panchapeeth.com

Veerashaiva Panchapeeth Parampare

Sri Srishyla Peeth Parampare

ಶ್ರೀ ಶ್ರೀಶೈಲ ಪೀಠದ ಪರಂಪರೆ

    ಶ್ರೀಶೈಲವು  ದ್ವಾದಶಜ್ಯೋತಿಲರ್ಿಂಗಗಳಲ್ಲೊಂದಾದ ಶ್ರೀ ಮಲ್ಲಿಕಾಜರ್ುನ ಶಿವಲಿಂಗ ಹಾಗೂ  ಭ್ರಮರಾಂಬಾ ದೇವಿಯರ ಸನ್ನಿಧಾನದಿಂದ ಸಾಕ್ಷಾತ್ ಭೂಲೋಕದ ಕೈಲಾಸದಂತೆ ಕಂಗೊಳಿಸುತ್ತಿದೆ.  ಪುರಾತನ ಕಾಲದಲ್ಲಿ ಶಿಲಾದಮಹಷರ್ಿಯ ಮಗನಾದ ಪರ್ವತನು ತಂದೆಯಂತೆ ಶ್ರೀಶೈಲ ಕ್ಷೇತ್ರದ ಜ್ಯೋತಿಲರ್ಿಂಗದ ಸನ್ನಿಧಾನದಲ್ಲಿ ಘೋರ ತಪಸ್ಸನ್ನಾಚರಿಸಿದನು.  ಆಗ ಶಿವನು ಪ್ರತ್ಯಕ್ಷನಾಗಿ 'ನಿನಗೆ ಏನು ವರ ಬೇಕು?' ಎಂದು ಕೇಳಲಾಗಿ - ನೀನು ನನಗೆ ಈ ಲಿಂಗದಲ್ಲಿ ದಿನಾಲೂ ಮೂರುಸಾರೆ ದರ್ಶನ ಕೊಡಬೇಕು ಎಂದು ಬೇಡಿಕೊಂಡನು.  ಅದರಂತೆ ಮಲ್ಲಿಕಾಜರ್ುನನು ಪ್ರತಿದಿವಸ ಪರ್ವತನಿಗೆ ದರ್ಶನ ಕೊಡತೊಡಗಿದನು.  ಅಂದಿನಿಂದ ಈ ಲಿಂಗಕ್ಕೆ ಪರ್ವತಮಲ್ಲಯ್ಯಾ ಎಂಬ ರೂಢಿನಾಮವು ಪ್ರಸಿದ್ಧವಾಯಿತು.  ಇದೂ ಅಲ್ಲದೇ ಮಧ್ಯಮ ಪಾಂಡವನಾದ ಅಜರ್ುನನು ಮಲ್ಲಿಗೆ ಹೂಗಳಿಂದ ಪರಮಾತ್ಮನನ್ನು ಪೂಜಿಸಿ, ಸಾಕ್ಷಾತ್ಕರಿಸಿಕೊಂಡಾಗ ತನ್ನ ಭಕ್ತನಾದ ಅಜರ್ುನನ ಹಾಗೂ ಅವನ ಪೂಜೆಯ ಸಾಮಗ್ರಿಯಾದ ಮಲ್ಲಿಗೆ ಹೂವಿನ ಹೆಸರುಗಳನ್ನು ಅಜರಾಮರ ಮಾಡುವುದಕ್ಕಾಗಿ ಪರಮಾತ್ಮನು ಅವೆರಡು ಹೆಸರುಗಳನ್ನು (ಮಲ್ಲಿಕಾ + ಅಜರ್ುನ) ಜೋಡಿಸಿಕೊಂಡು ಮಲ್ಲಿಕಾಜರ್ುನನೆಂಬ ಅಭಿಧಾನದಿಂದ ಕಂಗೊಳಿಸಿದನೆಂಬ ಉಕ್ತಿಯೂ ಪ್ರಸಿದ್ಧವಾಗಿದೆ.
    ಚಂದ್ರಗುಪ್ತ ಮೌರ್ಯನು  ತನ್ನ ಸಹೋದರರಾದ ನವನಂದರನ್ನು ಕೊಲ್ಲಿಸಿದ ಪಾಪದ ಪರಿಣಾಮವಾಗಿ ಕಾಲಾಂತರದಲ್ಲಿ ರಾಜ್ಯಭ್ರಷ್ಟನಾಗಿ ದೇಶ ಸಂಚರಿಸುತ್ತಾ ಶ್ರೀಶೈಲಕ್ಕೆ ಬಂದನು.  ಇವನ ಮಗಳಾದ ಚಂದ್ರಾವತಿಯು ವಿವಾಹವಾಗದೆ ಬ್ರಹ್ಮಚಾರಿಣಿಯಾಗಿದ್ದು, ತಂದೆಯು ಮಾಡಿದ ಪಾಪನಿವೃತ್ತಿಗಾಗಿ ಅನೇಕ ವ್ರತಗಳನ್ನಾಚರಿಸುತ್ತ ಕೊನೆಗೆ ಆ ಕ್ಷೇತ್ರದ ಜ್ಯೋತಿಲರ್ಿಂಗದ ಮಹಿಮೆಯನ್ನರಿತು ಆ ಶಿವಲಿಂಗವನ್ನು ಮಲ್ಲಿಗೆ ಹೂಗಳಿಂದ ಪೂಜಿಸಿ ಶಿವನ ಅನುಗ್ರಹವನ್ನು ಪಡೆದಳೆಂಬ ಕಾರಣದಿಂದಲೂ ಆ ಜ್ಯೋತಿಲರ್ಿಂಗಕ್ಕೆ ಮಲ್ಲಿಕಾಜರ್ುನ ಎಂಬ ಹೆಸರು ಬಂದುದಾಗಿ ಆ ಕ್ಷೇತ್ರಮಹಿಮೆಯನ್ನು ಹೇಳುವ ಗ್ರಂಥಗಳಿಂದ ತಿಳಿದುಬರುತ್ತದೆ. 
ಶ್ರೀಶೈಲದ ದರ್ಶನೀಯ ಸ್ಥಳಗಳು ಃ
    ಶ್ರೀಶೈಲವು ಕೇವಲ ದೇವಸ್ಥಾನದಿಂದ ಮಾತ್ರವಲ್ಲ, ಇದು ಶ್ರೀ ಜಗದ್ಗುರು ಪಂಚಾಚಾರ್ಯರಲ್ಲೊಬ್ಬರಾದ ಶ್ರೀ ಜಗದ್ಗುರು ಪಂಡಿತಾರಾಧ್ಯರ ಭವ್ಯವಾದ ಗುರುಪೀಠದಿಂದಲೂ ಕಂಗೊಳಿಸುತ್ತಿದೆ.  ಇಲ್ಲಿ ಶ್ರೀ ಜಗದ್ಗುರು ಪಂಡಿತಾರಾಧ್ಯರ ಪೀಠದ ಜೊತೆಗೆ ಅನೇಕ ಮಠಗಳು ಪ್ರಾಚೀನ ಕಾಲದಿಂದಲೂ ಕಂಗೊಳಿಸುತ್ತಿವೆ.  ಅವುಗಳಲ್ಲಿ ಶೀಲವಂತರಮಠ, ಘಂಟಾಕರ್ಣಮಠ, ಸಾರಂಗಮಠ, ವಿಭೂತಿಮಠ, ರುದ್ರಾಕ್ಷಿಮಠ, ನಂದಿಕೇಶ್ವರಮಠ, ವಟಸಿದ್ಧಮಠ, ಚಂದ್ರಗುಂಡಮಠ, ಕಮರೀಮಠ ಮುಂತಾದವುಗಳು ಇಂದಿಗೂ ಅಸ್ತಿತ್ವದಲ್ಲಿವೆ.  ಆದರೆ ಇವುಗಳಲ್ಲಿ ಅನೇಕ ಮಠಗಳು ಬಹಳ ಜೀಣರ್ಾವಸ್ಥೆಯಲ್ಲಿವೆ.  ಅಂತೆಯೇ -
        ಶ್ರೀಶೈಲಂ ಶಿಖರೇಶ್ವರಂ ಗಣಪತಿಂ ಶ್ರೀಹಾಟಕೇಶಂ ಪುನಃ | 
        ಸಾರಂಗೇಶ್ವರ ಬಿಂದುತೀರ್ಥಮಮಲಂ ಘಂಟಾರ್ಕ ಸಿದ್ಧೇಶ್ವರಂ ||
        ಗಂಗಾ ಶ್ರೀ ಭ್ರಮರಾಂಬಿಕಾ ಗಿರಿಸುತಾಮಾರಾಮ ವೀರೇಶ್ವರಂ |
        ಶಂಖಂ ಚಕ್ರವರಾಹತೀರ್ಥಮನಿಶಂ ಶ್ರೀಶೈಲನಾಥಂ ಭಜೇ ||
    ಈ ರೀತಿಯಾಗಿ ಶ್ರೀಶೈಲದ ಮಹತ್ವಪೂರ್ಣವಾದ ಸ್ಥಾನಗಳನ್ನು ಪ್ರತಿಪಾದಿಸುತ್ತಿರುವ ಈ ಪದ್ಯವು ಪುರಾತನ  ಕಾಲದಿಂದಲೂ ಪ್ರಚಾರದಲ್ಲಿದೆ.  ಆದ್ದರಿಂದ ಯಾತ್ರಾಥರ್ಿಗಳಾಗಿ ಶ್ರೀಶೈಲಕ್ಕೆ ಹೋದ ಪ್ರತಿಯೊಬ್ಬ ಯಾತ್ರಿಕನೂ ಈ ಕ್ಷೇತ್ರದಲ್ಲಿಯ ಹಾಟಕೇಶ್ವರ (ಅಡಕೇಶ್ವರ), ಶಿಖರೇಶ್ವರ, ಗಣಪತಿ, ಪಂಚಧಾರಾ, ಪಲ್ಲಧಾರಾ, ಭ್ರಮರಾಂಬಾ, ಮಲ್ಲಿಕಾಜರ್ುನ ಮತ್ತು ಶ್ರೀ ಜಗದ್ಗುರು ಪಂಡಿತಾರಾಧ್ಯ ಮುಂತಾದ ಪರಮ ಪವಿತ್ರ ಸ್ಥಾನಗಳ ದರ್ಶನವನ್ನು ಅವಶ್ಯವಾಗಿ ಮಾಡುತ್ತಾನೆ.  ಕಾಶಿಯಲ್ಲಿ ಮರಣ ಹೊಂದಿದರೆ ಮುಕ್ತಿಯನ್ನು ಹೇಳಿದ ಮಹಷರ್ಿಗಳು - ಶ್ರೀಶೈಲ ಶಿಖರೇ ದೃಷ್ಟೇ ಪುನರ್ಜನ್ಮ ನ ವಿದ್ಯತೇ, ಶ್ರೀಶೈಲ ದರ್ಶನಾನ್ಮುಕ್ತಿಃ ಎಂಬುದಾಗಿ ಕೇವಲ ಶ್ರೀಗಿರಿಯ ಶಿಖರ ದರ್ಶನ ಮಾತ್ರದಿಂದ ಮುಕ್ತಿ ಎಂಬುದಾಗಿ ಹೇಳಿ ಈ ಸ್ಥಾನದ ಮಹತ್ವವನ್ನು ಬಹುವಾಗಿ ಹೊಗಳಿದ್ದಾರೆ.
ಶ್ರೀ ಜಗದ್ಗುರು ಪಂಡಿತಾರಾಧ್ಯ ಪೀಠ ಃ
    ಶ್ರೀ ಮಲ್ಲಿಕಾಜರ್ುನ ಹಾಗೂ ಭ್ರಮರಾಂಬಾ ದೇವಸ್ಥಾನಗಳ ಮಧ್ಯದಲ್ಲಿ ಶ್ರೀ ಜಗದ್ಗುರು ಪಂಡಿತಾರಾಧ್ಯ ಪೀಠವು ಕಂಗೊಳಿಸುತ್ತಿದೆ.
        ಸುಧಾಕುಂಡಾಖ್ಯ ಸುಕ್ಷೇತ್ರೇ ಮಲ್ಲಿಕಾಜರ್ುನಲಿಂಗತಃ |
        ಜನನಂ ಪಂಡಿತಾರ್ಯಸ್ಯ ನಿವಾಸಃ ಶ್ರೀಗಿರೌ ಶಿವೇ ||
        ವೃಷಗೋತ್ರಾದಿನಾಥಶ್ಚ ಸಿಂಹಾಸನಪತಿಶ್ಚಯಃ |
        ಪಂಡಿತಾರಾಧ್ಯ ಸನ್ನಾಮಾ ಜಗದ್ಗುರುತಮಶ್ಚ ಸಃ ||
                        (ಸುಪ್ರಭೇದಾಗಮ)
    ಇವೇ ಮೊದಲಾದ ಆಗಮ ವಚನಗಳ ಆಧಾರದಿಂದ ಶ್ರೀ ಜಗದ್ಗುರು ಪಂಡಿತಾರಾಧ್ಯ ಭಗವತ್ಪಾದರು ಶ್ರೀಶೈಲ ಮಲ್ಲಿಕಾಜರ್ುನ ಜ್ಯೋತಿಲರ್ಿಂಗದಿಂದ ದಿವ್ಯದೇಹಧಾರಿಗಳಾಗಿ ಅವತರಿಸಿ ಶ್ರೀಶೈಲ ಕ್ಷೇತ್ರದಲ್ಲಿಯೇ ಧಮರ್ೊಪದೇಶಕ್ಕಾಗಿ ಒಂದು ಪೀಠವನ್ನು ಸಂಸ್ಥಾಪಿಸಿದರು.  ಇದನ್ನು ಶ್ರೀಶೈಲ ಪೀಠ ಅಥವಾ ಸೂರ್ಯಸಿಂಹಾಸನ ಎಂದು ಕರೆಯುತ್ತಾರೆ.  ಈ ಪೀಠಾಚಾರ್ಯರು ಧೇನುಕರ್ಣ ಶಾಖೆಯ ಹಾಗೂ ವೃಷಭ ಗೋತ್ರದ ಅಧಿಪತಿಗಳಾಗಿದ್ದಾರೆ.  ಶಿವನ ತತ್ಪುರುಷಮುಖ ಸಂಜಾತರಾದ ಶ್ರೀ ಜಗದ್ಗುರು ಪಂಡಿತಾರಾಧ್ಯರು ಪ್ರತಿಯೊಂದು ಯುಗದಲ್ಲೂ ಅವತರಿಸಿರುವುದರಿಂದ ಇವರಿಗೆ ಕೃತಯುಗದಲ್ಲಿ ಶ್ರೀ ಜಗದ್ಗುರು ಚತುರಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ಶ್ರೀ ಜಗದ್ಗುರು ಚತುರ್ವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀ ಜಗದ್ಗುರು ಧೇನುಕರ್ಣ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ಜಗದ್ಗುರು ಪಂಡಿತಾರಾಧ್ಯ ಶಿವಾಚಾರ್ಯ ಎಂಬ ನಾಮಗಳು ಪ್ರಸಿದ್ಧವಾಗಿದ್ದವು.
    ಶ್ರೀ ಪಂಚಾಕ್ಷರಿ ಮಹಾಮಂತ್ರಗಳನ್ನು ಒಂದು ಸಾರೆ ಉಚ್ಚರಿಸಿ ಎಲ್ಲ ನಾರಕಿಗಳನ್ನೂ ಉದ್ಧಾರ ಮಾಡಿದ ಶ್ರೀ ಸಾನಂದ ಮಹಷರ್ಿಗಳು ಈ ಪೀಠದ ದ್ವಾಪರಯುಗದ ಆಚಾರ್ಯರಾದ ಶ್ರೀ ಜಗದ್ಗುರು ಧೇನುಕರ್ಣ ಶಿವಾಚಾರ್ಯ ಭಗವತ್ಪಾದರಿಂದ ಶಿವಾದ್ವೈತ (ವೀರಶೈವ ಸಿದ್ಧಾಂತ ತತ್ತ್ವಗಳ) ಉಪದೇಶವನ್ನು ಪಡೆದು ಧನ್ಯರಾಗಿದ್ದಾರೆ.
    ಸನಾತನವಾದ ಈ ಪೀಠದ ಪ್ರಾಚೀನತೆಯನ್ನು ಪೌರಾಣಿಕ ಹಾಗೂ ಐತಿಹಾಸಿಕ ದಾಖಲೆಗಳಿಂದ ಸ್ಥಿರಗೊಳಿಸಬೇಕಾಗುತ್ತದೆ.  ಶ್ರೀ ವ್ಯಾಸಮಹಷರ್ಿಗಳು ಸ್ಕಂದ ಪುರಾಣದ ಶಂಕರ ಸಂಹಿತೆಯ ಉತ್ತರ ಭಾಗದಲ್ಲಿಯ ಶ್ರೀಶೈಲ ಖಂಡದ 85ನೇ ಅಧ್ಯಾಯದಲ್ಲಿ -
        ತಸ್ಮಿನ್ ಶ್ರೀ ಪರ್ವತೇ ಪುಣ್ಯೇ ಸಂಸಾರಾಭಯ ಭೇಷಜೇ |
        ಅಸ್ತೇ ಲಿಂಗಾಂಗಸಂಬಂಧೀ ಸದಾನಂದಾಹ್ವಯೋ ಮುನಿಃ || 62||
        ಸವರ್ೋಪನಿಷದರ್ಥಜ್ಞಃ ಶಿವಧ್ಯಾನಪರಾಯಣಃ |
        ಭಸ್ಮಾವಲಿಪ್ತ ಸವರ್ಾಂಗೋ ರುದ್ರಾಧ್ಯಾಯಜಪಾಶ್ರಯಃ ||63||
        ರುದ್ರಾಕ್ಷಮಾಲಾ ಭರಣೋ ಧೃತಪಾಶುಪತವ್ರತಃ |
        ಅತಿವಣರ್ಾಶ್ರಮೀ ಯೋಗೀ ಜೀವನ್ಮುಕ್ತೋ ಜಗದ್ಗುರುಃ ||64||
     ಈ ರೀತಿಯಾಗಿ ಮಹಾಮಹಿಮಾಶಾಲಿಯಾಗಿ, ಯೋಗಿವರೇಣ್ಯರೂ ಆದ ಶ್ರೀ ಜಗದ್ಗುರು ಸದಾನಂದ ಮಹಾಸ್ವಾಮಿಗಳು ಶ್ರೀಶೈಲ ಪೀಠದ ಜಗದ್ಗುರುಗಳಾಗಿದ್ದರೆಂಬುದನ್ನು ವಣರ್ಿಸುತ್ತಾರೆ.  ಇದೂ ಅಲ್ಲದೇ ಅವರ ಮಹಿಮೆಯನ್ನು ವಣರ್ಿಸುತ್ತಾ -
        ಆಹೂಯ ಪಿಂಗಳಂ ಶಿಷ್ಯಮಿದಂ ವಾಕ್ಯಮಭಾಷತ |
        ಅದ್ಯ ಪ್ರಭೃತಿ ಸಾಧೋ ತ್ವಂ ತ್ರಿಪುಂಡ್ರಂ ಭಸ್ಮನಾವಹ ||112||
        ಸವರ್ಾಂಗೋದ್ಧೂಳನಂ ನಿತ್ಯಂ ಕುರು ಧರ್ಮಪರಾಯಣಃ |
        ಅಗ್ನಿರಿತ್ಯಾದಿಭಿರ್ಮಂತ್ರೈಃ ಶ್ರೀಮತ್ಪಂಚಾಕ್ಷರೇಣ ವಾ ||113||
        ರುದ್ರಮಂತ್ರ ಜಪಾಭ್ಯಾಸಪರೋ ಭವ ಸಮಾಹಿತಃ |
        ಯಾವಜ್ಜೀವಮಿದಂ ದತ್ತಮಿಷ್ಟಲಿಂಗಂ ಸಮರ್ಚಯ ||114||
        ಕರಾಬ್ಜಪೀಠೇ ವಿನ್ಯಸ್ಯ ತದ್ಧ್ಯಾನಾಸಕ್ತ ಮಾನಸಃ |
        ಲಿಂಗಾಂಗಸಂಗಿನಾ ವತ್ಸ ಪುನರ್ಜನ್ಮ ನ ವಿದ್ಯತೇ ||115||

        ಯುಗಪದ್ ಜ್ಞಾನಸಿದ್ಧಿಃಸ್ಯಾತ್ ತತೋ ಮೋಕ್ಷಮವಾಪ್ನುಯಾತ್ |
        ತಸ್ಮಾತ್ತ್ವಂ ಪ್ರಾಣಲಿಂಗಾಂಗ ಸಂಬಂಧೀ ಭವ ಸರ್ವದಾ ||116||
    ಈ ರೀತಿಯಾಗಿ ಶ್ರೀ ಸದಾನಂದ ಜಗದ್ಗುರುಗಳ  ಕತರ್ೃತ್ವಶಕ್ತಿಯನ್ನು ಪ್ರತಿಪಾದಿಸಿರುತ್ತಾರೆ.  ತಾತ್ಪರ್ಯವೇನೆಂದರೆ - ಶ್ವೇತನೆಂಬ ಶ್ರೀಮಂತನ ಮಗನಾದ ಪಿಂಗಳನಿಗೆ ಮಹಾರೋಗವು ಪ್ರಾಪ್ತವಾಗಿರುತ್ತದೆ.  ಆಗ ಹರಪ್ರಿಯನೆಂಬ ಸದ್ಭಕ್ತನಿಂದ ಶ್ವೇತನು ಶ್ರೀ ಜಗದ್ಗುರು ಸದಾನಂದ ಮಹಾಸ್ವಾಮಿಗಳವರ ಮಹಿಮಾತಿಶಯವನ್ನು ತಿಳಿದು ತನ್ನ ಮಗನಾದ ಪಿಂಗಳನನ್ನು ಶ್ರೀಶೈಲಕ್ಕೆ ಕರೆದೊಯ್ದು ಶ್ರೀ ಜಗದ್ಗುರು ಮಹಾಸನ್ನಿಧಿಗೆ ಸಮಪರ್ಿಸುತ್ತಾನೆ.  ಆಗ ಅವರು ಪಾದೋದಕ, ಪ್ರಸಾದಗಳಿಂದ ಅವನ ರೋಗವನ್ನು ನಿವಾರಿಸಿ, ಅವನಿಗೆ ದೀಕ್ಷೆಯನ್ನು ನೀಡಿ, ಇಷ್ಟಲಿಂಗ, ಭಸ್ಮ, ರುದ್ರಾಕ್ಷ ಮತ್ತು ಮಂತ್ರಗಳನ್ನು ಅನುಗ್ರಹಿಸಿ, ಶಿವಧ್ಯಾನದಲ್ಲಿ ಕಾಲಕಳೆಯುವಂತೆ ಅಪ್ಪಣೆ ಕೊಡಿಸುತ್ತಾರೆ.
     ಸ್ಕಂದ ಪುರಾಣದ ಈ ವಿಷಯವನ್ನು ಅವಲೋಕಿಸಿದಾಗ ಶ್ರೀಶೈಲ ಪೀಠವು ಅದೆಷ್ಟು ಪ್ರಾಚೀನವಾದುದೆಂಬುದು ತಿಳಿದುಬರುತ್ತದೆ.  ಶ್ರೀಶೈಲ ಮಲ್ಲಿಕಾಜರ್ುನ ದೇವಸ್ಥಾನ (ಶಿವಾಜಿ ಗೋಪುರ)ದ ಉತ್ತರ ಮಹಾದ್ವಾರದ ಕೋಟೆಯ ಗೋಡೆಯ ಮೇಲೆ  ದಂಡ ಕಮಂಡಲುಧಾರಿಗಳಾದ ಐದು ಮೂತರ್ಿಗಳನ್ನು ಹಾಗೂ ಮುಂಭಾಗದಲ್ಲಿ ಮೇಳದವರು ಇರುವ ಚಿತ್ರವನ್ನು ಈಗಲೂ  ಕಾಣಬಹುದು.  ಇದರಿಂದ ಪಂಡಿತಾರಾಧ್ಯ ಪೀಠದ ಜಗದ್ಗುರುಗಳವರು ಉಳಿದ ನಾಲ್ಕು ಪೀಠದ ಜಗದ್ಗುರುಗಳನ್ನು ಬರಮಾಡಿಕೊಂಡು ಉತ್ಸವ ಮಾಡಿದ ವಿಷಯವು ತಿಳಿದುಬರುತ್ತದೆ.  ಫೋಟೋ ಯುಗವಲ್ಲದ ಅಂದು ಆ ದೃಶ್ಯವನ್ನು ಶಿಲ್ಪಿಯೋರ್ವನು ಗೋಡೆಯ ಮೇಲೆ ಕೆತ್ತಿ ಸ್ಮಾರಕ ಮಾಡಿದ್ದಾನೆ.
    ಅಂದು ಪಂಚಪೀಠಾಧೀಶ್ವರರು ಬಂದುಹೋದ ಸ್ಮಾರಕಗಳಾದ ಪಂಚಮಠಗಳು ಈಗಲೂ ವಿರಾಜಿಸುತ್ತಿವೆ.  ಅವುಗಳಲ್ಲಿ ಘಂಟಾಮಠ (ಘಂಟಾಕರ್ಣಮಠ)ವು ಕೇದಾರ ಪೀಠಕ್ಕೆ ಸಂಬಂಧಪಟ್ಟಿದ್ದು.  ಅಲ್ಲಿ ಈಗಲೂ ಘಂಟಾಕರ್ಣ ಶಿವಾಚಾರ್ಯರ ಮೂತರ್ಿ ಇದೆ.  ಎರಡನೆಯದು ನಂದಿ (ನಂದುಲ) ಮಠವು ಉಜ್ಜಯಿನೀ ಪೀಠಕ್ಕೆ ಸಂಬಂಧಪಟ್ಟದ್ದು.  ಮೂರನೆಯ ರುದ್ರಾಕ್ಷಿ ಮಠವು ಕಾಶೀಪೀಠಕ್ಕೆ ಸಂಬಂಧಪಟ್ಟದ್ದು.  ಅದರಂತೆ ಸಾರಂಗ ಮಠವು ರಂಭಾಪುರೀ ಪೀಠಕ್ಕೆ ಸಂಬಂಧಪಟ್ಟಿದ್ದಾಗಿದೆ - ಎಂಬ ವಿಷಯವನ್ನು ಲಿಂ||ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ವಿಶ್ವಧರ್ಮವಾದ ವೀರಶೈವ ಎಂಬ ಪುಸ್ತಕದ ಪುಟ 5-8ರಲ್ಲಿ ಅಪ್ಪಣೆ ಕೊಡಿಸಿದ್ದಾರೆ.
    ಕ್ರಿ.ಶ. 940ರಲ್ಲಿ ಆಗಿಹೋದ ನನ್ನೆಚೋಳದೇವನೆಂಬ ಆಂಧ್ರರಾಜನು ತನ್ನಿಂದ ವಿರಚಿತವಾದ ಕುಮಾರಸಂಭವವೆಂಬ ಆಂಧ್ರಭಾಷೆಯ ಗ್ರಂಥವನ್ನು ಶ್ರೀ ಜಂಗಮ ಮಲ್ಲಿಕಾಜರ್ುನ ದೇವಾಚಾರ್ಯನಿಗೆ ಸಮಪರ್ಿಸಿ ಆತನ ಅಸದೃಶವಾದ ಪಾಂಡಿತ್ಯವನ್ನೂ, ಮಹಾಯೋಗಿತ್ವವನ್ನೂ ಮತ್ತು ಶ್ರೀಶೈಲ ಸಿಂಹಾಸನದ ಜಗದ್ಗುರುತ್ವವನ್ನೂ ಸ್ಪಷ್ಟವಾದ ಶಬ್ದಗಳಿಂದ ಪ್ರತಿಪಾದಿಸಿರುತ್ತಾನೆ.  ಈ ಗ್ರಂಥವು 1909ರಲ್ಲಿ ರಾಜಮಹೇಂದ್ರ ನಗರ ನಿವಾಸಿಗಳಾದ ಪ್ರೊ. ಎಂ.ವಿ. ರಾಜಕೃಷ್ಣ ಕವಿಗಾರು ಎಂ.ಎ., ಇವರಿಂದ ಪ್ರಕಾಶಿಸಲ್ಪಟ್ಟಿದೆ.
    ಇದೂ ಅಲ್ಲದೆ ಕ್ರಿ.ಶ. 980ರಲ್ಲಿ ಜನಿಸಿ 1040ರಲ್ಲಿ ಶಿವೈಕ್ಯನಾಗಿರಬಹುದಾದ ಮುದೇನೂರಿನ ದಾಸಿಮಯ್ಯನು ಶ್ರೀಶೈಲ ಪೀಠಾಧೀಶ್ವರರಿಂದ ಶಿವಾದ್ವೈತ ತತ್ತ್ವೋಪದೇಶವನ್ನು ಹೊಂದಿದನೆಂದು ಚಿಲಕೂರಿ ನಾರಾಯಣರಾಯರು ತಿಳಿಸಿದ ವಿಷಯವು ಗಮನಾರ್ಹವಾಗಿದೆ.  ಈ ಎಲ್ಲ ದಾಖಲೆಗಳಿಂದ ಶ್ರೀಶೈಲ ಪೀಠವು 10ನೆಯ ಶತಮಾನದ ಪೂರ್ವದಲ್ಲಿಯೇ ಮಹಾವೈಭವಪೂರ್ಣವಾಗಿ ಮೆರೆಯುತ್ತಿತ್ತೆಂದು ವಿದಿತವಾಗುತ್ತದೆ.
    ಅನಾದಿಕಾಲದಿಂದ  ಅನೇಕ ಜಗದ್ಗುರುಗಳು ಈ ಪೀಠದ ಅಧಿಕಾರವನ್ನು ಹೊಂದಿ ಆಂಧ್ರಪ್ರದೇಶ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ವೀರಶೈವ ಧಮರ್ೋಪದೇಶವನ್ನು ಮಾಡಿ ಜನರನ್ನು ಉದ್ಧಾರಗೊಳಿಸಿದ್ದಾರೆ.  ಇವರಲ್ಲಿ ಶ್ರೀ ಜಗದ್ಗುರು ಆದಿಪಂಡಿತಾರಾಧ್ಯರ ನಂತರ ಬಂದ ಕೆಲ ಪ್ರಾಚೀನ ಆಚಾರ್ಯರ ಹೆಸರುಗಳು ಹೀಗಿವೆ :
    ಶ್ರೀ ಜಗದ್ಗುರು ಸದಾನಂದ ಶಿವಾಚಾರ್ಯರು, ಶ್ರೀ ಜಗದ್ಗುರು ಮಲ್ಲಿಕಾಜರ್ುನ  ಶಿವಾಚಾರ್ಯರು, ಶ್ರೀ ಜಗದ್ಗುರು ಗಜಕರ್ಣ ಶಿವಾಚಾರ್ಯರು, ಶ್ರೀ ಜಗದ್ಗುರು ಸಂಗಮ ಶಿವಾಚಾರ್ಯರು, ಶ್ರೀ ಜಗದ್ಗುರು ತ್ರಿರಂಗುಷ್ಠ ಶಿವಾಚಾರ್ಯರು, ಶ್ರೀ ಜಗದ್ಗುರು ಅವ್ಯಯ ಶಿವಾಚಾರ್ಯರು, ಶ್ರೀ ಜಗದ್ಗುರು ಕಲ್ಯಾಣಪಂಡಿತ ಶಿವಾಚಾರ್ಯರು, ಶ್ರೀ ಜಗದ್ಗುರು ಉಮಾಧವ ಶಿವಾಚಾರ್ಯರು, ಶ್ರೀ ಜಗದ್ಗುರು ಪ್ರಭು ಶಿವಾಚಾರ್ಯರು, ಶ್ರೀ ಜಗದ್ಗುರು ಗೋಕರ್ಣ ಶಿವಾಚಾರ್ಯರು, ಶ್ರೀ ಜಗದ್ಗುರು ಮಂಚಣ ಪಂಡಿತಾರಾಧ್ಯರು, ಶ್ರೀ ಜಗದ್ಗುರು ಸಂಕೇತ ಶಿವಾಚಾರ್ಯರು, ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು, ಶ್ರೀ ಜಗದ್ಗುರು ಮಲ್ಲಿಕಾಜರ್ುನ ಪಂಡಿತಾರಾಧ್ಯ ಶಿವಾಚಾರ್ಯರು, ಶ್ರೀ ಜಗದ್ಗುರು ಈಶ್ವರ ಶಿವಾಚಾರ್ಯರು, ಶ್ರೀ ಜಗದ್ಗುರು ಪಟ್ಟದ ಪ್ರಮಥೇಶ್ವರ ಶಿವಾಚಾರ್ಯರು, ಶ್ರೀ ಜಗದ್ಗುರು ಸಿದ್ಧಮಲ್ಲಿಕಾಜರ್ುನ ಶಿವಾಚಾರ್ಯರು ಮತ್ತು  ಶ್ರೀ ಜಗದ್ಗುರು ತ್ರಿಲಿಂಗಚಕ್ರೇಶ್ವರ ಶಿವಾಚಾರ್ಯರು ಎಂಬುವವರು ಖ್ಯಾತನಾಮರಾಗಿದ್ದಾರೆ.
    ಈ ಆಚಾರ್ಯರಲ್ಲಿ ಶ್ರೀ ಜಗದ್ಗುರು ಶ್ರೀಪತಿ ಪಂಡಿತಾರಾಧ್ಯರು, ಶ್ರೀ ಜಗದ್ಗುರು ಮಂಚಣ ಪಂಡಿತಾರಾಧ್ಯರು, ಮತ್ತು ಶ್ರೀ ಜಗದ್ಗುರು ಮಲ್ಲಿಕಾಜರ್ುನ ಪಂಡಿತಾರಾಧ್ಯ - ಈ ಮೂವರು ಆಚಾರ್ಯರೂ ಉದ್ಧಾಮ ಪಂಡಿತರಾಗಿದ್ದರಿಂದ ಇವರು ಆಂಧ್ರ ಪ್ರದೇಶದಲ್ಲಿ ಪಂಡಿತತ್ರಯರೆಂದು ಪ್ರಸಿದ್ಧರಾಗಿದ್ದಾರೆ.
ಶ್ರೀಪತಿ ಪಂಡಿತಾರಾಧ್ಯರು ಃ
    ಕ್ರಿ.ಶ. 1060ರಲ್ಲಿ ಆಗಿಹೋದ ಶ್ರೀಪತಿ ಪಂಡಿತಾರಾಧ್ಯರು ಬ್ರಹ್ಮಸೂತ್ರಗಳಿಗೆ ವೀರಶೈವ ಸಿದ್ಧಾಂತ ಪರವಾದ ಶಕ್ತಿವಿಶಿಷ್ಟಾದ್ವೈತ ಭಾಷ್ಯವನ್ನು ಬರೆದಿದ್ದಾರೆ.  ಅದು ಶ್ರೀಕರಭಾಷ್ಯ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.  ಇವರು ವಿಜಯವಾಟಿಕಾ ಅಥವಾ ಈಗಿನ ಆಂಧ್ರಪ್ರದೇಶದ ಬೆಜವಾಡ ನಗರದ ಜಿಮ್ಮಿದೊಡ್ಡಿ (ಶಮೀವಾಟಿಕಾ) ಎಂಬ ಸ್ಥಳದಲ್ಲಿ ಕುಳಿತು ಶ್ರೀಕರಭಾಷ್ಯವನ್ನು ರಚಿಸಿದ್ದಾರೆ.
    ಶ್ರೀಪತಿ ಪಂಡಿತಾರಾಧ್ಯರು ಬೆಜವಾಡ ಶ್ರೀ ಮಲ್ಲೇಶ್ವರ ದೇವಸ್ಥಾನದ ಸಮೀಪದಲ್ಲಿಯೇ ಒಂದು ಶಮೀವೃಕ್ಷ (ಬನ್ನಿಯ ಗಿಡ)ಕ್ಕೆ ರೇಶ್ಮೆ ವಸ್ತ್ರದಲ್ಲಿ ಅಗ್ನಿಯನ್ನು ಕಟ್ಟಿ ನೇತುಹಾಕಿ ದೇವಷರ್ಿಗಳಿಗಿಂತಲೂ ಶಿವಭಕ್ತರೇ ಶ್ರೇಷ್ಠರೆಂಬ ತಮ್ಮ ಪ್ರತಿಜ್ಞೆಯನ್ನು ಸಾಧಿಸಿ ತೋರಿಸಿದ ಒಂದು ಪವಾಡವು ಬೆಜವಾಡದಲ್ಲಿ ಇಂದಿಗೂ ವಿದ್ಯಮಾನವಾದ ಪಲ್ಲಕೇತು ರಾಜನಿಂದ ಬರೆಯಿಸಲ್ಪಟ್ಟ ಶಿಲಾಶಾಸನದಿಂದ ತಿಳಿದುಬರುತ್ತದೆ. 
    ಶ್ರೀಪತಿ ಪಂಡಿತಾರಾಧ್ಯರ ಈ ಅಗ್ನಿಸ್ತಂಭನ ಮಹಿಮೆಯು ಸಂಸ್ಕೃತ ಬಸವ ಪುರಾಣದಲ್ಲಿ-

        ಇತಿಹಾಸಾಂತರಂ ವಕ್ಷ್ಯೇ ಶೃಣು ರಾಜನ್ ಮಹಾಮತೇ |
        ಶಿವಭಕ್ತೋ ಮಹಾಯೋಗೀ ಶ್ರೀಮಾನ್ ಶ್ರೀಪತಿ ಪಂಡಿತಃ ||
        ಶಾಸ್ತ್ರವಾದಾತಿಕುಶಲೋ ಬ್ರಾಹ್ಮಣಾನಾಂ ಸಭಾಂತರೇ |
        ........................................................................ ||
        ಅನಂತಪಾಲ ಭೂಪಾಲ ಸಮಕ್ಷಂ ಭಕ್ತಿತತ್ಪರಃ |
        ಇತಿ ಪ್ರತಿಜ್ಞಾಂ ಕೃತ್ವಾಶು ನೀತ್ವಾಂಗಾರಚಯಂ ಪರಂ ||
        ಪಟ್ಟ ವಸ್ತ್ರಾಂತರೇ ನ್ಯಸ್ಯಬಬಂಧ ಸದೃಢಂ ಪರಂ |
                            (ಅಧ್ಯಾಯ 37)
    ಈ ರೀತಿಯಾಗಿ ಪ್ರತಿಪಾದಿಸಲ್ಪಟ್ಟಿದೆ.  ಶ್ರೀಪತಿ ಪಂಡಿತಾರಾಧ್ಯರು ಅಗ್ನಿಸ್ತಂಭನ ಮಾಡಿ ಶಿವಭಕ್ತರ ಮಹಿಮೆಯನ್ನು ಹೆಚ್ಚಿಸಿದ ಈ ವಿಷಯವನ್ನು ಶ್ರೀ ಬಸವೇಶ್ವರರು ಬಿಜ್ಜಳ ಮಹಾರಾಜನಿಗೆ ತಿಳಿಯಪಡಿಸಿದ್ದಾರೆ.
    ಇದೇ ಪ್ರಕಾರ ಪಾಲ್ಕುರಿಕೆ ಸೋಮನಾಥನು ಬರೆದ ಆಂಧ್ರ ಬಸವ ಪುರಾಣದಲ್ಲಿಯೂ ಶ್ರೀಪತಿ ಪಂಡಿತರ ಈ ಮಹಿಮೆಯು ವಿವರಿಸಲ್ಪಟ್ಟಿದೆ.  ಅದರಂತೆ ಶ್ರೀ ಮಲ್ಲಿಕಾಜರ್ುನ ಪಂಡಿತರು ತಾವು ಬರೆದ ಶಿವತತ್ತ್ವ ಸಾರಮು ಎಂಬ ತೆಲುಗು ಗ್ರಂಥದಲ್ಲಿಯೂ ಶ್ರೀಪತಿ ಪಂಡಿತರ ಅಗಾಧವಾದ ಮಹಿಮೆಯು ವಣರ್ಿಸಲ್ಪಟ್ಟಿರುವುದರಿಂದ ಶ್ರೀಪತಿ ಪಂಡಿತರು ಶ್ರೀ ಬಸವೇಶ್ವರ, ಶ್ರೀ ಪಾಲ್ಕುರಿಕೆ ಸೋಮನಾಥ ಹಾಗೂ ಶ್ರೀ ಮಲ್ಲಿಕಾಜರ್ುನ ಪಂಡಿತರಿಗಿಂತಲೂ ಪ್ರಾಚೀನರೆಂಬುದು ತಿಳಿದುಬರುತ್ತದೆ. 
ಶ್ರೀ ಮಲ್ಲಿಕಾಜರ್ುನ ಪಂಡಿತಾರಾಧ್ಯರು ಃ
    ಆಂಧ್ರ ಸಾಹಿತ್ಯದಲ್ಲಿ ಹೆಸರುವಾಸಿಗಳಾದ ಇವರು ಆಂಧ್ರಪ್ರದೇಶೀಯರೇ ಆಗಿರುವರು.  ಇವರು ಶಿವತತ್ತ್ವ ಸಾರಮು ಎಂಬ ಗ್ರಂಥವನ್ನು ಬರೆದಿದ್ದಾರೆಂದು ಹಿಂದೆ ಹೇಳಲಾಗಿದೆ. ಇದಲ್ಲದೇ ಗಣ ಸಹಸ್ರನಾಮಾವಳಿ, ಲಿಂಗೋದ್ಭವ ದೇವಗದ್ದಮು, ರುದ್ರಮಹಿಮೆ, ಅಮರೇಶ್ವರಾಷ್ಟಕ ಮತ್ತು ಪರ್ವತ ವರ್ಣನಮು - ಮುಂತಾದ ಗ್ರಂಥಗಳನ್ನು ಬರೆದಿರುವುದಾಗಿ ತಿಳಿದುಬರುತ್ತದೆಂಬ ವಿಚಾರವನ್ನು ಚಿಕ್ಕಮಣ್ಣೂರಿನ ಶ್ರೀ ಷ||ಬ್ರ|| ಗುರುದೇವ ಶಿವಾಚಾರ್ಯರು ನವಿಲಗುಂದ ಇವರು ವ್ಯಕ್ತಪಡಿಸಿದ್ದಾರೆ.
    ಕ್ರಿ.ಶ. 1195ರಲ್ಲಿ ಪಾಲ್ಕುರಿಕೆ ಸೋಮನಾಥನು ಮಲ್ಲಿಕಾಜರ್ುನ ಪಂಡಿತಾರಾಧ್ಯ ಎಂಬ ಹೆಸರಿನ ಇವರ ಚರಿತ್ರೆ ಗ್ರಂಥವನ್ನು ಆಂಧ್ರ ಭಾಷೆಯಲ್ಲಿ ರಚಿಸಿದ್ದಾನೆ.  ಅದರಂತೆ ಶ್ರೀ ಗುರುರಾಜ ಕವಿಗಳು ಶ್ರೀ ಮಲ್ಲಿಕಾಜರ್ುನ ಪಂಡಿತಾರಾಧ್ಯ ಚರಿತಂ ಎಂಬ ಸಂಸ್ಕೃತ ಗ್ರಂಥವನ್ನು ರಚಿಸಿದ್ದಾರೆ.  ಅದೇ ಪ್ರಕಾರ ಶ್ರೀ ನೀಲಕಂಠಾಚಾರ್ಯರು ಪಂಡಿತಾರಾಧ್ಯರ ಚರಿತ್ರೆ ಎಂದು ಕನ್ನಡದಲ್ಲಿ ಇವರ ಚರಿತ್ರೆಯನ್ನು ಬರೆದಿದ್ದಾರೆ.
    ಆಂಧ್ರಪ್ರದೇಶದ ದ್ರಾಕ್ಷಾರಾಮ ಕ್ಷೇತ್ರದ ಭೀಮೇಶ್ವರಲಿಂಗದ ಪ್ರಧಾನ ಅರ್ಚಕರಾದ ಶ್ರೀ ಭೀಮನ ಪಂಡಿತ ಹಾಗೂ ಅವರ ಧರ್ಮಪತ್ನಿ ಗೌರಾಂಬಾದೇವಿಯರ ಪವಿತ್ರ ಗರ್ಭದಲ್ಲಿ ಇವರು ಜನಿಸಿದರೆಂದು ಮಲ್ಲಿಕಾಜರ್ುನ ಪಂಡಿತಾರಾಧ್ಯ ಚರಿತಂ ಎಂಬ ಸಂಸ್ಕೃತ ಗ್ರಂಥದ ದೀಕ್ಷಾ ಪ್ರಕರಣದ 40ನೆಯ ಶ್ಲೋಕದಿಂದ ತಿಳಿದುಬರುತ್ತದೆ.
    ಓರಂಗಲ್ ಗಣಪತಿರಾಯನ ವಂಶಕ್ಕೆ ಸೇರಿದ  ಶ್ರೀ ಪ್ರತಾಪರುದ್ರನು ಕ್ರಿ.ಶ. 1300ರಲ್ಲಿ ಪಟ್ಟಕ್ಕೆ ಬಂದ ನಂತರ ಶ್ರೀಶೈಲ ಸಾಮ್ರಾಜ್ಯವನ್ನು ತನ್ನ ಸ್ವಾಧೀನಪಡಿಸಿಕೊಂಡು ಆ ಸಮಯದಲ್ಲಿ ಶ್ರೀಶೈಲ ಪೀಠಾಧಿಪತಿಗಳಾಗಿದ್ದ ಶ್ರೀ ಜಗದ್ಗುರು ಈಶ್ವರ ಶಿವಾಚಾರ್ಯರಿಗೆ ಶಿಷ್ಯನಾಗಿ ಅವರಿಗೆ 70 ಗ್ರಾಮಗಳ ಉಂಬಳಿಯನ್ನು ಹಾಕಿಕೊಟ್ಟು ಶ್ರೀಶೈಲ ಮಲ್ಲಿಕಾಜರ್ುನ ಸ್ವಾಮಿಯ ನಿತ್ಯಪೂಜೆ, ನೈವೇದ್ಯ, ದೀಪಾರಾಧನೆ ಮುಂತಾದ ಎಲ್ಲ ವ್ಯವಸ್ಥೆಗಳೂ ಶ್ರೀಶೈಲ ಪೀಠಾಧಿಪತಿಗಳಿಂದಲೇ ನಡೆಸಲ್ಪಡಬೇಕು ಎಂಬುದಾಗಿ ಶಿಲಾಶಾಸನವನ್ನು ಬರೆಯಿಸಿದ್ದಾನೆ.  ಈ ಶಾಸನವು ಇಂದಿಗೂ ಶ್ರೀಶೈಲ ಕ್ಷೇತ್ರದಲ್ಲಿ ವಿರಾಜಮಾನವಾಗಿದೆ.  ಭಾರತ ಸಕರ್ಾರದ ಶಿಲಾಲಿಪಿ ಅಧಿಕಾರಿಗಳಾದ ಶ್ರೀ ಕೃಷ್ಣಶಾಸ್ತ್ರಿಗಳು ಈ ವಿಷಯವನ್ನು ವಿಶದವಾಗಿ ವಣರ್ಿಸಿದ್ದಾರೆ.  ಅದರಂತೆ ಶ್ರೀಶೈಲ ಕ್ಷೇತ್ರದ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ರಾಮಪ್ಪನವರೂ ಈ ವಿಷಯವನ್ನು ಒಪ್ಪಿರುವುದಾಗಿ ಶ್ರೀ ಷ||ಬ್ರ|| ಗುರುದೇವ ಶಿವಾಚಾರ್ಯರು ಶ್ರೀಶೈಲ ಪೀಠದ ಇತಿಹಾಸರೂಪವಾದ ಹಸ್ತಪ್ರತಿಯಲ್ಲಿ ಪ್ರತಿಪಾದಿಸಿದ್ದಾರೆ.
    17ನೆಯ ಶತಮಾನದ ಪೆನಗೊಂಡ ಪುರವರಾಧೀಶ್ವರ ಕಾಚಕ್ಷಿಪಾಲನಿಂದ  ದತ್ತವಾಗಿರುವ ತಾಮ್ರಶಾಸನದಿಂದ ಆಗ್ಗೆ ಶ್ರೀಶೈಲ ಸೂರ್ಯಸಿಂಹಾಸನದಲ್ಲಿ ವಿರಾಜಮಾನರಾಗಿದ್ದ ಶ್ರೀ ಜಗದ್ಗುರು ಪ್ರಮಥೇಶ್ವರ ದೇವರು ಅತ್ಯಂತ ಪ್ರಭಾವಶಾಲಿಗಳಾಗಿದ್ದರೆಂಬುದು ತಿಳಿದುಬರುತ್ತದೆ.
    ಇತ್ತಿತ್ತಲಾಗಿ  ಕ್ರಿ.ಶ. 1791ರ ವರೆಗೆ ಶ್ರೀಶೈಲ ಪೀಠಾಧಿಪತಿಗಳಾಗಿದ್ದ ಕೆಲವು ಮಹಾಸ್ವಾಮಿಗಳವರು ಕದಂಬ, ವಿಜಯನಗರ ಮೊದಲಾದ ಮಹಾರಾಜರಿಗೆ ಶಿವತತ್ತ್ವೋಪದೇಶವನ್ನು ಮಾಡಿ ಪ್ರಖ್ಯಾತಿಯನ್ನು ಪಡೆದಿದ್ದರು.  ಹೀಗಿರುವ ಶ್ರೀಶೈಲ ಧರ್ಮಕ್ಷೇತ್ರವು ಕ್ರಿ.ಶ. 1793-94ರಲ್ಲಿ ಮುಸಲ್ಮಾನರ ದಬ್ಬಾಳಿಕೆಗೀಡಾಗಿ ಬಹಳಷ್ಟು ಹಾನಿಯನ್ನು ಅನುಭವಿಸಬೇಕಾಯಿತು.  ಆ ಸಮಯದ ಶ್ರೀಶೈಲ ಪೀಠಾಧಿಪತಿಗಳು ತಮ್ಮ ಧರ್ಮವನ್ನು ಉಳಿಸಿಕೊಳ್ಳಲು ತಮ್ಮ ಮೂಲಸ್ಥಾನವಾದ ಶ್ರೀಶೈಲವನ್ನು ಬಿಟ್ಟು ಕನರ್ೂಲು, ಆತ್ಮಕೂರು ಮತ್ತು ಗುಂತಕಲ್ಲುಗಳಲ್ಲಿ ಮಠಗಳನ್ನು ನಿಮರ್ಿಸಿಕೊಂಡು  ವಾಸಿಸತೊಡಗಿದರು. ಈಗಲೂ ಈ ಮಠಗಳು ಶ್ರೀಶೈಲ ಪೀಠದ ಶಾಖಾಮಠಗಳಾಗಿ ಕಂಗೊಳಿಸುತ್ತಿವೆ.
    ಈ ಪೀಠದ ಗುರುಪರಂಪರೆಯಲ್ಲಿ ಶ್ರೀ ಜಗದ್ಗುರು ಸಿದ್ಧಭಿಕ್ಷಾವತರ್ಿ ಶಿವಾಚಾರ್ಯ ಮಹಾಸ್ವಾಮಿಗಳು ಶಿವಪೂಜಾ ಧುರಂಧರರೂ, ತಪೋನಿಷ್ಠರೂ ಆಗಿದ್ದರು.  ಇವರ ತರುವಾಯ ನಾಗಲೂಟಿ ಭಿಕ್ಷಾವತರ್ಿ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾರೋಹಣ ಮಾಡಿದರು.
    ಇವರು ಕನರ್ೂಲು ಜಿಲ್ಲಾ ನಂದಿಕೊಟಕೂರ ತಾಲ್ಲೂಕು ಇಸಗ್ಯಾಳು ಎಂಬ ಗ್ರಾಮದ ವೀರಮಾಹೇಶ್ವರ ವಂಶಸ್ಥರಾದ ಶ್ರೀ ಸಣ್ಣವೀರಭದ್ರಯ್ಯನವರು ಮತ್ತು ಅವರ ಧರ್ಮಪತ್ನಿ ಸೌ|| ಸಣ್ಣರಾಚಮ್ಮ ಎಂಬ ದಂಪತಿಗಳ ಪವಿತ್ರಗರ್ಭದಲ್ಲಿ ಜನಿಸಿದರು.  ಇವರು ಶಿವಯೋಗ ಸಂಪನ್ನರೂ, ಸಾತ್ವಿಕರೂ ಆಗಿ 32 ವರ್ಷ ಪರ್ಯಂತವಾಗಿ ಶ್ರೀಶೈಲ ಪೀಠದ ಜಗದ್ಗುರುಗಳಾಗಿ ಆಂಧ್ರ, ಮಹಾರಾಷ್ಟ್ರ, ಕನರ್ಾಟಕ ಪ್ರಾಂತಗಳಲ್ಲಿ ಸಂಚರಿಸಿ ಪೀಠದ ಘನತೆ ಗೌರವಗಳನ್ನು ಹೆಚ್ಚಿಸಿದರು.  1918ರಲ್ಲಿ ಕಾಶಿಯಲ್ಲಿ ನೆರವೇರಿದ ಪಂಚಾಚಾರ್ಯರ ಸಮ್ಮೇಳನದಲ್ಲಿ ಇವರು ಭಾಗಿಗಳಾಗಿದ್ದರು.
    ಕಾಲಾಂತರದಲ್ಲಿ  ವಾರ್ಧಕ್ಯದಿಂದ ದೇಹದಲ್ಲಿ ಅಸ್ವಾಸ್ಥ್ಯ ಉಂಟಾಗಲು ವಿಕ್ರಮನಾಮ ಸಂವತ್ಸರ ಆಷಾಢ ಶು|| ದ್ವಿತೀಯ ತಾ|| 7-7-1940ರಂದು ತಮ್ಮ ಗುಂತಕಲ್ಲು ಮಠದಲ್ಲಿ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಬರಮಾಡಿಕೊಂಡು ಅವರ ಸನ್ನಿಧಿಯಲ್ಲಿಯೇ ಮುದೇನೂರು ಬೃಹನ್ಮಠಾಧ್ಯಕ್ಷರಾದ ಪಂ|| ವಾಗೀಶ ಶಿವಾಚಾರ್ಯರಿಗೆ ವಿಧಿಪೂರ್ವಕವಾಗಿ ತಮ್ಮ  ಉತ್ತರಾಧಿಕಾರವನ್ನು ಅನುಗ್ರಹಿಸಿ, ಅವರಿಗೆ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ನೂತನ ನಾಮಕರಣವನ್ನು ಮಾಡಿದರು.  ನಂತರ ವಿಕ್ರಮನಾಮ ಸಂವತ್ಸರ  ಆಷಾಢ ಬ||12 ತಾ 31-7-1940ರಂದು ಶ್ರೀ ಜಗದ್ಗುರು ನಾಗಲೂಟಿ ಭಿಕ್ಷಾವತರ್ಿ ಮಹಾಸ್ವಾಮಿಗಳವರು ಲಿಂಗೈಕ್ಯರಾದರು.
ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು ಃ
    ಶ್ರೀಶೈಲ ಪೀಠದ ಗುರುಪರಂಪರೆಯಲ್ಲಿ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಕಾರ್ಯಕಾಲವು ಸುವರ್ಣಯುಗವೆಂದು ಪರಿಗಣಿಸಲ್ಪಡುತ್ತದೆ.
ಜನನ ಮತ್ತು ಶಿವದೀಕ್ಷೆ ಃ
    ಇವರು ಇಂದಿನ ಹಾವೇರಿ ಜಿಲ್ಲಾ ರಾಣೇಬೆನ್ನೂರು ತಾಲ್ಲೂಕು ಮುದೇನೂರು ಗ್ರಾಮದ ಹಿರೇಮಠದ ಶ್ರೀ ವೇ|| ಬಸಯ್ಯನವರು ಹಾಗೂ ಅವರ ಧರ್ಮಪತ್ನಿ ಸೌ|| ರುದ್ರಮ್ಮ ಎಂಬ ದಂಪತಿಗಳ ಪವಿತ್ರಗರ್ಭದಲ್ಲಿ ಶಾ.ಶ.1830ನೆಯ ಕೀಲಕನಾಮ ಸಂವತ್ಸರ ಜ್ಯೇಷ್ಠಮಾಸದ ಕೃಷ್ಣಪಕ್ಷದ ತ್ರಯೋದಶಿ ತಾ||26-6-1908ನೇ ಶುಕ್ರವಾರದಂದು ಮಧ್ಯಾಹ್ನ 14 ಘಳಿಗೆ 24 ಫಳದ ಶುಭಮುಹೂರ್ತದಲ್ಲಿ ಜನಿಸಿದರು.  ರೋಹಿಣಿ ನಕ್ಷತ್ರದ 2ನೆಯ ಚರಣದಲ್ಲಿ ಇವರು ಜನಿಸಿದ ಕಾರಣ ನಕ್ಷತ್ರ ನಾಮಾನುಸಾರವಾಗಿ ಇವರಿಗೆ ವಾಗೀಶ ಎಂಬ ನಾಮಕರಣವಾಯಿತು.  ಮುಂದೆ ಇವರಿಗೆ 8ನೆಯ ವರ್ಷದಲ್ಲಿ ಶ್ರೀ  ರಂಭಾಪುರೀ ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ  ಎಡೆಯೂರು ಕ್ಷೇತ್ರದಲ್ಲಿ ಶಿವದೀಕ್ಷಾ ಸಂಸ್ಕಾರವಾಯಿತು. 
ವಿದ್ಯಾಭ್ಯಾಸ ಹಾಗೂ ಸಾಹಿತ್ಯ ಸೇವೆ ಃ
    ಪೂಜ್ಯರು ಬಾಣಾವರ, ಬ್ಯಾಡಗಿ, ಬಾಗಿಲುಕೋಟೆ ಮತ್ತು ಅಥಣಿ ಮುಂತಾದ ಸ್ಥಳಗಳಲ್ಲಿ ಪ್ರಾಥಮಿಕ ಕನ್ನಡ ಹಾಗೂ ಸಂಸ್ಕೃತ ಅಧ್ಯಯನವನ್ನು ಮಾಡಿ ಹೆಚ್ಚಿನ ವ್ಯಾಸಂಗಕ್ಕೆ ಪಂ|ಕಾಶೀನಾಥ ಶಾಸ್ತ್ರಿಗಳವರ ಪ್ರೇರಣೆಯಂತೆ ಕಾಶಿಗೆ ಹೋಗಿ ಅಲ್ಲಿಯ ಜ್ಞಾನಪೀಠದ ಶ್ರೀ ವಿಶ್ವಾರಾಧ್ಯ ಗುರುಕುಲದಲ್ಲಿ ಪ್ರವೇಶ ಪಡೆದು, ಸ್ಥಳೀಯ ಟೀಕಮಣಿ ಸಂಸ್ಕೃತ ವಿದ್ಯಾಲಯ ಹಾಗೂ ಶಾರದ ಸಂಸ್ಕೃತ ವಿದ್ಯಾಲಯಗಳಲ್ಲಿ ಪ್ರೌಢ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು.  1927ರಲ್ಲಿ ವಿದ್ಯಾಥರ್ಿ ವೇತನವನ್ನು ಪಡೆದರು.  ವಿದ್ಯಾಥರ್ಿ ಜೀವನದಲ್ಲಿ ಬಂದ ಅನೇಕ ಅಡೆತಡೆಗಳನ್ನು ಸಹಿಸಿಕೊಂಡು ಇವರು 1934ರಲ್ಲಿ ಕಾವ್ಯತೀರ್ಥ ಪರೀಕ್ಷೆ ಪಾಸಾದ ನಂತರ ಸಾಹಿತ್ಯಾಚಾರ್ಯ ಮತ್ತು ವೇದಾಂತಾಚಾರ್ಯ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಿ ಕಾಶಿಯ ಎಲ್ಲ ಪ್ರೌಢ ವಿದ್ಯಾಥರ್ಿಗಳ ಸಹಯೋಗದಿಂದ ಜಂಗಮವಾಡಿ ಮಠದಲ್ಲಿ ಕಾಶೀ ವೀರಶೈವ ವಿದ್ವತ್ ಸಂಘ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರಿಂದ ಮಹಾ ನಾರಾಯಣೋಪನಿಷತ್ತು, ಸಿದ್ಧಾಂತ ಶಿಖಾಮಣಿ (ಮೂಲ), ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತ ಮುಂತಾದ ಗ್ರಂಥಗಳನ್ನು ಪ್ರಕಾಶಪಡಿಸಿದರು.  ಅಲ್ಲದೇ ಸಾಹಿತ್ಯ ದರ್ಪಣ, ಮೃಚ್ಛಕಟಿಕ, ಮುದ್ರಾರಾಕ್ಷಸ ಮುಂತಾದ ಸಂಸ್ಕೃತ ಗ್ರಂಥಗಳನ್ನೂ ಕನ್ನಡಕ್ಕೆ ಅನುವಾದಿಸಿದರು.

ರಾಜಕೀಯ ಸತ್ಯಾಗ್ರಹ ಃ
    ಶ್ರೀ ವಾಗೀಶ ಶಿವಾಚಾರ್ಯರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಮಹಾತ್ಮಾ ಗಾಂಧೀಜಿಯವರ ಸಂಗಡ  ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ 1936ರಲ್ಲಿ ಶ್ರೀ ಗಾಂಧೀಜಿಯವರ ಪ್ರೀತಿಗೆ ಪಾತ್ರರಾದರು.  ಇದಲ್ಲದೇ ಶ್ರೀಗಳವರು ಕ್ರಾಂಗ್ರೆಸ್ ಸೇವಾದಳ (ಸ್ಕೌಟ್)ದಲ್ಲಿ 6 ವರ್ಷ ಸೇವೆ ಸಲ್ಲಿಸಿ ದೇಶದ ಪ್ರಸಿದ್ಧ ನಾಯಕರ ಪರಿಚಯವನ್ನು ಪಡೆದರು.
ಶ್ರೀಶೈಲ ಪೀಠದ ಪಟ್ಟಾಭಿಷೇಕ ಃ
    ಲಿಂ|| ಉಜ್ಜಯಿನೀ ಜಗದ್ಗುರು ಶ್ರೀ  ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದ ಶ್ರೀ ವಾಗೀಶ ಶಿವಾಚಾರ್ಯರು ತಾ||7-7-1940ರಂದು ಗುಂತಲಕಲ್ಲಿನಲ್ಲಿ ಉಜ್ಜಯಿನೀ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ಶ್ರೀಶೈಲ ಜಗದ್ಗುರು ನಾಗಲೂಟಿ ಭಿಕ್ಷಾವತರ್ಿ ಶಿವಾಚಾರ್ಯ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಶ್ರೀಶೈಲ ಸೂರ್ಯಸಿಂಹಾಸನದ ಜಗದ್ಗುರುತ್ವವನ್ನು ಹೊಂದಿ ಶ್ರೀ 1008 ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳೆಂಬ ನೂತನ ನಾಮದಿಂದ ಪ್ರಸಿದ್ಧರಾದರು.  ಶ್ರೀಗಳವರು ಅಧಿಕಾರ ವಹಿಸಿಕೊಂಡ ವರ್ಷವೇ ತಾ||22-2-1941 ಮಹಾಶಿವರಾತ್ರಿಯ ದಿನ ಶ್ರೀಶೈಲ ಕ್ಷೇತ್ರದಲ್ಲಿ ಶ್ರೀಗಳವರ ಅಡ್ಡಪಲ್ಲಕ್ಕಿ ಮಹೋತ್ಸವವು ಮಹಾವೈಭವದಿಂದ ನೆರವೇರಿತು.  ಆ ಸಂದರ್ಭದಲ್ಲಿ  'ಶ್ರೀಶೈಲ ವೀರಶೈವ ಮಹಾಸಭೆ'ಯೊಂದನ್ನು ಪ್ರಾರಂಭಿಸಿದರು.  ಈ ಉತ್ಸವ ಹಾಗೂ ಸಭೆಗಳು ಇಂದಿಗೂ ಪ್ರತಿವರ್ಷ ಶಿವರಾತ್ರಿಯಲ್ಲಿ ಜರುಗುತ್ತಲಿವೆ.
ಪೀಠದ ಜೀಣರ್ೋದ್ಧಾರ ಹಾಗೂ ಶಿಕ್ಷಣ ಸಂಸ್ಥೆಗಳ ನಿಮರ್ಾಣ ಃ
    ಪೂಜ್ಯ ಶ್ರೀಗಳು ಪೀಠಾಧಿಕಾರ ಹೊಂದಿದ ಬಳಿಕ ಕನರ್ಾಟಕ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶಗಳಲ್ಲಿ ಸಂಚರಿಸಿ ಭಕ್ತೋದ್ಧಾರವನ್ನು ಮಾಡುವುದರ ಜೊತೆಗೆ ಭಕ್ತರ ಯಾತ್ರಾ ಸೌಕರ್ಯಕ್ಕಾಗಿ ವಿಶೇಷ ಪ್ರಯತ್ನಮಾಡಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳ ನೆರವಿನಿಂದ 1956ರಲ್ಲಿ ಶ್ರೀಶೈಲಕ್ಕೆ ರಾಜಮಾರ್ಗವನ್ನು ಮಾಡಿಸಿದರು.  ಅಲ್ಲದೇ ಯಾತ್ರಿಕರಿಗೆ ಮಾರ್ಗದಲ್ಲಿ ಸೌಕರ್ಯವನ್ನು ಒದಗಿಸುವುದಕ್ಕಾಗಿ ಗುಂತಕಲ್ ಹಾಗೂ ಆತ್ಮಕೂರಿನಲ್ಲಿ ಯಾತ್ರಾ ನಿವಾಸಗಳನ್ನು ಕಟ್ಟಿಸಿ ಅನ್ನ ದಾಸೋಹದ ವ್ಯವಸ್ಥೆಯನ್ನೂ ಮಾಡಿದ್ದಾರೆ.
    ಅಂದಿನ ಭಾರತದ ರಾಷ್ಟ್ರಪತಿಗಳಾದ ಡಾ|| ಬಾಬುರಾಜೇಂದ್ರ ಪ್ರಸಾದರನ್ನು ಸನ್ನಿಧಿಯವರು ಶ್ರೀಶೈಲಕ್ಕೆ ಬರಮಾಡಿಕೊಂಡು ಭವ್ಯವಾದ ಸ್ವಾಗತವನ್ನು ನೀಡಿ ಹಿಂದೀ ಭಾಷೆಯಲ್ಲಿ ಕ್ಷೇತ್ರದ ಪರಿಚಯ ಹಾಗೂ ಮಹಿಮೆಗಳನ್ನು ತಿಳಿಸಿದರು.  ಅಲ್ಲದೇ ಪಾತಾಳಗಂಗೆಗೆ ಒಂದು ಅಣೆಕಟ್ಟನ್ನು ಕಟ್ಟಿಸಿ ವಿದ್ಯುದಾಗರವನ್ನು ಮಾಡಿಸಿಕೊಡುವಂತೆ ಕ್ಷೇತ್ರೋದ್ಧಾರ ಕಮಿಟಿಯವರಿಂದ ಒಪ್ಪಿಗೆಯನ್ನು ಪಡೆದರು.  ಆ ಕಾರ್ಯವು ಈಗ ಪೂರ್ಣಗೊಂಡಿದೆ.  ಈ ಜಲವಿದ್ಯುತ್ ಯೋಜನೆಯಿಂದ ಆಂಧ್ರಪ್ರದೇಶವೆಲ್ಲ ಬೆಳಗಿದೆ.
    ಇದೇ ಪ್ರಕಾರ ಡಾ|| ಎಸ್. ರಾಧಾಕೃಷ್ಣನ್ರೂ ತಾವು ರಾಷ್ಟ್ರಪತಿಗಳಿದ್ದಾಗ ಶ್ರೀಶೈಲಕ್ಕೆ ಆಗಮಿಸಿ ಪೂಜ್ಯ ಜಗದ್ಗುರುಗಳಿಂದ ಆಶೀವರ್ಾದ ಪಡೆದು ಹೋಗಿದ್ದಾರೆ.
    ಶ್ರೀಶೈಲ ಮಲ್ಲಿಕಾಜರ್ುನ ಹಾಗೂ ಭ್ರಮರಾಂಬಾ ದೇವಸ್ಥಾನಗಳ ಮಧ್ಯದಲ್ಲಿ ಲಿಂ|| ಶ್ರೀಶೈಲ ಜಗದ್ಗುರು ಜಂಗಮ ಮಲ್ಲಿಕಾಜರ್ುನ ಶಿವಾಚಾರ್ಯ ಮಹಾಸ್ವಾಮಿಗಳವರ ಸಮಾಧಿಯ ಮಗ್ಗುಲಲ್ಲಿ ಪ್ರಾಚೀನ ಕಾಲದಿಂದಲೂ ಬಹಳ ಜೀಣರ್ಾವಸ್ಥೆಯಲ್ಲಿದ್ದ ಶ್ರೀ ಜಗದ್ಗುರು ಪಂಡಿತಾರಾಧ್ಯ ಪೀಠವು ಬೆಂಗಳೂರು ಭಕ್ತರ ವಿಶೇಷ ಧನಸಹಾಯದಿಂದ ನೂತನವಾಗಿ ನಿಮರ್ಾಣಗೊಂಡಿದೆ.
    1961ರಲ್ಲಿ ದೇವಾಲಯಗಳ ಕಮೀಶನರು ಶ್ರೀಶೈಲದಲ್ಲಿ ಪಂಡಿತಾರಾಧ್ಯ ಪೀಠವೇ ಇಲ್ಲವೆಂದು ಅಜ್ಞಾನಪೂರಿತವಾದ ವಾದವನ್ನು ಮಾಡಲು 1967ರಲ್ಲಿ ಆಂಧ್ರ ಸಕರ್ಾರದ ರಾಜೀ ಒಪ್ಪಿಗೆಯಂತೆ ಕನರ್ೂಲು ಜಿಲ್ಲಾ ನ್ಯಾಯಾಧೀಶರ ಕೋಟರ್ಿನಲ್ಲಿ ಪಂಡಿತಾರಾಧ್ಯ ಪೀಠ ಮತ್ತು ಶ್ರೀ ಜಗದ್ಗುರು ಜಂಗಮ ಮಲ್ಲಿಕಾಜರ್ುನ ಮಹಾಸ್ವಾಮಿಗಳವರ ಸಮಾಧಿಗಳು ಶ್ರೀಶೈಲ ಮಲ್ಲಿಕಾಜರ್ುನ ದೇವಸ್ಥಾನದಲ್ಲಿ ಇರುವುದಾಗಿಯೂ, ಶ್ರೀಶೈಲ ಸೂರ್ಯಸಿಂಹಾಸನದ ಪಂಡಿತಾರಾಧ್ಯ ಶಿವಾಚಾರ್ಯರೇ ದೇವಾಲಯದ ಪೀಠಾಧಿಪತಿಗಳೆಂದೂ ಮತ್ತು ಶ್ರೀಶೈಲ ಜಗದ್ಗುರುಗಳಿಗೆ ಪಾದಕಾಣಿಕೆಗಳು ಸಲ್ಲಬಹುದೆಂದೂ ತೀಮರ್ಾನಿಸಿದರು. (ಔ.ಖ. ಓ0. 61/ 64; ಔ.ಖ.ಓ. 24/67)
    ಶ್ರೀಶೈಲ ಕ್ಷೇತ್ರದ ಧಮರ್ಾಧಿಕಾರಿಗಳಾದ ಪೂಜ್ಯರು ಶ್ರೀಶೈಲಕ್ಕೆ ನಿತ್ಯವೂ ಬರುವ ಯಾತ್ರಾಥರ್ಿಗಳಿಗೆ ವಸತಿ ಹಾಗೂ ಪ್ರಸಾದದ ಸೌಕರ್ಯಕ್ಕಾಗಿ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ನಿತ್ಯಾನ್ನ ಮಂದಿರ ಹಾಗೂ ಶ್ರೀಶೈಲ ಜಗದ್ಗುರು ಯಾತ್ರಾ ನಿವಾಸ ಮಂದಿರಗಳನ್ನು ನಿಮರ್ಾಣ ಮಾಡಿ ಭಕ್ತಾದಿಗಳಿಗೆ ಬಹಳಷ್ಟು ಅನುಕೂಲತೆಗಳನ್ನು ಮಾಡಿಕೊಟ್ಟಿದ್ದಾರೆ.
    ಬಹುಭಾಷಾ ವಿಶಾರದರೂ, ಸಕಲಶಾಸ್ತ್ರ ಪರಿಣತರೂ, ವರಕವಿಗಳೂ ಆದ ಪೂಜ್ಯರು ಅನೇಕ ಕಡೆಗಳಲ್ಲಿ ವಿದ್ಯಾಕೇಂದ್ರಗಳನ್ನು ಪ್ರಾರಂಭಿಸಿ ಜನತೆಯಲ್ಲಿ ಶಿಕ್ಷಣ ಪ್ರಸಾರವಾಗಲು ಅವಕಾಶ ಮಾಡಿಕೊಟ್ಟಿದ್ದಾರೆ.  ಶ್ರೀ ಮಹಾಸನ್ನಿಧಿಯವರು ಸಂಸ್ಥಾಪಿಸಿದ ಗುಂತಕಲ್ಲು ಶ್ರೀ ಪಂಡಿತಾರಾಧ್ಯ ಹೈಯರ್ ಸೆಕೆಂಡರಿ ಸ್ಕೂಲ್, ಶಿವಮೊಗ್ಗ ಜಿಲ್ಲೆಯ ಸಂತೆಬೆನ್ನೂರು ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ  ಹೈಸ್ಕೂಲ್, ಶಿರಾಳಕೊಪ್ಪದಲ್ಲಿ ಶ್ರೀಶೈಲ ಜಗದ್ಗುರು ಪಂಚಮಠದ ಹಾಸ್ಟೆಲ್, ಹರಿಹರ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠ ಹಾಗೂ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಕಾಲೇಜುಗಳು ಬಹು ಪ್ರಖ್ಯಾತವಾಗಿವೆ.
    1965ರಲ್ಲಿ ಗುಂತಕಲ್ಲಿನಲ್ಲಿ ನೆರವೇರಿದ ಪಟ್ಟಾಧಿಕಾರದ ರಜತ ಮಹೋತ್ಸವದ ಸಂದರ್ಭದಲ್ಲಿ ಪಂಚಾಚಾರ್ಯ ಸಮ್ಮೇಳನವನ್ನು ನೆರವೇರಿಸಿದರು.  ಕನರ್ಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ಸಾಹಿತ್ಯ ಗೋಷ್ಠಿಗಳನ್ನು ಏರ್ಪಡಿಸಿ ಆ ಸಂದರ್ಭದಲ್ಲಿ ಭಾಷಾ ಸೌಹಾರ್ದಕ್ಕೆ ನಾಂದಿ ಹಾಡಿದರು.
    ಪೂಜ್ಯ ಜಗದ್ಗುರುಗಳವರ ವ್ಯಕ್ತಿತ್ವ ಹಾಗೂ ಕತರ್ೃತ್ವದ ಬಗ್ಗೆ ಅದೆಷ್ಟು ಬರೆದರೂ ಕಡಿಮೆಯೇ! 16-2-1981ರಂದು ಪೂಜ್ಯರ ಸುವರ್ಣ ಮಹೋತ್ಸವವು ಶ್ರೀಶೈಲ ಕ್ಷೇತ್ರದಲ್ಲಿ ಮಹಾವೈಭವದಿಂದ ನೆರವೇರಿತು.  ಅದೇ ಸಂದರ್ಭದಲ್ಲಿ ಬಿಜಾಪುರ ಜಿಲ್ಲಾ ಬಸವನ ಬಾಗೇವಾಡಿಯ ಕುಲೀನ ಮಾಹೇಶ್ವರ ವಂಶದ ಶ್ರೀ ಉಮಾಪತಿದೇವರು ಎಂಬ ಹೆಸರಿನ ವಿದ್ಯಾವಿನಯ ಸಂಪನ್ನರಾದ ಸುಯೋಗ್ಯ ಮರಿದೇವರಿಗೆ ರಂಭಾಪುರಿ, ಕಾಶಿ ಮತ್ತು ಉಜ್ಜಯಿನಿ ಜಗದ್ಗುರುಗಳವರ ದಿವ್ಯ ಸನ್ನಿಧಿಯಲ್ಲಿ ಜಗದ್ಗುರು ಪಟ್ಟಾಧಿಕಾರವನ್ನು ಅನುಗ್ರಹಿಸಿ ಶ್ರೀ 1008 ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳೆಂಬ ನೂತನ ನಾಮಕರಣವನ್ನು ಮಾಡಿದರು.
ಶ್ರೀ ಜಗದ್ಗುರುಗಳವರ ಸಮದಶರ್ಿತ್ವ ಃ
    ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಬಾಲ್ಯದಿಂದಲೇ ಸಮದಶರ್ಿಗಳಾಗಿದ್ದರು.  ವೀರಶೈವ ಸಮಾಜವನ್ನು ದೂಷಿಸುವ ಗುರು-ವಿರಕ್ತವಾದವನ್ನು ನಿವಾರಿಸಲು ಬಹಳಷ್ಟು ಶ್ರಮಿಸಿದರು.
        ಬೆಳಗು ಪಂಚಾಚಾರ್ಯ ತತ್ತ್ವವೆ |
        ಬೆಳಗು ಬಸವನ ಭಕ್ತಿ ತತ್ತ್ವವೆ |
        ಬೆಳಗು ವಿರತರ ಶೂನ್ಯ ತತ್ತ್ವವೆ ಸರ್ವಸಮತೆಯೊಳು ||
        ಬೆಳಗು ಜಂಗಮ ವಂಶ ದೀಪವೆ |
        ಬೆಳಗು ಭಕ್ತರ ವಂಶ ದೀಪವೆ |
        ಬೆಳಗು ದ್ವೇಷಾಸೂಯೆಗಳ ಕಡುಕತ್ತಲೆಯ ಕಳೆದು ||
    ಪೂಜ್ಯರ ಹೃದಯ ತುಂಬಿ ಹೊರಹೊರಟ ಅವರ ಈ ಉದ್ಗಾರ ಇನ್ನು ಮೇಲಾದರೂ ಜನತೆಯಲ್ಲಿ ಸಮತೆಯನ್ನು ಮೂಡಿಸಲಿ.
ಸೂಯರ್ಾಸ್ತ ಃ
    ಅಖಂಡವಾಗಿ 46 ವರ್ಷಗಳ ಪರ್ಯಂತ ಪೀಠ ಹಾಗೂ ಸಮಾಜೋದ್ಧಾರ ಕಾರ್ಯಗಳನ್ನು ಮಾಡಿ ವೃದ್ಧಾಪ್ಯದಿಂದ ಬಹು ಬಳಲಿದ ಪೂಜ್ಯ ಜಗದ್ಗುರುಗಳು 15-9-1986ನೆಯ ಸೋಮವಾರ ಪ್ರಾತಃಕಾಲ ತಮ್ಮ 78ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು.  ಪೂಜ್ಯರ ಲಿಂಗೈಕ್ಯದಿಂದ ಸೂರ್ಯಸಿಂಹಾಸನದ ವೀರಶೈವ ಸೂರ್ಯನೇ ಅಸ್ತವಾದಂತಾಗಿದೆ.  ಪೂಜ್ಯರ ಕ್ರಿಯಾಸಮಾಧಿಯು ಅವರ ಪೂರ್ವದ ಸಂಕೇತದ ಮೇರೆಗೆ ದಾವಣಗೆರೆಯ ಪಂಚಾಚಾರ್ಯ ಮಂದಿರದಲ್ಲಿಯೇ ಮಾಡಲ್ಪಟ್ಟಿದೆ.  ಈ ಸ್ಥಾನದಲ್ಲಿ ಶ್ರೀಮತಿ ಶ್ಯಾಮನೂರು ಸಾವಿತ್ರಮ್ಮ ಕಲ್ಲಪ್ಪ ಕಲ್ಯಾಣ ಮಂದಿರ, ಪಂಚಾಚಾರ್ಯರ ದೇವಮಂದಿರ, ಭ್ರಮರಾಂಬಾ ಪಾಕಶಾಲೆ, ಪಾತಾಳಗಂಗಾ ಹೆಸರಿನ ಜಲಾಶಯ (ಬಾವಿ) ಮುಂತಾದವುಗಳು ತಯಾರಾಗಿರುವುದರಿಂದ ಇದೊಂದು ಪ್ರತಿ ಶ್ರೀಶೈಲದಂತೆ ಕಂಗೊಳಿಸುತ್ತಲಿದೆ.  ಅಲ್ಲದೇ ಲಿಂಗೈಕ್ಯ ಜಗದ್ಗುರುಗಳ ಸಮಾಧಿ ಸ್ಥಳದಲ್ಲಿ ಅನೇಕ ಭಕ್ತರ ಅನುಪಮ ಕೊಡುಗೆಯಿಂದ ಅಮೃತಶಿಲಾಮಯ ಸುಂದರ ಮಂದಿರ ನಿಮರ್ಾಣವಾಗಿದೆ. 
ಸೂಯರ್ೋದಯ ಃ
    ಸಮನ್ವಯಾಚಾರ್ಯರೆನಿಸಿದ್ದ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಬಹು ಸೂಕ್ಷ್ಮಮತಿಗಳು, ಗುಣಗ್ರಾಹಿಗಳು ಹಾಗೂ ದೂರದಶರ್ಿತ್ವವುಳ್ಳವರು.  ಅಂತೆಯೇ ಶ್ರೀ ಸನ್ನಿಧಿಯು ಜೀವಂತವಾಗಿರುವಾಗಲೇ ಯೋಗ್ಯವ್ಯಕ್ತಿಯನ್ನು ಆಯ್ದುಕೊಂಡು ವಿಪತ್ತಿಗೆ ಹೆಸರಾದ ಶ್ರೀಶೈಲ ಪೀಠದ ಆಪತ್ತನ್ನು ದೂರೀಕರಿಸಬಲ್ಲ ತಾಕತ್ತನ್ನು ತುಂಬುವ ನಿಧರ್ಾರ ಮಾಡಿದರು.  ಹತ್ತು - ಹಲವು ವ್ಯಕ್ತಿಗಳ ಅಥರ್ಾತ್ ವಟುಗಳ, ದೇಶಿಕರ, ಶಿವಾಚಾರ್ಯರ ಒಳಹೊರಗುಗಳನ್ನು ಅವಲೋಕಿಸಿ ಯೋಗ್ಯತೆಯನ್ನು ಗುರುತಿಸಲು ಸತತ ಪ್ರಯತ್ನ ನಡೆಸಿದರು.  ಒಬ್ಬಿಬ್ಬರು ಯೋಗ್ಯರೆನಿಸಿದರೂ ಅವರಿಗೆ ಶ್ರೀಗಿರಿ ಪೀಠವನ್ನು ಆಳುವ ಭಾಗ್ಯವಿರಲಿಲ್ಲವೇನೋ? ಅವರೇ ಒಲ್ಲೆ ಎಂದು ಹಿಂಜರಿದರು.  ಹಾಗೆ ಶೋಧ ಮಾಡುತ್ತಿರುವಾಗ ಕಾಶೀ ಜಗದ್ಗುರು ಶ್ರೀ ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ಪತ್ರವನ್ನು ಕೊಟ್ಟು ಶ್ರೀಉಮಾಪತಿ ದೇವರನ್ನು ಹರಿಹರಕ್ಕೆ ಕಳಿಸಿದರು.  ಹರಿಹರ ಮುಕ್ಕಾಂನಲ್ಲಿದ್ದ ಶ್ರೀಶೈಲ ಜಗದ್ಗುರುಗಳವರು ಶ್ರೀ ಉಮಾಪತಿ ದೇವರನ್ನು ಆಪಾದಮಸ್ತಕ ಪರೀಕ್ಷಿಸಿ ಮುಗುಳುನಗೆ ನಕ್ಕರು.  ಆ ಸಮಯಕ್ಕೆ ದಾವಣಗೆರೆಯ ಶ್ರೀ ಅಭಿನವ ಜಗದ್ಗುರು ರೇಣುಕಮಂದಿರದಲ್ಲಿ ಮುಕ್ಕಾಂ ಮಾಡಿದ್ದ ಶ್ರೀಮದ್ರಂಭಾಪುರಿ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರ ಸನ್ನಿಧಿಗೆ ಕಳುಹಿಸಿಕೊಟ್ಟರು.  ಅವರ ತೀಕ್ಷ್ಣದೃಷ್ಟಿ ಉಮಾಪತಿ ದೇವರ ಮೈಮನಗಳನ್ನು ಕಂಪಿಸುವಂತೆ ಮಾಡಿತು.  ಸನ್ನಿಧಿಯವರ ದಿವ್ಯದೃಷ್ಟಿ-ದರ್ಶನ ರೋಮಾಂಚನಗೊಳಿಸಿತು.  ಏನನ್ನೂ ಮಾತನಾಡದೆ ಶ್ರೀ ರಂಭಾಪುರಿ ಸನ್ನಿಧಿಯವರು ಉಮಾಪತಿ ದೇವರನ್ನು ಬೀಳ್ಕೊಟ್ಟರು.
    ಅನಂತರ ಉಭಯ ಜಗದ್ಗುರುಗಳು ಆಪ್ತಾಲೋಚನೆ ಮಾಡಿ ಸೂರ್ಯಸಿಂಹಾಸನದ ಆಧಿಪತ್ಯಕ್ಕೆ ತಕ್ಕ ವ್ಯಕ್ತಿಯೆಂದು ಉಮಾಪತಿ ದೇವರನ್ನು ಗುರುತಿಸಿದರು.
ಬಸವಭೂಮಿಯ ಯಶೋಮೂತರ್ಿ ಃ
    ಬಿಜಾಪುರ ಜಿಲ್ಲೆಯ ಬಾಗೇವಾಡಿಯು ಜಗಜ್ಯೋತಿ ಶ್ರೀ ಬಸವೇಶ್ವರನಿಗೆ ಜನ್ಮವಿತ್ತ ಪುಣ್ಯ ಭೂಮಿ.  ಮಾದರಸ - ಮಾದಲಾಂಬಿಕೆ ಎಂಬ ಶೈವಬ್ರಾಹ್ಮಣ ದಂಪತಿಗಳ ಸುಪುತ್ರನಾಗಿ ಜನಿಸಿದ ಬಸವಣ್ಣ ಕೂಡಲಸಂಗಮ ಕ್ಷೇತ್ರದ ಸಾರಂಗ ಮಠದ ಶ್ರೀ ಜಾತವೇದಮುನಿ ಶಿವಾಚಾರ್ಯ ಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರನಾಗಿ ಲಿಂಗದೀಕ್ಷೆ ಪಡೆದು ಸಂಗಮನಾಥನ ಸತ್ಪುತ್ರನೆನಿಸಿದನು.  ಆ ಪುಣ್ಯಪುರುಷನ ಅವತಾರದ ನಂತರ ಬಾಗೇವಾಡಿ 'ಬಸವನ ಬಾಗೇವಾಡಿ' ಎಂಬ ನಾಮಾಂಕಿತ ಪಡೆಯಿತು.
    ಬಸವನ ಬಾಗೇವಾಡಿಯ ಹಿರಿಯ ಮಠದ ಶ್ರೀ ವೇ| ಸಂಗಯ್ಯ ಸ್ವಾಮಿಗಳು ಅವರ ಧರ್ಮಪತ್ನಿ ಶ್ರೀಮತಿ ಶಿವಲಿಂಗಮ್ಮನವರ ಸತ್ಪುತ್ರರಾಗಿ ದಿನಾಂಕ 10-3-1949ರಂದು ಜನಿಸಿದ ಬಾಲಕನೇ ಈ ಉಮಾಪತಿ.  ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲೇ ಮುಗಿಯಿತು.  ಉಮಾಪತಿಯ ತಾತ ಶ್ರೀ ವೇ| ವಿರೂಪಾಕ್ಷಯ್ಯನವರು ಮೊಮ್ಮಗನ ಹೃದಯ ಭೂಮಿಯಲ್ಲಿ ಧರ್ಮಸಿದ್ಧಾಂತಗಳ ಬೋಧನೆಯ ಬೀಜಗಳನ್ನು ಬಿತ್ತಿದರು.  ತಾರುಣ್ಯದಲ್ಲಿ ಶ್ರೀ ಶಿವಯೋಗಿಮಂದಿರದ, ಹುಬ್ಬಳ್ಳಿಯ ಶ್ರೀ ಮೂರುಸಾವಿರಮಠ - ಮುಂತಾದ ಧರ್ಮಕೇಂದ್ರಗಳಲ್ಲಿ ಶಿವಯೋಗ ಸಾಧನೆಗೈಯುತ್ತ ಪ್ರೌಢಶಿಕ್ಷಣ ಪಡೆದರು.  ಹುಬ್ಬಳ್ಳಿಯ ಹೊಸಮಠದ ಶ್ರೀ ಶಿವಬಸವ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸಂಸ್ಕೃತ ಭಾಷೆ ಹಾಗೂ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನಗೈಯುತ್ತಿರುವಾಗಲೇ ಇವರ ಅಧ್ಯಯನಾಸಕ್ತಿಯನ್ನು  ಕಂಡು ನಾನು ಅವಕ್ಕಾದೆನು.  ಅನಂತರ ಶ್ರೀ ಉಮಾಪತಿ ದೇವರು ಸ್ನಾತಕೋತ್ತರ ಅಧ್ಯಯನಕ್ಕಾಗಿ ಕಾಶಿಗೆ ಹೋಗಿ ಡಾ| ಸಂಪೂಣರ್ಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸೇರ್ಪಡೆಯಾದರು.  ಬಹಳ ಪರಿಶ್ರಮದಿಂದ ಬಿಡುವಿನ ವೇಳೆಯಲ್ಲಿ ಪುರಾಣ ಪ್ರವಚನಾದಿ ಕಾರ್ಯಗೈದು ಹಣ ಸಂಪಾದಿಸಿ ಆರೇಳು ವರ್ಷ ಉನ್ನತ ಶಿಕ್ಷಣ ಪಡೆದರು.  ಸಾಹಿತ್ಯಾಚಾರ್ಯ, ಪ್ರಯಾಗ ವಿಶ್ವವಿದ್ಯಾಲಯದ ಸಾಹಿತ್ಯ ರತ್ನ, ಕಾಶೀ ಹಿಂದೂ ವಿಶ್ವವಿದ್ಯಾಲಯದ ಎಂ.ಎ. ಮುಂತಾದ ಪದವಿಗಳಿಂದ ಭೂಷಿತರಾದರು.
ಶ್ರೀಗಿರಿ ರಾಜ ಃ
    ಶ್ರೀ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯರು ಶ್ರೀ ಕಾಶೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯರು ಮತ್ತು ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಶಿವಾಚಾರ್ಯರು ಮತ್ತು  ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಮಹಾಸನ್ನಿಧಾನಂಗಳಲ್ಲಿ ಶ್ರೀ  ಉಮಾಪತಿ ದೇವರು ದಿನಾಂಕ 16-2-1981ರಂದು ಪಟ್ಟಾಭಿಷಕ್ತರಾಗಿ ಶ್ರೀಗಿರಿರಾಜ ಸೂರ್ಯಸಿಂಹಾಸನಾರೋಹಣ ಮಾಡಿದರು.  ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯರು ಮುದ್ರಾಧಾರಣ - ಕಿರೀಟಧಾರಣಾದಿ ವಿಧಿ-ವಿಧಾನಗಳನ್ನು ನೆರವೇರಿಸಿ ಇವರಿಗೆ ಶ್ರೀ 1008 ಶ್ರೀಶೈಲ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ಅಭಿಧಾನವನ್ನು ದಯಪಾಲಿಸಿದರು.
    ನೂತನ ಜಗದ್ಗುರುಗಳವರು ಹಿರಿಯ ಜಗದ್ಗುರುಗಳವರ ದಕ್ಷ ಮಾರ್ಗದರ್ಶನದಲ್ಲಿ ಸುಮಾರು 5 ವರ್ಷಗಳ ಕಾಲ ವಿಶೇಷ ತರಬೇತಿಯನ್ನು ಪಡೆದು ಮೋಡಗಳ ಮುಸುಕಿನಿಂದ ಹೊರ ಬಂದ ಸೂರ್ಯನಂತೆ ತೇಜೋಮೂತರ್ಿಗಳಾದರು.  ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸನ್ನಿಧಿಯವರು 15-9-1986ರಲ್ಲಿ ಲಿಂಗೈಕ್ಯರಾದ ನಂತರ ತಾಯಿಯನ್ನು ಕಳೆದುಕೊಂಡ ತಬ್ಬಲಿಯಂತಾದ ವರ್ತಮಾನ ಜಗದ್ಗುರುಗಳವರು ಒಂದೆರಡು ತಿಂಗಳು ಕಳೆದ ನಂತರ ಮೈಕೊಡವಿ ಮೇಲೆದ್ದು ಧರ್ಮ ಜಾಗೃತಿಯಾತ್ರೆಗೆ ಸನ್ನದ್ಧರಾದರು.  ವಿಶೇಷವಾಗಿ ಶ್ರೀಶೈಲ ಪೀಠದ ವ್ಯಾಜ್ಯದಲ್ಲಿ ಯಶೋದುಂದುಭಿ ಮೊಳಗಿಸುವ ಸಾಹಸಕ್ಕೆ ಕೈ ಹಾಕಿದರು.  ಹಿರಿಯ ಜಗದ್ಗುರುಗಳವರ ಆಶೀವರ್ಾದ, ಭ್ರಮರಾಂಭ-ಮಲ್ಲೇಶ್ವರರ ಅನುಗ್ರಹ ಸನ್ನಿಧಿಯವರ ಸತ್ ಸಂಕಲ್ಪದಂತೆ 23-11-1989ರಂದು ಶ್ರೀಶೈಲ ಪೀಠಕ್ಕೆ ಅಂಟಿಕೊಂಡಿದ್ದ ಗ್ರಹಣ ನಿವಾರಣವಾಯಿತು.
ಶ್ರೀಶೈಲ ಸನ್ನಿಧಿಯವರ ಮುನ್ನಡೆ ಃ
    ಹಿರಿಯ ಜಗದ್ಗುರುಗಳು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುತ್ತ ಆ ಹಾದಿಯನ್ನು ಹೆದ್ದಾರಿಯನ್ನಾಗಿ ಮಾಡಿದ್ದಾರೆ.  ಶ್ರೀ ಜಗದ್ಗುರು ಪಂಡಿತಾರಾಧ್ಯ ಯಾತ್ರಾನಿವಾಸವನ್ನು ನವೀಕರಿಸುವ ಹಾಗೂ ವಿಸ್ತರಿಸುವ ಕಾರ್ಯವನ್ನು ಯಶಸ್ವಿಯಾಗಿ ಎಸಗಿದ್ದಾರೆ.  ನಿತ್ಯಾನ್ನದಾಸೋಹ ಪದ್ಧತಿಯನ್ನು ಆಥರ್ಿಕ ಭದ್ರ ತಳಹದಿಯ ಮೇಲೆ ಮುನ್ನಡೆಸಿದ್ದಾರೆ.  ಶ್ರೀಶೈಲ ಕ್ಷೇತ್ರದಲ್ಲಿರುವ ತೆಲುಗು ವಿಶ್ವವಿದ್ಯಾಲಯದಲ್ಲಿ ವೀರಶೈವ ಸಿದ್ಧಾಂತ ಕುರಿತ ಅಧ್ಯಯನ - ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ.  ಶ್ರೀ ಭ್ರಮರಾಂಬ ದೇವಿಯ ದೇವಾಲಯದ ಮುಖ ಮಂಟಪದ ಗೋಪುರದ ಮೇಲೆ ಸುವರ್ಣಕಲಶಾರೋಹಣ ಕಾರ್ಯವನ್ನು ಇನ್ನುಳಿದ ಸಮಾನ ಪೀಠಾಚಾರ್ಯರೊಂದಿಗೆ ಯಶಸ್ವಿಯಾಗಿ ನೆರವೇರಿಸಿದ್ದಾರೆ.  ದಿ. 6-7-1988 ರಂದು ನೆರವೇರಿದ ಈ ಕಾರ್ಯಕ್ರಮದಲ್ಲಿ ಶ್ರೀಜಗದ್ಗುರು ಪಂಚಪೀಠಾಧೀಶ್ವರರು ದಯಪಾಲಿಸಿದ ದರ್ಶನ - ಆಶೀವರ್ಾದಗಳಿಂದ ಲಕ್ಷಾಂತರ ಜನ ರೋಮಾಂಚನಗೊಂಡರು.  ಶ್ರೀಶೈಲ ಕ್ಷೇತ್ರದಲ್ಲಿ ಯಾತ್ರಾಥರ್ಿಗಳ ವಾಸ್ತವ್ಯಕ್ಕಾಗಿ ಅನೇಕ ಅತಿಥಿಗೃಹಗಳು ಸುಸಜ್ಜಿತವಾಗಿ ತಲೆಯೆತ್ತಿ ನಿಂತಿವೆ.
    ಲಿಂಗೈಕ್ಯ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರ ಕ್ರಿಯಾ ಸಮಾಧಿಯು ದಾವಣಗೆರೆ ಮಹಾನಗರದಲ್ಲಿ ಆದುದು ಸರ್ವಶೃತವಿದೆ.  1995ನೆಯ ಸೆಪ್ಟೆಂಬರ್ 4,5 ಮತ್ತು 6ರಂದು ಆ ಪುಣ್ಯಾವರಣದಲ್ಲಿ ಜರುಗಿದ 9ನೆಯ ಪುಣ್ಯಾರಾಧನೆಯು ಅಭೂತಪೂರ್ವವೆನಿಸಿ ಶ್ರೀಶೈಲ ಪೀಠದ ಇತಿಹಾಸದಲ್ಲಿ ಸುವಣರ್ಾಕ್ಷರಗಳಿಂದ ಬರೆದಿಡತಕ್ಕಂಥ ದಾಖಲೆ ನಿಮರ್ಿಸಿದೆ.  25 ಲಕ್ಷ ರೂ.ಗಳಿಗೂ ಅಧಿಕ ವೆಚ್ಚದಿಂದ ನಿಮರ್ಿಸಲ್ಪಟ್ಟ ಅಮೃತ ಶಿಲಾಮಯ ಮಂದಿರವು ಅಂದೇ ಉದ್ಘಾಟಿಸಲ್ಪಟಿತು.  ಆ ಕಾಲಕ್ಕೆ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ದಿವ್ಯ ಸನ್ನಿಧಾನವು ಲಕ್ಷಾಂತರ ಜನರಿಗೆ ಲಭಿಸಿತು.  ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಆ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.  ಸಂಗೀತ-ಸಾಹಿತ್ಯ, ಸದ್ಧರ್ಮ ಗೋಷ್ಠಿಗಳು ಜನಮನಗಳನ್ನು ತಣಿಸಿದವು.
ಸೂರ್ಯಕಿರಣ ಪೃಥಕ್ಕರಣ ಃ
    ವರ್ತಮಾನ ಶ್ರೀಶೈಲ ಜಗದ್ಗುರುಗಳವರು ಸಲೀಸಾಗಿ ಕಾರ್ಯ ಸಾಧನೆಗೈಯುವ ಸಮರ್ಥರೆನಿಸಿದ್ದಾರೆ.  ಕಳೆದ ಇಪ್ಪತ್ತಾರು ವರ್ಷಗಳಲ್ಲಿ ಆಸೇತು ಹಿಮಾಚಲ ಸಂಚರಿಸಿ ತಮ್ಮ ವಾಗ್ಝರಿಯಿಂದ ಲಕ್ಷಾಂತರ ಜನರ ಭಾವಭಿತ್ತಿಯನ್ನು ಶುದ್ಧಗೊಳಿಸಿದ್ದಾರೆ.  ಕನ್ನಡದಷ್ಟೇ ನಿರರ್ಗಳವಾಗಿ,  ನಿರಾಳವಾಗಿ, ಸರಳವಾಗಿ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಆಶೀರ್ವಚನ ನೀಡಬಲ್ಲ ವಾಗ್ ವೈಖರಿ ಇವರಿಗೆ ಇರುವುದರಿಂದ ದೇಶ ಮಧ್ಯ ಸಂಚರಿಸಿ ಜನಮನ ಗೆದ್ದಿದ್ದಾರೆ.  ಮುಂಬಾಯಿ, ದಿಲ್ಲಿ, ಬೆಂಗಳೂರು, ಸೊಲ್ಲಾಪುರ, ಕೊಲ್ಲಾಪುರ-ಮುಂತಾದ ಮಹಾನಗರಗಳಲ್ಲದೆ ಅನೇಕ ಹಳ್ಳಿ-ಪಟ್ಟಣಗಳಲ್ಲಿ ಧರ್ಮ ಜಾಗೃತಿ ಯಾತ್ರೆ ಕೈಗೊಂಡು ಧರ್ಮ ಪ್ರಚಾರ ಕಾರ್ಯವನ್ನು ಬಹು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
    ಕತರ್ೃತ್ವ ಶಕ್ತಿಯ ಜೊತೆಗೆ ಹಿರಿಯ ಜಗದ್ಗುರುಗಳು ನೀಡಿದ ತರಬೇತಿ ಇವರ   ಸಾಮಥ್ರ್ಯವನ್ನು ಅಧಿಕಗೊಳಿಸಿದೆ.  ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮ,  ಶ್ರೀಶೈಲ ಮಠವನ್ನು ಸ್ಥಾಪಿಸಿ, ಅಲ್ಲಿ  ಶ್ರೀಪೀಠದ ಪ್ರಭಾವವನ್ನು ವಧರ್ಿಸಿದ್ದಾರೆ.  ಆತ್ಮಕೂರು ನಗರದಲ್ಲಿ ಶ್ರೀಶೈಲ ಕಂಬಿಮಠ ನಿಮರ್ಾಣವಾಗಿದೆ.  ಶ್ರೀಶೈಲ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ಶ್ರೀಶೈಲ ಗಿರಿರಾಜ ಸೂರ್ಯಸಿಂಹಾಸನ ಕಲ್ಯಾಣಮಂಟಪ ಕಾರ್ಯ ನಿರ್ವಹಿಸುತ್ತಲಿದೆ.  ರಾಣೇಬೆನ್ನೂರು ನಗರದಲ್ಲಿ ಶ್ರೀ ಜಗದ್ಗುರು ವಾಗೀಶಪಂಡಿತಾರಾಧ್ಯ ಮಂಗಲ ಭವನ ನಿಮರ್ಾಣಕ್ಕಾಗಿ ನಿವೇಶನ ಪಡೆದಿದ್ದಾರೆ.
    ಲಿಂಗೈಕ್ಯ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ವಿನೂತನ ಪರಂಪರೆಯೊಂದನ್ನು  ಶ್ರೀ ಪೀಠಕ್ಕೆ ಉಡುಗೊರೆಯಾಗಿಕೊಟ್ಟರು.  ಅದುವೇ ದಸರಾ ದಬರ್ಾರು ಎಂಬ ವಿಜಯ ದಶಮಿ ಮಹೋತ್ಸವವು.  ಶ್ರೀ ಸನ್ನಿಧಿಯವರ ಹಾಗೂ ಶ್ರೀ ಪೀಠದ ಔನ್ನತ್ಯದ ದರ್ಶನ ಮಾಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದೆ.  ಪೂವರ್ಾಚಾರ್ಯರಂತೆ ಸದ್ಯದ ಸನ್ನಿಧಿಯವರೂ ಸಹ ಆ ಉತ್ತಮ ಹಾಗೂ ಉನ್ನತ ಪರಂಪರೆಯನ್ನು ಇನ್ನೂ ವ್ಯಾಪಕಗೊಳಿಸಿದ್ದಾರೆ.  ಶರನ್ನವರಾತ್ರಿ ದಸರಾ ದಬರ್ಾರು ಕಾರ್ಯಕ್ರಮ ಕನರ್ಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಜನಮನ್ನಣೆ ಪಡೆದಿದೆ.  ಅದಕ್ಕೆ ಎಲ್ಲೆಡೆ ಹಾದರ್ಿಕಸ್ವಾಗತವಿದೆ.  ವೇಷ-ಭೂಷಣಗಳು, ಸಾಹಿತ್ಯಿಕ - ಜನಪದೀಯ ಹಾಗೂ ಸಂಗೀತ ಕಲಾಮಿಲನವೆನಿಸಿದ ಈ ಕಾರ್ಯಕ್ರಮವನ್ನು ಕಣ್ಣಾರೆ ಕಂಡು ಹಿರಿಹಿರಿ ಹಿಗ್ಗಿದವರೇ ಅದರ ಸೊಬಗನ್ನು ಅರಿಯಬಲ್ಲರು.
    ಧರ್ಮ-ಸಂಸ್ಕೃತಿ, ಸಮಾಜ ಕಲ್ಯಾಣ ಕಾರ್ಯಗಳಲ್ಲಿ ಇರುವಷ್ಟು ಆಸಕ್ತಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿಯೂ ಇದೆ.  ಹಿರಿಯ ಜಗದ್ಗುರುಗಳು ಕಟ್ಟಿ ಬೆಳೆಸಿದ ವಿದ್ಯಾಸಂಸ್ಥೆಗಳಿಗೆ ಹೊಸ ಆಯಾಮ ಕಲ್ಪಿಸುವುದರೊಂದಿಗೆ ಅವು ಸುಸಜ್ಜಿತವಾಗಿ ಮುನ್ನಡೆಯುವಂತೆ ಮಾಡಿದ್ದಾರೆ.  ಇತ್ತೀಚೆಗೆ ಕುಮಾರಪಟ್ಟಣಮ್ನಲ್ಲಿ ಶ್ರೀಶೈಲ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಕೈಗಾರಿಕಾ ತರಬೇತಿ ಸಂಸ್ಥೆ ತಲೆಯೆತ್ತಿ ಕಾರ್ಯನಿರ್ವಹಿಸುತ್ತಲಿದೆ. 
    ಮೈಸೂರು ಮುಕ್ತವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವು ಶ್ರೀ ಸನ್ನಿಧಿಯವರ   ದೂರದೃಷ್ಟಿಯಿಂದ ಹಾಗೂ ಆಡಳಿತ ಮಂಡಳಿಯವರ ಆಸಕ್ತಿಯಿಂದ ಹರಿಹರದ ಮಹಾವಿದ್ಯಾಲಯದಲ್ಲಿ ಪ್ರಾರಂಭವಾಗಿದೆ.  ಇಂಗ್ಲೀಷ್ ಭಾಷಾ ಅಧ್ಯಯನಕ್ಕೆ, ಎಂ.ಎ. ತರಗತಿಯ ಅವಕಾಶ ಕಲ್ಪಿಸಲಾಗಿದೆ.  ಅದೇ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಇಂಡಸ್ಟ್ರಿಯಲ್ ಶಿಕ್ಷಣ, ಬಯೋಟೆಕ್ನಾಲಜಿಯಲ್ಲಿ ವಿಶೇಷ ಅಧ್ಯಯನ ಮುಂತಾದವುಗಳಿಗೆ ಅವಕಾಶ ಕಲ್ಪಿಸಲಾಗಿದೆ.  ಕಳೆದ ವರ್ಷ ಶ್ರೀಶೈಲ ಜಗದ್ಗುರು ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯವು ಸ್ವಾಯತ್ತ (ಂಣಣಠಟಿಠಟಠಣ)  ಮಹಾವಿದ್ಯಾಲಯವಾಗಿ ಪರಿವತರ್ಿತಗೊಂಡಿದೆ.  ಇದೊಂದು ಅಪರೂಪದ ಕೊಡುಗೆ ಎಂದು ಹೇಳಬಹುದು.  ಶ್ರೀಶೈಲ ಸನ್ನಿಧಿಯವರು ಸಿಂಧನೂರು ತಾಲೂಕಿನ ಗುಂಡ ಎಂಬ ಗ್ರಾಮದಲ್ಲಿ ಇತ್ತೀಚೆಗೆ ಒಂದು ಹೊಸಕ್ಷೇತ್ರವನ್ನು ಹುಟ್ಟುಹಾಕಿ ಅದನ್ನು ವಿಸ್ತರಿಸುವ ಸಾಹಸ ಮಾಡಿದ್ದಾರೆ.  ಈಗಾಗಲೇ ಅಲ್ಲಿ ಶ್ರೀಶೈಲ ಜಗದ್ಗುರು ಶ್ರೀಪಂಡಿತಾರಾಧ್ಯಮಠ, ಶ್ರೀಶೈಲ ಮಲ್ಲಿಕಾಜರ್ುನ ಮಂದಿರ, ವಿದ್ಯಾಥರ್ಿವಸತಿ ನಿಲಯ, ಅನ್ನದಾನ ಮಂದಿರ(ದಾಸೋಹ) ಹಾಗೂ ಶ್ರೀ ಅಮರೇಶ್ವರ ಮಂದಿರ ಮುಂತಾದ ಕಟ್ಟಡಗಳು ಅಲ್ಪಾವಧಿಯಲ್ಲಿಯೇ ತಲೆಯೆತ್ತಿ ನಿಂತಿವೆ.  ಅದೊಂದು ಶ್ರೀಶೈಲ ಮಹಾಪೀಠದ ಖಾಸಾ ಸಂಸ್ಥಾನವಾಗಲಿದೆ. ಹರಿಹರ ತಾಲೂಕು ಮಲೆಬೆನ್ನೂರಿನಲ್ಲಿ ಶ್ರೀಶೈಲ ಪೀಠಕ್ಕೆ ಸೇರಿದ ಪಾಳುಬಿದ್ದ ಮಠ ಒಂದಿತ್ತು.  ಅದನ್ನ ವಿನೂತನವಾಗಿ ಸಂಪೂರ್ಣ ಶಿಲಾಮಂಟಪವಾಗಿ ನಿಮರ್ಾಣ ಮಾಡಿಸುತ್ತಿದ್ದಾರೆ. 
    ಶ್ರೀ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರೀಶೈಲ ಗಿರಿರಾಜ ಸೂರ್ಯ ಸಿಂಹಾಸನ ಆರೋಹಣ ಮಾಡಿ ಇಪ್ಪತ್ತೈದು ವಸಂತಗಳು ಸಂದ ಸವಿನೆನಪಿಗಾಗಿ 2006 ರ ಜನವರಿಯಲ್ಲಿ ಶ್ರೀ ಪೀಠದ ಭಕ್ತಾಭಿಮಾನಿಗಳು ಹುಬ್ಬಳ್ಳಿಯಲ್ಲಿ ರಜತಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.  ಆ ಸಂದರ್ಭದಲ್ಲಿ ವಿದ್ವತ್ಗೋಷ್ಠಿಗಳು, ವಿಚಾರಸಂಕಿರಣಗಳು, ಸಾಮೂಹಿಕ ವಿವಾಹ ಹಾಗೂ ದೀಕ್ಷಾದಿ ಕಾರ್ಯಕ್ರಮಗಳು ನೆರವೇರಿದವು.  ಶ್ರೀ ಸನ್ನಿಧಿಯವರ ಪೀಠಾರೋಹಣದ ರಜತಮಹೋತ್ಸವದೊಂದಿಗೆ ಅವರ ವಯೋಮಾನದ ಸುವರ್ಣಮಹೋತ್ಸವ ಸಂಭ್ರಮವೂ ಸೇರಿ ಬಂಗಾರಕ್ಕೆ ಕುಂದಣವನ್ನಿಟ್ಟಂತೆ ಆಗಿತ್ತು.  ಶ್ರೀ ಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯರ ಸುವರ್ಣ ಯುಗವು ಇವರ ಕಾಲದಲ್ಲಿ ರಜತಗಿರಿಯನೇರಿ ವಿಜೃಂಭಿಸುವಂತಾಯಿತು.  ಹೊಸ ಹೊಸ ಯೋಜನೆಗಳು, ಅವುಗಳನ್ನು ಕಾರ್ಯಗತಗೊಳಿಸುತ್ತಿರುವುದು ಶ್ರೀ ಸನ್ನಿಧಿಯವರ ಕತರ್ೃತ್ವ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ.  ಶ್ರೀ ಪೀಠದಿಂದ ಕೆಲವು ಉಪಯುಕ್ತ ಗ್ರಂಥಗಳು ಪ್ರಕಟವಾಗುತ್ತಿರುವುದು ಸನ್ನಿಧಿಯವರ ಸಾಹಿತ್ಯಾಸಕ್ತಿಯ ಸಂಕೇತವಾಗಿದೆ.
    ಇಂತು ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನ ಆಸಕ್ತಿ - ಅಭಿರುಚಿ -ಕ್ರಿಯಾಶೀಲತೆ ಹೊಂದಿರುವ ಶ್ರೀ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸನ್ನಿಧಿಯವರು ಈ ದೇಶಕ್ಕೆ, ಈ ಜನಾಂಗಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡುವ ಶಕ್ತಿಯನ್ನು ಶ್ರೀ ಭ್ರಮರಾಂಬ ಸಹಿತ ಶ್ರೀ ಮಲ್ಲೇಶನು ಅನುಗ್ರಹಿಸಲೆಂದು ಆಶಿಸೋಣ.

ಶ್ರೀಶೈಲ ಸೂರ್ಯಸಿಂಹಾಸನ ಪೀಠದ ಜಗದ್ಗುರು ಪರಂಪರೆ
ಶ್ರೀ ಜಗದ್ಗುರು ಚತುರಕ್ಷರ ಶಿವಾಚಾರ್ಯ ಭಗವತ್ಪಾದರು (ಕೃತಯುಗದ ಆದಿ)
ಶ್ರೀ ಜಗದ್ಗುರು ಚತುರ್ವಕ್ತ್ರ ಶಿವಾಚಾರ್ಯ ಭಗವತ್ಪಾದರು (ತ್ರೇತಾಯುಗದ ಆದಿ)
ಶ್ರೀ ಜಗದ್ಗುರು ಧೇನುಕರ್ಣ ಶಿವಾಚಾರ್ಯ ಭಗವತ್ಪಾದರು (ದ್ವಾಪರಯುಗದ ಆದಿ)
ಶ್ರೀ ಜಗದ್ಗುರು ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು (ಕಲಿಯುಗದ ಆದಿ)
1.    ಶ್ರೀ ಜಗದ್ಗುರು ಸದಾನಂದ ಶಿವಾಚಾರ್ಯರು
2.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು (ಕ್ರಿ.ಶ. 940)
3.    ಶ್ರೀ ಜಗದ್ಗುರು ಶಂಕರ ಶಿವಾಚಾರ್ಯರು
4.    ಶ್ರೀ ಜಗದ್ಗುರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು (ಕ್ರಿ.ಶ. 1060)
5.    ಶ್ರೀ ಜಗದ್ಗುರು ಗಜಕರ್ಣ ಶಿವಾಚಾರ್ಯರು
6.    ಶ್ರೀ ಜಗದ್ಗುರು ಸಂಗಮ ಶಿವಾಚಾರ್ಯರು
7.    ಶ್ರೀ ಜಗದ್ಗುರು ತ್ರಿರಂಗುಷ್ಠ ಶಿವಾಚಾರ್ಯರು
8.    ಶ್ರೀ ಜಗದ್ಗುರು ಅವ್ಯಯ ಶಿವಾಚಾರ್ಯರು
9.    ಶ್ರೀ ಜಗದ್ಗುರು ಕಲ್ಯಾಣಪಂಡಿತ ಶಿವಾಚಾರ್ಯರು
10.    ಶ್ರೀ ಜಗದ್ಗುರು ಉಮಾಧವ ಶಿವಾಚಾರ್ಯರು
11.    ಶ್ರೀ ಜಗದ್ಗುರು ಪ್ರಭು ಶಿವಾಚಾರ್ಯರು
12.    ಶ್ರೀ ಜಗದ್ಗುರು ಗೋಕರ್ಣ ಶಿವಾಚಾರ್ಯರು
13.    ಶ್ರೀ ಜಗದ್ಗುರು ಮಂಚಣ ಪಂಡಿತಾರಾಧ್ಯ ಶಿವಾಚಾರ್ಯರು
14.    ಶ್ರೀ ಜಗದ್ಗುರು ಸುರೇಶ ಶಿವಾಚಾರ್ಯರು
15.    ಶ್ರೀ ಜಗದ್ಗುರು ಮಲ್ಲಿಕಾಜರ್ುನ  ಶಿವಾಚಾರ್ಯರು
16.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಪಂಡಿತಾರಾಧ್ಯ ಶಿವಾಚಾರ್ಯರು
                            (ಕ್ರಿ.ಶ. 1195)
17.    ಶ್ರೀ ಜಗದ್ಗುರು ಈಶ್ವರ  ಶಿವಾಚಾರ್ಯರು(ಕ್ರಿ.ಶ. 1300)
18.    ಶ್ರೀ ಜಗದ್ಗುರು ಪಟ್ಟದ ಪ್ರಮಥೇಶ್ವರ ಶಿವಾಚಾರ್ಯರು (ಕ್ರಿ.ಶ. 1700)
19.    ಶ್ರೀ ಜಗದ್ಗುರು ಸಿದ್ಧಮಲ್ಲಿಕಾಜರ್ುನ ಶಿವಾಚಾರ್ಯರು 
20.    ಶ್ರೀ ಜಗದ್ಗುರು ತ್ರಿಲಿಂಗ ಚಕ್ರೇಶ್ವರ ಶಿವಾಚಾರ್ಯರು
21.    ಶ್ರೀ ಜಗದ್ಗುರು ಸಿದ್ಧಭಿಕ್ಷಾವತರ್ಿ ಶಿವಾಚಾರ್ಯರು
22.    ಶ್ರೀ ಜಗದ್ಗುರು ನಾಗಲೂಟಿ ಭಿಕ್ಷಾವತರ್ಿ  ಶಿವಾಚಾರ್ಯರು
                        (ಕ್ರಿ.ಶ. 1908-1940)
23.    ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು
                        (ಕ್ರಿ.ಶ. 1940-1986)
24.    ಶ್ರೀ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯರು
                            (ಕ್ರಿ.ಶ. 1981)
ವಿಶೇಷ ಸೂಚನೆ : ಸನಾತನವಾದ ಶ್ರೀ ಶೈಲ ಪೀಠಕ್ಕೂ ಅನೇಕ ಜಗದ್ಗುರುಗಳು ಆಗಿ ಹೋಗಿದ್ದಾರೆ.  ಆದರೆ ಈ ಪರಂಪರೆಯ ಅನೇಕ ಜಗದ್ಗುರುಗಳವರ ಹೆಸರು ಹಾಗೂ ಚರಿತ್ರೆಗಳು ಕಾಲಗರ್ಭದಲ್ಲಿ ಅಡಗಿಹೋಗಿರುವುದರಿಂದ ದೊರೆತವುಗಳನ್ನು ಮಾತ್ರ ಪ್ರಕಟಿಸಲಾಗಿದೆ.