panchapeeth.com

Veerashaiva Panchapeeth Parampare

Sri Ujjaini Peeth Parampare

ಶ್ರೀ ಉಜ್ಜಯಿನಿ ಪೀಠದ ಪರಂಪರೆ

ಶ್ರೀ ಜಗದ್ಗುರು ಮರುಳಾರಾಧ್ಯರು ಃ
    ಶಿವನ ವಾಮದೇವಮುಖ ಸಂಜಾತರಾದ ಶ್ರೀ ಜಗದ್ಗುರು ಮರುಳಾರಾಧ್ಯರು ಶಿವನ ಅಪ್ಪಣೆಯ ಮೇರೆಗೆ ವೀರಶೈವ ಮತ ಸಂಸ್ಥಾಪನೆಗಾಗಿ ಕ್ಷಿಪ್ರಾನದಿಯ ತಟದಲ್ಲಿರುವ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಿಂದ ಪ್ರತಿಯೊಂದು ಯುಗದಲ್ಲೂ  ಅವತರಿಸುತ್ತಾ
ಬಂದಿದ್ದಾರೆ.  ಕೃತಯುಗದಲ್ಲಿ ದ್ವ್ಯಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ದ್ವಿವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀದಾರುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಎಂಬ ಹೆಸರುಗಳು ಇವರಿಗೆ ಇದ್ದುದಾಗಿ (ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ, ಪುಟ-2) (ವೀರಶೈವ ಸದಾಚಾರ ಸಂಗ್ರಹ 1/37-39); (ಹಿಂದುತ್ವ, ಪುಟ-695) ಗ್ರಂಥಾಧಾರಗಳಿಂದ ತಿಳಿದುಬರುತ್ತದೆ.
    ಈ ಪೀಠದ ದ್ವಾಪರಯುಗದ ಆಚಾರ್ಯರಾದ ಶ್ರೀ ಜಗದ್ಗುರು ದಾರುಕಾಚಾರ್ಯರು ನೈಮಿಷಾರಣ್ಯದಲ್ಲಿ ವಾಸಮಾಡುತ್ತಿರುವ ಶ್ರೀ ದಧೀಚಿ ಮಹಷರ್ಿಗಳಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಸಕಲ ಶಿಷ್ಯಸಮೇತರಾದ ಅವರನ್ನು ಕೃತಾರ್ಥರನ್ನಾಗಿ ಮಾಡಿದರು.
        ತದ್ವನ್ಮರುಳಸಿದ್ಧಸ್ಯ ವಟಕ್ಷೇತ್ರೇ ಮಹತ್ತರೇ |
        ಸಿದ್ಧೇಶಲಿಂಗಾಜ್ಜನನಂ ಸ್ಥಾನಮುಜ್ಜಯಿನೀಪುರೇ ||
    ಸ್ವಾಯಂಭುವಾಗಮದ ಈ ವಚನಾನುಸಾರವಾಗಿ ಕಲಿಯುಗದ ಆಚಾರ್ಯರಾದ ಶ್ರೀ ಜಗದ್ಗುರು ಮರುಳಾರಾಧ್ಯರು, ಅಂದು ಮಾಳವ ದೇಶವೆಂದು ಪ್ರಸಿದ್ಧವಾದ ಇಂದಿನ ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಡದಲ್ಲಿರುವ ಮಹಾಕಾಲ ಉಜ್ಜಯಿನಿಯ ವಟಕ್ಷೇತ್ರದ ಸುಪ್ರಸಿದ್ಧವಾದ ಶ್ರೀ ಸಿದ್ಧೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ವೀರಶೈವ ಧಮರ್ೋಪದೇಶಕ್ಕಾಗಿ ಒಂದು ಪೀಠವನ್ನು ಸಂಸ್ಥಾಪಿಸಿದರು.  ಅದುವೇ ಸದ್ಧರ್ಮ ಸಿಂಹಾಸನವೆಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆಯಿತು.
    ಕಾಲಕಾಲನಾದ ಮಹಾಕಾಲೇಶ್ವರ ಜ್ಯೋತಿಲರ್ಿಂಗದಿಂದಲೂ, ಭಕ್ತರ ಪಾಪವನ್ನು ಕ್ಷಿಪ್ರದಲ್ಲಿಯೇ ನಾಶಪಡಿಸುವ ಮಹಿಮೆಯಿಂದ ಕೂಡಿದ ಕ್ಷಿಪ್ರಾ ನದಿಯಿಂದಲೂ, ಸದ್ಧರ್ಮವನ್ನು ಉಪದೇಶಿಸುವ ಈ ಗುರುಪೀಠದಿಂದಲೂ ಪರಮ ಪವಿತ್ರವಾದ ಈ ಉಜ್ಜಯಿನಿಯಲ್ಲಿ ಶ್ರೌತಪಾಲ ಮತ್ತು ಭಾನುಮತಿ ಎಂಬ ರಾಜದಂಪತಿಗಳು ಪ್ರಜಾಪಾಲನೆಯನ್ನು ಮಾಡುತ್ತಿದ್ದರು.
    ಒಂದು ಸಾರಿ ಶ್ರೀ ಶ್ರೌತಪಾಲ ರಾಜನು ಸ್ವರ್ಗದ ಅಭಿಲಾಷೆಯಿಂದ ಅಶ್ವಮೇಧ ಯಾಗವನ್ನು ಮಾಡಲುದ್ಯುಕ್ತನಾದಾಗ, ಯಜ್ಞದಲ್ಲಿ ಸಂಭವಿಸಬಹುದಾದ ಪ್ರಾಣಿಹಿಂಸೆ, ಮಾಂಸಭಕ್ಷಣ, ಸುರಾಪಾನ ಮತ್ತು ವ್ಯಭಿಚಾರಾದಿಗಳ ಬಗ್ಗೆ ರಾಜನಿಗೆ ಅರಿವನ್ನುಂಟುಮಾಡಿದ ಶ್ರೀ ಉಜ್ಜಯಿನೀ ಸದ್ಧರ್ಮ ಸಿಂಹಾಸನಾಧೀಶ್ವರರಾದ ಶ್ರೀ ಜಗದ್ಗುರು ಮರುಳಾರಾಧ್ಯರು ರಾಜದಂಪತಿಗಳಿಗೆ ಶಿವದೀಕ್ಷೆಯನ್ನು ಅನುಗ್ರಹಿಸಿ, ಸಾತ್ವಿಕ ಪೂಜಾವಿಧಾನವನ್ನು ತಿಳಿಸಿ, ಅವರಿಗೆ ವೀರಶೈವ ಧರ್ಮದ ಪ್ರಮುಖ ತತ್ತ್ವಗಳಾದ ಅಷ್ಟಾವರಣ,  ಪಂಚಾಚಾರ ಮತ್ತು ಷಟ್ಸ್ಥಲಗಳ ಅರಿವನ್ನು ಮಾಡಿಕೊಟ್ಟರು.
    ನಂತರ ಹಿಮಾಲಯದ ಗಂಗಾ-ಯಮುನಾ ನದಿಗಳ ಮಧ್ಯಭಾಗದಲ್ಲಿ ವಿರಾಜಿಸುವ ದಾರುಕವನಕ್ಕೆ ದಯಮಾಡಿಸಿ ಅಲ್ಲಿಯ ಋಷಿಮುನಿಗಳಿಗೆಲ್ಲ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ, ಅಲ್ಲಿಂದ ಕಾಶೀಕ್ಷೇತ್ರಕ್ಕೆ ದಯಮಾಡಿಸುತ್ತಾರೆ.  ಕಾಶಿಯಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯರನ್ನು ಸಂದಶರ್ಿಸಿ ಕಾಶಿಯಲ್ಲಿಯೇ 400 ವರ್ಷಗಳವರೆಗೆ ಯೋಗಸಮಾಧಿಯಲ್ಲಿ ಲೀನರಾಗುತ್ತಾರೆ.  ಶಿವಯೋಗ ಸಮಾಧಿಯಿಂದ ಎಚ್ಚರಾದ ಬಳಿಕ, ಶ್ರೀ ಜಗದ್ಗುರು ವಿಶ್ವಾರಾಧ್ಯರ ಅಪ್ಪಣೆಯನ್ನು ಪಡೆದು ಶ್ರೀಶೈಲ ಮಲ್ಲಿಕಾಜರ್ುನ ದೇವಾಲಯಕ್ಕೆ ಹೋಗಿ ಅಲ್ಲಿಯ ಸೂರ್ಯಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪಂಡಿತಾರಾಧ್ಯರೊಡನೆ ಧಾಮರ್ಿಕ ಪಯರ್ಾಲೋಚನೆಯನ್ನು ಮಾಡಿ ಅಲ್ಲಿಯ ಅನೇಕ ಋಷಿಮುನಿಗಳಿಗೆ ಶಿವಾದ್ವೈತ ತತ್ತ್ವವನ್ನು ಉಪದೇಶಿಸಿ ಕಾಶ್ಮೀರಕ್ಕೆ ದಯಮಾಡಿಸುತ್ತಾರೆ.  ಅಲ್ಲಿ ಶ್ರೀ ಸರಸ್ವತೀ ಪೀಠವೆಂಬ ಮಠವನ್ನು ಸಂಸ್ಥಾಪಿಸಿ  ಶಿವಭಕ್ತಿಯ ಪ್ರಚಾರವನ್ನು ಗೈಯುತ್ತಾರೆ.  ಇವರ ಈ ಉಪದೇಶದ ಕಾರಣದಿಂದಾಗಿಯೇ ಕಾಶ್ಮೀರದಲ್ಲಿ ಶಿವಭಕ್ತಿಯು ವಿಶೇಷವಾಗಿ ಪ್ರಚಾರವಾಯಿತು.
    ಮುಂದೆ ಶ್ರೀ ಜಗದ್ಗುರು ಮರುಳಾರಾಧ್ಯರು ತಮ್ಮ ಅವತಾರದ ಸಮಾಪ್ತಿಯ ಸಮಯವು ಸನ್ನಿಹಿತವಾಗಿರುವುದನ್ನು ಅರಿತು, ಶ್ರೀ ಕೇದಾರ ಕ್ಷೇತ್ರಕ್ಕೆ ದಯಮಾಡಿಸಿ, ಅಲ್ಲಿಯ ಶ್ರೀ ವೈರಾಗ್ಯ ಸಿಂಹಾಸನಾಧೀಶ್ವರರಾದ ಶ್ರೀ ಜಗದ್ಗುರು ಏಕೋರಾಮಾರಾಧ್ಯರನ್ನು ಸಂದಶರ್ಿಸುತ್ತಾರೆ. ನಂತರ ಈರ್ವರೂ ಸ್ನಾನಕ್ಕಾಗಿ ಗೌರೀಕುಂಡಕ್ಕೆ ಬಂದು, ಆ ಕುಂಡದಲ್ಲಿ  ಮಿಂದು ಹೊರಬರುವಷ್ಟರಲ್ಲಿ ದಿವ್ಯಶಕ್ತಿಯೊಂದು ಆ ಕುಂಡದಿಂದ ಉದ್ಭವಿಸಿತು.  ಆಗ ಉಭಯರೂ ಆ ದಿವ್ಯ ವಟುವನ್ನು ನೋಡಿ ಪರಮಾನಂದಗೊಂಡರು.  ಆಗ ಏಕೋರಾಮರು  ಶ್ರೀ ನಂದೀಶ್ವರನೇ ಈ ರೂಪದಿಂದ ಅವತರಿಸಿರುವನು.  ಈ ವಟುವಿಗೆ ಮುಕ್ತಿಮುನಿ ಎಂದು ನಾಮಕರಣವನ್ನು ಮಾಡುತ್ತೇವೆ.  ಈತನೇ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ  ಉತ್ತರಾಧಿಕಾರಿಯಾಗಲಿ ಎಂಬುದಾಗಿ ಅಪ್ಪಣೆ ಕೊಡಿಸಿದರು.
    ನಂತರ ಎಲ್ಲರೂ ಉಜ್ಜಯಿನಿ ಕ್ಷೇತ್ರಕ್ಕೆ ದಯಮಾಡಿಸಿ, ಅಕ್ಷಯ ತೃತೀಯ ಶುಭಮುಹೂರ್ತದಲ್ಲಿ ಶ್ರೀ ಮುಕ್ತಿಮುನಿಗಳಿಗೆ ಪಟ್ಟಾಧಿಕಾರವನ್ನು ವಹಿಸಿ, ಸ್ರೀ ಜಗದ್ಗುರು ಮರುಳಾರಾಧ್ಯರು ಪುನಃ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಲ್ಲಿಯೇ ಲೀನರಾದರು. 
    ಶ್ರೀ ಜಗದ್ಗುರು ಮುಕ್ತಿಮುನಿಗಳು ಪಟ್ಟಾಧಿಕಾರವನ್ನು ಹೊಂದಿ 300 ವರ್ಷಗಳ ಪರ್ಯಂತ ಸದ್ಧರ್ಮ ಪೀಠವನ್ನು ಅಲಂಕರಿಸಿ, ವೀರಶೈವ ಮತವನ್ನು ಸಾಕಷ್ಟು ಪ್ರಚಾರಗೊಳಿಸಿ, ತಮ್ಮ  ಅಂತಿಮ ಸಮಯದಲ್ಲಿ ಶ್ರೀ ಜಗದ್ಗುರು ಸಿದ್ಧಮುನಿಗಳಿಗೆ ಪೀಠಾಧಿಕಾರವನ್ನು ಒಪ್ಪಿಸಿ ಲಿಂಗೈಕ್ಯರಾದರು.
    ಹೀಗೆ ಈ ಪೀಠ ಪರಂಪರೆಯಲ್ಲಿ ಶ್ರೀ ಜಗದ್ಗುರು ಸಿದ್ಧಮುನಿಗಳು 200 ವರ್ಷ, ಶ್ರೀ ಜಗದ್ಗುರು ಶಿವಮುನೀಂದ್ರ ಸ್ವಾಮಿಗಳು 125 ವರ್ಷ, ಶ್ರೀ ಜಗದ್ಗುರು ಶಾಂತಮುನಿಗಳು 70 ವರ್ಷ, ಶ್ರೀ ಜಗದ್ಗುರು ಭವಭೂತಿ ಮುನಿಗಳು 100 ವರ್ಷ ಸಿಂಹಾಸನಾರೂಢರಾಗಿದ್ದರು.  ಶ್ರೀ ಜಗದ್ಗುರು ಭವಭೂತಿ ಮುನಿಗಳು ಮಹಾತಪಸ್ವಿಗಳೂ, ಘನ ವಿದ್ವಾಂಸರೂ ಆಗಿದ್ದರು.  ಉಜ್ಜಯಿನಿಯ ಭೋಜರಾಜ ಹಾಗೂ ಅವನ ಆಸ್ಥಾನ ಕವಿಗಳಾದ ಕಾಳಿದಾಸಾದಿಗಳಿಂದ ಇವರು ಮನ್ನಣೆಯನ್ನು ಪಡೆದವರಾಗಿದ್ದರು.  ತಮ್ಮ ತರುವಾಯ ಶ್ರೀ ಜಗದ್ಗುರು ಇಮ್ಮಡಿ ಮುಕ್ತಿಮುನಿಗಳಿಗೆ ಪೀಠಾಧಿಕಾರವನ್ನು ಕೊಟ್ಟು ಲಿಂಗೈಕ್ಯರಾದರು.
    ಇದೇ ಪ್ರಕಾರ ಶ್ರೀ ಜಗದ್ಗುರು ಇಮ್ಮಡಿ ಮುಕ್ತಿಮುನಿಗಳು 50 ವರ್ಷ, ಶ್ರೀಜಗದ್ಗುರು ಶಕ್ತಿಮುನಿಗಳು 200ವರ್ಷ. ಶ್ರೀ ಜಗದ್ಗುರು ಇಮ್ಮಡಿ ಸಿದ್ಧಮುನಿಗಳು 40 ವರ್ಷ, ಶ್ರೀ ಜಗದ್ಗುರು ಇಮ್ಮಡಿ ಶಾಂತಮುನಿಗಳು 90 ವರ್ಷ, ಶ್ರೀ ಜಗದ್ಗುರು ಮುಮ್ಮಡಿ ಸಿದ್ಧಮುನಿಗಳು 55 ವರ್ಷ, ಶ್ರೀ ಜಗದ್ಗುರು ಸಾಂಬಮುನಿಗಳು 100 ವರ್ಷ, ಶ್ರೀ ಜಗದ್ಗುರು ಇಮ್ಮಡಿ ಶಿವಮುನಿಗಳು 30 ವರ್ಷ ಮತ್ತು ಶ್ರೀ ಜಗದ್ಗುರು ಈಶಾನ್ಯಮುನಿಗಳು 75 ವರ್ಷ ಧರ್ಮ ಸಿಂಹಾಸನಾಸೀನರಾಗಿ ಮಧ್ಯಪ್ರದೇಶದಲ್ಲಿ ವೀರಶೈವ ಧರ್ಮವನ್ನು ಬಹಳಷ್ಟು ಪ್ರಚಾರಗೊಳಿಸಿದರು.
    ಇವರ ತರುವಾಯ ಶ್ರೀ ಜಗದ್ಗುರು ಶಂಭುಮುನಿಗಳು ಈ ಪೀಠ ಪರಂಪರೆಯಲ್ಲಿ 15ನೆಯ ಪೀಠಾಧಿಪತಿಗಳಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.  ಇಷ್ಟು ಹೊತ್ತಿಗೆ ಜೈನಧರ್ಮವು ಬಹಳಷ್ಟು ಪ್ರಚಾರದಲ್ಲಿತ್ತು.  ಆಗ ಜೈನಧರ್ಮದವನಾದ ಶ್ರೀ ವೀರಸೇನ ರಾಜನು ವೀರಶೈವ ಧರ್ಮವನ್ನು ನಾಶಗೊಳಿಸಲು ಪಣತೊಟ್ಟವನಾಗಿದ್ದನು.  ಶ್ರೀ ಜಗದ್ಗುರು ಶಂಭುಮುನಿಗಳು ಶಠೇ ಶಾಠ್ಯಂ ಸಮಾಚರೇತ್ ಎಂಬ ನೀತಿಗನುಸಾರವಾಗಿ, ರಾಜನೊಡನೆ ಪ್ರತಿಭಟಿಸಲು ಸೈನ್ಯವನ್ನು ಸಂಗ್ರಹಿಸಿ ಕೊನೆಗೆ ವೀರಸೇನ ರಾಜನೊಡನೆ ಹೋರಾಡಿ ವಿಜಯವನ್ನು ಸಂಪಾದಿಸಿದರು.
    ಈ ಯುದ್ಧದಲ್ಲಿ ವಿಜಯವನ್ನು ಸಂಪಾದಿಸಿದರೂ ಶ್ರೀ ಜಗದ್ಗುರು ಶಂಭುಮುನಿಗಳಿಗೆ ಸಮಾಧಾನವಾಗಲಿಲ್ಲ. ಆಗ ಅವರು ಈ ತರಹದ ಕಲಹವೇ ಬೇಡವೆಂದು ಭಾವಿಸಿ, ಉಜ್ಜಯಿನಿಯನ್ನು ಬಿಟ್ಟು ಅಡವಿಯಲ್ಲಿ ಪ್ರಶಾಂತ ಸ್ಥಳದಲ್ಲಿ ಪರ್ಣಕುಟೀರವನ್ನು ನಿಮರ್ಿಸಿಕೊಂಡು 70 ವರ್ಷಗಳವರೆಗೆ ಧರ್ಮಕಾರ್ಯವನ್ನು ಮಾಡಿ ಕೊನೆಗೆ ತಮ್ಮ ಪ್ರೀತಿಯ ಶಿಷ್ಯರಾದ ಶ್ರೀ ಮರುಳಸಿದ್ಧರಿಗೆ ಜಗದ್ಗುರು ಪಟ್ಟಾಧಿಕಾರವನ್ನು ವಹಿಸಿ ಲಿಂಗೈಕ್ಯರಾದರು.
ಶ್ರೀ ಸದ್ಧರ್ಮ ಪೀಠದ ಸ್ಥಳಾಂತರ :
    ಶ್ರೀ ಜಗದ್ಗುರು ಶಂಭುಮುನಿಗಳು ಲಿಂಗೈಕ್ಯರಾದ ನಂತರ ಶ್ರೀ ಜಗದ್ಗುರು ಮರುಳಸಿದ್ಧರು ಜೈನರಾಜರ ಉಪದ್ರವಕ್ಕಾಗಿ ಮಧ್ಯಪ್ರದೇಶದ ಉಜ್ಜಯಿನಿಯ ಪರಿಸರವನ್ನು ತ್ಯಾಗಮಾಡಿ ಶಿಷ್ಯ ಸಮೇತರಾಗಿ ಮಹಾರಾಷ್ಟ್ರದ ವಿಭಿನ್ನ ಸ್ಥಾನಗಳಲ್ಲಿ ಸಂಚರಿಸುತ್ತ ಅಲ್ಲಲ್ಲಿಯ ಭಕ್ತರ ಸಹಯೋಗ, ಸಹಕಾರಗಳಿಂದ ಮಠಗಳನ್ನು ನಿಮರ್ಿಸಿ, ಅಲ್ಲಲ್ಲಿ ಒಬ್ಬೊಬ್ಬ ಶಿಷ್ಯರನ್ನು ಇರಿಸುತ್ತ, ಪರಳಿ ಮುಂತಾದ ಜ್ಯೋತಿಲರ್ಿಂಗಗಳ ಸ್ಥಾನವನ್ನು ಸಂದಶರ್ಿಸಿ, ಕೊಲ್ಹಾಪುರ ಸಮೀಪದ ಸಿದ್ಧಗಿರಿ ಎಂಬ ಸ್ಥಾನಕ್ಕೆ ದಯಮಾಡಿಸುತ್ತಾರೆ.  ಶ್ರೀ ಜಗದ್ಗುರು ಮರುಳಸಿದ್ಧರು ಹೀಗೆ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಸಂಚರಿಸಿದುದರಿಂದ ಮಹಾರಾಷ್ಟ್ರದಲ್ಲಿ ಉಜ್ಜಯಿನೀ ಶಾಖಾಮಠಗಳು ಅಧಿಕವಾಗಿರುತ್ತವೆ.
    ಶ್ರೀ ಜಗದ್ಗುರು ಮರುಳಸಿದ್ಧರು ಸಿದ್ಧಗಿರಿಗೆ ಆಗಮಿಸಿದಾಗ ಅಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರ ಸಂದರ್ಶನವಾಗುತ್ತದೆ.  ಇಂದಿನ ಈ ಸಿದ್ಧಗಿರಿಮಠವು ರಂಭಾಪುರಿ ಶಾಖಾಮಠವಾಗಿರುತ್ತದೆ.  ಶ್ರೀ ಜಗದ್ಗುರು ಮರುಳಸಿದ್ಧರ ಮಹಾಕಾಲ ಉಜ್ಜಯಿನಿಯ ಸದ್ಧರ್ಮ ಪೀಠಕ್ಕೆ ಬಂದೊದಗಿದ ವಿಪತ್ತನ್ನರಿತ ಶ್ರೀ ಜಗದ್ಗುರು ರೇವಣಸಿದ್ಧರು ಶ್ರೀ ಜಗದ್ಗುರು ಮರುಳಸಿದ್ಧರಿಗೆ ಸಾಂತ್ವನವನ್ನು ಹೇಳಿ ಕನರ್ಾಟಕ ಪ್ರದೇಶದ ಕೊಟ್ಟೂರು ಬಳಿಯಲ್ಲಿಯೇ ಉಜ್ಜಯಿನಿ ಎಂಬ ಹೊಸ ಪಟ್ಟಣವನ್ನು ನಿಮರ್ಾಣಗೊಳಿಸಿ ಅಲ್ಲಿಯೇ ಸದ್ಧರ್ಮ ಪೀಠವನ್ನು ಪುನಃ ಸ್ಥಾಪಿಸಲು ಸಲಹೆಯನ್ನು ಕೊಡುತ್ತಾರೆ.
    ಶ್ರೀ ಜಗದ್ಗುರು ರೇವಣಸಿದ್ಧರ ಆದೇಶದಂತೆ ಶ್ರೀ ಜಗದ್ಗುರು ಮರುಳಸಿದ್ಧರು ಕೊಲ್ಹಾಪುರದ ಶ್ರೀ ಮಾಯಾದೇವಿಯ ಗವರ್ಾಪಹರಣವನ್ನು ಮಾಡಿ ಅಪಾರ ಕೀತರ್ಿಯನ್ನು ಸಂಪಾದಿಸಿದರು.  ಅಲ್ಲದೇ ಅಲ್ಲಿಯ ಕರಟಾಸುರನಿಗೆ ಮತ್ತು ಅವನ ಪರಿವಾರದವರಿಗೆಲ್ಲ ಶಿವದೀಕ್ಷೆಯನ್ನು ಮಾಡಿ ಅನುಗ್ರಹಿಸಿದರು.  ನಂತರ ಓರಂಗಲ್ಲಿಗೆ ಹೋಗಿ ಅಲ್ಲಿಯ ಕಾಕತೀಯ ರಾಜವಂಶದ ಗಣಪತಿ ರಾಜನನ್ನು ಮತ್ತು ಹೊಸ ಕಲ್ಯಾಣದ ಶ್ರೀ ಸೋಮೇಶ್ವರ ರಾಜನನ್ನು ಕಂಡರು.  ಅವರ ಸಹಾಯದಿಂದ ಶ್ರೀ ಜಕ್ಕಣಚಾರ್ಯರ ಶಿಲ್ಪಸೇವೆಯಿಂದ ಹೊಸದಾಗಿ ಸ್ಥಾಪಿಸಲ್ಪಟ್ಟ ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠವನ್ನು ನಿಮರ್ಾಣಗೊಳಿಸಿ, ಆ ಪೀಠದಲ್ಲಿ ಮೂಲ ಮರುಳಾರಾಧ್ಯರ ತರುವಾಯದ ಹದಿನಾಲ್ಕು ಜನ ಗುರುಪರಂಪರೆಯ ಮೂತರ್ಿಗಳನ್ನು ಮತ್ತು ಮೂಲ ಮರುಳಾರಾಧ್ಯರ ಒಂದು ಲಿಂಗವನ್ನೂ ಸಂಸ್ಥಾಪಿಸಿದರು.  ಈ ಪೀಠದಲ್ಲಿಯ ಒಳಭಾಗವು ಅನೇಕ ಕಲಾಕೃತಿಯಿಂದ ಕೂಡಿಕೊಂಡಿದೆ.  ಅಂತೆಯೇ ಹಂಪೆಯ ಗುಡಿ ಹೊರಗೆ ನೋಡಬೇಕು, ಉಜ್ಜಯಿನಿಯ ಮಠದ ಒಳಗೆ ನೋಡಬೇಕು ಎಂಬುದು ಇಂದಿಗೂ ಗಾದೆಯ ಮಾತಿನಂತಿದೆ.
    ಹೀಗೆ ವಿನೂತನವಾಗಿ ನಿಮರ್ಾಣಗೊಂಡ ಕನರ್ಾಟಕದ ಉಜ್ಜಯಿನೀ ಸದ್ಧರ್ಮ ಸಿಂಹಾಸನಕ್ಕೆ ಶ್ರೀ ಜಗದ್ಗುರು ಮರುಳಸಿದ್ಧರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಯಿತು ಈ ಮಂಗಲಕಾರ್ಯಕ್ಕೆ ಶ್ರೀ ಜಗದ್ಗುರು ರೇವಣಸಿದ್ಧರು, ಶ್ರೀ ಜಗದ್ಗುರು ಪಂಡಿತಾರಾಧ್ಯರು ದಯಮಾಡಿಸಿದರು ಹಾಗೂ ರಾಷ್ಟ್ರಕೂಟ, ಓರಂಗಲ್ ಪುರಿಗಳ ಭೂಪಾಲರೂ ಆಗಮಿಸಿ ತಮ್ಮ ಭಕ್ತಿಕಾಣಿಕೆಯನ್ನು ಸಮಪರ್ಿಸಿದರಲ್ಲದೇ ಭುವನೈಕಮಲ್ಲ ಶ್ರೀ ಸೋಮೇಶ್ವರನು ಸಮ್ಮಾನಪೂರ್ವಕವಾಗಿ 120 ಮಠಗಳನ್ನು ತನ್ನ ರಾಜ್ಯದಲ್ಲಿಯೇ ಉಂಬಳಿಯಾಗಿ ಕೊಟ್ಟನು.
    ಈ ರೀತಿಯಾಗಿ ವೈಭವದ ಅಧಿಕಾರವನ್ನು ಹೊಂದಿದ ನಂತರ ಭಕ್ತವೃಂದದ ಮತ್ತು ಅನೇಕ ಮಹಾರಾಜರ ಬಯಕೆಗಳನ್ನು ಈಡೇರಿಸುತ್ತ ಓರಂಗಲ್ಲ, ಹಂಪೆ, ಕೂಡಲಸಂಗಮ, ಕಪ್ಪತಗುಡ್ಡ, ಹರಪುರಿ ಮುಂತಾದ ಸ್ಥಳಗಳಲ್ಲಿ ಸಂಚರಿಸಿ ವೀರಶೈವ ಧಮರ್ೋಪದೇಶವನ್ನು ಮಾಡುತ್ತಿರುವಾಗ ಬಹಳಷ್ಟು ಜೈನ ಧಮರ್ೀಯರು ಇವರಿಂದ ಲಿಂಗದೀಕ್ಷೆಯನ್ನು ಪಡೆದರು.  ಶ್ರೀ ಜಗದ್ಗುರು ಮರುಳಸಿದ್ಧರು 170 ವರ್ಷಗಳವರೆಗೆ ಉಜ್ಜಯಿನಿಯ ಸದ್ಧರ್ಮ ಸಿಂಹಾಸನಾಧಿಪತಿಗಳಾಗಿದ್ದು ಕೊನೆಗೆ ಶ್ರೀ ಸಿದ್ಧಪಂಡಿತರಿಗೆ ಪಟ್ಟವನ್ನು ವಹಿಸಿ ತಾವು ಲಿಂಗೈಕ್ಯರಾದರು.
    ವಿನೂತನವಾದ ಈ ಉಜ್ಜಯಿನೀ ಪೀಠದ  ಗುರುಪರಂಪರೆಯಲ್ಲಿ ಶ್ರೀ ಜಗದ್ಗುರು ಸಿದ್ಧಲಿಂಗಾಚಾರ್ಯರು 45 ವರ್ಷ,  ಜಗದ್ಗುರು ಸಿದ್ಧೇಶ್ವರಾಚಾರ್ಯರು 80 ವರ್ಷ ಮತ್ತು ಶ್ರೀ ಜಗದ್ಗುರು ಸಿದ್ಧನಾಥಾರಾಧ್ಯರು 30 ವರ್ಷ - ಹೀಗೆ ಸಿಂಹಾಸನಾಸೀನರಾಗಿ ಪೀಠದ ಘನತೆಯನ್ನು ಬೆಳೆಸಿದರು.  ಶ್ರೀ ಜಗದ್ಗುರು ಸಿದ್ಧನಾಥಾರಾಧ್ಯರು ತಮ್ಮ ಅಂತ್ಯಕಾಲದಲ್ಲಿ ಹೂಲಿಯ ಸಿದ್ಧನಂಜೇಶ್ವರ ವಂಶದ ಮರುಳಾರಾಧ್ಯರಿಗೆ ಪಟ್ಟವನ್ನು ಕಟ್ಟಿ ಲಿಂಗೈಕ್ಯರಾದರು.
    ಪಟ್ಟಕ್ಕೆ ಬಂದ ಶ್ರೀ ಜಗದ್ಗುರು ಮರುಳಾರಾಧ್ಯರು ಯೋಗಸಾಮಥ್ರ್ಯ ಉಳ್ಳವರಾದ್ದರಿಂದ ಅನೇಕ ಭಕ್ತರ ಬಯಕೆಗಳನ್ನು ಸಹಜವಾಗಿ ಈಡೇರಿಸುತ್ತಿದ್ದರು.  ಇವರ ಅನುಗ್ರಹದಿಂದಲೇ ಕಗ್ಗಲಿಪುರದ ಗೌಡನಿಗೆ ಪುತ್ರಸಂತಾನ ಪ್ರಾಪ್ತವಾಯಿತು.  ಅದರಂತೆ ತರೀಕೆರೆಯ ಸೋಮಣ್ಣನೆಂಬ ಕುರುಬಗೌಡನಿಗೂ ಪುತ್ರಪ್ರಾಪ್ತಿಯಾಯಿತು.  ಈ ಕೂಸಿಗೆ ಅಮೋಘಸಿದ್ಧನೆಂದು ನಾಮಕರಣ ಮಾಡಿದರು.  ಇವನಿಗೆ ಶಿವದೀಕ್ಷೆಯನ್ನು ಕೊಟ್ಟು ಹೂಲಿಗೆ ಕರೆತಂದು ಅಲ್ಲಿ ಹಿರಿಯ ಕುಂಭಿಯ ವೀರಶೈವ ಕುರುಬರಿಗೆ ಶ್ರೀ ಅಮೋಘಸಿದ್ಧನನ್ನೇ ಗುರುವನ್ನಾಗಿ ಮಾಡಿದರು.  ಅನಂತರ ಕಗ್ಗಲಿಪುರದಲ್ಲಿ ಮರುಳಸಿದ್ಧ ಮೂತರ್ಿಯನ್ನು ಸಂಸ್ಥಾಪಿಸಿ, ಬೇತೂರು, ಆನೇಗೋಡುಗಳಲ್ಲಿ ಪ್ರಯಾಣ ಮಾಡುತ್ತ ಶ್ರೀ ಸಿದ್ಧಮಹೇಶ್ವರ ಎಂಬವರಿಗೆ ಪೀಠದ ಉತ್ತರಾಧಿಕಾರವನ್ನು ವಹಿಸಿ, ತಾವು ಹೂಲಿಯಲ್ಲಿಯೇ ಲಿಂಗೈಕ್ಯರಾದರು.
    ಶ್ರೀ ಜಗದ್ಗುರು ಸಿದ್ಧಮಲ್ಲೇಶ್ವರರು ತಮ್ಮ ತಪೋಬಲದಿಂದ ಬರಗಾಲದಲ್ಲಿ ಮಳೆ ತರಿಸಿದ್ದರಿಂದ ಮಳೆಮಲ್ಲೇಶ್ವರರೆಂತಲೂ, ಸಂತಾನ ಇಲ್ಲದವರಿಗೆ ಸಂತಾನ ಕರುಣಿಸಿದ್ದರಿಂದ ಸಂತಾನಮಲ್ಲೇಶ್ವರರೆಂತಲೂ ಪ್ರಸಿದ್ಧರಾದರು.  ಇವರು ಸಾವಿರಕ್ಕೊಂದು ಸಂತಾನ ಎಂದು ಸಾರಿದ್ದರಿಂದ ಬಹಳಷ್ಟು ಜನರು ಸಾವಿರಹೊನ್ನು ಕೊಟ್ಟು ಸಂತಾನವನ್ನು ಪಡೆದರು.  ಇವರಲ್ಲಿ ಉಜ್ಜಯಿನಿಯ ಬಿಜ್ಜೇಗೌಡ, ಬಾಗಳಿ ಬಸವನಾಯಕ, ಓಂಕಾರನಾಯಕ, ಹರಪುರಿಯ ಬುಳ್ಳ ನೃಪಾಲ ಮತ್ತು ವಿಜಯನಗರದ ಶ್ರೀ ಪ್ರೌಢರಾಯರು ಮುಖ್ಯರಾಗಿದ್ದಾರೆ.  ಶ್ರೀ ಪ್ರೌಢರಾಯನಿಗೆ ಸಂತಾನವಾದ ನಂತರ ವಿಜಯನಗರದಲ್ಲಿ ಶ್ರೀ ಜಗದ್ಗುರು ಸಿದ್ಧಮಲ್ಲೇಶ ಯೋಗಿಗಳ ತಪಃಪ್ರಭಾವದಿಂದ ಶಿವಭಕ್ತಿಯ ಪ್ರಚಾರವಾಯಿತು.  ಅಂತೆಯೇ ಪ್ರೌಢರಾಯನ ಅಮಾತ್ಯನಾದ ಲಕ್ಕಣ್ಣ ದಂಡೇಶನು ಶಿವತತ್ತ್ವ ಚಿಂತಾಮಣಿ ಎಂಬ ಗ್ರಂಥವನ್ನು ಬರೆದು ಗುರುಗಳ ಅನುಗ್ರಹಕ್ಕೆ ಪಾತ್ರನಾದನು. 
    ಮುಂದೆ ಒಮ್ಮೆ ಸಿಂದೋಗಿಪುರದ ಗೌಡನು ಸಾವಿರಹೊನ್ನು ಕೊಟ್ಟು ಸಂತಾನ ಪಡೆದದ್ದನ್ನು ಕಂಡು ಆತನ ಆಳುಮಗನಾದ ಹೊಲೆಯ ಜಾತಿಯ ಮಾರನೂ ಸಂತಾನಾಪೇಕ್ಷಿಯಾಗಿ ಗುರುಗಳನ್ನು ಬೇಡಿಕೊಂಡಾಗ ಗುರುವಾನುಗ್ರಹದಿಂದ ಮಾರನಿಗೂ ಗಂಡುಸಂತಾನವಾಯಿತು.  ಈ ಮಾರನಿಗೆ ಸಾವಿರಹೊನ್ನು ಕೊಡುವದಾಗದ್ದರಿಂದ ಸಾವಿರ ಕುಳ್ಳುಗಳನ್ನು ಕೊಟ್ಟು ದಾಸೋಹ ಸೇವೆಯನ್ನು ಮಾಡಿ ಗುರುಕೃಪೆಯನ್ನು ಪಡೆದನು.  ಸಿಂದೋಗಿಯ ಮಾರನಿಗೆ ಹುಟ್ಟಿದ ಆ ಕೂಸಿಗೆ ಮರುಳಸಿದ್ಧನೆಂದು ಹೆಸರಿಟ್ಟರು.  ಮುಂದೆ ಶ್ರೀ ಗುರುಗಳು ಈತನ ಪೂಜೆಗಾಗಿ ಸಿಂದೋಗಿಯ ಮಾದಿಗ ಕೇರಿಯಲ್ಲಿಯೇ ಭವ್ಯವಾದ ಮರುಳಸಿದ್ಧ ದೇವಾಲಯವನ್ನು ಕಟ್ಟಿಸಿ, ಅಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ಅದರ ಪೂಜೆಯ ಭಾರವನ್ನು ಈ ಮರುಳಸಿದ್ಧನಿಗೇ ಒಪ್ಪಿಸಿದರು.  ಈತನೇ ಮುಂದೆ ಒಬ್ಬ ಶರಣನಂತೆ ಬಾಳಿ ಬೆಳಗಿದನು.
    ಸಿಂದೋಗಿಯ ಹರಳನು ತಾನೂ ಮರುಳಸಿದ್ಧ ಮಂದಿರದಲ್ಲಿ ಪೂಜಿಸುವುದಾಗಿ ಬೇಡಿಕೊಂಡಾಗ ಶ್ರೀ ಗುರುಗಳು ಇವನನ್ನು ಉಜ್ಜಯಿನಿಗೆ ಕರೆದುಕೊಂಡು ಹೋಗಿ ಅಲ್ಲಿಯ ಮಾದಿಗ ಕೇರಿಯಲ್ಲಿ ಒಂದು ಮಂದಿರವನ್ನು ಕಟ್ಟಿಸಿ ಅಲ್ಲಿ ಪೂಜೆಗಾಗಿ ಈ ಹರಳನನ್ನು ನೇಮಿಸಿದರು.
     ಹೀಗೆ ಶ್ರೀ ಜಗದ್ಗುರು ಸಿದ್ಧಮಲ್ಲೇಶ್ವರರು ಭಕ್ತೋದ್ಧಾರ ಮಾಡುತ್ತ 80 ವರ್ಷ ಕಾಲ ಜೀವಿಸಿ ಕೊನೆಗೆ ಶ್ರೀ ಜಗದ್ಗುರು ಸಿದ್ಧನಾಥಾಚಾರ್ಯರಿಗೆ ಪಟ್ಟವನ್ನು ಕಟ್ಟಿ ಶಿವರಾತ್ರಿಯ ದಿವಸ ಲಿಂಗೈಕ್ಯರಾದರು.  ಆ ಸಮಯಕ್ಕೇನೇ ಇವರ ಶಿಷ್ಯರಾದ ಉಜ್ಜಯಿನಿಯ ಹರಳ ಮತ್ತು ಸಿಂದೋಗಿಯ ಮರುಳಸಿದ್ಧರಿಬ್ಬರೂ ಗುರುಧ್ಯಾನ ಮಾಡುತ್ತ  ಶಿವಾಧೀನರಾದರು.
    ಭವ್ಯವಾದ ಈ ಉಜ್ಜಯಿನೀ ಪೀಠ ಪರಂಪರೆಯಲ್ಲಿ ಶ್ರೀ ಜಗದ್ಗುರು ಸಿದ್ಧನಾಥರು 65 ವರ್ಷ, ಶ್ರೀ ಜಗದ್ಗುರು ಸಿದ್ಧೇಶ್ವರರು 95 ವರ್ಷ - ಹೀಗೆ ಪೀಠಾಧಿಕಾರವನ್ನು ನಡೆಸಿದ ನಂತರ ಶ್ರೀ ಗುರುಸಿದ್ಧ ವಟುಗಳಿಗೆ ಅಧಿಕಾರ ಪ್ರಾಪ್ತವಾಗುತ್ತದೆ.
    (ವಿಶೇಷ ವಿಚಾರ : ಶ್ರೀ ಉಜ್ಜಯಿನೀ ಪೀಠದ ಈ ಭವ್ಯ ಪರಂಪರೆ ಹೂಲಿಯ ಪಂಚವಣ್ಣಿಗೆಯ ನಂದೀಶ ಶಿವಕವಿ ವಿರಚಿತ 'ಶ್ರೀ ಜಗದ್ಗುರು ಮರುಳಾರಾಧ್ಯ ವಿಜಯ'ವೆಂಬ ಕಾವ್ಯದ ಗದ್ಯಾನುವಾದ ರೂಪವಾದ ಪಂ|| ಕವಲಿ ಚೆನ್ನಬಸಪ್ಪ, ವೇ|| ಮಠದ ಮರಿದೇವ  ಸ್ವಾಮಿಗಳಿಂದ ಸಂಪಾದಿತವಾಗಿ 1949ರಲ್ಲಿ ಪ್ರಕಟವಾದ ಶ್ರೀ ಮರುಳ ಸಿದ್ಧಾಂಕ ಎಂಬ ಗ್ರಂಥದ ಆಧಾರದ ಮೇಲಿಂದ ಬರೆಯಲಾಗಿದೆ.)
    1938ರಲ್ಲಿ ಕಾಶಿಯಲ್ಲಿ ಪ್ರಕಾಶಿತವಾದ ಶ್ರೀ ರಾಮದಾಸ ಗೌಡರಿಂದ ವಿರಚಿತವಾದ ಹಿಂದುತ್ವ ಎಂಬ ಹಿಂದೀ ಭಾಷೆಯ ಪುಸ್ತಕದ 695ನೇ ಪುಟದಲ್ಲಿ
    ಅವಂತಿಕಾಪುರೀ ಕೇ ಸಿದ್ಧೇಶ್ವರಲಿಂಗ ಸೇ, ಜೋ ಭಗವಾನ್ ಕೇ ವಾಮದೇವರೂಪ ಹೈ, ಭಗವಾನ್ ಮರುಲಾರಾಧ್ಯಜೀ ಪ್ರಕಟ್ ಹುಯೇ| ಕಹತೇ ಹೈ ಕೀ ವೇ ಅವಂತಕೀಕೇ ರಾಜಾಸೇ ಅನಬನ ಹೋ ಜಾನೇಕೇ ಕಾರಣ್, ಬಲ್ಲರೀ ಜಿಲೇಕೇ ಏಕ್ ಗಾಂವ್ ಮೇ ಆಕರ್ ಬಸ್ ಗಯೇ| ಉನಕೇ ಬಸನೇ ಸೇ ಉಸ್ ಗಾಂವ್ಕಾ ನಾಮ್ ಭೀ ಉಜ್ಜಯಿನೀ ಪಡ್ಗಯಾ | ಅವಂತೀ ಮೇ ಭೀ ಇಸ್ಕೀ ಏಕ ಶಾಕಾಮಠ ಅಬ್ತಕ್ ಮೌಜೂದ್ ಹೈ||
ಇದರ ಅರ್ಥವೇನೆಂದರೆ-
    ಪರಮಾತ್ಮನ ವಾಮದೇವಮೂತರ್ಿ ಸ್ವರೂಪವಾದ ಅವಂತಿಕಾಪುರಿಯ ಶ್ರೀ ಸಿದ್ಧೇಶ್ವರ ಲಿಂಗದಿಂದ ಶ್ರೀ ಮರುಳಾರಾಧ್ಯರು ಪ್ರಕಟವಾದರು.  ಕಾಲಾಂತರದಲ್ಲಿ ಅವಂತಿಕಾ ರಾಜರಿಂದ ಮನಸ್ತಾಪ ಉಂಟಾದಾಗ ಆ ಸ್ಥಾನವನ್ನು ತ್ಯಜಿಸಿ ಬಳ್ಳಾರಿ (ಕನರ್ಾಟಕ)ಜಿಲ್ಲೆಯ ಒಂದು ಊರಿನಲ್ಲಿ ಬಂದು ವಾಸಮಾಡಿದರು. ಅಂದಿನಿಂದ ಆ ಊರಿಗೆ ಉಜ್ಜಯಿನಿ ಎಂದೇ ಹೆಸರಾಯಿತು.  ಅವಂತಿಕಾದಲ್ಲಿ ಈಗಲೂ ಇವರ ಒಂದು ಮಠವು ಇದೆ ಎಂದು ಹೇಳಲ್ಪಟ್ಟಿದೆ.  ಶ್ರೀ ರಾಮದಾಸ ಗೌಡರ ಈ ಮಾತಿನಿಂದ ಇತ್ತೀಚಿನವರೆಗೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶ್ರೀ ಜಗದ್ಗುರು ಮರುಳಾರಾಧ್ಯರ ಸದ್ಧರ್ಮ ಸಿಂಹಾಸನ ಮಠವು ಅಸ್ತಿತ್ವದಲ್ಲಿ ಇತ್ತೆಂಬುದು ತಿಳಿದುಬರುತ್ತದೆ.  ಕಾಳ ಗತಿಸಿದಂತೆ ನಮ್ಮವರು ಯಾರೂ ಅಲ್ಲಿ ವಾಸಮಾಡದ ಪರಿಣಾಮವಾಗಿ ಇಂದು ಆ ಸ್ಥಾನವು ಅನ್ಯರಿಂದ ಆಕ್ರಮಿಸಲ್ಪಟ್ಟಿರುವುದು ವೀರಶೈವ ಧರ್ಮದ ದುದರ್ೈವವೆಂದೇ ಹೇಳಬೇಕಾಗುವುದು1.
    ಈ ಉಜ್ಜಯಿನಿ ಪೀಠದ ಆದ್ಯ ಮರುಳಾರಾಧ್ಯರನ್ನು ಮೊದಲ್ಗೊಂಡು ಇಂದು ಪೀಠಸ್ಥರಾಗಿರುವ ಶ್ರೀ ಜಗದ್ಗುರು ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರೆಗೆ ಶ್ರೀ ಪೀಠದ ಪಟ್ಟವಲ್ಲರಿಯ ಪ್ರಕಾರ 111 ಜನ ಮಹಾಸ್ವಾಮಿಗಳವರು ಶ್ರೀ ಉಜ್ಜಯಿನಿ ಸದ್ಧರ್ಮ ಸಿಂಹಾಸನದ ಅಧಿಪತಿಗಳಾಗಿದ್ದಾರೆ.  ಇವರಲ್ಲಿ ಬಹಳಷ್ಟು ಪೀಠಾಧಿಪತಿಗಳ ಜೀವನ ಚರಿತ್ರೆಗಳು ಕಾಲಗರ್ಭದಲ್ಲಿ ಅಡಗಿಹೋಗಿವೆ.
________________________________________________________________
1.  ವೀರಶೈವ ಪಂಚಪೀಠಗಳಲ್ಲೊಂದಾದ ಉಜ್ಜಯಿನಿ ಪೀಠದ ಮೂಲ ಆಚಾರ್ಯರಾದ ಶ್ರೀ ಜಗದ್ಗುರು ದಾರುಕಾಚಾರ್ಯರು ಸಿದ್ಧೇಶ್ವರ ಲಿಂಗದಿಂದ ಉದ್ಭವರಾಗಿ ಸದ್ಧರ್ಮ ಪೀಠ ಸ್ಥಾಪಿಸಿದ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಭೈರವಗಡ ಸಿದ್ಧ ವಟಕ್ಷೇತ್ರದ ಪವಿತ್ರ ಪರಿಸರದಲ್ಲಿ 'ಶ್ರೀ ಜಗದ್ಗುರು ಸಿದ್ಧೇಶ್ವರ ಸದ್ಧರ್ಮ ಕಾರ್ಯ ಸೇವಾ ಸಮಿತಿ' ಎಂಬ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ.
    ಹತ್ತು ಸಾವಿರ ವರ್ಷಗಳ ಪೂರ್ವದಲ್ಲಿ ಋಷಿಗಳು ಬರೆದಿಟ್ಟ ಸ್ಕಂದ ಪುರಾಣದ ಉಲ್ಲೇಖದಂತೆ ಮತ್ತು ಶೈವಾಗಮಗಳಲ್ಲಿಯ ವರ್ಣನೆಯಂತೆ ಇಂದಿಗೂ ಸಕಲ ಮಾನವಕುಲಕ್ಕೆ ಪವಿತ್ರ ಪೂಜನೀಯ ಯಾತ್ರಾಸ್ಥಳವಾಗಿರುವ ಸಿದ್ಧೇಶ್ವರನಿಗೆ ಮತ್ತು ಸಿದ್ಧವಟಿ ವೃಕ್ಷಕ್ಕೆ ಜಲ ಎರೆದು ಪೂಜೆ ಮಾಡಿ ಭಕ್ತಿಯನ್ನು ಸಲ್ಲಿಸಲು ದೇಶದ ನಾನಾ ಭಾಗಗಳಿಂದ ಆಗಮಿಸುತ್ತಿರುವ ಲಕ್ಷಾಂತರ ಭಕ್ತ ಗಣಕ್ಕೆ ಅನುಕೂಲತೆ ಒದಗಿಸಿಕೊಡುವುದು ಮತ್ತು ಮೂಲಪೀಠದ ಪರಿಸರದಲ್ಲಿ ಜಗದ್ಗುರು ದಾರುಕಾಚಾರ್ಯರ ಹಾಗೂ ಪಂಚಪೀಠಗಳ ಕುರಿತು ಜನಜಾಗೃತಿ ಮೂಡಿಸುವುದು, ಮೂತರ್ಿ ಪ್ರತಿಷ್ಠಾಪನೆ, ಸಂಸ್ಕೃತ ಪಾಠಶಾಲೆ, ಧರ್ಮಶಾಲೆ, ಆಯುವರ್ೇದ ಚಿಕಿತ್ಸಾಲಯ ಮುಂತಾದ ಅನೇಕ ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಟ್ರಸ್ಟ್ ಉದ್ದೇಶ ಹೊಂದಿದೆ.
    ಮೂರು ವರ್ಷಗಳ ಹಿಂದೆ ಸಿದ್ಧವಟಿ ಕ್ಷೇತ್ರದ ಪರಿಸರದಲ್ಲಿಯ ಎರಡು ಎಕರೆ ಸ್ಥಳವನ್ನು ಖರೀದಿ ಮಾಡಿಕೊಂಡಿದ್ದು, ಈಗಾಗಲೇ ಮೂರು ಕೋಣೆಗಳನ್ನು ಯಾತ್ರಿಕರಿಗಾಗಿ ಕಟ್ಟಿಸಲಾಗಿದೆ ಮತ್ತು ಕೆಲವು ಕೆಲಸಗಳು ಪ್ರಾರಂಭವಾಗಿದ್ದು ಇನ್ನಷ್ಟು ಕೆಲಸಗಳನ್ನು ಸಕ್ರಿಯಗೊಳಿಸಲು ದಿನಾಂಕ 22-11-1999ರ ಶುಭದಿನದಂದು ಐದು ಜನರನ್ನೊಳಗೊಂಡ ಟ್ರಸ್ಟ್ ಕಮೀಟಿಯನ್ನು ಉಜ್ಜಯಿನಿ ಜಿಲ್ಲಾ ನೋಂದಣಾಧಿಕಾರಿಗಳವರ ಕಛೇರಿಯಲ್ಲಿ ನೋಂದಾಯಿಸಲಾಯಿತು.  ಕನರ್ಾಟಕದ ಉಜ್ಜಯಿನಿ ಪೀಠದ ಶ್ರೀ 1008 ಜಗದ್ಗುರು ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಸಂಸ್ಥಾಪಕ ಸಂರಕ್ಷಕರಾಗಿದ್ದು ಅವರ ಆದೇಶ ಹಾಗೂ ಇಚ್ಛೆಯಂತೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಟ್ರಸ್ಟ್ ತನ್ನ ಕಾರ್ಯ ನಿರ್ವಹಿಸುತ್ತಲಿದೆ.
ಶ್ರೀ ಜಗದ್ಗುರು ಸಿದ್ಧಲಿಂಗವರೇಣ್ಯರು ಃ
    ಈ ಪೀಠದ ಪಟ್ಟವಲ್ಲರಿಯ ಪ್ರಕಾರ 108ನೆಯ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪೀಠದ ಉನ್ನತಿಗಾಗಿ ಬಹಳಷ್ಟು ಶ್ರಮಿಸಿದರು.  ಪೂಜ್ಯರು ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಂಗಾರನಾಯಕನ ಹಳ್ಳಿ ಎಂಬ ಗ್ರಾಮದ ಗುರುಸ್ಥಲಮಠದ ಶ್ರೀ ಚೆನ್ನಬಸವಾರ್ಯ ಮತ್ತು ಸೌ|| ಗುರುಸಿದ್ಧಾಂಬಾ ಎಂಬ ದಂಪತಿಗಳ ಪವಿತ್ರ ಗರ್ಭದಲ್ಲಿ 1890ನೆಯ ಇಸವಿ ಶಾ.ಶ. 1812ನೆಯ ವಿಕೃತಿನಾಮ
ಸಂವತ್ಸರ ಮಾಘ ಬಹುಳ ಸಪ್ತಮಿ ಭಾನುವಾರ ಸಂಧ್ಯಾ ಸಮಯದಲ್ಲಿ ಜನಿಸಿದರು.  ಇವರಿಗೆ ಶ್ರೀ ಸಿದ್ಧಲಿಂಗಾರ್ಯ ಎಂದು ನಾಮಕರಣವಾಯಿತು.
    ಉಜ್ಜಯಿನೀ ಪೀಠದ 107ನೇ ಪೀಠಾಧಿಕಾರಿಗಳಾಗಿದ್ದ ಶ್ರೀ ಜಗದ್ಗುರು ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯರು ಈ ಬಾಲಕನ ಭವಿತವ್ಯವನ್ನು ಅರಿತು ಶಾ.ಶ. 1828ನೆಯ(1906ನೆಯ ಇಸವಿ) ಪರಾಭವನಾಮ ಸಂವತ್ಸರ ವೈಶಾಖ ಬ|| ಪಂಚಮಿ ಭಾನುವಾರ ಉದಯ ಶುಭಮೂಹೂರ್ತದಲ್ಲಿ ಪೀಠಾಧಿಕಾರವನ್ನು ಅನುಗ್ರಹಿಸಿ ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳೆಂದು ನಾಮಕರಣವನ್ನು ಮಾಡಿದರು.
    ಅತಿ ಚಿಕ್ಕವಯಸ್ಸಿನಲ್ಲಿ, ಹದಿಹರೆಯದರಲ್ಲಿಯೇ ಜಗದ್ಗುರುತ್ವವನ್ನು ಪಡೆದ ಇವರು ತಮ್ಮ ಆಸ್ಥಾನ ವಿದ್ವಾಂಸರಾದ ಪಂ. ಶ್ರೀ ಉಮಚಿಗಿ ಶಂಕರ ಶಾಸ್ತ್ರಿಗಳವರಿಂದ ತರ್ಕ, ವ್ಯಾಕರಣಾದಿ ಶಾಸ್ತ್ರಗಳ ಜೊತೆಗೆ ವೀರಶೈವ ಧರ್ಮಗ್ರಂಥವಾದ ಶ್ರೀ ಸಿದ್ಧಾಂತ ಶಿಖಾಮಣಿಯನ್ನು ಚೆನ್ನಾಗಿ ಅಭ್ಯಸಿಸಿ ಅದರ ಆಚರಣೆಯನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಂಡರು.
    ತಪೋಬಲವನ್ನು ಬೆಳೆಸಿಕೊಂಡ ಇವರು ಶಿವಯೋಗಸಿದ್ಧಿಯ ಬಲದಿಂದ ಸಂಸಾರಿಗಳ ಸಂತಾಪವನ್ನು ದೂರೀಕರಿಸುತ್ತಿದ್ದರು.  ಇವರು ತಮ್ಮ ಪೀಠದಲ್ಲಿ ನಂದೆ, ಭದ್ರೆ, ಸುರಭಿ, ಸುಶೀಲೆ ಮತ್ತು ಸುಮನೆ ಎಂಬ ಪಂಚವರ್ಣಗಳ ಗೋವುಗಳನ್ನು ಸಂರಕ್ಷಿಸಿ ಅವುಗಳ ಪಂಚಾಮೃತದಿಂದ ಲಿಂಗಾಭಿಷೇಕವನ್ನು ಮಾಡುವುದರ ಜೊತೆಗೆ ಗೋಮಯದಿಂದ ಪರಿಶುದ್ಧವಾದ ವಿಭೂತಿಯನ್ನು ತಯಾರಿಸಿ ತಾವು ಧರಿಸುವುದರ ಜೊತೆಗೆ ಅನ್ಯರಿಗೂ ಸಹ ಗೋಮಯದಿಂದಲೇ ಸಿದ್ಧವಾದ ಶುದ್ಧ ಭಸ್ಮ ಧರಿಸುವಂತೆ ಉಪದೇಶಿಸುತ್ತಿದ್ದರು.
    ಬಳ್ಳಾರಿ ಪ್ರಾಂತ್ಯದಲ್ಲಿ ಒಮ್ಮೆ ಭೀಕರ ಬರಗಾಲ ಬಂದೊದಗಿದಾಗ ವಿಶೇಷ ಪೂಜಾನುಷ್ಠಾನ, ಅನ್ನಸಂತರ್ಪಣೆ-ಮುಂತಾದವನ್ನು ಮಾಡಿಸಿ 4-8-1921ರಿಂದ ಮೂರು-ನಾಲ್ಕು ದಿವಸ ಸತತ ಸುವೃಷ್ಟಿಯನ್ನು ಬರಿಸಿದ ಇವರ ಮಹಿಮೆಯು ಅಗಾಧವಾದುದು.
    ಧರ್ಮಜಾಗೃತಿಗಾಗಿ ದೇಶದ ನಾನಾ ಭಾಗಗಳಲ್ಲಿ ಇವರು ಸಂಚರಿಸಿ ಜನರಲ್ಲಿ ಧರ್ಮಜಾಗೃತಿಯನ್ನುಂಟು ಮಾಡಿದರು.  1912ರಲ್ಲಿ ಗುಲಬಗರ್ಾದ (ಕಲಬುಗರ್ಿ) ಶ್ರೀ ಶರಣ ಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪಾ ಅವರ ಆಮಂತ್ರಣದ ಮೇರೆಗೆ ದಯಮಾಡಿಸಿ ಅದ್ಧೂರಿಯಿಂದ ನಡೆದ ಅಡ್ಡಪಲ್ಲಕ್ಕಿ  ಉತ್ಸವದ ನಂತರ ಆ ನಾಡಿನ ಸಮಸ್ತ ಜನರಿಗೆ  ಧರ್ಮಬೋಧನೆಯನ್ನು ಮಾಡಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಕ್ರಿಯಾಮೂತರ್ಿಗಳಾದ ಶ್ರೀ ಸಿದ್ಧಲಿಂಗ ದೇಶಿಕರಿಗೆ ಮುಗಳನಾಗಾಯಿ ಹಿರೇಮಠದ ಪಟ್ಟಾಧಿಕಾರ ಪ್ರದಾನ ಮಾಡಿದರು.
    1918ರಲ್ಲಿ ಕಾಶಿಯಲ್ಲಿ ನಡೆದ ಪಂಚಾಚಾರ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಧರ್ಮಪ್ರಚಾರದ ದೃಷ್ಟಿಯಿಂದ ಹದಿಮೂರು ಠರಾವುಗಳನ್ನು ಮಂಡಿಸಿದರು.  ಅವುಗಳಲ್ಲಿ ಪಂಚಾಚಾರ್ಯ ಸಮ್ಮೇಳನದ ಸ್ಮಾರಕವಾಗಿ ಕಾಶಿಯ ಶ್ರೀ ವಿಶ್ವಾರಾಧ್ಯಗುರುಕುಲದ ಸ್ಥಾಪನೆಯು ಮಹತ್ವಪೂರ್ಣವಾದದ್ದು.  ಅಂದು ಸ್ಥಾಪಿತಗೊಂಡ ಈ ಗುರುಕುಲದಲ್ಲಿ ಪ್ರಾಯಃ ಕಾಶಿಗೆ ಅಧ್ಯಯನಕ್ಕೆ ಬಂದ ಕನರ್ಾಟಕ, ಮಹಾರಾಷ್ಟ್ರ, ಆಂಧ್ರ ಹಾಗೂ ಇನ್ನಿತರ ಭಾಗಗಳಲ್ಲಿ ಮಠಾಧಿಪತಿಗಳಾಗಿರುವ ಪ್ರತಿಯೊಬ್ಬ ಸ್ವಾಮಿಗಳೂ ಆಶ್ರಯ ಪಡೆದ ವಿದ್ಯಾಥರ್ಿಗಳೇ ಆಗಿರುತ್ತಾರೆ.
    ಧರ್ಮಪ್ರಚಾರದ ದೃಷ್ಟಿಯಿಂದ ಬಳ್ಳಾರಿ (12-12-1930), ಬಾರಸಿ, ಸೊಲ್ಲಾಪುರ (12-7-1933), ಪಂಢರಪುರ (23-10-1933), ಜಗಳೂರು (9-12-1928) ಮತ್ತು ಬೀರೂರು ಮುಂತಾದ ಅನೇಕ ಊರುಗಳಲ್ಲಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಉತ್ಸವಗಳು ಅತ್ಯಂತ ವೈಭವಪೂರ್ಣವಾಗಿ ಜರುಗಿದುದು ಐತಿಹಾಸಿಕ ಸಂಗತಿಯಾಗಿದೆ.
    27-12-1919ರಂದು ಬೀರೂರಿನಲ್ಲಿ ನಡೆದ  9ನೆಯ ವೀರಶೈವ ಮಹಾಸಭೆಗೆ ರಂಭಾಪುರಿಯ ಶ್ರೀ ಜಗದ್ಗುರು ಪಂಚಾಕ್ಷರ ಶಿವಾಚಾರ್ಯರು, ಕೇದಾರದ ಶ್ರೀ ಜಗದ್ಗುರು ವಿಶ್ವಲಿಂಗ ಶಿವಾಚಾರ್ಯರು ದಯಮಾಡಿಸಿದಂತೆ ಉಜ್ಜಯಿನಿಯ ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ದಯಮಾಡಿಸಿ ತಮ್ಮ ಅಮೋಘವಾದ ತಪೋವಾಣಿಯಿಂದ ಸಕಲರನ್ನೂ ಸಂತೃಪ್ತಿಪಡಿಸಿದರು.
    25-12-1926ರಂದು ಉಜ್ಜಯಿನಿ ಪೀಠದಲ್ಲಿಯೇ ನಾಗನೂರು ಬೃಹನ್ಮಠಾಧ್ಯಕ್ಷ ಶ್ರೀ ವೇ| ಪಂ| ಕಾಶೀನಾಥ ಶಾಸ್ತ್ರಿಗಳ ಕಾರ್ಯದಶರ್ಿತ್ವದಲ್ಲಿ 5ನೆಯ ಪಟ್ಟ-ಚರಾಧಿಕಾರಿಗಳ ಸಮ್ಮೇಳನವನ್ನು ನಡೆಸಿ ಪಟ್ಟ-ಚರಾಧಿಕಾರ ವರ್ಗಕ್ಕೆ ಸನ್ಮಾಗರ್ೋಪದೇಶ ಮಾಡಿದರು.
    ಕೇದಾರದ ಶ್ರೀ ಜಗದ್ಗುರು ವಿಶ್ವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು ಕನರ್ಾಟಕಕ್ಕೆ ಆಗಮಿಸಿದಾಗ ಅನಾರೋಗ್ಯದಿಂದ 15-7-1920ರಂದು ಉಜ್ಜಯಿನೀ ಪೀಠದಲ್ಲಿಯೇ ಲಿಂಗೈಕ್ಯರಾದ ಕಾರಣ, ಆ ಪೀಠದ ಉತ್ತರಾಧಿಕಾರದ ಭಾರವು ತಮ್ಮ ಮೇಲೆ ಉಳಿದದ್ದನ್ನು ತಿಳಿದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರಯತ್ನಮಾಡಿ ಮೊದಲೇ ವಟುವೆಂದು ನಿರ್ಣಯಗೊಂಡ ಶ್ರೀ ನೀಲಕಂಠಲಿಂಗರಿಗೆ ಕಾಶೀ ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತಹಸ್ತದಿಂದ ಕೇದಾರ ಜಗದ್ಗುರು ಪಟ್ಟಾಧಿಕಾರವನ್ನು 1-10-1921ರಂದು ನೆರವೇರಿಸಿ ಆ ಪೀಠವನ್ನು ಉದ್ಧರಿಸಿದರು.
    ಇದರಂತೆ ರಂಭಾಪುರೀ ಪೀಠದ ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಉತ್ತರಾಧಿಕಾರಿಯನ್ನು ನೇಮಿಸದೇ 8-2-1922ರಂದು ಲಿಂಗೈಕ್ಯರಾದರು.  ಮುಂದೆ ಈ ಪೀಠವು ಮೂರುವರ್ಷ ಕಾಲ ಅನಾಥವಾಗಿಯೇ ಉಳಿಯಿತು.  ಆ ಸಮಯದಲ್ಲಿ ಬುಕ್ಕಾಂಬುಧಿಯ ಗುಹೆಯಲ್ಲಿ ಶಿವಯೋಗಾನುಷ್ಠಾನವನ್ನು ಮಾಡಿ ತಮ್ಮ ಸಂಕಲ್ಪದಂತೆ ಹಾಗೂ ಸಕಲ ಭಕ್ತರ ಅಪೇಕ್ಷೆಯ ಮೇರೆಗೆ ರಂಭಾಪುರೀ ಪೀಠಕ್ಕೆ ಪಂ|| ಸದಾಶಿವ ಶಾಸ್ತ್ರಿಗಳೆಂಬ ನಾಮದಿಂದ ಕಾಶೀ ಪೀಠದಲ್ಲಿ ಸೇವೆ ಸಲ್ಲಿಸಿದ ವಿದ್ವತ್ವಟುವಿಗೆ ಶಾ.ಶ. 1847 ಕ್ರೋಧನನಾಮ ಸಂವತ್ಸರ ಮಾರ್ಗಶೀರ್ಷ ಶು||7 ಭಾನುವಾರ ಧನುರ್ಲಗ್ನದಲ್ಲಿ ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪುರೀ ಪೀಠದ ಜಗದ್ಗುರುತ್ವವನ್ನು ದಯಪಾಲಿಸಿ ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯರೆಂಬ ಅಭಿಧಾನವನ್ನು ದಯಪಾಲಿಸಿದರು.
ಪೀಠದ ಜೀಣರ್ೋದ್ಧಾರ ಃ   
    ಹೀಗೆ ವೀರಶೈವ ಧಮರ್ಾಚಾರ್ಯರ  ಕೀತರ್ಿಯನ್ನು ಭರತಖಂಡದಲ್ಲೆಲ್ಲ ಪ್ರಸಾರ ಮಾಡಿ ಕೃತಕೃತ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಉಜ್ಜಯಿನೀ ಪೀಠದ ಜೀಣರ್ೋದ್ಧಾರ ಕಾರ್ಯದಲ್ಲಿ ತತ್ಪರರಾಗಿ 101 ಗೋರಕ್ಷಣೆಯಾಗುವ ಮಹಾ ಗೋಶಾಲೆಯನ್ನೂ, ಪಂಚಾಚಾರ್ಯರ ಸಭಾಮಂಟಪವನ್ನೂ, ದಾಸೋಹಕ್ಕಾಗಿ ಮಹಾಪಾಕಶಾಲೆ ಮತ್ತು ಶಿವಾರ್ಚನೆಗಾಗಿ ಶಿವಪೂಜಾ ಮಂದಿರವನ್ನೂ ನಿಮರ್ಿಸಿ ಮಹತ್ಕಾರ್ಯವನ್ನು ಮಾಡಿದ್ದಾರೆ. 
ವಿದ್ಯಾದಾನ ಃ
    ವಿದ್ಯಾಪ್ರೇಮಿಗಳೂ, ವಿದ್ವಾಂಸರೂ ಆದ ಪೂಜ್ಯ ಜಗದ್ಗುರುಗಳವರು ತಮ್ಮ ಪೀಠದಲ್ಲಿ ಶ್ರೀ ದಾರುಕಾಚಾರ್ಯ ಸಂಸ್ಕೃತ ಪಾಠಶಾಲೆಯನ್ನು ಸಂಸ್ಥಾಪಿಸಿ, ಅದರ ಪ್ರಾಧ್ಯಾಪಕರೂ, ಸದ್ಧರ್ಮ ಪೀಠದ ಆಸ್ಥಾನ ವಿದ್ವಾಂಸರೂ ಆದ ಪಂ|| ಶ್ರೀ ಉಮಚಿಗಿ ಶಂಕರ ಶಾಸ್ತ್ರಿಗಳವರಿಂದ ಈಶ-ಕೇನ-ಕಠ-ಮುಂಡಕ-ಸಿದ್ಧಾಂತ ಶಿಖೋಪನಿಷತ್ ಮತ್ತು ಬ್ರಹ್ಮಸೂತ್ರಗಳ ಮೇಲೆ ವೀರಶೈವ ಸಿದ್ಧಾಂತ ಪರವಾದ ಶಾಂಕರೀ ವೃತ್ತಿಯನ್ನೂ, ಸಿದ್ಧಾಂತ ಸುಧಾಕರವೇ ಮೊದಲಾದ ಗ್ರಂಥಗಳನ್ನು ಬರೆಯಿಸಿ ಪ್ರಕಾಶಪಡಿಸಿದರು.  ಇವರ ಈ ಎಲ್ಲ ಗ್ರಂಥಗಳೂ ಕಾಶಿಯ ಸಂಪೂಣರ್ಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ 1983ರಿಂದ ಪ್ರಾರಂಭವಾದ ಶಕ್ತಿವಿಶಿಷ್ಟಾದ್ವೈತ ವೇದಾಂತ ಶಾಸ್ತ್ರ ಮತ್ತು ಆಚಾರ್ಯ ಪರೀಕ್ಷೆಗೆ ಪಠ್ಯಗ್ರಂಥಗಳಾಗಿ ಸ್ವೀಕರಿಸಲ್ಪಟ್ಟಿರುತ್ತವೆ.  ಪೂಜ್ಯ ಜಗದ್ಗುರುಗಳವರು ಇಂತಹ ಗ್ರಂಥ ಪ್ರಕಾಶನಕ್ಕೋಸ್ಕರವಾಗಿ ಜ್ಞಾನಗುರು ವಿದ್ಯಾಪೀಠ ಎಂಬ ಸಂಸ್ಥೆಯನ್ನು ಸಂಸ್ಥಾಪಿಸಿದರು.  ಈ ವಿದ್ಯಾಪೀಠವು ಇಂದಿನವರೆಗೂ ತನ್ನ ಕಾರ್ಯವನ್ನು ಅವ್ಯಾಹತವಾಗಿ ನಡೆಸುತ್ತ ಬಂದಿದೆ.
    ಪೂಜ್ಯ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು ಬಳ್ಳಾರಿ ವಿಭಾಗದ ಸಮಸ್ತ ವೀರಶೈವರ ವಿದ್ಯಾಭಿವೃದ್ಧಿಗೋಸ್ಕರ 16-10-1916ರಂದು ಮದ್ರಾಸ್ ವೀರಶೈವ ವಿದ್ಯಾವರ್ಧಕ ಸಂಘ ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಪೂಜ್ಯರು ರೂ. 5000/- (ಐದುಸಾವಿರ) ಮೂಲನಿಧಿಯನ್ನು ಆಶೀರ್ವದಿಸಿದರು.  ಪೂಜ್ಯರ ಆಶೀವರ್ಾದ ಬಲದಿಂದ ಆ ಸಂಸ್ಥೆಯು ವೀರಶೈವ ವಿದ್ಯಾವರ್ಧಕ ಸಂಘ, ಬಳ್ಳಾರಿ ಎಂಬ ಹೆಸರಿನಿಂದ ಬೆಳೆದು ಪ್ರಾಥಮಿಕ ಶಾಲೆಯಿಂದ ಪ್ರಾರಂಭಿಸಿ ಎಲ್ಲ ವಿಷಯಗಳ ಕಾಲೇಜುಮಟ್ಟದ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಲಿದೆ. 
    ಶಾ.ಶ.  1800ರಲ್ಲಿ (1878ನೆಯ ಇಸವಿ) ಸೊಲ್ಲಾಪುರದ ವಾರದ ಮಲ್ಲಪ್ಪನವರು ಶ್ರೀಮದ್ವೀರಶೈವ ವಾರದ ಸಂಸ್ಕೃತ ಪಾಠಶಾಲೆಯನ್ನು ಸ್ಥಾಪಿಸಿ, ವೀರಶೈವ ವಟುಗಳಿಗೆ ಉಚಿತವಾಗಿ  ವಸತಿ, ವಸ್ತ್ರ, ಭೋಜನಾದಿಗಳ ವ್ಯವಸ್ಥೆಯನ್ನು ಮಾಡಿ, ಸಂಸ್ಕೃತ ಶಿಕ್ಷಣವನ್ನು ಕೊಡುತ್ತಿದ್ದರಲ್ಲದೇ, ವೀರಶೈವಲಿಂಗೀ ಬ್ರಾಹ್ಮಣ ಗ್ರಂಥಮಾಲೆಯನ್ನು ಪ್ರಾರಂಭಿಸಿ, ಅದರ ಮುಖಾಂತರ ನೂರಾರು ಸಂಸ್ಕೃತ ಧರ್ಮಗ್ರಂಥಗಳನ್ನು ಪ್ರಕಾಶಗೊಳಿಸಿದರು.  ಅವರು ಲಿಂಗೈಕ್ಯರಾದ ನಂತರ ಪಾಠಶಾಲೆಯ ಸ್ಥಿತಿಯು ಅವನತಿಗೆ ಬಂದದ್ದನ್ನರಿತ ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸೊಲ್ಲಾಪುರಕ್ಕೆ ಬಂದಾಗ 31-8-1933ರಂದು ಪಾಠಶಾಲೆಗೆ ದಯಮಾಡಿಸಿ ಈ ಮಹಾ ಪಾಠಶಾಲೆಯು ಚಿರಕಾಲ ನಡೆಯಲೆಂಬ ಸದುದ್ದೇಶದಿಂದ ಶ್ರೀಮಂತ ವಾರದ ಮಲ್ಲಪ್ಪ ಮಹೋದಯರ ಸ್ಮಾರಕವಾಗಿ ರೂ. 5000/- (ಐದು ಸಾವಿರ) ಆಶೀರ್ವದಿಸಿ ಸದರೀ ಪಾಠಶಾಲೆಯನ್ನು ಸಾರ್ವಜನಿಕಸಂಸ್ಥೆಯನ್ನಾಗಿ ಮಾಡಿದರು.  ಪೂಜ್ಯರ ಆಶೀವರ್ಾದ ಬಲದಿಂದ ಬಹುದಿನಗಳವರೆಗೆ ಸುಚಾರರೂಪವಾಗಿ ನಡೆದು ಸಂಚಾಲಕ ವರ್ಗದ ದಕ್ಷ ಆಡಳಿತ ಇಲ್ಲದ್ದರಿಂದಲೂ, ಸಂಸ್ಕೃತವನ್ನು ಓದುವ ವಿದ್ಯಾಥರ್ಿಗಳ ಅಭಾವದಿಂದಲೂ ಇಂದು ಈ ಪಾಠಶಾಲೆಯು ಬಹಳ ದಯನೀಯ ಸ್ಥಿತಿಯಲ್ಲಿದೆ ಎಂದು ಹೇಳಲು ಖೇದವಾಗುತ್ತದೆ.
ವರಪ್ರದಾನ ಃ
    ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ತಪಃಪ್ರಭಾವದಿಂದ ಅನೇಕ ಲೀಲೆಗಳನ್ನು ಮಾಡಿ ಅನೇಕ ಜನರಿಗೆ ವರಪ್ರದಾನವನ್ನು ಮಾಡಿದ್ದಾರೆ.  ಇವರ ಅನುಗ್ರಹಕ್ಕೆ ಪಾತ್ರರಾದ ಹೊಟಗಿ ಪಟ್ಟಾಧ್ಯಕ್ಷರಾದ ಶ್ರೀ ಚೆನ್ನವೀರ ಶಿವಾಚಾರ್ಯರು ಪರಮ ತಪಸ್ವಿಗಳಾಗಿ ಕೀತರ್ಿಶಾಲಿಗಳಾದರು.  ಅವರಂತೆ ಅಂದು ಪಾಲಿಕೊಪ್ಪದ ಪಟ್ಟಾಧ್ಯಕ್ಷರಾದ ಶ್ರೀಗಳು ಮುಂದೆ ರಂಭಾಪುರೀ ಪೀಠಕ್ಕೆ ಅಧಿಪತಿಗಳಾಗಿ ಶ್ರೀ ಜಗದ್ಗುರು ಪ್ರಸನ್ನರೇಣುಕ ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳೆಂದು ಹೆಸರುವಾಸಿಯಾದುದು ಸರ್ವರಿಗೂ ತಿಳಿದ ವಿಷಯವಾಗಿದೆ.
    ನೈಷ್ಠಿಕ ಬ್ರಹ್ಮಚಾರಿಗಳಾಗಿ ಪಂಚಾಚಾರ್ಯರ ಸೇವಾನಿರತರಾಗಿದ್ದ ಕಾಶೀನಾಥ ಶಾಸ್ತ್ರಗಳವರ ಮೇಲೆ ಪೂಜ್ಯ ಜಗದ್ಗುರುಗಳ ಕೃಪಾದೃಷ್ಟಿಯು ಸಂಪೂರ್ಣವಾಗಿತ್ತು.  ಅಂತೆಯೇ 16-5-1927ರಂದು (ಶಾ.ಶ. 1848 ಪ್ರಭವನಾಮ ಸಂವತ್ಸರ ವೈಶಾಖ ಶು|| ಪಂಚಮಿ) ದಾರುಕಾಚಾರ್ಯರ ಜಯಂತಿಯ ದಿನ ಪೂಜ್ಯ ಜಗದ್ಗುರುಗಳು ರೂ. 5000/- (ಐದು ಸಾವಿರ)ಗಳನ್ನು ಆಶೀರ್ವದಿಸಿ ಮೈಸೂರಿನಿಂದ ಶ್ರೀ ಶಾಸ್ತ್ರಿಗಳವರ ನೇತೃತ್ವದಲ್ಲಿ ಪಂಚಾಚಾರ್ಯ ಪ್ರಭಾ ಎಂಬ ಧಾಮರ್ಿಕ ಪತ್ರಿಕೆಯು ಅವ್ಯಾಹತವಾಗಿ ನಡೆಯುವಂತೆ ಅನುಗ್ರಹಿಸಿದರು.  ಪೂಜ್ಯರ ಅನುಗ್ರಹದಿಂದ ಈ ಪತ್ರಿಕೆಯು ಇಂದಿನವರೆಗೂ ಅವಿರತವಾಗಿ ಸಾಗಿಬಂದಿದೆ.  ಹೀಗೆ ತಮ್ಮ ಜೀವಾವಧಿಯವರೆಗೆ ಧರ್ಮಕ್ಕಾಗಿ ಶ್ರಮಿಸಿ ಶಾ.ಶ. 1857ನೆಯ ಯುವನಾಮ ಸಂ|| ಪುಷ್ಯ ಬಹುಳ 4 ದಿ|| 12-1-1936ನೆಯ ಭಾನುವಾರ ಉದಯಕಾಲದಲ್ಲಿ ಲಿಂಗೈಕ್ಯರಾದರು.  ಪ್ರಾಜ್ಞ ಓದುಗರು ಒಂದು ಅಂಶವನ್ನು ಗಮನಿಸಿದರೆ ಈ ಮಹಾತ್ಮನ ಮಹತಿ ತಿಳಿಯುವುದು.  ಅವರು ಜನಿಸಿದ್ದು ಭಾನುವಾರ, ಜಗದ್ಗುರುತ್ವ ಸ್ವೀಕರಿಸಿದ್ದು ಭಾನುವಾರ ಮತ್ತು ಲಿಂಗೈಕ್ಯರಾದದ್ದೂ ಸಹ ಭಾನುವಾರವೇ! ಅವರ ಜೀವನ ತ್ರಿಪುಟ!
ಶ್ರೀ ಸಿದ್ಧೇಶ್ವರ ಜಗದ್ಗುರುಗಳು ಃ
    ಪೂಜ್ಯ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮೂರು ತಾಲ್ಲೂಕು ಆನೇಸಿದ್ಧಾಪುರ  ಬೃಹನ್ಮಠದ ಶ್ರೀ ಷ| ಬ್ರ| ತ್ರಿಲೋಚನ ಶಿವಾಚಾರ್ಯರು ಉತ್ತರಾಧಿಕಾರಿಗಳೆಂದು ನೇಮಿತರಾದರು.  ಯುವನಾಮ ಸಂವತ್ಸರ ಮಾಘ ಶು|| ದಶಮಿ ದಿ|| 2-2-1936ನೆಯ ಭಾನುವಾರ ದಿವಸ ಶ್ರೀಮದ್ರಂಭಾಪುರೀ ವೀರ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಶಿವಾನಂದರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಮತ್ತು ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸನ್ನಿಧಾನದಲ್ಲಿ ಅಧಿಕಾರಗ್ರಹಣ ಮಾಡಿದರು.  ಆಗ ಇವರಿಗೆ ಶ್ರೀ 1008 ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳೆಂಬ ನಾಮಕರಣ ಮಾಡಲ್ಪಟ್ಟಿತು.
    ಶ್ರೀ ಜಗದ್ಗುರು ಸಿದ್ಧೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಸುಮಾರು 60 ವರ್ಷಕ್ಕೂ ಮಿಕ್ಕಿ ಪೀಠೋದ್ಧಾರದ ಕಾರ್ಯವನ್ನು ಮಾಡಿದರು.  ಇವರು ಅಧಿಕಾರಕ್ಕೆ ಬಂದ ನಂತರ ಪೂರ್ವದ ಜಗದ್ಗುರುಗಳ ಸಂಕಲ್ಪದ ಕೆಲ ಅಪೂರ್ಣವಾದ ಗೋಶಾಲೆ ಮುಂತಾದ ಕಟ್ಟಡಗಳ ಕೆಲಸಗಳನ್ನು ಪೂರ್ಣಮಾಡುವುದರ ಜೊತೆಗೆ ಜ್ಞಾನಗುರು ವಿದ್ಯಾಪೀಠವನ್ನು ನೋಂದಣಿ ಮಾಡಿಸಿ ತಮ್ಮ ಪೂಜ್ಯ ಗುರುಗಳ ಸಂಕಲ್ಪವನ್ನು ಸಾಕಾರಗೊಳಿಸಿದ್ದಾರೆ.  ಈ ಸಂಸ್ಥೆಗಾಗಿ ಭೂಮಿ ಹಾಗೂ ಧನವನ್ನು ಸಂಗ್ರಹಿಸಿಟ್ಟಿದ್ದಾರೆ.  ಇದರ ಜೊತೆಗೆ ಚಿತ್ರದುರ್ಗ, ಗದಗ, ತುರುವನೂರು, ಉಜ್ಜಯಿನಿಗಳಲ್ಲಿ  ಪ್ರಸಾದ ನಿಲಯಗಳನ್ನು, ಐದು ಸಂಸ್ಕೃತ ಪಾಠಶಾಲೆಗಳನ್ನೂ, ಉಜ್ಜಯಿನಿ, ಯಲಿವಾಳ, ಹರಪನಹಳ್ಳಿ, ಯಶವಂತನಗರ, ಹೊಳಗುಂದಿ ಮುಂತಾದ ಗ್ರಾಮಗಳಲ್ಲಿ ಪ್ರೌಢಶಾಲೆ, ಕಾಲೇಜುಗಳನ್ನೂ ಸ್ಥಾಪಿಸಿದ್ದಾರೆ.  ಧರ್ಮಪ್ರಚಾರಕ್ಕಾಗಿ ಸದ್ಧರ್ಮ ಪ್ರಭಾ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು.
    ಇವರು ಬಹಳ ವಯೋವೃದ್ಧರಾದ ಕಾರಣ ಮೈಸೂರು ಅರಮನೆ ಜಪದಕಟ್ಟೆ ಬೃಹನ್ಮಠದ ಶ್ರೀ ಷ||ಬ್ರ|| ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳಿಗೆ ಶ್ರೀ ಜಗದ್ಗುರು ಸಿದ್ಧೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಸದ್ಧರ್ಮ ಪೀಠದ ಪ್ರಾಚೀನ ಪದ್ಧತಿಯಂತೆ ದಿ||28-8-1985 ಕ್ರೋಧನನಾಮ ಸಂವತ್ಸರದ ಶ್ರಾವಣ ಶುದ್ಧ ತ್ರಯೋದಶಿ ಶ್ರವಣ ನಕ್ಷತ್ರ ಬುಧವಾರ ಶುಭಮುಹೂರ್ತದಲ್ಲಿ ಸದ್ಧರ್ಮ ಸಿಂಹಾಸನದ ಪೀಠದಲ್ಲಿ ಪಂಚಮುದ್ರಾ ಪೂರ್ವಕ ಕಿರೀಟಧಾರಣೆಯನ್ನು ಮಾಡಿ ಚರಪಟ್ಟಾಧಿಕಾರವನ್ನು ಅನುಗ್ರಹಿಸಿ ಶ್ರೀ 1008 ಜಗದ್ಗುರು ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳೆಂಬ ನೂತನ ನಾಮಕರಣವನ್ನು ಮಾಡಿದರು.
ಹಳ್ಳಿಯ ಹೊಳಪು ಃ
    ಹಳ್ಳಿಗಳಲ್ಲಿ ಒಳ್ಳೆಯವರು ಜನಿಸುವುದು ಸಾಮಾನ್ಯವೆಂಬುದು ಅನೇಕ ಮಹಾಪುರುಷರ ಚರಿತ್ರೆಗಳಿಂದ ತಿಳಿದುಬರುತ್ತದೆ.  ಉಜ್ಜಯಿನಿ ಸದ್ಧರ್ಮ ಪೀಠದ 110ನೆಯ ಪೀಠಾಚಾರ್ಯರಾಗಿದ್ದ ಶ್ರೀ ಜಗದ್ಗುರು ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಜನಿಸಿದುದು ಚಿತ್ರದುರ್ಗ ಜಿಲ್ಲೆಯ ಕಂದಗಲ್ಲು ಎಂಬ ಪುಟ್ಟ ಗ್ರಾಮದಲ್ಲಿ.  ಅಂತಹ ಹಳ್ಳಿಯಲ್ಲಿ ಜನಿಸಿದ ಅವರು ಕಂತುಹರನ ಕೃಪೆಯಿಂದ ಮಹಂತರ ಸಾಲಿನಲ್ಲಿ ಮೆರೆದುಹೋದರು.
    ಆಚಾರ ಸಂಪನ್ನರಾದ, ವಿಚಾರಶೀಲ ವೀರಮಾಹೇಶ್ವರರಾಗಿದ್ದ ಶ್ರೀ ವೇ| ಚೆನ್ನಬಸವಯ್ಯನವರ ಸಹಧಮರ್ಿಣಿ ಶರಣೆ ಶ್ರೀಮತಿ ಕೊಟ್ರಮ್ಮನವರ ಸತ್ಪುತ್ರನಾಗಿ 1936ರಲ್ಲಿ ಜನಿಸಿದ ಶಿವಪ್ರಕಾಶನು ತಮ್ಮ ಮೂಲಮಠವಾದ ಉಜ್ಜಯಿನಿ ಪೀಠದ ಶಾಖಾಮಠವೂ ಆದ ಚಿತ್ರದುರ್ಗದ ಉಜ್ಜಯಿನಿ ಮಠದಲ್ಲಿ ಇದ್ದು, ಪ್ರಾಥಮಿಕ ಶಿಕ್ಷಣವನ್ನು ಪಡೆದರು.  ಅದು ಪುತ್ರವರ್ಗ ಮಠವಾದುದರಿಂದ ಅನಿವಾರ್ಯವಾಗಿ ಹದಿವಯದಲ್ಲೇ  ಪಟ್ಟಾಧ್ಯಕ್ಷರಾಗಬೇಕಾಯಿತು.  ಅವರಿಗೆ ಶ್ರೀ ಷ|ಬ್ರ| ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳೆಂಬ ಅಭಿಧಾನವು ಪ್ರಾಪ್ತವಾಯಿತು.  ವಿದ್ಯೆಯ ಹಸಿವು ಇದ್ದುದರಿಂದ ಶ್ರೀಗಳವರು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸತತವಾಗಿ 12 ವರ್ಷಗಳವರೆಗೆ ಅಧ್ಯಯನ ಮಾಡಿ 1954ರಲ್ಲಿ ಶಕ್ತಿವಿಶಿಷ್ಟಾದ್ವೈತ ವೇದಾಂತ ವಿದ್ವತ್ ಪದವೀಭೂಷಿತರಾದರು.  ವ್ಯಕ್ತಿತ್ವವನ್ನು ಗುರುತಿಸಿ  ಗುರುತರ ಹೊಣೆ ಹೊರಿಸುವ ಕಲಾನಿಪುಣರಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯದೃಷ್ಟಿಗೆ ಶ್ರೀಗಳು ಪಾತ್ರರಾದರು.  12 ವರ್ಷಗಳಿಂದ ಬೆಂಗಳೂರಿನ ಶ್ರೀ ಮಹಂತರ ಮಠದಲ್ಲಿ ಇರುವಾಗಲೇ ತಪೋನಿಧಿ ವೀರವಿರಾಗಿ, ಧರ್ಮಸಿಂಹರೆನಿಸಿದ್ದ ಶ್ರೀಮದ್ ರಂಭಾಪುರೀ ಜಗದ್ಗುರು ವೀರಗಂಗಾಧರ ರಾಜದೇಶಿಕೇಂದ್ರ  ಶಿವಾಚಾರ್ಯ ಮಹಾಸ್ವಾಮಿಗಳವರ ಅನುಗ್ರಹಕ್ಕೂ ಪಾತ್ರರಾಗಿದ್ದರು.  ಹೀಗಾಗಿ ಅರಿವು-ಆಚಾರ-ವಿಚಾರಗಳ ತ್ರಿವೇಣಿ ಸಂಗಮದಂತೆ ಶ್ರೀಗಳವರ ಬದುಕು ರೂಪುಗೊಂಡಿತು. 
ಗುರುಕಾರುಣ್ಯ ಃ
    ವಿದ್ಯಾಭ್ಯಾಸ ಮುಗಿಸಿಕೊಂಡು ಚಿತ್ರದುರ್ಗಕ್ಕೆ ಬಂದ ನಂತರ ಉಜ್ಜಯಿನಿ ಜಗದ್ಗುರುಗಳವರು ಇವರ ಕತರ್ೃತ್ವ ಶಕ್ತಿಯನ್ನು ಮೆಚ್ಚಿ ಧರ್ಮ ಹಾಗೂ ಸಮಾಜಸೇವೆಗೆ ತೊಡಗುವಂತೆ ಆದೇಶಿಸಿದರು.  ಜ್ಞಾನಗುರು ವಿದ್ಯಾಪೀಠವು ಆಗಲೇ ನೋಂದಾಯಿಸಲ್ಪಟ್ಟಿತ್ತು.  ಅದರ ಅಧ್ಯಕ್ಷತೆಯನ್ನು ಜಗದ್ಗುರುಗಳವರು ಇವರಿಗೆ ದಯಪಾಲಿಸಿದರು.  ಹೀಗಾಗಿ ವಿದ್ಯಾಕ್ಷೇತ್ರದ ವಿಸ್ತರಣೆಗೆ ವಿಶೇಷ ಗಮನಕೊಡಲು ಸಾಧ್ಯವಾಯಿತು.  ಚಿತ್ರದುರ್ಗದಲ್ಲಿ ಶ್ರೀ ಸಿದ್ಧೇಶ್ವರ ಪ್ರಸಾದ ನಿಲಯ, ಸಂಸ್ಕೃತ, ವೇದ ಪಾಠಶಾಲೆ - ಅಂಬಳಿ, ಹೊಸಳ್ಳಿ, ಅರಸೀಕೆರಿ, ಜಗಳೂರು, ಲಕ್ಷ್ಮೇಶ್ವರ, ಗದಗ, ಯಲಿವಾಳ ಮುಂತಾದ ಹಳ್ಳಿಪಟ್ಟಣಗಳಲ್ಲಿ ಪ್ರೌಢಶಾಲೆಗಳನ್ನು, ಪ್ರಸಾದ ನಿಲಯಗಳನ್ನು ಪ್ರಾರಂಭಿಸಿದರು.  ಹಿರಿಯ ಜಗದ್ಗುರುಗಳು ಪ್ರಾರಂಭಿಸಿದ್ದ 'ಸದ್ಧರ್ಮ ಪ್ರಭಾ' ತ್ರೈಮಾಸಿಕದ ಸಂಪಾದಕತ್ವವನ್ನು ವಹಿಸಿಕೊಂಡು ಸೈದ್ಧಾಂತಿಕ ಹಾಗೂ ಧಾಮರ್ಿಕ ವಿಚಾರಗಳನ್ನೊಳಗೊಂಡ ವಿಶಿಷ್ಟ ಪತ್ರಿಕೆಯನ್ನಾಗಿ ಪ್ರಸಾರಗೊಳಿಸಿದರು.  ಅದರ ಪ್ರಭಾವಲಯ ಇನ್ನಷ್ಟು ವ್ಯಾಪಕವಾಯಿತು.
    ಉಜ್ಜಯಿನಿ ಸದ್ಧರ್ಮ ಪೀಠವನ್ನು ಆಳಿದ ಮಹಾಮಂತ್ರ ಸ್ವರೂಪರೆಂದೆನಿಸಿದ್ದ ಶ್ರೀ ಜಗದ್ಗುರು ಗುರುಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯರು ಮೈಸೂರು ಪ್ರಾಂತದಲ್ಲಿ ಸಂಚರಿಸುವಾಗ ಶಂಭುಲಿಂಗ ಬೆಟ್ಟವು ಅವರನ್ನು ಆಕಷರ್ಿಸಿತು.  ಆ ಗುಹೆಯಲ್ಲಿ ಲಿಂಗ ಪೂಜಾನುಷ್ಠಾನ ತತ್ಪರರಾದರು.  ಅವರ ಮಹಿಮೆಯನ್ನು ಕೇಳಿದ ಆಗಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಮುಮ್ಮಡಿ ಕೃಷ್ಣರಾಜರು ಉಜ್ಜಯಿನಿ ಜಗದ್ಗುರುಗಳ ದರ್ಶನಕ್ಕೆ ಆಗಮಿಸಿದರು.  ಅವರ ತೇಜಸ್ಸು - ಓಜಸ್ಸುಗಳ ಪ್ರಭಾವಕ್ಕೆ ಒಳಗಾದ ಮಹಾರಾಜರು ಅರಮನೆಗೆ ದಯಮಾಡಿಸಲು ಅರಿಕೆ ಮಾಡಿಕೊಂಡರು.  ರಾಜರು ಭೋಗಿಗಳು ಎಂಬ ಭಾವನೆಯಿಂದ ಕೂಡಲೇ ದಯಮಾಡಿಸಲು ಒಪ್ಪದ ಸನ್ನಿಧಿಯವರು ಮಹಾರಾಜರ ಬಗ್ಗೆ ತಿಳಿದುಕೊಂಡು ಕೆಲದಿನಗಳ ನಂತರ ಮೈಸೂರು ಸಂಸ್ಥಾನದ ಸಕಲ ಬಿರುದಾವಳಿಗಳೊಂದಿಗೆ ಉತ್ಸವಪೂರ್ವಕವಾಗಿ ಅರಮನೆಗೆ ದಯಮಾಡಿಸಿದರು.  ಅರಸರು ಲಿಂಗಾಂಗಿಗಳೆಂದು ಅರಿತ ಜಗದ್ಗುರುಗಳವರು  ಶಿವತತ್ತ್ವೋಪದೇಶ ಮಾಡಿ ಅನುಗ್ರಹಿಸಿದರು.  ಮಹಾರಾಜರ ಮನವಿಯಂತೆ ರಾಜರು ಕೊಟ್ಟ ಕಟ್ಟಡಗಳಲ್ಲಿ ಗುರುಮಠವೊಂದನ್ನು ಸ್ಥಾಪಿಸಿ, ಓರ್ವ ಗುರುವನ್ನು ನಿಯುಕ್ತಗೊಳಿಸಿ, ಕೆಲಕಾಲ ಶಿವಪೂಜಾದಿ ಅನುಷ್ಠಾನ ಕಾರ್ಯಗೈದು ಪೀಠಕ್ಕೆ ಮರಳಿದರು.  ಅಂದಿನಿಂದ ಅದು ಅರಮನೆ ಜಪದಕಟ್ಟೆ ಮಠವೆಂದು ಪ್ರಸಿದ್ಧಿ ಪಡೆಯಿತು.  ಅದು ಉಜ್ಜಯಿನಿ ಪೀಠದ ಶಾಖಾಮಠವಾಗಿ ಇಂದಿಗೂ ರಾರಾಜಿಸುತ್ತಿದೆ.
    ಅರಮನೆಯ ಜಪದಕಟ್ಟೆ ಮಠವು ಕೆಲವರುಷಗಳಿಂದ ಅನಾಥವಾಗಿತ್ತು.  ಗುರುಗಳು ಇಲ್ಲದಿದ್ದುದನ್ನು ಗಮನಿಸಿದ ಹಿರಿಯ ಜಗದ್ಗುರುಗಳು ಶ್ರೀ ಶಿವಪ್ರಕಾಶ ಶಿವಾಚಾರ್ಯರನ್ನೇ ನೇಮಿಸಿ ಶ್ರೀ ಇಮ್ಮಡಿ ಸದಾಶಿವ ಶಿವಾಚಾರ್ಯರೆಂದು ನಾಮಕರಣ ಮಾಡಿದರು.  1967ರಿಂದ ಮೈಸೂರಿನ ಅರಮನೆ ಜಪದಕಟ್ಟಿ ಮಠಾಧ್ಯಕ್ಷರಾಗಿ ಅನುಪಮ ಕಾರ್ಯವೆಸಗಿದರು.  ಸದ್ಧರ್ಮ ಪೀಠದ ಆಸ್ಥಾನ ವಿದ್ವಾಂಸರಾಗಿದ್ದ ಉಮಚಗಿ ಶ್ರೀ ಶಂಕರ ಶಾಸ್ತ್ರಗಳಿಂದ ರಚಿಸಲ್ಪಟ್ಟ ವೀರಶೈವ ಸಿದ್ಧಾಂತ ಪರವಾದ ಶಾಂಕರೀ ವ್ಯಾಖ್ಯಾನದಿಂದ ಒಡಗೂಡಿದ ಈಶ, ಕೇಶ, ಮುಂಡಕ, ಸಿದ್ಧಾಂತ, ಶಿಖೋಪನಿಷತ್ತುಗಳನ್ನು, ಬ್ರಹ್ಮಸೂತ್ರದ ಶಾಂಕರೀ ವೃತ್ತಿಯನ್ನು ಪ್ರಕಟಿಸಿದರು. ಡಾ| ಎಂ. ಶಿವಕುಮಾರಸ್ವಾಮಿಯವರು ಶ್ರೀ ಸಿದ್ಧಾಂತ ಶಿಖಾಮಣಿಯನ್ನಾಧರಿಸಿ ಇಂಗ್ಲೀಷನಲ್ಲಿ  ಭಾಷಾಂತರಿಸಿದ 'ಶ್ರೀ ರೇಣುಕ ಗೀತಾ' ಎಂಬ ಗ್ರಂಥವನ್ನು ಪ್ರಕಟಿಸಿದರು.  ಹೀಗೆ ಸಿದ್ಧಾಂತ ಗ್ರಂಥಗಳ ಪ್ರಕಟಣೆಗೆ ಅಪೂರ್ವ ಕೊಡುಗೆ ನೀಡಿದ ಶ್ರೀಗಳವರು ಲಕ್ಷ್ಮೇಶ್ವರದಲ್ಲಿ ಸತತವಾಗಿ 3 ತಿಂಗಳವರೆಗೆ ಶ್ರೀ ಸಿದ್ಧಾಂತ ಶಿಖಾಮಣಿ ಕುರಿತು 1958ರಲ್ಲಿ ಪ್ರವಚನ ನೀಡಿದುದು ಒಂದು ದಾಖಲೆಯಾಗಿದೆ.  ಇತ್ತ ಮೈಸೂರಿನಲ್ಲಿ ವ್ಯಾಜ್ಯದಲ್ಲಿ ಸಿಲುಕಿದ ಅರಮನೆ ಜಪದಕಟ್ಟಿ ಮಠದ ಉಳಿವಿಗಾಗಿ ಅಹೋರಾತ್ರಿ ಶ್ರಮಿಸಿ ಅಂತ್ಯಕಾಲದಲ್ಲಿ ಯಶಸ್ಸು ಪಡೆದರು.  ಅಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಮಂಗಲ ಮಂದಿರವನ್ನು ಭಕ್ತ ಸಮುದಾಯದ ಸಹಕಾರದೊಂದಿಗೆ ನಿಮರ್ಾಣಗೊಳಿಸಿದರು.  ಅದೇರೀತಿ ಚಿತ್ರದುರ್ಗದಲ್ಲೂ ಶ್ರೀ ಜಗದ್ಗುರು ಪಂಚಾಚಾರ್ಯ ಮಂಗಲ ಮಂದಿರವನ್ನು ಕಟ್ಟಿಸಿದ ಕೀತರ್ಿಗೆ ಪಾತ್ರರಾದರು.
ಸದ್ಧರ್ಮ ಪೀಠೇಶ ಃ
    ಇವರ ವಿದ್ವತ್, ಕತರ್ೃತ್ವಶಕ್ತಿ, ಸೌಜನ್ಯಗಳನ್ನು ಮೆಚ್ಚಿದ ಉಜ್ಜಯಿನಿ ಹಿರಿಯ ಜಗದ್ಗುರುಗಳವರು ಇವರಿಗೆ 28-8-85ನೆಯ ಇಸವಿಯಲ್ಲಿ (ಕ್ರೋಧನನಾಮ ಸಂವತ್ಸರ, ಶ್ರಾವಣ ಶುದ್ಧ ತ್ರಯೋದಶಿ, ಬುಧವಾರ) ಚರಪಟ್ಟಾಧಿಕಾರವನ್ನು ಸದ್ಧರ್ಮ ಪೀಠದ ಪದ್ಧತಿಯಂತೆ ಅನುಗ್ರಹಿಸಿದರು.  ಪಂಚಮುದ್ರಾ ಪೂರ್ವಕ ಕಿರೀಟಧಾರಣ ಮಾಡಿ ಶ್ರೀ 1008 ಜಗದ್ಗುರು ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಎಂದು ನಾಮಕರಣ ಮಾಡಿ ಆಶೀರ್ವದಿಸಿದರು.  ಗುರುತರ ಹೊಣೆ ಹೊತ್ತುಕೊಂಡ ಸನ್ನಿಧಿಯವರು ಎಲ್ಲಾ ಪಂಚಪೀಠಾಚಾರ್ಯರ ಜೊತೆ ಜೊತೆಯಲ್ಲಿ ಸುಮಾರು 10 ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಿ ಸದ್ಧರ್ಮ ಪ್ರಭೆಯನ್ನು ಉದ್ದೀಪನಗೊಳಿಸಿದರು.  ಉಜ್ಜಯಿನಿ ಪೀಠದ ಜೀಣರ್ೋದ್ಧಾರಕ್ಕೆ ಮತ್ತು ಕೆಲವು ನೂತನ ಕಟ್ಟಡಗಳಿಗೆ ಶ್ರಮವಹಿಸಿ ಧನ ಸಂಗ್ರಹಿಸಿ ನವನಿಮರ್ಾಣ ಕಾರ್ಯ ಮಾಡಿದರು.  ಸಂಸ್ಥಾನದ ಘನತೆಗೆ ತಕ್ಕಂತೆ ಆನೆ ಇರಬೇಕೆಂಬ ಅಭಿಲಾಷೆಯಿಂದ ಸರಕಾರದಿಂದ ಆನೆಯೊಂದನ್ನು ಪಡೆದು ಘನತೆ-ಗೌರವ ಹೆಚ್ಚಿಸಿದರು.  ಅತಿರುದ್ರ ಹೋಮ, ಜಪ-ತಪ ಮುಂತಾದ ಧರ್ಮಕಾರ್ಯಗಳಿಂದ ಲೋಕಕಲ್ಯಾಣಕ್ಕಾಗಿ ಶ್ರಮಿಸುತ್ತಿರುವಾಗಲೇ ದಿ||3-4-1995ರಂದು ಈ ಲೋಕದಿಂದ ಅಗಲಿ ಶಿವಲೋಕವನ್ನು ಸೇರಿದರು.  ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡರು.
    ವಯೋವೃದ್ಧರೂ, ಜ್ಞಾನವೃದ್ಧರೂ ಆದ ಶ್ರೀ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯರು ದಣಿವ ಲೆಕ್ಕಿಸದೆ ಸದ್ಧರ್ಮ ಪೀಠದ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುನ್ನಡೆದರು.  ಆದರೆ ಶತಮಾನದಂಚಿನಲ್ಲಿದ್ದ ಮುಪ್ಪಾದ ಶರೀರಕ್ಕೆ ವಿಶ್ರಾಂತಿ ಬೇಕಾಯಿತು. ಸದ್ಧರ್ಮ ಪೀಠದ  ಸದಭಿಮಾನಿ ಭಕ್ತರ ಕೋರಿಕೆ ಹಾಗೂ ಸಮಾನ ಪೀಠಾಚಾರ್ಯರ ಆಗ್ರಹಕ್ಕೆ ಒಳಗಾಗಿ ಸ್ವ ಇಚ್ಛೆಯಿಂದ ನೂತನ ಪೀಠಾಚಾರ್ಯರನ್ನು ತಮ್ಮ ಜೀವಿತಕಾಲದಲ್ಲೇ ನಿಯುಕ್ತಿಗೊಳಿಸಲು ನಿರ್ಧರಿಸಿದರು.  ಅವರ ದಿವ್ಯದೃಷ್ಟಿಗೆ ಸಿರಿಗೆರೆಯ ಹಿರಿಯಮಠದ ಶ್ರೀ ಷ| ಬ್ರ| ಮರುಳಸಿದ್ಧ ಶಿವಾಚಾರ್ಯರು ಸೂಕ್ತವ್ಯಕ್ತಿ ಎಂದು ಗೋಚರವಾಯಿತು.  ಆಗಲೇ ಆದೇಶ ಪತ್ರ ಕಳಿಸಿ ಶ್ರೀ ಪೀಠಕ್ಕೆ ಬರಮಾಡಿಕೊಂಡರು.  ಪೀಠಾಭಿಮಾನಿಗಳಿಂದ ತುಂಬಿದ ಸಭೆಯಲ್ಲಿ ಸಿರಿಗೆರೆಯ ಮರುಳಸಿದ್ಧ ಶಿವಾಚಾರ್ಯರೇ ತಮ್ಮ ಉತ್ತರಾಧಿಕಾರಿ ಎಂದು ಉದ್ಘೋಷಿಸಿದರು.  ಜಯಘೋಷದೊಂದಿಗೆ ಭಕ್ತಸಂದೋಹ ಶ್ರೀಗಳವರನ್ನು ತಮ್ಮ ಭಾವೀ ಜಗದ್ಗುರುಗಳೆಂದು ಸ್ವೀಕರಿಸಿತು.  ಮುಂದೆ ಪೀಠ ಪರಂಪರೆಯಂತೆ ಸಮಾನ ಪೀಠಾಚಾರ್ಯರಾದ ಶ್ರೀಮದ್ರಂಭಾಪುರಿ, ಶ್ರೀಮತ್ ಹಿಮವತ್ಕೇದಾರ, ಶ್ರೀಮತ್ ಶ್ರೀಶೈಲ, ಹಾಗೂ ಶ್ರೀಮತ್ ಕಾಶಿ ಜಗದ್ಗುರುಗಳವರ ದಿವ್ಯಸನ್ನಿಧಾನದಲ್ಲಿ ಬಹು ವಿಜೃಂಭಣೆಯಿಂದ ಸದ್ಧರ್ಮ ಪೀಠಾರೋಹಣ ಕಾರ್ಯ ನೆರವೇರಿಸಿ ಸಂತೃಪ್ತರಾದರು, ತದನಂತರ ಶಿವನಲ್ಲಿ ಲೀನರಾದರು (17-12-1999).
ಸದ್ವಂಶದ ಸತ್ಪುತ್ರ ಃ
    ಮಾಮರವು ಫಲಿತು ರಸವತ್ತಾದ ಮಾವಿನ ಹಣ್ಣನ್ನೇ ನೀಡೀತಲ್ಲದೆ, ಬೇವಿನ ಹಣ್ಣನ್ನು ಕೊಡಲಾರದು.  ಹಾಗೆಯೇ ಡಿ. ಹಿರೇಹಾಳು ಗ್ರಾಮದ ಮಳೆಯಮಠವು ನಾಡಿಗೆ ಸತ್ಪುತ್ರರನ್ನು ನೀಡೀತಲ್ಲದೆ, ಕುಪುತ್ರರನ್ನಲ್ಲ. ಇಂದು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನಲ್ಲಿರುವ ಡಿ. ಹಿರೇಹಾಳು  ಗ್ರಾಮವು ಎಂದೆಂದಿಗೂ ಕನರ್ಾಟಕ ನುಡಿ -ನಡವಳಿಕೆಯ ತವರೂರಾಗಿದೆ.  ಅದು ಬಳ್ಳಾರಿ ನಗರದ ಸಮೀಪದ ಗ್ರಾಮ ಎಂಬುದು ಇದಕ್ಕೆ ಕಾರಣವಿರಬಹುದು.  ಅಲ್ಲದೇ ಪ್ರಾತಃಸ್ಮರಣೀಯರೂ, ಪಂಚಪೀಠಗಳ ಪ್ರಾಣಸ್ವರೂಪರೂ, ವಿದ್ವಾಂಸರೂ, ಸ್ಫುರದ್ರೂಪಿಗಳೂ ಮತ್ತು ಪಾವನ ಚರಿತರೂ ಆಗಿದ್ದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಲಿಂ| ಶಿವಾನಂದ ರಾಜದೇಶಿಕೇಂದ್ರ ಭಗವತ್ಪಾದರಂಥವರು ಆ ಗ್ರಾಮದಲ್ಲಿ ಜನಿಸಿದುದು ಇನ್ನೊಂದು ಕಾರಣವಿರಬಹುದು.  ಮತ್ತೊಂದು ಕಾರಣವೆಂದರೆ ಶ್ರೀ ಗವಿಸಿದ್ಧೇಶ್ವರ ಕ್ಷೇತ್ರವು ಈ ಗ್ರಾಮದ ಪಕ್ಕದಲ್ಲೇ ಇದ್ದು ಆ ಮಹಾದೇವನೊಲಿದು ಪಾದವನ್ನಿಟ್ಟ ನೆಲವಾದುದರಿಂದ ಇದೊಂದು ಪವಿತ್ರ ಕ್ಷೇತ್ರವೆನಿಸಿದೆ.  ಇಲ್ಲಿಯ ಜಲ, ತೀರ್ಥವೆನಿಸಿದೆ.  ಕಂತುಹರನ, ಜಗದ್ಗುರುವರೇಣ್ಯರ ಕೃಪಾಕಟಾಕ್ಷಕ್ಕೆ ಒಳಗಾದ ಪುಣ್ಯಭೂಮಿ ಈ ಹಿರೇಹಾಳು ಗ್ರಾಮ.  ಈ ಗ್ರಾಮದ ಮಳೆಯಮಠದ ಆಚಾರ-ವಿಚಾರ ಸಂಪನ್ನರಾದ ಶ್ರೀ  ವೇ|| ಸಿದ್ಧಯ್ಯನವರು ಮತ್ತವರ ಸಹಧಮರ್ಿಣಿ ಶ್ರೀಮತಿ ಚೆನ್ನಬಸಮ್ಮನವರ ಉದರಾಂಬುಧಿಯಲ್ಲಿ ಜನಿಸಿದ ಜಂಗಮ ಪುಂಗವನೇ ಈ ಬಸವರಾಜ.
    ದುಂಡುಮೊಗದ, ತುಸು ಗಿಣಿಮೂಗಿನ, ತುಂಬುಗಲ್ಲದ, ನಿಂಬೆಹಣ್ಣಿನ ಬಣ್ಣದ  ಈ ಬಸವರಾಜ ಹುಟ್ಟಿನಿಂದಲೇ ದಿಟ್ಟಿ (ದೃಷ್ಟಿ)ಯಾಗುವಂಥ ಸ್ಫುರದ್ರೂಪಿ! ನೋಡಿದವರೆಲ್ಲ ಎತ್ತಿ ಮುದ್ದಾಡದೆ ಇರುತ್ತಿರಲಿಲ್ಲ. ದೃಷ್ಟಿ ತಾಗೀತೆಂದು ಕಪ್ಪು ಬೊಟ್ಟು ಇಟ್ಟು ಆ ಹಡೆದವ್ವ ಈ ಹುಡುಗನನನ್ನು ಬಚ್ಚಿಡುತ್ತಿದ್ದಳು.  ಆದರೆ ಬೆಳಕನ್ನು ಗಡಿಗೆಯಲ್ಲಿ ಮುಚ್ಚಿಟ್ಟರೂ ಆ ಗಡಿಗೆಯ ತುಂಬ ಬೆಳಕು ಚೆಲ್ಲುವುದಲ್ಲವೇ? ಎಷ್ಟು ದಿನ ಬಚ್ಚಿಡಲು ಸಾಧ್ಯ! 1965ರಲ್ಲಿ ಜನಿಸಿದ ಬಸವರಾಜ ತನ್ನ 6ನೆಯ ವಯಸ್ಸಿನಲ್ಲಿ ತನ್ನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿದನು.  ಸಹಪಾಠಿಗಳು ಸದಾ ಸುತ್ತುವರಿದು ಭಕ್ತಿ ಗೌರವ ಸಲ್ಲಿಸುತ್ತಿದ್ದರು.  ಅವನ ಹಿಂದೊಂದು ತಂಡ ಸದಾ ಸುತ್ತುವರಿಯುತ್ತಿತ್ತು.  ಸುಶೀಲನಾದ ಈ ಬಾಲಕನು ತನ್ನ ಓದನ್ನು ಮುಂದುವರಿಸುತ್ತಿದ್ದನು. ಆಗ ಸಿರಿಗೆರೆ ಹಾಗೂ ಹಿರೇಹಾಳು ಮಠದ ಪಟ್ಟಾಧ್ಯಕ್ಷರಾಗಿದ್ದ ಶ್ರೀ ಷ|ಬ್ರ| ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳವರ ಪರುಷದೃಷ್ಟಿ ಈ ಪುಟ್ಟ ಬಾಲಕನ ಮೇಲೆ ಬಿತ್ತು.  ಮೊದಲೇ ಚಿನ್ನ! ಅದಕ್ಕೆ ಪರುಷ ದೃಷ್ಟಿಪಾತವಾದ ಬಳಿಕ ಕೇಳಬೇಕೆ? ಅದು ಇನ್ನೂ ಲಕಲಕ ಹೊಳೆಯತೊಡಗಿತು, ಚಿನ್ನಕ್ಕೆ ಪುಟವಿಟ್ಟಂತಾಯಿತು.
    1979ರಲ್ಲಿ ವೀರತಪಸ್ವಿ ಶ್ರೀಮದ್ ರಂಭಾಪುರಿ ಜಗದ್ಗುರು ವೀರಗಂಗಾಧರ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸನ್ನಿಧಾನಂಗಳವರ ಸಹಸ್ರ ಕುಂಭಾಭಿಷೇಕ, ಮಹಾಪೂಜಾದಿ ಮಂಗಲ ಕಾರ್ಯಗಳು ಬಳ್ಳಾರಿ ಮಹಾನಗರದಲ್ಲಿ ವೈಭವಪೂರ್ಣವಾಗಿ ನೆರವೇರುತ್ತಲಿದ್ದವು.  ಆಗ ಅದಕ್ಕೆಲ್ಲ ಶ್ರೀ ವಿರೂಪಾಕ್ಷ ಶಿವಾಚಾರ್ಯರದೇ ಮಾರ್ಗದರ್ಶನ; ಅವರದೇ ಅಗ್ರಪಂಕ್ತಿಯ ಸೇವೆ.  ಆ ಸಮಯವನ್ನು ಸಾಧಿಸಿ ಶ್ರೀಗಳವರು ತಮ್ಮ ಪೂವರ್ಾಶ್ರಮದ ಹಿರೇಹಾಳು ಮಳೆಮಠಕ್ಕೆ ಸಂಬಂಧಿಸಿದ 8 ವಟುಗಳನ್ನು ಬಳ್ಳಾರಿಗೆ ಕರೆಸಿದರು.  ಶ್ರೀ ರಂಭಾಪುರಿ ಮಹಾಸನ್ನಿಧಾನದಲ್ಲಿ ಸಾಲಾಗಿ ನಿಲ್ಲಿಸಿದರು.  ಇವರಲ್ಲಿ ಓರ್ವ ಯೋಗ್ಯ ವಟುವನ್ನು ಆಯ್ಕೆಮಾಡಿ ಅನುಗ್ರಹಿಸಬೇಕೆಂದು ಕೋರಿದರು.  ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ ಒಂದೇ ಆಗಬೇಕೆ! ಆ ಮಹಾಸನ್ನಿಧಾನವು ಬಸವರಾಜನನ್ನೇ ಆಯ್ಕೆಮಾಡಿ ಕರುಣಾಪೂರಿತ ದಿವ್ಯದೃಷ್ಟಿ ಬೀರಿ ಆಶೀರ್ವದಿಸಿದರು.  ಆದರೆ ತಾಯಿ-ತಂದೆ, ಚಿಕ್ಕಪ್ಪ, ಅಣ್ಣ ಹಾಗೂ ಮಾವ ಇದಕ್ಕೆ ಒಪ್ಪಲಿಲ.್ಲ ದೊಡ್ಡ ಪಂಚಾಯಿತಿಯೇ ನಡೆಯಿತು.  ಆಗ ಶ್ರೀ ವಿರೂಪಾಕ್ಷ ಶಿವಾಚಾರ್ಯರು ಅವರೆಲ್ಲರ ಸಮಕ್ಷಮದಲ್ಲಿ ಬಾಲಕ ಬಸವರಾಜನನ್ನು ಕರೆದು, ಲೇ ತಮ್ಮ, ನೀನು ಸ್ವಾಮಿ ಆಗಾಕ ಒಪ್ಪತಿ ಏನಲೇ? ಎಂದು ಕೇಳಿದರು.  ತಕ್ಷಣವೇ ಆ ಬಾಲಕ ಒಪ್ಪಿ ಸಾಷ್ಟಾಂಗವೆರಗಿದನು.  ಎಲ್ಲರೂ ಅವಾಕ್ಕಾದರು.  ಕಟ್ಟೆಯ ಕಲ್ಲು ಕಟ್ಟೆಗೆ ಸೇರಿತು ಎಂದು ಕೆಲವರು ಹಿರಿಹಿರಿ ಹಿಗ್ಗಿದರು, ಒಬ್ಬಿಬ್ಬರು ಕರುಬಿದರು.  ಇದಾವುದರ ಪರಿವೆಯೂ ಗುರುಗಳಿಗಾಗಲೀ, ಶಿಷ್ಯರಿಗಾಗಲೀ ಇರಲಿಲ್ಲ.  ಬಸವರಾಜನು ಮನೆ- ಮಠ ತೊರೆದು ಗುರುವಿನ ಗುಲಾಮನಾಗಿ ಬಸವರಾಜ ದೇವರು ಎನಿಸಿಕೊಂಡನು.  'ಶುಭಸ್ಯ ಶೀಘ್ರಂ' ಎಂಬಂತೆ ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸನ್ನಿಧಾನದಲ್ಲಿ ದಿ|26-6-1980ರಲ್ಲಿ ಪಟ್ಟಾಭಿಷೇಕವು  ನೆರವೇರಿತು.  ಬಸವರಾಜ ಕಾವಿ ಕಾಷಾಯಾಂಬರ ಉಟ್ಟು, ಹಳೆಯ ಬಟ್ಟೆ ಬಿಟ್ಟು 15ರ ಹರೆಯದಲ್ಲಿಯೇ ಶ್ರೀ ಷ|ಬ್ರ| ಮರುಳಸಿದ್ಧ ಶಿವಾಚಾರ್ಯರಾದರು.
    ಸಂಸ್ಕೃತ, ವೈದಿಕ, ಜ್ಯೋತಿಷ್ಯಗಳಂತಹ ಆಷರ್ೇಯ ವಿದ್ಯೆಗಳು ಮಠಾಧಿಪತಿಗಳಿಗೆ ಮತ್ತು ಪೀಠಾಧಿಪತಿಗಳಿಗೆ ಅನಿವಾರ್ಯ ಹಾಗೂ ಅತ್ಯವಶ್ಯಕವೆಂದರಿತ ಶ್ರೀ ವಿರೂಪಾಕ್ಷ ಶಿವಾಚಾರ್ಯರು ತಮ್ಮ ಶಿಷ್ಯರನ್ನು ಶ್ರೀ ಸಿದ್ಧಗಂಗಾ ಮಠದ ಗುರುಕುಲಕ್ಕೆ ಸೇರಿಸಿದರು.  ಅಂದು 10ನೆಯ ತರಗತಿಯಿಂದ ಆರಂಭವಾದ ಅವರ ಅಧ್ಯಯನವು ಅದೇ ಗುರುಕುಲದಲ್ಲಿ ನಿರಂತರವಾಗಿ ನಡೆದು ಅವರು ಪದವೀ(ಬಿ.ಎ.) ಭೂಷಿತರಾದರು. ಇದು ಸಂಸ್ಕೃತ ವಿದ್ವತ್ ಪದವಿ ಪಡೆಯಲು ಅನುವು ಮಾಡಿಕೊಟ್ಟಿತು.  ಸಿದ್ಧಗಂಗಾ ಸುಕ್ಷೇತ್ರದ ಅಧಿಪತಿಗಳಾದ ಪೂಜ್ಯ ಶ್ರೀ ಮ.ನಿ.ಪ್ರ. ಶಿವಕುಮಾರ ಮಹಾಸ್ವಾಮಿಗಳು ಇವರ ಅಧ್ಯಯನಶೀಲತೆ, ಸಚ್ಚಾರಿತ್ರ್ಯ ಹಾಗೂ ಸದ್ವಿನಯಗಳನ್ನು ಕಂಡು ಸಂಪ್ರೀತರಾಗಿ ತುಂಬುಹೃದಯದಿಂದ ಹರಸಿದರು.  ಓದುವ ಕಕ್ಕುಲಾತಿ ಇರುವಾಗಲೇ ಗುರುಗಳಾದ ಶ್ರೀ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು 16-3-1984ರಂದು ಶಿವಸನ್ನಿಧಿಗೆ ಸಂದರು.  ತಂದೆಯಂತಿದ್ದ ಗುರುಗಳ ಅಗಲುವಿಕೆಯಿಂದ ಶ್ರೀ ಮರುಳಸಿದ್ಧರು ತಬ್ಬಲಿಯಾದರು,  ಅವರ ಮನ ಘಾಸಿಗೊಂಡಿತು.
ಅಧ್ಯಯನದ ಆಸಕ್ತಿ ಃ
    ಗುರುಗಳು ಗತಿಸಿದರೂ ಗುರುಪುತ್ರರ ಗುರಿ ಮಾತ್ರ ಬದಲಾಗಲಿಲ್ಲ. ಹಿರಿಯ ಗುರುಗಳ ಕೃಪಾಪಾತ್ರರಾದ ಅಭಿಮಾನೀ ಭಕ್ತಸಮೂಹ ಹಾಗೂ ಶಿವಾಚಾರ್ಯ ಬಳಗದವರು ಇವರ ನೆರವಿಗೆ ಬಂದರು.  ಶ್ರೀ ಷ|ಬ್ರ|ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಅಮರೇಶ್ವರ ಮಠ, ಗುಳೇದಗುಡ್ಡ (ಇಂದಿನ ಕಾಶೀ ಜಗದ್ಗುರುಗಳವರು) ಇವರ ಪ್ರವಚನವು ಬಳ್ಳಾರಿ ನಗರದ ಶ್ರೀ ಮರಿಸ್ವಾಮಿ ಮಠದಲ್ಲಿ ಜರುಗುತ್ತಲಿತ್ತು.  ಆ ಸನ್ನಿವೇಶದ ಸದುಪಯೋಗ ಮಾಡಿಕೊಂಡು  ಶ್ರೀ ಷ|ಬ್ರ| ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಕಂಬಾಳಿಮಠ ಮತ್ತು ಶ್ರೀ ಮಠದ ಶಿಷ್ಯರು, ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಲ್ಲಿ ಅರಿಕೆ ಮಾಡಿಕೊಂಡರು.  ಅವರು ಶ್ರೀ ಮರುಳಸಿದ್ಧ ಶಿವಾಚಾರ್ಯರ ವ್ಯಕ್ತಿತ್ವ ಹಾಗೂ ವಿದ್ವತ್ ಅಳೆದು ನೋಡಿ ಇದೊಂದು ಮೂತರ್ಿಯಾಗಲಿದೆ,  ಅವಶ್ಯವಾಗಿ ಕಾಶೀ ಪೀಠಕ್ಕೆ ಕಳುಹಿಸಿರಿ ಎಂದು ಅಪ್ಪಣೆ ಕೊಡಿಸಿದರು.  ಅಂದೇ ಕಾಶೀ ಜಗದ್ಗುರು ಶ್ರೀ ವಿಶ್ವೇಶ್ವರ ಶಿವಾಚಾರ್ಯ ಮಹಾಸನ್ನಿಧಾನಕ್ಕೆ ಪತ್ರಮುಖೇನ ಅರಿಕೆ ಮಾಡಿಕೊಂಡು ಅನುಮತಿ ದೊರಕಿಸಿಕೊಂಡರು.
    ಆ ಸಮಯದಲ್ಲಿ ಹೊನ್ನಾಳಿಯ ಹಿರೇಕಲ್ಮಠದ ಶ್ರೀ ಷ|ಬ್ರ|ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರ ಆಶ್ರಯದಲ್ಲಿ ಅಧ್ಯಯನ ಸಾಗಿಸುತ್ತಿದ್ದ ಶ್ರೀ ಸಿದ್ಧಪಾದ ಶಿವಾಚಾರ್ಯ ಸ್ವಾಮಿಗಳು, ಕಾಮನಾಳು ಅವರು ಕಾಶೀ ಶ್ರೀ ಜಂಗಮವಾಡಿ ಮಠದ ಗುರುಕುಲದಲ್ಲಿದ್ದರು.  ಅವರು ಮತ್ತು ಶ್ರೀ ಮರುಳಸಿದ್ಧ ಶಿವಾಚಾರ್ಯರು ಬಾಲ್ಯಸ್ನೇಹಿತರಾಗಿದ್ದುದು ಯೋಗಾಯೋಗ! ಹೀಗಾಗಿ ಕಾಶಿಗೆ ವಿಶೇಷ ಅಧ್ಯಯನಕ್ಕೆ ತೆರಳಲು ಸಿರಿಗೆರೆಯ ಶ್ರೀಗಳವರಿಗೆ ಅತ್ಯಂತ ಸಂತೋಷವಾಯಿತು.  ಇವರ ಮೊಟ್ಟಮೊದಲ ಪಯಣ ರಾಣೇಬೆನ್ನೂರಿನಿಂದ, ಅದೂ ನಮ್ಮ ಮನೆಯಿಂದ ಎಂಬುದು ನಮಗೆ ಹೆಮ್ಮೆಯನ್ನುಂಟುಮಾಡಿದೆ.
    ಕಾಶೀವಾಸ ಆಯಾಸವೆನಿಸಿದರೂ ಮುಂದೆ ಗುರಿಯಿತ್ತು.  ಹಿಂದೆ ಗುರು(ಡಾ| ಚಂದ್ರಶೇಖರ ಶಿವಾಚಾರ್ಯರು) ಇದ್ದುದು ಹಾಗೂ ಅಧ್ಯಯನದಲ್ಲಿ ಆಸಕ್ತಿಯಿದ್ದುದು ಆಯಾಸವನ್ನು ಲೆಕ್ಕಿಸದಂತೆ ಮಾಡಿದವು.  ಬುದ್ಧಿಶಕ್ತಿ, ಸತತ ಪರಿಶ್ರಮ ಅವರ ಬೆನ್ನಿಗಿದ್ದವು.  ಹಾಗಾಗಿ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಪ್ರಥಮರಾಗಿ 'ವೇದಾಂತಾಚಾರ್ಯ (ಎಂ.ಎ.) ಪದವೀಭೂಷಿತರಾದರು.  ಮುಂದೆ ಪಿಎಚ್.ಡಿ.ಗೆ ಹೆಸರು ದಾಖಲಿಸಿದರು.  ಶೈವಾಗಮ ಮತ್ತು ಉಪನಿಷತ್ತುಗಳಲ್ಲಿ ವೀರಶೈವ ಧರ್ಮ - ದರ್ಶನಗಳ ವಿಮಶರ್ೆ ಎಂಬ ವಿಷಯವನ್ನು ಆಯ್ದುಕೊಂಡರು.  ಹಗಲಿರುಳೂ ಅಧ್ಯಯನದಲ್ಲಿ ನಿರತರಾದರು.  ಜೊತೆಗೆ ಶ್ರೀ ಜಗದ್ಗುರು ವಿಶ್ವಾರಾಧ್ಯ ಶೋಧ ಪ್ರತಿಷ್ಠಾನದ ಹೊಣೆಗಾರಿಕೆಯನ್ನೂ ಕಾಶೀ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಇವರಿಗೇ ವಹಿಸಿದರು. 
ಜಗದ್ಗುರು ಪ್ರಾಪ್ತಿ ಃ
ಪುರುಷಸ್ಯ ಭಾಗ್ಯಂ, ಸ್ತ್ರೀಯಶ್ಚರಿತ್ರಂ ದೇವೋ ನ ಜಾನಾತಿ ಕುತೋ ಮನುಷ್ಯಃ ಎಂಬ ಋಷಿವಾಣಿ ಹುಸಿಯಾದೀತೇ ? ಇವರ ವಿದ್ವತ್, ಚಾರಿತ್ರ್ಯ ಹಾಗೂ ವ್ಯಕ್ತಿತ್ವಕ್ಕೆ ಮಾರುಹೋದ ಅನೇಕ ಮಠಾಧಿಪತಿಗಳು ಈ ಪೂಜ್ಯರನ್ನೇ ತಮ್ಮತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆಮಾಡಿಕೊಂಡರು.  ನಾ ಮುಂದೆ, ತಾ ಮುಂದೆ ಎಂದು ಸ್ಪಧರ್ೆಗೆ ಇಳಿದರು.  ಶ್ರೀಮದುಜ್ಜಯಿನೀ ಚರಪಟ್ಟದ ಜಗದ್ಗುರು ಶ್ರೀ ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೊಸಪೇಟೆಯಲ್ಲಿ ಶ್ರೀ ಮರುಳಸಿದ್ಧರು ಉಜ್ಜಯಿನೀ ಪೀಠದ ಉತ್ತರಾಧಿಕಾರಿ ಎಂದು ಸ್ವಸಂತೋಷದಿಂದ ಸ್ವಯಂಘೋಷಣೆ ಮಾಡಿದರು.  ಇತ್ತ ಹಂಪೆಯ ಸಾವಿರ ದೇವರಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಇವರ ಸಮ್ಮತಿಯನ್ನೂ ಕೇಳದೆ, ಒಲ್ಲೆನೆಂದರೂ ಬಿಡದೆ, ತಮ್ಮ ಉತ್ತರಾಧಿಕಾರಿಯೆಂದು ಘೋಷಿಸಿ 5-11-1995ಕ್ಕೆ ಪಟ್ಟಾಧಿಕಾರ ನೆರವೇರಿಸಲಾಗುವುದೆಂದು ಪ್ರಕಟಿಸಿದರು.  ಶ್ರೀ ಮರುಳಸಿದ್ಧ ಶಿವಾಚಾರ್ಯರಿಗೋ ಇದಾವುದರಲ್ಲಿಯೂ ಆಸಕ್ತಿಯಿಲ್ಲ.  ಅಭಿಲಾಷೆಯಂತೂ ಇಲ್ಲವೇ ಇಲ್ಲ.  ತಾವಾಯಿತು, ತಮ್ಮ ಅಧ್ಯಯನವಾಯಿತು. ಬೇಗ ತಮ್ಮ ಮಹಾಪ್ರಬಂಧ ಬರೆದು ಮುಗಿಸಿ ಡಾಕ್ಟರೇಟ್ ಪಡೆಯಬೇಕು ಎಂಬುದೊಂದೇ ಅವರ ಜೀವನದ ಗುರಿಯಾಗಿತ್ತು. ಆದರೆ ಇದು ಗುರುವಿನ ಇಚ್ಛೆಯಾಗಿರಲಿಲ್ಲ, ತಾನೊಂದು ಬಗೆದರೆ ದೈವವೊಂದು ಬಗೆಯಿತು.
    ಶ್ರೀಮದುಜ್ಜಯಿನೀ ಜಗದ್ಗುರು ಸಿದ್ಧೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ಪೀಠದಿಂದ ಓರ್ವ ದೂತನ ಕೈಯಲ್ಲಿ ಒಂದು ಪತ್ರವನ್ನು ಕಳುಹಿಸಿಕೊಟ್ಟರು.  ಅದನ್ನು ಒಡೆದು ಓದಿದರೆ ಮರುಳಸಿದ್ಧರಿಗೆ ನಂಬಿಕೆಯೇ ಆಗಲಿಲ್ಲ.  ಕರೆಯಬಂದ ದೂತ, ಜಗದ್ಗುರುಗಳವರ ಅಪ್ಪಣೆಯಾಗಿದೆ; ತಾವು ಪೀಠಕ್ಕೆ ಬರಲೇಬೇಕು ಎಂದು ಒತ್ತಾಯಪೂರ್ವಕ ಅರಿಕೆ ಮಾಡಿಕೊಂಡನು.  ಸನ್ನಿಧಿಯವರ ಅಪ್ಪಣೆ ಮೀರುವಂತಿರಲಿಲ್ಲ, ಪೀಠಕ್ಕೆ ಆಗಮಿಸಿದರು.  ಅಂದು ಅಮವಾಸ್ಯೆ, ಸಾವಿರಾರು ಜನರು ಶ್ರೀ ಪೀಠದ ಪ್ರಾಂಗಣದಲ್ಲಿ ಸಮ್ಮಿಳಿತರಾಗಿದ್ದು, ಒಂದು ಕಿರುಸಭೆಯೇ ಏರ್ಪಟ್ಟಿತ್ತು.  ಆ ಸಭೆಯಲ್ಲಿ ಹಿರಿಯ ಸನ್ನಿಧಿಯವರು, ಇವರೇ (ಮರುಳಸಿದ್ಧರೇ) ತಮ್ಮ ಉತ್ತರಾಧಿಕಾರಿ ಎಂದು ಸುಗ್ರೀವಾಜ್ಞೆ ಹೊರಡಿಸಿದರು.  ಮರುಮಾತಿಗೆ ಅವಕಾಶವಿರಲಿಲ್ಲ.  ಆ ಅಪ್ಪಣೆ ಕೇಳಿ ಕಕ್ಕಾಬಿಕ್ಕಿಯಾದರು ಶ್ರೀ ಮರುಳಸಿದ್ಧರು.  ಸನ್ನಿಧಿಯವರ ಪಾದಂಗಳಿಗೆರಗಿ ಪರಿಪರಿಯಾಗಿ ಬೇಡಿಕೊಂಡರು.  ಬುದ್ಧೀ, ನನಗಿಂತ ಹಿರಿಯರನ್ನು, ಅನುಭವಿಗಳನ್ನು, ವಿದ್ವಾಂಸರನ್ನು ಪೀಠಕ್ಕೆ ಆಯ್ಕೆ ಮಾಡಿಕೊಂಡರೆ ಒಳ್ಳೆಯದು.  ನಾನು ಪಿಎಚ್.ಡಿ. ಮುಗಿಸುವ ತನಕ ಕಾಶೀ ಬಿಟ್ಟು ಬರುವಂತಿಲ್ಲ, ದಯವಿಟ್ಟು ಕ್ಷಮಿಸಿ.  ನನಗೆ ಅಪ್ಪಣೆ ಕೊಡಿ ಎಂದರು ಶ್ರೀ ಮರುಳಸಿದ್ಧರು.  ಇವರ ಯಾವ ಮಾತೂ ಫಲಕಾರಿಯಾಗಲಿಲ್ಲ.  ಇತ್ತ ಸೇರಿದ ಜನಸಂದಣಿ ಕಿವಿಗಡುಚಿಕ್ಕುವಂತೆ ಕರತಾಡನ ಮಾಡುತ್ತಾ ಜಯಘೋಷ ಮಾಡತೊಡಗಿದರು.  ಈ ಗದ್ದಲದ ಮಧ್ಯೆಯೇ ಜಗದ್ಗುರು ಮಹಾಸನ್ನಿಧಿಯವರು ಭಾವೀ ಜಗದ್ಗುರುಗಳವರಿಗೆ ರೇಷ್ಮೆಮಡಿ ಹೊದಿಸಿ, ಆಶೀವರ್ಾದ ಮಾಲೆ ಹಾಕಿದರು.  ಮುಂದೆ ದಾವಣಗೆರೆ ನಗರದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ದಿವ್ಯ ಸನ್ನಿಧಾನದಲ್ಲಿ ಸೇರಿದ ಧರ್ಮಸಭೆಯಲ್ಲಿ ಉಜ್ಜಯಿನಿ ಪೀಠದ ಭಾವೀ ಜಗದ್ಗುರುಗಳವರು ಮಹಾಸಭೆಗೆ ಪರಿಚಯವಾದರು.  ಐವರು ಜಗದ್ಗುರುಗಳು ಜಯಘೋಷದ ಮಧ್ಯೆ ಹೃದಯಾರೆ ಹರಸಿದರು.  5-11-1995ರಂದು ಉಜ್ಜಯಿನೀ ಪೀಠದಲ್ಲಿ ನೂತನ ಜಗದ್ಗುರುಗಳವರ ಪೀಠಾರೋಹಣದ  ಕಾರ್ಯಕ್ರಮವು ವೈಭವಪೂರ್ಣವಾಗಿ ಜರುಗಲಿದೆ ಎಂದು ಘೋಷಣೆ ಮಾಡಲಾಯಿತು.  ಜನಸಾಗರಕ್ಕೆ ಸಂತೋಷವೋ ಸಂತೋಷ! ಆದರೆ ಮರುಳಸಿದ್ಧರಿಗೆ ಸಂಕೋಚವೋ ಸಂಕೋಚ! ಕಾಲಾಯ ತಸ್ಮೈ ನಮಃ ಇದು ಕಾಲದ ಮಹಿಮೆ.
    1995ನೆಯ ನವಂಬರ್ 5 ಉಜ್ಜಯಿನಿ ಪೀಠದ ಇತಿಹಾಸದಲ್ಲಿ ಸುವಣರ್ಾಕ್ಷರಗಳಿಂದ ದಾಖಲಿಸಬೇಕಾದ ಅತ್ಯಂತ ಮಹತ್ವದ ದಿನವಾಯಿತು.  ಹಿರಿಯ ಜಗದ್ಗುರು ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಭಗವತ್ಪಾದರ ಸತ್ಸಂಕಲ್ಪ ಈಡೇರಿದ ದಿನ! ದೇಶದ ವೀರಶೈವ ಧಮರ್ಾಭಿಮಾನಿಗಳ ಸಂತಸ ಮುಗಿಲು ಮುಟ್ಟಿದ ಸುದಿನ!! ಶ್ರೀಮದ್ ರಂಭಾಪುರಿ, ಶ್ರೀಮತ್ ಹಿಮವತ್ ಕೇದಾರ, ಶ್ರೀಮತ್ ಶ್ರೀಶೈಲ, ಹಾಗೂ ಶ್ರೀಮತ್ ಕಾಶೀ ಜಗದ್ಗುರು ಮಹಾಸನ್ನಿಧಿಯವರೆಲ್ಲರೂ ಸಮಾಧಾನದ ಉಸಿರುಬಿಟ್ಟ ಹಸಿರು ದಿನ. ಶಿವಾಚಾರ್ಯ ಗಣದ ಮನ ತಣಿಸಿದ ದಿನ.  ಉಜ್ಜಯಿನಿ ಸದ್ಧರ್ಮ ಪೀಠವು ಹಾದರ್ಿಕವಾಗಿ ಶ್ರೀ ಮರುಳಸಿದ್ಧರನ್ನು ಸ್ವಾಗತಿಸಿದ ಸವಿದಿನ.  ಕನರ್ಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಹೆಚ್. ಡಿ. ದೇವೇಗೌಡರು ಮೊದಲ್ಗೊಂಡು ಅನೇಕ ಹಿರಿ-ಕಿರಿಯ ಸಚಿವರು, ಲೋಕಸಭೆ ಹಾಗೂ ವಿಧಾನ ಮಂಡಲದ ಸದಸ್ಯರು, ರಾಜಕೀಯ ಮುಖಂಡರು, ಸರಕಾರದ ಉನ್ನತ ಅಧಿಕಾರಿಗಳು ಸಮ್ಮಿಳಿತರಾಗಿ ಸಂತಸಪಟ್ಟ ಶ್ರೇಷ್ಠ ದಿನ.  ಲಕ್ಷಾಂತರ ಜನಸಮೂಹದ ಆಕಾಶಭೇದೀ ಘೋಷಣೆಗಳ ಮಧ್ಯೆ ಸದ್ಧರ್ಮ ಸಿಂಹಾಸನಾರೋಹಣವು ನ ಭೂತೋ ನ ಭವಿಷ್ಯತಿ ಎಂಬ ರೀತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.  ಶ್ರೀಮದುಜ್ಜಯಿನೀ ಸದ್ಧರ್ಮ ಸಿಂಹಾಸನದ 111ನೆಯ ಜಗದ್ಗುರುಗಳಾಗಿ ಅಧಿಕಾರ ಸ್ವೀಕರಿಸಿದ ಇವರು ಶ್ರೀ 1008 ಜಗದ್ಗುರು ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ನಾಮಾಂಕಿತದಿಂದ ಸಮಾನ ಪೀಠಾಚಾರ್ಯರ ಮಧ್ಯೆ ಅತ್ಯಂತ ಕಿರಿಯ ವಯಸ್ಸಿನವರಾದರೂ ಹಿರಿಯ ಸ್ಥಾನವನ್ನಲಂಕರಿಸಿದರು.  ಕೆಲವು ನೂತನ ಯೋಜನೆಗಳನ್ನು ಘೋಷಿಸಿ, ಶ್ರೀ ಪೀಠದ ಸರ್ವತೋಮುಖ ಏಳಿಗೆಗೆ ಹಾಗೂ ಸಮಸ್ತ ಮನುಕುಲದ ಒಳಿತಿಗೆ ಆಜೀವಪರ್ಯಂತ ಅವಿಶ್ರಾಂತವಾಗಿ ಶ್ರಮಿಸುವ ಸಂಕಲ್ಪಗೈದ ಸ್ಫೂತರ್ಿಯ ದಿನವದು.
ಗುರುತರ ಹೊಣೆಗಾರಿಕೆ ಃ
    ಶ್ರೀಮದುಜ್ಜಯಿನೀ ಸದ್ಧರ್ಮ ಪೀಠವನ್ನು ಅಲಂಕರಿಸಿ 11 ವರ್ಷಗಳು ಕಳೆದವು.  ಹಗಲಿರುಳೂ ಧರ್ಮಪ್ರಚಾರ, ಪ್ರಸಾರ, ಉತ್ಸವ, ಸಭೆ, ಸಮ್ಮೇಳನ, ಪೂಜಾನುಷ್ಠಾನಗಳಲ್ಲಿ ಬಿಡುವಿಲ್ಲದೆ ದುಡಿಯುತ್ತಿದ್ದಾರೆ.  ಕನರ್ಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶದ ಗಡಿಗಳನ್ನು ಮೀರಿ ದೇಶವ್ಯಾಪೀ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹೆಮ್ಮೆ ಇವರದಾಗಿದೆ.  ಹಾಗೆಂದ ಮಾತ್ರಕ್ಕೆ ಸದ್ಧರ್ಮ ಪೀಠವನ್ನು ಅಲಕ್ಷಿಸಿದ್ದಾರೆಂದು ಅರ್ಥವಲ್ಲ; ನಿತ್ಯಾನ್ನ ದಾಸೋಹವು ಸನ್ನಿಧಿಯವರ ಚೊಚ್ಚಲ ಕೊಡುಗೆ.  ದಿನನಿತ್ಯವೂ ಯಾತ್ರಾಥರ್ಿಗಳಿಗೆ, ವಿದ್ಯಾಥರ್ಿಗಳಿಗೆ ಇಲ್ಲಿ ಪ್ರಸಾದ ವಿತರಣೆ ನಡೆಯುತ್ತಿದೆ.  ಇವರು ಶ್ರೇಷ್ಠ ವಿದ್ವಾಂಸರೂ ಆಗಿರುವುದರಿಂದ ವಿದ್ಯಾಕ್ಷೇತ್ರಗಳತ್ತ ಹೆಚ್ಚು ಗಮನಹರಿಸುತ್ತಿದ್ದಾರೆ.  ಜ್ಞಾನಗುರು ವಿದ್ಯಾಪೀಠದ ಅಡಿಯಲ್ಲಿಯೇ ಅನೇಕ ವಿದ್ಯಾಸಂಸ್ಥೆಗಳಿಗೆ ಇದ್ದ ಕಟ್ಟಡ, ಪೀಠೋಪಕರಣ, ಪಾಠೋಪಕರಣ, ಆಟೋಪಕರಣಗಳ ಕೊರತೆಯನ್ನು ನೀಗಿಸಿದ್ದಾರೆ.  ಹರಪನಹಳ್ಳಿಯ  ಶ್ರೀ ಉಜ್ಜಯಿನೀ ಜಗದ್ಗುರು ಮರುಳಾರಾಧ್ಯ ಪದವಿಪೂರ್ವ ಮಹಾವಿದ್ಯಾಲಯವು ಕಳೆದ 1999ನೆಯ ಇಸವಿಯಲ್ಲಿ ತನ್ನ ಬೆಳ್ಳಿಹಬ್ಬವನ್ನು ಆಚರಿಸಿಕೊಂಡಿತು.  ಆ ವಿದ್ಯಾಲಯದ ಅನೇಕ ಕಟ್ಟಡಗಳ ಸಂಕೀರ್ಣವನ್ನು  ನೋಡಿದಾಗ ಅಭಿಮಾನವೆನಿಸುತ್ತದೆ.  ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ವಿದ್ಯಾಥರ್ಿಗಳ ಸಂಖ್ಯೆಗನುಗುಣವಾಗಿ ಎಲ್ಲ ಸೌಕರ್ಯಗಳನ್ನೂ ಒದಗಿಸಲಾಗಿದೆ.  ಸದ್ಧರ್ಮ ಪ್ರಭಾ ತ್ರೈಮಾಸಿಕವು ಹಿರಿಯ ಜಗದ್ಗುರು ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಭಗವತ್ಪಾದರು ಹುಟ್ಟುಹಾಕಿದ ಧಾಮರ್ಿಕ ಪತ್ರಿಕೆ.  ಅದು ನಿಂತೇ ಹೋಗಿತ್ತು.  ಅದಕ್ಕೆ  ಮರುಜೀವ ಕೊಟ್ಟು 1999ರಿಂದ ಅದು ಸದ್ಧರ್ಮ ಪ್ರಚಾರದಲ್ಲಿ ಪ್ರಸಾರದಲ್ಲಿ ಮುನ್ನಡೆಯುವಂತೆ ಮಾಡಿದ್ದಾರೆ.  ಇತ್ತೀಚೆಗೆ ಶ್ರೀ ಪೀಠದಲ್ಲಿ ಭವ್ಯ ಸುಂದರ-ಬಂಧುರ ದರ್ಶನಮಂದಿರ ನಿಮರ್ಾಣಗೊಂಡಿದೆ.  ಸಮುದಾಯ ಭವನ ನಿಮರ್ಾಣ ಹಂತದಲ್ಲಿದೆ.  'ಯಾತ್ರಿನಿವಾಸ' ಎಂಬ ಹೆಸರಿನಲ್ಲಿ ಆಧುನಿಕ ಸೌಲಭ್ಯವುಳ್ಳ ವಸತಿ ಗೃಹವು ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿಮರ್ಾಣವಾಗುತ್ತಲಿದೆ.  ಲಿಂಗೈಕ್ಯ ಜಗದ್ಗುರು ಸಿದ್ಧೇಶ್ವರ ಭಗವತ್ಪಾದರ ಕತರ್ೃಗದ್ದುಗೆ ಮಂದಿರ ನಿಮರ್ಾಣಗೊಂಡಿದ್ದು, ಅದನ್ನು ಇನ್ನೂ ವಿಸ್ತರಿಸುವ ಯೋಜನೆ ಇದೆ. 
    ಜ್ಞಾನಗುರು ವಿದ್ಯಾಪೀಠದಡಿಯಲ್ಲಿ ಪೂವರ್ಾಚಾರ್ಯರಾದ ಶ್ರೀ ಸಿದ್ಧೇಶ್ವರ ಜಗದ್ಗುರುಗಳವರು ಸ್ಥಾಪಿಸಿದ ಕೆಲವು ವಿದ್ಯಾಸಂಸ್ಥೆಗಳನ್ನು ಸುವ್ಯವಸ್ಥಿತವಾಗಿ ಮುನ್ನಡೆಸುವುದರೊಂದಿಗೆ ಇತ್ತೀಚೆಗೆ ಶ್ರೀ  ಮರುಳಸಿದ್ಧ ಜಗದ್ಗುರುಗಳವರು ಹರಪನಹಳ್ಳಿಯಲ್ಲಿ ಮಹಿಳಾ ಪದವಿ ಮಹಾವಿದ್ಯಾಲಯ ( ಇದರಲ್ಲಿಯೇ  ಬಿ.ಬಿ.ಎಂ. ವಿಭಾಗವನ್ನು ತೆರೆಯಲಾಗಿದೆ.), ಕೊಟ್ಟೂರಿನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ ಮುಂತಾದವುಗಳನ್ನು ತೆರೆಯುವುದರೊಂದಿಗೆ ವೃತ್ತಿಮೂಲ ಸಂಸ್ಥೆಗಳತ್ತ ಗಮನಹರಿಸಿದ್ದಾರೆ.  ಜನಕ್ಕೆ ಉಪಯುಕ್ತವಾಗುವ ಇಂತಹ ಕೆಲವು ಸಂಸ್ಥೆಗಳನ್ನು ತೆರೆಯುವ ಕನಸನ್ನು ಜಗದ್ಗುರುಗಳವರು ಕಾಣುತ್ತಿದ್ದಾರೆ.  ಶ್ರೀ ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಅಧ್ಯಕ್ಷಪದವಿಯ ಹೊಣೆಯೂ ಇತ್ತೀಚೆಗೆ ಇವರ ಹೆಗಲಿಗೇರಿದೆ.
    ಇದೀಗ 2007ನೆಯ ಫೆಬ್ರುವರಿ 3,4,ಮತ್ತು 5 ರಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಬಹು ಅದ್ಧೂರಿಯ ಭಕ್ತಿಪೂರಿತ ಕಾರ್ಯಕ್ರಮವೊಂದು ಜರುಗಲಿದೆ.  ಶ್ರೀ ಮರುಳಸಿದ್ಧ ಜಗದ್ಗುರುಗಳವರು ಸದ್ಧರ್ಮ ಪೀಠಾರೋಹಣ ಮಾಡಿ ಹನ್ನೊಂದು ವರ್ಷ ಪೂರೈಸಿ,  ಹನ್ನೆರಡರಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಪೀಠಾಭಿಮಾನಿಗಳು ಹಾಗೂ ಸದ್ಭಕ್ತ ಸಮುದಾಯವು ಭಕ್ತಿ- ಗೌರವದಿಂದ ಜಗದ್ಗುರುಗಳವರ ಪೀಠಾರೋಹಣ ದ್ವಾದಶ ವರ್ಧಂತಿ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದ್ದಾರೆ.  ಸಮಾನ ಪೀಠಾಚಾರ್ಯರಾದ ಶ್ರೀಮದ್ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಮತ್ ಹಿಮವತ್ ಕೇದಾರ ಜಗದ್ಗುರು ರಾವಲ್ ಶ್ರೀ ಭೀಮಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀಶೈಲ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಶ್ರೀಮತ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ದಯಪಾಲಿಸಲಿದ್ದಾರೆ.  ಕನರ್ಾಟಕ ರಾಜ್ಯ ಹಾಗೂ ಹೊರನಾಡುಗಳಿಂದ ಅನೇಕ ಶಿವಾಚಾರ್ಯರು, ಶಿವಯೋಗಿಗಳು ಸಮ್ಮಿಲಿತರಾಗಿ ಸದ್ಧರ್ಮ ಪೀಠಾಧೀಶ್ವರರಿಗೆ ಗೌರವ ಸಲ್ಲಿಸಲಿದ್ದಾರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಲಿರುವ ಭಕ್ತ ಸಂದೋಹವು ಕಣ್ಮನ ತಣಿಸುವ, ಧರ್ಮ ಜಾಗೃತಿ ಉಂಟು ಮಾಡುವ ಈ ಬೃಹತ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದೆ.  ಮಂತ್ರಿ ಮಾನ್ಯರು, ಉದ್ದಾಮ ವಿದ್ವಾಂಸರು, ಸಾಹಿತಿ - ಕಲಾವಿದರು ಹೀಗೆ ವಿವಿಧ ವರ್ಗಗಗಳ ಮಹಾಜನತೆಯು ಸಂದಭರ್ೋಚಿತವಾಗಿ  ಸೇವೆ ಸಲ್ಲಿಸಲಿದ್ದಾರೆ.   ಈ ಪ್ರಸಂಗದಲ್ಲಿ ಕೆಲವು ಉತ್ತಮ ಗ್ರಂಥಗಳು ಪ್ರಕಟವಾಗಲಿವೆ.  'ಸದ್ಧರ್ಮ ವಾರಿಧಿ' ನಾಮಾಂಕಿತ ಗೌರವ ಗ್ರಂಥವು ಸನ್ನಿಧಿಗೆ ಸಮಪರ್ಿತವಾಗಲಿದೆ.  ಸಮಾರಂಭದ ಭವ್ಯ - ದಿವ್ಯ ಸ್ಮರಣೆಯ ಕಿರಣಗಳನ್ನು ಬಿಂಬಿಸುವ 'ಮಳೆಮಲ್ಲಿಗೆ' ಸಂಸ್ಮರಣ ಗ್ರಂಥವು ಲೋಕಾಪರ್ಿತವಾಗಲಿದೆ.  ಅಲ್ಲದೆ ಶ್ರೀ ಪೀಠದ ಆವರಣದಲ್ಲಿ ಹಾಗೂ ಉಜ್ಜಯಿನಿ ಗ್ರಾಮದಲ್ಲಿ ಪೀಠಾರೋಹಣದ ದ್ವಾದಶ ವರ್ಧಂತಿಯ ಸ್ಮಾರಕವಾಗಿ ಕೆಲವು ಕಟ್ಟಡಗಳು ನಿಮರ್ಾಣಗೊಳ್ಳುತ್ತಲಿವೆ.  ಇಂತಹ ಎಲ್ಲ ಕಾರ್ಯಗಳು ಶ್ರೀ ಪೀಠದ ಅಭಿವೃದ್ಧಿಗಾಗಿ ನೆರವೇರುತ್ತಲಿರುವುದು ಸಂತಸದ ಸಂಗತಿಯಾಗಿದೆ, ಸದಭಿಮಾನದ ಸಮಾಚಾರವೆನಿಸಿದೆ.
    ಭೌತಿಕ, ಬೌದ್ಧಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗಳತ್ತ ಗಮನಹರಿಸಿರುವ ಪ್ರಸ್ತುತ ಜಗದ್ಗುರುಗಳವರು ಜನಕಲ್ಯಾಣವನ್ನು ಕಡೆಗಣಿಸಿಲ್ಲ.  ಪೀಠಾರೋಹಣದ ದ್ವಾದಶ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ಬಡವರಿಗೆ, ದೀನದಲಿತರಿಗೆ ಅತ್ಯಂತ ಉಪಕಾರಿಯಾದ ಸಾಮೂಹಿಕ ಧಮರ್ಾರ್ಥ ವಿವಾಹ ಸಮಾರಂಭವನ್ನು ಏರ್ಪಡಿಸಿದ್ದಾರೆ.  ಇದರೊಂದಿಗೆ 1008 ಮುತ್ತೈದೆಯರಿಗೆ ಉಡಿ ತುಂಬಿ ಸೌಭಾಗ್ಯವನ್ನು ಅನುಗ್ರಹಿಸುವ ಕಾರ್ಯಕ್ರಮವು ನಡೆಯಲಿದೆ.  ಒಳಹೊರಗಿನ ಕತ್ತಲೆಯನ್ನು ಕಳೆಯುವ ದ್ಯೋತಕವಾಗಿ ಲಕ್ಷದೀಪಗಳನ್ನು ಬೆಳಗಿಸುವ ಪರಂಜ್ಯೋತಿ ಕಾರ್ಯಕ್ರಮವು ನಡೆಯುತ್ತಲಿದೆ.  ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳು ಜರುಗುವ ಮೂಲಕ ಪೀಠಾರೋಹಣದ ದ್ವಾದಶ ವರ್ಧಂತಿ ಮಹೋತ್ಸವವು ಜನಮನವನ್ನು ತಣಿಸಲಿದೆ! ಸದ್ಧರ್ಮದ ಉಣಿಸನ್ನು ಉಣಿಸಲಿದೆ! ಅದನ್ನು ಅನುಭವಿಸಿಯೇ ಆನಂದಿಸಬೇಕು!
    ಕಿರಿವಯದಲ್ಲಿಯೇ ಹಿರಿಯ ಹೊಣೆ ಹೊತ್ತ ಮರುಳಸಿದ್ಧ ಜಗದ್ಗುರುಗಳವರಿಗೆ ಪೂವರ್ಾಚಾರ್ಯರು ಆಯುರಾರೋಗ್ಯ ಭಾಗ್ಯಾದಿಗಳನ್ನು ಕರುಣಿಸುವುದರೊಂದಿಗೆ ಮಾನವ ಕುಲದ ಕಲ್ಯಾಣ ಕಾರ್ಯ ಮುಂದುವರೆಸುವ ಹುರುಪು - ಹುಮ್ಮಸ್ಸು ನೀಡಲೆಂದು ಭಕ್ತಿಯಿಂದ ಪ್ರಾಥರ್ಿಸೋಣ.

    ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಪರಂಪರೆ
ಶ್ರೀ ಜಗದ್ಗುರು ದ್ವ್ಯಕ್ಷರ ಶಿವಾಚಾರ್ಯ ಭಗವತ್ಪಾದರು (ಕೃತಯುಗದ ಆರಂಭ)
ಶ್ರೀ ಜಗದ್ಗುರು ದ್ವಿವಕ್ತ್ರ ಶಿವಾಚಾರ್ಯ ಭಗವತ್ಪಾದರು (ತ್ರೇತಾಯುಗದ ಆರಂಭ)
ಶ್ರೀ ಜಗದ್ಗುರು ದಾರುಕಾಚಾರ್ಯ ಭಗವತ್ಪಾದರು (ದ್ವಾಪರಯುಗದ ಆರಂಭ)
1. ಶ್ರೀ ಜಗದ್ಗುರು ಮರುಳಾರಾಧ್ಯ ಶಿವಾಚಾರ್ಯ ಭಗವತ್ಪಾದರು (ಕಲಿಯುಗದ ಆರಂಭ )
2.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
3.    ಶ್ರೀ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯರು
4.    ಶ್ರೀ ಜಗದ್ಗುರು ಗುರುನಾಥ ಶಿವಾಚಾರ್ಯರು
5.    ಶ್ರೀ ಜಗದ್ಗುರು ಶಿವಯೋಗೀಂದ್ರ ಶಿವಾಚಾರ್ಯರು
6.    ಶ್ರೀ ಜಗದ್ಗುರು ತ್ರ್ಯಂಬಕ ಶಿವಾಚಾರ್ಯರು
7.    ಶ್ರೀ ಜಗದ್ಗುರು ಶಿವಾನಂದ ಶಿವಾಚಾರ್ಯರು
8.    ಶ್ರೀ ಜಗದ್ಗುರು ಮರುಳಸಿದ್ಧ ಶಿವಾಚಾರ್ಯರು
9.    ಶ್ರೀ ಜಗದ್ಗುರು ಅಮಿತಾನಂದ ಶಿವಾಚಾರ್ಯರು
10.    ಶ್ರೀ ಜಗದ್ಗುರು ನೀಲಗ್ರೀವ ಶಿವಾಚಾರ್ಯರು
11.    ಶ್ರೀ ಜಗದ್ಗುರು ನಂದೀಶ್ವರ ಶಿವಾಚಾರ್ಯರು
12.    ಶ್ರೀ ಜಗದ್ಗುರು ಗುರುರಾಜ ಶಿವಾಚಾರ್ಯರು
13.    ಶ್ರೀ ಜಗದ್ಗುರು ಮಹಾದೇವ ಶಿವಾಚಾರ್ಯರು
14.    ಶ್ರೀ ಜಗದ್ಗುರು ಮಯಾಂತ ಶಿವಾಚಾರ್ಯರು
15.    ಶ್ರೀ ಜಗದ್ಗುರು ಗುರುಶಾಂತ ಶಿವಾಚಾರ್ಯರು
16.    ಶ್ರೀ ಜಗದ್ಗುರು ವೃಷಭಧ್ವಜ ಶಿವಾಚಾರ್ಯರು
17.    ಶ್ರೀ ಜಗದ್ಗುರು ವೀರವೃಷಭೇಂದ್ರ ಶಿವಾಚಾರ್ಯರು
18.    ಶ್ರೀ ಜಗದ್ಗುರು ದ್ವಿತೀಯ ಮಲ್ಲಿಕಾಜರ್ುನ ಶಿವಾಚಾರ್ಯರು
19.    ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯರು
20.    ಶ್ರೀ ಜಗದ್ಗುರು ದ್ವಿತೀಯ ಸಿದ್ಧೇಶ್ವರ ಶಿವಾಚಾರ್ಯರು
21.    ಶ್ರೀ ಜಗದ್ಗುರು ಲಿಂಗಾನಂದ ಶಿವಾಚಾರ್ಯರು
22.    ಶ್ರೀ ಜಗದ್ಗುರು ಸೋಮೇಶ್ವರ ಶಿವಾಚಾರ್ಯರು
23.    ಶ್ರೀ ಜಗದ್ಗುರು ಮುಕ್ತಿನಾಥ ಶಿವಾಚಾರ್ಯರು
24.    ಶ್ರೀ ಜಗದ್ಗುರು ವಾಮದೇವ ಶಿವಾಚಾರ್ಯರು
25.    ಶ್ರೀ ಜಗದ್ಗುರು ಜಗದೀಶ್ವರ ಶಿವಾಚಾರ್ಯರು
26.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
27.    ಶ್ರೀ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯರು
28.    ಶ್ರೀ ಜಗದ್ಗುರು ಮಾಹೇಶ್ವರ ಶಿವಾಚಾರ್ಯರು
29.    ಶ್ರೀ ಜಗದ್ಗುರು ಅಘೋರ ಶಿವಾಚಾರ್ಯರು
30.    ಶ್ರೀ ಜಗದ್ಗುರು ಚೆನ್ನವೀರ ಶಿವಾಚಾರ್ಯರು
31.    ಶ್ರೀ ಜಗದ್ಗುರು ಜಟಾಸಿದ್ಧ ಶಿವಾಚಾರ್ಯರು
32.    ಶ್ರೀ ಜಗದ್ಗುರು ಗಂಗಾಧರ ಶಿವಾಚಾರ್ಯರು
33.    ಶ್ರೀ ಜಗದ್ಗುರು ಸಿದ್ಧವೀರ ಶಿವಾಚಾರ್ಯರು
34.    ಶ್ರೀ ಜಗದ್ಗುರು  ರುದ್ರೇಶ್ವರ ಶಿವಾಚಾರ್ಯರು
35.    ಶ್ರೀ ಜಗದ್ಗುರು  ಶಾಂತಲಿಂಗ ಶಿವಾಚಾರ್ಯರು
36.    ಶ್ರೀ ಜಗದ್ಗುರು ವೈ|| ನಂದೀಶ್ವರ ಶಿವಾಚಾರ್ಯರು
37.    ಶ್ರೀ ಜಗದ್ಗುರು ಗಂಗಾಧರ ಶಿವಾಚಾರ್ಯರು
38.    ಶ್ರೀ ಜಗದ್ಗುರು ಮಹಾಲಿಂಗ ಶಿವಾಚಾರ್ಯರು
39.    ಶ್ರೀ ಜಗದ್ಗುರು ಪಂಚಾನನ ಶಿವಾಚಾರ್ಯರು
40.    ಶ್ರೀ ಜಗದ್ಗುರು ಬಿಲ್ವದಳಭೂಷಣ ಶಿವಾಚಾರ್ಯರು
41.    ಶ್ರೀ ಜಗದ್ಗುರು ಮಾರಮರ್ದನ ಶಿವಾಚಾರ್ಯರು
42.    ಶ್ರೀ ಜಗದ್ಗುರು ನಾಗಭೂಷಣ ಶಿವಾಚಾರ್ಯರು
43.    ಶ್ರೀ ಜಗದ್ಗುರು ಶ್ಯಾಮಕಂದರ ಶಿವಾಚಾರ್ಯರು
44.    ಶ್ರೀ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು
45.    ಶ್ರೀ ಜಗದ್ಗುರು ಗುರುಸಿದ್ಧ ಶಿವಾಚಾರ್ಯರು
46.    ಶ್ರೀ ಜಗದ್ಗುರು ಭವಹರ ಶಿವಾಚಾರ್ಯರು
47.    ಶ್ರೀ ಜಗದ್ಗುರು ಚಂಡೀಶ್ವರ ಶಿವಾಚಾರ್ಯರು
48.    ಶ್ರೀ ಜಗದ್ಗುರು ಅಮೃತೇಶ್ವರ ಶಿವಾಚಾರ್ಯರು
49.    ಶ್ರೀ ಜಗದ್ಗುರು ಸುಜ್ಞಾನಶೇಖರ ಶಿವಾಚಾರ್ಯರು
50.    ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು
51.    ಶ್ರೀ ಜಗದ್ಗುರು ಶೇಷಭೂಷಣ ಶಿವಾಚಾರ್ಯರು
52.    ಶ್ರೀ ಜಗದ್ಗುರು ಶಂಕರಾನಂದ ಶಿವಾಚಾರ್ಯರು
53.    ಶ್ರೀ ಜಗದ್ಗುರು ಮಹಾಮಲ್ಲಿಕಾಜರ್ುನ ಶಿವಾಚಾರ್ಯರು
54.    ಶ್ರೀ ಜಗದ್ಗುರು ಶಂಭುಲಿಂಗ ಶಿವಾಚಾರ್ಯರು
55.    ಶ್ರೀ ಜಗದ್ಗುರು ಶಿವಯೋಗ ಪ್ರಭಾಕರ ಶಿವಾಚಾರ್ಯರು
56.    ಶ್ರೀ ಜಗದ್ಗುರು ಚಿನ್ಮಹೋದಧಿ ಶಿವಾಚಾರ್ಯರು
57.    ಶ್ರೀ ಜಗದ್ಗುರು ಶಿವಜ್ಞಾನ ಸಂಜೀವಿನ ಶಿವಾಚಾರ್ಯರು
58.    ಶ್ರೀ ಜಗದ್ಗುರು ಗಣೇಂದ್ರಮಂದಾರ ಶಿವಾಚಾರ್ಯರು
59.    ಶ್ರೀ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯರು
60.    ಶ್ರೀ ಜಗದ್ಗುರು ಪರಸಿದ್ಧೇಶ್ವರ ಶಿವಾಚಾರ್ಯರು
61.    ಶ್ರೀ ಜಗದ್ಗುರು ಮಹಾಂತದೇವ ಶಿವಾಚಾರ್ಯರು
62.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
63.    ಶ್ರೀ ಜಗದ್ಗುರು ವೃಷ್ಟಿಶಂಕರ ಶಿವಾಚಾರ್ಯರು
64.    ಶ್ರೀ ಜಗದ್ಗುರು ಶಂಭುಲಿಂಗ ಶಿವಾಚಾರ್ಯರು
65.    ಶ್ರೀ ಜಗದ್ಗುರು ಮದನಾರಿ ಶಿವಾಚಾರ್ಯರು
66.    ಶ್ರೀ ಜಗದ್ಗುರು ಮಾಯಾಕೋಲಾಹಲ ಶಿವಾಚಾರ್ಯರು
67.    ಶ್ರೀ ಜಗದ್ಗುರು ಶಿವಲೀಲ ಶಿವಾಚಾರ್ಯರು
68.    ಶ್ರೀ ಜಗದ್ಗುರು ಪಂಚಾಕ್ಷರ ಶಿವಾಚಾರ್ಯರು
69.    ಶ್ರೀ ಜಗದ್ಗುರು ಮಲ್ಲಿಕಾಜರ್ುನ ಶಿವಾಚಾರ್ಯರು
70.    ಶ್ರೀ ಜಗದ್ಗುರು ಮುಕ್ತಿನಾಥ ಶಿವಾಚಾರ್ಯರು
71.    ಶ್ರೀ ಜಗದ್ಗುರು ಮಹಾದೇವ ಶಿವಾಚಾರ್ಯರು
72.    ಶ್ರೀ ಜಗದ್ಗುರು ಭಗರ್ೋದೇವ ಶಿವಾಚಾರ್ಯರು
73.    ಶ್ರೀ ಜಗದ್ಗುರು ಬಾಲಸಿದ್ಧೇಶ್ವರ ಶಿವಾಚಾರ್ಯರು
74.    ಶ್ರೀ ಜಗದ್ಗುರು ಚೆನ್ನವೃಷಭ ಶಿವಾಚಾರ್ಯರು
75.    ಶ್ರೀ ಜಗದ್ಗುರು ವೃದ್ಧವೃಷಭೇಂದ್ರ ಶಿವಾಚಾರ್ಯರು
76.    ಶ್ರೀ ಜಗದ್ಗುರು ಚೆನ್ನಮಲ್ಲಿಕಾಜರ್ುನ ಶಿವಾಚಾರ್ಯರು
77.    ಶ್ರೀ ಜಗದ್ಗುರು ಮುಕ್ತಿಮಲ್ಲಿಕಾಜರ್ುನ ಶಿವಾಚಾರ್ಯರು
78.    ಶ್ರೀ ಜಗದ್ಗುರು ಸಿದ್ಧಮಲ್ಲಿಕಾಜರ್ುನ ಶಿವಾಚಾರ್ಯರು
79.    ಶ್ರೀ ಜಗದ್ಗುರು ಏಕೋದೇವ ಶಿವಾಚಾರ್ಯರು
80.    ಶ್ರೀ ಜಗದ್ಗುರು ಆಚಾರ್ಯಭಾಸ್ಕರ ಶಿವಾಚಾರ್ಯರು
81.    ಶ್ರೀ ಜಗದ್ಗುರು ಮೋಕ್ಷೇಶ್ವರ ಶಿವಾಚಾರ್ಯರು
82.    ಶ್ರೀ ಜಗದ್ಗುರು ಸಿದ್ಧವೀರೇಶ ಶಿವಾಚಾರ್ಯರು
83.    ಶ್ರೀ ಜಗದ್ಗುರು ಭದ್ರೇಶ್ವರ ಶಿವಾಚಾರ್ಯರು
84.    ಶ್ರೀ ಜಗದ್ಗುರು ಅಮಿತಾನಂದ ಶಿವಾಚಾರ್ಯರು
85.    ಶ್ರೀ ಜಗದ್ಗುರು ಷಡಕ್ಷರ ಶಿವಾಚಾರ್ಯರು
86.    ಶ್ರೀ ಜಗದ್ಗುರು ಭಕ್ತಿವರ್ಧನ ಶಿವಾಚಾರ್ಯರು
87.    ಶ್ರೀ ಜಗದ್ಗುರು ಪಾಶಹರ ಶಿವಾಚಾರ್ಯರು
88.    ಶ್ರೀ ಜಗದ್ಗುರು ಮಹಿಮಾಕರ ಶಿವಾಚಾರ್ಯರು
89.    ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯರು
90.    ಶ್ರೀ ಜಗದ್ಗುರು ನಯನತ್ರಯ ಶಿವಾಚಾರ್ಯರು
91.    ಶ್ರೀ ಜಗದ್ಗುರು ವಿರೂಪಾಕ್ಷ ಶಿವಾಚಾರ್ಯರು
92.    ಶ್ರೀ ಜಗದ್ಗುರು ಮರುಳಸಿದ್ಧ ಶಿವಾಚಾರ್ಯರು
93.    ಶ್ರೀ ಜಗದ್ಗುರು ಮಹಾಂತಮಲ್ಲಿಕಾಜರ್ುನ ಶಿವಾಚಾರ್ಯರು
94.    ಶ್ರೀ ಜಗದ್ಗುರು ವೃಷ್ಟಿಮಲ್ಲಿಕಾಜರ್ುನ ಶಿವಾಚಾರ್ಯರು
95.    ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯರು
96.    ಶ್ರೀ ಜಗದ್ಗುರು ಬೃಹಚ್ಚೆನ್ನವೀರ ಶಿವಾಚಾರ್ಯರು
97.    ಶ್ರೀ ಜಗದ್ಗುರು ಪರಚೆನ್ನವೀರ ಶಿವಾಚಾರ್ಯರು
98.    ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು
99.    ಶ್ರೀ ಜಗದ್ಗುರು ಮರುಳಸಿದ್ಧ ಶಿವಾಚಾರ್ಯರು
100.    ಶ್ರೀ ಜಗದ್ಗುರು ಜಟಾಗುರುಸಿದ್ಧ  ಶಿವಾಚಾರ್ಯರು
101.    ಶ್ರೀ ಜಗದ್ಗುರು ಚೆನ್ನವೃಷಭ ಶಿವಾಚಾರ್ಯರು
102.    ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು
103.    ಶ್ರೀ ಜಗದ್ಗುರು ಚೆನ್ನವೀರ ಶಿವಾಚಾರ್ಯರು
104.    ಶ್ರೀ ಜಗದ್ಗುರು ಚೆನ್ನವೃಷಭ ಶಿವಾಚಾರ್ಯರು
105.    ಶ್ರೀ ಜಗದ್ಗುರು ಗುರುಸಿದ್ಧ ಶಿವಾಚಾರ್ಯರು
106.    ಶ್ರೀ ಜಗದ್ಗುರು  ಮರುಳಸಿದ್ಧ ಶಿವಾಚಾರ್ಯರು
107.    ಶ್ರೀ ಜಗದ್ಗುರು ಚೆನ್ನವೃಷಭ ಶಿವಾಚಾರ್ಯರು
108.    ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು
109.    ಶ್ರೀ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯರು
110.    ಶ್ರೀ ಜಗದ್ಗುರು ಮರುಳಾರಾಧ್ಯ ಶಿವಾಚಾರ್ಯರು
111.    ಶ್ರೀ ಜಗದ್ಗುರು ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯರು
ವಿ.ಸೂಚನೆ ಃ ಈ ಹೆಸರುಗಳನ್ನು ಹಿರೇಹಡಗಲಿ ಪುರಾಣಿಕ ಮಠದ ವೇ. ಪಂ. ವಿರೂಪಾಕ್ಷಶಾಸ್ತ್ರಗಳಿಂದ ವಿರಚಿತವಾದ ಉಜ್ಜಯಿನಿ ಜಗದ್ಗುರು ಶ್ರೀಸಿದ್ಧಲಿಂಗೇಶ ವಿಜಯ (1944ನೆಯ ಇಸ್ವಿ) ಎಂಬ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.