರ್ಥಯಾತ್ರಾ ಕ್ಷೇತ್ರವಾಗಿ ಮಾನವ ಧರ್ಮಮಂದಿರವಾಗಿ ಕಂಗೊಳಿಸುತ್ತಿದೆ.
        ಗುರುತ್ವದಿಂದ ಜಗದ್ಗುರುತ್ವದೆಡೆಗೆ
ವಿಚಿತ್ರ ಆದರೂ ನಿಜ ಃ
    ಹುಟ್ಟು ಆಕಸ್ಮಿಕ ಸಾವು ನಿಶ್ವಿತ ಎಂಬುದು ಬಲ್ಲವರು ಹೇಳುವ ಮಾತಾಗಿದೆ.  ಆ ವ್ಯಕ್ತಿಯ ಬದುಕಿನಲ್ಲಿ ಆಕಸ್ಮಿಕವಾಗಿ ಸಂಭವಿಸುವ ಈ ಹುಟ್ಟು ಹಾಗೂ ಅದರ ಗುಟ್ಟು  ಅರಿತವರು ಅಪರೂಪವೆನ್ನಬಹುದು.  ಈಗ ಇಲ್ಲಿ ಉಲ್ಲೇಖಿಸುತ್ತಿರುವ ಓರ್ವ ಮಹಂತರ  ಹುಟ್ಟು ಸಹ ವಿಶಿಷ್ಟವಾಗಿಯೇ ಜರುಗಿತು.  ಇವರ ಹುಟ್ಟು ಸಾಮಾನ್ಯ ಹುಟ್ಟಿನಂತಿಲ್ಲ.  ಈಗಿನ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ವೈರಾಗ್ ಎಂಬುದು ಒಂದು ಹಳ್ಳಿ, ಅಲ್ಲಿಯ ಹಿರಿಯ ಮಠದ ಶ್ರೀ ವೇ|| ಬಾಳಲಿಂಗ ಸ್ವಾಮಿ ಆಚಾರ ಸಂಪನ್ನರು, ವಿಚಾರವಂತರು. ಅವರಿಗೆ ಅನುಗುಣವಾದ ಬಾಳಸಂಗಾತಿ ಲಕ್ಷ್ಮೀಬಾಯಿ ಎಂಬುವರು.  ತಾಯಿಯು ಗಭರ್ಿಣಿಯಾದರು.  ಸಾಮಾನ್ಯವಾಗಿ ಗರ್ಭವತಿಯಾದ ಓರ್ವ ತಾಯಿಯು ಒಂಭತ್ತು ತಿಂಗಳು ತುಂಬಿ ಹತ್ತು ದಿನಗಳ ನಂತರ ಮಗುವಿಗೆ ಜನನ ನೀಡುತ್ತಾರೆ.  ಆದರೆ ಲಕ್ಷ್ಮೀಬಾಯಿಗೆ ತಿಂಗಳು ಹತ್ತಾಯಿತು.  ಹನ್ನೊಂದನೆಯ ತಿಂಗಳೂ ಕಳೆದು ಹೋಯಿತು.  ಈಗಿನಂತೆ ಆಧುನಿಕ ವೈದ್ಯಕೀಯ ಜ್ಞಾನ-ಸಾಧನೆಗಳಿಲ್ಲದ ಆ ಕಾಲದಲ್ಲಿ ಯಾರಿಗೂ ಏನು ಮಾಡಬೇಕೆಂಬುದೇ ತಿಳಿಯದಾಯಿತು.  ದೇವರು-ದಿಂಡರು ಎಂದು ಹೇಳುವುದು ನಡೆಯಿತು, ಎಲ್ಲರೂ ಗಾಬರಿಗೊಂಡರು.  ಆದರೆ ಪರಿಹಾರ ಮಾತ್ರ ಕಾಣದಾದರು.  ಲಕ್ಷ್ಮೀಬಾಯಿಯವರಿಗೆ ಇದಾವುದರ ಪರಿವೆಯೂ ಇಲ್ಲ.  ಆಯಾಸವೂ ಎನಿಸಲಿಲ್ಲ. ಪರಮಾತ್ಮನ ಚಿಂತನೆಯಲ್ಲಿಯೇ ದಿನಗಳನ್ನು ಎಣಿಸತೊಡಗಿದರು.  ಇನ್ನೇನು ಇಷ್ಟರಲ್ಲಿ ಹನ್ನೆರಡು ತಿಂಗಳು ತುಂಬುವವು ಎನ್ನುವಷ್ಟರಲ್ಲಿ ಸರಳ ಹೆರಿಗೆಯಾಯಿತು. ನಗುಮೊಗದ ನಸುಗಪ್ಪಾದ ಶಿಶುವೊಂದು ಧರೆಗಿಳಿದು ಬಂದಿತು.  ಅದುವೇ ಬೆಳೆದು ದೊಡ್ಡವನಾಗಿ  ಶ್ರೀಮದ್ರಂಭಾಪುರಿ ಜಗದ್ಗುರು ವೀರರುದ್ರಮುನಿದೇವ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ಅಭಿಧಾನದಿಂದ ಶೋಭಾಯಮಾನವಾಗಿದೆ.
    ತಾಯಿ-ತಂದೆಗಳು ಇಟ್ಟ ಹೆಸರು ಪಂಚಾಕ್ಷರಿ.  ಈ ಮರಿ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಹಂತದ ಶಿಕ್ಷಣ ಪಡೆದನು.  ಈ ಬಾಲಕನ ಹುಟ್ಟಿನ ಗುಟ್ಟನ್ನು ಅರಿಯದ ತಾಯಿ-ತಂದೆ ಹಾಗೂ ಗುರು-ಹಿರಿಯರು ಇವನೊಬ್ಬ ಶ್ರೇಷ್ಠ ವ್ಯಕ್ತಿ ಆಗುವನೆಂದು ಭಾವಿಸಿ ಆಧ್ಯಾತ್ಮ ವಿದ್ಯೆ ನೀಡಲು ನಿರ್ಧರಿಸಿದರು.  ಸೊನ್ನಲಿಗೆಯ ಅಥರ್ಾತ್ ಸೊಲ್ಲಾಪುರದ ಸುಪ್ರಸಿದ್ಧ ಸಂಸ್ಕೃತ ಹಾಗೂ ಧಾಮರ್ಿಕ ಪಾಠಶಾಲೆ ಎಂಬ ಪ್ರತೀತಿಗೆ ಪಾತ್ರವಾದ ವಾರದ ಪಾಠಶಾಲೆಯಲ್ಲಿ ಸಂಸ್ಕೃತ ಅಧ್ಯಯನ ಪ್ರಾರಂಭಿಸಿದರು.  ಘನ ವಿದ್ವಾಂಸರು ಎನಿಸಿದ್ದ ಶ್ರೀ ವೇ| ಪಂ| ಜಗದೀಶ ಶಾಸ್ತ್ರಿಗಳು ಇವರಿಗೆ ಗುರುವಾಗಿ ದೊರೆತುದು ಭಾಗ್ಯವೇ ಸರಿ.  ಆದರೆ ಆ ಭಾಗ್ಯ ಬಹಳ ದಿನ ಉಳಿಯಲಿಲ್ಲ.  ವೈರಾಗ್ ಬಾಸರ್ಿ ಹಿರೇಮಠಕ್ಕೆ ಇವರನ್ನೇ ಪಟ್ಟಾಧ್ಯಕ್ಷರನ್ನಾಗಿ ಮಾಡಬೇಕೆಂದು ತೀಮರ್ಾನವಾಯಿತು.
    ಈ ವಿಷಯವನ್ನು ಅರಿಕೆ ಮಾಡಿಕೊಳ್ಳಲು ಹಿರಿಯ ಮಠದ ಗುರು-ಹಿರಿಯರು ಶ್ರೀಮದ್ ರಂಭಾಪುರಿ ಪೀಠಕ್ಕೆ ಹೋದರು.  ಅಂದಿನ ಜಗದ್ಗುರುಗಳಾಗಿದ್ದ ಅಭಿನವ ರೇಣುಕ ಶ್ರೀ ಶಿವಾನಂದ ರಾಜೇಂದ್ರ ಶಿವಾಚಾರ್ಯ ಮಹಾಸನ್ನಿಧಾನದಲ್ಲಿ ಈ ವಿಷಯ ಕುರಿತು ಅರಿಕೆ ಮಾಡಿಕೊಂಡರು.  ಸನ್ನಿಧಿಗೆ ಸಮಯವಿರಲಿಲ್ಲ.  ಕಾರಣ ತಮ್ಮ ಕೃಪಾಪಾತ್ರರಾದ ಪಾಲಿಕೊಪ್ಪ ಹಾಗೂ ಬೆಂಗಳೂರಿನ ಶ್ರೀ ಮಹಂತರ ಮಠದ ಪಟ್ಟಾಧ್ಯಕ್ಷರಾಗಿದ್ದ 'ವೀರತಪಸ್ವಿ' ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಗಳನ್ನು  ಈ ಸಮಾರಂಭಕ್ಕೆ ಕಳುಹಿಸಿಕೊಟ್ಟರು.  ಶ್ರೀಗಳವರು ವಿಧಿವತ್ತಾಗಿ ಧಾಮರ್ಿಕ ಕಾರ್ಯಗಳನ್ನು ನೆರವೇರಿಸಿ  ಶ್ರೀ ಷ| ಬ್ರ| ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಎಂಬ ಅಭಿಧಾನವನ್ನು ನೀಡಿ ಗುರುತ್ವವನ್ನು ಅನುಗ್ರಹಿಸಿದರು.
ಕಿರುದೊರೆಯಿಂದ ಹೆದ್ದೊರೆಗೆ ಃ
    ಪಂಚಾಕ್ಷರ ಸ್ವಾಮಿಗಳವರಿಗೆ ಉನ್ನತ ವ್ಯಾಸಂಗ ಪಡೆಯಬೇಕೆಂಬ ಹಂಬಲವಿತ್ತು.  ಅಂತೆಯೇ ಶ್ರೀ ಕಾಶಿ ಜಂಗಮವಾಡಿ ಮಠದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದಲ್ಲಿದ್ದು ಡಾ| ಸಂಪೂಣರ್ಾನಂದ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಕಾಶೀ ಹಿಂದೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನವನ್ನು ಮಾಡಿದರು.  ಮೀಮಾಂಸಾಚಾರ್ಯ, ಸಾಹಿತ್ಯಾಚಾರ್ಯ, ವೇದಾಂತಾಚಾರ್ಯ ಹಿಂದಿ ಸಾಹಿತ್ಯದ ಎಂ.ಎ. ಮುಂತಾದ ಪದವಿಗಳನ್ನು ಸಲೀಸಾಗಿ, ಸಹಜವಾಗಿ ಸಂಪಾದಿಸಿದರು.  ಸತತವಾಗಿ 20 ವರ್ಷಗಳ ಕಾಲ ಅಧ್ಯಯನಶೀಲರಾಗಿ ಹಿಂದಿ ಹಾಗೂ ಸಂಸ್ಕೃತ ಭಾಷೆಗಳ ಪರಮೋಚ್ಛ ಪಂಡಿತರೆನಿಸಿದರು.
    ಶ್ರೀಗಳವರ ಕಾಶೀವಾಸದಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಿದರೆ ತಪ್ಪಾಗಲಾರದು.  ಇದನ್ನು ಪಂಚಾಕ್ಷರ ಶಿವಾಚಾರ್ಯರೇ ಸ್ವತಃ ಹೇಳಿದ್ದು, ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
    ಶ್ರೀ ಕಾಶೀಜ್ಞಾನ ಸಿಂಹಾಸನಕ್ಕೆ ಜಗದ್ಗುರುತ್ವ ದಯಪಾಲಿಸುವ ಸಮಾರಂಭವು ಕಾಶೀ ಜಂಗಮವಾಡಿಮಠದಲ್ಲಿ 1948ನೇ ನವಂಬರ್ 14ರಂದು ಏರ್ಪಡಿಸಲಾಗಿತ್ತು.  ಆ ಕಾರ್ಯಕ್ರಮಕ್ಕೆ ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಮದ್ರಂಭಾಪುರಿ ಜಗದ್ಗುರು ವೀರಗಂಗಾಧರ ರಾಜೇಂದ್ರ ಶಿವಾಚಾರ್ಯರು ದಯಮಾಡಿಸಿದ್ದರು.  ಪದ್ಧತಿಯಂತೆ ಪೀಠಾರೋಹಣ ಕಾರ್ಯಕ್ರಮಗಳಲ್ಲಿ ವಿದ್ವತ್ ಸಭೆ ಜರುಗುವುದು  ಒಂದು ಉನ್ನತ ಪರಂಪರೆಯಾಗಿದೆ.  ಅದು ಕೇವಲ ಸಂಸ್ಕೃತ ವಿದ್ವಾಂಸರಿಗೆ ಮಾತ್ರ ಸೀಮಿತವಾಗಿರುತ್ತದೆ.  ಆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮ ನಿರ್ವಹಿಸುವ ಹೊಣೆ ಶ್ರೀಮದ್ರಂಭಾಪುರಿ ಜಗದ್ಗುರುಗಳಿಗೆ ಮೀಸಲಾಯಿತು.  ಅನೇಕರಿಗೆ ಅಚ್ಚರಿ, ಕೆಲವರಿಗೆ ಆತಂಕ.  ಇನ್ನು ಕೆಲವರಿಗೆ ಕಾಶಿಯಲ್ಲಿದ್ದು ಸಂಸ್ಕೃತ ಅಧ್ಯಯನಕ್ಕೆ ಜೀವನವನ್ನು ಮುಡುಪಿಟ್ಟವರು ಕೂಡಾ ಈ ಹೊಣೆ ಹೊರಲು ಹಿಂಜರಿಯುತ್ತಿರುವಾಗ ಕನರ್ಾಟಕದ ಈ ಮಹಾರಾಜರು (ಶ್ರೀ ರಂಭಾಪುರಿ ಜಗದ್ಗುರು) ಅದು ಹೇಗೆ ಮುಂದಾದರು ಎಂದುಕೊಂಡರು.  ಸರದಿ ಬಂದಾಗ ಶ್ರೀ ರಂಭಾಪುರಿ ಜಗದ್ಗುರುಗಳವರು ನೀಡಿದ ಆಶೀರ್ವಚನ ಸಭೆಯನ್ನೇ ನಿಬ್ಬೆರಗುಗೊಳಿಸಿತು.  ಮಹಾ ಮಹೋಪಾಧ್ಯಾಯರು ಆದಿಯಾಗಿ ಎಲ್ಲ ಪಂಡಿತರು ಹರ್ಷಚಿತ್ತರಾಗಿ ಚಪ್ಪಾಳೆ ತಟ್ಟುತ್ತ ಶಹಬ್ಬಾಸ್ ಎಂದರು.  ಈ ಸನ್ನಿವೇಶವನ್ನು ಕಂಡ ಪಂಚಾಕ್ಷರಿ ಶಿವಾಚಾರ್ಯರು ಮೂಕ ವಿಸ್ಮಿತರಾದರಂತೆ!  ಕಾರಣವಿಷ್ಟೆ.  ರಂಭಾಪುರಿ ಜಗದ್ಗುರುಗಳು ಸ್ವಲ್ಪ ಸಮಯ ಮಾತ್ರ ಸೊಲ್ಲಾಪುರದ ವಾರದ ಪಾಠಶಾಲೆಯಲ್ಲಿ ಅಧ್ಯಯನ ಮಾಡಿದವರಾಗಿದ್ದರು.  ಈ ಘಟನೆಯಿಂದ ಪಂಚಾಕ್ಷರ ಶಿವಾಚಾರ್ಯರು ರಂಭಾಪುರಿ ಜಗದ್ಗುರುಗಳ ಬಗ್ಗೆ ವಿಶೇಷ ಗೌರವ ತಾಳಿ ಅವರ ವಾಸ್ತವ್ಯದ ಉದ್ದಕ್ಕೂ ಹಗಲಿರುಳು ಸೇವೆಗೆ ಸನ್ನದ್ಧರಾದರು.  ಇದರಿಂದಾಗಿ ಉಭಯರ ವಿಶ್ವಾಸ ವಧರ್ಿತವಾಯಿತು. 
    ಈ ಘಟನೆಯಿಂದ ರಂಭಾಪುರಿ ಜಗದ್ಗುರುಗಳವರು ವೈರಾಗ್ ಬಾಸರ್ಿ ಹಿರೇಮಠದ ತಮ್ಮ ಶಿಷ್ಯ ಉತ್ತಮ ಚಾರಿತ್ರ್ಯ, ಹಾಗೂ ಪೂಜಾನಿಷ್ಠರಾಗಿರುವುದನ್ನು ಗುರುತಿಸಿ, ತಮ್ಮ ಹೃದಯಮಂದಿರದಲ್ಲಿ ಅವರನ್ನು ಇರಿಸಿಕೊಂಡರು.  ಮುಂದೊಂದು ದಿನ ಭಾಗ್ಯಲಕ್ಷ್ಮಿ ಪಂಚಾಕ್ಷರಿ ಶಿವಾಚಾರ್ಯರನ್ನು ಅರಸಿ ಬಂದಳೇನೋ ! ಶ್ರೀ ಮುಕ್ತಿಮಂದಿರ ಮಹಷರ್ಿ ಎನಿಸಿದ್ದ ರಂಭಾಪುರಿ ಜಗದ್ಗುರುಗಳವರು ವೀರವೀರಾಗಿಗಳು, ತಪೋನುಷ್ಠಾನ ಪ್ರಿಯರು.  ಶಿವಪೂಜೆ ಅವರಿಗೆ ಪ್ರಾಣವಾಗಿತ್ತು.  ಆದ್ದರಿಂದ ಈ ಜಗದ್ಗುರುತ್ವದ ಜಂಜಾಟದಿಂದ ದೂರವಾಗಿ ಮಹಾಪೀಠದ ಉನ್ನತಿಗೆ ಶ್ರಮಿಸಬಲ್ಲ ಓರ್ವ ವ್ಯಕ್ತಿಯನ್ನು ಪೀಠಾಧೀಶರನ್ನಾಗಿ ಮಾಡುವ ಸಂಕಲ್ಪಗೈದರು.  ಇಳಿಯವಯಸ್ಸಿನಲ್ಲಿ ಪೂಜೆ-ಜಪ-ತಪಗಳೇ ಆಶ್ರಮ ಧರ್ಮಗಳು ಎಂಬುದು ಅವರ ನಿಲುವಾಗಿತ್ತು.  ಆಗ ಶ್ರೀ ಸನ್ನಿಧಿಯ ಸೂಕ್ಷ್ಮಮತಿಗೆ ವೈರಾಗ್ ಹಿರೇಮಠ ಪಟ್ಟಾಧ್ಯಕ್ಷರೇ ಸೂಕ್ತ ವ್ಯಕ್ತಿ ಎಂದೆನಿಸಿತು.  ಅವರು ಗುಣಗ್ರಾಹಿಯೂ, ವಿದ್ವನ್ಮಣಿಗಳು, ಶಿವಪೂಜಾನಿಷ್ಠರು ಆಗಿದ್ದರು.  ಕಾಶೀಯಿಂದ ಬಾಸರ್ಿಗೆ ಮರಳಿದ ನಂತರ (1961) ಮಹಾರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ, ಮಹಾಜನತೆಯಲ್ಲಿ ಧರ್ಮಜಾಗೃತಿ ಮೂಡಿಸುವುದರೊಂದಿಗೆ ಪಂಚಪೀಠಗಳ ಪರಂಪರೆ ಬಗ್ಗೆ ಗೌರವ ಮೂಡಿಸಿದ್ದರು.  ಅದನರಿತ ರಂಭಾಪುರಿ ಜಗದ್ಗುರುಗಳವರು 15-5-1972 ರಂದು ಶ್ರೀಮದ್ರಂಭಾಪುರಿ ಮಹಾಸಂಸ್ಥಾನದಲ್ಲಿ ಉಜ್ಜಯಿನಿ, ಶ್ರೀಶೈಲ ಹಾಗೂ ಕಾಶೀ ಜಗದ್ಗುರುಗಳವರ ದಿವ್ಯಸನ್ನಿಧಾನದಲ್ಲಿ ಜಗದ್ಗುರುತ್ವವನ್ನು ದಯಪಾಲಿಸಿದರು.  ಪಂಚಮುದ್ರಾಧಾರಣ, ಕಿರೀಟಧಾರಣ ಮುಂತಾದ ವಿಧಿ-ವಿಧಾನಗಳನ್ನು ನೆರವೇರಿಸಿ ವೀರ ಸಿಂಹಾಸನಾರೋಹಣ ಮಾಡಿಸಿ ಅವರಿಗೆ ಶ್ರೀಮದ್ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರರುದ್ರಮುನಿ ದೇವ ಶಿವಾಚಾರ್ಯ ಮಹಾಸ್ವಾಮಿಗಳವರು ಎಂಬ ಅಭಿಧಾನವನ್ನು ದಯಪಾಲಿಸಿ, ಸಾಷ್ಟಾಂಗವೆರಗಿದರು.  ನೆರೆದ ಜನಸಂದೋಹ ಹಷರ್ಾತಿರೇಕದಿಂದ ಜಯಘೋಷಗೈದರು.
ಶ್ರೀ ಪೀಠದ ಶ್ರೇಯೋಭಿವೃದ್ಧಿ ಃ
    ಪರಮಾಚಾರ್ಯರಾದ ಶ್ರೀ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ವಿಶೇಷವಾಗಿ ಮುಕ್ತಿಮಂದಿರವನ್ನು ತಮ್ಮ ಧರ್ಮಭೂಮಿ ಹಾಗೂ ಕರ್ಮಭೂಮಿಯನ್ನಾಗಿಸಿಕೊಂಡು ಈ ಭಾಗದ ಜನತೆಯ ಕಲ್ಯಾಣಕ್ಕಾಗಿ ತಮ್ಮ ತಪೋನುಷ್ಠಾನ ಶಕ್ತಿಯನ್ನು ಧಾರೆಯೆರೆಯತೊಡಗಿದರು.  ಪೀಠಕ್ಕೆ ಹೋಗುವುದೇ ಅಪರೂಪವಾಯಿತು.  ಇದರಿಂದ ಶ್ರೀ ಜಗದ್ಗುರು ರುದ್ರಮುನಿದೇವ ಶಿವಾಚಾರ್ಯರು ಕಂಗೆಡದೆ ಗುರುವಿನ ಆಶೀವರ್ಾದ ಇರುವುದರಿಂದ ಶ್ರೀ ರಂಭಾಪುರಿ ಪೀಠದ ಸವರ್ಾಂಗೀಣ ಅಭಿವೃದ್ಧಿಗಾಗಿ ಟೊಂಕಕಟ್ಟಿ ನಿಂತರು.  ಜೀರ್ಣ-ಶೀರ್ಣಗೊಂಡ ಪೀಠದ ಅನೇಕ ಕಟ್ಟಡಗಳನ್ನು ನವೀಕರಿಸಿದರು.  ಪೀಠಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾದ್ವಾರವನ್ನು ನಿಮರ್ಾಣಗೊಳಿಸಿದರು.    ಪೀಠಕ್ಕೆ ಆದಾಯ  ತರುವಂಥ ಮಾರಾಟಮಳಿಗೆಗಳನ್ನು ನಿಮರ್ಿಸಿದರು.  ಪೀಠದ ಆಶ್ರಯದಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರಲ್ಲದೆ ಕೆಲವು ವಿದ್ಯಾಸಂಸ್ಥೆಗಳಿಗೆ ನಿವೇಶನ ಹಾಗೂ ಇತರೆ ಸಹಾಯ - ಸಹಕಾರ ನೀಡಿದರು.  ಶಿವಾನಂದ ಎಸ್ಟೇಟ್ (ಕಾಫಿ ತೋಟ) ಬಗ್ಗೆ ವಿಶೇಷ ಕಾಳಜಿ ವಹಿಸಿ ಆದಾಯ ಮೂಲ ಹೆಚ್ಚಿಸಿದರು.  ಸ್ವತಃ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ನಿಗಾವಹಿಸಿದರು.  ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿಯ ಯಾತ್ರಾಮಹೋತ್ಸವಗಳನ್ನು ಅರ್ಥಪೂರ್ಣವಾಗಿ ಆಚರಿಸುವುದರೊಂದಿಗೆ ಅವುಗಳ ಆಯಾಮ ಹೆಚ್ಚಿಸಿದರು.
    ಶ್ರೀ ಸನ್ನಿಧಿಯವರು ಮರಾಠಿ ಹಾಗೂ ಹಿಂದಿಯಲ್ಲಿ ಜನಸ್ತೋಮ ಬೆರಗಾಗುವಂತೆ ಆಶೀರ್ವಚನ ನೀಡಬಲ್ಲ ವಾಗ್ಮಿಗಳಾಗಿದ್ದರು.  ಕನ್ನಡ ಭಾಷೆಯ ಮೇಲೆ ಅಷ್ಟೊಂದು ಹಿಡಿತವಿರಲಿಲ್ಲವಾದರೂ ಕನ್ನಡ ಜನತೆಯ ಒಡನಾಟದಿಂದ ಕನ್ನಡವನ್ನು ಕಲಿತು ವಿಶೇಷ ಅಧ್ಯಯನ ಮಾಡಿ ವಿದ್ವತ್ಪೂರ್ಣ ಆಶೀರ್ವಚನ ನೀಡಬಲ್ಲವರಾದರು.  ಅವರ ಆಶೀರ್ವಚನ ಪಾಂಡಿತ್ಯಪೂರ್ಣವಾಗಿರುತ್ತಿತ್ತು. ಹೀಗೆ ಧರ್ಮಜಾಗೃತಿ ಯಾತ್ರೆಯನ್ನು ದೇಶದ ನಾನಾ ಭಾಗಗಳಲ್ಲಿ ಕೈಗೊಂಡು ಪೀಠದ ಹಾಗೂ ಲೋಕದ ಕಲ್ಯಾಣೈಕ ಗುರಿಯಿಂದ ನಿರಂತರವಾಗಿ 19 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು.  ಸಮಾಜದ ದುದರ್ೈವವೆಂಬಂತೆ ಅನಾರೋಗ್ಯಕ್ಕೆ ತುತ್ತಾಗಿ 17-8-1991ನೇ ಶನಿವಾರ ಈ ಲೋಕವನ್ನು ತ್ಯಜಿಸಿ ಶಿವಸನ್ನಿಧಿಗೈದರು.  ಪೀಠಕ್ಕಾಗಿ ಶ್ರಮಿಸಿದ ಓರ್ವ ಪೀಠಾಚಾರ್ಯರನ್ನು ಕಳೆದುಕೊಂಡ ಪೀಠಾಭಿಮಾನಿಗಳು ತಬ್ಬಲಿಗಳಾದರು.  ಆದರೆ ಶಿವೈಕ್ಯರಾಗುವ ಪೂರ್ವದಲ್ಲಿಯೇ ಓರ್ವ ದಕ್ಷ, ದೂರದಶರ್ಿತ್ವದ, ಚಾಣಾಕ್ಷ ವ್ಯಕ್ತಿಯನ್ನು (ಹಳ್ಯಾಳ ಶ್ರೀಗಳನ್ನು) ತಮ್ಮ ಉಯಿಲಿನ ಮೂಲಕ ಕೊಡುಗೆಯಾಗಿ ನೀಡಿದುದು ಮೆಚ್ಚತಕ್ಕ ಸಂಗತಿಯಾಗಿದೆ. 
            ಗುರುಕಾರುಣ್ಯದ ಶಿಶು
ಹಳ್ಯಾಳದ ಬಳುವಳಿ ಃ
    ಇಂದಿನ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶ್ರೀಮುಕ್ತಿಮಂದಿರ ಧರ್ಮಕ್ಷೇತ್ರವು ಅಪೂರ್ವ ಧರ್ಮಪ್ರಕಾಶವನ್ನು ಬೀರಿದ ಮುಕ್ತಿಧಾಮವೆನಿಸಿದೆ.  ಆ ಪರಿಸರದಲ್ಲಿ ಬರುವ ನೂರಾರು ಹಳ್ಳಿ-ಪಟ್ಟಣಗಳು, ಲಕ್ಷಾವಧಿ ಭಕ್ತ - ಮಹೇಶ್ವರರು ಈ ಧರ್ಮಕ್ಷೇತ್ರದ ಪ್ರಭಾವಲಯಕ್ಕೆ ಒಳಗಾದವರಾಗಿದ್ದಾರೆ.  ಸುತ್ತಮುತ್ತಲಿನ ಹಳ್ಳಿಗಳ ಜನತೆಗೆ ಮುಕ್ತಿ-ಮಂದಿರವೇ ಕಾಶಿ, ಶ್ರೀಶೈಲ, ಕೇದಾರ, ಉಜ್ಜಯಿನಿ, ಬಾಳೆಹೊನ್ನೂರು ಎಂಬ ಭಾವನೆ ಇದೆ.  ಮುಕ್ತಿಮಂದಿರದ ಅಜ್ಜ ಅಥರ್ಾತ್ ಶ್ರೀಮದ್ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಗಂಗಾಧರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಈ ಭಾಗದ ಜನತೆಯ ಆರಾಧ್ಯ ಗುರು, ಪೂಜಾರ್ಹ ದೇವರು ಎನಿಸಿದ್ದರು.  ಅಂಥವರ ಕೃಪಾಪಾತ್ರದಲ್ಲಿ ಹಳ್ಯಾಳ ಗ್ರಾಮದ ಶ್ರೀ ವೇ| ಚನ್ನಬಸವಯ್ಯನವರು ಹಾಗೂ ಸೌಭಾಗ್ಯವತಿ ಚೆನ್ನಬಸಮ್ಮನವರು ಅಗ್ರಗಣ್ಯರು.  ಆಚಾರ ಸಂಪನ್ನ ದಂಪತಿಗಳ ಸತ್ಪುತ್ರರಾಗಿ ದಿನಾಂಕ 7-1-1956ರಂದು ಜನಿಸಿದವನೇ ಶ್ರೀ ಶಿವಮೂತರ್ಿಯು.  ತನ್ನ ಬಾಲಲೀಲೆಗಳೊಂದಿಗೆ ಈ ಬಾಲಕನು ಹಳ್ಯಾಳದಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದನು.  ಪ್ರೌಢಶಿಕ್ಷಣ ಪಡೆಯಲೋಸುಗ ಗದಗನಗರದ ಮಾಡೆಲ್ ಹೈಸ್ಕೂಲ್ ವಿದ್ಯಾಥರ್ಿಯಾದನು.  ಬಾಲ್ಯದಲ್ಲಿಯೇ ಆಧ್ಯಾತ್ಮದತ್ತ ಒಲವು ಇದ್ದುದರಿಂದ ಮಗನು ಗುರುವಾಗಲಿ ಎಂದು ಗುರಿ ಇಟ್ಟುಕೊಂಡ ಶ್ರೀ ಚನ್ನಬಸವಯ್ಯನವರು ಮುಕ್ತಿಮಂದಿರ ಮಹಷರ್ಿಗಳಲ್ಲಿ ಅರಿಕೆ ಮಾಡಿಕೊಂಡರು.  ಈ ತರುಣನನ್ನು ಕರುಣಾಪೂರಿತ ದೃಷ್ಟಿಯಿಂದ ನೋಡುತ್ತ ಗಂಭೀರ ವದನರಾಗಿ ಜಗದ್ಗುರುಗಳವರು ಏ ಚೆನ್ನಬಸವಯ್ಯ, ನಿನ್ನ ಮಗನ್ನ ನಮ್ಮ ಬೆಂಗಳೂರಿನ ಮಹಂತಿನ ಮಠದಾಗ ಇಡು.  ಅವ ಸಂಸ್ಕೃತ ಓದಲಿ, ಮುಂದೆ ನೋಡೋಣ ಎಂದು ಒಂದೇ ಮಾತಿನಲ್ಲಿ ಸುಗ್ರೀವಾಜ್ಞೆ ನೀಡಿದರು.  ಎರಡು ಮಾತಿಲ್ಲದೆ ಪ್ರೌಢಶಿಕ್ಷಣ ಪೂರೈಸಿದ  ಶಿವಮೂತರ್ಿಯು ಬೆಂಗಳೂರಿಗೆ ಹೋಗಲು ಅಣಿಯಾದನು.  ಬೆಂಗಳೂರಿನಲ್ಲಿ 'ಶಕ್ತಿ ವಿಶಿಷ್ಟಾದ್ವೈತ ವೇದಾಂತ'ವನ್ನೇ ಅಧಿಕೃತ ವಿಷಯವನ್ನಾಗಿ ಆಯ್ದುಕೊಂಡು ಯಶಸ್ವಿ ಅಧ್ಯಯನ ಮುಗಿಸಿದರು.  ಆಗ ಗುರು ವಿರಕ್ತಮಠಾಧಿಪತಿಗಳಾಗಬಯಸುವವರಿಗೆ ಹಾನಗಲ್ಲ ಶ್ರೀ ಕುಮಾರೇಶ್ವರರು ಕಟ್ಟಿದ ಶ್ರೀ ಶಿವಯೋಗ ಮಂದಿರವು ಸಾಧನೆಯ ಕೇಂದ್ರವೆನಿಸಿತ್ತು.   ಅಂತೆಯೇ ಶಿವಯೋಗ ಸಾಧನೆಗಾಗಿ ಶಿವಮೂತರ್ಿ ಅವರು ಮಂದಿರದಲ್ಲಿ ತರಬೇತಿ ಪಡೆಯತೊಡಗಿದರು.  ಶ್ರೀ ಶಿವಯೋಗ ಮಂದಿರದಲ್ಲಿ ಕೆಲಕಾಲ ಅಧ್ಯಯನ ಮಾಡಿದುದು ಇವರಲ್ಲಿ ಆಧ್ಯಾತ್ಮದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿತು.
ಜಗದ್ಗುರುಗಳವರ ಕೃಪಾದೃಷ್ಟಿ ಃ
     ಹಳ್ಯಾಳದ ಹಿರಿಯಮಠವು ಪುತ್ರವರ್ಗಕ್ಕೆ ಸೇರಿದ ಉಜ್ಜಯಿನಿ ಸದ್ಧರ್ಮದ ಶಾಖಾಮಠವಾಗಿದೆ.  ಗ್ರಾಮದ ಮಠಸ್ಥರು, ಹಿರಿಯರು ಶ್ರೀ ಶಿವಮೂತರ್ಿ ದೇವರನ್ನೇ ಹಿರಿಯಮಠದ ಪಟ್ಟಾಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿ ಪಟ್ಟಾಧಿಕಾರ ಮಹೋತ್ಸವವನ್ನು ವೈಭವಪೂರ್ಣವಾಗಿ ನೆರವೇರಿಸಲು ನಿರ್ಧರಿಸಿದರು.  ಗ್ರಾಮದ ಹಿರಿಯರು ಮತ್ತು ಶಿವಮೂತರ್ಿದೇವರ ತಂದೆಯವರು ಗ್ರಾಮದಲ್ಲಿ ಸಮಾಲೋಚಿಸಿ ಒಂದು ತೀಮರ್ಾನಕ್ಕೆ ಬಂದರು.               
    ಶ್ರೀಮದ್ರಂಭಾಪುರಿ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸನ್ನಿಧಾನದಲ್ಲಿ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಸಭೆ ಏರ್ಪಡಿಸಿರುವ ಸಂದರ್ಭದಲ್ಲಿ ಹಿರಿಯಮಠದ ಪಟ್ಟಾಧಿಕಾರವನ್ನು ನೆರವೇರಿಸೋಣ ಎಂದು ಎಲ್ಲರೂ ಒಮ್ಮತದಿಂದ ನಿರ್ಣಯಿಸಿದರು.  ಆಗ 1975-76ರಲ್ಲಿ ಶಿವಯೋಗ ಸಾಧನೆಗಾಗಿ  ಶಿವಯೋಗ ಮಂದಿರದಲ್ಲಿ ಅಧ್ಯಯನ ಮಾಡುತ್ತಿದ್ದ ಶಿವಮೂತರ್ಿ ದೇವರನ್ನು ಕೂಡಲೇ ಕರೆತಂದರು.  ಪಟ್ಟಾಧಿಕಾರಕ್ಕೆ ಬೇಕಾದ ಪೂರ್ವಸಿದ್ಧತೆ ಇಲ್ಲದಿರುವುದರಿಂದ ಕಾರ್ಯಕರ್ತರು ಗೊಂದಲಕ್ಕೆ ಒಳಗಾದರು.  ಆಗ ಕಾಶೀ ಜಗದ್ಗುರು ಶ್ರೀ ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ನಮ್ಮವೇ ಬಟ್ಟೆ - ಪೀತಾಂಬರ, ದಂಡ, ಕಮಂಡಲ ಕೊಟ್ಟು ಆಶೀರ್ವದಿಸುತ್ತೇವೆ.  ನೀವು ಪಟ್ಟಾಧಿಕಾರ ನೆರವೇರಿಸಿ ಬಿಡಿರಿ ಎಂದು ಕಾರ್ಯಕರ್ತರಿಗೆ ಆದೇಶಿಸಿದರು.  ಇದು ಮುಂಬರುವ ಭಾಗ್ಯದ ಶುಭ ಸೂಚನೆಯಾಯಿತು.  ಎನ್ನಬಹುದಲ್ಲವೇ?
    ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮ್ಮೇಳನದ ಸಡಗರದಲ್ಲಿ ಹಿರಿಯ ಮಠದ ಪಟ್ಟಾಧಿಕಾರವು ಅದ್ಧೂರಿಯಿಂದ ದಿನಾಂಕ 11-4-1976ರಂದು ನೆರವೇರಿತು.  ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಭಗವತ್ಪಾದರು ಶ್ರೀ ಷ| ಬ್ರ| ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಎಂದು ನಾಮಕರಣ ಮಾಡಿ ಆಶೀರ್ವದಿಸಿದರು.
    ಹಳ್ಯಾಳ ಶ್ರೀಗಳವರ ಆಚಾರ-ವಿಚಾರ, ವಿದ್ಯಾ ಸಂಪನ್ನತೆ, ವಾಗ್ವೈಖರಿಗಳಿಂದ ಸಂಪ್ರೀತರಾದ ಶ್ರೀ ರಂಭಾಪುರಿ ಜಗದ್ಗುರುಗಳವರು ತಮ್ಮ ಎಲ್ಲಾ ಸಭೆ-ಸಮಾರಂಭಗಳಲ್ಲಿ ಇವರಿಗೆ ಉಪದೇಶ ನೀಡಲು ಅವಕಾಶ ನೀಡತೊಡಗಿದರು.  ಏಳೆಂಟು ವರ್ಷಗಳ ಈ ತೆರನಾದ ಒಡನಾಟದಿಂದ ಹಳ್ಯಾಳ ಶ್ರೀಗಳವರು ಶ್ರೀ ರಂಭಾಪುರಿ ಸನ್ನಿಧಿಗೆ ಆತ್ಮೀಯರೆನಿಸಿದರು.
    ಆಗಲೇ ಇನ್ನೋರ್ವ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾವಲಯದಲ್ಲಿ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸೇರ್ಪಡೆಯಾದರು.  ಅವರ ಅಂತರಂಗದ ಶಿಷ್ಯರಾಗಿ ಅನುಗ್ರಹೀತರಾದರು.  ಅಂತೆಯೇ ಸುಪ್ರಸಿದ್ಧ ಶಿವಕ್ಷೇತ್ರವಾದ ಶಿವಗಂಗಾ ಮೇಲಣ ಗವಿ ವೀರಸಿಂಹಾಸನಮಠದ ಪಟ್ಟಾಧಿಕಾರಿಗಳಾಗಿ 31-1-1985ರಂದು ಅಧಿಕಾರ ಸ್ವೀಕರಿಸಿದರು.  ಉಭಯಮಠಗಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಕೀತರ್ಿಭಾಜನರಾದರು.
    ಶಿವಗಂಗಾ ಶ್ರೀಗಳವರು ಹುಬ್ಬಳ್ಳಿ ಮಹಾನಗರದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅದ್ಧೂರಿಯ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿಸಿ ವೀರಶೈವ ಧರ್ಮಪತಾಕೆಯನ್ನು ಆಗಸದೆತ್ತರಕ್ಕೆ ಹಾರಿಸುವ ಸಂಕಲ್ಪಗೈದರು.  ಮಹಾನಗರದ ಪ್ರಮುಖರನ್ನು ಕಟ್ಟಿಕೊಂಡು ಆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ 1985ರಲ್ಲಿ ನಿಭಾಯಿಸಿದರು.  'ಧರ್ಮಜ್ಯೋತಿ' ಎಂಬ ಸ್ಮರಣ ಸಂಚಿಕೆ ಶ್ರೀಗಳವರ ಸಾಧನೆಗೊಂದು ಸಾಕ್ಷಿಯಾಯಿತು.  ಈ ದಿಸೆಯಲ್ಲಿ ಇವರ ಅವಿರತ ಕಾರ್ಯನಿಷ್ಠೆ, ಛಲವಂತಿಕೆ ಹಾಗೂ ಜನಮನವನ್ನು ಗೆಲ್ಲುವ ಕುಶಲತೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಗುರುತಿಸಿದ ಜಗದ್ಗುರು ವೀರರುದ್ರಮುನಿ ದೇವ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಇವರನ್ನು ಮುಂಚೂಣಿಯಲ್ಲಿ ಇಡುತ್ತಿದ್ದರು.  ಮುಂದೆ ದುದರ್ೈವವಶಾತ್ ಶ್ರೀ ರಂಭಾಪುರಿ ಸನ್ನಿಧಿಯವರು ತೀವ್ರ ಅನಾರೋಗ್ಯಕ್ಕೆ ತುತ್ತಾದಾಗ ಶಿವಗಂಗಾ ಶ್ರೀಗಳು ತಾಯಿಯ  ವಾತ್ಸಲ್ಯದೊಂದಿಗೆ ಶ್ರವಣಕುಮಾರನಂತೆ ಸೇವೆಗೈದು ಕೃತಕೃತ್ಯರಾದರು.  ಅದುವೇ ಶ್ರೀ ರಂಭಾಪುರಿ ಮಹಾಸನ್ನಿಧಿಯವರ ಸಂಪೂರ್ಣ ಆಶೀವರ್ಾದಕ್ಕೆ ಕಾರಣವಾಯಿತು.
    ಶ್ರೀಗಳವರು ಜನ್ಮತಃ ಸಾಹಿತ್ಯಾಸಕ್ತರು.  'ಅಮರ ಜೀವನ' ಹಾಗೂ 'ಸದ್ಧರ್ಮ ಪ್ರಭಾ' ಎಂಬ ಧಾಮರ್ಿಕ ಮಾಸಪತ್ರಿಕೆಯ ಸಂಪಾದಕರಾಗಿ ಉತ್ತಮ ಕಾರ್ಯ ನಿರ್ವಹಿಸಿದುದನ್ನು ಸಾಹಿತ್ಯಲೋಕ ಮರೆಯುವಂತಿಲ್ಲ.  ಶ್ರೇಷ್ಠ ವಾಗ್ಮಿಗಳು, ಸಂಘಟನಾಶೀಲರು, ಉತ್ತಮ ಲೇಖಕರು ಆದುದರಿಂದ ಇವರು ಜನಾಕರ್ಷಣೆಗೆ ಒಳಗಾದವರು.  ಶಿವಗಂಗಾ ಮಠಾಧ್ಯಕ್ಷರಾಗಿದ್ದಾಗ ನೆಲಮಂಗಲದಲ್ಲಿ 1990ರಲ್ಲಿ ಶ್ರೀಮದ್ರಂಭಾಪುರಿ ಜಗದ್ಗುರುಗಳವರ ದಸರಾ ದಬರ್ಾರ  ಸಮಾರಂಭವು ಅದ್ದೂರಿಯಾಗಿ ನೆರವೇರಿತು.  ಆ ಸಮಾರಂಭದ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದುದು ಇವರ ಸಾಮಥ್ರ್ಯಕ್ಕೆ ಒರೆಗಲ್ಲಾಯಿತು.  ಇದರಿಂದ ಶಿವಗಂಗಾ ಶ್ರೀಗಳು ರಂಭಾಪುರಿ ಜಗದ್ಗುರುಗಳವರ ಅಂತರಂಗದಲ್ಲಿ ಮನೆಮಾಡಿಕೊಂಡರು.  ಅಂತೆಯೇ ಬೆಂಗಳೂರಿನ ಶ್ರೀ ಮಹಾಂತರಮಠದಲ್ಲಿ ರಂಭಾಪುರಿ ಜಗದ್ಗುರುಗಳು ಅನಾರೋಗ್ಯದಿಂದ
ಬಳಲುತ್ತಿರುವಾಗಲೇ ದೂರದಶರ್ಿತ್ವದ ಉಯಿಲು (ಮೃತ್ಯುಪತ್ರ) ಸಿದ್ಧವಾಯಿತು.  ಅದು ದಿನಾಂಕ 8-8-1991ರಂದು ಬೆಂಗಳೂರಿನ ಜಿಲ್ಲಾ ಕಛೇರಿಯಲ್ಲಿ ನೋಂದಾಯಿಸಲ್ಪಟ್ಟಿತು.
ಜಗದ್ಗುರುತ್ವ ಧರ್ಮ ಸಾಮ್ರಾಜ್ಯದ ಪ್ರಭುತ್ವ ಃ
    ಶ್ರೀಮದ್ರಂಭಾಪುರಿ ಜಗದ್ಗುರು ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರು 1991ರ ಆಗಸ್ಟ್ ಹದಿನೇಳರಂದು ಅವರ ಜೀವನಯಾತ್ರೆಯನ್ನು ಪೂರೈಸಿ ಶ್ರೀ ಪೀಠದಲ್ಲಿ ಕ್ರಿಯಾಸಮಾಧಿಸ್ಥರಾದರು.  ಅನಂತರ ಅವರ ಸದಿಚ್ಛೆ ಹಾಗೂ ದೈವಸಂಕಲ್ಪದಂತೆ ಧರ್ಮ ಸಾಮ್ರಾಜ್ಯದ ಪ್ರಭುತ್ವವು ಸಹಜವಾಗಿ ಶಿವಗಂಗಾ ಶ್ರೀಗಳವರನ್ನು ಅರಸಿ ಬಂದಿತು.  ಶ್ರೀಮತ್ ಉಜ್ಜಯಿನಿ, ಶ್ರೀಮತ್ ಹಿಮವತ್ ಕೇದಾರ, ಶ್ರೀ ಶ್ರೀಶೈಲ ಹಾಗೂ ಶ್ರೀ ಕಾಶೀ ಜಗದ್ಗುರು ಮಹಾಸನ್ನಿಧಿಯವರ ದಿವ್ಯಸಾನ್ನಿಧ್ಯದಲ್ಲಿ ದಿನಾಂಕ 6-2-1992 ರಂದು ಶ್ರೀಗಳವರು ವೀರಸಿಂಹಾಸನಾರೋಹಣಗೈದು ಶ್ರೀಮದ್ರಂಭಾಪುರಿ ವೀರ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ನೂತನ ಅಭಿಧಾನವನ್ನು ಪಡೆದರು.  ಶ್ರೀರಂಭಾಪುರಿ ಪೀಠದ 121ನೇ ಜಗದ್ಗುರುಗಳೆಂದು ಜಗಜ್ಜಾಹೀರವಾಯಿತು.  ಅಂದಿನ ಆ ಭವ್ಯದಿವ್ಯ ಸಮಾರಂಭದಲ್ಲಿ ನೂತನ ಜಗದ್ಗುರುಗಳವರು ತಮ್ಮ ಯೋಜನಾಷ್ಟಕವನ್ನು ಮಹಾಜನತೆಯ ಮುಂದೆ ಇಟ್ಟರು.  ಆ ಯೋಜನೆಗಳು ಹೀಗಿವೆ.
1.  ಶ್ರೀಪೀಠದಲ್ಲಿ ನಿತ್ಯ ದಾಸೋಹವನ್ನು ನಡೆಯಿಸುವುದು.
2.  ಶ್ರೀಪೀಠದ ಆಡಳಿತದಲ್ಲಿ ಚುರುಕುತನವನ್ನು ತರುವುದು.
3.  ಶ್ರೀಪೀಠದಲ್ಲಿ ಗುರುಕುಲ ಸ್ಥಾಪನೆ ಮಾಡುವುದು.
4.  ಶ್ರೀಪೀಠದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಿ,         ಆ ಮೂಲಕ ನಾಡಿನಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸಿ ಶಿಕ್ಷಣ ಹಾಗೂ               ಸಂಸ್ಕೃತಿಗಳನ್ನು ಬೆಳಗಿಸುವುದು.
5.  ಶ್ರೀ ಪೀಠದಲ್ಲಿ ವೀರಶೈವ ಧಾಮರ್ಿಕ ಸಾಹಿತ್ಯವನ್ನು ಪ್ರಕಟಿಸಿ ಜನತೆಯ ಬಡ                      ಜೇಬಿಗೆ ಎಟಕುವ ಬೆಲೆಯಲ್ಲಿ ಮಾರಾಟ ಮಾಡಿ ವೀರಶೈವ ಹಾಗೂ ಶಿವಾಗಮ             ಸಾಹಿತ್ಯವನ್ನು ಮನೆ-ಮನೆಗೆ ತಲುಪಿಸುವುದು.
6.  ಪ್ರಚಾರ ಮತ್ತು ಪ್ರಸಾದ ಮಾಧ್ಯಮಗಳನ್ನು ಚೆನ್ನಾಗಿ ಬಳಸಿಕೊಳ್ಳುವುದು.
7.  ಪ್ರತಿವರ್ಷ ಶ್ರಾವಣಮಾಸದ ತಪೋನುಷ್ಠಾನವನ್ನು ಶ್ರೀಪೀಠದಲ್ಲಿ ನೆರವೇರಿಸಿ             ಜನತೆಯೊಂದಿಗೆ ನೇರ ಹಾಗೂ ನಿಕಟ ಸಂಪರ್ಕವನ್ನು ಹೊಂದುವುದು.
8.  ಶ್ರೀಪೀಠದಲ್ಲಿ ಪೀಠಾಚಾರ್ಯರ ವಾಸ್ತವ್ಯದ ಅವಧಿಯನ್ನು ಹೆಚ್ಚಿಸುವುದು ಮತ್ತು            ಪ್ರತಿ ಪೂಣರ್ಿಮೆಯಂದು ಪೀಠಾಚಾರ್ಯರು ಪೀಠದಲ್ಲಿದ್ದು ಬಂದ ಭಕ್ತಾದಿಗಳಿಗೆ          ದರ್ಶನ ನೀಡುವುದು.
    ಕಳೆದ ಒಂಭತ್ತು ವರ್ಷಗಳಲ್ಲಿ ಈ ಯೋಜನಾಷ್ಟಕವು ಬಹುತೇಕ ಕಾರ್ಯರೂಪಕ್ಕೆ ಬಂದು ಯಶೋದುಂದುಭಿ ಬಾರಿಸಿದೆ.
ಮಾತು - ಕೃತಿಯ ನೇತಾರ ಃ
    'ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ' ಎಂಬುದು ಶ್ರೀಮದ್ ರಂಭಾಪುರಿ ಜಗದ್ಗುರು ವೀರಗಂಗಾಧರ ಶಿವಾಚಾರ್ಯರ ಘೋಷವಾಕ್ಯವಾದರೆ 'ಸಾಹಿತ್ಯ ಸಂಸ್ಕೃತಿ ಸಂವಧರ್ಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ' ಎಂಬ ಸರ್ವಜನಹಿತ ಸಾರುವ ಮಾತನಾಡುತ್ತ,  ಆಡಿದ್ದನ್ನು ಮಾಡಿಯೇ ತೋರಿಸುವ ವೀರರು ಶ್ರೀಜಗದ್ಗುರು ವೀರಸೋಮೇಶ್ವರರು!  ಅನೇಕ ಸಲ ಆಡದೇ ಮಾಡಿಬಿಡುತ್ತಾರೆ.  ಅವರ ಸಂಕಲ್ಪಶಕ್ತಿ ಗಜಗಾತ್ರದ್ದಾಗಿದೆ.  ಅದು ಹುಸಿಯಾಗುವ ಸಾಧ್ಯತೆಯೇ ಇಲ್ಲ.  ಶ್ರೀಪೀಠವನ್ನು ಇತ್ತೀಚೆಗೆ ಸಂದಶರ್ಿಸಿದವರು ನೋಡಲು ಎರಡು ಕಣ್ಣುಗಳು ಸಾಲವು ಎನ್ನುತ್ತಾರೆ.  ಶ್ರೀಪೀಠದ ನವೀಕರಣ, ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿಯ ಮಂದಿರದ ಅಂದಚಂದ ನೋಡಿಯೇ ಆನಂದಿಸಬೇಕು.  ಆಧುನಿಕ ಸೌಕರ್ಯಗಳನ್ನು ಒಳಗೊಂಡ ಶ್ರೀಶಿವಾನಂದ ಜ್ಯೋತಿ, ಶ್ರೀರುದ್ರಜ್ಯೋತಿ, ಶ್ರೀ ಜಗದ್ಗುರು ರುದ್ರಮುನೀಶ್ವರ ಶಾಂತಿಧಾಮ ಮುಂತಾದವುಗಳ ವಾಸ್ತವ್ಯದ ಸವಿಯನ್ನು ಸವಿದವನೇ ಭಾಗ್ಯವಂತನು.  ಪೂವರ್ಾಚಾರ್ಯರ ಕತರ್ೃಗದ್ದಿಗೆಗಳ ಸಂಕೀರ್ಣ ಸುಂದರ ಬಂಧುರವಾಗಿದೆ,  ಮುಕ್ತಿಧಾಮವೆನಿಸಿದೆ.  ಮೂಲ ಜಗದ್ಗುರು ಶ್ರೀ ರುದ್ರಮುನಿ ಶಿವಾಚಾರ್ಯರ ಹಾಗೂ ಶ್ರೀ ಚೌಡೇಶ್ವರಿ ಮಾತೆಯ ದೇವಾಲಯಗಳು ತಲೆಯೆತ್ತಿ ನಿಂತದ್ದು ತಮ್ಮ ಔನ್ನತ್ಯವನ್ನು ಪ್ರತಿಬಿಂಬಿಸುತ್ತಿವೆ.  ಮಹಾದ್ವಾರಗಳು, ಬೃಹದಾಕಾರದ ಸಮುದಾಯ ಭವನ, ವಿದ್ಯಾಥರ್ಿ ವಸತಿ ನಿಲಯಗಳು ಒಂದೇ, ಎರಡೇ! ಹತ್ತಾರು ಕಟ್ಟಡಗಳು ಹುಟ್ಟಿಕೊಂಡು ಕಾಡನ್ನು ನಾಡಾಗಿಸಿವೆ.
    ರಂಭಾಪುರಿ ಸನ್ನಿಧಿಯವರ ಕಾರ್ಯಕ್ಷೇತ್ರಕ್ಕೆ ಇತಿಮಿತಿ ಎಂಬುದಿಲ್ಲ.  ಸಂಕುಚಿತ ಪ್ರವೃತ್ತಿ ಅವರ ಜಾಯಮಾನದಲ್ಲಿ ಇಲ್ಲ.  ಕೇವಲ ಶ್ರೀಪೀಠವು ಶ್ರೀಮಂತವಾದರೆ ಅವರಿಗೆ ತೃಪ್ತಿಯಿಲ್ಲ.  ಬಾಳೇಹೊನ್ನೂರು ಮಾತ್ರ ಹೊನ್ನಾದರೆ ಸಾಲದು, ಇನ್ನುಳಿದ ಧರ್ಮಕ್ಷೇತ್ರಗಳು ಅಭಿವೃದ್ಧಿಗೊಳ್ಳಬೇಕೆಂಬುದು ಅವರ ಅಭಿಲಾಷೆ.  ಅಂತೆಯೇ ಗದಗ, ಕುಷ್ಟಗಿ, ಹುಬ್ಬಳ್ಳಿ, ಕುಮಾರಪಟ್ಟಣಂ (ಶ್ರೀ ವಾಗೀಶ ನಗರ) ಹೀಗೆ ಹಲವೆಡೆ ಉತ್ತಮೋತ್ತಮ ಮಾಂಗಲ್ಯ ಮಂದಿರಗಳು, ಕಲ್ಯಾಣಮಂಟಪಗಳು ಬಡವ ಬಲ್ಲಿದರ ಮಂಗಲಕಾರ್ಯಕ್ಕೆ ಎಡೆಮಾಡಿಕೊಟ್ಟಿವೆ.
    ಸನ್ನಿಧಿಯವರ ದೃಷ್ಟಿ-ಸೃಷ್ಟಿ ಕೇವಲ ಕಟ್ಟಡಗಳಿಗೆ ಮಾತ್ರ ಸೀಮಿತವಾಗಿಲ್ಲ.  ಶಿಕ್ಷಣ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.  ಗುರುಕುಲ, ಶಾಲೆ, ಪ್ರೌಢಶಾಲೆ, ಉನ್ನತ ಶಿಕ್ಷಣ ಸಂಸ್ಥೆ ತಾಂತ್ರಿಕ ತರಬೇತಿ ಸಂಸ್ಥೆ - ಮುಂತಾದವುಗಳು  ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ - ವಿಶೇಷ ಕೊಡುಗೆಗಳಾಗಿವೆ.  ಬೆಂಗಳೂರು, ಶಿಗ್ಗಾವಿ, ಧರ್ಮನಿವಾಸ ಮುಂತಾದವುಗಳು ಪೀಠದ ಹೊರಗಣ ಶಿಕ್ಷಣ ಕೇಂದ್ರಗಳಾಗಿವೆ.
    ಸಾಹಿತ್ಯ, ಸಂಗೀತ ಕಲೆಗಳತ್ತ ಶ್ರೀ ಸನ್ನಿಧಿಯವರ ಪರುಷದೃಷ್ಟಿ ಹರಿದಿದೆ. 'ರಂಭಾಪುರಿ ಬೆಳಗು' ಧಾಮರ್ಿಕ ಪತ್ರಿಕೆ ಆಧ್ಯಾತ್ಮದ ಬೆಳಕನ್ನು ಹರಡುತ್ತಲಿದೆ.  ಶ್ರೀ ಪೀಠದಿಂದ ಕನ್ನಡ ಸಾಹಿತ್ಯ ಪರಿಷತ್ನ ಮುಖಾಂತರ ಅನೇಕ ಗ್ರಂಥ - ಉದ್ಗ್ರಂಥಗಳು ಪ್ರಕಟಿಸಲ್ಪಟ್ಟಿವೆ.  ಆಕರ್ಷಣೀಯ ಸಾಧನೆಗಳಾಗಿರುವ ಧ್ವನಿ ಸುರುಳಿಗಳು, ವೈವಿಧ್ಯಪೂರ್ಣವಾಗಿ ಹೊರಹೊಮ್ಮಿವೆ.
    ದಸರಾ ದಬರ್ಾರ್ ಎಂಬುದು ಶ್ರೀಮದ್ರಂಭಾಪುರಿ ಮಹಾಪೀಠದ ಒಂದು ಮಹತ್ತರ ಸಾಂಸ್ಕೃತಿಕ ಕೊಡುಗೆಯಾಗಿದೆ,  ಪೂವರ್ಾಚಾರ್ಯರ ಉತ್ಕೃಷ್ಟ ಉಡುಗೊರೆಯಾಗಿದೆ. ಅದನ್ನು ಕಳೆದ 15 ವರ್ಷಗಳಲ್ಲಿ ವರ್ತಮಾನ ಜಗದ್ಗುರುಗಳು ಇನ್ನೂ ಅರ್ಥಪೂರ್ಣವಾಗಿ ವ್ಯಾಪಕವಾಗಿ, ಇನ್ನೂ ಹೆಚ್ಚಿನ ಮೆರುಗಿನೊಂದಿಗೆ ಆಚರಿಸುತ್ತಾ ಬಂದಿದ್ದಾರೆ.  ಆ ಸಂಭ್ರಮದ ಸಮಾರಂಭವನ್ನು ಅದರಲ್ಲೂ ನಜರ್ ಸಮರ್ಪಣೆಯಂತಹ ಶ್ರೀಮದ್ ಗಾಂಭೀರ್ಯದಿಂದ ಕೂಡಿದ ಕಾರ್ಯಕ್ರಮವನ್ನಂತೂ ಕಣ್ಣಾರೆ ನೋಡಿ ಆನಂದಿಸಬೇಕು.
    ಇದುವರೆಗೆ 15 ನಗರ - ಪಟ್ಟಣಗಳಲ್ಲಿ  ಶ್ರೀ ವೀರಸೋಮೇಶ್ವರ ಜಗದ್ಗುರುಗಳವರ 'ದಸರಾ ದಬರ್ಾರು' ಜರುಗಿ ಜನಮನದಲ್ಲಿ ಸನ್ನಿಧಿಯವರ ವ್ಯಕ್ತಿತ್ವವನ್ನು ಸುಸ್ಥಿರಗೊಳಿಸಿವೆ.  ಆ ತಾಣಗಳು ಇಂತಿವೆ:  1.  ನಿಡಗುಂದಿ (ಬಿಜಾಪುರ ಜಿಲ್ಲೆ)  2.  ತುಮಕೂರು  3.  ಮುಂಡರಗಿ (ಗದಗ ಜಿಲ್ಲೆ) 4.  ಬಾಗಿಲುಕೋಟೆ 5.  ಶಿಗ್ಗಾಂವಿ  6.  ಸವದತ್ತಿ  7.  ಸಿಂಧನೂರು 8.  ಕುಂದಗೋಳ 9.  ಬೀರೂರು 10.  ಹಾವೇರಿ  11.  ಸೊಲ್ಲಾಪುರ  12.  ಕಲಬುಗರ್ಿ  13.  ಹೊಸದುರ್ಗ  14.  ರಾಣೀಬೆನ್ನೂರು 15.  ಶಿವಮೊಗ್ಗ
    ಕವಿ - ಕಲಾವಿದರನ್ನು ಸಾಹಿತ್ಯ ಸಾಧಕರನ್ನು ಗುರುರಕ್ಷೆ ನೀಡುವ ಮೂಲಕ ಸನ್ಮಾನಿಸುವ ಸಂಸ್ಕೃತಿ ಶ್ರೀಪೀಠದ ವೈಶಿಷ್ಟ್ಯವಾಗಿದೆ.  ಲೋಕಮಾನ್ಯ ಕಾರ್ಯವೆಸಗಿದವರನ್ನು ಗುರುತಿಸಿ, ಗೌರವಿಸುವ ಶ್ರೀಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಶ್ರೀ ಪೀಠದ ವಿಶೇಷ  ಕೊಡುಗೆಯಾಗಿದೆ.  ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವ ಶ್ರೀಮದ್ರಂಭಾಪುರಿ ಮಹಾಸಂಸ್ಥಾನವು ಮಹತ್ತರ ಗುರಿಯನ್ನು ಹೊದಿದೆ.  ಮಹಂತರೆನಿಸಿದ ಗುರು ಪರಂಪರೆಯ ಸಮರ್ಥ ಬೆಂಬಲ ಪಡೆದಿದೆ.  ಆನೆ ನಡೆದುದೇ ದಾರಿ ಎಂದಾದರೆ ಶ್ರೀಮದ್ರಂಭಾಪುರಿ ಸಂಸ್ಥಾನವು ಸಾಗಿದುದೇ ಸಾಧನೆಯ ಮಾರ್ಗವೆನಿಸಿದೆ.  ಪ್ರಸನ್ನ ರೇಣುಕ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಕೇವಲ 15 ವರ್ಷಗಳನ್ನು ಮಾತ್ರ ಪೂರೈಸಿದ್ದು 150 ವರ್ಷಗಳ ಸಾಧನೆ ಕಂಡುಬರುತ್ತಿದೆ.
ರಂಭಾಪುರಿ ಪೀಠ:
    ಆಂಧ್ರಪ್ರದೇಶದ ಕೊಲ್ಲಿಪಾಕಿ (ಕೊನಲುಪಾಕ) ಆದಿಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಪರಮಪವಿತ್ರ ಕ್ಷೇತ್ರವಾಗಿದೆ.  ಅಲ್ಲಿ ಪ್ರಾಚೀನ ಕಾಲದ ದೇವಸ್ಥಾನ ಹಾಗೂ ಶ್ರೀ ಸೋಮೇಶ್ವರ ಲಿಂಗವು ಕಂಗೊಳಿಸುತ್ತಲಿದೆ.  ಆದರೆ ಆ ಕ್ಷೇತ್ರವು ಅಭಿವೃದ್ಧಿ ಕಾಣದೇ ಅಂಧಕಾರದಲ್ಲಿ ಉಳಿದಿತ್ತು.  ಶ್ರೀಮದ್ ರಂಭಾಪುರಿ ಪೀಠದ ಪ್ರಸನ್ನ ಜಗದ್ಗುರು ವೀರಸೋಮೇಶ್ವರ ಮಹಾಸನ್ನಿಧಿಯವರು ತಮ್ಮ ಪರುಷದೃಷ್ಟಿಯನ್ನು ಆ ಸುಕ್ಷೇತ್ರದ ಮೇಲೆ ಹರಿಸಿದರು.  ಇತ್ತೀಚೆಗೆ ಅವಕಾಶ ಸಿಕ್ಕಾಗಲೆಲ್ಲ ಶ್ರೀ ಜಗದ್ಗುರುಗಳವರು ಆ ಕ್ಷೇತ್ರಕ್ಕೆ ದಯಮಾಡಿಸುತ್ತಲಿದ್ದಾರೆ.  ಆ ಕ್ಷೇತ್ರ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ವ್ಯವಸ್ಥಿತ ವಸತಿಯ ಸೌಲಭ್ಯವಿರಲಿಲ್ಲ.  ಅದನ್ನು ಕಣ್ಣಾರೆ ಕಂಡು ನೊಂದ ಸನ್ನಿಧಿಯವರು ಸುಸಜ್ಜಿತ ವಸತಿ ಯೋಜನೆ ರೂಪಿಸಿದರು.  ಮನಸ್ಸಿನಲ್ಲಿ ಮೂಡಿದುದನ್ನು ಒಡನೆಯೇ ಕೃತಿಗಿಳಿಸುವ ಕತರ್ೃತ್ವ ಶಕ್ತಿಯುಳ್ಳ ಜಗದ್ಗುರುಗಳು ಕಟ್ಟಡ ಕಾರ್ಯ ಪ್ರಾರಂಭಿಸಿಯೇ ಬಿಟ್ಟರು.  ಆ ಬೃಹತ್ ಯೋಜನೆಯಲ್ಲಿ ಬಹಳಷ್ಟು ಕಾರ್ಯವು ಮುಗಿದು ಜನಕ್ಕೆ ಅನುಕೂಲತೆಯನ್ನುಂಟು ಮಾಡಿದೆ. 
    ಜಗದ್ಗುರುಗಳವರಿಗೆ ಈಗ ಐವತ್ತೊಂದರ ಪ್ರಾಯ.  ಪ್ರಾಯದೊಂದಿಗೆ ಉತ್ಸಾಹವು ವಧರ್ಿಸುತ್ತಲೇ ನಡೆದಿದೆ.  ಆಹಾರ - ಆರೋಗ್ಯವನ್ನು ಅತಿಯಾಗಿ ಪರಿಗಣಿಸದೆ  ದೇಶವನ್ನು ಸುತ್ತುತ್ತ ಧರ್ಮಜಾಗೃತಿ ಕಾರ್ಯದಲ್ಲಿ ನಿರತರಾಗಿದ್ದಾರೆ.  ಶ್ರೀ ಜಗದ್ಗುರುಗಳವರ ಐವತ್ತನೆಯ ವರ್ಧಂತಿ ಉತ್ಸವವನ್ನು ದಾವಣಗೆರೆ ನಗರದಲ್ಲಿ 2006 ನೆಯ ವಷರ್ಾರಂಭದಲ್ಲಿ ಅದ್ಧೂರಿಯಿಂದ ಆಚರಿಸಿದ್ದನ್ನು ಕಂಡವರ ಕಣ್ಣುಗಳು ಪಾವನವಾಗಿವೆ.  ಐವತ್ತು ವರ್ಷಗಳ ಸಾಂಕೇತಿಕ ವಯೋಮಾನಕ್ಕನುಗುಣವಾಗಿ ಐವತ್ತು ವಿಶಿಷ್ಟ ಗ್ರಂಥಗಳನ್ನು ಪ್ರಕಟಗೊಳಿಸಿದ್ದು ಪ್ರಶಂಸನೀಯವೆನಿಸಿದೆ.  ಮತ್ತೆ ಐವತ್ತೊಂದನೆಯ ವರ್ಧಂತಿಯಲ್ಲಿ ಇಂತಹ ಹತ್ತು ಹಲವು ಯೋಜನೆಗಳು ಸಾಕಾರಗೊಳ್ಳುವುದರಲ್ಲಿ ಸಂಶಯವಿಲ್ಲ.  ವೀರಶೈವ ಸದ್ಭೋದನಾ ಸಂಸ್ಥೆಯ ಪ್ರಸಾರಾಂಗವು ಜಗದ್ಗುರುಗಳ ಕನಸಿನ ಕೂಸಾಗಿದ್ದು ಧರ್ಮ ಪ್ರಸಾರ - ಪ್ರಚಾರಕ್ಕಾಗಿ ತನ್ನನ್ನು ತಾನು ಅಪರ್ಿಸಿಕೊಂಡಿದೆ.  ಹೀಗೆ ಶ್ರೀ ಜಗದ್ಗುರು ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಧಾಮರ್ಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಶ್ವಬಾಂಧವ್ಯದ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತ ಮುನ್ನಡೆದಿದ್ದಾರೆ.  ಇಂತಹ ಪರಮಪೂಜನೀಯ ಜಗದ್ಗುರುಗಳವರಿಗೆ ಪೂವರ್ಾಚಾರ್ಯರು ಆಯು - ಆರೋಗ್ಯಭಾಗ್ಯಾದಿಗಳನ್ನು ಅನುಗ್ರಹಿಸಿಲೆಂದು ಭಕ್ತಿಪೂರ್ವಕ ಬೇಡಿಕೊಳ್ಳೋಣ.
    ಶ್ರೀ ರಂಭಾಪುರಿ ವೀರಸಿಂಹಾಸನದ ಜಗದ್ಗುರು ಪರಂಪರೆ
ಶ್ರೀ ಜಗದ್ಗುರು ಏಕಾಕ್ಷರ ಶಿವಾಚಾರ್ಯ ಭಗವತ್ಪಾದರು (ಕೃತಯುಗದ ಆದಿ)
ಶ್ರೀ ಜಗದ್ಗುರು ಏಕವಕ್ತ್ರ ಶಿವಾಚಾರ್ಯ ಭಗವತ್ಪಾದರು (ತ್ರೇತಾಯುಗದ ಆದಿ)
ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರು (ದ್ವಾಪರಯುಗದ ಆದಿ)
1.    ಶ್ರೀ ಜಗದ್ಗುರು ರೇವಣಸಿದ್ಧ ಶಿವಾಚಾರ್ಯ ಭಗವತ್ಪಾದರು (ಕಲಿಯುಗ)
2.    ಶ್ರೀ ಜಗದ್ಗುರು ರುದ್ರಮುನೀಶ್ವರ ಶಿವಾಚಾರ್ಯರು
3.    ಶ್ರೀ ಜಗದ್ಗುರು ಮುಕ್ತಿಮುನೀಶ್ವರ ಶಿವಾಚಾರ್ಯರು
4.    ಶ್ರೀ ಜಗದ್ಗುರು ದಿಗಂಬರ ಮುಕ್ತಿಮುನೀಶ್ವರ ಶಿವಾಚಾರ್ಯರು
5.    ಶ್ರೀ ಜಗದ್ಗುರು ತ್ರಿಲೋಚನ ಶಿವಾಚಾರ್ಯರು
6.    ಶ್ರೀ ಜಗದ್ಗುರು ಯೋಗಿನಾಥ ಶಿವಾಚಾರ್ಯರು
7.    ಶ್ರೀ ಜಗದ್ಗುರು ಮೃತ್ಯುಂಜಯ ಶಿವಾಚಾರ್ಯರು
8.    ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರು
9.    ಶ್ರೀ ಜಗದ್ಗುರು    ಗುರುಪಾದ ಶಿವಾಚಾರ್ಯರು
10.     ಶ್ರೀ ಜಗದ್ಗುರು    ಷಣ್ಮುಖ ಶಿವಾಚಾರ್ಯರು
11.    ಶ್ರೀ ಜಗದ್ಗುರು    ಶಿವಲಿಂಗ ಶಿವಾಚಾರ್ಯರು
12.    ಶ್ರೀ ಜಗದ್ಗುರು    ನಿತ್ಯಾನಂದ ಶಿವಾಚಾರ್ಯರು
13.    ಶ್ರೀ ಜಗದ್ಗುರು    ಮುಕ್ತಿನಾಥ ಶಿವಾಚಾರ್ಯರು
14.    ಶ್ರೀ ಜಗದ್ಗುರು    ಷಡಕ್ಷರ ಶಿವಾಚಾರ್ಯರು
15.    ಶ್ರೀ ಜಗದ್ಗುರು    ಗುರುಸಿದ್ಧ ಶಿವಾಚಾರ್ಯರು
16.    ಶ್ರೀ ಜಗದ್ಗುರು    ಶಿವಲಿಂಗ ಶಿವಾಚಾರ್ಯರು
17.    ಶ್ರೀ ಜಗದ್ಗುರು    ನೀಲಕಂಠ ಶಿವಾಚಾರ್ಯರು
18.    ಶ್ರೀ ಜಗದ್ಗುರು    ಕೈವಲ್ಯನಾಥ ಶಿವಾಚಾರ್ಯರು
19.    ಶ್ರೀ ಜಗದ್ಗುರು    ಪಂಚಾಕ್ಷರ ಶಿವಾಚಾರ್ಯರು
20.    ಶ್ರೀ ಜಗದ್ಗುರು    ಸವರ್ೇಶ್ಚರ ಶಿವಾಚಾರ್ಯರು
21.    ಶ್ರೀ ಜಗದ್ಗುರು ಶಂಭುದೇವ ಶಿವಾಚಾರ್ಯರು
22.    ಶ್ರೀ ಜಗದ್ಗುರು ಕಾಲಾಂತಕ ಶಿವಾಚಾರ್ಯರು
23.    ಶ್ರೀ ಜಗದ್ಗುರು    ಶಾಂತವೀರ ಶಿವಾಚಾರ್ಯರು
24.    ಶ್ರೀ ಜಗದ್ಗುರು    ಮುಕ್ತಿನಾಥ ಶಿವಾಚಾರ್ಯರು
25.    ಶ್ರೀ ಜಗದ್ಗುರು    ಶಂಕರಸ್ವಾಮಿ ಶಿವಾಚಾರ್ಯರು
26.    ಶ್ರೀ ಜಗದ್ಗುರು ಸದಾಶಿವ ಶಿವಾಚಾರ್ಯರು
27.    ಶ್ರೀ ಜಗದ್ಗುರು ಮಹಾದೇವ ಶಿವಾಚಾರ್ಯರು
28.    ಶ್ರೀ ಜಗದ್ಗುರು ಗುರುಲಿಂಗ ಶಿವಾಚಾರ್ಯರು
29.    ಶ್ರೀ ಜಗದ್ಗುರು ರೇವಣಸಿದ್ಧ ಶಿವಾಚಾರ್ಯರು
30.    ಶ್ರೀ ಜಗದ್ಗುರು ಪಶುಪತಿ ಶಿವಾಚಾರ್ಯರು
31.    ಶ್ರೀ ಜಗದ್ಗುರು ಶಂಭುಲಿಂಗ ಶಿವಾಚಾರ್ಯರು
32.    ಶ್ರೀ ಜಗದ್ಗುರು ಗುರುಪಾದ ಶಿವಾಚಾರ್ಯರು
33.    ಶ್ರೀ ಜಗದ್ಗುರು ಶ್ರೀಕಂಠಮೂತರ್ಿ ಶಿವಾಚಾರ್ಯರು
34.    ಶ್ರೀ ಜಗದ್ಗುರು ಸಿದ್ಧನಾಥ ಶಿವಾಚಾರ್ಯರು
35.    ಶ್ರೀ ಜಗದ್ಗುರು ಮೃತ್ಯುಂಜಯ ಶಿವಾಚಾರ್ಯರು
36.    ಶ್ರೀ ಜಗದ್ಗುರು ನೀಲಕಂಠ ಶಿವಾಚಾರ್ಯರು
37.    ಶ್ರೀ ಜಗದ್ಗುರು ಸೋಮಶೇಖರ ಶಿವಾಚಾರ್ಯರು
38.    ಶ್ರೀ ಜಗದ್ಗುರು ವೀರಭದ್ರ ಶಿವಾಚಾರ್ಯರು
39.    ಶ್ರೀ ಜಗದ್ಗುರು ಜಗನ್ನಾಥ ಶಿವಾಚಾರ್ಯರು
40.    ಶ್ರೀ ಜಗದ್ಗುರು ಪಂಚಾನನ ಶಿವಾಚಾರ್ಯರು
41.    ಶ್ರೀ ಜಗದ್ಗುರು ಕೆಂಜೆಡೆ ರಾಜಶೇಖರ ಶಿವಾಚಾರ್ಯರು
42.    ಶ್ರೀ ಜಗದ್ಗುರು ನಗರಾರಂಭ ಶಿವಾಚಾರ್ಯರು
43.    ಶ್ರೀ ಜಗದ್ಗುರು ಸಿದ್ಧನಾಥ ಶಿವಾಚಾರ್ಯರು
44.    ಶ್ರೀ ಜಗದ್ಗುರು ರುದ್ರಮುನೀಶ್ವರ ಶಿವಾಚಾರ್ಯರು
45.    ಶ್ರೀ ಜಗದ್ಗುರು ಕಲ್ಯಾಣಸುಂದರ ಶಿವಾಚಾರ್ಯರು
46.    ಶ್ರೀ ಜಗದ್ಗುರು ಗಂಗಾಧರ ಶಿವಾಚಾರ್ಯರು
47.    ಶ್ರೀ ಜಗದ್ಗುರು ಪಂಚಾಕ್ಷರ ಶಿವಾಚಾರ್ಯರು
48.    ಶ್ರೀ ಜಗದ್ಗುರು ಚಿದಂಬರದೇವ ಶಿವಾಚಾರ್ಯರು
49.    ಶ್ರೀ ಜಗದ್ಗುರು ಶಿವಪ್ರಸಾದ ಶಿವಾಚಾರ್ಯರು
50.    ಶ್ರೀ ಜಗದ್ಗುರು ವೀರಭದ್ರ ಶಿವಾಚಾರ್ಯರು
51.    ಶ್ರೀ ಜಗದ್ಗುರು    ಶಿವಾನಂದ ಶಿವಾಚಾರ್ಯರು
52.    ಶ್ರೀ ಜಗದ್ಗುರು    ಅವಿಮುಕ್ತ ಶಿವಾಚಾರ್ಯರು
53.    ಶ್ರೀ ಜಗದ್ಗುರು    ರೇವಣಸಿದ್ಧ ಶಿವಾಚಾರ್ಯರು
54.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
55.    ಶ್ರೀ ಜಗದ್ಗುರು     ಪಶುಪತಿ ಶಿವಾಚಾರ್ಯರು
56.    ಶ್ರೀ ಜಗದ್ಗುರು    ರೇವಣಸಿದ್ಧ ಶಿವಾಚಾರ್ಯರು
57.    ಶ್ರೀ ಜಗದ್ಗುರು    ಪ್ರಮಥನಾಥ ಶಿವಾಚಾರ್ಯರು
58.    ಶ್ರೀ ಜಗದ್ಗುರು    ಗುರುದೇವ ಶಿವಾಚಾರ್ಯರು
59.    ಶ್ರೀ ಜಗದ್ಗುರು    ಗಂಗಾಧರ ಶಿವಾಚಾರ್ಯರು
60.    ಶ್ರೀ ಜಗದ್ಗುರು    ನಂದಿನಾಥ ಶಿವಾಚಾರ್ಯರು
61.    ಶ್ರೀ ಜಗದ್ಗುರು    ಮುಕ್ತಿಮುನೀಶ್ವರ ಶಿವಾಚಾರ್ಯರು
62.    ಶ್ರೀ ಜಗದ್ಗುರು    ಶಂಭುದೇವ ಶಿವಾಚಾರ್ಯರು
63.    ಶ್ರೀ ಜಗದ್ಗುರು    ತಾಂಡವಾಲೆ ಶಿವಾಚಾರ್ಯರು
64.    ಶ್ರೀ ಜಗದ್ಗುರು    ಗುರುದೇವ ಶಿವಾಚಾರ್ಯರು
65.    ಶ್ರೀ ಜಗದ್ಗುರು    ಜಟಾವೀರಭದ್ರ ಶಿವಾಚಾರ್ಯರು
66.    ಶ್ರೀ ಜಗದ್ಗುರು    ಶಿವಲಿಂಗ ಶಿವಾಚಾರ್ಯರು
67.    ಶ್ರೀ ಜಗದ್ಗುರು    ವಿರೂಪಾಕ್ಷ ಶಿವಾಚಾರ್ಯರು
68.    ಶ್ರೀ ಜಗದ್ಗುರು    ಶ್ರೀಕಂಠ ಶಿವಾಚಾರ್ಯರು
69.    ಶ್ರೀ ಜಗದ್ಗುರು    ಅಘೋರ ಶಿವಾಚಾರ್ಯರು
70.    ಶ್ರೀ ಜಗದ್ಗುರು    ಗುರುಪಾದ ಶಿವಾಚಾರ್ಯರು
71.    ಶ್ರೀ ಜಗದ್ಗುರು    ಈಶಾನದೇವ ಶಿವಾಚಾರ್ಯರು
72.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
73.    ಶ್ರೀ ಜಗದ್ಗುರು    ಚರಲಿಂಗ ಶಿವಾಚಾರ್ಯರು
74.    ಶ್ರೀ ಜಗದ್ಗುರು    ಪುಣ್ಯಶ್ಲೋಕ ಶಿವಾಚಾರ್ಯರು
75.    ಶ್ರೀ ಜಗದ್ಗುರು    ಗಂಗಾಧರ ಶಿವಾಚಾರ್ಯರು
76.    ಶ್ರೀ ಜಗದ್ಗುರು    ಸೋಮನಾಥ ಶಿವಾಚಾರ್ಯರು
77.    ಶ್ರೀ ಜಗದ್ಗುರು    ಪೃಥ್ವಿಜ ಶಿವಾಚಾರ್ಯರು
78.    ಶ್ರೀ ಜಗದ್ಗುರು    ವೀರೇಶ್ವರ ಶಿವಾಚಾರ್ಯರು
79.    ಶ್ರೀ ಜಗದ್ಗುರು    ಘಂಟಾಸಿದ್ಧ ಶಿವಾಚಾರ್ಯರು
80.    ಶ್ರೀ ಜಗದ್ಗುರು    ವೃಷಭೇಂದ್ರ ಶಿವಾಚಾರ್ಯರು
81.    ಶ್ರೀ ಜಗದ್ಗುರು    ಸದಾನಂದ ಶಿವಾಚಾರ್ಯರು
82.    ಶ್ರೀ ಜಗದ್ಗುರು    ಗುರುಲಿಂಗ ಶಿವಾಚಾರ್ಯರು
83.    ಶ್ರೀ ಜಗದ್ಗುರು    ರುದ್ರಮುನೀಶ್ವರ ಶಿವಾಚಾರ್ಯರು
84.    ಶ್ರೀ ಜಗದ್ಗುರು    ವೀರಭದ್ರ ಶಿವಾಚಾರ್ಯರು
85.    ಶ್ರೀ ಜಗದ್ಗುರು    ಗಣನಾಥ ಶಿವಾಚಾರ್ಯರು
86.    ಶ್ರೀ ಜಗದ್ಗುರು    ಮಲ್ಲಿಕಾಜರ್ುನ ಶಿವಾಚಾರ್ಯರು
87.    ಶ್ರೀ ಜಗದ್ಗುರು    ಶಕ್ತಿಧರ ಶಿವಾಚಾರ್ಯರು
88.    ಶ್ರೀ ಜಗದ್ಗುರು    ಸಿದ್ಧಲಿಂಗ ಶಿವಾಚಾರ್ಯರು
89.    ಶ್ರೀ ಜಗದ್ಗುರು    ಚಿತ್ಪ್ರಕಾಶ ಶಿವಾಚಾರ್ಯರು
90.    ಶ್ರೀ ಜಗದ್ಗುರು    ಶಂಭುದೇವ ಶಿವಾಚಾರ್ಯರು
91.    ಶ್ರೀ ಜಗದ್ಗುರು    ರುದ್ರಮುನೀಶ್ವರ ಶಿವಾಚಾರ್ಯರು
92.    ಶ್ರೀ ಜಗದ್ಗುರು    ಸಾರಂಗಧರ ಶಿವಾಚಾರ್ಯರು
93.    ಶ್ರೀ ಜಗದ್ಗುರು    ಕುಮಾರದೇವ ಶಿವಾಚಾರ್ಯರು
94.    ಶ್ರೀ ಜಗದ್ಗುರು    ಶಿವಪ್ರಸಾದ ಶಿವಾಚಾರ್ಯರು
95.    ಶ್ರೀ ಜಗದ್ಗುರು    ಚಂದ್ರಶೇಖರ ಶಿವಾಚಾರ್ಯರು
96.    ಶ್ರೀ ಜಗದ್ಗುರು    ಚನ್ನವೀರದೇವವಾಮದೇವ ಶಿವಾಚಾರ್ಯರು
97.    ಶ್ರೀ ಜಗದ್ಗುರು ವಾಮದೇವ ಶಿವಾಚಾರ್ಯರು
98.    ಶ್ರೀ ಜಗದ್ಗುರು    ನೀಲಕಂಠದೇವ ಶಿವಾಚಾರ್ಯರು
99.    ಶ್ರೀ ಜಗದ್ಗುರು    ರೇವಣಸಿದ್ಧ ಶಿವಾಚಾರ್ಯರು
100.    ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯರು
101.    ಶ್ರೀ ಜಗದ್ಗುರು ಚಿದ್ಘನದೇವ ಶಿವಾಚಾರ್ಯರು
102.    ಶ್ರೀ ಜಗದ್ಗುರು ನಾಗನಾಥ ಶಿವಾಚಾರ್ಯರು
103.    ಶ್ರೀ ಜಗದ್ಗುರು ಗಂಗಾಧರ ಶಿವಾಚಾರ್ಯರು
104.    ಶ್ರೀ ಜಗದ್ಗುರು    ಚಂದ್ರಶೇಖರ ಶಿವಾಚಾರ್ಯರು
105.    ಶ್ರೀ ಜಗದ್ಗುರು    ಪೂರ್ಣಜ್ಞಾನ ಶಿವಾಚಾರ್ಯರು
106.    ಶ್ರೀ ಜಗದ್ಗುರು    ಶಂಭುಲಿಂಗ ಶಿವಾಚಾರ್ಯರು
107.    ಶ್ರೀ ಜಗದ್ಗುರು ಚನ್ನವೃಷಭಲಿಂಗ ಶಿವಾಚಾರ್ಯರು
108.    ಶ್ರೀ ಜಗದ್ಗುರು ಜಟಾವೃಷಭಲಿಂಗ ಶಿವಾಚಾರ್ಯರು
109.    ಶ್ರೀ ಜಗದ್ಗುರು ಶಾಂತದೇವ ಶಿವಾಚಾರ್ಯರು
110.    ಶ್ರೀ ಜಗದ್ಗುರು ಗುರುವೃಷಭರಾಜೇಂದ್ರ ಶಿವಾಚಾರ್ಯರು
111.    ಶ್ರೀ ಜಗದ್ಗುರು ಪಂಚಾಕ್ಷರ ಶಿವಾಚಾರ್ಯರು
112.    ಶ್ರೀ ಜಗದ್ಗುರು ಗುರುಸಿದ್ಧಸ್ವಾಮಿ ಶಿವಾಚಾರ್ಯರು
113.    ಶ್ರೀ ಜಗದ್ಗುರು ಚಂದ್ರರಾಜೇಂದ್ರ ಶಿವಾಚಾರ್ಯರು
114.    ಶ್ರೀ ಜಗದ್ಗುರು ಚಂದ್ರಶೇಖರದೇಶಿಕೇಂದ್ರ ಶಿವಾಚಾರ್ಯರು
115.    ಶ್ರೀ ಜಗದ್ಗುರು ಶಿವಾನಂದರಾಜೇಂದ್ರ ಶಿವಾಚಾರ್ಯರು
116.    ಶ್ರೀ ಜಗದ್ಗುರು ವೃಷಭರಾಜೇಂದ್ರ ಶಿವಾಚಾರ್ಯರು
117.    ಶ್ರೀ ಜಗದ್ಗುರು ಪಂಚಾಕ್ಷರ ಶಿವಾಚಾರ್ಯರು
118.    ಶ್ರೀ ಜಗದ್ಗುರು ಅಭಿನವರೇಣುಕ ಶಿವಾನಂದ ಶಿವಾಚಾರ್ಯರು
119.    ಶ್ರೀ ಜಗದ್ಗುರು ಪ್ರಸನ್ನರೇಣುಕ ವೀರಗಂಗಾಧರ ಶಿವಾಚಾರ್ಯರು
120.    ಶ್ರೀ ಜಗದ್ಗುರು ಪ್ರಸನ್ನರೇಣುಕ ವೀರ ರುದ್ರಮುನಿದೇವ ಶಿವಾಚಾರ್ಯರು
121.    ಶ್ರೀ ಜಗದ್ಗುರು ಪ್ರಸನ್ನರೇಣುಕ ವೀರಸೋಮೇಶ್ವರ
                    ರಾಜದೇಶಿಕೇಂದ್ರ ಶಿವಾಚಾರ್ಯರು
ವಿ.ಸೂಚನೆ ಃ ಶ್ರೀ ರಂಭಾಪುರಿ ಈ ಜಗದ್ಗುರು ಪರಂಪರೆಯ ಹೆಸರುಗಳನ್ನು ಶ್ರೀ ಟಿ.ಬಿ.ಬಸವರಾಜಯ್ಯನವರು ಬರೆದ ರತ್ನಗರ್ಭ ಗಣಪತಿ ಮತ್ತು ಚಂದ್ರಮೌಳೀಶ್ವರ ಲಿಂಗ ಎಂಬ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.
   ವೀರಶೈವ ಹಾಗೂ ವೀರಶೈವ ಧರ್ಮದ ಪ್ರಮುಖ ಲಕ್ಷಣಗಳು   
                (ತತ್ತ್ವತ್ರಯಗಳು)
    ಅಷ್ಟಾವರಣವೇ ಅಂಗವಾಗಿ, ಪಂಚಾಚಾರಗಳೇ ಪ್ರಾಣವಾಗಿ,
        ಷಟಸ್ಥಲವೇ ಆತ್ಮವಾಗಿರುವವನೇ ವೀರಶೈವನು.
                ಅಷ್ಟಾವರಣಗಳು   
        ಗುರು,ಲಿಂಗ, ಜಂಗಮ, ಪಾದೋದಕ, ಪ್ರಸಾದ
            ವಿಭೂತಿ, ರುದ್ರಾಕ್ಷಿ, ಮಂತ್ರ

                ಪಂಚಾಚಾರಗಳು
    ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭತ್ಯಾಚಾರ
                ಷಟಸ್ಥಲಗಳು
        ಭಕ್ತ, ಮಾಹೇಶ, ಪ್ರಸಾದಿ, ಪ್ರಾಣಲಿಂಗ, ಶರಣ, ಐಕ್ಯ